ವಿಶ್ವ ಸಂತೋಷ ಸೂಚಂಕ

 


2021ರ ವಿಶ್ವ ಸಂತೋಷ ಸೂಚ್ಯಂಕ (world Happiness Report) 9ನೇ ಆವೃತ್ತಿಯ ವರದಿಯು How Happy Their Citizen Perceive Themselves to Be ಶೀರ್ಷಿಕೆ ಅಡಿಯಲ್ಲಿ 2021ರ ಮಾರ್ಚ್ 20ರಂದು ಜಾಗತಿಕ ಸಂತೋಷ ಮಂಡಳಿಯು ಬಿಡುಗಡೆ ಮಾಡಿತು. ಜಗತ್ತಿನ 149 ರಾಷ್ಟ್ರಗಳ 2018-2020ರ ದತ್ತಾಂಶ ಆಧಾರದ ಮೇಲೆ ಸೂಚ್ಯಂಕವನ್ನು ಮತ್ತು 2020ರ ವರ್ಷದ ಮಾಹಿತಿಯನ್ನಾಧರಿಸಿ ವರದಿ ಸಿದ್ಧಪಡಿಸಲಾಗಿದ್ದು, ಈ ವರದಿಯಲ್ಲಿ ಭಾರತವು 3.819 ಅಂಕಗಳೊಂದಿಗೆ 139ನೇ ಸ್ಥಾನ ಪಡೆದಿದೆ. ಫಿನ್‌ಲ್ಯಾಂಡ್ ದೇಶವು 7.84 ಅಂಕಗಳೊಂದಿಗೆ ಸತತವಾಗಿ ನಾಲ್ಕನೇ ಬಾರಿ ವರದಿಯಲ್ಲಿ ಅಗ್ರಸ್ಥಾನ ಪಡೆದಿದೆ. 2020ರ ವರದಿಯಲ್ಲಿ ಭಾರತವು 144ನೇ ಸ್ಥಾಪ ಪಡೆದಿತ್ತು.


ವಿಶ್ವ ಸಂತೋಷ ಸೂಚ್ಯಂಕ?

    ಜಗತ್ತಿನ ವಿವಿಧ ರಾಷ್ಟ್ರಗಳ ಜನರ ವ್ಯಕ್ತಿಗತ ಯೋಗಕ್ಷೇಮ/ಕಲ್ಯಾಣ ಸ್ಥಿತಿಯನ್ನು ಮಾಪನ ಮಾಡುತ್ತದೆ. ಜನರು ಏಕೆ & ಹೇಗೆ ಕಲ್ಯಾಣ ಸ್ಥಿತಿಯನ್ನು ಹೊಂದಿದ್ದಾರೆ ಎಂಬುದರ ಮೇಲೆ ಸಿದ್ಧಪಡಿಸಲ್ಪಟ್ಟ ವರದಿಯಾಗಿದೆ. 2020ರ ಅವಧಿಯಲ್ಲಿ ಕೋವಿಡ್-19ರ ಪರಿಣಾಮವು ಜನರ ಜೀವನದ ಗುಣಮಟ್ಟ ಮತ್ತು ರಚನೆಯ ಮೇಲೆ ಉಂಟಾದ ಪರಿಣಾಮಗಳು, ಕೋವಿಡ್ ಸಾಂಕ್ರಾಮಿಕತೆ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ರೂಪಿಸಿದ ಕಾರ್ಯಪ್ರಗತಿ, ಮಾನವ ಜೀವನ ನಿರೀಕ್ಷೆ, ಸಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡಿದೆ.

    ಅಂತಾರಾಷ್ಟ್ರೀಯ ಸಂತೋಷ ದಿನ

ಮಾರ್ಚ್ 2021ರ ಮಾರ್ಚ್ 20 ರಂದು ಅಂತಾರಾಷ್ಟ್ರೀಯ ಸಂತೋಷ ದಿನವನ್ನು Happiness For All For ver, Keep Calm, Staywise, Be Kind ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ಜನರ ಜೀವನದಲ್ಲಿ ಸಂತೋಷದ ಮಹತ್ವತೆ ತಿಳಿಸುವುದು ಈ ದಿನದ ಉದ್ದೇಶವಾಗಿದೆ. 2006 ರಲ್ಲಿ ಜೆ. ಇಲಿಯಾನ್ ಅವರ ಪ್ರಸ್ತಾಪದಂತೆ 2012ರ ಜೂನ್ 28 ರಂದು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಂತೋಷ ದಿನವನ್ನು 2013ರ ಮಾರ್ಚ್ 20 ರಂದು ಮೊದಲ ಬಾರಿ ಆಚರಿಸಲಾಯಿತು. 2021ರ ಮಾರ್ಚ್ 3 ರಿಂದ 23ರವರೆಗೆ ವಿಶ್ವ ಸಂತೋಷ ಸಪ್ತಾಹವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ ಸಲ್ಯೂಷನ್ ನೆಟ್ವರ್ಕ್ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರ ಕೊಲಂಬಿಯಾ ವಿವಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಸಂತೋಷ ವರದಿಯು ಪ್ರಕಟವಾಗಿದೆ.

    ಫೌಂಡೇಶನ್, ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾಲಯ, ಕೆನಡಿಯನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ರಿಸರ್ಚ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಕಟಿಸುತ್ತದೆ. > ಸೂಚ್ಯಂಕದ 6 ಮಾನದಂಡಗಳು: ತಲಾದಾಯ, ಸಾಮಾಜಿಕ ಬೆಂಬಲ, ಸಾರ್ವಜನಿಕ ನಂಬಿಕೆ, ಆರೋಗ್ಯಯುತ ಜೀವನ ನಿರೀಕ್ಷೆ, ಸಾಮಾಜಿಕ ಸ್ವಾತಂತ್ರ್ಯ, ಔದಾರ್ಯತೆ ಸೂಚ್ಯಂಕದ ಬಗ್ಗೆ ಮಾಹಿತಿ: ಮೊದಲ ಬಾರಿ ಪ್ರಕಟ: 2012ರ ಏಪ್ರಿಲ್ 1. ವಿಶ್ವ ಸಂತೋಷ ಸೂಚ್ಯಂಕವು ಗ್ಯಾಲಪ್ ಇಂಟರ್ ನ್ಯಾಷನಲ್‌ನ 2018-20ರ ವ್ಯಾಪ್ತಿಯ 149 ರಾಷ್ಟ್ರಗಳ ಮಾಹಿತಿಗೆ ಸಂಬಂಧಿಸಿದೆ. ದೇಶಗಳಿಗೆ 0 ರಿಂದ 10 ಅಂಕವನ್ನು ನೀಡುವ ಮೂಲಕ ಬ್ಯಾಂಕ್‌ನ್ನು ಕೊಡಲಾಗುತ್ತದೆ. ಜಾನ್ ಎಫ್ ಹೆಲ್ಲಿವೆಲ್, ರಿಚರ್ಡ್ ಲೇಯಾರ್ಡ್ ಮತ್ತು ಜೆಫ್ರಿ ಸ್ಯಾಚಸ್‌ರವರು ವರದಿಯನ್ನು ಪರಿಷ್ಕರಿಸುವ ವ್ಯಕ್ತಿಗಳಾಗಿದ್ದಾರೆ.

Next Post Previous Post
No Comment
Add Comment
comment url