ಮೂಲತ: ಕುಶಾನರು 'ಯೂ-ಚೀ' ಎಂಬ ಹೆಸರಿನ ಅಲೆಮಾರಿ ಜನಾಂಗಕ್ಕೆ ಸೇರಿದವರು ಮತ್ತು ಅವರು ಚೀನಾದಲ್ಲಿ ವಾಸವಾಗಿದ್ದರು. ಹೂಣರಂತಹ ಪ್ರಬಲ ಬುಡಕಟ್ಟುಗಳು ಈ ಜನಾಂಗವನ್ನು ಅವರ ತಾಯ್ಯಾಡಿನಿಂದ ಹೊರದಬ್ಬಿದವು. ಕುಶಾನರು ಬ್ಯಾಕ್ಷೀಯಾವನ್ನು ಆಕ್ರಮಿಸಿದರು ಮತ್ತು ಕಾಬೂಲ್ ಕಣಿವೆಗೆ ಸಾಗಿದರು ಮತ್ತು ಗಾಂಧಾರವನ್ನು ವಶಪಡಿಸಿಕೊಂಡರು. ಸಾಶ 10ರ ಹೊತ್ತಿಗೆ ಅವರು ಶಕ, ಗ್ರೀಕ್ ಮತ್ತು ಇತರರನ್ನು ಸ್ಥಳಾಂತರಿಸಿ ಸಿಂಧೂ ಮತ್ತು ಗಂಗಾನದಿ ಬಯಲು ಪ್ರದೇಶದ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿದರು. ಕುಶಾನರ ಅವಧಿ ಕೇವಲ ರಾಜಕೀಯ ಐಕ್ಯತೆಯ ಶಕೆಯಾಗಿರದೇ, ಭಾರತದ ಸಾಂಸ್ಕೃತಿಕ ಬೆಳವಣಿಗೆಯ ಇತಿಹಾಸದಲ್ಲಿ ಒಂದು ಹೊಸ ಯುಗಕ್ಕೆ ನಾಂದಿ ಹಾಡಿತು.
ರಾಜಕೀಯ ಇತಿಹಾಸ:
ಕುಶಾನರ ಮೊದಲ ದೊರೆ ಕುಜುಲ ಕ್ಯಾಡ್‌ಫೈಸೆಸ್ ಅಥವಾ ಮೊದಲನೇ ಕಾಡ್‌ಫೈಸೆಸ್, ಎರಡನೇ ಕ್ಯಾಡ್‌ಫೈಸೆಸ್ ಅಥವಾ ವೆಮಾಕ್ಯಾಡ್‌ಫೈಸೆಸ್ ಇವನ ಉತ್ತರಾಧಿಕಾರಿ, ಕಾನಿಷ್ಕ ಕುಶಾನ ವಂಶದ 3ನೇ
ಕಾನಿಷ್ಕನು ಕುಶಾನರ ಅತ್ಯಂತ ಶ್ರೇಷ್ಠ ದೊರೆ. ಆತನ ಪ್ರಾರಂಭಿಕ ಜೀವನದ ಬಗೆಗೆ ನಮಗೆ ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ. ಹಾಗೆಯೇ ಕಾನಿಷ್ಯನ ಸಿಂಹಾಸನಾರೋಹಣದ ದಿನಾಂಕದ ಬಗೆಗೆ ಭಿನ್ನಾಭಿಪ್ರಾಯಗಳಿವೆ. ಡಾ| ವಿ.ಎ. ಸ್ಮಿತ್‌ರವರು~ ಕಾನಿಷ್ಕನು ಸಾಶ 120ರಲ್ಲಿ ಸಿಂಹಾಸನಕ್ಕೆ ಬಂದನೆಂದು ಅಭಿಪ್ರಾಯಪಡುತ್ತಾರೆ. ಇನ್ನೊಂದು ವಿದ್ವಾಂಸರ ಪರಂಪರೆ (ಲ್ಯಾಪ್ಸನ್ ಮತ್ತು ಥಾಮಸ್) ಕಾನಿಷ್ಕನನ್ನು
'ಶಕಯುಗ'ದ ಸ್ಥಾಪಕನೆಂದು ಬಿಂಬಿಸುತ್ತದೆ ಮತ್ತು ಆತನ ಸಿಂಹಾಸನಾರೋಹಣವನ್ನು ಸಾಶ 78 ಎಂದು ತಿಳಿಸುತ್ತದೆ. ಪುರುಷಪುರ ಅವನ ರಾಜಧಾನಿಯಾಗಿತ್ತು(ಪಾಕಿಸ್ತಾನದ ಇಂದಿನ ಪೆಷಾವರ್)
ದಿಗ್ವಿಜಯಗಳು;
ಕಾನಿಷ್ಕನು ಒಬ್ಬ ಮಹಾನ್ ಯೋಧನಾಗಿದ್ದು ಅಧಿಕಾರಕ್ಕೆ ಬಂದ ನಂತರ ತನ್ನ ಸಾಮ್ರಾಜ್ಯದ ಎಲ್ಲೆಗಳನ್ನು ಎಲ್ಲಾ ದಿಕ್ಕುಗಳಲ್ಲಿ ತ್ವರಿತವಾಗಿ ವಿಸ್ತರಿಸಿದನು. ಆತನ ಸಾಮ್ರಾಜ್ಯವು ಬ್ಯಾಕ್ಷೀಯ, ಪರ್ಷಿಯ, ಆಫ್ಘಾನಿಸ್ಥಾನ, ಪಂಜಾಬ್ ಮತ್ತು ಸಿಂಧನ ವಿಸ್ತಾರವಾದ ಪ್ರದೇಶವನ್ನು ಹೊಂದಿತ್ತು. ಕಾನಿಷ್ಠ ದಿಗ್ವಿಜಯಗಳ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು.
ಕಾಶ್ಮೀರ: ಕಾನಿಷ್ಕನು ಕಾಶ್ಮೀರವನ್ನು ಗೆದ್ದುಕೊಂಡನು. ಅಲ್ಲಿ ಅನೇಕ ಸ್ಮಾರಕಗಳನ್ನು ಕಟ್ಟಿಸಿದನು. 'ಕಾನಿಪುರ' ಎಂಬ ಪಟ್ಟಣಕ್ಕೆ ಅಡಿಪಾಯ ಹಾಕಿದನು. ಇದು ಕಾನಿಷ್ಕಪುರ' ಎಂದೂ ಹೆಸರಾಗಿತ್ತು. ಇಂದು ಇದು ಶ್ರೀನಗರ ಎಂದು ಹೆಸರಾಗಿದೆ.
ಮಗಧ: ಕಾನಿಷ್ಟನು ಮಗಧದ ಮೇಲೆ ದಾಳಿ ಮಾಡಿ ಅದನ್ನು ಆಕ್ರಮಿಸಿಕೊಂಡನೆಂದು ಹೇಳಲಾಗಿದೆ. ಆದರೆ, ಕೆಲವು ವಿದ್ವಾಂಸರು ಮಗಧದ ಕೆಲವು ಭಾಗಗಳನ್ನು ಮಾತ್ರ ಆಕ್ರಮಿಸಿದನೆಂದು ಅಭಿಪ್ರಾಯಪಡುತ್ತಾರೆ.
ಶಕ-ಸತ್ತವರೊಡನೆ ಯುದ್ಧ: ಉತ್ತರಭಾರತದಲ್ಲಿ ಇನ್ನೂ ಶಕ ಸತ್ರಪರು ಪ್ರಬಲರಾಗಿದ್ದರು. ಕಾನಿಷ್ಕನು ಪಂಜಾಬ್ ಮತ್ತು ಮಥುರಾಗಳ ತನ್ನ ಪ್ರಭುತ್ವ ಸ್ಥಾಪಿಸಿದನು. ಶಕ ಸತ್ರಪರ ಮೇಲೆ ಸರಣಿ ಯುದ್ಧಗಳನ್ನು ಮಾಡಿದನು ಮತ್ತು ಅಂತಿಮವಾಗಿ
ಚೀನಾದ ಮೇಲೆ ಯುದ್ಧ: ಉತ್ತರಭಾರತದ ದಂಡಯಾತ್ರೆಯ ನಂತರ ಕಾನಿಷ್ಠ ತನ್ನ ಗಮನವನ್ನು ಚೀನಾದತ್ತ ಹರಿಸಿದನು. ಎರಡನೇ ಕ್ಯಾಡ್‌ಫೈಸೆಸ್‌ನು ಚೀನಾದ ಸೇನಾನಿ ಪಾನ್-ಚೌ ನಿಂದ ತೀವ್ರ ಸೋಲು ಅನುಭವಿಸಿದ್ದನು. ಮತ್ತು ಇದರ ಪರಿಣಾಮವಾಗಿ ಕುಶಾನರು ಚೀನಾದ ಅರಸನಿಗೆ ವಾರ್ಷಿಕ ಕಪ್ಪಕಾಣಿಕೆ ನೀಡಬೇಕಾಗಿತ್ತು. ಕಾನಿಷ್ಕ ಕಪ್ಪಕಾಣಿಕೆಯನ್ನು ನಿಲ್ಲಿಸಿ ಚೀನಾದ ಮೇಲೆ ದಾಳಿ ಮಾಡಿದನು. ಆದರೆ, ಚೀನಾದ ಸೇನಾನಿ ಪಾನ್-ಚೌ ರನನ್ನು ಸೋಲಿಸಿದನು. ಇದು ಕಾನಿಷ್ಠನ ರಾಜಕೀಯ ಮಹಾತ್ವಾಕಾಂಕ್ಷೆಗಳಿಗೆ ಕೆಲಕಾಲ ಹಿನ್ನಡೆಯನ್ನುಂಟುಮಾಡಿತು. ಆದಾಗ್ಯೂ ಸಿದ್ಧತೆ ಮಾಡಿಕೊಂಡ ನಂತರ ಕಾನಿಷ್ಕನು ಇನ್ನೊಂದು ಬಾರಿ ಚೀನಾದ ಮೇಲೆ ದಾಳಿ ಮಾಡಿದನು. ಈ ಮೊದಲೇ ಚೀನಾದ ಶ್ರೇಷ್ಠ ಸೇನಾನಿ ಪಾನ್-ಚೌ ಮರಣ ಹೊಂದಿದ್ದನು ಮತ್ತು ಆತನ ಮಗ ಪಾನ್ ಚಿಯಾಂಗ್ ಸೇನಾನಿಯಾಗಿದ್ದನು. ಕಾನಿಷ್ಕನು ಚೀನಾದ ಪಡೆಗಳ ಮೇಲೆ ವಿಜಯ ದಾಖಲಿಸಿ, ಚೀನಾದ ಮೂರು ಪ್ರಾಂತ್ಯಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.
ಈ ಮೂರು ಪ್ರಾಂತ್ಯಗಳೆಂದರೆ- ಕಾಷ್‌ಗರ್, ಯಾರ್ ಖಂಡ್ ಮತ್ತು ಕೋಥಾನ್, ಕಾನಿಷ್ಠ ಭಾರತೀಯ ಉಪಖಂಡದ ಹೊರಗೆ ಭೂಪ್ರದೇಶಗಳನ್ನು ಹೊಂದಿದ ಮೊದಲ ಭಾರತೀಯ ಅರಸನಾಗಿದ್ದಾನೆ.
ಕಾನಿಷ್ಠನ ಸಾಮ್ರಾಜ್ಯದ ಎಲ್ಲೆಗಳು ಉತ್ತರದಲ್ಲಿ ಕಾವ್ಯಗರ್‌ವರೆಗೆ ಹಬ್ಬಿದ್ದರೆ, ದಕ್ಷಿಣದಲ್ಲಿ ಸಿಂಥ್, ಪೂರ್ವದಲ್ಲಿ ಬನಾರಸ್ ಹಾಗೂ ಪಶ್ಚಿಮದಲ್ಲಿ ಆಫ್ಘಾನಿಸ್ಥಾನದವರಗೆ ಹಬ್ಬಿತ್ತು.
ಧರ್ಮ: ಯೂ-ಚೀ ಪಂಗಡಕ್ಕೆ ಸೇರಿದವರಾಗಿದ್ದ ಕುಶಾನರು, ಬುಡಕಟ್ಟು ಧರ್ಮದ ಸಂಪ್ರದಾಯ ಗಳನ್ನು ಅನುಸರಿಸುತ್ತಿದ್ದರು. ಭಾರತದಲ್ಲಿ ನೆಲೆಸಿದ ನಂತರ ಅವರು ಭಾರತೀಯ ಸಂಸ್ಕೃತಿ ಮತ್ತು ಹಿಂದೂಧರ್ಮವನ್ನು ಅನುಸರಿಸಿದರು. ಅವರು ಆರಂಭದಲ್ಲಿ ಸೂರ್ಯದೇವನ ಜೊತೆಗೆ ಇತರ ದೇವರುಗಳನ್ನು ಆರಾಧಿಸುತ್ತಿದ್ದರು. ಕುಜುಲ ಮತ್ತು ವೆಮಾಕ್ಕಾಡ್ ಪೀಸಸ್‌ರವರು ಹಿಂದೂಧರ್ಮದ ಅನುಯಾಯಿಗಳಾಗಿದ್ದರು.
ಕಾನಿಷ್ಠನು ಕೂಡಾ ಹಿಂದೂಧರ್ಮದ ಅನುಯಾಯಿಯಗಿದ್ದನು. ಆತನ ಆರಂಭಿಕ ನಾಣ್ಯಗಳು ಪರ್ಷಿಯನ್,
ಗ್ರೀಕ್ ಮತ್ತು ಹಿಂದೂ ದೇವತೆಗಳ ಚಿತ್ರಗಳನ್ನು ಹೊಂದಿವೆ. ಕಾಲಾನಂತರದಲ್ಲಿ ಅವನು ಅಶ್ವಘೋಷನ
ಪ್ರಭಾವದಿಂದ ಬೌದ್ಧಧರ್ಮವನ್ನು ಸ್ವೀಕರಿಸಿದನು. ನಂತರ ಅವನು ಅಶೋಕನ ರೀತಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡನು ಮತ್ತು ಆತನ ಪ್ರಯತ್ನದಿಂದ ಬೌದ್ಧಧರ್ಮ ಚೀನಾ, ಟಿಬೆಟ್, ಜಪಾನ್ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಹರಡಿತು. ಬೌದ್ಧಧರ್ಮದ ಪ್ರಚಾರಕ್ಕಾಗಿ ಕಾನಿಷ್ಕನು ತೆಗೆದುಕೊಂಡ ಕ್ರಮಗಳೆಂದರೆ:
1. ಬೌದ್ಧಧರ್ಮಕ್ಕೆ ರಾಜಾಶ್ರಯವನ್ನು ನೀಡಲಾಯಿತು ಮತ್ತು ಇದನ್ನು ಬೌದ್ಧಭಿಕ್ಷುಗಳಿಗೆ ವಿಸ್ತರಿಸಲಾಯಿತು.
2. ವಿಹಾರಗಳು ಮತ್ತು ಮಠಗಳನ್ನು ಭಿಕ್ಷುಗಳ ಉಪಯೋಗಕ್ಕಾಗಿ ಕಟ್ಟಲಾಯಿತು. 3. ಬೌದ್ಧಧರ್ಮದ ಪ್ರಸಾರಕ್ಕಾಗಿ ಅನೇಕ ನಿಯೋಗಗಳನ್ನು ಜಪಾನ್, ಟಿಬೆಟ್ ಮತ್ತು ಮಧ್ಯಏಷ್ಯಾದರಾಷ್ಟ್ರಗಳಿಗೆ ಕಳುಹಿಸಲಾಯಿತು.
4. ಸಾ.ಶ. 102ರಲ್ಲಿ ಇವನು ಕಾಶ್ಮೀರದ ಕುಂಡಲವನದಲ್ಲಿ 4ನೇ ಬೌದಮಹಾಸಮ್ಮೇಳನ ವನ್ನು ಏರ್ಪಡಿಸಿದನು. ಇದರ ಅಧ್ಯಕ್ಷತೆಯನ್ನು ವಸುಮಿತ್ತನು ವಹಿಸಿದ್ದರು. ಅಂದು ಬೌದ್ಧಧರ್ಮದಲ್ಲಿ ತಲೆದೋರಿದ ವಿವಾದಗಳನ್ನು ಪರಿಹರಿಸುವುದೇ ಇದರ ಪ್ರಮುಖ ಉದ್ದೇಶವಾಗಿತ್ತು. ಪವಿತ್ರ ಗ್ರಂಥಗಳಾದ ಪಿಟಕಗಳ ಮೇಲೆ ವಿಮರ್ಶೆಯನ್ನು ಸಿದ್ಧಪಡಿಸಲಾಯಿತು. ನಂತರ ಇವುಗಳನ್ನು ಮಹಾವಿಭಾಷ' ಎಂದು ಕರೆಯಲ್ಪಡುವ ಪುಸ್ತಕರೂಪಕ್ಕೆ ತರಲಾಯಿತು. ಇದು ಬೌದ್ಧತತ್ವಶಾಸ್ತ್ರದ ಪ್ರಮಾಣಬದ್ಧ ಗ್ರಂಥಗಳಲ್ಲಿ ಒಂದಾಗಿದೆ.
ಗಾಂಧಾರ ಕಲೆ,
ಕಾನಿಷ್ಕನು ಮಹಾನ್ ಕಲಾಪೋಷಕನಾಗಿದ್ದನು. ಆತನ ಪ್ರಮುಖ ಕಟ್ಟಡಗಳು ಮತ್ತು ನಿರ್ಮಾಣಗಳು ಹೆಚ್ಚಾಗಿ ಗಾಂಧಾರ, ಮಥುರಾ, ಕಾನಿಷ್ಕಪುರ ಮತ್ತು ತಕ್ಷಶಿಲಗಳಲ್ಲಿ ಕಂಡುಬಂದಿವೆ. ಕುಶಾನರ ಅವಧಿಯು ಗಾಂಧಾರ ಕಲೆಯ ಅಥವಾ ಗ್ರೀಕೋ-ಬೌದ್ಧಶೈಲಿಯ ಬೆಳವಣಿಗೆಗೆ ಪ್ರಾಮುಖ್ಯತೆ ಪಡೆದಿದೆ. ಭಾರತೀಯ ಮತ್ತು ಗ್ರೀಕ್ ಸಂಸ್ಕೃತಿಗಳ ಮಧ್ಯೆ ಮುಕ್ತ ಸಂಪರ್ಕದಿಂದಾಗಿ 'ಗಾಂಧಾರ ಕಲಾ ಪರಂಪರೆ' (Gandhara School of Art) ಎಂಬ ಹೊಸ ಕಲಾ ಪರಂಪರೆಯು ಉಗಮಿಸಿತು. ಇದು ಭಾರತ ಮತ್ತು ಗ್ರೀಕ್ ಕಲಾಶೈಲಿಗಳ ಸಮಿಶ್ರಣವನ್ನು ಪ್ರತಿನಿಧಿಸುತ್ತದೆ. ಈ ಕಲಾಶೈಲಿಯು ಗಾಂಧಾರ ಪ್ರದೇಶದಲ್ಲಿ ಉಗಮಿಸಿದ್ದರಿಂದ ಇದನ್ನು 'ಗಾಂಧಾರ ಕಲೆ' ಎಂದು ಕರೆಯಲಾಗಿದೆ. ಈ ಪ್ರದೇಶವು ಪ್ರಸ್ತುತ ಆಫ್ಘಾನಿಸ್ಥಾನದಲ್ಲಿದೆ.
ಗಾಂಧಾರ ಕಲಾಶೈಯ ಪ್ರಮುಖ ಲಕ್ಷಣಗಳು:
1. ಈ ಕಲಾಶೈಲಿಯಲ್ಲಿ ಆಳೆತ್ತರದ ಗೌತಮ ಬುದ್ಧನ ವಿಗ್ರಹಗಳನ್ನು ಕೆತ್ತಲಾಗಿದೆ. ಅಲ್ಲಿಯವರೆಗೆ ಬುದ್ಧನ ಅಸ್ತಿತ್ವವನ್ನು ಕಮಲ, ಛತ್ರಿ ಮುಂತಾದ ಚಿಹ್ನೆಗಳ ರೂಪದಲ್ಲಿ ತೋರಿಸಲಾಗುತ್ತಿತ್ತು.
2. ವಿಗ್ರಹಗಳನ್ನು ಕೆತ್ತುವಾಗ ದೇಹ ವಿನ್ಯಾಸದ ಅನುಪಾತದೊಂದಿಗೆ ಸ್ನಾಯುಗಳು, ಮೀಸೆ ಮುಂತಾದವುಗಳಿಗೆ ಹೆಚ್ಚಿನ ಗಮನ ಹರಿಸಿ ಸ್ವಾಭಾವಿಕ ಜೋಡಣೆಯೊಂದಿಗೆ ಮೂಡಿಸಲಾಗಿದೆ.
3, ಕಲಾಕೌಶಲ್ಯದಿಂದ ಕೂಡಿದ ಈ ಕಲೆಯ ನಮೂನೆಗಳಲ್ಲಿ ಬಟ್ಟೆಯ ಮಡಿಕೆಗಳು ಮತ್ತು ನೆರಿಗೆಗಳನ್ನು ತುಂಬಾ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.
4. ವಿಗ್ರಹಗಳ ಮೇಲಿರುವ ಆಭರಣಗಳ ಮೇಲಿನ ಕೆತ್ತನೆಗೆ ಹೆಚ್ಚಿನ ಆಸಕ್ತಿ ತೋರಿಸಲಾಗಿದ್ದು, ಅವುಗಳ ಭೌತಿಕ ಸೌಂದರ್ಯವನ್ನು ವೃದ್ಧಿಸಿದೆ.
5. ವಿಗ್ರಹಗಳಿಗೆ ಮೆರುಗು ನೀಡುವುದು (Polish) ಈ ಕಲೆಯ ಪ್ರಮುಖ ಲಕ್ಷಣವಾಗಿದೆ.
6. ಬಹುತೇಕ ಈ ನಮೂನೆಗಳನ್ನು ಕಲ್ಲು, ಅರಲುಗಚ್ಚು (Terracotta) ಮತ್ತು ಜೇಡಿಮಣ್ಣಿನಿಂದ ತಯಾರಿಸಲಾಗಿದೆ.
7. ಈ ವಿಗ್ರಹಗಳಲ್ಲಿ ಬಳಸಲಾಗಿರುವ ತಾಂತ್ರಿಕತೆ ಗ್ರೀಕ್ ಶೈಲಿಯದ್ದಾದರೆ, ಆದರ ಆದರ್ಶ, ಸ್ಫೂರ್ತಿ ಮತ್ತು ವ್ಯಕ್ತಿತ್ವ ಎಲ್ಲವೂ ಭಾರತೀಯವಾದುದಾಗಿದೆ.
ಡಾ. ಆರ್.ಸಿ. ಮಜುಮ್‌ದಾರ್ ಹೇಳುವಂತೆ – “ಗಾಂಧಾರ ಕಲಾಕಾರನು ಗೀಕ್ ಕರಕುಶಲತೆ ಹಾಗೂ ಭಾರತೀಯ ಹೃದಯವನ್ನು ಹೊಂದಿದ್ದನು”, ಈ ಕಾರಣದಿಂದ ಈ ಕಲೆಯಲ್ಲಿ ನಿರ್ಮಿತವಾದ ವಿಗ್ರಹಗಳು ಮತ್ತು ಪ್ರತಿಮೆಗಳಲ್ಲಿ ಬುದ್ಧನನ್ನು ಗ್ರೀಕ್ ದೇವತೆ ಆಬೊಲೊನನ್ನು ಹೋಲುವಂತೆ ಕೆತ್ತುವ ಪ್ರಯತ್ನ ಮಾಡಲಾಗಿದೆ.
Hanamanta p k
ReplyDeleteUnderstand
ReplyDelete