2021 ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ 2021 Index of Economic Freedom

 2021 ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಭಾರತ 121ನೇ ಸ್ಥಾನ & ಅಗ್ರಸ್ಥಾನದಲ್ಲಿ ಸಿಂಗಾಪುರ

ಅಮೆರಿಕಾದ ವಾಷಿಂಗ್‌ಟನ್ ಮೂಲದ ಥಿಂಕ್ ಟ್ಯಾಂಕ್ ಸಂಸ್ಥೆಯಾದ “ದಿ ಹಂಟೇಜ್ ಫೌಂಡೇಶನ್" ಹಾಗೂ "ವಾಲ್ ಸ್ಟ್ರೀಟ್ ಜರ್ನಲ್ ಅವರು 2021ನೇ ಸಾಲಿನ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ (Economic Freedom Index) ವನ್ನು 2021ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದು, 2019ರ ಜುಲೈನಿಂದ 2020ರ ಜೂನ್‌ವರೆಗಿನ ಮಾಹಿತಿ ಅನ್ವಯ ಭಾರತವು 121ನೇ ಸ್ಥಾನ (56.5)ದನ್ನು ಪಡೆದಿದೆ. ಹಾಗೂ

ಎಷ್ಯಾ ಫೆಸಿಫಿಕ್ ವಿಭಾಗದ 40 ದೇಶಗಳ ಪೈಕಿ ಭಾರತವು 56,5 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದೆ. 2020ರ ವರದಿಯಲ್ಲಿ ಭಾರತವ

56.5 ಅಂಕಗಳೊಂದಿಗೆ 120ನೇ ಸ್ಥಾನ ಪಡೆದಿತ್ತು. ಮೊದಲ ಬಾರಿ ಹಾಂಕಾಂಗ್ ದೇಶವನ್ನು ಸಮೀಕ್ಷೆಗೆ ಒಳಪಡಿಸಿಲ್ಲ.

[ಸೂಚ್ಯಂಕದಲ್ಲಿ ಭಾರತ:- 2021ರ ಮಾರ್ಚ್‌ನಲ್ಲಿ ಪ್ರಕಟಗೊಂಡಿರುವ ಮುಕ್ತ ಆರ್ಥಿಕ ನೀತಿ ವರದಿಯಲ್ಲಿ ಭಾರತವು 121ನೇ ಸ್ಥಾನ ಪಡೆದಿದೆ. 56.5 ಅಂಕಗಳೊಂದಿಗೆ ಭಾರತವು ಸುಮಾರು ಮುಕ್ತವಲ್ಲದ್ದು (Mostly Unfree Category) ಎಂಬ ವರ್ಗೀಕರಣದಲ್ಲಿ ಕಂಡುಬಂದಿದೆ. ಕೋವಿಡ್-19ರ ಸಾಂಕಾಮಿಕ ಹರಡುವಿಕೆ ನಂತರ ಮೊದಲ ಬಾರಿ ಈ ಸೂಚ್ಯಂಕವು ಪ್ರಕಟವಾಗಿದೆ. ಉದ್ಯಮ ಸ್ವಾತಂತ್ರದಲ್ಲಿ ಭಾರತವು ಸುಧಾರಣೆ ಕಂಡರೂ ನ್ಯಾಯಾಂಗ ಪರಿಣಾಮಕಾರತ್ವ ಮತ್ತು ಇತರ ಮಾನದಂಡಗಳಲ್ಲಿನ ಕುಂಠಿತ ಬೆಳವಣಿಗೆಯು ದೇಶದ ಒಟ್ಟು ಬ್ಯಾಂಕಿಂಗ್‌ ಅಂಕದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ದೇಶದಲ್ಲಿ


ವಿತ್ತೀಯ ಆರೋಗ್ಯ, ಸರ್ಕಾರದ ನಿಯಮಾವಳಿಗಳ ಸದೃಢತೆ, ತೆರಿಗೆ ಸಂಹಿತೆಗಳ ಬದಲಾವಣೆ, ಹಣಕಾಸು ಸ್ವಾತಂತ್ರ್ಯ ಬದಲಾವಣೆಯ ಅಗತ್ಯತೆಗೆ ಸಲಹೆ ನೀಡಿದೆ.


ವಿಶ್ವದ ಅತಿ ಹೆಚ್ಚು ಮುಕ್ತ ಆರ್ಥಿಕ ವ್ಯವಸ್ಥೆ - ಸಿಂಗಾಪುರ ಹೆರಿಟೇಜ್ ಫೌಂಡೇಷನ್ ಮತ್ತು ವಾಲ್‌ ಸ್ಟ್ರೀಟ್ ಜರ್ನಲ್  ಪ್ರಕಟಿಸಿದ ವಿಶ್ವದ ಅತಿ ಹೆಚ್ಚು ಮುಕ್ತ ಆರ್ಥಿಕ ನೀತಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸಿಂಗಾಪುರ ದೇಶವು 89.7 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಸಿಂಗಾಪುರ ದೇಶದಲ್ಲಿ ಸರ್ಕಾರದ ವೆಚ್ಚ ವಿಭಾಗದಲ್ಲಿ ಕಂಡುಬಂದ ಸುಧಾರಣೆಯು ಸೂಚ್ಯಂಕದಲ್ಲಿ 0.3 ಅಂಕಗಳನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಂಡುಬಂದಿದೆ.


Post a Comment (0)
Previous Post Next Post