Indian turister day

 ಪ್ರವಾಸಿ ಭಾರತೀಯ ದಿವಸ್


2021ರ ಜನವರಿ 9 ರಂದು ಭಾರತದಲ್ಲಿ16ನೇ ಪ್ರವಾಸಿ ಭಾರತೀಯ ದಿವಸ ಅಥವಾ ಅನಿವಾಸಿ ಭಾರತೀಯರ ದಿನವನ್ನು ಜನವರಿ 9 2021

:AATMA-NIRBHAR'ಆತ್ಮನಿರ್ಭರ ಭಾರತ್‌ಗೆ ಕೊಡುಗೆ BHARAT Be (Contributing to Atmanirbhar Bharath) ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ನವದೆಹಲಿಯಲ್ಲಿ ವರ್ಚ್ಯುವಲ್ ಆಧಾರದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸುರಿನೇಮ್ ದೇಶದ ಅಧ್ಯಕ್ಷ ಚಂದ್ರಿಕಾ ಪರ್ಸಾದ್ ಸನ್‌ಕಿ ಅವರು ಮುಖ್ಯ ಅತಿಥಿಯಾಗಿದ್ದರು. 2020-2021ರ ಅವಧಿಯ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು ಹಾಗೂ ಭಾರತ್ ಕೋ ಜಾನಿಯೇ ರಸಪ್ರಶ್ನೆ ವಿಜೇತರನ್ನು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತದಲ್ಲಿ ವಲಸೆಗಾರರ ಪಾತ್ರ ಹಾಗೂ ಕೋವಿಡ್ ನಂತರದ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಅಧಿವೇಶನ ಜರುಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದ ಉದ್ಘಾಟನೆ ಮಾಡಿ, ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದ ಸಹದ್ಯೋಗಿಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಿದ್ದರು? ಎನ್ನುವುದು ನಮ್ಮ ಹೆಮ್ಮೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. 2021ರ ಜನವರಿ 8 ರಂದು ಯುವ ಪ್ರವಾಸಿ ಭಾರತೀಯ ದಿವಸವನ್ನು


ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವತಿಯಿಂದ

Bringing together Young Achievers From India and Indian Diaspora ಧೈಯವಾಕ್ಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯೂಜಿಲ್ಯಾಂಡ್‌ನ ಸಮುದಾಯ ಮತ್ತು ಸ್ವಪ್ರೇರಿತ ವಲಯದ ಸಚಿವರಾದ ಪ್ರಿಯಾಂಕ ರಾಧಾಕೃಷ್ಣನ್ ಅವರು ವಿಶೇಷ ಅತಿಥಿಯಾಗಿದ್ದರು. ಪ್ರಿಯಾಂಕ ಅವರು ನ್ಯೂಜಿಲ್ಯಾಂಡ್ ದೇಶದಲ್ಲಿ ಸಚಿವರಾದ ಮೊಟ್ಟಮೊದಲ ಭಾರತೀಯ ಮೂಲದ ಮಹಿಳೆ ಎನಿಸಿದ್ದಾರೆ.


ಹಿನ್ನೆಲೆ: 1915ರ ಜನವರಿ 9 ರಂದು ಮಹಾತ್ಮ ಗಾಂಧೀಜಿಯವರು ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ (ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಕ) ಅವರ ಮಾರ್ಗದರ್ಶನದ ಮೇಲೆ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂತಿರುಗಿದರು. ಇಂತಹ ಐತಿಹಾಸಿಕ ಹಿನ್ನೆಲೆಯಲ್ಲಿ ಜನವರಿ 9 ಅನ್ನು ಪ್ರವಾಸಿ ಭಾರತೀಯ ದಿವಸವನ್ನಾಗಿ ಆಚರಿಸಲಾಗುವುದು. 2003ರ ಜನವರಿ 9 ರಿಂದ 11ರವರೆಗೆ ಮೊದಲ ಬಾರಿ ಈ ದಿನವು ಆಚರಣೆಯಾಗಿತ್ತು. (ಮಾರಿಷಸ್‌ನ ಅನಿರುದ್ ಜುಗುನ್ನಾಥ್ ಅತಿಥಿ) 2019ರಲ್ಲಿ ಪ್ರವಾಸಿ ಭಾರತೀಯ ದಿವಸವು ವಾರಣಾಸಿಯಲ್ಲಿ ಜರುಗಿತ್ತು (ಪ್ರವೀಂದ್‌ ಜುಗುನ್ನಾಥ್ ಅತಿಥಿ)

Post a Comment (0)
Previous Post Next Post