ಉತ್ತಮ ಪ್ರಬಂಧ ಬರೆಯುವುದು ಹೇಗೆ?

 ಉತ್ತಮ ಪ್ರಬಂಧ ಬರೆಯುವುದು ಹೇಗೆ?




   ಪ್ರಬಂಧ ಬರೆಯುವುದು ಒಂದು ಕಲೆ ಮಾತ್ರವೇ ಅಲ್ಲ, ಇದೊಂದು ವ್ಯವಸ್ಥಿತವಾಗಿ ವಿಷಯವನ್ನು ಮಂಡಿಸುವ ಶೈಲಿಯಾಗಿದೆ. ಪ್ರಬಂಧ ಬರೆಯುವಾಗ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು.


1) ಪ್ರಬಂಧದಲ್ಲಿ ಬರೆಯುವ ಅಂಶಗಳು ನೇರವಾಗಿ ಪ್ರಬಂಧದ ವಿಷಯಕ್ಕೆ ಸಂಬಂಧಿಸಿರಬೇಕು.


2) ಪ್ರಬಂಧದಲ್ಲಿ ಬರೆಯುವ ಅಂಶಗಳು ಯಾವುದೇ ಧರ್ಮ, ಜಾತಿ,

ಜನಾಂಗ, ಲಿಂಗ, ಪ್ರದೇಶವನ್ನು ಅವಹೇಳನ ಮಾಡುವಂತಿರಬಾರದು. 


3) ವಸ್ತುನಿಷ್ಠವಾಗಿ ವಿಮರ್ಶೆ ಮಾಡುವುದಕ್ಕೆ ಅವಕಾಶವಿರುತ್ತದೆ.


4) ವಿಷಯವನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಬೇಕು. 

5) 600 ಪದಗಳಿಗಿಂತ ಮೀರಬಾರದು. 

6) ಪ್ರಬಂಧದ ಹಂತಗಳನ್ನು ಕ್ರಮವಾಗಿ ಅನುಸರಿಸುವುದು ಉತ್ತಮ.


7) ಭಾಷೆಯು ಸ್ಪಷ್ಟವಾಗಿರಬೇಕು.


8) ಅಂಕಿ ಅಂಶಗಳನ್ನು, ಪೂರಕವಾದ ಮಾಹಿತಿಗಳನ್ನು ಒದಗಿಸುವುದು ಸೂಕ್ತವಾಗಿದೆ.


9) ಉಪಸಂಹಾರದಲ್ಲಿ ತಮ್ಮದೇ ಆದ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ. 

10) ಪ್ರಬಂಧ ಬರೆಯುವಾಗ ಅಕ್ಷರಗಳು ಸ್ಪಷ್ಟವಾಗಿದ್ದು, ಅತಿ ದೊಡ್ಡದಾಗಿಯೂ ಅಥವಾ ಅತೀ ಚಿಕ್ಕದಾಗಿಯೂ ಇರಬಾರದು.


ಉತ್ತಮ ಪ್ರಬಂಧವು ಈ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ. 

1) ಪೀಠಿಕೆ ಹಂತ 

2) ಬೆಳವಣಿಗೆ ಹಂತ 

3) ಉಪಸಂಹಾರ


*ಪೀಠಿಕೆ ಹಂತ:- ಈ ಹಂತದಲ್ಲಿ ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ಪೂರಕವಾದ ಪೀಠಿಕೆಯನ್ನು ಹಾಕಬೇಕು. ಉಕ್ತಿಗಳು, ಶ್ರೇಷ್ಟ ವ್ಯಕ್ತಿಗಳ ಹೇಳಿಕೆಗಳಿಂದ ಪೀಠಿಕೆ ಹಂತಗಳನ್ನು ಆರಂಭಿಸುವುದು ಹೆಚ್ಚು ಸೂಕ್ತ, ಆದರೆ ಅದು ಕಡ್ಡಾಯವೇನಲ್ಲ.


* ಪೀಠಿಕೆ ಹಂತವು ಸಾಮಾನ್ಯದಿಂದ ನಿರ್ದಿಷ್ಟವಾದ ವಿಷಯದ ಕಡೆಗೆ ಕೊಂಡೊಯ್ಯಬೇಕು. ಅಂದರೆ ಪ್ರಬಂಧದ ವಿಷಯದ ಕಡೆಗೆ ಕೊಂಡೊಯ್ಯಬೇಕು.


* ಪೀಠಿಕೆ ಹಂತವು. ಗರಿಷ್ಟ 50ರಿಂದ 60 ಪದಗಳನ್ನು ಹೊಂದಿರತಕ್ಕದ್ದು. ಕೆಲವೊಮ್ಮೆ ಪೀಠಿಕೆಯೇ ಪ್ರಬಂಧದ ವಿಷಯವಾಗಬಾರದು.


* ಬೆಳವಣಿಗೆಯ ಹಂತ:- ಹಂತವು ಹೆಚ್ಚು ಮುಖ್ಯವಾದ ಹಂತವಾಗಿದ್ದು, ಯಾವುದೇ ವಿಷಯದ ಬಗ್ಗೆ ಪ್ರಬಂಧ ಬರೆಯಲು ಬೆಳವಣಿಗೆ ಹಂತದಲ್ಲಿ ಈ ಕೆಳಕಂಡಂತೆ ವಿಭಾಗಿಸಿಕೊಳ್ಳುವುದು ಉಪಯುಕ್ತವಾಗಿದೆ. ಮತ್ತು ಪ್ರಬಂಧ ಬರೆಯಲು ಸುಲಭವಾಗುತ್ತದೆ. 


* ಉಪ ಸಂಹಾರ ಹಂತ:- 

           ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಶೈಲಿಯಲ್ಲಿ ಉಪ ಸಂಹಾರ ನೀಡಬೇಕು. ಈ ಹಂತದಲ್ಲಿ ಇಡೀ ಪ್ರಬಂಧದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಮಂಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ವಸ್ತುನಿಷ್ಠವಾಗಿ ಮತ್ತು ವಾಸ್ತವಿಕ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ನೀಡಬೇಕು.


Post a Comment (0)
Previous Post Next Post