ರಾಷ್ಟ್ರೀಯ ಹೆಣ್ಣು ಮಗುವಿನ ದಿನ : ಜನವರಿ 24
ಭಾರತದಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನವಾದ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ (National Day of Girl Child) ಆಚರಿಸಲಾಗುತ್ತದೆ. ಇದರ ಅಂಗವಾಗಿ 2021ರ
ಜನವರಿ 24 ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು. 2008 ರಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಬಗ್ಗೆ ಜಾಗೃತಿ, ಮಹಿಳಾ ಸ್ಥಿತಿ-ಗತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಆಚರಣೆ ಬಗ್ಗೆ ಮಾಹಿತಿ
ಇಂದಿರಾ ಗಾಂಧಿಯವರು 1966ರ ಜನವರಿ 24ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಿ ಅಧಿಕಾರ ವಹಿಸಿಕೊಂಡರು. ಈ ಹಿನ್ನೆಲೆಯಲ್ಲಿ 2008 ರಿಂದ ಪ್ರತೀ ವರ್ಷ ಜನವರಿ 24 ರಂದು ಒಂದು ಧೈಯವಾಕ್ಯದೊಂದಿಗೆ ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. 2021ರ ಜನವರಿ 24 ರಂದು 14ನೇ ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನು ಆಚರಿಸಲಾಯಿತು. 2020ರಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು 'ಉಜ್ವಲ ನಾಳೆಗಾಗಿ ಹೆಣ್ಣು ಮಗುವಿನ ಸಬಲೀಕರಣ' ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು. ಕೇಂದ್ರ ಸರ್ಕಾರವು 2015ರ ಜನವರಿ 22 ರಂದು ಜಾರಿಗೆ ತಂದ ಬೇಟಿ ಬಚಾವೋ ಬೇಟಿ ಪಡಾವೋ (BBBP- Beti Bachao Beti Padhao) ಯೋಜನೆಯ 6ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಮಕ್ಕಳ ಲಿಂಗಾನುಪಾತ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 2015ರ ಜನವರಿ 22 ರಂದು ಜಾರಿಗೆ ತಂದ ಕಾರ್ಯಕ್ರಮವಾಗಿದ್ದು ಮತ್ತು ಹೆಣ್ಣು ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಮತ್ತು ಆರ್ಥಿಕ ಸಬಲೀಕರಣ ಯೋಜನೆಯಾಗಿದೆ.
ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ (International Day For The Girl Child) : ಅಕ್ಟೋಬರ್ 11 2012 ರಿಂದ ಪ್ರತೀ ವರ್ಷ ಅಕ್ಟೋಬರ್ 11 ಅನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. 2020ರ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು “My Voice, Our Equal Future' ಧೈಯವಾಕ್ಯದಲ್ಲಿ ಆಚರಿಸಲಾಯಿತು.
ಉತ್ತರಾಖಂಡ ರಾಜ್ಯದಲ್ಲಿ ಒಂದು ದಿನದ ಮುಖ್ಯಮಂತ್ರಿಯಾಗಿ ಸೃಷ್ಟಿ ಗೋಸ್ವಾಮಿ
ONE DAY-CM 2021ರ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಉತ್ತರಾಖಂಡ ರಾಜ್ಯದ ಸರ್ಕಾರವು ರಾಜ್ಯದ ಬೇಸಿಗೆ ಕಾಲದ ರಾಜಧಾನಿಯಾದ ಗೈರ್ ಸೈನ್ (ಚಳಿಗಾಲದ ರಾಜಧಾನಿ: ಡೆಹರಾಡೂನ್) ನಿಂದ ಒಂದು ದಿನದ ಮುಖ್ಯಮಂತ್ರಿಯಾಗಿ 19 ವರ್ಷದ ಸೃಷ್ಠಿ ಗೋಸ್ವಾಮಿ (Srishti Goswami) ಅವರು ಕಾರ್ಯನಿರ್ವಹಿಸಿದರು. ಮುಖ್ಯಮಂತ್ರಿಗಳ ಅಧಿಕೃತ ಸಭೆಯಲ್ಲಿ ಭಾಗಿಯಾಗಿ ಅಟಲ್ ಆಯುಷ್ಮಾನ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆಯ ಹೋಮ್-ಸ್ಟೇ ಯೋಜನೆಗಳ ಕಡತಗಳನ್ನು ಪರಿಶೀಲಿಸಿದರು. ಹರಿದ್ವಾರ ಮೂಲದ ಸೃಷ್ಠಿ ಗೋಸ್ವಾಮಿ ಅವರಿಗೆ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಹೆಣ್ಣು ಮಗು ದಿನದ ಶುಭಾಶಯ ಕೋರಿದರು. ಸೃಷ್ಟಿ ಗೋಸ್ವಾಮಿ ಅವರು 2018ರಲ್ಲಿ ರಾಜ್ಯದ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಸೃಷ್ಟಿ ಗೋಸ್ವಾಮಿ ಅವರು ಬಾಲ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಾಲಕಿಯರ ಸಬಲೀಕರಣದ ಸಂದೇಶವನ್ನು ರವಾನಿಸುವ ಸಲುವಾಗಿ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಸಮ್ಮತಿಸಿದ್ದರು. ರಾಜ್ಯದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲಾಗಿದೆ. ರೂರ್ಕಿಯಾ ಪಿಎಸ್‌ಎಂ ಪಿಜಿ ಕಾಲೇಜಿನಲ್ಲಿ ಬಿ.ಎಸ್ಸಿ. ಕೃಷಿಯ 7ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸೃಷ್ಠಿ ಹರಿದ್ವಾರ ಜಿಲ್ಲೆಯ ದೌಲತ್ ಪುರ ನಿವಾಸಿ, ಈಕೆಯ ತಂದೆ ಉದ್ಯಮಿಯಾಗಿದ್ದು, ತಾಯಿ ಗೃಹಿಣಿ.
ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಂಬಂಧಿಸಿದ ಅನೇಕ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. 2018 ರಲ್ಲಿ ಉತ್ತರಾಖಂಡದ ಬಾಲ ವಿಧಾನ ಸಭೆಯ ಮುಖ್ಯಮಂತ್ರಿಯಾಗಿ ಸೃಷ್ಟಿ ಆಯ್ಕೆಯಾಗಿದ್ದರು.
ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಮಧ್ಯಪ್ರದೇಶ ಸರ್ಕಾರದ ಫಂಖ್ ಅಭಿಯಾನ: ರಾಷ್ಟ್ರೀಯ ಹೆಣ್ಣು
ಮಗುವಿನ ದಿನದ ಅಭಿಯಾನದಲ್ಲಿ ಮಧ್ಯಪ್ರದೇಶ ಸರ್ಕಾರವು ಫಂಖ್ (PANKH) ಅಭಿಯಾನಕ್ಕೆ ಚಾಲನೆ ನೀಡಿತು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಈ ಅಭಿಯಾನ ಆರಂಭಿಸಲಾಗಿದ್ದು, P-ರಕ್ಷಣೆ (Protection), A-ಜಾಗೃತಿ (Awareness), N-ಪೌಷ್ಠಿಕತೆ (Nutrition), K-ಜ್ಞಾನ (Knowledge), H-ಆರೋಗ್ಯ (Health) ಎಂಬುದನ್ನು ಪ್ರತಿನಿಧಿಸುತ್ತದೆ. ಈ ಅಭಿಯಾನವು ಒಂದು ವರ್ಷ ಜರುಗಲಿದೆ. ಇದರೊಂದಿಗೆ ಮಧ್ಯಪ್ರದೇಶ ರಾಜ್ಯ ಸರ್ಕಾರವು 2021ರ ಜನವರಿ 24 ರಿಂದ 30 ರವರೆಗೆ ರಾಜ್ಯ ಮಟ್ಟದಲ್ಲಿ Aware Girl Child, Able Madhya Pradesh ಧೈಯವಾಕ್ಯದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ಸಪ್ತಾಹವನ್ನು ಆಚರಿಸಿದೆ.
ಪಂಜಾಬ್‌ನಲ್ಲಿ ಆಚರಣೆ: ಹೆಣ್ಣುಮಗುವಿನ ದಿನದ ಅಂಗವಾಗಿ 2021ರ ಜನವರಿ ತಿಂಗಳನ್ನು ಪಂಜಾಬ್ ರಾಜ್ಯ ಸರ್ಕಾರವು ಹೆಣ್ಣುಮಗುವಿನ ಮಾಸ (Month Of Girl Child) ಎಂದು ಘೋಷಣೆ
& Dheeiyan Di Lohri ಕಾರ್ಯಕ್ರಮವನ್ನು ಜಾರಿಗೆ ತಂದಿದೆ. * ಒಡಿಶಾದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ: ಒಡಿಶಾ ರಾಜ್ಯ ಸರ್ಕಾರವು ಹೆಣ್ಣು ಮಗುವಿನ ದಿನದ ಅಂಗವಾಗಿ ಭಾರತದಲ್ಲಿ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಂಗ ಸಮನ್ವಯ ನಿಧಿ: 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಣ್ಣು ಮಗುವಿನ ಸಮಾನ ಮತ್ತು ಗುಣಮಟ್ಟ ಶಿಕ್ಷಣದ ಅಭಿವೃದ್ಧಿಗಾಗಿ ಲಿಂಗಸಮನ್ವಯ ನಿಧಿಯನ್ನು
(Gender Inclusion Fund) ರಚಿಸಲಾಗಿದೆ.