ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft)

        ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (HAL-Hindustan Aeronautics Limited) ನಿಂದ 48,000 ಕೋಟಿ ರೂ. ವೆಚ್ಚದಲ್ಲಿ 83 ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft) ಖರೀದಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದೆ. ಇದು ಹೆಚ್‌ಎಎಲ್ & ಭಾರತೀಯ ವಾಯು ರಕ್ಷಣಾ ಕ್ಷೇತ್ರದಲ್ಲಿನ ಅತಿದೊಡ್ಡ ಖರೀದಿ ಒಪ್ಪಂದವಾಗಿದೆ. ದೇಶೀಯ ಸೇನಾ ಯುದ್ಧ ವಿಮಾನ, ಸೇನಾ ಸಲಕರಣೆಗಳ ಉತ್ಪಾದನೆಗೆ ಆದ್ಯತೆ ನೀಡಲು ಸರ್ಕಾರವು ಬದ್ಧವಾಗಿದೆ ಎಂಬ ಇಚ್ಛಾಶಕ್ತಿಯು ಈ ಮೂಲಕ ಪ್ರದರ್ಶನಗೊಂಡಿದೆ. ಈ ಒಪ್ಪಂದವು ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ & ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ.


   MARK-IA ಆವೃತ್ತಿಯ ತೇಜಸ್ ಯುದ್ಧ ವಿಮಾನಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., (ಹೆಚ್ಎಎಲ್) ನಿರ್ಮಿತ, ಸುಧಾರಿತ ಮಾರ್ಕ್-[ಎ ಆವೃತ್ತಿಯ ತೇಜಸ್ ವಿಮಾನಗಳನ್ನು ವಾಯುಪಡೆಗೆ ಖರೀದಿಸುವ ಪ್ರಸ್ತಾವಕ್ಕೆ 2020ರ ಮಾರ್ಚ್ ತಿಂಗಳಲ್ಲಿ ರಕ್ಷಣಾ ಉಪಕರಣಗಳ ಸ್ವಾಧೀನ ಮಂಡಳಿ (Defence Acquisition Council) ಅನುಮೋದನೆ ನೀಡಿತ್ತು. ಈ ಒಪ್ಪಂದದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಘಟ ಸಮಿತಿ' (CCS-Cabinet Com mittee on Security) ಒಪ್ಪಿಗೆ ನೀಡಿದೆ. ಈ 83 ಫೈಟರ್ ಜೆಟ್‌ಗಳ ಪೈಕಿ 73 ವಿಮಾನಗಳು ದೇಶದ ರಕ್ಷಣೆಗೆ ನಿಯೋಜನೆಗೊಂಡರೆ, 10 ವಿಮಾನಗಳು ತರಬೇತಿಗೆ ಬಳಕೆಯಾಗಲಿವೆ.


  ವಾಯುಪಡೆಯಲ್ಲಿ ಹೆಚ್ಚಳವಾದ ತೇಜಸ್ ಬಲ

ಭಾರತೀಯ ವಾಯುಪಡೆಗೆ ಎರಡು ಹಂತದಲ್ಲಿ ತೇಜಸ್ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 20 ಫೈಟರ್ ಜೆಟ್‌ಗಳು ಪೂರೈಕೆಯಾಗಿದ್ದು, ಎರಡನೇ ಹಂತದಲ್ಲಿ 20 ವಿಮಾನಗಳು ಪೂರೈಕೆಯಾಗುತ್ತಿವೆ. ಪ್ರಸ್ತುತವಾಗಿ 83 ತೇಜಸ್ ಫೈಟರ್ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದವನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ತೇಜಸ್‌ನ ಬಲವು ವಾಯುಪಡೆಯಲ್ಲಿ 123 ಆಗಲಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್‌ನ ಬಲವು ಹೆಚ್ಚಳವಾದಂತಾಗಿದೆ.


   ತೇಜಸ್ ಖರೀದಿಯಿಂದ ಕಡಿಮೆಯಾದ ವಿದೇಶಿ ಅವಲಂಬನೆ ಭಾರತದ ಸೇನೆಯು ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲ್ ಮುಂತಾದ ರಾಷ್ಟ್ರಗಳಿಂದ ಯುದ್ಧ ವಿಮಾನಗಳು, ಮದ್ದು ಗುಂಡುಗಳು, ಸೇನಾ ಉಪಕರಣಗಳನ್ನು ಖರೀದಿಸುತ್ತಿತ್ತು. ಇತ್ತೀಚೆಗೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ವೇಳೆ ಹೆಚ್‌ಎಎಲ್‌ನ ಹೊರಗಿಟ್ಟಿದ್ದರಿಂದ ದೇಶಾದ್ಯಂತ ಅಪಾರ ಟೀಕೆಗೆ ಒಳಗಾಗಿತ್ತು. ಪ್ರಸ್ತುತವಾಗಿ ತೇಜಸ್ ಅನ್ನು ಭಾರತೀಯ ವಾಯುಪಡೆಗೆ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದ ಅವಲಂಬನೆ ಕಡಿಮೆಯಾದಂತಾಗಿದೆ. 


ಎರಡನೇ ಸ್ಟ್ಯಾಡ್ರನ್ ಹೊಂದಿರುವ ತೇಜಸ್ : 2020ರ ಮೇ ತಿಂಗಳಲ್ಲಿ ವಾಯುಪಡೆಯ ತೇಜಸ್ MK-IA ಸರಣಿಯ ವಿಮಾನಗಳ 2ನೇ ಸ್ಮಾಟ್ರನ್' ರಚಿಸಿತ್ತು. ಇದಕ್ಕೆ 18 ಕ್ವಾಡ್ರನ್' ಎಂದು ಹೆಸರಿದ್ದು, ಇದನ್ನು ಪ್ರೈಯಿಂಗ್ ಬುಲೆಟ್ಸ್ ಎಂದು ಕರೆಯಲಾಗುತ್ತದೆ. ಇದರ ನೆಲೆ ಕೊಯಮತ್ತೂರು ಬಳಿಯ ಸುಲೂರಿನಲ್ಲಿದೆ. ಮೊದಲ ಸ್ಮಾಡ್ರನ್ ನಂ. (45 ಕೂಡ ಕೊಯಮತ್ತೂರಿನಲ್ಲಿದೆ. ಇದನ್ನು 2016 ರಲ್ಲಿ ರಚಿಸಲಾಗಿತ್ತು.

  

    ಸಕಾಲದಲ್ಲಿ ಪೂರೈಕೆಗೆ ವ್ಯವಸ್ಥೆ


ತೇಜಸ್ ಮಾರ್ಕ್-ಎ ಲಘು ಯುದ್ಧ ವಿಮಾನಗಳನ್ನು ಸಕಾಲದಲ್ಲಿ ಪೂರೈಸುವುದಕ್ಕಾಗಿ ಹೆಚ್‌ಎಎಲ್ ಹಲವು ಕ್ರಮಗಳನ್ನು ಕೈಗೊಂಡಿದೆ.  ಬೆಂಗಳೂರು ಮತ್ತು ನಾಸಿಕ್ ನಲ್ಲಿ ನಿರ್ಮಾಣ ಘಟಕ ಗಳು ಆರಂಭಿಸಲಾಗಿದೆ. ಹೆಚ್‌ಎಎಲ್ ಮತ್ತು ರಕ್ಷಣಾ ಸಚಿವಾಲಯದ ನಡುವೆ ಒಪ್ಪಂದವಾದ 3 ವರ್ಷಗಳ ಬಳಿಕ ವಿಮಾನ ಪೂರೈಕೆ ಆರಂಭವಾಗಲಿದೆ.


ಅತ್ಯನಿರ್ಭ‌್ರ ಭಾರತ (Aatmanirbhar Bharat) ಕ್ಕೆ ಆದ್ಯತೆ

       ಹೆಚ್‌ಎಎಲ್‌ನಿಂದ ಕೇಂದ್ರ ಸರ್ಕಾರ ಖರೀದಿಸುತ್ತಿರುವ 83 ಅತ್ಯಾಧುನಿಕ ತೇಜಸ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ. ಜತೆಗೆ ವಾಯುಪಡೆಯ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ. ಬೆಂಗಳೂರು ಹಾಗೂ ನಾಸಿಕ್‌ನಲ್ಲಿ ಹೆಚ್‌ಎಎಲ್ ಹೀಗಾಗಲೇ 2ನೇ ಉತ್ಪಾದಕ ಘಟಕಗಳನ್ನು ಆರಂಭಿಸಿರುವುದರಿಂದ ಕ್ಷಿಪ್ರವಾಗಿ ಈ ವಿಮಾನಗಳ ಪೂರೈಕೆ ಸಾಧ್ಯವಾಗಲಿದೆ. ಒಪ್ಪಂದದ ಭಾಗವಾಗಿ 73 ಏಕ ಇಂಜಿನ್ ತೇಜಸ್ ಲಘು ಯುದ್ಧ ವಿಮಾನಗಳು, ಹಾಗೂ 10 ಡಬ್ಬಲ್ ಇಂಜಿನ್‌ನನ್ನು ಹೊಂದಿರುವ ತೇಜಸ್ ತರಬೇತಿ ವಿಮಾನಗಳನ್ನು ಹೆಚ್‌ಎಎಲ್ ಪೂರೈಸಲಿದೆ. ಪ್ರಸ್ತುತವಾಗಿ ಭಾರತೀಯ ವಾಯುಪಡೆಯಲ್ಲಿ ಬಳಕೆಯಲ್ಲಿರುವ ವಿಮಾನಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾದ ಮಾರ್ಕ್-1ಎ ಮಾದರಿಯಾಗಿದೆ.


ವಿಮಾನ ತಯಾರಿಕಾ ಕ್ಷೇತ್ರಕ್ಕೆ ಅನುಕೂಲ: ಈ ಒಪ್ಪಂದದಿಂದಾಗಿ ಭಾರತ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಭಾರೀ ಅನುಕೂಲವಾಗಲಿದ್ದು, ಯೋಜನೆಯಲ್ಲಿ 560 ಕಂಪನಿಗಳು ಭಾಗಿಯಾಗಲಿವೆ. ದೇಶಾದ್ಯಂತ 5,000 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.


ವಿದೇಶದಲ್ಲೂ ಬೇಡಿಕೆ ಹೊಂದಿದ ತೇಜಸ್ ವಿಮಾನ


2016ರಲ್ಲಿ ಹೆಚ್‌ಎಎಲ್ ತೇಜಸ್‌ನ ಮೊದಲ ಜಾಗತಿಕ ಪ್ರದರ್ಶನವು ಬಹರೇನ್‌ನಲ್ಲಿ ಜರುಗಿದ ಬಳಿಕ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದನ್ನು ಖರೀದಿಸಲು ಆಸಕ್ತಿ ತೋರಿಸಿವೆ. ಮಲೇಷಿಯಾ, ವಿಯೆಟ್ನಾಂ, ಇಂಡೋನೇಷಿಯಾ ಹಾಗೂ ಶ್ರೀಲಂಕಾಗಳಲ್ಲಿ ಹೆಚ್‌ಎಎಲ್ ತನ್ನ ಸಂಚಾರಿ ವೇಳೆಯನ್ನು ಸ್ಥಾಪಿಸಲು ಮುಂದಾಗಿದೆ. ಇಲ್ಲಿನ ಸ್ಥಳೀಯ - ಹಾಗೂ ಜಾಗತಿಕ ವಿಮಾನಗಳಿಗೆ ಸೇವೆಯನ್ನು ನೀಡಲು ಮುಂದಾಗಿದೆ. ಇವು ಹೆಚ್ಎಎಲ್ ತೇಜಸ್, ದಾಳಿ: ಹೆಲಿಕಾಪ್ಟರ್ ರುದ್ರ ಹಾಗೂ ಆಧುನಿಕ ಪೆಲಿಕಾಪ್ಟರ್ ಧ್ರುವಗಳ ಮಾರಾಟಕ್ಕೆ ವೇದಿಕೆಯಾಗಲಿದೆ.


      ಚೀನಾ ವಿಮಾನಕ್ಕಿಂತ ತೇಜಸ್ ಉತ್ತಮ: ಭಾರತದ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನವು ಚೀನಾ & ಪಾಕಿಸ್ತಾನದ ಜೆಎಫ್-17 ವಿಮಾನಕ್ಕಿಂತ ಬಹುಪಾಲು ಉತ್ತಮವಾದದ್ದು. ತೇಜಸ್ ವಿಮಾನವು ಬಾಲಾಕೋಟ್ ಮಾದರಿ ವೈಮಾನಿಕ ದಾಳಿ ನಡೆಸುವುದಕ್ಕೆ ಉತ್ತಮ ಆಯ್ಕೆ ಆಗಿದೆ.

     ಹೆಚ್‌ಎಎಲ್ ಬಗ್ಗೆ ಮಾಹಿತಿ


ಕೇಂದ್ರ ಕಚೇರಿ: ಬೆಂಗಳೂರು

ವಿಸೃತರೂಪ : Hindustan Aeronautics Limited


ಸ್ಥಾಪನೆ: 1940 ರಲ್ಲಿ ಹಿಂದೂಸ್ತಾನ್ ಏರೋ ಕಾಫ್ಟ್ ಲಿ., ಆಗಿ ಆರಂಭವಾಗಿದ್ದು, ಭಾರತ ಸರ್ಕಾರವು 1941 ರಲ್ಲಿ ಷೇರನ್ನು ಹೊಂದಿತ್ತು. 1942 ರಲ್ಲಿ ಹೆಚ್ಚಿನ ಷೇರನ್ನು ಖರೀದಿಸಿ ಸ್ವಾಮ್ಯ ಪಡೆಯಿತು. 


* 1964 ರಲ್ಲಿ ಇನ್ನೊಂದು ವೈಮಾನಿಕ ಸಂಸ್ಥೆ ಏರೋನಾಟಿಕ್ಸ್ ಇಂಡಿಂ ಯಾ ಲಿ., ಹಾಗೂ ಏರೋಕ್ರಾಫ್ಟ್ ಅನ್ನು ವಿಲೀನಗೊಳಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಎಂದು ಮರುನಾಮಕರಣ ಮಾಡಲಾಯಿತು.


ಸ್ಥಾಪಕರು: ವಾಲ್ ಚಂದ್‌ ಹೀರಾಚಾಂದ್‌ (Walehand Hira


chand Doshi) ಎಂಬುವರು ಅಮೆರಿಕಾದ ತಜ್ಞ ವಿಲಿಯಂ ಡಾಗ್ದಾಲ್ ಪಾಲೆ ಅವರ ಸಹಕಾರದಿಂದ ಹಿಂದೂಸ್ತಾನ್ ಏರೋಕ್ರಾಫ್ಟ್ ಲಿ., ಸ್ಥಾಪಿಸಿದರು. ಸಂಸ್ಥೆ ಸ್ಥಾಪನೆಗೆ ಸ್ಥಳದ ಹುಡುಕಾಟದಲ್ಲಿದ್ದಾಗ ಸೇತ್ ಜೀಗೆ ಮೈಸೂರು ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರು ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಸಲಹೆಯಂತೆ ಬೆಂಗಳೂರಿನಲ್ಲಿ 700 ಎಕರೆ ಜಾಗವನ್ನು ಹಣ ಪಡೆಯದೆ ಉಚಿತವಾಗಿ ನೀಡಿದರು. ಇದರೊಂದಿಗೆ ವಿದ್ಯುತ್ ಮತ್ತು ನೀರನ್ನು ಕೂಡ ಒದಗಿಸಿದರು.


ಪ್ರಸ್ತುತ ಮುಖ್ಯಸ್ಥರು : ಆರ್, ಮಾಧವನ್


* ನಿಯಂತ್ರಣ : ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ನಿರ್ವಹಣೆ.

ಸಂಸ್ಥೆಯ ವಿಶೇಷತೆಗಳು : ಪ್ರಸ್ತುತವಾಗಿ ಸಂಸ್ಥೆಯಲ್ಲಿ 11 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 20 ಉತ್ಪಾದನಾ ಘಟಕಗಳು, 30 ಸಾವಿರದಷ್ಟು ಉದ್ಯೋಗಗಳನ್ನು ಹೊಂದಿದೆ. ಜಾಗತಿಕವಾಗಿ 100 ವೈಮಾನಿಕ ಸಂಸ್ಥೆಗಳಲ್ಲಿ 34ನೇ ಸ್ಥಾನದಲ್ಲಿದೆ. ಇದುವರೆಗೂ 17 ವಿಧದ 1,476 ವಿಮಾನಗಳನ್ನು ಹೆಚ್‌ಎಎಲ್ ಸ್ಥಳೀಯವಾಗಿ ನಿರ್ಮಿಸಿದೆ.


Post a Comment (0)
Previous Post Next Post