2021 ರ ಮಾರ್ಚ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ (WEF-World Economic Forum) ಯಿಂದ ಪ್ರಕಟಗೊಂಡ
WORLD CONOMIC
Global Gender FORUM Gap Report 2021 INSIGHT REPORT
MARCH 2021
ಜಾಗತಿಕ ಅಂಗ ಅಂತರ ವರದಿ- 2021ರಲ್ಲಿ 156 ರಾಷ್ಟ್ರಗಳಿಗೆ ಸಂಬಂಧಿಸಿದ್ದು, ಭಾರತವು 0.63 ಅಂಕಗಳೊಂದಿಗೆ 140ನೇ ಸ್ಥಾನ ಪಡೆದಿದೆ. 2020ರ ವರದಿಯಲ್ಲಿ ಭಾರತವು ಈ ಸೂಚ್ಯಂಕದಲ್ಲಿ 112 ನೇ ಸ್ಥಾನ ಪಡೆದಿತ್ತು. ಆದರೆ 2021 ರಲ್ಲಿ ಭಾರತವು 28 ಸ್ಥಾನಗಳನ್ನು ಕಳೆದುಕೊಂಡಿದೆ. ರಾಜಕೀಯ, ಆರ್ಥಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ
ವಿವಿಧ ಆಯಾಮಗಳ ಪ್ರಗತಿಗೆ ಈ ಸೂಚ್ಯಂಕವು ಸಂಬಂಧಿಸಿದೆ. ದಕ್ಷಿಣ ಏಷ್ಯಾ ವಿಭಾಗವು ವರದಿಯನ್ವಯ ಅತ್ಯಂತ ಕಳಪೆ ಪ್ರಗತಿ ಹೊಂದಿದೆ.
ಭಾರತವು 2021ರ ಜಾಗತಿಕ ಲಿಂಗ ಅಂತರ ಸೂಚ್ಯಂಕ | ವರದಿಯಲ್ಲಿ 0.63 ಅಂಕಗಳೊಂದಿಗೆ 140ನೇ ಪಡೆದಿದೆ. ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ಪೈಕಿ ಭಾರತವು 5ನೇ ಸ್ಥಾನ ಹಾಗೂ ಸಾರ್ಕ್ ಒಕ್ಕೂಟದ ರಾಷ್ಟ್ರಗಳ ಪೈಕಿ 6ನೇ ಮಹಿಳೆ ಮತ್ತು ಸ್ಥಾನ ಪಡೆದಿದೆ. ಭಾರತವು 62.5% ಪ್ರಮಾಣದಲ್ಲಿ ಮಾತ್ರ
ಲಿಂಗ ತಾರತಮ್ಯವನ್ನು ನಿವಾರಿಸಲು ಸಫಲವಾಗಿದೆ. ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವಕಾಶಗಳ ಉಪ ಸೂಚ್ಯಂಕದಲ್ಲಿ ಲಿಂಗ ಅಂತರ ಹೆಚ್ಚಾಗಿದೆ. ರಾಜಕೀಯ
ಸಬಲೀಕರಣ ಕುರಿತ ಸೂಚ್ಯಂಕದಲ್ಲಿ ಭಾರತವು ಶೇ. 13.5 ಅಂಕಗಳಷ್ಟು ಹಿನ್ನಡೆ ಸಾಧಿಸಿದೆ. 2019 ರಲ್ಲಿ ಮಹಿಳಾ ಸಚಿವರ ಸಂಖ್ಯೆ ಶೇ. 23.1 ರಷ್ಟಿದ್ದು, 2021ರಲ್ಲಿ ಶೇ. 9.1 ಕ್ಕೆ ಕುಸಿದಿದೆ. ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆಯಾಗಿದ್ದು, ಭಾರತದ ರಾಂಕಿಂಗ್ ಕುಸಿಯಲು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಮಹಿಳಾ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆ ದರವು ಶೇ. 24.8 ರಷ್ಟಿದ್ದು, ಪ್ರಸ್ತುತ 22.3 ಕ್ಕೆ ಇಳಿಕೆಯಾಗಿದೆ. ಶೇ. ದೇಶದಲ್ಲಿ ಮಹಿಳೆಯರ ಆದಾಯವು ಪುರುಷರ ಆದಾಯದ 1/5 ರಷ್ಟಿದೆ. ದೇಶದಲ್ಲಿ ಭ್ರೂಣಲಿಂಗ ಪತ್ತೆ ಅಧಿಕ ಪ್ರಮಾಣದಲ್ಲಿ
ಇರುವುದರಿಂದ ಶಿಶುಗಳ ಲಿಂಗಾನುಪಾತದಲ್ಲಿಯೂ ಭಾರೀ ಅಂತಹ ಕಂಡುಬಂದಿದೆ. ಪ್ರತೀ ನಾಲ್ಕು ಮಹಿಳೆಯರ ಪೈಕಿ ಒಬ್ಬರಿಗಿಂತ ಹೆಚ್ಚು ಮಂದಿ ತನ್ನ ಜೀವಿತಾವಧಿಯಲ್ಲಿ ಹತ್ತಿರದ ಸಂಬಂಧಿಗಳಿಂದ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಶೇ. 71.9 ರಷ್ಟು ಲಿಂಗ ಅಂತರ ನಿವಾರಣೆಯಾಗಿದ್ದು, ಇದು ಅಫ್ಘಾನಿಸ್ತಾನದಲ್ಲಿ ಶೇ. 44.4 ರಷ್ಟು ಮಾತ್ರ ಇದೆ.
ವಿಶ್ವ ಆರ್ಥಿಕ ವೇದಿಕೆ (WEF): ಸ್ಥಾಪನೆ:- 1971, * ಮೊದಲ ಹೆಸರು: ಐರೋಪ್ಯ ನಿರ್ವಹಣಾ ವೇದಿಕೆ.
* ಮರುನಾಮಕರಣ: 1987,
ಕೇಂದ್ರ ಕಛೇರಿ: ಸ್ವಿಡ್ವರ್ಲೆಂಡ್‌ನ ಕಲೋಗನಿ, *ಪ್ರಸ್ತುತ ಅಧ್ಯಕ್ಷರು: Klaus Schwab (The fourth Industrial revolution ಗ್ರಂಥದ ಕರ್ತೃ) * ವಾರ್ಷಿಕ ಸಭೆ ನಡೆಸುವ ಸ್ಥಳ: ಸ್ವಿಡ್ವರ್ಲೆಂಡ್‌ನ ದಾವೋಸ್ (2021ರ ಜನವರಿಯಲ್ಲಿ The Great Reset ಧೈಯವಾಕ್ಯದಲ್ಲಿ ಜರುಗಿತ್ತು).
* ಪ್ರಕಟ ಪಡಿಸುವ ವರದಿಗಳು: ಜಾಗತಿಕ ಸ್ಪರ್ಧಾತ್ಮಕ ವರದಿ, ಜಾಗತಿಕ ಮಾಹಿತಿ ತಂತ್ರಜ್ಞಾನ ವರದಿ, ಜಾಗತಿಕ ಲಿಂಗ ಅಂತರ ವರದಿ, ಪ್ರವಾಸೋದ್ಯಮ ಸ್ಪರ್ಧಾತ್ಮಕ ವರದಿ, ಅಂತರ್ಗತ ಅಭಿವೃದ್ಧಿ ಸೂಚ್ಯಂಕ, ಜಾಗತಿಕ ಗಂಡಾಂತರ ವರದಿ.
No comments:
Post a Comment