143 ಉಪಗ್ರಹಗಳನ್ನು ಏಕ ಕಾಲಕ್ಕೆ ಕಕ್ಷೆಗೆ ಸೇರಿಸುವ ಮೂಲಕ ವಿಶ್ವ ದಾಖಲೆ

 


       ಜಗತ್ತಿನ ಶ್ರೀಮಂತ ಉದ್ಯಮಿ ಅಮೆರಿಕಾದ ಎಲಾನ್ ಮಸ್ತ್ ಅವರ ಒಡೆತನದ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್‌ಎಕ್ಸ್ ಸಂಸ್ಥೆಯು ಎರಡು ಹಂತದ ಫಾಲ್ಡನ್-9 ಉಡಾವಣಾ ವಾಹಕದ ಮೂಲಕ ಕಡಿಮೆ ಖರ್ಚಿನ ಹೊಸ ರೈಡ್‌ಶೇರ್ ಮಿಷನ್ ಅಡಿಯಲ್ಲಿ 143 ಉಪಗ್ರಹಗಳನ್ನು ಏಕ ಕಾಲಕ್ಕೆ ಕಕ್ಷೆಗೆ ಸೇರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಈ ಯೋಜನೆಯು Transporter-1 ಎಂಬ


ಹೆಸರಿನ ಮಿಷನ್‌ನಡಿ ಕೈಗೊಳ್ಳಲಾಯಿತು.


2021ರ ಜನವರಿ 25 ರಂದು ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯು SpaceX's Smallsat Rideshare Program ನ ಭಾಗವಾಗಿ ಫಾಲ್ಕಾನ್-9 (Falcon-9) ಉಡಾವಣಾ ವಾಹಕದಿಂದ ಫ್ಲೋರಿಡಾದ ಕೆಪ್ ಕೆನವೆರಲ್ ಉಡಾವಣಾ ಕೇಂದ್ರ (Cape Canaveral Space Force Station ದಿಂದ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಈ ಮೂಲಕ ಒಂದೇ ನೌಕೆಯಲ್ಲಿ ಅತಿಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ ಕೀರ್ತಿ ಸ್ಪೇಸ್‌ ಎಕ್ಸ್ ಸಂಸ್ಥೆಗೆ ಸಲ್ಲುತ್ತದೆ. 2017ರ ಫೆಬ್ರವರಿ 15 ರಂದು ಭಾರತದ ಇಸ್ರೋ ಸಂಸ್ಥೆಯು ಪಿಎಸ್‌ಎಲ್‌ವಿ-ಸಿ37 ಉಡಾವಣಾ ವಾಹಕದ ಮೂಲಕ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವ ದಾಖಲೆ ನಿರ್ಮಿಸಿತ್ತು.


ಸ್ಪೇಸ್ಎಕ್ಸ್ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆಗೊಂಡ 143 ಉಪಗ್ರಹಗಳು 2020ರ ಜನವರಿಯಲ್ಲಿ ಫಾಲ್ಕಾನ್‌- ಉಡಾವಣಾ ವಾಹಕದಿಂದ ಉಡಾವಣೆಗೊಂಡ 143 ಉಪಗ್ರಹಗಳಲ್ಲಿ ಕೆಲವು ವಾಣಿಜ್ಯ ಮತ್ತು ಸರ್ಕಾರದ ಕ್ಯೂಬ್ ಸ್ಯಾಟ್ ಮತ್ತು ಮೈಕ್ರೋಸ್ಯಾಟ್‌ಗಳಿದ್ದವು. 200 ಕೆ.ಜಿ. ಉಪಗ್ರಹ ಹೊತ್ತೊಯ್ಯಲು 1 ಮಿಲಿಯನ್ ಡಾಲರ್ ವೆಚ್ಚ ತಗುಲಿದೆ.

  ಸ್ಪೇಸ್ಎಕ್ಸ್ ಸಂಸ್ಥೆಯ ಮತ್ತೊಂದು ದಾಖಲೆ

         ಅಮೆರಿಕಾ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ 'ಸ್ಪೇಸ್‌ಎಕ್ಸ್' ಜಾಗತಿಕ ಮಟ್ಟದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಚರಿತೆಯೊಂದನ್ನು ನಿರ್ಮಿಸಿತು. 2020ರ ಮೇ 30 ರಂದು ಭಾರತೀಯ ಕಾಲಮಾನ ರಾತ್ರಿ, 12.53ಕ್ಕೆ ಸ್ಪೇಸ್‌ಎಕ್ಸ್ ಸಂಸ್ಥೆಯು ನಿರ್ಮಿಸಿದ ಫಾಲ್ಕಾನ್-9 ಎಂಬ ಉಡಾವಣಾ ವಾಹಕದಲ್ಲಿ ಅಮೆರಿಕಾದ ನಾಸಾದ ಇಬ್ಬರು ಗಗನಯಾತ್ರಿಗಳಾದ ಡೌವ್ ಹರ್ಲಿ & ಜಾಬ್ ಬೆಹೈಕನ್ ಅವರನ್ನು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶದತ್ತ ಯಶಸ್ವಿಯಾಗಿ ಅಮೆರಿಕಾದ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಗೆ ಮಾತ್ರವೇ ಸಾಧ್ಯವಾಗುತ್ತಿದ್ದ ಉಡಾವಣಾ ವಾಹಕ ನಿರ್ವಹಣಾ ಮತ್ತು ಯಶಸ್ವಿ ಉಡಾವಣೆಯನ್ನು ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ಸಾಧಿಸಿ ತೋರಿಸಿದೆ. ಈ ಮೂಲಕ ಖಾಸಗಿ ಸಂಸ್ಥೆ ನಿರ್ಮಿತ ರಾಕೆಟ್ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳನ್ನು ಅಂತರಿಕ್ಷಯಾನ ಕೈಗೊಳ್ಳುವ ಮೂಲಕ ಅಂತರಿಕ್ಷಯಾನವನ್ನು ಯಶಸ್ವಿಯಾಗಿ ಕೈಗೊಂಡಿತು.


ಸ್ಪೇಸ್ಎಕ್ಸ್ ಡೆಮೋ-2: ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಧ್ಯಯನಕ್ಕಾಗಿ ಸ್ಪೇಸ್-ಎಕ್ಸ್ ಗಗನಯಾತ್ರಿಗಳನ್ನು ಕಳುಹಿಸಿದ ಯೋಜನೆಯನ್ನು ಸ್ಪೇಸ್-ಎಕ್ಸ್ ಡೆಮೋ - 2 ಎನ್ನುವರು. ಈ ಯೋಜನೆಗೆ ಸ್ಪೇಸ್-ಎಕ್ಸ್ ಜೊತೆಗೆ ನಾಸಾ ಕೂಡ ಸಹಕರಿಸಿದೆ.


ಭೂಮಿಗೆ ಮರಆದ ಜಗತ್ತಿನ ಮೊದಲ ಗಗನ ನೌಕೆ ಸ್ಟೇಸ್-ಎಕ್ಸ್


12020ರ ಆಗಸ್ಟ್ 2 ರಂದು ನಾಸಾಕ್ಕೆ ಸೇರಿದ ಇಬ್ಬರು ಗಗನಯಾನಿಗಳನ್ನು ಹೊತ್ತ ಖಾಸಗಿ ಎಂಡವರ್ ಮೆಕ್ಸಿಕನ್ ಕೊಲ್ಲಿ ಸಮುದ್ರಕ್ಕೆ ಬಂದಿಳಿದಿತ್ತು. ಬಾಹ್ಯಾಕಾಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಬರುವ ಪ್ರವಾಸೋದ್ಯಮ ಆರಂಭಿಸಲು ಪ್ರಯೋಗಾರ್ಥವಾಗಿ ಈ ಗಗನ ನೌಕೆಯನ್ನು ಇಬ್ಬರು ಗಗನಯಾನಿಗಳೊಂದಿಗೆ ಕಳುಹಿಸಲಾಗಿತ್ತು. ಈ ಖಾಸಗಿ ಗಗನ ನೌಕೆಯು ಯಶಸ್ವಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ತಲುಪಿ ಮರಳಿ ಯಶಸ್ವಿಯಾಗಿ ಬಂದಿರುವುದರಿಂದ ಬಾಹ್ಯಾಕಾಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಬರುವ ಅಮೆರಿಕಾದ ಉದ್ಯಮಿ ಎಲಾನ್‌ಮಸ್ ರವರ ಸ್ಪೇಸ್-ಎಕ್ಸ್ಕಂಪನಿಯ ಕನಸು ನನಸಾಗಿದೆ.


ಇಸ್ರೋ ವತಿಯಿಂದ 104 ಉಪಗ್ರಹಗಳ ಉಡಾವಣೆ ಇಸ್ರೋ ಸಂಸ್ಥೆಯು 2017ರ ಫೆಬ್ರವರಿ 15 ರಂದು


ಪಿಎಸ್ಎಲ್ ವಿ-ಸಿ37 ಉಡಾವಣಾ ವಾಹಕದ ಮೂಲಕ 104 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಈ 104 ಉಪಗ್ರಹಗಳಲ್ಲಿ 101 ಉಪಗ್ರಹಗಳು ವಿದೇಶಿ ಉಪಗ್ರಹಗಳಾಗಿದ್ದವು ಹಾಗೂ ಭಾರತದ ಸ್ವದೇಶಿ 3 ಉಪಗ್ರಹಗಳಾದ ಕಾರ್ಟೋಸ್ಯಾಟ್-2ಡಿ, ಐಎನ್‌ಎಸ್‌-1ಎ ಮತ್ತು ಐಎನ್‌ಎಸ್‌-1ಬಿ ಉಡಾವಣೆ ಮಾಡಲಾಗಿತ್ತು. ಈ ದಾಖಲೆಯನ್ನು ಸ್ಪೇಸ್‌ಎಕ್ಸ್ ಸಂಸ್ಥೆಯು 2021ರ ಜನವರಿಯಲ್ಲಿ ಮುರಿದಿದೆ. ಇಸ್ರೋ ಸಂಸ್ಥೆಗಿಂತ ಮೊದಲು ರಷ್ಯಾ ದೇಶವು 37 ಉಪಗ್ರಹಗಳನ್ನು ಒಂದೇ ಉಡಾವಣಾ ವಾಹಕದಲ್ಲಿ ಉಡಾವಣೆ ಮಾಡಿ ದಾಖಲೆ ನಿರ್ಮಿಸಿತ್ತು.


ಇಸ್ರೋ ಸಂಸ್ಥೆಯು 1969ರ ಆಗಸ್ಟ್ 15 ರಂದು ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಂ ಸಾರಾಭಾಯಿ ಅವರು ಇಸ್ರೋನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇಸ್ರೋದವರು ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ಇತ್ತೀಚೆಗೆ ಉಪಗ್ರಹ ಉಡಾವಣಾ ಕೇಂದ್ರವನ್ನು ಆರಂಭಿಸುತ್ತಿದ್ದಾರೆ. ಕೇರಳದ ತಿರುವನಂತಪುರಂನ ತುಂಬಾದಲ್ಲಿ ರಾಕೆಟ್ ಪರೀಕ್ಷಾ ಕೇಂದ್ರವಿದೆ ಹಾಗೂ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರವಿದೆ.


ಸ್ಪೇಸ್-ಎಕ್ಸ್ (SpaceX) ಬಾಹ್ಯಾಕಾಶ ಸಂಸ್ಥೆ


ವಿಸ್ತೃತ ರೂಪ: Space Exploration Technologies Corp. 


* ಕೇಂದ್ರ ಕಚೇರಿ : ಕ್ಯಾಲಿಫೋರ್ನಿಯಾದ ಹವತೋರ್ನೆ


ಸಂಸ್ಥಾಪಕ: ಎಲಾನ್ ಮಸ್ಕ್


* ಸ್ಥಾಪನೆ ವರ್ಷ: 2002


ಸ್ಪೇಸ್-ಎಕ್ಸ್ ಅಭಿವೃದ್ಧಿಪಡಿಸಿದ ಮೊದಲ ರಾಕೆಟ್: 2008ರಲ್ಲಿ ಫಾಲ್ಯಾನ್-I ಎಂಬುದು ಉಡಾವಣೆಗೊಂಡ ಮೊದಲ ರಾಕೆಟ್, ಫ್ಲೋರಿಡಾದ ಕೆಪ್ ಕನವೆರಲ್ ಉಡಾವಣಾ ಕೇಂದ್ರ


ಅಮೆರಿಕಾದಬಾಹ್ಯಾಕಾಶ ಪಡೆಯ 45ನೇ ಬಾಹ್ಯಾಕಾಶ ಘಟಕವಾಗಿದೆ.

ನಾಸಾಸಂಸ್ಥೆಯು ಅಮೆರಿಕಾದ ವಾಷಿಂಗ್ಟನ್ ಡಿಸಿ ಯಲ್ಲಿದೆ.

Post a Comment (0)
Previous Post Next Post