ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು
ವಿವಿಧ ಉದ್ದೇಶಗಳನ್ನು ಪೂರೈಸುವ ನದಿ ಕಣಿವೆ ಯೋಜನೆಗಳನ್ನು “ವಿವಿಧೋದ್ದೇಶ ನದಿ ಕಣಿವೆ ಯೋಜನೆ” ಗಳೆಂದು ಕರೆಯುತ್ತಾರೆ, ಈ ಯೋಜನೆಗಳ ಪ್ರಮುಖ ಉದ್ದೇಶಗಳೆಂದರೆ: ನೀರಾವರಿ ಪೂರೈಕೆ, ಜಲವಿದ್ಯುತ್ ಶಕ್ತಿ ಉತ್ಪಾದನೆ, ಪ್ರವಾಹ ನಿಯಂತ್ರಣ, ಮಣ್ಣಿನ ಸಂರಕ್ಷಣೆ, ಆರಣ್ಯಕರಣ, ಕುಡಿಯುವ ನೀರಿನ ಪೂರೈಕೆ, ಜಲಸಂಚಾರ, ಮೀನುಗಾರಿಕೆ, ಮನರಂಜನೆ, ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿಗಳಿಗೆ ಆಹಾರ ಮತ್ತು ಜನರಿಗೆ ಉದ್ಯೋಗ ಕಲ್ಪಿಸುವುದು, ಅಮೆರಿಕ ಸಂಯುಕ್ತ ಸಂಸ್ಥಾನದ (ಯು.ಎಸ್.ಎ), ಟೆನಿಸ್ಸಿ ನದಿ ಕಣಿವೆ ಯೋಜನೆಯ (ಟಿ.ವಿ.ಎ) ಮಾದರಿಯನ್ನು ಆಧರಿಸಿಕೊಂಡು ಭಾರತದಲ್ಲಿ 1948ರಲ್ಲಿ 'ದಾಮೋದರ ನದಿ ಕಣಿವ ಸಂಸ್ಥೆ'ಯನ್ನು (ಡಿ.ವಿ.ಸಿ) ಪ್ರಾರಂಭಿಸಲಾಯಿತು. ಆನಂತರ ದೇಶದಲ್ಲಿ ಈ ರೀತಿಯ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು.
1. ದಾಮೋದರ ನದಿ ಕಣಿವೆ ಯೋಜನ
ದಾಮೋದರ ನದಿಯು ಹೂಗ್ಲಿ ನದಿಯ ಉಪನದಿ, ಇದನ್ನು ಬಂಗಾಳದ ದು:ಖಕಾರಿ" ನದಿ ಎಂದು ಕರೆಯಲಾಗಿತ್ತು. ಏಕೆಂದರೆ ಈ ಹಿಂದೆ ಇದು ಪ್ರವಾಹಗಳಿಗೆ ಕಾರಣವಾಗಿತ್ತು. ದಾಮೋದರ ನದಿಯಿಂದ ಹೊತ್ತುತಂದ ಕೆಸರಿನಿಂದ ಹೂ ನದಿ ಕಣಿವೆಯಲ್ಲಿ ಹೂಳು ಶೇಖರಣೆಯ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಕೊಲ್ಯಾತ ಬಂದರಿಗೂ ಧಕ್ಕೆಯಾಗುತ್ತಿತ್ತು. ಪ್ರವಾಹ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರಕಾರವು, ಅಂದಿನ ಬಿಹಾರ ಮತ್ತು ಪಶ್ಚಿಮ ಬಂಗಾಳ ಸರಕಾರಗಳೊಂದಿಗೆ ಸಮಾಲೋಚನೆ ನಡೆಸಿ ದಾಮೋದರ ಕಣಿವೆಗೆ ಏಕೀಕೃತ ಅಭಿವೃದ್ಧಿಯೋಜನೆಯನ್ನು ನಿರ್ಮಿಸಿತು. ಹೀಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಟೆನಸಿ ಕಣಿವೆ ಯೋಜನೆಯ ಮಾದರಿಯಲ್ಲಿ ವಿವಿಧೋದ್ದೇಶ ನದಿ ಕಣಿವೆ ಯೋಜನೆಯೊಂದನ್ನು ರೂಪಿಸಲಾಯಿತು. ಇದು ಭಾರತದ ಪ್ರಥಮ ಮತ್ತು ಅತ್ಯಂತ ಪ್ರಮುಖವಾದ ವಿವಿಧೋದ್ದೇಶ ನದಿಕಣಿವೆ ಯೋಜನೆಯೂ ಆಗಿದೆ. ದಾಮೋದರ ನದಿ ಕಣಿವೆ ಯೋಜನೆಯನ್ನು ಕಾರ್ಯಗತಗೊಳಿಸಲು 18ನೇ ಫೆಬ್ರವರಿ 1948 ರಂದು ದಾಮೋದರ ನದಿ ಕಣಿವೆ ಸಂಸ್ಥೆ (ಡಿ.ವಿ.ಸಿ) ಯನ್ನು ಸ್ಥಾಪಿಸಲಾಯಿತು.
ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ, ಪ್ರವಾಹ ನಿಯಂತ್ರಣ, ನೀರಾವರಿ ಅಭಿವೃದ್ಧಿ, ಜಲ ವಿದ್ಯುತ್ ತಯಾರಿಕೆ, ಜಲಸಾರಿಗೆ, ಆರಣ್ಯಕರಣ, ಮಣ್ಣಿನ ಸವಕಳಿ ತಡೆ, ಒಳನಾಡು ಮೀನುಗಾರಿಕೆ ಮತ್ತು ಮನರಂಜನಾ ಸೌಲಭ್ಯಗಳನ್ನು ಕಲ್ಪಿಸುವುದು, ಪಶ್ಚಿಮ ಬಂಗಾಳ ಮತ್ತು ಅಂದಿನ ಬಿಹಾರ ರಾಜ್ಯಗಳು ಜಂಟಿಯಾಗಿ ದಾಮೋದರ ಮತ್ತು ಅದರ ಉಪ ನದಿಗಳಿಗೆ ಈ ಯೋಜನೆ ನಿರ್ಮಾಣವನ್ನು ಕೈಗೊಳ್ಳಲಾಯಿತು. ಈ ಯೋಜನೆಯು 4 ಆಣೆಕಟ್ಟುಗಳು, 1 ಜಲ ವಿದ್ಯುತ್ ತಯಾರಿಕ ಘಟಕ 3 ಥರ್ಮಲ್ ವಿದ್ಯುತ್ ಕೇಂದ್ರಗಳು ಮತ್ತು 1 ನೀರಾವರಿ ಒಡ್ಡು ನಿರ್ಮಾಣವನ್ನೊಳಗೊಂಡಿದೆ. ಅವುಗಳ ಸಂಕ್ಷಿಪ್ತ ವಿವರಣೆ ಈ ಕೆಳಕಂಡಂತಿದೆ.
1), ತಿಳಿಯ ಆಣೆಕಟ್ಟು : ಈ ಆಣೆಕಟ್ಟನ್ನು ದಾಮೋದರ ಉಪ ನದಿಯಾದ ಬರಾಕರ್ ನದಿಗೆ ನಿರ್ಮಿಸಲಾಗಿದೆ. ಇದರ ಉದ್ದ 366 ಮೀ ಮತ್ತು ಗರಿಷ್ಠ ಎತ್ತರ 30 ಮೀ. ಇದರ ನೀರು ಶೇಖರಣಾ ಸಾಮರ್ಥ್ಯ 395 ದಶಲಕ್ಷ ಘನ ಮೀಟರ್, ಇದು ಈ ಪ್ರದೇಶದ ಏಕೈಕ ಕಾಂಕ್ರೀಟ್ ಆಣೆಕಟ್ಟು ಇಲ್ಲಿ ಎರಡು ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವು ತಲಾ 200 ಕಿ.ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವುಳ್ಳವು. ಈ ಆಣೆಕಟ್ಟು 40,000 ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
ii) ಕೊನಾರ್ ಅಣೆಕಟ್ಟು: ಇದನ್ನು ದಾಮೋದರ ನದಿಯ ಮತ್ತೊಂದು ಉಪನದಿಯಾದ ಕೊನಾರ್ ನದಿಗೆ ನಿರ್ಮಿಸಲಾಗಿದೆ. ಅದು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಗೆ ಸೇರಿದ. ಈ ಅಣೆಕಟ್ಟೆಯ ಉದ್ದ 3549 ಮೀ. ಮತ್ತು ಆದರ ಗರಿಷ್ಠ ಎತ್ತರ 49 ಮೀ, ಇದು ಕಾಂಕ್ರೀಟ್‌ನ ಸೋರಿಕೆ ನಾಲೆಯೊಂದಿಗೆ ನಿರ್ಮಿಸಿದ ಮಣ್ಣಿನ ಅಣೆಕಟ್ಟೆ, ಇದರ ನೀರು ಶೇಖರಣಾ ಸಾಮರ್ಥ್ಯ 337 ದಶಲಕ್ಷ ಘನ ಮೀಟರ್, ಇದು 1.4 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
iii) ಮೈಥಾನ್ ಅಣೆಕಟ್ಟು: ಇದನ್ನು ದಾಮೋದರ ಮತ್ತು ಬರಾಕರ್ ನದಿಗಳ ಸಂಗಮದಿಂದ ಸ್ವಲ್ಪ ಮೇಲ್ದಾಗದಲ್ಲಿ ಹರಿಯುವ ಬರಾಕರ್ ನದಿಗೆ ಕಟ್ಟಲಾಗಿದೆ. ಇದು 144 ಮೀ. ಉದ್ದ ಮತ್ತು ನದಿಯ ತಳಪಾಯದಿಂದ ಗರಿಷ್ಠ 94 ಮೀ. ಎತ್ತರವಾಗಿದೆ. ಇದರ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯ 1357 ಮಿಲಿಯನ್ ಘನ ಮೀಟ, ತಲಾ 60 ಮೆಗಾವ್ಯಾಟ್ ಸಾಮರ್ಥ್ಯವುಳ್ಳ ಮೂರು ಜಲ ವಿದ್ಯುತ್ ಘಟಕಗಳನ್ನು ಇಲ್ಲಿ ನಿರ್ಮಿಸಲಾಗಿದೆ.
iv) ಪಂಚತ್ ಹಿಲ್ ಆಣೆಕಟ್ಟು: ಇದೂ ಸಹ ದಾಮೋದರ ನದಿಗೆ ಕಾಂಕ್ರೀಟ್ ಸೋರಿಕೆ ನಾಲೆಯೊಡನೆ ನಿರ್ಮಿಸಿದ ಮಣ್ಣಿನ ಅಣೆಕಟ್ಟು, ಈ ಅಣೆಕಟ್ಟಿನ ಉದ್ದ 2545 ಮೀ. ಮತ್ತು ನದಿಯ ತಳ ಮಟ್ಟದಿಂದ ಅದರ ಗರಿಷ್ಠ ಎತ್ತರ 45 ಮೀ, ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯವು 1497 ಮಿಲಿಯನ್ ಘನ ಮೀಟರ್. ಇದು 40 ಮೆಗಾವ್ಯಾಟ್ ಸಾಮರ್ಥ್ಯವುಳ್ಳ ಒಂದು ಜಲ ವಿದ್ಯುತ್ ಘಟಕವನ್ನು ಹೊಂದಿದೆ ಹಾಗೂ 2.8 ಲಕ್ಷ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು
ಒದಗಿಸುತ್ತದೆ.
೪), ದುರ್ಗಾಪರದ ಒಡ್ಡು: ರಾಣಿಗಂಜ್‌ನಿಂದ (ಪಶ್ಚಿಮ ಬಂಗಾಳ) ಸುಮಾರು 23 ಕಿ.ಮೀ. ದೂರದ ಸ್ಥಳದಲ್ಲಿ ಈ ಜಲಾಶಯವಿದೆ. ಇದನ್ನು ನೀರಾವರಿಗಾಗಿ ನೀರು ಸಂಗ್ರಹಿಸಲು ದಾಮೋದರ ನದಿಗೆ ನಿರ್ಮಿಸಲಾಗಿದೆ. ಇದರ ಉದ್ದ 692 ಮೀ. ಮತ್ತು ಎತ್ತರ 12 ಮೀ. ಕೊನಾರ್, ತಿಲೈಯಾ, ಮೈಥಾನ್ ಮತ್ತು ಪಂಚತ್ ಹಿಲ್ ಅಣೆಕಟ್ಟುಗಳಿಂದ ಬಿಡುಗಡೆಯಾದ ಹೆಚ್ಚುವರಿ ನೀರನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ನೀರನ್ನು 2495 ಕಿ.ಮೀ. ಉದ್ದದ ಕಾಲುವೆಗಳ ಮೂಲಕ ನೀರಾವರಿಗಾಗಿ ವಿತರಿಸಲಾಗುತ್ತದೆ. ಆದು ಹೆಚ್ಚಾಗಿ ಪಶ್ಚಿಮ ಬಂಗಾಳದ 4.75 ಲಕ್ಷ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ದಾಮೋದರ ಎಡ ದಂಡೆ ಕಾಲುವೆಯು ನೌಕಾಯಾನ ಮತ್ತು ನೀರಾವರಿಗಳಿಗೆ ಪೂರಕವಾಗಿದ್ದು, ಕೊಲ್ಯಾತವನ್ನು ದಾಮೋದರ ಕಲ್ಲಿದ್ದಲು ಪ್ರದೇಶಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು 137 ಕಿ.ಮೀ. ಉದ್ರವಾಗಿದೆ.
2. ಭಾಕ್ರಾನಂಗಲ್
ಭಾಕ್ರಾ-ನಂಗಲ್ ಯೋಜನೆಯು ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳ ಒಂದು ಸಂಯುಕ್ತ ಯೋಜನೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಸಟೇಜ್ ನದಿಗೆ ಎರಡು ಅಣೆಕಟ್ಟುಗಳನ್ನು ಪ್ರತ್ಯೇಕವಾಗಿ ಭಾಕ್ರಾ ಮತ್ತು ನಂಗಲ್ ಎಂಬ ಸ್ಥಳಗಳಲ್ಲಿ ನಿರ್ಮಿಸಿರುವುದರಿಂದ ಇದನ್ನು ಭಾಕ್ರಾನಂಗಲ್ ಯೋಜನೆ ಎಂದು ಹೆಸರಿಸಲಾಗಿದೆ. ಪ್ರವಾಹ ನಿಯಂತ್ರಣ, ನೀರಾವರಿ ಸೌಲಭ್ಯ, ಜಲವಿದ್ಯುತ್ ಉತ್ಪಾದನೆ, ಅರಣೀಕರಣ ಮತ್ತು ಮಣ್ಣಿನ ಸಂರಕ್ಷಣೆಗಳು ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ.
ಹಿಮಾಚಲಪ್ರದೇಶದಲ್ಲಿ ಸಟ್ಲಜ್ ನದಿಗೆ ಭಾಕ್ರಾ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು 518 ಮೀ. ಉದ್ದ ಮತ್ತು 226 ಮೀ. ಎತ್ತರವುಳ್ಳದ್ದು, ನೇರರೀತಿಯಲ್ಲಿನ ಗುರುತ್ವ ಅಣೆಕಟ್ಟು ಇದಾಗಿದೆ. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯವು 1738 ಚ.ಕಿ.ಮೀ. ವಿಸ್ತೀರ್ಣವನ್ನು ಆವರಿಸಿದ್ದು 9867 ಮಿಲಿಯನ್ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಜಲಾಶಯವನ್ನು “ಗೋವಿಂದ ಸಾಗರ” ಎಂದು ಕರೆಯಲಾಗಿದೆ. ಭಾಕ್ರಾ ಅಚ್ಚುಕಟ್ಟು ವ್ಯವಸ್ಥೆಯ ಒಟ್ಟು ವಿಸ್ತೀರ್ಣ 27.4 ಲಕ್ಷ ಹೆಕ್ಟೇರುಗಳು, ಒಟ್ಟು ಕಾಲುವೆಗಳ ಉದ್ದ 1104 ಕಿ.ಮೀ. ಮತ್ತು ಉಪನಾಲೆಗಳ ಉದ್ದ 3360 ಕಿ.ಮೀ. ಆಗಿರುತ್ತದೆ. ಈ ಕಾಲುವೆಗಳು ಹರಿಯಾಣ, ರಾಜಸ್ತಾನ ಮತ್ತು ಪಂಜಾಬ್‌ನ ಕೆಲವು 27.4 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಪೂರೈಸುತ್ತವೆ.
ಭಾಕ್ರಾ ಅಣೆಕಟ್ಟೆಯಿಂದ ಸುಮಾರು 13 ಕಿ.ಮೀ. ದೂರದ ತಗ್ಗಿನಲ್ಲಿ ಸಟ್ಲಜ್ ನದಿಗೆ ನಂಗಲ್ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು 305 ಮೀ. ಉದ್ದ ಮತ್ತು 29 ಮೀ. ಎತ್ತರವಾಗಿದೆ. ಇದು ಸಮತೋಲನ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನದಿ ನೀರನ್ನು 64 ಕಿ.ಮೀ. ದೂರ ನಿರ್ವಹಿಸುತ್ತದೆ. ನಂಗಲ್ ಕಾಲುವೆಯು ಭಾಕ್ರಾ ಮುಖ್ಯ ಕಾಲುವೆಗೆ ನೀರು ಪೂರೈಸುವುದು. ನಂಗಲ್ ಕಾಲುವೆಯು ಹರಿಯಾಣದಲ್ಲಿ 26.4 ಲಕ್ಷ ಹೆಕ್ಟೇರು ಮತ್ತು ಪಂಜಾಬಿನಲ್ಲಿ 50.2 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಪೂರೈಸುತ್ತದೆ. ಈ ಯೋಜನೆಯು ಅತ್ಯಲ್ಪ ಮಳೆ ಬೀಳುವ ಭಾರತದ ವಾಯವ್ಯ ಭಾಗಕ್ಕೆ ನೀರಾವರಿ ಪೂರೈಸುವ ಮೂಲಕ ಆ ಭಾಗದ ಕೃಷಿಯಗತಿಯಲ್ಲಿ ಪ್ರಮುಖ ಪಾತ್ರವಹಿಸಿದೆ.
ಒಟ್ಟು 1204 ಮೆ.ವ್ಯಾ. ಸಾಮರ್ಥ್ಯವುಳ್ಳ ನಾಲ್ಕು ಜಲ ವಿದ್ಯುತ್ ಕೇಂದ್ರಗಳು ಈ ಯೋಜನೆಗೆ ಸೇರಿವೆ. ಅವುಗಳಲ್ಲಿ ಎರಡು ಭಾಕ್ರಾ ಅಣೆಕಟ್ಟೆಯ ಎರಡೂ ಬದಿಗಳಲ್ಲಿ ಮತ್ತು ಇನ್ನೆರಡು ನಂಗಲ್ ಕಾಲುವೆಗೆ ಸೇರಿದ ಗಂಗುವಾಲ ಮತ್ತು ಕೋಟ್ಲ ಎಂಬಲ್ಲಿವೆ. ಪಂಜಾಬ, ಹರಿಯಾಣ, ರಾಜಸ್ತಾನ ಕೈಗಾರಿಕಾ ಪ್ರದೇಶ ಮತ್ತು ನಗರ ಪ್ರದೇಶ ಮತ್ತು ನೆರೆಯ ರಾಜ್ಯಗಳಿಗೆ ಈ ಜಲ ವಿದ್ಯುತ್ ಕೇಂದ್ರಗಳಿಂದ ವಿದ್ಯುಚ್ಚಕ್ತಿ ಪೂರೈಕೆಯಾಗುವುದು.
3 ಹಿರಾಕುಡ್ ಯೋಜನೆ
ಇದು ಮಹಾನದಿಯ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಮಹಾತ್ವಾಕಾಂಕ್ಷೆಯಿಂದ ಒಡಿಶಾದಲ್ಲಿ ನಿರ್ಮಿಸಿದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಮೂರು ವಿವಿಧ ಸ್ಥಳಗಳಲ್ಲಿ ಮಹಾನದಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಸಾಂಬಲ್‌ಪುರದಿಂದ 9.7 ಕಿ.ಮೀ. ದೂರದಲ್ಲಿರುವ ಹಿರಾಕುಡ್ ಎಂಬಲ್ಲಿ ಮಹಾನದಿ ಮೇಲ್ಕಣಿವೆಗೆ ನಿರ್ಮಿಸಲಾದ ಅಣೆಕಟ್ಟು 4801 ಮೀ. ಉದ್ದವಾಗಿದೆ. ನದಿಯ ತಳಪಾಯದಿಂದ ಅಣೆಕಟ್ಟೆಯ ಎತ್ತರ 61 ಮೀ. ಇದು ಭಾರತದ ಅತ್ಯಂತ ಉದ್ದವಾದ ಅಣೆಕಟ್ಟು. ಇದರಿಂದ 650 ಚ.ಕಿ.ಮೀ ವಿಸ್ತೀರ್ಣದ ಜಲಾಶಯವು ರೂಪಗೊಂಡಿದೆ. ಇದು 810 ಕೋಟಿ ಘನ ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಮೂರು ಹರಿವು ಕಾಲುವೆಗಳುಂಟು, ಎರಡು ಎಡದಂಡೆ ಕಾಲುವೆಗಳು, ಒಂದು ಬಲದಂಡೆ ಕಾಲುವೆ. ಪ್ರಮುಖ ಕಾಲುವೆಯ ಉದ್ದ 147 ಕಿ.ಮೀ. ಈ ಕಾಲುವೆಗಳಿಂದ 2.54 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಪೂರೈಕೆಯಾಗುತ್ತದೆ. ಈ ಯೋಜನೆ 270 ಮೆ.ವ್ಯಾ. ಸ್ಥಾಪಿತ ಸಾಮರ್ಥ್ಯವುಳ್ಳ ಎರಡು ಜಲವಿದ್ಯುತ್ ಕೇಂದ್ರಗಳನ್ನು ಹೊಂದಿದೆ.
ಈ ಯೋಜನೆಗೆ ಸೇರಿರುವ ಎರಡನೇ ಮತ್ತು ಮೂರನೇ ಅಣೆಕಟ್ಟುಗಳನ್ನು ಅನುಕ್ರಮವಾಗಿ ಟಿಕಾರಪಾರ ಮತ್ತು ನಾರಜ್ ಎಂಬಲ್ಲಿ ನಿರ್ಮಿಸಲಾಗಿದೆ. ಇನ್ನೂ ಕೆಲವು ಅಣೆಕಟ್ಟುಗಳನ್ನು ಮಹಾನದಿಯ ಉಪನದಿಗಳಿಗೆ ನಿರ್ಮಿಸಲು ಯೋಜಿಸಲಾಗಿದೆ. ಅವುಗಳೆಂದರೆ, ಇಬ್, ಮಂಡ್ ಮತ್ತು ತೆಲ್. ಮಹಾನದಿ ಮುಖಜ ಭೂಮಿ ನೀರಾವರಿ ಯೋಜನೆಯು 6.84 ಹೆಕ್ಟೇರು ಭೂಮಿಗೆ ನೀರನ್ನು ಒದಗಿಸಬಲ್ಲದು. ಎರಡನೆಯ ಅಣೆಕಟ್ಟು ಟಿಕಾರಪಾರವು 1271 ಮೀ. ಉದ್ದವಾಗಿದೆ. ಇದಕ್ಕೆ ಹೊಂದಿಕೊಂಡಂತೆ 16 ವಿದ್ಯುತ್ ಜನಕ ಘಟಕಗಳಿದ್ದು ತಲಾ 125 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ನಾರಜ್ ಎಂಬಲ್ಲಿ ನಿರ್ಮಿಸಿರುವ ಮೂರನೆ ಅಣೆಕಟ್ಟೆಯು 1353 ಮೀ. ಉದ್ದವಾಗಿದೆ ಮತ್ತು ಇಲ್ಲಿಂದ 386.2 ಕಿ.ಮೀ ಉದ್ದವಾದ ಕಾಲುವೆಗಳನ್ನು ತೊಡಿದ್ದು ಅವು 5.4 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಒದಗಿಸುವ ಸಾಮರ್ಥ್ಯ ಹೊಂದಿವೆ. ಈ ಯೋಜನೆಯ ಪ್ರಮುಖ ಉದ್ದೇಶಗಳು ಕೆಳಕಂಡಂತಿವೆ.
1. ಪ್ರವಾಹ ನಿಯಂತ್ರಣ. 3. ಜಲವಿದ್ಯುತ್ ಉತ್ಪಾದನೆ.
2. ನೀರಾವರಿ ಅಭಿವೃದ್ಧಿ,
4. ಕೃಷ್ಣಾ ಮೇಲ್ದಂಡೆ ಯೋಜನೆ
4. ನೌಕಾಯಾನ, ಮನರಂಜನೆ ಸೌಲಭ್ಯ ಮತ್ತು ಅರಣೀಕರಣ.
ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಗೆ ನಿರ್ಮಿಸಿರುವ ಅತಿ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದು ಎರಡು ಅಣೆಕಟ್ಟುಗಳನ್ನು ಒಳಗೊಂಡಿರುತ್ತದೆ: ಆಲಮಟ್ಟಿ ಮತ್ತು ನಾರಾಯಣಪುರ, ಆಲಮಟ್ಟಿ ಅಣೆಕಟ್ಟನ್ನು ಬಸವನಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಸಮೀಪ ನಿರ್ಮಿಸಲಾಗಿದ್ದು, ನಾರಾಯಣಪುರ ಅಣೆಕಟ್ಟು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ನಿರ್ಮಿಸಲಾಗಿದೆ. ಆಲಮಟ್ಟಿ ಅಣೆಕಟ್ಟೆಯ
ನಾರಾಯಣಪುರ ಅಣೆಕಟ್ಟಿನಿಂದ ನಿರ್ಮಿತವಾದ ಜಲಾಶಯಕ್ಕೆ 'ಬಸವಸಾಗರ' ಎಂತಲೂ ಹಾಗೂ ತುಂಗ ಭದ್ರ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯಕ್ಕೆ 'ಪಂಪಸಾಗರ' ಎಂದು ಹೆಸರಿಸಲಾಗಿದೆ. ಈ ಯೋಜನೆಯನ್ನು ವಿವಿಧ ಹಂತಗಳಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಅವುಗಳನ್ನು ಇಷ್ಟರಲ್ಲಿಯೇ ಪೂರ್ಣಗೊಳಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಂಡ ಮೇಲೆ ಇದು ಸುಮಾರು 6.22 ಲಕ್ಷ ಹೆಕ್ಟೇರು ಭೂಮಿಗೆ
ನೀರಾವರಿ ಪೂರೈಸುತ್ತದೆ. ಇದರ ಲಾಭ ಪಡೆಯುವ ಭಾಗಗಳೆಂದರೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ಬಾಗಲಕೋಟೆ ಮತ್ತು ಜಮಖಂಡಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ ಮತ್ತು ಇಂಡಿ, ಬೆಳಗಾವಿ ಜಿಲ್ಲೆಯ ಅಥಣಿ, ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ಹಾಗೂ ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ, ರಾಯಚೂರು ಜಿಲ್ಲೆಯ ದೇವದುರ್ಗ, ರಾಯಚೂರು ಮತ್ತು ಮಾನ್ವಿ ತಾಲ್ಲೂಕುಗಳು. 2008ರ ವೇಳೆಗೆ 5.90 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಲಾಗಿತ್ತು. ಆಲಮಟ್ಟಿಯಲ್ಲಿ ನಿರ್ಮಿಸುವ 6 ಜಲ ವಿದ್ಯುತ್ ಜನಕಗಳು ಈ ಯೋಜನೆಗೆ ಸೇರಿವೆ. ಅವುಗಳ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ 268 ಮೆ.ವ್ಯಾ.ಗಳಾಗಿದೆ.