2020ರ ಸಾಲಿನ 30ನೇ ಸರಸ್ವತಿ ಸಮ್ಮಾನ್ ಸಾಹಿತ್ಯ ಪ್ರಶಸ್ತಿಗೆ ಮರಾಠಿ ಲೇಖಕ ಶರಣ್‌ಕುಮಾರ್ ಅಂಬಾಲೆ ಅವರ ಸನಾತನ ಕೃತಿಯು ಆಯ್ಕೆಯಾಗಿದೆ. ಈ ಮೂಲಕ ಅಂಬಾಲೆ ಅವರು 15 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಪಡೆಯಲಿದ್ದಾರೆ. 2018 ರಲ್ಲಿ ಅಡುಗಡೆಯಾಗಿರುವ ಸನಾತನ ಕೃತಿಯು ದಂತ ಹೋರಾಟದ ಸಾಮಾಜಿಕ ಮತ್ತು ಐತಿಹಾಸಿಕ ದಾಖಲೆಯಾಗಿ ಮಹತ್ವತೆಯನ್ನು ಪಡೆದಿದೆ. ಕೆ.ಕೆ. ಜರ್ಲಾ ಪೌಂಡೇಷನ್ ಸಂಸ್ಥೆಯು ಪ್ರತೀ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೃತಿಗಳಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳನ್ನು ನೀಡುತ್ತಿದೆ. 2019ನೇ ಸಾಲಿನ 29ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಹಿಂದಿ ಸಾಹಿತಿ ವಾಸುದೇವರವರ ಕೃತಿಗೆ ಚೆಕ್ ಬುಕ್ ನೀಡಲಾಗಿತ್ತು
ಸರಸ್ವತಿ ಸಮ್ಮಾನ್ ಪ್ರಶಸ್ತಿ - ಸಾಹಿತ್ಯ ಕ್ಷೇತ್ರದ ಪ್ರಶಸ್ತಿ
*ಆರಂಭ: 1991 (ಕೃಷ್ಣ ಕುಮಾರ್ ಬಿರ್ಲಾ ಅವರಿಂದ ನವದೆಹಲಿಯಲ್ಲಿ ಆರಂಭ)
* ಸ್ಥಾಪಕರು: ಕೆ.ಕೆ. ಬಿರ್ಲಾ ಫೌಂಡೇಷನ್ * ಪ್ರಶಸ್ತಿಯ ಅರ್ಹತೆ: ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳ ಉತ್ತಮ ಸಾಹಿತ್ಯ ರಚನೆಯ ಕೃತಿಗಳಿಗೆ ನೀಡಲಾಗುತ್ತದೆ.
* ಪ್ರಶಸ್ತಿಯ ಮೊತ್ತ : 15 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ, ಫಲಕ.
ಶರಣಕುಮಾರ ಲಿಂಬಾಲೆ ಬಗ್ಗೆ ಮಾಹಿತಿ
2020ರ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯದ ಶರಣ್ ಕುಮಾರ್ (Sharankumar Limbale) ಅವರು ಮರಾಠಿ ಭಾಷೆಯ ಲೇಖಕ, ಕವಿ ಮತ್ತು ಸಾಹಿತ್ಯ ವಿಮರ್ಶಕ, ಮರಾಠಿ ದಲಿತ ಸಾಹಿತ್ಯ ಮತ್ತು ಅಮೆರಿಕಾದ ಕಪ್ಪು ಸಾಹಿತ್ಯದ ನಡುವಿನ ಹೋಲಿಕೆಗಾಗಿ ಇವರು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದರು. 40ಕ್ಕೂಹೆಚ್ಚು ಪುಸ್ತಕಗಳನ್ನು ಇವರು ಬರೆದಿದ್ದಾರೆ.
ಇವರ ಆತ್ಮಚರಿತ್ರೆಯಾದ Akkarmashi ಎಂಬುದು ಇಂಗ್ಲಿಷ್ ಭಾಷೆ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ.
ಸನಾತನ ಕೃತಿಯ ಬಗ್ಗೆ ಮಾಹಿತಿ:-
ಮರಾಠಿ ಲೇಖಕ ಶರಣ್‌ಕುಮಾರ್ ಅವರಿಂದ ಮರಾಠಿ ಭಾಷೆಯಲ್ಲಿ ರಚಿತವಾದ ಸನಾತನ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿತ್ತು. ಇದು ದಲಿತ ಹೋರಾಟದ ಸಾಮಾಜಿಕ ಮತ್ತು ಐತಿಹಾಸಿಕ ಘಟನೆಗಳನ್ನು ತಿಳಿಸುವುದು. 2020ರ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಈ ಕಾದಂಬರಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಸನಾತನ ಕಾದಂಬರಿಯು ಅಸ್ಪೃಶ್ಯರ ಸಾಮಾಜಿಕ, ಸಾಂಸ್ಕೃತಿಕ ಹೋರಾಟದ ಕಥೆಯನ್ನು ವಿಶೇಷ ಶೈಲಿಯಲ್ಲಿ ಬಿಂಬಿಸಿದೆ. ಲೋಕಸಭಾ ಮಾಜಿ ಸೆಕ್ರೆಟರಿ ಜನರಲ್ ಸುಭಾಷ್ ಕಶ್ಯಪ್ ಅವರ ನೇತೃತ್ವದ ವಿದ್ವಾಂಸರ ಆಯ್ಕೆ ಸಮಿತಿಯು ಲಿಂಬಾಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಸಾಹಿತಿಗಳು
ಎಸ್.ಎಲ್. ಭೈರಪ್ಪ: ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪರವರ 'ಮಂದ್ರಾ' ಕೃತಿಗೆ 2010ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಎಸ್.ಎಲ್. ಭೈರಪ್ಪನವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡ ಸಾಹಿತಿ, 2016 ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಗೌರವವನ್ನು ನೀಡಿ ಗೌರವಿಸಿದೆ. 2017 ಕ.ಸಾ.ಪ ಮತ್ತು ಬಿಎಂಟಿಸಿ ಸಹಭಾಗಿತ್ವದಲ್ಲಿ ನೀಡುವ ನೃಪತುಂಗ ಪ್ರಶಸ್ತಿ ಲಭಿಸಿತ್ತು. 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿವಿಯು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಿತ್ತಿ ಎಂಬುದು ಭೈರಪ್ಪ ಅವರ ಆತ್ಮಚರಿತ್ರೆಯಾಗಿದೆ. 2020ರ ಅಕ್ಟೋಬರ್‌ನಲ್ಲಿ ಇವರ ಅಂಚು ಕಾದಂಬರಿಯು ಇಂಗ್ಲಿಷ್‌ಗೆ ಆರ್.ರಂಗನಾಥ್ ಪ್ರಸಾದ್ ಅವರಿಂದ ಭಾಷಾಂತರಗೊಂಡಿದೆ.
ಎಂ. ವೀರಪ್ಪ ಮೊಯ್ಲಿ: ಕನ್ನಡದ ಸಾಹಿತಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿರವರ “ಶ್ರೀ ರಾಮಾಯಣ ಮಹಾನ್ವೇಷಣಂ” ಕೃತಿಗೆ 2014ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಎಂ.ವೀರಪ್ಪ ಮೊಯ್ಲಿ ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡದ 2ನೇ ಸಾಹಿತಿ ಎನಿಸಿದ್ದಾರೆ. ವೀರಪ್ಪ ಮೊಯ್ಲಿ ಅವರ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯಕ್ಕೆ 2020ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2007 ರಲ್ಲಿ ರಾಮಾಯಣ ಮಹಾನ್ವೇಷಣಂ ಕೃತಿಗೆ ಮೂರ್ತಿದೇವಿ ಪ್ರಶಸ್ತಿ ಲಭಿಸಿದೆ.
ಕೆ.ಕೆ.ಜರ್ಲಾ ಫೌಂಡೇಷನ್
ಕೃಷ್ಣಕುಮಾರ್ ಬಿರ್ಲಾ ಅವರಿಂದ 1991ರಲ್ಲಿ ದೆಹಲಿಯಲ್ಲಿ ಕೆ.ಕೆ.ಬಿರ್ಲಾ ಪೌಂಡೇಷನ್ ಸ್ಥಾಪನೆಗೊಂಡಿತು. ಈ ಫೌಂಡೇಷನ್ ಮೂಲಕ ಸಾಹಿತ್ಯದ ಉತ್ತೇಜನ, ಕಲೆ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ KRISHNMAR BIRLA ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಈ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಮುಖ ಪ್ರಶಸ್ತಿಗಳು: ಸರಸ್ವತಿ ಸಮ್ಮಾನ್, ವ್ಯಾಸ ಸಮ್ಮಾನ್, ಬಿಹಾರಿ ಪುರಸ್ಕಾರ್, ಶಂಕರ್ ಪುರಸ್ಕಾರ್, ವಾಚಸ್ಪತಿ ಪುರಸ್ಕಾರ, ವೈಜ್ಞಾನಿಕ ಸಂಶೋಧನೆಗೆ ಜಿ.ಡಿ.ಬಿರ್ಲಾ ಪ್ರಶಸ್ತಿ ನೀಡಲಾಗುತ್ತದೆ.
No comments:
Post a Comment