ಭಾರತದ ಮೊದಲ ಅಂತರ್‌ರಾಜ್ಯ ನದಿ ಜೋಡಣೆ: ಕೆನ್-ಬೆಟ್ವಾ ನದಿ ಜೋಡಣೆ
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪರಿಕಲ್ಪನೆಯಾದ ಅಂತರ್‌ರಾಜ್ಯ ನದಿ ಜೋಡಣೆಯು
ಪ್ರಸ್ತುತವಾಗಿ ಸಾಕಾರಗೊಂಡಿದೆ. 2021ರ ಮಾರ್ಚ್ 22 ರಂದು ವಿಶ್ವ ಜಲದಿನದ ಅಂಗವಾಗಿ ಆರಂಭಗೊಂಡ ಜಲಶಕ್ತಿ ಅಭಿಯಾನ ಮಳೆಯನ್ನು ಹಿಡಿಯಿರಿ (Jal Shakti Abhiyan - Catch the Rain) ಆಂದೋಲನದ ಭಾಗವಾಗಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ನಡುವಿನ ಕೆನ್-ಬೆಟ್ಟಾ ನದಿ ಜೋಡಣೆಯ ಯೋಜನೆಯ Ken Betwa Link Project (KBLP) ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಸಹಿ ಹಾಕಿವೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ನದಿ ಜೋಡಣೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಷ್ಟ್ರೀಯ ಸ್ವರೂಪ ಹೊಂದಿರುವ ನದಿ ಜೋಡಣೆಯ ಮೊದಲ ಯೋಜನೆಯು National Perspective Plan for interlinking of river ಇದಾಗಿದೆ. ಇದರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸ್ತಾಪಿಸಿದ ಯೋಜನೆಯು ಜಾರಿಗೆ ಬಂದಂತಾಗಿದೆ.
ಅಂತರ್ ನದಿ ಜೋಡಣೆಯ ರಾಷ್ಟ್ರೀಯ ಮಹಾ ಯೋಜನೆ
KEN BETWA RIVER LINKING PROJECT
ಭಾರತದ ಮೊದಲ ಅಂತರ್‌ನದಿ
ಜೋಡಣಾ ಯೋಜನೆಯ ಎನಿಸಿರುವ ಕೆನ -ಬೆಟ್ವಾ ನದಿ ಜೋಡಣಾ ಯೋಜನೆಯ ಅನುಷ್ಠಾನದ ಐತಿಹಾಸಿಕ ಒಪ್ಪಂದವು 2021ರ ಮಾರ್ಚ್‌ನಲ್ಲಿ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂತರ್ ನದಿ ಜೋಡಣೆಯ ಮೂಲಕ ಹೆಚ್ಚಿನ ನೀರಿರುವ ಪ್ರದೇಶಗಳಿಂದ ಬರಪೀಡಿತ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ನೀರನ್ನು ಒದಗಿಸುವ ಕನಸು ಕಂಡಿದ್ದರು. ಭಾರತದ ಜಲ ಸಂಬಂಧಿತ ಉಜ್ವಲ ಭವಿಷ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಒಪ್ಪಂದ ಇದಾಗಿದೆ. ನಮ್ಮ ಕೃಷಿ ಭೂಮಿಯನ್ನು
ಹಸಿರು ಮಾಡುವ ಗರಿಷ್ಟ ಪ್ರಯತ್ನ ಇದಾಗಲಿದೆ.
ಅಂತರ್‌ನದಿ ಜೋಡಣೆ ಯೋಜನೆಯ ಸ್ವರೂಪ
ದೌಧಾನ್ ಅಣೆಕಟ್ಟು (Dhaudhan Dam) ಹಾಗೂ ಕಾಲುವೆ ನಿರ್ಮಾಣ ಮಾಡಿ ಕೆನ್ ನದಿಯ ನೀರನ್ನು ಬೆಟ್ಟಾ ನದಿಗೆ ಹರಿಸಲಾಗುತ್ತಿದೆ. ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ, ಲೋವರ್ ಓಆರ್‌ಆರ್ ಯೋಜನೆ, ಕೋಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ವಿವಿಧೋದ್ದೇಶ ಯೋಜನೆಗಳನ್ನು ಇದು ಒಳಗೊಂಡಿದೆ.
ಪ್ರಯೋಜನಗಳು
10.62 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಮತ್ತು 62 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಲಭಿಸಿದೆ. 103 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದನೆಯೂ ಕೂಡ ಆಗಲಿದೆ. ಮಧ್ಯಪ್ರದೇಶದ 9 ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಈ ಯೋಜನೆಯು ನೀರಿನ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಉಪಯುಕ್ತವಾಗಲಿದೆ.
ಯೋಜನೆಯ ಪರಿಣಾಮಗಳು
ಕೆನ್ ಮತ್ತು ಬೆಟ್ಟಾ ನದಿಗಳ ಜೋಡಣೆಯಿಂದ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶವು ನಾಶವಾಗಲಿದೆ ಎಂಬುದು ಅನೇಕ ಪರಿಸರವಾದಿಗಳ ವಾದವಾಗಿದೆ. ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಅಧಿಕ ವೆಚ್ಚ ಆಗಲಿದೆ.
ರಾಷ್ಟ್ರೀಯ ಅಂತರ್ ನದಿ ಜೋಡಣೆಯ ದೂರದೃಷ್ಟಿ ಯೋಜನೆ (NATIONAL PERSPECTIVE PLAN FOR INTERLINKING OF RIVERS)
ರಾಷ್ಟ್ರೀಯ ದೂರದೃಷ್ಟಿ ಯೋಜನೆ ಅಥವಾ ರಾಷ್ಟ್ರೀಯ ನದಿ ಸಂಪರ್ಕಿತ ಯೋಜನೆ (National River Linking Project) ಎಂಬುದು ನೀರಿನ
ಕೊರತೆಯಿರುವ ಪ್ರದೇಶಗಳಿಗೆ ಹೆಚ್ಚು ನೀರು ಇರುವ ಪ್ರದೇಶಗಳಿಂದ ಸಂಪರ್ಕಿಸುವುದು. ಪ್ರವಾಹದಿಂದ ಉಂಟಾದ ಹೆಚ್ಚುವರಿ ನೀರನ್ನು ಕೊರತೆಯಿರುವ ಪ್ರದೇಶಗಳಿಗೆ ಪೂರೈಸುವುದು. ಇದನ್ನು ಅಂತರ್ ಜಲ ವರ್ಗಾವಣಾ ಯೋಜನೆ ಎನ್ನಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯ ರಾಷ್ಟ್ರೀಯ ದೂರದೃಷ್ಟಿ ಯೋಜನೆಯ ಅನ್ವಯ 1980ರ ನಂತರ ಭಾರತದಲ್ಲಿ ಒಟ್ಟು 30 ನದಿ ಸಂಪರ್ಕಿತ ಯೋಜನೆಗಳ ಸಾಧ್ಯತಾ ವರದಿಯು ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಇವುಗಳಲ್ಲಿ 16 ಪರ್ಯಾಯ ಪ್ರಸ್ಥಭೂಮಿ, 14 ಹಿಮಾಲಯನ್ ಪ್ರಾಂತ್ಯಗಳಿಗೆ ಸಂಬಂಧಿಸಿವೆ.