1) ಪ್ರಾಚೀನ ಜೀವನಾಧಾರ ವ್ಯವಸಾಯ,
ಆ) ವಲಸೆ ಜೀವನಾಧಾರ ಬೇಸಾಯ
ಬ) ಸ್ಥಿರ ಜೀವನಾಧರ ಬೇಸಾಯ
2) ಸಾಂದ್ರ ಬೇಸಾಯ
3) ವಾಣಿಜ್ಯ ದೇಸಾಯ
4) ಮಿಶ್ರ ಬೇಸಾಯ
5) ತೋಟಗಾರಿಕೆ ಬೇಸಾಯ
6) ಒಣ ಬೇಸಾಯ
7) ಆರ್ದ ಬೇಸಾಯ
8) ನೀರಾವರಿ ಬೇಸಾಯ
1) ಪ್ರಾಚೀನ ಜೀವನಾಧಾರ ವ್ಯವಸಾಯ,
ಕುಟುಂಬದ ಬಳಕೆಗಾಗಿ ಅಥವಾ ಜೀವನೋಪಾಯಕ್ಕಾಗಿ ಹಾಗೂ ವಾಣಿಜ್ಯ ಉದ್ದೇಶಕಲ್ಲದೆ ಬೆಳೆಗಳನ್ನು ಬೆಳೆಯುವ ಕೃಷಿ ಪದ್ಧತಿಗೆ "ಪ್ರಾಚೀನ ಜೀವನಾಧಾರ ಬೇಸಾಯ” ಎನ್ನುವರು. ರೈತರು ಪ್ರಾಚೀನ ಕೃಷಿ ವಿಧಾನಗಳನ್ನು ಅನುಸರಿಸುವರು. ಈ ರೀತಿಯ ಕೃಷಿಯು ಗುಡ್ಡಗಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ರೂಢಿಯಲ್ಲಿರುವುದು, ಅವು ಈಶಾನ್ಯ ಭಾರತದ ರಾಜ್ಯಗಳು, ಒಡಿಶಾ ಮತ್ತು ಮಧ್ಯಪ್ರದೇಶಗಳಲ್ಲಿ ರೂಢಿಯಲ್ಲಿದೆ. ಪ್ರಾಚೀನ ಜೀವನಾಧಾರ ಕೃಷಿಯಲ್ಲಿ ಎರಡು ವಿಧ. ಅವು ಅ) ವಲಸೆ ಜೀವನಾಧಾರ ಬೇಸಾಯ ಮತ್ತು ಬ) ಸ್ಥಿರ ಜೀವನಾಧಾರ ಬೇಸಾಯ.
ಆ) ವಲಸೆ ಜೀವನಾಧಾರ ಬೇಸಾಯ
ಉಷ್ಣವಲಯದ ಅತಿ ಹೆಚ್ಚು ಮಳೆಯಾಗುವ ಅರಣ್ಯ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರಿಂದ ರೂಢಿಯಲ್ಲಿರುವ ಒಂದು ಪ್ರಾಚೀನ ಬೇಸಾಯ ಪದ್ಧತಿಯಾಗಿದೆ. ಈ ಪದ್ಧತಿಯಲ್ಲಿ ರೈತರು ಆರಣ್ಯಗಳ ಮಧ್ಯದಲ್ಲಿ ಪೊದೆ ಮತ್ತು ಮರಗಳನ್ನು ಕತ್ತರಿಸುವ ಮತ್ತು ಸುಡುವುದರ ಮೂಲಕ ಭೂಮಿಯನ್ನು ತೆರವುಗೊಳಿಸುವರು ಮತ್ತು ಸಾಗುವಳಿ ಮಾಡುವರು. ಕೆಲವು ವರ್ಷಗಳವರೆಗೂ ಈ ಬೇಸಾಯ ಕ್ರಮ ಮುಂದುವರೆಯುತ್ತದೆ. ಅನಂತರ ಆ ಪ್ರದೇಶವನ್ನು ಬಿಟ್ಟು ಬೇರೊಂದು ಭಾಗದ ಆರಣ್ಯ ಪ್ರದೇಶಕ್ಕೆ ಸ್ಥಳಾಂತರ ಹೊಂದುವರು. ಬೆಳೆಗಳನ್ನು ಬೆಳೆಯುವುದರ ಜೊತೆಗೆ, ಬೇಟೆಗಾರಿಕೆ, ಮೀನುಗಾರಿಕೆ ಮತ್ತು ಆರಣ್ಯ ಸಂಪನ್ಮೂಲಗಳ ಸಂಗ್ರಹ ಇತ್ಯಾದಿ ಚಟುವಟಿಕೆಗಳಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಈ ಪ್ರಕಾರದ ಕೃಷಿಯನ್ನು ವಿವಿಧ ಸ್ಥಳೀಯ ಹೆಸರುಗಳಿಂದ ಕರೆಯುವರು, ಉದಾ: ಈಶಾನ್ಯ ಪ್ರದೇಶಗಳಲ್ಲಿ (ಅಸ್ಸಾಂ) 'ಝೂಮ್", ಒಡಿಶಾದಲ್ಲಿ ಕೋಮನ್, ಕೇರಳದಲ್ಲಿ 'ಫೋನಮ್', ಮತ್ತು ಆಂಧ್ರಪ್ರದೇಶದಲ್ಲಿ 'ಪೊಡು, ಇತ್ಯಾದಿ, ಮುಡಿಗೆಣಸು (ಯಾಮ್ಸ್), ನೆಲಗಡಲೆ, ಬೀನ್ಸ್, ಬಾಳೆಹಣ್ಣುಗಳು, ಮಲೆನಾಡಿನ ಭತ್ತ, ಬಕ್‌ಗೋಧಿ, ಮೆಕ್ಕೆಜೋಳ, ದ್ವಿದಳ ಧಾನ್ಯಗಳು ಮತ್ತು ಕೆಲವೊಮ್ಮೆ ತರಕಾರಿಗಳನ್ನೂ ಸಹ ವಲಸೆ ಬೇಸಾಯದಲ್ಲಿ ಬೆಳೆಯಲಾಗುತ್ತದೆ. ಇಂತಹ ಬೇಸಾಯವು ಆಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಮಿರಾಂ, ಅರುಣಾಚಲ ಪ್ರದೇಶ, ಮಧ್ಯಪ್ರದೇಶದ ಕೆಲ ಭಾಗಗಳು, ಓಡಿಶಾ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ರೂಢಿಯಲ್ಲಿದೆ.
ಬ) ಸ್ಥಿರ ಜೀವನಾಧಾರ ಬೇಸಾಯ
ಜನರು ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಶಾಶ್ವತವಾಗಿ ನೆಲೆಸಿ ರೂಢಿಸಿಕೊಂಡಿರುವ ಒಂದು ಪ್ರಾಚೀನ ಕೃಷಿ ಪದ್ಧತಿಯಾಗಿದೆ. ಇಲ್ಲಿನ ಪ್ರಾಕೃತಿಕ ಅಂಶಗಳು ಸಾಗುವಳಿಗೆ ಅನುಕೂಲವಾಗಿರುತ್ತವೆ. ಕೃಷಿ ಭೂಮಿಯನ್ನು ಪಾಳುಬಿಡದೆ ಪ್ರತಿ ವರ್ಷವೂ ನಿರಂತರವಾಗಿ ಸಾಗುವಳಿ ಮಾಡುವರು, ಆದ್ದರಿಂದ ಈ ಪದ್ಧತಿಯನ್ನು 'ಸ್ಥಿರ ಜೀವನಾಧಾರ ಬೇಸಾಯ' ಎಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನೆರೆಯ ಜನರಿಗೆ ಮಾರಾಟ ಮಾಡಲಾಗುತ್ತದೆ. ಅಥವಾ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಸ್ಥಿರ ಜೀವನಾಧಾರ ಬೇಸಾಯದಲ್ಲಿ ಹಾಲು, ಮಾಂಸ, ಉಣ್ಣೆ ಮತ್ತು ತೊಗಲು ಮುಂತಾದ ಉತ್ಪನ್ನಗಳಿಗಾಗಿ ಪ್ರಾಣಿಗಳನ್ನು ಸಾಕಲಾಗುತ್ತದೆ. ಇದನ್ನು ಅಲೆಮಾರಿ ಪಶುಪಾಲನೆ' ಎಂತಲೂ ಕರೆಯುವರು,
2) ಸಾಂದ್ರ ಬೇಸಾಯ
ಅಧಿಕ ಜನ ಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಭೂಹಿಡುವಳಿಯ ಗಾತ್ರವು ಚಿಕ್ಕದಾಗಿದ್ದು, ಬಹಳ ಸಾಂದ್ರ ಮತ್ತು ಹೆಚ್ಚು ಉತ್ಪಾದನೆ ಪಡೆಯುವ ಬೇಸಾಯ ಕ್ರಮವನ್ನು ಸಾಂದ್ರ ಬೇಸಾಯ' ಎನ್ನುವರು.
ಇದು ಹೆಚ್ಚು ಕಾರ್ಮಿಕರು (ಶ್ರಮ) ಮತ್ತು ಬಂಡವಾಳವನ್ನು ತೊಡಗಿಸುವ ಕೃಷಿಯಾಗಿದೆ. ಚಿಕ್ಕ ಭೂಹಿಡುವಳಿಗಳಲ್ಲಿ ಬೆಳೆಗಳ ಗರಿಷ್ಠ ಇಳುವರಿಯನ್ನು ಪಡೆಯುವುದಕ್ಕಾಗಿ ಹೆಚ್ಚು ಶ್ರಮ ಮತ್ತು ಬಂಡವಾಳವನ್ನು ತೊಡಗಿಸಲಾಗುತ್ತದೆ. ಲಭ್ಯವಿರುವ ಸಣ್ಣ ತುಂಡು ಭೂಮಿಯನ್ನು ವರ್ಷದುದ್ದಕ್ಕೂ ಸಾಗುವಳಿಗಾಗಿ ಉಪಯೋಗ ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ರೈತರು ಜಾಗರೂಕತೆಯಿಂದ ಮಣ್ಣನ್ನು ಉಳುಮೆ ಮಾಡುವುದರ ಜೊತೆಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು ಪ್ರಯತ್ನಿಸುವರು, ರೈತರು ಪ್ರತಿ ಘಟಕ ಪ್ರದೇಶದಿಂದ ಹೆಚ್ಚು ಇಳುವರಿ ಮತ್ತು ಚಿಕ್ಕ ಭೂಹಿಡುವಳಿಯಲ್ಲೇ ಗರಿಷ್ಠ ಉತ್ಪಾದನೆಯನ್ನು ಪಡೆಯಲು ಪ್ರಯತ್ನಿಸುವುದೇ ಸಾಂದ್ರ ಬೇಸಾಯದ ಗುಣಲಕ್ಷಣ, ಈ ವಿಧದಲ್ಲಿ, ಕೃಷಿ ಕಾರ್ಯಾಚರಣೆಗಳು ಮಾನವನ ದೈಹಿಕ ಶ್ರಮ ಮತ್ತು ಪಾಣಿಗಳಿಂದ ನಿರ್ವಹಿಸಲಾಗುತ್ತದೆ. ಈ ಕೃಷಿ ಪದ್ಧತಿಯು ದೇಶದ ಫಲವತ್ತಾದ ಹಾಗೂ ನೀರಾವರಿ ಸೌಲಭ್ಯವಿರುವ ಭಾಗಗಳಲ್ಲಿ ಸರ್ವೆ ಸಾಮಾನ್ಯವಾದುದು, ಭತ್ತವು ಸಾಂದ್ರ ಬೇಸಾಯದ ಪ್ರಮುಖ ಬೆಳೆಯಾಗಿದೆ.
3) ವಾಣಿಜ್ಯ ಬೇಸಾಯ
ದೇಶೀಯ ಬಳಕೆಗಳಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಕೃಷಿ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದನ್ನು 'ವಾಣಿಜ್ಯ ದೇಸಾಯ' ಎಂದು ಕರೆಯುವರು, ಈ ರೀತಿಯ ಕೃಷಿಯು ಸಾಮಾನ್ಯವಾಗಿ ಉತ್ತಮ ಸಾರಿಗೆ ಸೌಲಭ್ಯ, ಹೆಚ್ಚು ವಿಶಾಲವಾದ ವಿರಳ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ವಿಸ್ತಾರವಾದ ಜಮೀನುಗಳಲ್ಲಿ, ಕಡಿಮೆ ಶ್ರಮ, ದೊಡ್ಡ ಪ್ರಮಾಣದ ಯಂತ್ರೋಪಕರಣಗಳ ಬಳಕೆ, ಮಾರಾಟಕ್ಕಾಗಿ ಹಣದ ಬೆಳೆಗಳನ್ನು ಬೆಳೆಯಲಾಗುವುದು,
4) ಮಿಶ್ರ ಬೇಸಾಯ
ಬೆಳೆಗಳನ್ನು ಬೆಳೆಯುವದರ ಜೊತೆಗೆ ಜಾನುವಾರುಗಳ ಪಾಲನೆಯನ್ನು ಒಳಗೊಂಡಿರುವ ಕೃಷಿ ವಿಧಾನವನ್ನು ಮಾತ್ರ ದೇಸಾಯ' ಎಂದು ಕರೆಯುವರು. ಈ ಪದ್ಧತಿಯಲ್ಲಿ ಜಮೀನನ್ನು ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯುವದಕಲ್ಲದೆ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳೆಂದರೆ ಜಾನುವಾರುಗಳ ಪಾಲನೆ, ಕೋಳಿ ಸಾಕಣೆ, ರೇಷ್ಮೆ ಕೃಷಿ, ಜೇನು ಸಾಕಣೆ ಇತ್ಯಾದಿ, ರೈತರು ಬೆಳೆ ಮತ್ತು ಜಾನುವಾರು ಸಾಕಣೆ ಎರಡೂ ಕಡೆಯಿಂದ ಹೆಚ್ಚು ಆದಾಯವನ್ನು ಪಡೆಯುವರು ಭಾರತದಲ್ಲಿ ಇದನ್ನು 1951 ರಿಂದ ಜಾರಿಗೆ ತರಲಾಯಿತು. ಇದು ಪ್ರಚಲಿತವಾಗಿರುವ ಪ್ರಮುಖ ರಾಜ್ಯಗಳೆಂದರೆ, ರಾಜಸ್ತಾನ, ಆಂಧ್ರಪ್ರದೇಶ, ಪಂಜಾಟ, ಹರಿಯಾಣ ಮತ್ತು ತಮಿಳುನಾಡು,
5) ನೆಡುತೋಟದ ಬೇಸಾಯ
ಒಂದೇ ತರಹದ ಹಣದ ಬೆಳೆಯನ್ನು ವಿಶಾಲವಾದ ಭೂಮಿ ಅಥವಾ ತೋಟಗಳಲ್ಲಿ ಬೆಳೆಯುವುದಕ್ಕೆ ನೆಡುತೋಟದ ದೇಸಾಯ' ಎಂದು ಕರೆಯುವರು, ವಿಶೇಷ ರೀತಿಯ ವಾಣಿಜ್ಯ ಮಾದರಿ ಬೇಸಾಯ. ಇದಕ್ಕೆ ಅಧಿಕ ಬಂಡವಾಳ ಮತ್ತು ಶ್ರಮದ ಅಗತ್ಯವಿರುತ್ತದೆ. ಮಾನವನ ದೈಹಿಕ ಶ್ರಮ ಮತ್ತು ನುರಿತ ಕಾರ್ಮಿಕರ ಪೂರೈಕೆ ಮುಖ್ಯವಾಗಿರುತ್ತದೆ. ಈ ವ್ಯವಸ್ಥೆಯಲ್ಲಿ ಆಧುನಿಕ ಮತ್ತು ವೈಜ್ಞಾನಿಕ ತಂತ್ರಗಳನ್ನು ಬಳಸಿಕೊಂಡು ಬೆಳೆಗಳನ್ನು ಮುಖ್ಯವಾಗಿ ರಫ್ತು ಮಾಡುವುದಕ್ಕೆ ಬೆಳೆಯಲಾಗುತ್ತದೆ, ಭಾರತದ ಪ್ರಮುಖ ನೆಡು ತೋಟದ ಬೆಳೆಗಳೆಂದರೆ, ಚಹ, ಕಾಫಿ ಮತ್ತು ರಬ್ಬರ್,
6). ಒಣಬೇಸಾಯ
ಕಡಿಮೆ ಮಳೆಯನ್ನು (ಅಂದರೆ 50 ಸೆಂ.ಮೀ ಗಿಂತ ಕಡಿಮೆ) ಪಡೆಯುವ, ನೀರಾವರಿ ಸೌಲಭ್ಯಗಳು ಬಹಳ ಸೀಮಿತ ಅಥವಾ ಇಲ್ಲದ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿಯನ್ನು 'ಒಣ ಬೇಸಾಯ' ಎಂದು ಕರೆಯುವರು. ಈ ಪ್ರಕಾರದ ಬೇಸಾಯವು ದಕ್ಷಿಣ ಭಾರತದ ದಬ್ಬನ್ ಪ್ರಸ್ಥಭೂಮಿ, ಪಶ್ಚಿಮ ರಾಜಸ್ತಾನ, ಮತ್ತು ಇತರೆ ಶುಷ್ಕ ಮತ್ತು ಆರೆಶುಷ್ಕ ಪ್ರದೇಶಗಳಲ್ಲಿ ರೂಢಿಯಲ್ಲಿರುವುದು, ಕ್ಷಾಮ ಮತ್ತು ಬರಗಾಲಗಳು ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಇಲ್ಲಿ ಬೆಳೆಯುವ ಬೆಳೆಗಳು ಕಡಿಮೆ ಇಳುವರಿ ಒದಗಿಸುತ್ತವೆ. ಅಲ್ಪಾವಧಿಯಲ್ಲಿ ಫಸಲು ನೀಡುವ ಹಾಗೂ ಬರವನ್ನು ನಿಭಾಯಿಸಬಲ್ಲ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೋಳ, ಸಜ್ಜೆ, ರಾಗಿ, ಎಣ್ಣೆಕಾಳುಗಳು ಒಣ ಬೇಸಾಯದ ಪ್ರಮುಖ ಬೆಳೆಗಳಾಗಿರುತ್ತವೆ.
7) ಅರ್ದ ಬೇಸಾಯ
ಸಾಕಷ್ಟು ಮಳೆಯನ್ನು ಪಡೆಯುವ ಪ್ರದೇಶಗಳಲ್ಲಿ ನೀರಾವರಿಯ ಸಹಾಯವಿಲ್ಲದೇ ಬೆಳೆಗಳನ್ನು ಬೆಳೆಯುವದಕ್ಕೆ ತು ಬೇಸಾಯ ಅಥವಾ ಆರ್ದ ಬೇಸಾಯ ಎಂದು ಕರೆಯುವರು. ಸಾಕಷ್ಟು ಮಳೆಯನ್ನು ಪಡೆಯುವ ಪ್ರದೇಶದಲ್ಲಿ ಅಂದರೆ
100 ರಿಂದ 150 ಸೆಂ.ಮೀ. ವಾರ್ಷಿಕ ಮಳೆಯಾಗುವ ಪ್ರದೇಶದಲ್ಲಿ ಎರಡು ಅಥವಾ ಬಹು ಬೆಳೆ ಪದ್ಧತಿಯು ರೂಢಿಯಲ್ಲಿರುವುದು. ಭತ್ತ, ಕಬ್ಬು, ಸೆಣಬು, ಚಹ, ಕಾಫಿ, ರಬ್ಬರ್ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಸಾಕಷ್ಟು ಮಳೆಯಾಗುವದರಿಂದ ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯಲು ನೆರವಾಗುತ್ತದೆ.
8) ನೀರಾವರಿ ಬೇಸಾಯ
ನೀರಾವರಿ ಪೂರೈಕೆಮಾಡಿ ಬೆಳೆಗಳನ್ನು ಬೆಳೆಯುವುದಕ್ಕೆ “ನೀರಾವರಿ ಬೇಸಾಯ” ಎನ್ನುವರು. ಮಾನ್ಸೂನ್ ಮಳೆಯು ಋತುಕಾಲಿಕ, ಅನಿಶ್ಚಿತ ಮತ್ತು ಅನಿಯಮಿತವಾಗಿರುವುದರಿಂದ ಭಾರತದಲ್ಲಿ ಈ ರೀತಿಯ ಕೃಷಿ ವಿಧಾನವು ಅತ್ಯವಶ್ಯಕವಾಗಿರುತ್ತದೆ. ಭಾರತದಲ್ಲಿ ಹೆಚ್ಚು ವಿಸ್ತಾರ ಪ್ರದೇಶದ ಸಾಗುವಳಿ ಭೂಮಿಯು ನೀರಾವರಿಗೆ ಒಳಪಟ್ಟಿದೆ. ಈ ಪ್ರಕಾರದ ಬೇಸಾಯವು ಹೆಚ್ಚಾಗಿ ಉತ್ತರಪ್ರದೇಶ, ಪಂಜಾಬ, ಹರಿಯಾಣ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ ಮತ್ತು ದೇಶದ ಅನೇಕ ಹಲವು ರಾಜ್ಯಗಳಲ್ಲಿಯೂ ಸಹ ರೂಢಿಯಲ್ಲಿದೆ.
No comments:
Post a Comment