ಕರ್ನಾಟಕದ ಕೆಜಿಎಫ್‌ನಲ್ಲಿ (1964ರಲ್ಲಿ ಸ್ಥಾಪನೆಯಾದ ಹಾಗೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರ ಸ್ಮಾಮ್ಯದ ಬೆಮೆಲ್ (BEML-Bharath Earth Movers Limited) ಕಂಪನಿಯ ಸಂಪೂರ್ಣ ಖಾಸಗೀಕರಣಕ್ಕೆ ಕೇಂದ ಸರ್ಕಾರವು ಸಿದ್ಧತೆ ನಡೆಸಿದೆ. ಈ ಕಂಪನಿಯ ಶೇ. 26ರಷ್ಟು ಷೇರುಗಳನ್ನು ಮಾರಾಟ ಮಾಡಲು ಮತ್ತು ಕಂಪನಿಯ ಆಡಳಿತಾತ್ಮಕ ನಿಯಂತ್ರಣವನ್ನು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರವು ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿದೆ.beml NEW HONTERS NEW DREAMS ಬೆಮೆಲ್‌ನಲ್ಲಿ ಸರ್ಕಾರದ ಶೇ.54.03ರಷ್ಟು ಷೇರುಗಳಿದ್ದು, ಸರ್ಕಾರವೇ ಮಾಲೀಕತ್ವ ಹೊಂದಿದೆ. ಇದೀಗ ಶೇ. 26ರಷ್ಟು ಷೇರು ಮಾರಾಟವಾದರೆ ಸರ್ಕಾರದ ಪಾಲು ಶೇ.50ಕ್ಕಿಂತ ಕೆಳಕ್ಕಿಳಿಯಲಿದೆ. ಈ ಷೇರು ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1000 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆಯಿದೆ. ಷೇರು ವಿಕ್ರಯವು 2 ಹಂತಗಳಲ್ಲಿ ಜರುಗಲಿದೆ. 2021ರ ಮಾರ್ಚ್ 1ರೊಳಗೆ ಕಂಪನಿಯ ಷೇರು ಖರೀದಿಸಲು ಬಯಸುವವರು ಆಸಕ್ತಿ ವ್ಯಕ್ತಪಡಿಸುವಿಕೆಯ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ಎಸ್‌ಬಿಐ ಅನ್ನು ಈ ಕಂಪನಿಯ ಲ್ಲಿನ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ವ್ಯವಹಾರದ ಬಂಡವಾಳ ಮಾರುಕಟ್ಟೆಯ ಸಲಹೆಗಾರರನ್ನಾಗಿ ನೇಮಿಸಿದೆ.
ಬೆಮೆಲ್ ಬಗ್ಗೆ ಮಾಹಿತಿ
ಸ್ಥಾಪನೆ: 1964 ಮೇ (ಕೆಜಿಎಫ್) ಪ್ರಸ್ತುತ ಮುಖ್ಯಸ್ಥರು: ಡಿ.ಕೆ ಹೋತಾ
ಕೇಂದ್ರ ಕಚೇರಿ: ಬೆಂಗಳೂರು
ವಿಶೇಷತೆ: ಇದೊಂದು ಸಾರ್ವಜನಿಕ ಒಡೆತನದ ಕಂಪನಿಯಾಗಿದೆ. ಮತ್ತು ಮಿನಿರತ್ನ ವರ್ಗ-1 ಸ್ಥಾನಮಾನ ಹೊಂದಿದೆ. ಕೆಜಿಎಫ್, ಬೆಂಗಳೂರು, ಮೈಸೂರು ಮತ್ತು ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಭಾರತೀಯ ಸೇನೆ ಹಾಗೂ ರೈಲ್ವೆಗೆ ಅಗತ್ಯವಾದ ಭಾರವಾದ ಸಾಧನಗಳನ್ನು ತಯಾರಿಸುತ್ತದೆ. ಬೆಮೆಲ್ ಕಂಪನಿಯು ಮೆಟ್ರೋ ಕೋಚ್‌ಗಳನ್ನು ತಯಾರಿಸಿದೆ. ದೆಹಲಿ ಮೆಟೋ, ನಮ್ಮ ಮೆಟ್ರೋ, ಜೈಪುರ ಮೆಟ್ರೋಗಳಿಗೆ ಕೋಚ್‌ಗಳನ್ನು ಒದಗಿಸಿದೆ. 2020ರ ಆಗಸ್ಟ್ 10 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿನ ಬೆಮೆಲ್‌ನಲ್ಲಿ ಕೈಗಾರಿಕಾ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಿದ್ದರು.
ನೆನಪಿರಲಿ: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ ಇಲಾಖೆಯ (DIPAM- Department of Investment and Public Assets Management)ವತಿಯಿಂದ ದೇಶದ ಅತ್ಯಂತ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿ ಯ ಖಾಸಗೀಕರಣ ಪ್ರಕ್ರಿಯೆಗೂ ಇತ್ತೀಚೆಗೆ ಸಿದ್ಧತೆ ನಡೆಸಿದೆ. 2020ರ ನವೆಂಬರ್‌ನಲ್ಲಿ ಡಿಐಪಿಎಎಂ ಮತ್ತು ವಿಶ್ವಬ್ಯಾಂಕ್ ನಡುವೆ ಸ್ವತ್ತು ನಗದೀಕರಣ ಮೇಲಿನ ಸಲಹೆ ಸೇವೆ | ಸಂಬಂಧ ಒಪ್ಪಂದ ಏರ್ಪಟ್ಟಿದೆ.
No comments:
Post a Comment