ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್‌ಗಿವನ್ ಹಡಗು

   ಮಲೇಷ್ಯಾದ ತಾಂಜುಂಗ್ ಪಿಲೆಪಸ್ (Port of Tanjung Pelepas) ಬಂದಲಿನಿಂದ ನೆದರಲ್ಯಾಂಡ್‌ನ ರೊಟೆರ್‌ಡ್ಯಾಮ್ (Port of Rotterdam) ಕಡೆಗೆ ಕಂಟೈನರ್‌ಗಳನ್ನು ಹೊತ್ತು ಸಾಗುತ್ತಿದ್ದ ಜಪಾನ್ ಮೂಲದ ಎವರ್‌ಗ್ರೀನ್ ಕಂಪನಿಯ ಸರಕು ಸಾಗಾಣೆಯ ಎವರ್‌ಗಿವೆನ್ ಎಂಬ ಹೆಸರಿನ ದೈತ್ಯ ಹಡಗು 2021ರ ಮಾರ್ಚ್ 23 ರಂದು ಸೂಯೆಜ್ ಕಾಲುವೆಯ ಕೆಸರು ಮತ್ತು ಮರಆನಲ್ಲಿ ಸಿಲುಕಿಕೊಂಡಿತ್ತು. ಈ ದೈತ್ಯ ಹಡಗು ಸೂಯೆಜ್ ಕಾಲುವೆ (Suez Canal) ಯಲ್ಲಿ ಸಿಲುಕಿದ್ದರಿಂದ ಇತರ ಹಡಗುಗಳ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಏಷ್ಯಾದ ದೇಶಗಳಿಗೆ

ಕಚ್ಚಾ ತೈಲ ಸರಬರಾಜಿಗೂ ಸಮಸ್ಯೆ ಎದುರಾಗಿತ್ತು

ಸೂಯೆಜ್ ಕಾಲುವೆಯಲ್ಲಿ ಸಿಲುಕಿರುವ ಕಂಟೈನರ್‌ಗಳನ್ನು ಒಳಗೊಂಡಿರುವ ದೈತ್ಯ ಎವರ್‌ವನ್ ಹಡಗಿನ 400 ಮೀ. ಉದ್ದದ (1,300 ಅಡಿ) ಎರಡು ಅಲಗುಗಳು ಕಾಲುವೆಯ ಎರಡೂ ಬದಿಗಳಿಗೆ ಅಡ್ಡವಾಗಿ ಸಿಕ್ಕಿಕೊಂಡಿದೆ. ಇದರ ಪರಿಣಾಮ ತೈಲ ಮತ್ತು ಇತರ ಸರಕುಗಳನ್ನು ಒಳಗೊಂಡಿರುವ ಅನೇಕ ಹಡಗುಗಳು ಸೂಯೆಜ್ ಕಾಲುವೆಯಲ್ಲಿ ಸಂಚಾರ ದಟ್ಟಣೆಯ ನಡುವೆ ಸಿಲುಕಿಕೊಂಡಿದ್ದವು. ನೂರಾರು ಹಡಗುಗಳು ಮತ್ತೊಂದು ಬದಿಯಲ್ಲಿ ಸಿಲುಕಿಕೊಂಡಿದ್ದವು.

   ‌‌‌ ಹಡಗು ಕಾಲುವೆಗೆ ಸಿಲುಕಿದ್ದು ಹೇಗೆ? ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್ ಗಿವನ್ ಹಡಗು ಸೂಯೆಜ್ ಕಾಲುವೆಯ ದಕ್ಷಿಣ ತುದಿಯಲ್ಲಿ ಕೆಟ್ಟು ನಿಂತಿತ್ತು. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ ಹಡಗಿನ ಮುಂಭಾಗವು ದಕ್ಷಿಣದ ಕಡೆಗೆ, ಹಿಂಭಾಗವು ಉತ್ತರ ಕಡೆಗೆ ತೇಲಿದೆ.  ಆದರೆ ಹಡಗಿನ ಮುಂಭಾಗ ಹಾಗೂ ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿವೆ. ಮರಳಿನಿಂದ ಅದನ್ನು ಬಿಡಿಸಲು ಕಷ್ಟವಾಯಿತು, ಕಾಲುವೆಯು ಸಂಪೂರ್ಣವಾಗಿ ಬಂದ್ ಆಗಿತ್ತು.

ಪರಿಣಾಮಗಳು: ಸೂಯೆಜ್ ಕಾಲುವೆಯು ಸಂಪೂರ್ಣವಾಗಿ ಬಂದ್


     ಆಗಿದ್ದರಿಂದ ಸಂಚಾರ ಸ್ಥಗಿತವಾಗಿತ್ತು. ಎವರ್‌ಗಿವನ್ ಹಡಗು ಸಿಲುಕಿದ್ದರೂ, ಉತ್ತರ ಕಡೆಯಿಂದ ಹಲವು ಹಡಗುಗಳು ಕಾಲುವೆ ಪ್ರವೇಶಿಸಿದ್ದವು. ಆ ಹಡಗುಗಳು ಮುಂದಕ್ಕೂ ಹೋಗಲಾರದೆ, ಹಿಂದಕ್ಕೂ ಹೋಗಲಾರದೆ ಸಿಲುಕಿಕೊಂಡಿದ್ದವು. ಕಾಲುವೆ ಬದಿಯಲ್ಲಿ 213 ಹಡಗುಗಳು ಎರಡೂ ಬದಿಯಲ್ಲೂ ನಿಂತಿದ್ದವು. ಸೂಯೆಜ್ ಕಾಲುವೆ ಬಂದ್ ಆದ ಕಾರಣ ಬೇರೆ ಹಡಗುಗಳು ಆಫ್ರಿಕಾವನ್ನು ಬಳಸಿ ಪ್ರಯಾಣ ಆರಂಭಿಸಿದವು. ಆಫ್ರಿಕಾವನ್ನು ಬಳಸಿ ಹೋಗಲು ಈ ಹಡಗುಗಳಿಗೆ 12-14 ದಿನ ಹೆಚ್ಚುವರಿ ಕಾಲಾವಕಾಶ ಬೇಕಾಯಿತು.

   ಎವರ್‌ಗಿವನ್ ಹಡಗಿನ ತೆರವಿಗೆ ಪ್ರಯತ್ನ: ಒಟ್ಟು 8 ಬೋಟ್‌ಗಳ ನೆರವಿನಿಂದ ಹಡಗನ್ನು ಸರಿದಾರಿಗೆ ನಿಲ್ಲಿಸಲು ಯತ್ನಿಸಲಾಗಿತ್ತು. ಈ ಪ್ರಕ್ರಿಯೆಗೆ ಹಲವು ದಿನಗಳು ಅಥವಾ ವಾರದ ಕಾಲಾವಕಾಶ ಬೇಕಾಯಿತು. ಹಡಗು ಸಿಲುಕಿರುವ ಸ್ಥಳದಲ್ಲಿ ಕಾಲುವೆಯ ಅಡಿಯಲ್ಲಿ ಇರುವ ಮರಳನ್ನು ಹೊರ ತೆಗೆಯಲಾಗಿದೆ. ಮರಳಿನಲ್ಲಿ ಸಿಲುಕಿರುವ ಹಡಗನ್ನು ಬಿಡಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಹಡಗನ್ನು ಕಾಲುವೆ ಮಧ್ಯಕ್ಕೆ ಎಳೆದು ತರಲು ಭಾರೀ ಸಾಮರ್ಥ್ಯದ 8 ಟಗ್ ಬೋಟ್‌ಗಳನ್ನು ಬಳಸಲಾಯಿತು. ಸುಮಾರು 20,000 ಘನ ಮೀಟರ್‌ನಷ್ಟು ಮರಳನ್ನು ಅಲ್ಲಿಂದ ಹೊರ ತೆಗೆಯಲಾಗಿದೆ. ಒಂದು ವಾರದ ಕಾರ್ಯಾಚರಣೆಯ ನಂತರ ಹಡಗನ್ನು ಸ್ಥಳದಿಂದ ತೆರವುಗೊಳಿಸಲಾಯಿತು.

ಎವರ್‌ಗಿವನ್ ಹಡಗಿನಲ್ಲಿದ್ದ ಭಾರತೀಯರು ಸುರಕ್ಷಿತ : 2021ರ ಮಾರ್ಚ್ 23 ರಂದು ಸೂಯೆಜ್ ಕಾಲುವೆಯಲ್ಲಿ ಸಿಲುಕಿಹಾಕಿಕೊಂಡಿದ್ದ ಹಡಗಿನಲ್ಲಿದ್ದ

ಕ್ಯಾಪ್ಟನ್ ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಭಾರತೀಯರೇ ಆಗಿದ್ದಾರೆ. ಈ ಅವಘಡದಲ್ಲಿ ಯಾರಿಗೂ ಅಪಾಯವಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಎವರ್ ಗಿವನ್ ಹಡಗಿನ ಸಾಮರ್ಥ್ಯ: ಈ ಹಡಗು 400 ಮೀಟರ್ ಉದ್ದವಿದ್ದು, 2 ಲಕ್ಷ ಟನ್ ತೂಕವಿದೆ ಮತ್ತು 22 ಸಾವಿರ ಕಂಟೈನರ್‌ ಒಳಗೊಂಡಿತ್ತು.

   ಸೂಯೆಜ್ ಕಾಲುವೆ (Suez Canal)


ಆಫ್ರಿಕಾವನ್ನು ಮಧ್ಯಪ್ರಾಚ್ಯ ಮತ್ತು ಏಷ್ಯಾದಿಂದ ಪ್ರತ್ಯೇಕಿಸುವ ಸೂಯೆಜ್ ಕಾಲುವೆಯು ವಿಶ್ವದಲ್ಲೇ ಅತ್ಯಂತ ಬ್ಯುಸಿಯಾಗಿರುವ ಕಾಲುವೆಗಳಲ್ಲೊಂದು. ಜಾಗತಿಕ ವಹಿವಾಟಿನ ಶೇ.12 ರಷ್ಟು ಈ ಕಾಲುವೆ ಮೂಲಕ ನಡೆಯುತ್ತದೆ. ಈ ಕಾಲುವೆಯು ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರದ ನಡುವೆ ಸಂಪರ್ಕ ಕಲ್ಪಿಸುತ್ತದೆ. ಭಾರತ ಮತ್ತು ಚೀನಾ ಮುಂತಾದ ಏಷ್ಯಾ ದೇಶಗಳಿಗೆ ಕೊಲ್ಲಿ ರಾಷ್ಟ್ರಗಳಿಂದ ತೈಲ ಸರಬರಾಜು ಈ ಕಾಲುವೆ ಮೂಲಕ ಸಾಗುತ್ತದೆ. ಈ ಕಾಲುವೆಯು 193.3 ಕಿ.ಮೀ (120.1 ಮೈಲಿ) ಉದ್ದವಿದ್ದು, 300 ಮೀಟರ್ ಅಗಲವಿದೆ. ಈ ಕಾಲುವೆಯನ್ನುಅಂತಾರಾಷ್ಟ್ರೀಯ ಜಲಸಾರಿಗೆಯ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಕಾಲುವೆಯು ಈಜಿಪ್ಟ್ ದೇಶದ ಒಡೆತನದಲ್ಲಿದ್ದು ಶೇಕಡ 25 ರಷ್ಟು ಆದಾಯ ತಂದುಕೊಡುವ ಕಾಲುವೆ ಆಗಿದೆ

  

ಪನಾಮ ಕಾಲುವೆ

   ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳ ಮಧ್ಯೆ ಫೆಸಿಫಿಕ್ ಸಾಗರ ಮತ್ತು ಅಟ್ಲಾಂಟಿಕ್ ಸಾಗರಗಳನ್ನು ಜೋಡಿಸಲು 1914 ರಲ್ಲಿ ಈ ಕಾಲುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 82 ಕಿ.ಮೀ. ಉದ್ದವಿರುವ ಈ ಕಾಲುವೆಯ ಒಡೆತನವು ಪನಾಮಾ ದೇಶದ ನಿಯಂತ್ರಣದಲ್ಲಿದೆ. ಈ ಕಾಲುವೆ ನಿರ್ಮಿಸುವ ಮೂಲಕ ಫೆಸಿಫಿಕ್ ಸಾಗರದಿಂದ ಹಡಗುಗಳು ಕೇಪ್ ಹಾರ್ನ್ ಮತ್ತು ಮೆಗಲನ್ ಜಲಸಂಧಿ ಮೂಲಕ ಅಟ್ಲಾಂಟಿಕ್ ಸಾಗರವನ್ನು ಸೇರುವ ದೀರ್ಘಮಾರ್ಗಕ್ಕೆ ಕಡಿವಾಣ ಹಾಕುವ ಮೂಲಕ ಅಧಿಕ ವೆಚ್ಚ ಮತ್ತು ಸಮಯವನ್ನು ಉಳಿಸಿದಂತಾಯಿತು.

      1789ರ ಫ್ರಾನ್ಸ್ ಮಹಾಕ್ರಾಂತಿಯ ನಂತರ ಫ್ರಾನ್ಸ್‌ನಲ್ಲಿ ಆಡಳಿತಕ್ಕೆ ಬಂದ ಫ್ರಾನ್ಸ್ ಕ್ರಾಂತಿಯ ಶಿಶು ಖ್ಯಾತಿಯ ನೆಪೋಲಿಯನ್ ಬೋನಾಪಾರ್ಟೆಯು ಸೂಯೆಜ್ ಕಾಲುವೆಯ ನಿರ್ಮಾಣದ ಕನಸನ್ನು ಮೊದಲು ಹೊಂದಿದ ವ್ಯಕ್ತಿ. 1799 ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದನು. ಆದರೆ ಅತಿಯಾದ ವೆಚ್ಚದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು. 1859ರ ಸೆಪ್ಟೆಂಬರ್ 25 ರಿಂದ

ಸೂಯೆಜ್ ಕಾಲುವೆ ನಿರ್ಮಾಣ ಆರಂಭವಾಗಿದ್ದು, 1869ರ ನವೆಂಬರ್ 17 ರಂದು ಕಾಲುವೆ ನಿರ್ಮಾಣ ಪೂರ್ಣಗೊಂಡಿತು.

Post a Comment (0)
Previous Post Next Post