1799 ರಲ್ಲಿ ಒಡೆಯರಿಗೆ ಹಿಂತಿರುಗಿಸಿದ್ದ ಮೈಸೂರಿನ ಆಳ್ವಿಕೆಯನ್ನು 1831ರ ನಗರ ದಂಗೆಯ ನಂತರ ಬ್ರಿಟಿಷರು ತಮ್ಮ ನೇರ ಆಳ್ವಿಕೆಗೆ ಒಳಪಡಿಸಿದರು. ಇದನ್ನೊಂದು ಸ್ವತಂತ್ರ ಆಡಳಿತಾತ್ಮಕ ಘಟಕವಾಗಿ ಇರಿಸಿ, ಆಡಳಿತವನ್ನು ನೋಡಿಕೊಳ್ಳಲು ಕಮಿಷನರುಗಳನ್ನು ನೇಮಿಸಲಾಗಿತ್ತು. 1831 ರಿಂದ 1881 ರ ವರೆಗಿನ ಕಮಿಷನರರ ನೇರ ಆಳ್ವಿಕೆಯು ಮೈಸೂರು ಒಂದು ಮಾದರಿ ರಾಜ್ಯವಾಗಲು ಅಡಿಪಾಯವನ್ನು ಹಾಕಿತು. ಈ ಅವಧಿಯಲ್ಲಿ ಏಳು ಜನ ಕಮಿಷನರುಗಳು ಆಳಿದರು. ಅವರಲ್ಲಿ ಪ್ರಮುಖರಾದವರೆಂದರೆ ಮಾರ್ಕ್ ಕಬ್ಬನ್ ಮತ್ತು ಲೆವಿಸ್ ಬೆಂಥಾಮ್ ಬೌರಿಂಗ್
ಮಾರ್ಕ್ ಕಬ್ಬನ್ - 1834 1881:
ಕಬ್ಬನ್
ನು ರಾಜ್ಯದಲ್ಲಿ ಅನೇಕ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದನು. ಇವನು ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದನು. ಮೈಸೂರನ್ನು ಅನೇಕ ಆಡಳಿತ ಘಟಕಗಳಾಗಿ ವಿಭಾಗಿಸಿ, ಅವುಗಳನ್ನು ಸೂಪರಿಂಟೆಂಡೆಂಟ್‌ರ ಮೇಲ್ವಿಚಾರಣೆಯಲ್ಲಿ ಸರಲಾಯಿತು. ಆಡಳಿತ ಘಟಕಗಳನ್ನು ಜಿಲ್ಲೆಗಳು ಮತ್ತು ತಾಲೂಕಗಳಾನ್ನಾಗಿ ವಿಭಜಿಸಲಾಗಿತ್ತು. ನ್ಯಾಯಾಂಗ ಮತ್ತು ಆರಕ್ಷಕ (ಪೋಲಿಸ್) ಇಲಾಖೆಗಳನ್ನು ಉತ್ತಮವಾಗಿ ಸಂಘಟಿಸಲಾಯಿತು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಲಾಯಿತು.
ಹೊಸ ರಸ್ತೆಗಳು ನಿರ್ಮಾಣಗೊಂಡವು. ಅದರ ಪರಿಣಾಮದಿಂದ ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ಬೆಂಗಳೂರಿನೊಂದಿಗೆ ನೇರ ಸಂಪರ್ಕಹೊಂದಿದವು, ಸೇತುವೆಗಳು ನಿರ್ಮಾಣವಾದವು ಮತ್ತು ಟೆಲಿಗ್ರಾಫ್ ತಂತಿಗಳನ್ನೂ ಹಾಕಲಾಯಿತು. 1859ರಲ್ಲಿ ಬೆಂಗಳೂರು ಹಾಗೂ ಜೋಲಾರಪೇಟೆ ಮಧ್ಯೆ ರೈಲು ಮಾರ್ಗವನ್ನು ಹಾಕಲಾಯಿತು. ಇದು ಮೈಸೂರು ರಾಜ್ಯದ ಪ್ರಥಮ ರೈಲು ಮಾರ್ಗವಾಗಿತ್ತು. ತೆರಿಗೆ ಸಂಗ್ರಹವನ್ನು ಶಿಸ್ತುಬದ್ಧಗೊಳಿಸಿದ್ದರಿಂದ ರಾಜ್ಯದ ಆದಾಯದ ಹೆಚ್ಚಳಕ್ಕೆ ಸಹಾಯವಾಯಿತು. ಕಾಫಿ ತೋಟಗಳನ್ನೂ ಅಭಿವೃದ್ಧಿ ಪಡಿಸಲಾಯಿತು. ಇವನು 1861 ರಲ್ಲಿ ಕಮಿಷನರ್ ಹುದ್ದೆಗೆ ರಾಜೀನಾಮೆ ನೀಡಿದನು.
ಲೆವಿಸ್ ಬೆಂಥಾಮ್ ಬೌರಿಂಗ್
ಲೆವಿಸ್ ಬೆಂಥಾಮ್ ಬೌರಿಂಗ್ 1862 ರಲ್ಲಿ ಮುಖ್ಯ ಕಮಿಷನರ್‌ನಾಗಿ ಅಧಿಕಾರ ಸ್ವೀಕರಿಸಿದನು. ಇವನು ಮೈಸೂರು ರಾಜ್ಯದ ಸಮಗ್ರ ಆಡಳಿತವನ್ನು ಪುನರ್‌ಸಂಘಟಿಸಿದನು. ನಂದಿದುರ್ಗ, ನಗರ ಮತ್ತು ಅಷ್ಟಗ್ರಾಮಗಳು ಆಡಳಿತದ ಘಟಕಗಳಾಗಿದ್ದವು. ಈ ಘಟಕಗಳ ಮೇಲ್ವಿಚಾರಣೆಯನ್ನು ಕಮಿಷನರರು ನೋಡಿಕೊಳ್ಳುತ್ತಿದ್ದರು. ಭೂ-ಕಂದಾಯವನ್ನು ಸುಧಾರಿಸಲಾಯಿತು. ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳನ್ನು ವ್ಯವಸ್ಥಿತವಾಗಿ ಸಂಘಟಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣದಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಲಾಯಿತು. ನಿರ್ದೇಶಕರು ಇದರ ಮುಖ್ಯಸ್ಥರಾಗಿದ್ದರು. 1870 ರಲ್ಲಿ ಬೌರಿಂಗನು ರಾಜೀನಾಮೆ ನೀಡಿದನು. ಕಮಿಷನರ್‌ಗಳು ಮೈಸೂರು ರಾಜ್ಯದ ಅಭಿವೃದ್ಧಿಗೆ ಬುನಾದಿಯನ್ನು ಹಾಕಿದರು. 1881 ರಲ್ಲಿ ರಾಜ್ಯವನ್ನು ಹತ್ತನೆಯ ಚಾಮರಾಜ ಒಡೆಯರಿಗೆ ಮನಃ ವಹಿಸಿಕೊಡಲಾಯಿತು (ಮನರ್‌ದಾನ), ಅವರು 1894 ರವರೆಗೆ ಆಳ್ವಿಕೆ ಮಾಡಿದರು. ನಾಲ್ವಡಿ ಕೃಷ್ಣರಾಜ್ ಒಡೆಯರು ಇವರ ಉತ್ತರಾಧಿಕಾರಿಯಾದರು. ಈ ಇಬ್ಬರು ಅರಸರ ಆಳ್ವಿಕೆಯಲ್ಲಿ ಮೈಸೂರು ಮಹಾನ್ ದಿವಾನರ ಸೇವೆಯನ್ನು ಪಡೆದುಕೊಂಡಿತು. ಅವರಲ್ಲಿ ಪ್ರಮುಖರೆಂದರೆ ಸರ್. ಎಂ.ವಿಶ್ವೇಶ್ವರಯ್ಯ ಮತ್ತು ಸರ್. ಮಿರ್ಜಾಇಸ್ಮಾಯಿಲ್, ಮೈಸೂರು 'ಮಾದರಿ ರಾಜ್ಯ'ವೆಂಬ ಬಿರುದು ಗಳಿಸಲು ಇವರು ಕಾರಣೀಭೂತರಾದರು.
ಸರ್, ಎಂ. ವಿಶ್ವೇಶ್ವರಯ್ಯ :
1831-33
1833-34
1834-61
1862-70
1870-75
- 1875-78
- 1878-81
ದಿವಾನರು
ಪಿ.ಎನ್. ಕೃಷ್ಣಮೂರ್ತಿ ವಿ.ಪಿ.ಮಾಧವರಾವ್
ಸರ್. ಎಂ. ವಿಶ್ವೇಶ್ವರಯ್ಯ
ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
'ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ' ಎಂದು ಪರಿಗಣಿಸಲ್ಪಟ್ಟ ಸರ್. ಎಂ.ವಿಶ್ವೇಶ್ವರಯ್ಯನವರು
1861 ರ ಸೆಪ್ಟೆಂಬರ್ 15 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ
ಮುದ್ದೇನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ತಾಯಿಗಳು ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ, ಚಿಕ್ಕಬಳ್ಳಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮುಂದಿನ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದರು. ನಂತರ ಅವರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದು, ಇಂಜನಿಯರಿಂಗ್ ಅಧ್ಯಯನಕ್ಕಾಗಿ ಮಣೆಗೆ ತೆರಳಿದರು. 1884 ರಿಂದ 1909ರ ರಲ್ಲಿ ಮೈಸೂರಿನ ಮುಖ್ಯ ಇಂಜಿನೀಯರ್ ಆಗಿ ನೇಮಕಗೊಂಡರು. 1912 ರಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರು ಇವರನ್ನು ಮೈಸೂರಿನ ದಿವಾನರನ್ನಾಗಿ ನೇಮಿಸಿಕೊಂಡರು. ಇವರ ದಿವಾನಗಿರಿಯಲ್ಲಿ ಮೈಸೂರು ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿತು.
ವರೆಗೆ ಬಾಂಬೇ ಸರ್ಕಾರದಲ್ಲಿ ಸೇವೆ ಸಲ್ಲಿಸಿದರು. 1909 ಅ ಕಡರ್ ಸರ್, 29. ವಿಶ್ವೇಶ್ವರಯ್ಯ
ಆಡಳಿತಾತ್ಮಕ ಸುಧಾರಣೆಗಳು
ಶಾಸನ ಸಭೆಯ ಸದಸ್ಯರ ಸಂಖ್ಯೆಯನ್ನು 18 ರಿಂದ 24 ಕ್ಕೆ ಹೆಚ್ಚಿಸಲಾಯಿತು. ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯಿತಿ ಕಾಯ್ದೆಯು ಜಿಲ್ಲೆ ಮತ್ತು ತಾಲೂಕು ಮಂಡಳಿಗಳಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿತು. ಹಳ್ಳಿಗಳ ಪ್ರಗತಿಗಾಗಿ ಗ್ರಾಮ ಸುಧಾರಣಾ ಸಮಿತಿಗಳನ್ನು ಸ್ಥಾಪಿಸಲಾಯಿತು. ಮಲೆನಾಡು ಪ್ರದೇಶದ ಅಭಿವೃದ್ಧಿಗಾಗಿಯೇ ಒಂದು ಪ್ರತ್ಯೇಕ ಯೋಜನೆಯನ್ನು ರಚಿಸಲಾಯಿತು.
ಕೈಗಾರಿಕಾ ಅಭಿವೃದ್ಧಿ
“ಕೈಗಾರಿಕೀಕರಣ ಇಲ್ಲವೆ ವಿನಾಶ" ಎಂಬುದು ಸರ್.ಎಂ.ವಿಶ್ವೇಶ್ವರಯ್ಯನವರ ಪ್ರಸಿದ್ಧ ಘೋಷಣೆಯಾಗಿತ್ತು. ಇವರ ಅವಧಿಯಲ್ಲಿ ಅನೇಕ ಕೈಗಾರಿಕೆಗಳನ್ನು ಆರಂಭಿಸಲಾಯಿತು ಅವುಗಳಲ್ಲಿ ಕೆಲವು ಇಂತಿವೆ, ಭದ್ರಾವತಿಯಲ್ಲಿನ ಕಬ್ಬಿಣದ ಕಾರ್ಖಾನೆ, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ, ಬೆಂಗಳೂರಿನಲ್ಲಿ ಸಾಬೂನು ಕಾರ್ಖಾನೆ,
ಕೇಂದ್ರ ಕೈಗಾರಿಕಾ ಕಾರ್ಯಾಗಾರ, ಚರ್ಮ ಹದ ಮಾಡುವ ಕಾರ್ಖಾನೆ ಹಾಗೂ ಲೋಹದ ಕಾರ್ಖಾನೆಗಳು, ವ್ಯಾಪಾರ ಹಾಗೂ ವಾಣಿಜ್ಯಕ್ಕೆ ಪ್ರೋತ್ಸಾಹ ನೀಡಲು ಬೆಂಗಳೂರಿನಲ್ಲಿ ಮೈಸೂರು ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯನ್ನು ಸ್ಥಾಪಿಸಲಾಯಿತು. ಇವರ ಅವಧಿಯಲ್ಲಿ ಸಣ್ಣ ಕೈಗಾರಿಕೆಗಳು ಅಭಿವೃದ್ಧಿಗೊಂಡವು. ಗುಡಿ ಕೈಗಾರಿಕೆಗಳಾದ, ನೇಕಾರಿಕೆ, ಕುಂಬಾರಿಕೆ, ಹೆಂಚು, ಮರಗೆಲಸ, ಚಾಪೆ, ಚರ್ಮದ ವಸ್ತುಗಳು, ಬೀಡಿ ಮತ್ತು ಅಗರಬತ್ತಿ ಕೈಗಾರಿಕೆಗಳು ಪ್ರವರ್ಧಮಾನಕ್ಕೆ ಬಂದವು. ವ್ಯಾಪಾರ ಮತ್ತು ವಾಣಿಜ್ಯಗಳನ್ನು ಬೆಳೆಸುವುದಕ್ಕಾಗಿ 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಲಾಯಿತು.
ಶೈಕ್ಷಣಿಕ ಸುಧಾರಣೆಗಳು
ಪ್ರತಿಯೊಂದು ದೇಶದ ಪ್ರಗತಿಯು ಮುಖ್ಯವಾಗಿ ಜನರ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ
ಎಂದು ಸರ್.ಎಂ.ವಿಶ್ವೇಶ ನವರು ನಂಬಿದ್ದರು. ಇವರು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಿದರು. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನಗಳನ್ನು ನೀಡಲಾರಂಭಿಸಿದರು. ಸ್ತ್ರೀಯರ ಶಿಕ್ಷಣವನ್ನೂ ಪ್ರೋತ್ಸಾಹಿಸಲಾಯಿತು. ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಲಾಯಿತು. ಬೆಂಗಳೂರಿನಲ್ಲಿ ಇಂಜನಿಯರಿಂಗ್ ಕಾಲೇಜು ಮತ್ತು ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು ಆರಂಭಿಸಿದರು. ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಶಾಲೆಯೊಂದನ್ನು ಸ್ಥಾಪಿಸಿದರು.
1916 ರಲ್ಲಿ ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾಲಯ ಈ ಕ್ಷೇತ್ರದಲ್ಲಿ ಇವರ ಅತ್ಯಂತ ಮಹತ್ತರ ಸಾಧನೆಯಾಗಿದೆ, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಲಾಯಿತು.
ಅವರ ಇನ್ನಿತರ ಸಾಧನೆಗಳು,
ಕೃಷ್ಣರಾಜ ಸಾಗರ ಆಣೆಕಟ್ಟೆಯ ನಿರ್ಮಾಣ ವಿಶ್ವೇಶ್ವರಯ್ಯನವರ ಮಹಾನ್ ಸಾಧನೆಯಾಗಿದೆ. ಮಂಡ್ಯ ಜಿಲ್ಲೆ ತನ್ನ ಕೃಷಿ ಸಮೃದ್ಧಿಗೆ ಅವರಿಗೆ ಋಣಿಯಾಗಿದೆ. 1913ರಲ್ಲಿ ಮೈಸೂರು ಅರಸಿಕೆರೆ ಮತ್ತು ಬೌರಿಂಗ್‌ಪೇಟೆ ಕೋಲಾರ ರೈಲ್ವೆ ಮಾರ್ಗಗಳನ್ನು ಹಾಕಲಾಯಿತು.
ಪರಿಹಾರ ಕಾರ್ಯಗಳು
ಸರ್.ಎಂ.ವಿಶ್ವೇಶ್ವರಯ್ಯನವರ ದಿವಾನಗಿರಿ ಅವಧಿಯಲ್ಲಿ ಪ್ರಥಮ ಜಾಗತಿಕ ಯುದ್ಧ (1914-18) ವು ಆರಂಭವಾಯಿತು. ಇದು ಆಹಾರ ವಸ್ತುಗಳ ತೀವ್ರ ಕೊರತೆಗೆ ಕಾರಣವಾಯಿತು. ಸರ್.ಎಂ.ವಿಶ್ವೇಶ್ವರಯ್ಯನವರು ನ್ಯಾಯಬೆಲೆ ಅಂಗಡಿಗಳನ್ನು ತೆರೆದು, ಆಹಾರ ಧಾನ್ಯಗಳ ರಫ್ತನ್ನು ನಿಲ್ಲಿಸಿ ಮತ್ತು ಮಾರಾಟದ ದರಗಳನ್ನುನಿಗದಿ ಪಡಿಸುವಂತಹ ಪರಿಹಾರ ಕ್ರಮಗಳನ್ನು ಕೈಗೊಂಡರು. ಸರ್. ಎಂ.ವಿಶ್ವೇಶ್ವರಯ್ಯನವರು 1918 ರಲ್ಲಿ ರಾಜಿನಾಮೆ ನೀಡಿದರು. ಬ್ರಿಟಿಷ್ ಸರಕಾರವು ಇವರ ದಕ್ಷತೆ ಮತ್ತು ಸಮರ್ಪಣಾ ಸೇವೆಗಾಗಿ 'ಸರ್' ಎಂಬ ಬಿರುದನ್ನು ನೀಡಿತು. ತಮ್ಮ ರಾಜೀನಾಮೆ ನಂತರವೂ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿದರು. 1955 ರಲ್ಲಿ ಭಾರತ ಸರ್ಕಾರವು
ಅವರಿಗೆ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರು. 101 ವರ್ಷಗಳು ಬದುಕಿದ ಇವರು 1962 ರಲ್ಲಿ ನಿಧನ ಹೊಂದಿದರು. ಇವರು ಹಲವು ಪುಸ್ತಕಗಳನ್ನು ರಚಿಸಿದರು, ಅವುಗಳೆಂದರೆ, 'ಎ ವಿಜನ್ ಆಫ್ ಪ್ರಾಸ್ಪರಸ್ ಮೈಸೂರ್' 'ರೀಕನ್ ಸ್ಟಕ್ಸಿಂಗ್ ಇಂಡಿಯಾ', 'ರಾಪಿಡ್ ಡೆವೆಲಪ್‌ಮೆಂಟ್ ಆಫ್ ಇಂಡಸ್ಟ್ರೀಸ್', 'ಪ್ಲಾನ್‌ಡ್ ಎಕಾನಮಿ ಫಾರ್ ಇಂಡಿಯಾ', 'ಮೆಮೊಯರ್ಸ್' ಆಫ್ ಮೈ ವರ್ಕಿಂಗ್ ಲೈಫ್' (ಆತ್ಮ ಚರಿತ್ರೆ) ಇತ್ಯಾದಿ.
1926 ರಿಂದ 1941 ರವರೆಗೆ ದಿವಾನರಾಗಿ ಸೇವೆಗೈದ ಸರ್.ಮಿರ್ಜಾ ಇಸ್ಮಾಯಿಲ್‌ರನ್ನು ಸಹ ಆಧುನಿಕ
ಮೈಸೂರಿನ ನಿರ್ಮಾಪಕರಲ್ಲೊಬ್ಬರೆಂದು ಪರಿಗಣಿಸಲಾಗಿದೆ. ಇವರು ಕೈಗಾರಿಕೆಗಳ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಹಲವಾರು ಕೈಗಾರಿಕೆಗಳನ್ನು ಆರಂಭಿಸಿದರು. ಬೆಂಗಳೂರನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್), ಗಾಜಿನ ಕಾರ್ಖಾನೆ, ಪಿಂಗಾಣಿ ಪಾತ್ರ ಕಾರ್ಖಾನೆ, ಬೆಳಗೊಳದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆ, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ, ಶಿವಮೊಗ್ಗಾದಲ್ಲಿ ಬೆಂಕಿಕಡ್ಡಿ ಕಾರ್ಖಾನೆ ಮತ್ತು ಭದ್ರಾವತಿಯಲ್ಲಿನ ಉಕ್ಕು ಹಾಗೂ ಕಾಗದ ಕಾರ್ಖಾನೆಗಳನ್ನು ಇವರು ಸ್ಥಾಪಿಸಿದರು. ಜಕ್ಕೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಿದರು. ರೇಡಿಯೋ ಕೇಂದ್ರಗಳನ್ನು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಆರಂಭಿಸಲಾಯಿತು..
ಇವರು ಗ್ರಾಮೀಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಬದನವಾಳದಲ್ಲಿ ಖಾದಿ ಉತ್ಪಾದನೆಯ ಕೇಂದ್ರವನ್ನು ಸ್ಥಾಪಿಸಿದರು. ಇಶ್ವಿನ್ ಕಾಲುವೆ ನಿರ್ಮಿಸಿ ಮಂಡ್ಯ ಜಿಲ್ಲೆಯ 1,20,000 ಎಕರ ಭೂಮಿಗೆ ನೀರನ್ನು ಒದಗಿಸಲಾಯಿತು. ಇವರಲ್ಲಿ ಸೌಂದರ್ಯ ಪ್ರಜ್ಞೆ ಇದ್ದು, ಮೈಸೂರನ್ನು ಹೂ ತೋಟಗಳು ಮತ್ತು ಉದ್ಯಾನವನಗಳ ನಗರವನ್ನಾಗಿಸಿದರು. ಬೆಂಗಳೂರು ಮತ್ತು ಇತರ ನಗರಗಳಲ್ಲಿಯೂ ಉದ್ಯಾನ ಮತ್ತು ಹೂತೋಟಗಳನ್ನು ನಿರ್ಮಿಸಿದರು. ಕೆ.ಆರ್.ಎಸ್.ನಲ್ಲಿ ಬೃಂದಾವನ ಉದ್ಯಾನವನವನ್ನು ನಿರ್ಮಿಸಿದರು. ಇವರ ಅವಧಿಯಲ್ಲಿಯೇ ಮೈಸೂರು ಮಹಾರಾಜರ ಆಡಳಿತದ ರಜತ ಮಹೋತ್ಸವವನ್ನು ಆಚರಿಸಲಾಯಿತು. ಇದರ ಸ್ಮರಣೆಗಾಗಿ ಆಸ್ಪತ್ರೆಗಳು, ದೇವಾಲಯಗಳು ಮತ್ತು ಗ್ರಂಥಾಲಯಗಳನ್ನು ನಿರ್ಮಿಸಲಾಯಿತು. ಬೆಂಗಳೂರಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಶಸ್ತ್ರಚಿಕಿತ್ಸೆ ಸಂಸ್ಥೆ (NIMHANS National Institute of Mental Health and Neuro Surgery) ಕೋಲಾರದಲ್ಲಿ ನರಸಿಂಹರಾಜ ಆಸ್ಪತ್ರೆ, ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆ ಮತ್ತು ಮೈಸೂರಿನಲ್ಲಿ ವಾಣಿವಿಲಾಸ ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು.
ಶಿಕ್ಷಣದ ಪ್ರೋತ್ಸಾಹಕ್ಕಾಗಿ ಪ್ರಾಥಮಿಕ ಶಿಕ್ಷಣ ಕಾಯ್ದೆಯನ್ನು ಜಾರಿಗೊಳಿಸಿ, ಖಾಸಗಿ ಶಾಲೆಗಳಿಗೆ ಅನುದಾನವನ್ನು ನೀಡಲಾಯಿತು. ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವನ್ನು ಆರಂಭಿಸಲಾಯಿತು. ಹೀಗೆ ಮೈಸೂರನ್ನು ಅಭಿವೃದ್ಧಿಪಡಿಸುವಲ್ಲಿ ಮಿರ್ಜಾ ಇಸ್ಮಾಯಿಲ್‌ರು ಮಹತ್ವದ ಪಾತ್ರ ವಹಿಸಿದ್ದಾರೆ.
No comments:
Post a Comment