mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Monday, 24 May 2021

ಭೂಮಿ ನಮ್ಮ ಜೀವಂತ ಗ್ರಹ

 



ನಾವು ಭೂಮಿಯ ಮೇಲೆ ಜೀವಿಸುತ್ತಿದ್ದೇವೆ. ಇದು ಸೌರವ್ಯೂಹದಲ್ಲಿ ಸೂರ್ಯನಿಂದ ಮೂರನೇ ಗ್ರಹವಾಗಿದೆ. ಸೌರವೂಹ್ಯದಲ್ಲಿರುವ ಗ್ರಹಗಳಲ್ಲಿ ಭೂಮಿಯು ಮಾತ್ರ ಜೀವಗಳನ್ನು ಹೊಂದಿದೆ. ಭೂಮಿ ಎಲ್ಲ ಬಗೆಯ ಅಂದರೆ ಸಸ್ಯಗಳು, ಪ್ರಾಣಿ ಮತ್ತು ಮಾನವ ಜೀವಿಗಳಿಗೆ ವಾಸಸ್ಥಾನವಾಗಿದೆ. ಇದಕ್ಕೆ ಕಾರಣ ಸೂರ್ಯ ಮತ್ತು ಭೂಮಿಯ ನಡುವಿನ ದೂರ, ಜೀವಿಗಳಿಗೆ ಪೂರಕವಾದ ಉಷಾಂಶ, ಅನಿಲಗಳು ವಾಯುಗೋಳ ಮತ್ತು ಜಲಚಕ್ರ ಇತ್ಯಾದಿಗಳಾಗಿವೆ. ಹೀಗಾಗಿ ಭೂಮಿಯನ್ನು ಜೀವಂತ ಗ್ರಹ': 'ವಿಶಿಷ್ಟ ಗ್ರಹ': 'ಜಲಾವೃತ ಗ್ರಹ;' 'ನೀಲಿಗ್ರಹ' ಹೀಗೆ ವಿವಿಧ ಹೆಸರಿನಿಂದ ಕರೆಯಲಾಗಿದೆ.


ಭೂಮಿಯ ಗಾತ್ರ ಮತ್ತು ಆಕಾರ


ಸೂರ್ಯನ ಪರಿವಾರದಲ್ಲಿ ಭೂಮಿಯು ಐದನೆಯ ದೊಡ್ಡ ಗ್ರಹವಾಗಿದೆ. ಭೂಮಿಯ ವ್ಯಾಸವು ಚಂದ್ರನ ವ್ಯಾಸಕ್ಕಿಂತ ಸುಮಾರು ನಾಲ್ಕು ಪಟ್ಟು ದೊಡ್ಡದಾಗಿದೆ ಹಾಗೂ ಸೂರ್ಯನಿಗಿಂತ 107 ಪಟ್ಟು ಚಿಕ್ಕದಾಗಿದೆ.


ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು 510 ದಶಲಕ್ಷ


ಚದರ ಕಿ.ಮೀ.ಗಳಾಗಿದ್ದು, ಅದರಲ್ಲಿ 361 ದಶಲಕ್ಷ ಚದರ ಕಿ.ಮೀ.


ಗಳಷ್ಟು (70.78%) ಕ್ಷೇತ್ರವು ನೀರಿನಿಂದ ಆವರಿಸಲ್ಪಟ್ಟಿದೆ.


ಉಳಿದ 149 ದಶಲಕ್ಷ ಚದರ ಕಿ.ಮೀ.ನಷ್ಟು ಕ್ಷೇತ್ರವು (29,22%)


ಭೂ ಭಾಗದಿಂದ ಕೂಡಿದೆ. ಹೀಗೆ ಭೂಮಿಯ ಜಲ ಹಾಗೂ ಭೂ ಭಾಗಗಳ ಹಂಚಿಕ ಅಸಮತೆಯಿಂದ ಕೂಡಿದೆ. ಭೂ ಮತ್ತು ಜಲರಾಶಿಗಳ ಕ್ಷೇತ್ರ 1:2.43ರಷ್ಟು ಅನುಪಾತವನ್ನು ಹೊಂದಿವೆ.


ಭೂಮಿಯ ಆಕಾರ : ಭೂಮಿಯ ಆಕಾರವನ್ನು 'ಭೂಮ್ಯಾಕಾರ' (ಜಿಯಾಡ್) ಅಥವಾ 'ಗೋಳಾಕಾರ


ಎಂದು ಕರೆಯಲಾಗಿದೆ. ಏಕೆಂದರೆ ಭೂಮಿಯು ಧ್ರುವಗಳ ಬಳಿ ಸ್ವಲ್ಪ ಚಪ್ಪಟೆಯಾಗಿದ್ದು ಸಮಭಾಜಕವೃತ್ತದ ಬಳಿ ಉಬ್ಬಿದಂತಿದೆ. ಭೂಮಿಯ ಸಮಭಾಜಕವೃತ್ತದ ವ್ಯಾಸ 12,756 ಕಿ.ಮೀ.ಗಳು ಮತ್ತು ಧ್ರುವೀಯ ವ್ಯಾಸ 12,714 ಕಿ.ಮೀ ಆಗಿದೆ. ಇವೆರಡರ ವ್ಯಾಸದ ವ್ಯತ್ಯಾಸ 42 ಕಿ.ಮೀ.ಗಳಾಗಿದೆ. ಆದೇ ರೀತಿ ಸಮಭಾಜಕ ವೃತ್ತದ ಸುತ್ತಳತೆ 40,076ಕಿ.ಮೀ.ಗಳು ಮತ್ತು ಧ್ರುವೀಯ ಸುತ್ತಳತೆ 40,008 ಕಿ.ಮೀ.ಗಳಷ್ಟಿದೆ. ಇದರಲ್ಲಿ 68ಕಿ.ಮೀಗಳಷ್ಟು ವ್ಯತ್ಯಾಸವಿದೆ. ಗೋಳಾಕಾರವಾಗಿರುವುದನ್ನು ಸ್ಪಷ್ಟಪಡಿಸುವುದು. ಭೂಮಿಯು


ನೆಲ ಮತ್ತು ಜಲಭಾಗಗಳ ಹಂಚಿಕೆ


ಭೂಮಿಯ ನೆಲ ಭಾಗಗಳನ್ನು ಭೂ ಖಂಡಗಳೆಂದು ಕರೆಯುತ್ತಾರೆ. ಭೂ ನೆಲ ಭಾಗವನ್ನು ಏಳು ಭೂ ಖಂಡಗಳಾಗಿ ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕ, ಯುರೋಪ್ ಮತ್ತು ಆಸ್ಟ್ರೇಲಿಯ ಈ ಭೂ ಖಂಡಗಳು ವಿಸ್ತಾರವಾದ ಭೂ ಭಾಗಗಳಾಗಿವೆ. ಏಷ್ಯಾವು ಅತಿ ದೊಡ್ಡ ಖಂಡವಾದರೆ, ಆಸ್ಟ್ರೇಲಿಯಾವು ಅತಿ ಚಿಕ್ಕ ಖಂಡವಾಗಿದೆ. ಭೂಮಿಯ ಮೇಲಿನ ವಿಸ್ತಾರವಾದ ಜಲರಾಶಿಗಳನ್ನು ಮಹಾಸಾಗರಗಳೆಂದು ಕರೆಯುತ್ತಾರೆ. ಅವುಗಳನ್ನು ನಾಲ್ಕು ಮಹಾಸಾಗರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೆಸಿಫಿಕ್ ಸಾಗರ, ಆಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್ ಸಾಗರ, ಪೆಸಿಫಿಕ್ ಸಾಗರವು ಅತಿ ವಿಶಾಲವಾದ


ಭೂಮಿಯ ಆಕಾರ ವಿಂಗಡಿಸಲಾಗಿದೆ. ಅವುಗಳೆಂದರೆ ಏಷ್ಯ, ಆಫ್ರಿಕ, ಉತ್ತರ ಅಮೆರಿಕ,


ಹಾಗೂ ಹೆಚ್ಚು ಆಳವಾದದಾಗಿದೆ. ಆರ್ಕ್ಟಿಕ್ ಸಾಗರವು ಅತಿ ಚಿಕ್ಕದು ಮತ್ತು ಕಡಿಮೆ ಆಳ ಹೊಂದಿದೆ.


ನೆಲ ಮತ್ತು ಜಲರಾಶಿಗಳು ಉತ್ತರಗೋಳಾರ್ಧ ಮತ್ತು ದಕ್ಷಿಣಗೋಳಾರ್ಧದಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಉತ್ತರಗೋಳಾರ್ಧದಲ್ಲಿ ಶೇ.60 ಭಾಗದಷ್ಟು ಭೂ ಭಾಗವಿದ್ದು, ಶೇ.40 ಭಾಗದಷ್ಟು ಜಲರಾಶಿಯಿರುವುದು. ಆದ್ದರಿಂದ ಇದನ್ನು 'ಭೂಪ್ರಧಾನ ಗೋಳಾರ್ಧ'ವೆಂದು ಕರೆಯಲಾಗಿದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣಗೋಳಾರ್ಧದಲ್ಲಿ ಶೇ.81 ಭಾಗದಷ್ಟು ಜಲರಾಶಿಯಿದ್ದು ಶೇ.19 ಭಾಗದಷ್ಟು ನೆಲ ಭಾಗವಿದೆ. ಇದರಿಂದ ಇದನ್ನು 'ಜಲಪ್ರಧಾನ ಗೋಳಾರ್ಧ' ವೆಂದೂ ಕರೆಯುವರು.


ಅಕ್ಷಾಂಶ ಮತ್ತು ರೇಖಾಂಶಗಳು


ಒಂದು ಸ್ಥಳದ ಸ್ಥಾನ, ದಿಕ್ಕು ಮತ್ತು ಅಂತರಗಳನ್ನು ನಾವು ಹೇಗೆ ತಿಳಿಯುತ್ತೇವೆ?


ಭೂಮಿಯು ಗೋಳಾಕಾರವಾಗಿದೆ. ಆದ್ದರಿಂದ ಭೂಮಿಯ ಮೇಲಿನ ಎರಡು ಸ್ಥಳಗಳ ಸ್ಥಾನ ದಿಕ್ಕು ಹಾಗೂ ಅಂತರಗಳನ್ನು ಗುರುತಿಸುವುದು ಕಷ್ಟ, ಭೂಮಿಯ ಮೇಲಿನ ಒಂದು ಸ್ಥಳದ ನಿರ್ದಿಷ್ಟ ಸ್ಥಾನ, ಅಂತರ ಮತ್ತು ದಿಕ್ಕುಗಳನ್ನು ಅರಿಯಲು ಕಾಲ್ಪನಿಕ ರೇಖಾಜಾಲ ವ್ಯವಸ್ಥೆಯನ್ನು ನಕ್ಷೆ ಅಥವಾ ಗೋಳದ ಮೇಲೆ ಎಳೆಯಲಾಗಿದೆ. ಈ ಕಾಲ್ಪನಿಕ ರೇಖೆಗಳನ್ನು ಪೂರ್ವ ಪಶ್ಚಿಮವಾಗಿ ಮತ್ತು ಉತ್ತರ ದಕ್ಷಿಣವಾಗಿ ಎಳೆಯಲಾಗಿದ್ದು, ಇವುಗಳನ್ನು ಕ್ರಮವಾಗಿ ಅಕ್ಷಾಂಶ ಮತ್ತು ರೇಖಾಂಶಗಳೆನ್ನುವರು. ಇವು ಪರಸ್ಪರ ಲಂಬಕೋನದಲ್ಲಿ ಛೇದಿಸುವುದರಿಂದ ದೊರೆಯುವ ಛೇದಕ ಬಿಂದುಗಳಿಗೆ ಭೌಗೋಳಿಕ ನಿರ್ದೇಶಾಂಕಗಳು (Geographic Co-ordinates) ಎನ್ನುವರು. ಇವುಗಳಿಗೆ ಭೌಗೋಳಿಕ ಜಾಲ ವ್ಯವಸ್ಥೆ ಎಂದೂ ಕರೆಯಲಾಗಿದೆ.


ಅಕ್ಷಾಂಶಗಳು : ಭೂಮಧ್ಯೆ ರೇಖೆಯಿಂದ ಉತ್ತರ ಅಥವಾ ದಕ್ಷಿಣಕ್ಕಿರುವ ಕೋನಾಂತರವೇ ಅಕ್ಷಾಂಶ. ಇವು ಕಾಲ್ಪನಿಕ ರೇಖೆಗಳಾಗಿದ್ದು, ಅವುಗಳನ್ನು ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಧ್ರುವಗಳ ಮಧ್ಯದಲ್ಲಿ ಭೂಆಕ್ಷಕ್ಕೆ ಲಂಬವಾಗಿ ಎಳೆದ ಕಾಲ್ಪನಿಕ ರೇಖೆಯೇ ಸಮಭಾಜಕವೃತ್ತ. ಈ ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿರುವಂತೆ ಗೋಳದ ಮೇಲೆ ಪೂರ್ವ ಪಶ್ಚಿಮವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳನ್ನೇ 'ಆಕ್ಷಾಂಶಗಳು” (Latitudes) ಎನ್ನುವರು. ಸಮಭಾಜಕವೃತ್ತವು 0 ಮಹಾವೃತ್ತವಾಗಿದ್ದು ಅದು ಭೂ ಸುತ್ತಳತೆಗೆ ಸಮನಾಗಿದೆ, ಅಲ್ಲಿಂದ ಉತ್ತರ ಹಾಗೂ ದಕ್ಷಿಣಕ್ಕಿರುವ ಅಕ್ಷಾಂಶ ವೃತ್ತಗಳು ಉದ್ದದಲ್ಲಿ ಚಿಕ್ಕದಾಗುತ್ತವೆ. ಎಲ್ಲಾ ಆಕ್ಷಾಂಶ ವೃತ್ತಗಳು ಭೂಮಧ್ಯ ರೇಖೆಗೆ ಸಮಾನಾಂತರವಾಗಿರುವುದರಿಂದ ಅವುಗಳನ್ನು ಸಮಾನಾಂತರ ರೇಖೆಗಳೆಂತಲೂ ಕರೆಯುತ್ತಾರೆ. ಸಮಭಾಜಕವೃತ್ತದಿಂದ ಉತ್ತರಗೋಳಾರ್ಧದಲ್ಲಿ 90 ಹಾಗೂ ದಕ್ಷಿಣಗೋಳಾರ್ಧದಲ್ಲಿ 90% ಅಕ್ಷಾಂಶಗಳನ್ನು ರಚಿಸಲಾಗಿದೆ. ಆದರೆ 90 ಉತ್ತರ ಹಾಗೂ ದಕ್ಷಿಣ: ಅಕ್ಷಾಂಶಗಳು ಒಂದುಗಳಾಗಿವೆ. ಒಂದು ಅಕ್ಷಾಂಶದಿಂದ ಮತ್ತೊಂದು ಅಕ್ಷಾಂಶಕ್ಕಿರುವ ಭೂಮಿಯ ಮೇಲಿನ ಅಂತರ 110.4 ಕಿ.ಮೀ. ಗಳಾಗುತ್ತದೆ. 10 ಅಕ್ಷಾಂಶ ಅಥವಾ ಭೂಮಧ್ಯರೇಖೆ ಸೇರಿಕೊಂಡು 181 ಅಕ್ಷಾಂಶಗಳಾಗುತ್ತವೆ.


ಪ್ರಮುಖ ಆಕ್ಷಾಂಶಗಳು


0 ಅಕ್ಷಾಂಶ - ಸಮಭಾಜಕವೃತ್ತ


2) 23. ಉತ್ತರ ಅಕ್ಷಾಂಶ - ಕರ್ಕಾಟಕ ಸಂಕ್ರಾಂತಿ


3) 23%"ದಕ್ಷಿಣ ಅಕ್ಷಾಂಶ - ಮಕರ ಸಂಕ್ರಾಂತಿ ವೃತ್ತ


4) 66%° ಉತ್ತರ ಅಕ್ಷಾಂಶ


ಉತ್ತರಧ್ರುವ ವೃತ್ತ


5) 66%'ದಕ್ಷಿಣ ಅಕ್ಷಾಂಶ-ದಕ್ಷಿಣಧ್ರುವ ವೃತ್ತ.


6) 90" ಉತ್ತರ ಅಕ್ಷಾಂಶ - ಉತ್ತರಧ್ರುವ.


7) 90% ದಕ್ಷಿಣ ಅಕ್ಷಾಂಶ - ದಕ್ಷಿಣಧ್ರುವ,


160


ಅಕ್ಷಾಂಶ ಮತ್ತು ರೇಖಾಂಶಗಳ ಜಾಲ


ರೇಖಾಂಶಗಳು : ಸಮಭಾಜಕ ವೃತ್ತವನ್ನು ಸಮಕೋನದಲ್ಲಿ ಛೇದಿಸಿ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳು ಎನ್ನುವರು.


ಗೋಳದ ಮೇಲೆ ರೇಖಾಂಶಗಳು ಅರ್ಧವೃತ್ತಗಳ, ಸರಣಿಗಳಂತೆ ಕಂಡುಬರುತ್ತವೆ. ಇವು ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಸಂಧಿಸುತ್ತವೆ. ಹಾಗೂ ಸಮಭಾಜಕವೃತ್ತದ ಮೂಲಕ ಹಾದುಹೋಗುತ್ತವೆ. ಎಲ್ಲ ರೇಖಾಂಶಗಳ ಉದ್ದ ಒಂದೇ ಆಗಿದೆ. ರೇಖಾಂಶಗಳನ್ನು ಮಧ್ಯಾಹ್ನ ಅಥವಾ ಮೆರಿಡಿಯನ್ ರೇಖೆಗಳೆನ್ನುವರು. (ಮೆರಿ-ಮಧ್ಯ, ಡಿಯನ್- ದಿನ), ಏಕೆಂದರೆ ಯಾವುದೇ ರೇಖಾಂಶದ ನೆತ್ತಿಯ ಮೇಲೆ ಸೂರ್ಯನು ಬಂದಾಗ ಆ ರೇಖಾಂಶದುದ್ದಕ್ಕೂ ಎಲ್ಲ ಸ್ಥಳಗಳಲ್ಲೂ ಒಂದೇ ಸಮಯದಲ್ಲಿ ಮಧ್ಯಾಹ್ನವಾಗುತ್ತದೆ.


ಇಂಗ್ಲೆಂಡಿನ ಗ್ರೀನ್‌ಎಚ್‌ನ ಮೇಲೆ ಹಾದುಹೋಗುವ ರೇಖಾಂಶವನ್ನು 'ಪ್ರಧಾನ ರೇಖಾಂಶ'ವೆಂದು ಆಯ್ಕೆಮಾಡಲಾಗಿದೆ. ಇದನ್ನು 0" ಎಂದು ಗುರುತಿಸಲಾಗಿದೆ. ಗ್ರೀನ್‌ಚ್ ರೇಖಾಂಶದ ಪೂರ್ವಕ್ಕೆ 180° ಹಾಗೂ ಪಶ್ಚಿಮಕ್ಕೆ 180° ರೇಖಾಂಶಗಳಿವೆ, ಭೂಗೋಳದಲ್ಲಿ ಒಟ್ಟು 360% ರೇಖಾಂಶ ರೇಖೆಗಳಿರುತ್ತವೆ. ಪ್ರಧಾನ ರೇಖಾಂಶದಿಂದ 180° ಪೂರ್ವ ರೇಖಾಂಶದವರೆಗಿನ ವಲಯವನ್ನು ಪೂರ್ವಗೋಳಾರ್ಧವೆನ್ನುವರು. ಆದರ ವಿರುದ್ಧದ ಭಾಗವನ್ನು ಪಶ್ಚಿಮಗೋಳಾರ್ಧವೆನ್ನುವರು.


    ಸಮಭಾಜಕವೃತ್ತದಿಂದ ಧ್ರುವದ ಕಡೆಗೆ ಹೋದಂತೆ ಎರಡು ರೇಖಾಂಶಗಳ ನಡುವಣ ಅಂತರವು ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕೆ ಕಾರಣ ಎಲ್ಲ ರೇಖಾಂಶಗಳು ಎರಡೂ ಧ್ರುವಗಳಲ್ಲಿ ಸಂಧಿಸುವುದು. ಸಮಭಾಜಕವೃತ್ತದ ಮೇಲೆ ಎರಡು ರೇಖಾಂಶಗಳ ನಡುವಿನ ಅಂತರ ಅತಿ ಹೆಚ್ಚು ಅಂದರೆ ಸುಮಾರು ಕಿ.ಮೀ.ಗಳಾಗಿರುತ್ತದೆ.


ರೇಖಾಂಶ ಮತ್ತು ವೇಳೆ : ರೇಖಾಂಶ ಮತ್ತು ವೇಳೆಗಳ ನಡುವೆ ನಿಕಟವಾದ ಸಂಬಂಧವಿದೆ. ಭೂಮಿಯು ತನ್ನ ಅಕ್ಷದ ಸುತ್ತ ತಿರುಗುತ್ತದೆ ಹಾಗೂ ಒಂದು ಸುತ್ತನ್ನು ಪೂರ್ಣಗೊಳಿಸಲು 24 ಗಂಟೆಗಳ ಸಮಯಬೇಕು. ಅಂದರೆ 360° ರೇಖಾಂಶಗಳನ್ನು ಸುತ್ತಿ ಪೂರ್ಣಗೊಳಿಸಲು 24 ಗಂಟೆಗಳು ಬೇಕು. ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಇರುವ ವೇಳೆಯ ವ್ಯತ್ಯಾಸ 4 ನಿಮಿಷಗಳಾಗಿದ್ದು, ಪ್ರತಿ 15 ರೇಖಾಂಶಗಳಿಗೆ ಒಂದು ಗಂಟೆ ಅಥವಾ 60 ನಿಮಿಷಗಳಾಗುತ್ತವೆ. (360 X 4 = 1440 + 60 = 24 ಗಂಟೆಗಳು).. ನಾವು ಗ್ರೀನಿಚ್‌ನಿಂದ ಪಶ್ಚಿಮದಿಂದ ಪೂರ್ವದ ಕಡೆಗೆ ಚಲಿಸುವಾಗ ವೇಳೆಯು ಹೆಚ್ಚಾಗುತ್ತದೆ. (EGA - East Gain Add) ಹಾಗೂ ಪೂರ್ವದಿಂದ ಪಶ್ಚಿಮದ ಕಡೆಗೆ ಚಲಿಸುವಾಗ ವೇಳೆಯು ಕಡಿಮೆಯಾಗುತ್ತಾ orbat (WLS-West Lose Subtracts).


ಸ್ಥಾನಿಕ ವೇಳೆ : ಒಂದು ಸ್ಥಳದ ರೇಖಾಂಶ ಅಥವಾ ಸೂರ್ಯನ ಸ್ಥಾನಕ್ಕನುಸಾರವಾಗಿ ನಿರ್ಧರಿಸುವ ವೇಳೆಯನ್ನು ಸ್ಥಾನಿಕ ವೇಳೆ' ಎನ್ನುವರು. ಸ್ಥಾನಿಕ ವೇಳೆಯು ಆ ಸ್ಥಳದ ಸ್ಥಳೀಯ ರೇಖಾಂಶವನ್ನು ಅದರಲ್ಲೂ ಸ್ಥಳೀಯ ಮಧ್ಯಾಹ್ನದ ರೇಖೆಯನ್ನು ಆಧರಿಸಿರುತ್ತದೆ. ಆ ಸ್ಥಳಗಳ ಮೇಲೆ ಸೂರ್ಯನ ಕಿರಣ ನೇರವಾಗಿ ಬೀಳುವುದರಿಂದ ಮಧ್ಯಾಹ್ನ 12 ಗಂಟೆಯಾಗಿರುತ್ತದೆ. ಆ ಮಧ್ಯಾಹ್ನರೇಖೆ ಹಾದುಹೋಗುವ ಎಲ್ಲಾ ಸ್ಥಳಗಳಲ್ಲೂ ಒಂದೇ ಸ್ಥಾನಿಕ ವೇಳೆಯಿರುತ್ತದೆ. ಪ್ರತಿ ರೇಖಾಂಶವೂ ತನ್ನದೇ ಆದ ಸ್ಥಾನಿಕ ವೇಳೆ ಹೊಂದಿದೆ.


ಆದರ್ಶ ವೇಳೆ : ಸ್ಥಾನಿಕ ವೇಳೆಯು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ. ಪ್ರತಿಯೊಂದು ಸ್ಥಳವೂ ತನ್ನದೇ ಸ್ಥಾನಿಕ ವೇಳೆಯನ್ನು ಅನುಸರಿಸುವುದರಿಂದ, ಸಾಕಷ್ಟು ಗೊಂದಲವುಂಟಾಗುತ್ತದೆ. ಈ ಗೊಂದಲವನ್ನು ನಿವಾರಿಸಲು ಹಲವು ದೇಶಗಳು ಇಡೀ ದೇಶದಲ್ಲಿ ಏಕರೂಪದ ವೇಳೆಯನ್ನು ಅನುಸರಿಸುತ್ತವೆ. ಇಂತಹ ಏಕರೂಪದ ವೇಳೆಯು ಆ ದೇಶದ ಮಧ್ಯದಲ್ಲಿ ಹಾದುಹೋಗುವ ರೇಖಾಂಶದ ವೇಳೆಯನ್ನಾಧರಿಸಿರುತ್ತದೆ ಅಥವಾ ಆ ರೇಖಾಂಶದ ಮೇಲಿರುವ ಪ್ರಮುಖ ನಗರದ ವೇಳೆಯಾಗಿರುತ್ತದೆ. ಈ ವೇಳೆಯನ್ನು ದೇಶದ ಎಲ್ಲಾ ಭಾಗಗಳಲ್ಲೂ ಅನುಸರಿಸುವುದರಿಂದ ಇದನ್ನು ಆದರ್ಶ ವೇಳೆ(Standard Time) ಎಂದು ಕರೆಯುತ್ತಾರೆ.


ಭಾರತದಲ್ಲಿ 822 ಪೂರ್ವ ರೇಖಾಂಶವನ್ನು ದೇಶದ ಅಥವಾ ಆದರ್ಶ ರೇಖಾಂಶವೆಂದು ನಿರ್ಧರಿಸಲಾಗಿದೆ. ಇದು ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ನಗರದ ಮೂಲಕ ಹಾದುಹೋಗಿದೆ. ಭಾರತದ ವೇಳೆ ಈ ರೇಖಾಂಶವನ್ನು ಆಧರಿಸುವುದರಿಂದ ಇದನ್ನು ಭಾರತದ ಆದರ್ಶ ಎನ್ನುವರು. ಇದು ಗ್ರೀನ್‌ವಿಚ್ ವೇಳೆಗಿಂತ 5 ಗಂಟೆ 30 ನಿಮಿಷಗಳಷ್ಟು ಮುಂದಿರುತ್ತದೆ. IST)


ವೇಳಾವಲಯಗಳು: ಪ್ರಪಂಚದ ಕೆಲವು ರಾಷ್ಟ್ರಗಳು 45ಕ್ಕಿಂತ ಹೆಚ್ಚು ರೇಖಾಂಶಗಳಲ್ಲಿ ಹಾದುಹೋಗುವುದರಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಚಲಿಸಿದಾಗ 3ರಿಂದ 4ಗಂಟೆಗಳಷ್ಟು ವೇಳೆ ವ್ಯತ್ಯಾಸವಾಗುತ್ತದೆ. ಇಲ್ಲಿ ಒಂದೇ ಆದರ್ಶ ವೇಳೆಯನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ.


ಆದುದರಿಂದ ಇಡೀ ರಾಷ್ಟ್ರವನ್ನು ಕಾಲವಲಯಗಳನ್ನಾಗಿ ವಿಭಾಗಿಸುವುದು ಹಾಗೂ ಇಡೀ ಭೂಗೋಳವನ್ನು 24 ವೇಳಾವಲಯಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ವೇಳಾವಲಯಕ್ಕೆ ಒಂದು ಗಂಟೆಯಷ್ಟು ಮಾತ್ರ ವೇಳೆ ವ್ಯತ್ಯಾಸವಾಗುತ್ತದೆ. ವೇಳಾವಲಯಗಳನ್ನು

ವಿಸ್ತಾರವಾದ ರಾಷ್ಟ್ರಗಳಲ್ಲಿ ಅನೇಕ ರೇಖಾಂಶಗಳು ಹಾದುಹೋಗುವುದರಿಂದ ಹೊಂದಿರುತ್ತವೆ. ಉದಾಹರಣೆಗಾಗಿ, ರಷ್ಯಾದಲ್ಲಿ 11 ವೇಳಾವಲಯಗಳು, ಯು ಎಸ್ ಎ ಮತ್ತು ಕೆನಡಾಗಳಲ್ಲಿ 5 ವೇಳಾವಲಯ ಹಾಗೂ ಆಸ್ಟ್ರೇಲಿಯಾದಲ್ಲಿ 3 ವೇಳಾವಲಯಗಳಿವೆ.


     ಅಂತಾರಾಷ್ಟ್ರೀಯ ದಿನಾಂಕ ರೇಖೆ (I D L) : ಪ್ರಪಂಚದ ವೇಳೆಯ ಸಮಸ್ಯೆಯನ್ನು ಮೊದಲು ಆದರ್ಶ ವೇಳೆಯಿಂದ, ಅನಂತರ ವೇಳಾವಲಯದಿಂದಲೂ ಪರಿಹರಿಸಲಾಗಿದೆ. ಆದರೆ ಪ್ರಪಂಚವನ್ನೇ ಪ್ರದಕ್ಷಿಣೆ ಹಾಕುವ ಪ್ರಯಾಣಿಕರಿಗೆ ವಾರದಲ್ಲಿನ ಸರಿಯಾದ ದಿನಾಂಕ ಮತ್ತು ದಿನಗಳನ್ನು ಸರಿಪಡಿಸಲು ಹೊಸ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಗ್ರೀನ್ ಎಚ್ ರೇಖಾಂಶದ ವಿರುದ್ಧವಾದ ದಿಕ್ಕಿನಲ್ಲಿರುವ 180° ರೇಖಾಂಶದ ಮೇಲೆ ಪ್ರಪಂಚ ಪರ್ಯಟನೆ ಮಾಡುವವರು ತಮ್ಮ ಸಂದರ್ಭಕ್ಕೆ ದಿನ ಮತ್ತು ದಿನಾಂಕವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ಇದು ಪೆಸಿಫಿಕ್ ಸಾಗರದ ಮೂಲಕ ಹಾದುಹೋಗುವ 180 ರೇಖಾಂಶದ ಮೇಲೆ ಇದ್ದರೂ ಕೆಲವೆಡೆ ಭೂಭಾಗಗಳನ್ನು ತಪ್ಪಿಸಲು ಅಲ್ಲಲ್ಲಿ ಅಂಕುಡೊಂಕಾಗಿ ಎಳೆಯಲಾಗಿದೆ. ಇದನ್ನೇ ಅಂತಾರಾಷ್ಟ್ರೀಯ ದಿನಾಂಕ ರೇಖೆ ಎನ್ನುವರು. ಹಡಗು ಮತ್ತು ವಿಮಾನದಲ್ಲಿ ಪ್ರಯಾಣಿಸುವವರು ಈ ರೇಖೆಯನ್ನು ದಾಟುವಾಗ ದಿನಾಂಕ ಮತ್ತು ದಿನಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಯಾವುದೇ ಹಡಗು ಈ ರೇಖೆಯನ್ನು ಪಶ್ಚಿಮದಿಂದ ಪೂರ್ವಕ್ಕೆ ದಾಟಿದಾಗ (ಏಷ್ಯಾದಿಂದ ಉತ್ತರ ಅಮೆರಿಕಾ) ಒಂದೇ ದಿನವನ್ನು ಎರಡುಬಾರಿ ಗಣನೆಗೆ ತೆಗೆದುಕೊಳ್ಳಬೇಕು. ಅದೇರೀತಿ ಈ ರೇಖೆಯನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ಹಾದುಹೋಗುವಾಗ (ಉತ್ತರ ಅಮೇರಿಕಾದಿಂದ ಏಷ್ಯಾ) ಒಂದು ದಿನವನ್ನು ಕಳೆದುಕೊಳ್ಳಬೇಕಾಗುತ್ತದೆ.



ಸ್ನೇಹಿತರೆ ಈ ಕೆಳಕಾಣಿಸಿದ ಲಿಂಕಗಳ 

ಮೂಲಕ ವಿವಿಧ ವಿಷಯಗಳ ಮೇಲೆ ಪಠ್ಯವನ್ನು ನೀಡಲಾಗಿದೆ ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕ್ವಿಜ್ ಮೂಲಕ ನೀಡಲಾಗಿದೆ ಕೆಳಕಾಣಿಸಿದ

Link ಗಳನ್ನು ಓಪನ್ ಮಾಡಿ ಆನ್ಲೈನ್ ಕ್ವಿಜ್ ಸೆಂಡ್ ಮಾಡಿ


ರಾಷ್ಟ್ರಕೂಟರು

https://www.mahitiloka.co.in/2021/05/blog-post_48.html



ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

https://www.mahitiloka.co.in/2021/05/blog-post_91.html



📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು

📌https://www.mahitiloka.co.in/2021/05/blog-post_20.html




ಕೃಷಿ ವಿಧಗಳು

👉https://tinyurl.com/yf9437kz




ವಾಯುಮಂಡಲದ ರಚನೆ

👉https://tinyurl.com/yj8wkk36





ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು

👉https://tinyurl.com/yj4rzwog



ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ


🙏🙏🙏🙏🙏🙏🙏🙏🙏🙏🙏🙏🙏



OUR SOCIAL LINKS ;-


YOU TUBE :-https://youtube.com/c/SGKKANNADA


TELEGRAM :-https://telegram.me/s/spardhakiran



INSTAGRAM :-https://instagram.com/shoyal2000?utm_medium=copy_link



FACE BOOK :-https://www.facebook.com/SGK-Kannada-112808230846685/



SHARECHAT :-https://b.sharechat.com/s2xoaNCEW7


https://b.sharechat.com/KaG9DabEGcb









No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Kanchanjunga Express accident

WhatsApp Group Join Now degreetech Join Now The investigation by the Commissioner of Railway Safety (CRS) into the accident involving the Kanchanjunga Express and a goods train on June 17 in West Bengal’s Darjeeling district, which resulted in 10 fatalities, has been completed, and a final report is awaited. Officials have confirmed that three railway employees—the superintendent of Rangapani Station, the signal technician for the Rangapani-Chattarhat section, and the guard of the goods train that collided with the Kanchanjunga Express—have been suspended. The accident occurred at 8:55 a.m. on June 17, between the Rangapani and Chattarhat stations of the Katihar Division of the Northeast Frontier Railway. A high-speed, container-carrying goods train collided with the Kanchanjunga Express on the same track, causing the derailment of four rear coaches of the passenger train and five wagons of the goods train. Concerns were raised re...

ಭಾರತದ ಕೇಂದ್ರಾಡಳಿತ ಪ್ರದೇಶಗಳು, ಪಟ್ಟಿ, ನಕ್ಷೆ, ಹೆಸರುಗಳು, ರಾಜಧಾನಿ, 8 UTಗಳ ಪ್ರದೇಶ

  ಭಾರತದ ಕೇಂದ್ರಾಡಳಿತ ಪ್ರದೇಶಗಳು: ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಪಟ್ಟಿಯನ್ನು ಹುಡುಕಿ. ಗಾತ್ರದ ದೃಷ್ಟಿಯಿಂದ ಲಡಾಖ್ ಭಾರತದ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ. ಭಾರತದ 8 ಯುಟಿಗಳು. ಪರಿವಿಡಿ ಭಾರತದ ಕೇಂದ್ರಾಡಳಿತ ಪ್ರದೇಶಗಳು ಭಾರತದ ಕೇಂದ್ರಾಡಳಿತ ಪ್ರದೇಶಗಳು:  ಭಾರತವು ಪ್ರಜಾಪ್ರಭುತ್ವ, ಸಮಾಜವಾದಿ, ಜಾತ್ಯತೀತ ಮತ್ತು ಗಣರಾಜ್ಯ ಶೈಲಿಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಜ್ಯಗಳ ಒಕ್ಕೂಟವಾಗಿದೆ. ಭಾರತದಲ್ಲಿ, ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಡುವ ಒಂದು ರೀತಿಯ ಆಡಳಿತ ವಿಭಾಗವು ನೇರವಾಗಿ ಕೇಂದ್ರ ಸರ್ಕಾರದಿಂದ (ಕೇಂದ್ರ ಸರ್ಕಾರ) ಆಡಳಿತ ನಡೆಸುತ್ತದೆ. ಆದ್ದರಿಂದ ಇದನ್ನು "ಕೇಂದ್ರಾಡಳಿತ ಪ್ರದೇಶ" ಎಂದು ಕರೆಯಲಾಗುತ್ತದೆ. ಸಂವಿಧಾನದ ಪ್ರಕಾರ ಅಧ್ಯಕ್ಷರು ಒಕ್ಕೂಟದ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ. ಅಧ್ಯಕ್ಷರು ಅವರು ಅಥವಾ ಅವಳು ಗೊತ್ತುಪಡಿಸಿದ ನಿರ್ವಾಹಕರ ಮೂಲಕ ಕೇಂದ್ರಾಡಳಿತ ಪ್ರದೇಶಗಳನ್ನು ನೋಡಿಕೊಳ್ಳುತ್ತಾರೆ. ಅವುಗಳ ಮೂಲ ಮತ್ತು ವಿಕಾಸದ ಕಾರಣದಿಂದಾಗಿ, ಭಾರತದ ಕೇಂದ್ರಾಡಳಿತ ಪ್ರದೇಶಗಳು ಅನನ್ಯ ಹಕ್ಕುಗಳು ಮತ್ತು ಸ್ಥಾನಮಾನವನ್ನು ಹೊಂದಿವೆ. ಸ್ಥಳೀಯ ಸಂಸ್ಕೃತಿಗಳ ಹಕ್ಕುಗಳನ್ನು ರಕ್ಷಿಸಲು, ಆಡಳಿತದ ಸಮಸ್ಯೆಗಳ ಮೇಲೆ ರಾಜಕೀಯ ಅಶಾಂತಿಯನ್ನು ತಡೆಗಟ್ಟಲು ಮತ್ತು ಇತರ ಕಾರಣಗಳಿಗಾಗಿ ಭಾರತೀಯ ಉಪವಿಭಾಗಕ್ಕೆ "ಕೇಂ...

ಭಾರತದ ಹಣಕಾಸು ಮಂತ್ರಿಗಳು 2023, ಪಟ್ಟಿ, ಹೆಸರುಗಳು, ಸಾಧನೆಗಳು

ಭಾರತದ ಹಣಕಾಸು ಮಂತ್ರಿಗಳು: ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಭಾರತದ ಹಣಕಾಸು ಮಂತ್ರಿಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ. ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ಭಾರತದ ಹಣಕಾಸು ಸಚಿವರಾಗಿದ್ದಾರೆ. UPSC ಗಾಗಿ ಹಣಕಾಸು ಮಂತ್ರಿಗಳ ಪಟ್ಟಿ ಪರಿವಿಡಿ ಭಾರತದ ಹಣಕಾಸು ಮಂತ್ರಿಗಳು ಭಾರತದ ಹಣಕಾಸು ಸಚಿವರು  ಕೇಂದ್ರ ಸಚಿವ ಸಂಪುಟದ ಉನ್ನತ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವಾಲಯದ ಉಸ್ತುವಾರಿ ವಹಿಸಿದ್ದಾರೆ. ವಾರ್ಷಿಕ ಕೇಂದ್ರ ಬಜೆಟ್ ಅನ್ನು ಭಾರತದ ಹಣಕಾಸು ಸಚಿವರು ಪ್ರತಿ ವರ್ಷ ಸಂಸತ್ತಿಗೆ ಸಿದ್ಧಪಡಿಸುವ ಮತ್ತು ಮಂಡಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಭಾರತದ ಹಣಕಾಸು ಸಚಿವರು ಸರ್ಕಾರದ ಹಣಕಾಸಿನ ಕಾರ್ಯತಂತ್ರದ ಉಸ್ತುವಾರಿ ವಹಿಸುತ್ತಾರೆ. ಹಣಕಾಸು ಸಚಿವಾಲಯವು ಕೇಂದ್ರ ಬಜೆಟ್, ರಾಜ್ಯ ಮತ್ತು ಫೆಡರಲ್ ಬಜೆಟ್‌ಗಳು, ಹಣಕಾಸು ಸಂಸ್ಥೆಗಳು, ಬಂಡವಾಳ ಮಾರುಕಟ್ಟೆಗಳು, ತೆರಿಗೆ ಮತ್ತು ಹಣಕಾಸು ಶಾಸನಗಳನ್ನು ನೋಡಿಕೊಳ್ಳುತ್ತದೆ. RK ಷಣ್ಮುಖಂ ಚೆಟ್ಟಿ ಅವರು ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವ ರಾಷ್ಟ್ರವಾಗಿ ಸೇವೆ ಸಲ್ಲಿಸಿದರು ಮತ್ತು ರಾಷ್ಟ್ರದ ಮೊದಲ ಬಜೆಟ್ ಅನ್ನು ಮಂಡಿಸಿದರು. ಇದರ ಬಗ್ಗೆ ಓದಿ:  ಭಾರತದ ಕ್ಯಾಬಿನೆಟ್ ಮಂತ್ರಿಗಳು ಪ್ರಸ್ತುತ ಭಾರತದ ಹಣಕಾಸು ಮಂತ್ರಿ 2023 ಭಾರತದ ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.