ಸುಪ್ರೀಂ ಕೋರ್ಟಿನ ಮುಂದಿನ ಮತ್ತು 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಪೈಕಿ ಸೇವಾ ಹಿರಿತನದಲ್ಲಿ ಮೊದಲಿಗರಾಗಿರುವ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರ ಹೆಸರನ್ನು ಶಿಫಾರಸ್ಸು ಮಾಡಿ ಸುಪ್ರೀಂ ಕೋರ್ಟಿನ ಹಾಲಿ ಮತ್ತು 47ನೇ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಬೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿಜೆಐ ಹುದ್ದೆಯಿಂದ ನಿವೃತ್ತರಾಗುವವರು ತಮ್ಮ ನಂತರ ದೇಶದ ಅತ್ಯುನ್ನತ ನ್ಯಾಯಿಕ ಹುದ್ದೆಗೆ ಯಾರು
ಸೂಕ್ತ ಎಂಬುದನ್ನು ಶಿಫಾರಸ್ಸು ಮಾಡುವುದು ವಾಡಿಕೆಯಾಗಿದೆ. ಇದೇ ರೀತಿ ಹಾಲಿ ಸಿಜೆ ತಮ್ಮ ನಿವೃತ್ತಿಗೆ ಒಂದು ತಿಂಗಳು ಮೊದಲು ಉತ್ತರಾಧಿಕಾರಿಗಳ ಹೆಸರನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಕೂಡ ವಾಡಿಕೆಯಾಗಿ ನಡೆದು ಬಂದಿದೆ. ರಾಷ್ಟ್ರಪತಿಗಳಿಂದ 2021ರ ಏಪ್ರಿಲ್ 6 ರಂದು ನೂತನ ಸಿಜೆ ಎನ್.ವಿ.ರಮಣ ಅವರ ನೇಮಕಾತಿಯು ಅಂಗೀಕಾರವಾಗಿದ್ದು, ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಇದರನ್ವಯ ನ್ಯಾಯಮೂರ್ತಿ ಎನ್.ವಿ. ರಮಣ್ ರವರು ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ 2021ರ ಏಪ್ರಿಲ್ 24 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ 2021ರ ಏಪ್ರಿಲ್ 23 ರಂದು ನ್ಯಾಯಮೂರ್ತಿ ಎಸ್.ಎ. ಬೊಬ್ಬೆ ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರು ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿ ಎನ್.ವಿ.ರಮಣ್ ರವರು 2022ರ ಆಗಸ್ಟ್ 26 ರವರೆಗೂ ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ನೂತನ ಮತ್ತು 48ನೇ ಸಿಜೆ : ನ್ಯಾ. ಎನ್.ವಿ. ರಮಣ್ ನ್ಯಾಯಾಮೂರ್ತಿ ಎನ್.ವಿ. ರಮಣ್ ರವರು ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪನ್ನಾವರಂನವರು. 1957ರ ಆಗಸ್ಟ್ 27 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು 1983ರ ಫೆಬ್ರವರಿ 10 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಸರ್ಕಾರ ವಿವಿಧ ಕಾನೂನಾತ್ಮಕ ಸಮಿತಿಗಳಲ್ಲಿ ನ್ಯಾ. ಎನ್.ವಿ. ರಮಣ್ ರವರು ಕಾರ್ಯ ನಿರ್ವಹಿಸಿದ್ದಾರೆ. ಇವರು ಆಂಧ್ರಪ್ರದೇಶದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 2000ನೇ ಜೂನ್ 27 ರಂದು ಆಂಧ್ರ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾದರು. 2013ರ ಮಾರ್ಚ್ 10 ರಿಂದ ಮೇ 20 ರವರೆಗೆ ಆಂಧ್ರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. 2013ರ ಸೆಪ್ಟೆಂಬರ್ 2 ರಂದು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದ ಅವರು, 2014ರ ಫೆಬ್ರವರಿ 17 ರಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.
ನ್ಯಾಯಮೂರ್ತಿಗಳಾಗಿ ನೀಡಿದ ಮಹತ್ವದ ತೀರ್ಪುಗಳು ಕಛೇರಿಗಳಲ್ಲಿ ನೌಕರಿ ಮಾಡುವ ಪತಿಗಿಂತ ಗೃಹ ಕಾರ್ಯ ಮಾಡುವ ಪತ್ನಿಯ ದುಡಿಮೆ ಏನು ಕಡಿಮೆ ಇಲ್ಲ ಎಂಬ ತೀರ್ಪು ನೀಡಿದ್ದರು. ಜಮ್ಮು-ಕಾಶ್ಮೀರದಲ್ಲಿ ಇಂಟರ್‌ನೆಟ್ ಮರುಸ್ಥಾಪನೆ. ಸಿಜೆಐ ಕೂಡ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ನ್ಯಾಯಮೂರ್ತಿ ಎನ್.ವಿ.ರಮಣ್ ಕೂಡಾ ಒಬ್ಬರು.
ನ್ಯಾಯಮೂರ್ತಿ ರಮಣ್ ರವರಿಗೆ ಕ್ಲೀನ್‌ಚಿಟ್ : ನ್ಯಾ. ಎನ್.ವಿ. ರಮಣ್ ರವರ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ 2020ರ ಅಕ್ಟೋಬರ್ 6 ರಂದು ನೀಡಿದ್ದ ದೂರಿನ ಬಗ್ಗೆ ಆಂತರಿಕ ತನಿಖೆ ನಡೆದಿದ್ದು, ಆರೋಪದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕೆ ದೂರನ್ನು ವಜಾ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆಂತರಿಕ ತನಿಖೆ ಅತ್ಯಂತ ಗೌಪ್ಯ ವಿಷಯವಾದ ಕಾರಣ ಈ ಪ್ರಕ್ರಿಯೆಯ ಮಾಹಿತಿಗಳನ್ನು ಸಾರ್ವಜನಿಕಗೊಳಿಸಲಾಗದು ಎಂಬುದಾಗಿ ಮಾಹಿತಿ ನೀಡಿದೆ.
47ನೇ ಸಿಜೆ ಶರದ್ ಅರವಿಂದ್ ಬೊಬ್ಬೆ
2019ರ ನವೆಂಬರ್ 18 ರಿಂದ ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಎಸ್.ಎ. ಬೊಬ್ಬೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅಧಿಕಾರವಧಿಯು 2021ರ ಏಪ್ರಿಲ್ 23 ರಂದು ಅಂತ್ಯವಾಗಲಿದೆ. ಅಯೋಧ್ಯೆಯ ರಾಮಜನ್ಮಭೂಮಿ, ಬಾಬ್ರಿ ಕಟ್ಟಡ ವಿವಾದ, ಬಿಸಿಸಿಐ ಪ್ರಕರಣ, ಆಧಾರ್ ಮತ್ತಿತರ ಮಹತ್ವದ ಪ್ರಕರಣಗಳ ವಿಚಾರಣೆ ಪೀಠದಲ್ಲೂ ಬೊಬ್ಬೆ ಅವರು ಸೇವೆ ಸಲ್ಲಿಸಿದ್ದಾರೆ.
46ನೇ ಸಿಜೆ: ಅಸ್ಸಾಂ ರಾಜ್ಯದ ಮತ್ತು ಈಶಾನ್ಯ ಭಾಗದ ಮೊದಲ ನ್ಯಾಯಾಧೀಶರು ಖ್ಯಾತಿಯ ರಂಜನ್ ಗೊಗೋಯಿ ಅವರು 2018ರ ಅಕ್ಟೋಬರ್ 3 ರಿಂದ 2019ರ ನವೆಂಬರ್ 17ರವರೆಗೆ ಸೇವೆ ಸಲ್ಲಿಸಿದ್ದರು. ಇವರು 2020ರ ಮಾರ್ಚ್ 19 ರಿಂದ ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಹೊಂದಿದ್ದಾರೆ.
ಭಾರತದ ಸರ್ವೋಚ್ಛ ನ್ಯಾಯಾಲಯ (SUPREME COURT OF INDIA)
ಭಾರತದ ಸಂವಿಧಾನದಲ್ಲಿ ಅವಕಾಶ: ಭಾರತ ಸಂವಿಧಾನದ 5ನೇ ಭಾಗದ 4ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಗಳು.
ವಿಶೇಷತೆ: ಭಾರತ ಸಂವಿಧಾನದ ಪೋಷಕ ಮತ್ತು ಭಾರತದ ಅತ್ಯುನ್ನತ ನ್ಯಾಯಾಲಯವಾಗಿ ಕಾರ್ಯ ನಿರ್ವಹಣೆ. > ಸ್ಥಾಪನೆ: 1950 ಜನವರಿ 28,
* ಒಟ್ಟು ನ್ಯಾಯಾಧೀಶರ ಸಂಖ್ಯೆ: 34 (l-ಮುಖ್ಯ ನ್ಯಾಯಾಧೀಶ, 33 ಮಂದಿ ನ್ಯಾಯಾಧೀಶರು)
ಸ್ಥಾಪನೆ ಹಿನ್ನಲೆ: 1935ರ ಭಾರತ ಸರ್ಕಾರ ಕಾಯಿದೆಯಂತೆ ಫೆಡರಲ್ ಕೋರ್ಟ್ ಆಗಿ 1937 ಅಕ್ಟೋಬರ್ 1 ರಂದು ಅಸ್ಥಿತ್ವಕ್ಕೆ ಬಂದ ನ್ಯಾಯಾಲಯವು ಸಂವಿಧಾನ ಜಾರಿಗೆ ಬಂದ ನಂತರ ಸುಪ್ರಿಂಕೋರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.
ಸುಪ್ರಿಂಕೋರ್ಟ್‌ನ ಮುಖ್ಯ & ಇತರೆ ನ್ಯಾಯಾಧೀಶರ ನೇಮಕ, ರಾಜೀನಾಮೆ & ಪ್ರಮಾಣ ವಚನ: ಭಾರತದ ರಾಷ್ಟ್ರಪತಿಗಳು. ವೇತನ ನೀಡಿವೆ: ಕೇಂದ್ರ ಸರ್ಕಾರದ ಸಂಚಿತ ನಿಧಿ.
ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮಾಸಿಕ ವೇತನ : 2,80,000, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನ & ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವೇತನ 2,50,000 ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನ 2.25,000)
ಸುಪ್ರೀಂಕೋರ್ಟ್ ಕಟ್ಟಡದ ವಿಶೇಷತೆ
ಧೈಯವಾಕ್ಯ: “ಯಥೋ ಧರ್ಮಸ್ತತೋ ಜಯಹಾ", ಶಿಲಾನ್ಯಾಸ: ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ (1954 ಅಕ್ಟೋಬರ್ 29), ವಾಸ್ತುಶಿಲ್ಪ ಶೈಲಿ: ಇಂಡೋ-ಬ್ರಿಟಿಷ್ ಶೈಲಿ
ವಾಸ್ತುಶಿಲ್ಪ: ಗಣೇಶ್ ಬಿಕಾಜಿ ದಿಯೋಲಾಲಿಕಾರ್
ಉದ್ಘಾಟನೆ: 1958
* ಮೊದಲು ಸಂಸತ್ತಿನ ಚೇಂಬರ್ ಆಫ್ ಪ್ರಿನ್ಸಸ್‌ನಲ್ಲಿ ಸುಪ್ರಿಂಕೋರ್ಟ್‌ನ ಕಾರ್ಯಾಚರಣೆ ನಡೆಯುತ್ತಿತ್ತು.
No comments:
Post a Comment