ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನ(WORLD CONSUMER DAY)
2021ರ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು Tack ling Plastic Pollution' ಧೈಯವಾಕ್ಯದಲ್ಲಿ ಆಚರಿಸಲಾಯಿತು.
ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಇ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ಚಟುವಟಿಕೆಯನ್ನು ನಿಯಂತ್ರಿಸುವ ಅಗತ್ಯತೆ ಹಾಗೂ ಸುಸ್ಥಿರ ಅನುಭೋಗಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ವರ್ಷದ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಪ್ಲಾಸ್ಟಿಕ್ ಮಾಲಿನ್ಯ ಪರಿಹಾರ ಧೈಯವಾಕ್ಯದಲ್ಲಿ ಆಚರಿಸಲಾಗಿದೆ. 2020ರ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು “The Sustainable Consumer '
World CONSUMER Rights DAY
THEME TACKING PLASTIC Pollution"
ಧೈಯವಾಕ್ಯದಲ್ಲಿ ಆಚರಿಸಲಾಯಿತು.
ವಿಶ್ವ ಗ್ರಾಹಕ ಹಕ್ಕುಗಳ ಬಗ್ಗೆ ಮೊದಲ ಪ್ರಸ್ತಾಪ: ವಿಶ್ವದಲ್ಲಿ ಮೊದಲ ಬಾರಿಗೆ ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು 1962 ಮಾರ್ಚ್ 15ರಂದು ಮೊದಲ ಬಾರಿಗೆ ಗ್ರಾಹಕ ಹಕ್ಕುಗಳ ಬಗ್ಗೆ ಅಮೆರಿಕಾದ ಕಾಂಗ್ರೆಸ್‌ನಲ್ಲಿ ಪ್ರಸ್ತಾಪಿಸಿದ್ದರು. 1983 ರಿಂದ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಪ್ರತೀ ವರ್ಷ ಮಾರ್ಚ್ 15 ರಂದು ಆಚರಿಸಲಾಗುತ್ತಿದೆ. 1985 ಏಪ್ರಿಲ್ 9 ರಂದು ವಿಶ್ವ ಸಂಸ್ಥೆಯು ಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ಸಾಮಾನ್ಯ ಮಾರ್ಗದರ್ಶಿ ತತ್ವಗಳಿಗೆ ಅನುಮೋದನೆ ನೀಡಿತ್ತು.
ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ - ಡಿಸೆಂಬರ್ 24 2020ರ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು"New Features Of Consumer Protection Act-2019" ಧೈಯವಾಕ್ಯದಲ್ಲಿ ಆಚರಿಸಲಾಯಿತು. ಭಾರತದಲ್ಲಿ ಗ್ರಾಹಕ ರಕ್ಷಣಾ ಕಾನೂನನ್ನು ಪ್ರಧಾನಿ ರಾಜೀವ್ ಗಾಂಧಿಯವರು 7ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಅಂದರೆ 1986ರಲ್ಲಿ ಜಾರಿಗೆ ತಂದಿದ್ದರು. 1986ರ ಡಿಸೆಂಬರ್ 24ರಿಂದ ಗ್ರಾಹಕ ರಕ್ಷಣಾ ಕಾಯ್ದೆಯು (COPRA) ಭಾರತ ದೇಶದಲ್ಲಿ ಜಾರಿಗೆ ಬಂದ ಕಾರಣ ಪ್ರತೀ ವರ್ಷ ಡಿಸೆಂಬರ್ 24ನ್ನು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ. 1986ರ ಈ ಕಾಯ್ದೆಯನ್ನು ಗ್ರಾಹಕ ರಕ್ಷಣಾ ಮ್ಯಾಗ್ನಾಕಾರ್ಟಾ' ಎಂದೇ ಕರೆಯಲಾಗಿದೆ. 2019ರ ಜುಲೈ 8 ರಂದು ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಯ ಅಂದಿನ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು 1986ರ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಪರಿಷ್ಕರಿಸಿದ ಮಸೂದೆಯನ್ನು ಮಂಡಿಸಿದ್ದರು. ಇದು 2020ರ ಜುಲೈ 20 ರಂದು ಜಾರಿಗೆ ಬಂದಿದೆ.
ಭಾರತದಲ್ಲಿ ಗ್ರಾಹಕರ ಹಕ್ಕುಗಳು: ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ವಸ್ತುವಿನ ಆಯ್ಕೆಯ ಹಕ್ಕು, ಕುಂದು ಕೊರತೆಗಳನ್ನು ನಿವಾರಿಸುವ ಹಕ್ಕು, ಆಲಿಸುವ ಹಕ್ಕು ಮತ್ತು ಗ್ರಾಹಕ ಶಿಕ್ಷಣ ಹಕ್ಕು.
Consumers International ಸಂಸ್ಥೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ಸಂಘಗಳ ಸಂಘಟನೆಯಾಗಿದ್ದು, ಅಂತರಾಷ್ಟ್ರೀ ಮಟ್ಟದ ಗ್ರಾಹಕ ಹಕ್ಕುಗಳ ರಕ್ಷಣಾ ಕಾವಲುನಾಯಿ ಸಂಸ್ಥೆಯಾಗಿದೆ. ಇದು 1960ರ ಏಪ್ರಿಲ್ 1 ರಂದು ಸ್ಥಾಪನೆಯಾಗಿದ್ದು, Coming Together For Change ಎಂಬ ಉದ್ದೇಶ ಹೊಂದಿದೆ. ಇದರ ಕೇಂದ್ರ ಕಚೇರಿ ಇಂಗ್ಲೆಂಡ್‌ನ ಲಂಡನ್‌ನಲ್ಲಿದೆ.