2021ರ ಫೆಬ್ರವರಿ 7 ರಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ಚಮೋಲಿ (Chamoli) ಜಿಲ್ಲೆಯಲ್ಲಿ ದೈತ್ಯ ನೀರ್ಗಲ್ಲು ಸ್ಫೋಟಗೊಂಡ ಪರಿಣಾಮ ಭಾರೀ ಹಿಮಪ್ರವಾಹ ಹಾಗೂ ನೆರೆ ಉಂಟಾಗಿ 170 ಕಾರ್ಮಿಕರು ಮೃತಪಟ್ಟಿದ್ದು, ಸುಮಾರು 175 ಮಂದಿ ನಾಪತ್ತೆಯಾಗಿದ್ದಾರೆ. ನಂದಾದೇವಿ ನೀರ್ಗಲ್ಲಿನ ಒಂದು ಭಾಗ ತುಂಡಾಗಿ ಅದರ ಅಡಿಯಲ್ಲಿ ಶೇಖರಣೆಗೊಂಡಿದ್ದ ನೀರು, ಭಾರೀ ಹಿಮ ಸಮೇತ ಕಣಿವೆಗಳ ಮೂಲಕ ರಭಸವಾಗಿ ನುಗ್ಗಿತ್ತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ರಿಷಿ ಗಂಗಾ
ಮತ್ತು ಮೌಲಿ ಗಂಗಾ ನದಿಗಳಿಗೆ ಸೇರ್ಪಡೆಗೊಂಡು ದೈತ್ಯ ಪ್ರವಾಹ ಸೃಷ್ಠಿಯಾಗಿತ್ತು. ನದಿ ಪಾತ್ರದ ಕಣಿವೆಯುದ್ದಕ್ಕೂ ಇದ್ದ ಸೇತುವೆಗಳು, ದಡದಲ್ಲಿದ್ದ ಕಟ್ಟಡಗಳು, ಬೃಹತ್ ಕಲ್ಲು ಬಂಡೆಗಳು, ಮಣ್ಣಿನ ರಾಶಿಯನ್ನು ಕೊಚ್ಚಿಕೊಂಡು ಪ್ರವಾಹ ಮುನ್ನುಗ್ಗಿತು. ಈ ಘಟನೆಯು 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯವನ್ನು ಜ್ಞಾಪಿಸುವಂತಿತ್ತು.
ಉತ್ತರಾಖಂಡದಲ್ಲಿ ಸಂಭವಿಸಿರುವುದು
Glacier
ಉತ್ತರಾಖಂಡದಲ್ಲಿ ಸಂಭವಿಸಿರುವುದು ಹಿಮಪಾತವೋ ಅಥವಾ ಸ್ಟೇಷಿಯರೋ ಎಂದು ಸ್ಪಷ್ಟವಾದ ಮಾಹಿತಿಯಿಲ್ಲ. ಇದು ಹಿಮ ಹರಿಯುವ ಋತುಮಾನವಲ್ಲ. ಹೀಗಾಗಿ ಹಿಮಪಾತ Glacier ಆಗಿರುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಯಾವುದೇ ಭೂಕಂಪವಾಗದೇ ಇರುವುದರಿಂದ ಗ್ಲೀಷಿಯರ್ ಬ್ರೇಕ್ ಕೂಡ ಆಗಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಹಿಮಪಾತ ಅಥವಾ ಅವಲಾಂಜ್ (Avalanche) ಬಗ್ಗೆ ಮಾಹಿತಿ: ಕಡಿದಾದ ಪರ್ವತಗಳ ಮೇಲೆ ಶೇಖರಣೆಯಾಗಿರುವ ಹಿಮರಾಶಿಯು ತಗ್ಗಿನತ್ತ ನುಗ್ಗಿ ಬರುವುದನ್ನು ಹಿಮಪಾತ ಎನ್ನಲಾಗುತ್ತದೆ. ಹಿಮ ಪರ್ವತಗಳ ಮೇಲೆ ಪದರ ಪದರವಾಗಿ ಹಿಮ ಶೇಖರಣೆಯಾಗುತ್ತಾ ಹೋಗಿ ಯಾವುದೋ ಒಂದು ಹಂತದಲ್ಲಿ ಆ ಹಿಮದ ಭಾರವನ್ನು ಕೆಳಗಿನ ಪದರ ಸಹಿಸಲಾಗದೆ ಕುಸಿಯುತ್ತದೆ. ಆಗ ಇಡೀ ಹಿಮಬೆಟ್ಟವೇ ಕುಸಿದಂತೆ ಪ್ರಪಾತಕ್ಕೆ ಹಿಮದ ಹೊಳೆ ಹರಿದು ಬರುತ್ತದೆ. ಇದನ್ನೇ ಹಿಮಪಾತ ಅಥವಾ ಅವಲಾಂಚ್ ಎನ್ನುವರು. ಹಿಮಪಾತಕ್ಕೆ ಸಿಲುಕುವ ಶೇ. 95 ಮಂದಿ ಮೃತಪಡುತ್ತಾರೆ. ಹಿಮರಾಶಿಯ ಮಧ್ಯದಲ್ಲಿ ಸಿಲುಕಿ ಉಸಿರುಗಟ್ಟುವುದರಿಂದ ಸಾವು ಸಂಭವಿಸುತ್ತದೆ.
Centre for Snow and Avalanche Study Estab lishment (SASE): ಚಂಡಿಗಡ
ಹಿಮ ಮತ್ತು ಅವಲಾಂಚ್ ಈ ಅಧ್ಯಯನ ಕೇಂದ್ರವು ಚಂಡೀಗಢದಲ್ಲಿದೆ. 1991 ರಿಂದ ಈಚೆಗೆ ಕೆಳ ಹಿಮಾಲಯ ಭಾಗದಲ್ಲಿ ಸರಾಸರಿ ಉಷ್ಣ ತಾಪಮಾನ 0.65 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಎಂದು ದಾಖಲಿಸಿದೆ. 1940 ರಿಂದ 1960 ರವರೆಗೆ ಯಾವುದೇ ಅವಲಾಂಚ್ ದಾಖಲಾಗಿಲ್ಲ, ಆದರೆ 1970 ರಿಂದ ಈಚೆಗೆ ಸರಾಸರಿ ವರ್ಷಕ್ಕೊಂದು ಅವಲಾಂಚ್ ದಾಖಲಾಗುತ್ತಿದೆ.
ಗ್ಲೀಷಿಯರ್ ಬ್ರೇಕ್:
ಕೆಲವೊಮ್ಮೆ ಸ್ಟೇಷಿಯರ್‌ಗಳ ನಡುವೆ ಹಿಮದ ಕೊಳಗಳು ನಿರ್ಮಾಣವಾಗುತ್ತವೆ. ಈ ಕೊಳಗಳಲ್ಲಿ ಭೂಕಂಪ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಭಾರೀ ಒತ್ತಡದ ಚಲನೆ ಉಂಟಾದಾಗ ಅವುಗಳ ಅಂಚು ಕುಸಿದು, ಆ ಕೊಳ ಪ್ರಪಾತಕ್ಕೆ ಹರಿದು ಬರಬಹುದು. ಇದನ್ನು ಕ್ಲೀಷಿಯರ್ ಬ್ರೇಕ್ (Glacier Break) ಎನ್ನುತ್ತಾರೆ.
ಹಿಮ ಪ್ರವಾಹಕ್ಕೆ ಕೊಚ್ಚಿಹೋದ ಪ್ರಮುಖ ವಿದ್ಯುತ್ ಘಟಕಗಳು
ದೌಲಿ ಗಂಗಾನದಿಗೆ (Dhauliganga River) ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ತಪೋವನ್ ವಿದ್ಯುತ್ ಘಟಕ ( (Tapovan Power Project) ಹಾಗೂ ರಿಷಿ ಗಂಗಾ ನದಿಗೆ ಅಡ್ಡಲಾಗಿ ನಿಲ್ಲಿಸಲಾಗಿರುವ ರಿಷಿ ಗಂಗಾ ವಿದ್ಯುತ್ ಘಟಕಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.200 ಕಾರ್ಮಿಕರು ಪ್ರವಾಹದ ವೇಳೆ ಈ ಎರಡೂ ಘಟಕಗಳ ಸುಮಾರು ಕಾಮಗಾರಿಯಲ್ಲಿ ತೊಡಗಿದ್ದರು. ಈ ಕಾರ್ಮಿಕರು ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ.
ರಿಷಿ ಗಂಗಾ ಜಲವಿದ್ಯುತ್ ಯೋಜನೆ (Rishi Ganga Power Project)
ಹಿಮಪಾತದಿಂದ ಹಾನಿಗೀಡಾಗಿರುವ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ವಲಯ ಆರಂಭದಿಂದಲೂ ವಿವಾದಕ್ಕೆ ಒಳಗಾಗಿದೆ. ಈ ಯೋಜನೆಯು ಪರಿಸರ ಸೂಕ್ಷ್ಮವ ಹಾಗೂ ಜೀವ ವೈವಿಧ್ಯತೆಗೆ ಧಕ್ಕೆ ತರಲಿದೆ ಎಂದು ವಾದಿಸಿ ಉತ್ತರಾಖಂಡದ ಹಲವು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಐತಿಹಾಸಿಕ ಚಿಸ್ಕೋ ಚಳುವಳಿ ನಾಯಕಿ ಗೌರಾದೇವಿ ಮುಂತಾದವರು ಓಡಾಡಿದ ಪ್ರದೇಶವನ್ನೂ ಕೂಡಾ ಈ ಖಾಸಗಿ ಕಂಪನಿಯು ಸಾರ್ವಜನಿಕರಿಂದ ನಿರ್ಬಂಧಿಸಿದೆ ಎಂದು ಪ್ರಕರಣ ದಾಖಲಾಗಿತ್ತು.
ರಕ್ಷಣಾ ಕಾರ್ಯ (Rescue Operation):
5 ಎನ್‌ಡಿಆರ್‌ಎಫ್ ತಂಡಗಳು, ಉತ್ತರಾಖಂಡ ರಾಜ್ಯದ ವಿಪತ್ತು ನಿರ್ವಹಣಾ ತಂಡ, ಐಟಿಬಿಪಿ, ಭೂಸೇನೆ, ವಾಯುಪಡೆ ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿವೆ. ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಸಿಲುಕಿದ್ದ 20 ಮಂದಿಯನ್ನು ರಕ್ಷಿಸಲಾಗಿದೆ. ಸೇನಾ ಹೆಲಿಕಾಪ್ಟರ್ ಮೂಲಕ ಹಲವರನ್ನು ರಕ್ಷಿಸಲಾಗಿದೆ.
ನೀರ್ಗಲ್ಲು ಸ್ಪೋಟದ ಪ್ರವಾಹದ ಸಂತ್ರಸ್ತರಿಗೆ ಪರಿಹಾರ: ಮೃತಪಟ್ಟವರಿಗೆ ಕೇಂದ್ರದಿಂದ 2 ಲಕ್ಷ ರೂ., ರಾಜ್ಯ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ನೀರ್ಗಲ್ಲು ಸ್ಫೋಟಕ್ಕೆ ಕಾರಣ:
ತಾಪಮಾನ ಏರಿಕೆಯು ನೀರ್ಗಲ್ಲು ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಬಿಸಿ ಹೆಚ್ಚಿದಂತೆ ಹಿಮ ಬಂಡೆಯ ಒಳಭಾಗದಲ್ಲಿ ಹೆಪ್ಪುಗಟ್ಟಿದ್ದ ನೀರು ಕರಗಿ ಸುತ್ತಲೂ ಮಂಜುಗಡ್ಡೆ ಆವರಿಸಿದ ಬೃಹತ್ ಹಿಮಸಾಗರದಂತೆ ಮಾರ್ಪಟ್ಟಿರುತ್ತದೆ. ತಾಪಮಾನ ಮತ್ತಷ್ಟು ಹೆಚ್ಚಾದಂತೆ ಸುತ್ತಲಿನ ಮಂಜುಗಡ್ಡೆ ದುರ್ಬಲಗೊಂಡು ಒಳಗಿರುವ ನೀರು ಒಮ್ಮೆಲೇ ಅಣೆಕಟ್ಟು ಹೊಡೆದ ರೀತಿಯಲ್ಲಿ ಸ್ಫೋಟಿಸಿ ಹೊರ ನುಗ್ಗುತ್ತದೆ. ಇದೇ ರೀತಿಯಲ್ಲಿ ಉತ್ತರಾಖಂಡ ರಾಜ್ಯದಲ್ಲೂ ಹಿಮಸಾಗರ ಸ್ಫೋಟವಾಗಿದೆ ಎಂದು
ಊಹಿಸಲಾಗಿದೆ.
ನೀರ್ಗಲ್ಲು ಸ್ಫೋಟದಿಂದ ಜಲ ವಿದ್ಯುತ್‌ಗಳಿಗೆ ಅಪಾಯ:
ಹಿಮಾಲಯದ ಮೂಲೆಮೂಲೆಯಲ್ಲೂ ಜಲವಿದ್ಯುತ್ ಯೋಜನೆಗಳಿದ್ದು, ಇವು ಮುಂದಿನ ದಿನಗಳಲ್ಲಿ ನೀರ್ಗಲ್ಲು ಸ್ಫೋಟದಿಂದ ಅಪಾಯಕ್ಕೆ ಸಿಲುಕುವ ಸಂಭವವಿದೆ. ಸುಮಾರು 70 ಜಲವಿದ್ಯುತ್ ಯೋಜನೆಗಳು ಸೂಕ್ಷ್ಮಭಾಗದಲ್ಲಿದ್ದು, ಭೂಕಂಪ ಅಥವಾ ಭೂಕುಸಿತದಿಂದ ಅಪಾರ ಹಾನಿ ಸೃಷ್ಟಿಸಬಹುದೆಂದು ತಜ್ಞರು ಮೊದಲೇ ಅಂದಾಜಿಸಿದ್ದರು. ಪ್ರಸ್ತುತ ಈ ಅನಾಹುತದಲ್ಲಿ ರಿಷಿ ಗಂಗಾ ಹೈಡೋ ಎಲೆಕ್ಟಿಕ್ ಘಟಕವು ಅಪಾಯಕ್ಕೆ ಒಳಗಾಗಿದೆ.
No comments:
Post a Comment