ಬಹಮನಿ ಸುಲ್ತಾನರು
ಬಹಮನಿ ಸುಲ್ತಾನರು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳ ಮೇಲೆ ಆಳ್ವಿಕೆ ಮಾಡಿದರು. ಈ ವಂಶವು ಸಾ.ಶ. 1347 ರಲ್ಲಿ ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನ್‌ಷಾನಿಂದ ಸ್ಥಾಪಿಸಲ್ಪಟ್ಟಿತು. ಇವನು ಮಹಮದ್ ಬಿನ್‌ತೊಘಲಕ್‌ನ ವಿರುದ್ಧ ದಂಗೆ ಎದ್ದು ಸ್ವಾತಂತ್ರ್ಯವನ್ನು ಘೋಷಿಸಿಕೊಂಡನು. ಗುಲ್ಬರ್ಗಾ ಅವರ ಮೊದಲ ರಾಜಧಾನಿಯಾಗಿತ್ತು. ನಂತರ ರಾಜಧಾನಿಯನ್ನು ಬೀದರ್‌ಗೆ ವರ್ಗಾಯಿಸಿದರು.
ಈ ವಂಶದ ಸುಲ್ತಾನರು ನಿರಂತರವಾಗಿ ವಿಜಯನಗರ ಸಾಮ್ರಾಜ್ಯದ ವಿರುದ್ಧ ಹೋರಾಡಿದರು.
ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನ್ ಷಾ, ಫಿರೋಜ್ ಷಾ ಅಹಮದ್ ಷಾ ಮತ್ತು 3ನೇ ಮಹಮದ್ ಷಾ
ಮಹಮದ್ ಗವಾನ್ (ಸಾ.ಶ.1463-1481): ಮಹಮದ್ ಗವಾನ್ ಒಬ್ಬ ಮುಖ್ಯಮಂತ್ರಿ ಮತ್ತು ಸಮರ್ಥ ಆಡಳಿತಗಾರನಾಗಿದ್ದನು. ಪರ್ಷಿಯಾ ದೇಶದ ಗವಾನ್ ಎಂಬಲ್ಲಿ ಜನಿಸಿದ ಇವನು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದನು. ಮೂರನೇ ಮಹಮ್ಮದ್ ಷಾನ ಮುಖ್ಯಮಂತ್ರಿಯಾಗಿ ನೇಮಕವಾದನು.
1. ವಿಜಯನಗರ ಸಾಮಾಜ್ಯದಿಂದ ಹುಬ್ಬಳ್ಳಿ, ಬೆಳಗಾವಿ ಮತ್ತು ಗೋವಾ ಪ್ರದೇಶಗಳನ್ನು ವಶಪಡಿಸಿಕೊಂಡನು. 2. ಮಾಳ್ವದ ಸುಲ್ತಾನನೊಂದಿಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದನು
3. ಒರಿಸ್ಸಾದ ರಾಜಮಹೇಂದ್ರಿ ಹಾಗೂ ಕೊಂಡವೀಡು ಪ್ರದೇಶಗಳನ್ನು ಗೆದ್ದನು.
4. ಆಡಳಿತದ ಅನುಕೂಲಕ್ಕಾಗಿ ರಾಜ್ಯದ ನಾಲ್ಕು ಪ್ರಾಂತ್ಯಗಳನ್ನು ಎಂಟಕ್ಕೆ ಹೆಚ್ಚಿಸಲಾಯಿತು. ಅವುಗಳನ್ನು ತರಘಗಳೆಂದು ಕರೆಯಲಾಗಿತ್ತು.
5. ಭೂಮಿಯನ್ನು ಮಾಪನ ಮಾಡಿ ಕಂದಾಯವನ್ನು ನಿಗದಿಪಡಿಸಲಾಯಿತು. ಕಂದಾಯವನ್ನು ನಗದುರೂಪದಲ್ಲಿ ಮಾತ್ರ ಸಂಗ್ರಹಿಸಲಾಗುತ್ತಿತ್ತು.
6. ಇವನು ಬೀದರ್‌ನಲ್ಲಿ ಮದರಸ ಕಾಲೇಜು ನಿರ್ಮಿಸಿದನು. ಅಲ್ಲಿ ಒಂದು ಗ್ರಂಥಾಲಯವನ್ನು ನಿರ್ಮಿಸಿ ಜಗತ್ತಿನೆಲ್ಲೆಡೆಯಿಂದ ಸುಮಾರು 3000 ಹಸ್ತ ಪ್ರತಿಗಳನ್ನು ಸಂಗ್ರಹಿಸಿದನು. ಗವಾನ್‌ನ ಪ್ರಗತಿಯನ್ನು ಸಹಿಸದ ಸ್ಥಳೀಯ ಮುಸಲ್ಮಾನ ನಾಯಕರು ಅವನ ವಿರುದ್ಧ ಮಿಥ್ಯಾರೋಪಮಾಡಿದರು. ಸಾ.ಶ.1481 ರಲ್ಲಿ ಅವನ ಶಿರಚ್ಛೇಧನ ಮಾಡಲಾಯಿತು. ಅವನ ಮರಣದೊಂದಿಗೆ ಬಹಮನಿ
ರಾಜ್ಯವು ಪತನವಾಗಲಾರಂಭಿಸಿತು. ಆಗ ದಖನ್‌ನ ಐದು ಷಾಹಿ ಸುಲ್ತಾನರು ಸ್ವತಂತ್ರ್ಯವನ್ನು ಘೋಷಿಸಿಕೊಂಡರು. ಅವರುಗಳೆಂದರೆ ಬಿಜಾಪುರದ ಆದಿಲ್ ಷಾಹಿಗಳು, ಅಹಮದ್ ನಗರದ ನಿಜಾಂ ಷಾಹಿಗಳು, ಬೀದರ್‌ನ ಬರೀದ್ ಷಾಹಿಗಳು, ಬೇರಾರ್‌ನ ಇಮಾದ್ ಷಾಹಿಗಳು ಹಾಗೂ ಗೋಳ್ಕೊಂಡದ ಕುತುಬ್ ಷಾಹಿಗಳು,
ಸಾಂಪ್ರದಿಕ ಕೊಡುಗೆಗಳು:
ಕುರಾನ್ ಪಠಣವು ಶಿಕ್ಷಣದ ಒಂದು ಭಾಗವಾಗಿತ್ತು. ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಬಾಲಕಿಯರಿಗಾಗಿಯೇ ಪ್ರತ್ಯೇಕ ಶಾಲೆಗಳಿದ್ದವು. ಮಹಮದ್ ಗವಾನ್‌ನು ಒಬ್ಬ ಶ್ರೇಷ್ಠ ವಿದ್ಯಾಪೋಷಕನಾಗಿದ್ದನು. ಅವನು ತನ್ನ ಸ್ವಂತ ಗಳಿಕೆಯನ್ನು ಶಿಕ್ಷಣದ ಪ್ರಸಾರಕ್ಕಾಗಿ ವೆಚ್ಚ ಮಾಡಿದನು. ಇವನು ಸಾ.ಶ. 1472 ರಲ್ಲಿ ಬೀದರ್‌ನಲ್ಲಿ ಮದರಸವನ್ನು ನಿರ್ಮಿಸಿದನು. ಈ ಕಟ್ಟಡವು ಮೂರು ಅಂತಸ್ತಿನಿಂದ ಕೂಡಿತ್ತು. ಮದರಸದಲ್ಲಿ ಒಟ್ಟು 36 ಕೊಠಡಿಗಳಿದ್ದವಲ್ಲದೇ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಹಾ ವಸತಿಯನ್ನು ಹೊಂದಿದ್ದರು. ತತ್ವಶಾಸ್ತ್ರ, ಧರ್ಮಶಾಸ್ತ್ರ ಹಾಗೂ ವಿಜ್ಞಾನಗಳನ್ನು ಕಲಿಸಲಾಗುತ್ತಿತ್ತು. ಪರ್ಷಿಯನ್, ಆರೇಬಿಕ್ ಮತ್ತು ಉರ್ದು ಭಾಷೆಗಳು ಶಿಕ್ಷಣದ ಮಾಧ್ಯಮವಾಗಿದ್ದವು.
ಸಾಹಿತ್ಯ: ಈ ಕಾಲದಲ್ಲಿ ಪರ್ಷಿಯನ್, ಆರೇಬಿಕ್ ಹಾಗೂ ಉರ್ದು ಸಾಹಿತ್ಯ ಬೆಳವಣಿಗೆಯಾಯಿತು. ಸುಲ್ತಾನ್ ಫಿರೋಜ್‌ಷಾನು ತತ್ವಶಾಸ್ತ್ರದಲ್ಲಿ ಪಾಂಡಿತ್ಯವನ್ನು ಹೊಂದಿದ್ದನು. ಅವನು ಪ್ರಕೃತಿ ವಿಜ್ಞಾನ, ರೇಖಾ ಗಣಿತ ಮತ್ತು ಕುರಾನ್ ವಿಷಯಗಳಲ್ಲಿ ಪ್ರವೀಣನಾಗಿದ್ದನು. ಅವನು ವಿದ್ವಾಂಸರಿಗೆ ಪ್ರೋತ್ಸಾಹ ಕೊಟ್ಟನು. ಮಹಮದ್ ಗವಾನ್, ಪರ್ಷಿಯನ್ ಭಾಷೆಯಲ್ಲಿ ಕವಿತೆಗಳನ್ನು ರಚನೆ ಮಾಡಿದನು. ಅವನು 'ರಿಯಾಜ್ ಉಲ್-ಇಸ್ಲಾ' ಹಾಗೂ 'ಮಂಜಿರ್-ಉಲ್-ಇನ್ನಾ' ಕೃತಿಗಳನ್ನು ರಚಿಸಿದನು. ಇವು ರಾಜನೀತಿಶಾಸ್ತ್ರ, ಕಾವ್ಯ ಹಾಗೂ ಇತರ ವಿಷಯಗಳನ್ನು ತಿಳಿಸುತ್ತವೆ. ಕುರಾನ್‌ನ ಉಕ್ತಿಗಳನ್ನು ಬರೆಯಲು ಕಲಾಲಿಪಿ (ಕ್ಯಾಲಿಗ್ರಫಿ) ಬಳಸಲಾಗುತ್ತಿತ್ತು. ಮಹಮದ್ ಗವಾನನು ಕಲಾ ಲಿಪಿಕಾರನಾಗಿದ್ದನು.
'ದಖನೀ' ಉರ್ದು ಎಂಬ ಹೊಸ ಉಪಭಾಷೆ ಬಳಕೆ ಜನಪ್ರಿಯವಾಯಿತು. ಹಜರತ್ ಸ್ವಾಜಾ ಬಂದೇ ನವಾಜ್ ಗೇಸು ದರಾಜ್ ಎಂಬ ಗುಲ್ಬರ್ಗಾದ ಸೂಫಿಸಂತನು ಈ ಹೊಸ ಭಾಷೆಯಲ್ಲಿ ಬರೆದಿದ್ದಾನೆ. ಈ ಸಂತನ ದರ್ಗಾವನ್ನು ಗುಲ್ಬರ್ಗಾದಲ್ಲಿ ಕಾಣಬಹುದು.
ವಾಸ್ತುಶಿಲ್ಪ: ಈ ಕಾಲದಲ್ಲಿ ಇಂಡೋ-ಇಸ್ಲಾಮಿಕ್ ಶೈಲಿಯು ಅಸ್ತಿತ್ವದಲ್ಲಿತ್ತು. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಸಾಮಗ್ರಿಗಳನ್ನು ಉಪಯೋಗಿಸಿದರು. ಈ ಶೈಲಿಯ ಪ್ರಮುಖ ಲಕ್ಷಣಗಳೆಂದರೆ:
ಬಹಮನಿ ಸುಲ್ತಾನರ ಕೋಟೆಗಳು, ಮಸೀದಿಗಳು, ಗುಮ್ಮಟಗಳು, ಮಹಲ್‌ಗಳು ಮತ್ತು ದರ್ಗಾಗಳು ಈ ಶೈಲಿಯಲ್ಲಿವೆ. ಗುಲ್ಬರ್ಗಾ ಹಾಗೂ ಬೀದರ್‌ನಲ್ಲಿರುವ ಕಟ್ಟಡಗಳು, ಉತ್ತಮ ನಿದರ್ಶನಗಳಾಗಿವೆ. ಗುಲ್ಬರ್ಗಾ: ಕೋಟೆ, ಜಾಮಿ ಮಸೀದಿ(ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಮಸೀದಿ), ಷಾಬಜಾರ್
ಮಸೀದಿ, ಹಫ್ತಾ ಗುಂಬಜ್ (ಸುಲ್ತಾನರ ಏಳು ಗೋರಿಗಳ ಸಂಕೀರ್ಣ) ಮುಂತಾದವು ಗುಲ್ಬರ್ಗಾದಲ್ಲಿ
ಬೀದರ್: ಕೋಟೆ, ರಂಗೀನ್ ಮಹಲ್, ಆಸ್ಥಾನ್ ಮಹಲ್, ಜನತಾ ಮಹಲ್, ಜನಾನಾ ಮಹಲ್, ಸೋಲಹ ಕಂಬ, ಮಸೀದಿ, ಗವಾನನ ಮದರಸಾ ಮುಂತಾದವುಗಳು ಬೀದರ್‌ನಲ್ಲಿ ಇವೆ.
ಬಹಮನಿ ಸುಲ್ತಾನರಿಂದ ಸ್ವತಂತ್ರ ಘೋಷಿಸಿಕೊಂಡ ಆದಿಲ್ ಷಾಹಿಗಳು ಬಿಜಾಪುರದಿಂದ ಆಳ್ವಿಕೆ ಮಾಡಲಾರಂಭಿಸಿದರು. ಯೂಸುಫ್ ಆದಿಲ್ ಖಾನನು ಸಾ.ಶ.1489 ರಲ್ಲಿ ಈ ವಂಶವನ್ನು ಸ್ಥಾಪಿಸಿದನು.
ಎರಡನೇ ಇಬ್ರಾಹಿಂ ಆದಿಲ್‌ಷಾ (ನಾ.ಶ.1580-1626):
ಎರಡನೇ ಇಬ್ರಾಹಿಂ ಆದಿಲ್‌ಷಾನು ಸಾ.ಶ.1580 ರಲ್ಲಿ ಅಧಿಕಾರಕ್ಕೆ ಬಂದನು. ಚಾಂದ್‌ಬೀಜಿ ಇವನ ರಾಜಪ್ರತಿನಿಧಿಯಾಗಿದ್ದಳು. ಇವನು 'ಜಗದ್ಗುರುವಾದವಾ' ಎಂದು ಹೆಸರಾಗಿದ್ದನು. ಇವನು ಧರ್ಮಸಹಿತಾ ನೀತಿಯನ್ನು ಅನುಸರಿಸಿದನು. ಅವನು ಸ್ವತಃ ಸಂಗೀತಗಾರನಾಗಿದ್ದು 'ಕಿತಾಬ್-ಇ-ನವರಸ್' ಎಂಬ ಕೃತಿಯನ್ನು
ರಚಿಸಿದನು. ಬಿಜಾಪುರದಲ್ಲಿ ನವರಸಪುರ' ಎಂಬ ಉಪನಗರವನ್ನು ಕಲಾಕಾರರಿಗಾಗಿಯೇ ನಿರ್ಮಿಸಿದನು. ಅವನು ಹಿಂದೂ ದೇವತೆಗಳಾದ ನರಸಿಂಹ, ಸರಸ್ವತಿ ಗಣೇಶನನ್ನು ಮತ್ತು ಇತರ ಹಿಂದೂ ದೇವರುಗಳನ್ನು ಆರಾಧಿಸುತ್ತಿದ್ದನು. ಸಾ.ಶ.1686 ರಲ್ಲಿ ಔರಂಗಜೇಬನು ಬಿಜಾಪುರವನ್ನು ಆಕ್ರಮಿಸಿಕೊಳ್ಳುವುವದರೊಂದಿಗೆ ಆದಿಲ್ ಷಾಹಿಗಳ ಆಳ್ವಿಕೆ ಕೊನೆಯಾಯಿತು.
ಸಾಹಿತ್ಯ: ಆರೇಬಿಕ್, ಪರ್ಷಿಯನ್ ಹಾಗೂ ದಖನೀ ಉರ್ದು ಭಾಷೆಗಳು ಹಾಗೂ ಸಾಹಿತ್ಯ # ಸೂಫಿ-ಸಂತರು ಹಿಂದೂ ಮತ್ತು ಮುಸ್ಲಿಂದಲ್ಲಿ ಏಕತೆಯನ್ನು ಮೂಡಿಸಿದರು. ಬೆಳವಣಿಗೆಯಾದವು.
ಈ ಸಯ್ಯದ್ ಅಹ್ಮದ್ ಹರವಿ, ಮೌಲಾನಾ ಗೈತುದ್ದೀನ್, ಹಬೀಬುಲ್ಲಾ ಮತ್ತು ಆಬ್ದುಲ್ಲಾ ಪ್ರಸಿದ್ಧ ವಿದ್ವಾಂಸರಾಗಿದ್ದರು. ಮುಲ್ಲಾ ನಸ್ತತಿ ಮತ್ತು ಫೆರಿಸ್ತಾ ಪ್ರಸಿದ್ಧ ಇತಿಹಾಸಕಾರರಾಗಿದ್ದು, ಅವರು ಕ್ರಮವಾಗಿ 'ಆಲಿನಾಮ'
ಮತ್ತು 'ತಾರೀಖ್-ಇ-ಫೆರಿಸ್ತಾ' ಕೃತಿಗಳನ್ನು ಬರೆದಿದ್ದಾರೆ. ವಾಸುಶಿಲ್ಲ: ಆದಿಲ್ ಷಾಹಿಗಳು ನಿರ್ಮಿಸಿದ ಸ್ಮಾರಕಗಳು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿವೆ. ದಖನಿ ಶೈಲಿ ಎಂದೂ ಸಹ ಕರೆಯಲ್ಪಟ್ಟಿದೆ, ಬಿಜಾಪುರದ ಪ್ರಮುಖ ಸ್ಮಾರಕಗಳು ಇಂತಿವೆ:
1. 'ಜಾಮೀ ಮಸೀದಿ'ಯನ್ನು ಅಲಿ ಆದಿಲ್ ಷಾ ನಿರ್ಮಾಣ ಮಾಡಿದನು. ಇದು ಕಲಾತ್ಮಕವಾದ ಕಮಾನುಗಳು,
ಮಿನಾರ್‌ಗಳು, ಬೃಹತ್ತಾದ ಗುಮ್ಮಟ ಹಾಗೂ ಭವ್ಯವಾದ ಪ್ರಾರ್ಥನಾ ಭವನಕ್ಕೆ ಹೆಸರುವಾಸಿಯಾಗಿದೆ.
2 ಇಬ್ರಾಹಿಂ ರೋಜಾ ಇಲ್ಲಿಯ ಇನ್ನೊಂದು ಪ್ರಾಧ್ಯ ಕಟ್ಟಡವಾಗಿದೆ. ಇದು ಭಾರತದಲ್ಲಿರುವ ಏಕೈಕ ರೋಜಾ ಆಗಿರುತ್ತದೆ. ಒಂದು ಎತ್ತರವಾದ ಕಟ್ಟೆಯ ಮೇಲೆ ಗೋರಿ ಹಾಗೂ ಮಸೀದಿಯನ್ನು ಕಟ್ಟಿದ್ದು ಸುತ್ತಲೂ ಉದ್ಯಾನವನ ಹಾಗೂ ಆವರಣ ಗೋಡೆಯನ್ನು ಒಳಗೊಂಡಿರುವುದಕ್ಕೆ ರೋಜಾ ಎಂದು ಕರೆಯುತ್ತಾರೆ. ಇದನ್ನು ಎರಡನೇ ಇಬ್ರಾಹಿಂ ಆದಿಲ್‌ಷಾ ನಿರ್ಮಿಸಿದನು. ಇದನ್ನು ದಕ್ಷಿಣ ಭಾರತದತಾಜ್ ಮಹಲ್ ಎಂದು ಕರೆಯಲಾಗಿದೆ.
3 ಮೆಹತರ್ ಮಹಲ್ ಎಂಬುದು ಮೂರು ಅಂತಸ್ತಿನ ಅರಮನೆಯಾಗಿದೆ. ಇದನ್ನು ಸಹ 2 ನೇ ಇಬ್ರಾಹಿಂ ಆದಿಲ್ ನಿರ್ಮಿಸಿದನು.
No comments:
Post a Comment