ಭಾರತದಲ್ಲಿ ಟೆಸ್ಲಾ ಕಾರ್ ಕಂಪನಿ ಘಟಕ
ಜಗತ್ತಿನ ಶ್ರೀಮಂತ ಉದ್ಯಮಿ' ಎಲಾನ್ ಮಸ್ (ELON MUSK) ಅವರ ಒಡೆತನದ ಅಮೆರಿಕಾ ಮೂಲದ ಎಲೆಕ್ನಿಕ್ ಕಾರು ಉತ್ಪಾದನಾ ಕಂಪನಿ (American Electric Vehicle Maker) ಯಾದ ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. ಈ ಮೂಲಕ ಬೆಂಗಳೂರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಂತಾಗಿದೆ. ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಾರ್ಪೊರೇಟ್ ಕಚೇರಿ ತೆರೆಯಲಿದ್ದು, 1 ಲಕ್ಷ ರೂ. ಆರಂಭಿಕ ಶುಲ್ಕದೊಂದಿಗೆ Tesla India Motors and Energy PVT LTD ಹೆಸರಿನಲ್ಲಿ ಕಂಪನಿಯನ್ನು ಬೆಂಗಳೂರಿನಲ್ಲಿ ನೊಂದಾಯಿಸಲಾಗಿದೆ. ಬೆಂಗಳೂರಿನ ಲ್ಯಾವೆಲೆ ರಸ್ತೆಯಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿದೆ. ಈ ಸಂಬಂಧ ಮೂವರು ನಿರ್ದೇಶಕರನ್ನು ನಿಯುಕ್ತಿಗೊಳಿಸಲಾಗಿದೆ. ವೈಭವ್ ತನೇಜಾ (Vaibhav Taneja), ವೆಂಕಟರಂಗಂ ಶ್ರೀರಾಮ್ (Venkatrangam Sreeram) ಹಾಗೂ ಡೇವಿಡ್ ಜಾನ್ ಫಿನ್‌ಸ್ಟಿನ್ (David Jon Feinstein) ಅವರು ಕಂಪನಿಯ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಇವರು ಭಾರತದ ಟೆಸ್ಲಾ ಇವಿ ಮಾರುಕಟ್ಟೆಯನ್ನು ನೋಡಿಕೊಳ್ಳಲಿದ್ದಾರೆ.
ಎಲೆಕ್ಟ್ರಿಕ ಸ್ಟಾರ್ಟ್‌ಅಪ್ ತಾಣ - ಬೆಂಗಳೂರು
ಬೆಂಗಳೂರಿನಲ್ಲಿ ಸುಮಾರು 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ನವೋದ್ಯಮ(StartUp)ಗಳಿವೆ. ಮಹೇಂದ್ರ ಎಲೆಕ್ನಿಕ್, ಆಥರ್ ಎನರ್ಜಿ, ಆಲ್ಫಾ ವೈಲೆಟ್ ಆಟೋಮೋಟಿವ್‌ನಂತಹ ಹಲವಾರು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಹೆಚ್ಚಿನ ಉದ್ಯಮಗಳು ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲು ಗಮನ ಹರಿಸಿವೆ.
ಬೆಂಗಳೂರು ನಗರವು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (R & D)ಗಳಿಗೆ ಜಾಗತಿಕ ಮಟ್ಟದಲ್ಲಿ ನೆಲೆಯಾಗಿದೆ. ಐಟಿ & ಇಂಜಿನಿಯರಿಂಗ್ ಪ್ರತಿಭೆಗಳು ಅಪಾರ ಪ್ರಮಾಣದಲ್ಲಿದ್ದಾರೆ. ಜರ್ಮನಿ ಮೂಲದ ಮರ್ಸಿಡೀಸ್ ಬೆಂನ್ಸ್, ಚೀನಾದ ಗ್ರೇಟ್ ವಾಲ್ ಮೋಟಾರ್, ಅಮೆರಿಕಾದ ಜನರಲ್ ಮೋಟಾರ್, ಕಾಂಟಿನೆಂಟಲ್ ಮಹೇಂದ್ರ ಅಂಡ್ ಮಹೇಂದ್ರ ಭಾಷ್, ಡೆಲ್ಲಿ, ಓಲ್ವಾ ಮುಂತಾದ ಕಂಪನಿಗಳು ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿವೆ.
ಟೆಸ್ಲಾ ಕಂಪನಿಯು ಬೆಂಗಳೂರನ್ನು ಆಯ್ಕೆ ಮಾಡಲು ಕಾರಣ. ಬೆಂಗಳೂರಿನಲ್ಲಿ ಬ್ಯಾಟರಿ ಚಾಲಿತವಾದ ವಾಹನ ತಯಾರಿಸುವ 10ಕ್ಕೂ ಹೆಚ್ಚು ಕಂಪನಿಗಳಿವೆ. ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಹುಬ್ಬಳ್ಳಿ-ಧಾರವಾಡದಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ತಯಾರಿಕೆ ಘಟಕಗಳನ್ನು ಒಳಗೊಂಡಂತೆ ಇವಿ ಹಬ್ ಸ್ಥಾಪನೆಗೆ ಕರ್ನಾಟಕವು ಹೆಚ್ಚು ಉತ್ತೇಜನ ನೀಡುತ್ತಿದೆ. ಸ್ಟಾಂಪ್‌ಡ್ಯೂಟಿಗೆ ಪ್ರತಿಶತ 100ರ ವಿನಾಯಿತಿ ನೀಡಿದ್ದು, ಭೂ ಪರಿವರ್ತನೆ ಶುಲ್ಕ ಮರುಪಾವತಿ, ಹೂಡಿಕೆ ಪ್ರಚಾರ ಸಬ್ಸಿಡಿ ಮುಂತಾದ ಸರ್ಕಾರದ ಪ್ರೋತ್ಸಾಹ ಕ್ರಮಗಳಿಂದ ಕಂಪನಿಗಳು ರಾಜ್ಯಕ್ಕೆ ಬರುತ್ತಿವೆ.
ಎಲೆಕ್ಟ್ರಿಕ್ ವಾಹನ ನೀತಿ ರಚಿಸಿದ ದೇಶದ ಮೊದಲ ರಾಜ್ಯ - ಕರ್ನಾಟಕ ಭಾರತದಲ್ಲಿ ಮೊದಲ ಬಾರಿಗೆ 2017 ರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ನೀತಿಯನ್ನು ಕರ್ನಾಟಕ ರಾಜ್ಯ ರಚಿಸಿತು. ಭಾರತದ ಎಲೆಕ್ಟ್ರಿಕ್ ವಾಹನಗಳ ತಾಣವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿತ್ತು.
60 ಲಕ್ಷದ ಕಾರುಗಳು - ಭಾರತಕ್ಕೆ ಆಮದು
ಟೆಸ್ಲಾ ಕಂಪನಿಯ ಆರಂಭದಲ್ಲಿ ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ. ಮಾಡೆಲ್ 3 ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಇವು ಸಂಪೂರ್ಣ ತಯಾರಾದ ಸ್ಥಿತಿಯಲ್ಲಿ ಭಾರತಕ್ಕೆ ಬರಲಿವೆ. ಬೇಡಿಕೆ ನೋಡಿ ಕೊಂಡು ಭಾರತದಲ್ಲೇ ಕಾರುಗಳನ್ನು ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಮಾಡೆಲ್-3 ಎಸ್ಆರ್ ಹೆಸರಿನ ಟೆಸ್ಲಾ ಹೆಸರಿನ ಕಾರುಗಳು 55 ಲಕ್ಷ ರೂ.ನಿಂದ 60 ಲಕ್ಷ ರೂ. ಬೆಲೆಗೆ ಲಭ್ಯವಾಗಬಹುದು. ಆರಂಭದಲ್ಲಿ 2,500 ಕಾರುಗಳು ಭಾರತಕ್ಕೆ ಆಮದಾಗಲಿವೆ. ಹೀಗಾಗಿ ಬೆಲೆಯು ಗಮನಾರ್ಹವಾಗಿ ಕಡಿತವಾಗಬಹುದು. 2021ರ ಮಧ್ಯದಲ್ಲಿ ದೇಶದಲ್ಲಿ ಟೆಸ್ಲಾ ಕಾರುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಜಗತ್ತಿನಾದ್ಯಂತ ಎಲೆಕ್ನಿಕ್ ಕಾರುಗಳ ಉತ್ಪಾದನೆ, ಗುಣಮಟ್ಟ ಮತ್ತು ಸಂಶೋಧನೆಗೆ ಟೆಸ್ಲಾ ಕಂಪನಿಯು ಹೆಸರುವಾಸಿಯಾಗಿದೆ. ಉದ್ಯಮಿ ಎಲಾನ್ ಮಸ್ ನೇತೃತ್ವದಲ್ಲಿ ಟೆಸ್ಲಾ ಕಂಪನಿಯು - 2003 ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 48 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಕಾರುಗಳು Mercedes Benz ಗೆ ಪ್ರತಿಸ್ಪರ್ಧಿಯಾಗಿವೆ. ಟೆಸ್ಲಾ ಕಾರುಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ದೂರ ಸಾಗಬಲ್ಲವು. ಎಲಾನ್ ಮಸ್ಕ್ ಅವರು 1971ರ ಜೂನ್ 28 ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಅಲ್ಲಿನ ಕಡ್ಡಾಯ ಮಿಲಿಟರಿ ಸೇವೆ ನಿಯಮದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆನಡಾಕ್ಕೆ ವಲಸೆ ಹೋದರು. ಕೆನಡಾಕ್ಕೆ ವಲಸೆ ಹೋದರೆ ಅಮೆರಿಕಾದ ವೀಸಾ ಪಡೆಯಲು
ಸುಲಭವಾಗುವುದು ಎಂಬುದು ಕಾರಣವಾಗಿತ್ತು.
ಕಂಪ್ಯೂಟರ್ ಗೇಮಿಂಗ್ ಸ್ಟಾಫ್ಟ್‌ವೇರ್ Blaster ಅಭಿವೃದ್ಧಿ
ಎಲಾನ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಕಂಪ್ಯೂಟರ್ ತಂತ್ರಾಂಶವನ್ನು ರೂಪಿಸುವುದನ್ನು ಕಲಿತು, ತಮ್ಮ 12ನೇ ವಯಸ್ಸಿನಲ್ಲೇ ಬ್ಲಾಸ್ಟಾರ್ ಎಂಬ ಕಂಪ್ಯೂಟರ್ ಗೇಮಿಂಗ್ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಿದರು.
1995 ರಲ್ಲಿ ಸೋದರ ಕಿಂಬಲ್ ಮಸ್ತ್ ಅವರೊಂದಿಗೆ ಸೇರಿ ಝಿಪ್-2 ಕಾರ್ಪೊರೇಷನ್ ಎಂಬ ಕಂಪನಿ ಆರಂಭಿಸಿದರು. 1999 ರಲ್ಲಿ ಕಾಂಪ್ಯಾಕ್ಟ್ ಕಂಪ್ಯೂಟರ್ ಕಾರ್ಪೊರೇಷನ್ ಸಂಸ್ಥೆಯ ಅಂಗಸಂಸ್ಥೆಯೊಂದು ಝಿಪ್-2 ಕಂಪನಿಯನ್ನು ಸುಮಾರು 2,200 ಕೋಟಿ ರೂ.ಗಳಿಗೆ ಖರೀದಿಸಿತು. ಅದೇ ವರ್ಷ ಇಬ್ಬರು ಸೋದರರು ಸೇರಿ X.COM ಎಂಬ ಹಣಕಾಸು ಸೇವಾ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದು Paypal ಎಂದು ಹೆಸರು ಬದಲಿಸಿಕೊಂಡಿತು. 2002 ರಲ್ಲಿ ಆ ಕಂಪನಿಯನ್ನು e-Bay ಕಂಪನಿಯು ಖರೀದಿಸಿತು.
SpaceX: 2002 ರಲ್ಲಿ ತಮ್ಮ 3ನೇ ಕಂಪನಿ ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವ Space Exploration Technologies Corp. (SpaceX) ಆರಂಭಿಸಿದರು. 2020ರ ಮೇ 30 ರಂದು ಗಗನಯಾತ್ರಿಗಳಾದ ಡ ಹರ್ಲಿ ಮತ್ತು ಬಾಬ್ ಬೆಕ್ನಿಕನ್ ಅವರನ್ನು ಕ್ರೂಡ್ರಾಗನ್ ಸ್ಪೇಸ್ ಕ್ರಾಫ್ಟ್ ಮೂಲಕ ಐಎಸ್‌ಎಸ್‌ಗೆ ಈ ಸಂಸ್ಥೆಯು ಕಳುಹಿಸಿತ್ತು. 2021ರ ಜನವರಿಯಲ್ಲಿ ಎಲಾನ್ ಅವರು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಜಗತ್ತಿನ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇತರ ಸಂಸ್ಥೆಗಳು: ಸೋಲಾರ್ ಸಿಟಿ ಕಾರ್ಪೊರೇಷನ್ ಸಂಸ್ಥೆ (2016) ರಸ್ತೆ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2017 ರಲ್ಲಿ ಸುರಂಗ ಕೊರೆಯುವ 'ಟಿಬಿಸಿ' ಎಂಬ ಕಂಪನಿಯನ್ನು ಆರಂಭಿಸಿದರು. (2013 ರಲ್ಲಿ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಘೋಷಣೆ)