ಪೀಠಿಕೆ: ಕಲ್ಲಿದ್ದಲು ಒಂದು ಸುಲಭವಾಗಿ ಉರಿಯುವ ಸಾವಯವ (ಜೈವಿಕಾಂಶ) ವಸ್ತುವಾಗಿದೆ. ಇಂಗಾಲವು ಪ್ರಧಾನವಾಗಿರುವ ಈ ಇಂಧನ ಖನಿಜವು ಕಣಶಿಲೆಗಳಲ್ಲಿ ಕಂಡು ಬರುತ್ತದೆ, ಕಲ್ಲಿದ್ದಲು ದಹಿಸುವಂತಹ ಬಾಷ್ಪಾಂಶ, ತೇವಾಂಶ, ಇಂಗಾಲ ,ಜಲಜನಕ ಮತ್ತು ಬೂದಿಗಳನ್ನು ವಿವಿಧ ಪ್ರಮಾಣದಲ್ಲಿ ಹೊಂದಿರುತ್ತದೆ.
ಉತ್ಪತ್ತಿ: ಕಲ್ಲಿದ್ದಲು ಜೈವಿಕಾಂಶಗಳಿಂದ ಉತ್ಪತ್ತಿಯಾದುದು, ಭೂಕಲ್ಪ ಯುಗವಾದ ಕಾರ್ಬೋನಿ ಫೆರಸ್ ಅವಧಿಯಲ್ಲಾದ ಪೃಥ್ವಿಯ ಚಿಪ್ಪಿನ ಸ್ಥಾನಪಲ್ಲಟದಿಂದ ಸಸ್ಯವರ್ಗವು ಭೂ ಒಡಲಿನ ಕೆಸರು ಅಥವಾ ಮಡ್ಡಿಗಳ ತಳದಲ್ಲಿ ಹುದುಗಿ ಹೋಯಿತು. ಹೀಗೆ ಹುದುಗಿ ಹೋಗಿದ್ದ ಸಸ್ಯವರ್ಗವು ಅಧಿಕ ಉಷ್ಣಾಂಶ ಮತ್ತು ಒತ್ತಡಗಳಿಗೊಳಪಟ್ಟು ತರುವಾಯ ಕಲ್ಲಿದ್ದಲಾಗಿ ರೂಪಗೊಂಡಿತು.
ಮಹತ್ವ: ಭಾರತದಲ್ಲಿ ಒಟ್ಟು ವಿದ್ವತ್ ಶಕ್ತಿಯ ಬಳಕೆಯಲ್ಲಿ ಶೇ. 70 ರಷ್ಟು ಶಕ್ತಿಯು ಕಲ್ಲಿದ್ದಲಿನಿಂದ ಪೂರೈಕೆಯಾಗುತ್ತದೆ. ಇದರಲ್ಲಿ ಶೇ. 94 ಭಾಗದಷ್ಟು ಶಕ್ತಿಯನ್ನು ಕೈಗಾರಿಕೆಗಳು ಮತ್ತು ಶಕ್ತಿ ಸಾಧನಗಳು ಉಪಯೋಗಿಸಿಕೊಳ್ಳುತ್ತವೆ. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳು, ವಿವಿಧ ಪ್ರಕಾರದ ರಾಸಾಯನಿಕ ಉದ್ದಿಮೆಗಳು ದೇಶದಲ್ಲಿ ದೊರೆಯುವ ಕಲ್ಲಿದ್ದಲನ್ನು ಬಹುವಾಗಿ ಅವಲಂಬಿಸಿರುತ್ತವೆ. ಕಲ್ಲಿದ್ದಲು ಒಂದು ಪ್ರಮುಖ ಶಕ್ತಿ ಸಾಧನೆ ಹಾಗೂ ಅನೇಕ ರಾಸಾಯನಿಕ ಉದ್ದಿಮೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವುದಲ್ಲದೇ, ಅನೇಕ ಉಪೋತತಿ ವಸ್ತುಗಳನ್ನು ಪೂರೈಸುತ್ತದೆ. ಉದಾ: ಡಾಂಬರು, ಅನಿಲ, ಕೋಲಗ್ಯಾಸ, ಜಿನ್ಹಾಲ್ ಇತ್ಯಾದಿ. ಈ ಉಪವಸ್ತುಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಕಚ್ಚಾ ನ್ಯಾಪ್ತಲಿನ್, ಅಮೋನಿಯಾ ಪದಾರ್ಥಗಳನ್ನಾಗಿ ಬಳಸಲಾಗುವುದು. ಉದಾ: ರಾಸಾಯನಿಕ ಕೈಗಾರಿಕೆಗಳು, ಬಣ್ಣಗಳ ತಯಾರಿಕೆ, ಕೃತಕ ರಬ್ಬರ್, ಪ್ಲಾಸ್ಟಿಕ್ ಮತ್ತು ಕೀಟನಾಶಕಗಳು ಇತ್ಯಾದಿ.
ಇದು ನಿಮಗೆ ಗೊತ್ತೆ:
ಬಹುಉಪಯೋಗಿ ಗುಣಗಳನ್ನಾಧರಿಸಿ ಕಲ್ಲಿದ್ದಲನ್ನು ಕಪ್ಪು ವಜ್ರ" ಎಂದು ಕರೆಯಲಾಗಿದೆ.
ಕಲ್ಲಿದ್ದಲಿನ ಪ್ರಕಾರಗಳು
ಸಂಗಾಲದ ಪ್ರಮಾಣ, ಬಣ್ಣ ಮತ್ತು ಶಾಖದ ಪ್ರಮಾಣ ಮೊದಲಾದವುಗಳನ್ನಾಧರಿಸಿ ಕಲ್ಲಿದ್ದಲನ್ನು ನಾಲ್ಕು ಪ್ರಕಾರಗಳನ್ನಾಗಿ ವಿಂಗಡಿಸಬಹುದು. ಅವುಗಳೆಂದರೆ 1) ಅಂತಸೈಟ್ 11) ಬಿಟುಮಿನಸ್ iii) ಲಿಗ್ನೆಟ್ ಮತ್ತು iv) ಪೀಟ್,
1) ಆಂತ್ರಸೈಟ್ : ಇದು ಅತ್ಯಂತ ಶ್ರೇಷ್ಠ ದರ್ಜೆಯ ಕಲ್ಲಿದ್ದಲು, ಇದರಲ್ಲಿ ಶೇ. 80 ರಿಂದ 90 ಭಾಗ ಇಂಗಾಲವಿರುತ್ತದೆ. ಇದರ ಬಣ್ಣ ಕಪ್ಪು, ಒತ್ತೊತ್ತಾದ ಕಣಗಳಿಂದ ಕೂಡಿದೆ ಮತ್ತು ಕಠಿಣವಾಗಿರುತ್ತದೆ. ಆಗ್ನಿ ಸ್ಪರ್ಷಕ್ಕೆ ಬೇಗನೆ ಹತ್ತಿಕೊಳ್ಳದಿದ್ದರೂ ಒಮ್ಮೆ ಹತ್ತಿಕೊಂಡ ಮೇಲೆ ಹೆಚ್ಚು ಕಾಲ ನೀಲಿ ಜ್ವಾಲೆಗಳಿಂದ ಉರಿದು ಹೆಚ್ಚು ಶಾಖವನ್ನು ನೀಡಿ ಹೊಗೆ ರಹಿತ ಮತ್ತು ಕಡಿಮೆ ಬೂದಿಯನ್ನು ಬಿಡುಗಡೆ ಮಾಡುತ್ತದೆ. ಭಾರತದಲ್ಲಿ, ಇದರ ನಿಕ್ಷೇಪದ ಪ್ರಮಾಣ ಕಡಿಮೆ, ಅದು ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಂಚಿಕೆಯಾಗಿರುತ್ತದೆ. ಈ ಕಲ್ಲಿದ್ದಲನ್ನು ಸೆಂಟ್ರಲ್ ಹೀಟಿಂಗ್, ಹಡಗು ಮತ್ತು ಬಾಯಲರ್‌ಗಳಲ್ಲಿ ಉಪಯೋಗಿಸಲಾಗುವುದು.
1) ಬಿಟುಮಿನಸ್ - ಶಾಖಕ್ಕೊಳಪಡಿಸಿದ ತರುವಾಯ ಬಿಟಮಿನ್ ಬಿಡುಗಡೆಯಾಗುವ ಒಂದು ವಿಧದ ಕಲ್ಲಿದ್ದಲನ್ನು ಬಿಟುಮಿನಸ್' ಎಂದು ಕರೆಯಲಾಗಿದೆ, ಇದು ಶೇ. 50 ರಿಂದ 80 ಭಾಗ ಇಂಗಾಲವನ್ನು ಹೊಂದಿದೆ ಮತ್ತು ಅಪರಿಮಿತವಾಗಿ ದೊರೆಯುತ್ತದೆ. ಸುಲಭವಾಗಿ ಹೊತ್ತಿ ಉರಿಯಬಲ್ಲದು ಮತ್ತು ಸಾಕಷ್ಟು ಶಾಖವನ್ನು ಉತ್ಪತ್ತಿ ಮಾಡುವುದು. ಇದು ಸಾಧಾರಣ ಕಠಿಣ ಮತ್ತು ಕಪ್ಪು ವರ್ಣದಿಂದ ಕೂಡಿದೆ. ಈ ವಿಧದ ಕಲ್ಲಿದ್ದಲಿನಿಂದ ಕೋಕಿಂಗ್ ಕಲ್ಲಿದ್ದಲು, ಕಲ್ಲಿದ್ದಲು ಅನಿಲ ಹಾಗೂ ಉಗಿ ಕಲ್ಲಿದ್ದಲುಗಳನ್ನು ಪಡೆಯಲಾಗುವುದು. ಇದನ್ನು ಹೆಚ್ಚಾಗಿ ಕಬ್ಬಿಣ, ಉಕ್ಕಿನ ಕೈಗಾರಿಕೆ ಮತ್ತು ಥರ್ಮಲ್ ವಿದ್ಯುತ್ ಉತ್ಪಾದನೆಗಾಗಿ ಉಪಯೋಗಿಸಲಾಗುವುದು, ಭಾರತದಲ್ಲಿ ಈ ವಿಧದ ಕಲ್ಲಿದ್ದಲು ಅಪಾರವಾಗಿ ಲಭ್ಯವಿದೆ ಮತ್ತು ಅತಿ ಪ್ರಮುಖವಾದುದು.
iii) ಲಿಗ್ರೆಟ್ ಇದು ಕಡಿಮೆ ದರ್ಜೆಯ ಕಲ್ಲಿದ್ದಲು, ಏಕೆಂದರೆ ಇದು ಹೆಚ್ಚು ಸಸ್ಯ ಮತ್ತು ಮರದ ಕಟ್ಟಿಗೆಯಂತಹ ವಸ್ತುಗಳನ್ನು ಹೊಂದಿರುತ್ತದೆ. ಇದರಲ್ಲಿ ಇಂಗಾಲಂಶದ ಪ್ರಮಾಣ ಶೇ. 40-55 ಭಾಗ ವಿರುತ್ತದೆ. ಇದು ಕಪ್ಪು ಬಣ್ಣದಿಂದ ಕಂದು ವರ್ಣಿವನ್ನು ಹೊಂದಿರುತ್ತದೆ. ಇದು ಹೆಚ್ಚು ತೇವಾಂಶವನ್ನು ಹೊಂದಿರುವುದರಿಂದ ಕಡಿಮೆ ಶಾಖವನ್ನು ನೀಡಿ, ಹೆಚ್ಚು ಹೊಗೆ ಮತ್ತು ಬೂದಿಯನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಇದನ್ನು ಸಾಮಾನ್ಯವಾಗಿ ಕೃತಕ ನಾರು ತಯಾರಿಕೆ, ರಸಗೊಬ್ಬರ ಕೈಗಾರಿಕೆ ಮತ್ತು ಶಾಖೋತ್ಪನ್ನ ವಿದ್ಯುಚ್ಛಕ್ತಿ ಉತ್ಪಾದಿಸಲಿಕ್ಕೆ ಉಪಯೋಗಿಸಲಾಗುವುದು.
iv) ಪೀಟ್: ಇದು ಸಸ್ಯಾಂಶ ವಸ್ತು ಕಲ್ಲಿದ್ದಲಾಗಿ ಪರಿವರ್ತನೆಯಾಗುವ ಪ್ರಾಥಮಿಕ ಹಂತದ್ದಾಗಿದೆ. ಇದು ಅತ್ಯಂತ ಕಡಿಮೆ ದರ್ಜೆಯ, ಕಲ್ಲಿದ್ದಲಾಗಿದ್ದು, ಇದರಲ್ಲಿ ಶೇ. 40 ರಷ್ಟು ಇಂಗಾಲಂಶವಿರುತ್ತದೆ. ಇದು ಕಪ್ಪು ಅಥವಾ ಕಂದು ಬಣ್ಣವನ್ನು ಹೊಂದಿದ್ದು, ಉರಿಸಿದಾಗ ಕಡಿಮೆ ಶಾಖವನ್ನು ಬಿಡುಗಡೆ ಮಾಡುವುದು, ಆದರೆ ಹೆಚ್ಚು ಹೊಗೆ ಮತ್ತು ಬೂದಿಯನ್ನು ಬಿಡುಗಡೆ ಮಾಡುವುದು, ಹೀಗಾಗಿ ಇದನ್ನು ಹೆಚ್ಚಾಗಿ ಥರ್ಮಲ್ ವಿದ್ಯುಚ್ಛಕ್ತಿ ತಯಾರಿಕೆ ಮತ್ತು ರಾಸಾಯನಿಕ ಗೊಬ್ಬರದ ಕೈಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಕಲ್ಲಿದ್ದಲಿನ ನಿಕ್ಷೇಪ ಮತ್ತು ಹಂಚಿಕೆ : ಭಾರತದಲ್ಲಿ ದೊರೆಯಬಹುದಾದ ಕಲ್ಲಿದ್ದಲು ಪ್ರದೇಶಗಳನ್ನು ಅದರ ಉತ್ಪತ್ತಿ ಹಾಗೂ
ಕಾಲದ ಆಧಾರದ ಮೇಲೆ ಎರಡು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. 1) ಗೊಂಡ್ವಾನ ಕಲ್ಲಿದ್ದಲು ಪ್ರದೇಶ ಮತ್ತು i
ಟರ್ಷಿಯರಿ ಕಲ್ಲಿದ್ದಲು ಪ್ರದೇಶ, ವ್ಯಾಪಕವಾಗಿ ಹಂಚಿಕೆಯಾಗಿದೆ. ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 98 ಮತ್ತು ಒಟ್ಟು ಉತ್ಪಾದನೆಯಲ್ಲಿ ಶೇ. 99 ಭಾಗವನ್ನು ಹೊಂದಿರುತ್ತದೆ. ಕಲ್ಲಿದ್ದಲು ಮುಖ್ಯವಾಗಿ ಬಿಟುಮಿನಸ್ ಪ್ರಕಾರದ್ದಾಗಿರುತ್ತದೆ. ಇದು ಹೆಚ್ಚಾಗಿ ದಾಮೋದರನದಿ, ಸೊನಾನದಿ, ಮಹಾನದಿ, ಗೋದಾವರಿನದಿ ಮತ್ತು ವಾರ್ಧಾನದಿ ಕಣಿವೆಗಳಲ್ಲಿ ಕೇಂದ್ರೀಕೃತವಾಗಿದೆ. ಈ ಕಲ್ಲಿದ್ದಲು ಪ್ರದೇಶವು ಮುಖ್ಯವಾಗಿ ಜಾರ್ಖಂಡ್, ಒಡಿಶಾ, ಪಶ್ಚಿಮಬಂಗಾಳ, ಛತ್ತಿಸಗರ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಂಚಿಕೆಯಾಗಿದೆ.
i) ಗೊಂಡ್ವಾನ ಕಲ್ಲಿದ್ದಲಿನ ಪ್ರದೇಶ : ಗೊಂಡ್ವಾನ ಕಲ್ಲಿದ್ದಲು ನಿಕ್ಷೇಪದ ಮೊತ್ತ ಮತ್ತು ಉತ್ಪಾದನೆಗಳಲ್ಲಿ ಭಾರತದಲ್ಲಿ
ii) ಟರ್ಷಿಯರಿ ಕಲ್ಲಿದ್ದಲಿನ ಪ್ರದೇಶ: ಟರ್ಷಿಯರಿ ಕಲ್ಲಿದ್ದಲು ಪ್ರದೇಶವು ಪರ್ಯಾಯ ಪ್ರಸ್ಥಭೂಮಿಯನ್ನು ಹೊರತುಪಡಿಸಿ
ಹಂಚಿಕೆಯಾಗಿದೆ. ಸಾಮಾನ್ಯವಾಗಿ ಇದರಲ್ಲಿ ಇಂಗಾಲದ ಪ್ರಮಾಣ ಕಡಿಮೆ ಇದ್ದು, ತೇವಾಂಶ ಮತ್ತು ಸಲರ್‌ಗಳ ಪ್ರಮಾಣ ಹೆಚ್ಚು, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಜಮ್ಮುಕಾಶ್ಮೀರ, ಉತ್ತರ ಪ್ರದೇಶ, ರಾಜಸ್ತಾನ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಈ ಪ್ರದೇಶವು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪ ಮತ್ತು ಉತ್ಪಾದನೆಯಲ್ಲಿ ಅನುಕ್ರಮವಾಗಿ ಶೇ. 2 ಮತ್ತು ಶೇ. 1 ಭಾಗವನ್ನು ಹೊಂದಿರುತ್ತದೆ.
ಹಂಚಿಕೆ: ಭಾರತದಲ್ಲಿ ಕಲ್ಲಿದ್ದಲಿನ ಹಂಚಿಕೆಯು ಕೆಲವೇ ರಾಜ್ಯಗಳಲ್ಲಿ ವ್ಯಾಪಕವಾಗಿ ಕೇಂದ್ರೀಕೃತವಾಗಿರುತ್ತದೆ. ಅಪಾರವಾದ ಕಲ್ಲಿದ್ದಲು ನಿಕ್ಷೇಪವು ಜಾರ್ಖಂಡ್, ಛತ್ತೀಸಗರ್, ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮಬಂಗಾಳಗಳಲ್ಲಿ ಹಂಚಿಕೆಯಾಗಿದೆ. ಈ ರಾಜ್ಯಗಳು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 96 ಭಾಗವನ್ನು ಹೊಂದಿದೆ. ಉಳಿದ ಕಲ್ಲಿದ್ದಲಿನ ನಿಕ್ಷೇಪವು ಉತ್ತರಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಂಚಿಕೆಯಾಗಿದೆ. ಇಂದು ಪ್ರಮುಖ ಕಲ್ಲಿದ್ದಲನ್ನು ಉತ್ಪಾದಿಸುವ ರಾಜ್ಯಗಳೆಂದರೆ ಜಾರ್ಖಂಡ್, ಛತ್ತೀಸಗರ್, ಒಡಿಶಾ ಮತ್ತು ಮಧ್ಯಪ್ರದೇಶ, ಇವು ದೇಶದ ಒಟ್ಟು ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ. 84.3 ಭಾಗವನ್ನು ಪೂರೈಸುತ್ತವೆ.
ಛತ್ತೀಸ್ಗರ್ : ಕಲ್ಲಿದ್ದಲು ನಿಕ್ಷೇಪದಲ್ಲಿ 3ನೆಯ ಸ್ಥಾನ ಹೊಂದಿದ್ದರೂ ಉತ್ಪಾದನೆಯಲ್ಲಿ ದೇಶದ ಪ್ರಥಮ ಸ್ಥಾನದಲ್ಲಿದೆ. ಸುರ್ಗುಜ,ಬಿಲಾಸ್ತುರ ಮತ್ತು ಕೊರ್ಬಗಳು ಪ್ರಮುಖ ಕಲ್ಲಿದ್ದಲು ಪ್ರದೇಶಗಳು,
ಜಾರ್ಖಂಡ್ : ದೇಶದ ಎರಡನೇ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ರಾಜ್ಯ ದೇಶದ ಶೇ.25.4 ಭಾಗ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಝರಿಯ,ಬೊಕಾರೊ,ಗಿರಿಧಿ,ಕರಣುರ,ರಾಮ್‌ಗರ್ ಮತ್ತು ರಾತ್ರೋಗಂಜ್ ಪ್ರಮುಖ ಕಲ್ಲಿದ್ದಲು ಪದೇಶಗಳು ಕಲ್ಲಿದ್ದಲು ಉತ್ಪಾದಿಸುವ ಇತರೆ ಧನಾದ್, ಹಜಾರಿಬಾಗ್, ದುಮ್ಮ ಮತ್ತು ಪಲಾಮ ಜಿಲ್ಲೆಗಳು. ಧನ್ಯಾದ ಜಿಲ್ಲೆಯ “ಝರಿಯಾ" ಕಲ್ಲಿದ್ದಲು ಪ್ರದೇಶವು ದೇಶದಲ್ಲೇ ಅತ್ಯಂತ ಹಳೆಯ ಮತ್ತು ಸಮೃದ್ಧ ಕಲ್ಲಿದ್ದಲು ಪ್ರದೇಶವಾಗಿದೆ. ಇದರ ವಿಸ್ತೀರ್ಣ ಸುಮಾರು 453 ಚ.ಕಿ.ಮೀ. ಇದ್ದು, ಇದನ್ನು ಅತ್ಯುತ್ತಮ ಲೋಹಾಂಶಭರಿತ ಕಲ್ಲಿದ್ದಲಿನ ಉಗ್ರಾಣ” ಎಂದು ಪರಿಗಣಿಸಲಾಗಿದೆ.
ಒಡಿಶಾ : ಭಾರತದ ಎರಡನೇಯ ಪ್ರಮುಖ ಕಲ್ಲಿದ್ದಲಿನ ನಿಕ್ಷೇಪವುಳ್ಳ ಪ್ರದೇಶವಾಗಿರುತ್ತದೆ. ಒಟ್ಟು ದೇಶದ ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 24.34 ಭಾಗವು ಈ ರಾಜ್ಯದಲ್ಲಿದೆ. ಆದರೆ ಇದು ಮೂರನೆಯ ಪ್ರಮುಖ ಕಲ್ಲಿದ್ದಲು ಉತ್ಪಾದಿಸುವ ರಾಜ್ಯವಾಗಿದೆ. ಪ್ರಮುಖ ಕಲ್ಲಿದ್ದಲು ಪ್ರದೇಶಗಳೆಂದರೆ, ಡಂಕನಾಲ್, ಸಾಂಬಲ್ಪುರ ಮತ್ತು ಸುಂದರಘಡ ಜಿಲ್ಲೆಗಳು, ಇವುಗಳಲ್ಲಿ ಡೆಂಕನಾಲ್ ಜಿಲ್ಲೆಯ “ತಲ್ವಾರ್" ಕಲ್ಲಿದ್ದಲು ಪ್ರದೇಶ ಅತಿ ಪ್ರಮುಖವಾದದ್ದು. ಇದರ ಕ್ಷೇತ್ರ ಸುಮಾರು 518 ಚ.ಕಿ.ಮೀ. ಗಳಾಗಿರುತ್ತದೆ.
ಮಧ್ಯಪ್ರದೇಶ: ಇದು ದೇಶದ ಒಟ್ಟು ಕಲ್ಲಿದ್ದಲಿನ ನಿಕ್ಷೇಪದಲ್ಲಿ ಶೇ. 8.31 ರಷ್ಟು ಹೊಂದಿದೆ. ದೇಶದಲ್ಲಿ ಕಲ್ಲಿದ್ದಲನ್ನು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ನಾಲ್ಕನೇಯದಾಗಿದೆ. ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು ಸಿಧಿ, ಶಹದೋಲ್, ದೆಟುಲ್, ಚಿಂದ್ವಾರ ಮತ್ತು ನರಸಿಂಗಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಂಚಿಕೆಯಾಗಿದೆ. ಶಹದೋಲ ಮತ್ತು ಸಿಧಿ ಜಿಲ್ಲೆಗಳಲ್ಲಿರುವ
"ಸಿಂಗೌಲಿ" ಕಲ್ಲಿದ್ದಲು ಪ್ರದೇಶವು ಅತ್ಯಂತ ವಿಶಾಲವಾಗಿದ್ದು, ಸುಮಾರು 300 ಕಿ.ಮೀ. ಉದ್ದಕ್ಕೆ ಹರಡಿದೆ. ಆಂಧ್ರಪ್ರದೇಶ: ಇದು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 7.6 ಭಾಗವನ್ನು ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು
ಪೂರ್ವ ಮತ್ತು ಪಶ್ಚಿಮ ಗೋದಾವರಿ, ಅದಿಲಾಬಾದ್, ಕರೀಂ ನಗರ, ವಾರಂಗಲ್ ಮತ್ತು ಖಮ್ಮಮ್ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ.
ಮಹಾರಾಷ್ಟ್ರ: ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು ಚಂದ್ರಾಪುರ ಜಿಲ್ಲೆಯ ವಾರ್ದನದಿ ಕಣಿವೆ, ಬೆಲ್ಲಾರಪುರ ಮತ್ತು ವಾರೋರ, ಯವತ್‌ಮಾಲ್ ಜಿಲ್ಲೆಯ ವುನ್ ಪ್ರದೇಶ ಹಾಗೂ ನಾಗಪುರ ಜಿಲ್ಲೆಯ ಕಾಂಪ್ಲಿ ಭಾಗಗಳಲ್ಲಿ ಹಂಚಿಕೆಯಾಗಿದೆ.
ಪಶ್ಚಿಮ ಬಂಗಾಳ: ಪಶ್ಚಿಮಬಂಗಾಳ ರಾಜ್ಯವು ದೇಶದ ಒಟ್ಟು ಕಲ್ಲಿದ್ದಲು ನಿಕ್ಷೇಪದಲ್ಲಿ ಶೇ. 10.43 ಭಾಗ ಮತ್ತು ಉತ್ಪಾದನೆಯಲ್ಲಿ ಶೇ. 4.5 ಭಾಗವನ್ನು ಹೊಂದಿದೆ. ಈ ರಾಜ್ಯದಲ್ಲಿ ಕಲ್ಲಿದ್ದಲು ನಿಕ್ಷೇಪವು ಹೆಚ್ಚಾಗಿ ಬಂಕುರ, ಬುರುದ್ವಾನ, ಬಿರಭೂಮ್ ಡಾರ್ಜಲಿಂಗ್ ಮತ್ತು ಜಲಪೈಗುರಿ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. "ರಾಣಿಗಂಜ್" ಈ ರಾಜ್ಯದ ಅತಿ ದೊಡ್ಡದಾದ ಪ್ರಸಿದ್ಧ ಕಲ್ಲಿದ್ದಲು ಗಣಿ ಪ್ರದೇಶವಾಗಿದೆ. ಇದರ ವಿಸ್ತೀರ್ಣ ಸುಮಾರು 1500 ಚ.ಕಿ.ಮೀ. ಇರುತ್ತದೆ.
ಉತ್ಪಾದನೆ : ಭಾರತದಲ್ಲಿ ಎಲ್ಲಾ ವಿಧದ ಒಟ್ಟು ಕಲ್ಲಿದ್ದಲು ನಿಕ್ಷೇಪ 293.50 ಬಿಲಿಯನ್ ಟನ್ನುಗಳೆಂದು ಭಾರತೀಯ ಭೂಗರ್ಭ ಸಮೀಕ್ಷಣಾ ಇಲಾಖೆ ಅಂದಾಜು ಮಾಡಿದೆ. 2012-13ರಲ್ಲಿ ಭಾರತವು 560.90 ಮಿ. ಟನ್ನು ಕಲ್ಲಿದ್ದಲನ್ನು ಉತ್ಪಾದಿಸಿತ್ತು. ಪ್ರಪಂಚದಲ್ಲಿ ಕಲ್ಲಿದ್ದಲು ಉತ್ಪಾದಿಸುವ ದೇಶಗಳಲ್ಲಿ ಚೀನ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಂತರ ಭಾರತ ಮೂರನೆಯ ಸ್ಥಾನದಲ್ಲಿದೆ. ಇದು ಪ್ರಪಂಚದ ಒಟ್ಟು ಕಲ್ಲಿದ್ದಲು ಉತ್ಪಾದನೆಯಲ್ಲಿ ಶೇ. 10.2 ಭಾಗವನ್ನು ಪೂರೈಸುತ್ತದೆ.
ವ್ಯಾಪಾರ ಭಾರತವು ತನ್ನ ಕೆಲವು ನೆರೆಯ ರಾಷ್ಟ್ರಗಳಿಗೆ ಅಲ್ಪ ಪ್ರಮಾಣದ ಕಲ್ಲಿದ್ದಲನ್ನು ರಫ್ತು ಮಾಡುತ್ತದೆ. ಉದಾ: ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾಗಳಿಂದ ಆಮದು ಮಾಡುಕೊಳ್ಳುತ್ತಿದೆ. ಭಾರತದಲ್ಲಿ ಉತ್ತಮ ದರ್ಜೆಯ ಕಲ್ಲಿದ್ದಲು ಇದ್ದು, ಅಂತಹ ಕಲ್ಲಿದ್ದಲಿನ ಆಮದು ಮುಂದುವರಿದಿದೆ.
No comments:
Post a Comment