ಬಿಹಾರ ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಗೌರವ ಸೂಚಕ ಉದ್ಯೋಗ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳಿಗೆ ಮಾತ್ರ ಸೀಮಿತವಾದ ನೂತನ ಪಡೆ ರಚಿಸಲು ಬಿಹಾರ ಸರ್ಕಾರ ಸಿದ್ಧತೆ ನಡೆಸಿದೆ. ಈ ಯೋಜನೆ ಯಶಸ್ವಿಯಾದಲ್ಲಿ ದೇಶದಲ್ಲೇ ತೃತೀಯ ಲಿಂಗಿಗಳಿಗೆ ಸೀಮಿತ ಪೊಲೀಸ್ ಬೆಟಾಲಿಯನ್ ಹೊಂದಿರುವ ಏಕೈಕ ರಾಜ್ಯ (Government in Bihar is Working on a Plan to Raise a Separate Police Battalion Of Transgender People) ಎಂಬ ಹೆಗ್ಗಳಿಕೆಗೆ ಬಿಹಾರ ರಾಜ್ಯ ಪಾತ್ರವಾಗಲಿದೆ. ಬಿಹಾರದಲ್ಲಿ18 ವರ್ಷ ದಾಟಿರುವ 40 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದಾರೆ. ಅವರಲ್ಲಿ ಕೆಲವರಿಗೆ ಸೂಕ್ತ ತರಬೇತಿ ನೀಡಿ ಪೊಲೀಸ್ ಬೆಟಾಲಿಯನ್ ರಚಿಸಿ ಅಗತ್ಯ ಭದ್ರತಾ ವ್ಯವಸ್ಥೆಗೆ ನಿಯೋಜಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಹಾಗೂ ಪೊಲೀಸ್ ಪಡೆ ಆಯ್ಕೆಗೆ ಅರ್ಹತೆ ಮತ್ತು ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಮತ್ತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.
ಭಾರತದಲ್ಲ ತೃತೀಯ ಅಂನಿಗಳಲ್ಲ ಪ್ರಥಮರು
ಮೊದಲ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ : ಪ್ರೀತಿಕಾ ಯಾಶಿನಿ (ತ.ನಾಡು), * ಮೊದಲ ಕ್ರೀಡಾಕೂಟ : ತಿರುವನಂತಪುರಂ (ಕೇರಳ)
* ಮೊದಲ ಕಾಲೇಜು ಪ್ರಾಂಶುಪಾಲರು : ಮನಾಚಿ ಭಂಡೋಪಾಧ್ಯಾಯ (ಪ.ಬಂಗಾಳ), ಮೊದಲ ಸೈನಿಕ : ಶಾಚಿ
* ಮೊದಲ ಎಂಎಲ್‌ಎ : ಶಬನಮ್ ಮೌಸಿ (ಆಂಧ್ರಪ್ರದೇಶ),
* ಮೊದಲ ವಕೀಲರು : ಸತ್ಯಶ್ರೀ ಶರ್ಮಿಳಾ (ತಮಿಳುನಾಡು)
* ಮೊದಲ ನ್ಯಾಯಾಧೀಶರು : ಚೋಂತಾ ಮೊಂಡಾಲ್ (ಪ. ಬಂಗಾಳ) * ಮೊದಲ ಶಾಲೆ : ಷಹಜಾ ಇಂಟರ್ ನ್ಯಾಷನಲ್ ಸ್ಕೂಲ್ (ಕೇರಳದ ಎರ್ನಾಕುಲಂ ಜಿಲ್ಲೆ), * ಆರಂಭಿಸಿದವರು: ಕಲ್ಕಿ ಸುಬ್ರಹ್ಮಣ್ಯಂ
* ಮೊದಲ ವಿಶ್ವವಿದ್ಯಾಲಯ : ಖುಷಿನಗರ ಜಿಲ್ಲೆ (ಉತ್ತರ ಪ್ರದೇಶ) ಭಾರತದ ಮೊದಲ ಮಿಸ್ ತೃತೀಯ ಅಂಗಿ ಸೌಂದರ್ಯ ಸ್ಪರ್ಧೆ ಜರುಗಿದ ಸ್ಥಳ : ಗುರುಗಾಂವ್ (ಹರಿಯಾಣ)
* ಮೊದಲ ತೃತೀಯ ಅಂಗಿ ಅಪರೇಟರ್ : ಜೋಯಾ ಖಾನ್ (ಗುಜರಾತ್‌ನ ಸಾಮಾನ್ಯ ಸೇವಾ ಕೇಂದ್ರ)
ತೃತೀಯ ಅಂಗಿಗಳ ಮೊದಲ ಸಾಹಿತ್ಯೋತ್ಸವ : ಕೋಲ್ಕತ್ತಾ
ಅಸ್ಲಾಂ ರಾಜ್ಯದ ಮೊದಲ ತೃತೀಯ ಅಂಗಿ ನ್ಯಾಯಾಧೀಶೆ : ಸ್ವಾಮಿ ಬಿಧಾನ್ ಬರುವಾ * ಇಸ್ಲಾಂ ರಾಷ್ಟ್ರಗಳಲ್ಲಿ ತೃತೀಯ ಅಂಗಿಗಳಗಾಗಿ ಶಾಲೆಯನ್ನು ಸ್ಥಾಪಿಸಿದ ಮೊದಲ ದೇಶ : ಪಾಕಿಸ್ತಾನ
* ಭಾರತದ ಮೊದಲ ತೃತೀಯ ಅಂಗಿ ನ್ಯೂಸ್ ನಿರೂಪಕಿ : ಪದ್ಮನಿ ಪ್ರಕಾಶ್ (ಲೋಟಸ್ ನ್ಯೂಸ್)
* 2014ರ ಏಪ್ರಿಲ್ 15 ರಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್ಎಎಲ್ಎಸ್ಎ) vs ಕೇಂದ್ರ ಸರ್ಕಾರ ಪ್ರಕರಣದಲ್ಲಿ ಭಾರತದ
ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ತೃತೀಯ ಲಿಂಗಿ ಪರಿಕಲ್ಪನೆ (Transgender People to be the “Third Gender) ನೀಡಿತ್ತು.
* ತೃತೀಯ ಅಂಗಿಗಳ (ಹಕ್ಕು ರಕ್ಷಣಿ) ಕಾಯ್ದೆ-2019: ತೃತೀಯ ಲಿಂಗಿಗಳ (ಹಕ್ಕು ರಕ್ಷಣೆ) ನಿಯಮಗಳು 2020ರ ಜನವರಿ 10 ರಂದು ತೃತೀಯ ಲಿಂಗಿಗಳ ಕ್ಷೇಮಾಭಿವೃದ್ಧಿಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ತೃತೀಯ ಲಿಂಗಿಗಳಿಗಾಗಿ ಕೇಂದ್ರದ ಸಾಮಾಜಿಕ ಮತ್ತು ಸಬಲೀಕರಣ ಸಚಿವಾಲಯವು ತೃತೀಯ ಲಿಂಗಿಗಳ ನ್ಯಾಷನಲ್ ಪೋರ್ಟಲ್ & ತೃತೀಯ ಲಿಂಗಿಗಳಿಗೆ ವಸತಿಗಾಗಿ ಗರೀಮ್ ಗ್ರೇಹ್ (Garima Greh) ಅನ್ನು ಉದ್ಘಾಟಿಸಿದ್ದಾರೆ.
No comments:
Post a Comment