Amarshilpi jakanachari

 

2021ರ ಜನವರಿ 1 ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿತ್ತು. 2020-21ನೇ ಸಾಲಿನ ಆಯವ್ಯಯದಲ್ಲಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆ ಬಗ್ಗೆ ಘೋಷಣೆ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2021ರ ಜನವರಿ 1 ಅನ್ನು ಜಕಣಾಚಾರಿಯವರ ಜನ್ಮ ದಿನವನ್ನಾಗಿ ರಾಜ್ಯ ಸರ್ಕಾರ ಆಚರಿಸಿದೆ. ಅಮರಶಿಲ್ಪಿ ಜಕಣಾಚಾರಿಯವರು ತಮ್ಮ ಜೀವನವನ್ನು ಕಲೆಗಾಗಿ ಮುಡುಪಾಗಿಟ್ಟಿದ್ದು, ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತ ಕಥೆಯಾಗಿದ್ದಾರೆ. ಹಾಗೂ ಶಿಲ್ಪಿಯಾಗಿ ವಿಶ್ವ ಖ್ಯಾತ ಹೊಂದಿದ್ದಾರೆ. 

ಅಮರಶಿಲ್ಪಿ ಜಕಣಾಚಾರಿ ಬಗ್ಗೆ ಮಾಹಿತಿ ಅಮರಶಿಲ್ಪಿ ಜಕಣಾಚಾರಿಯವರು ಅತ್ಯಂತನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ - ದಂತಕಥೆಯಾದ ಶಿಲ್ಪಿ. ಇವರು ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಮತ್ತು ಹಳೇಬೀಡುಗಳಲ್ಲಿ ನಿರ್ಮಿಸಿದ್ದಾರೆ. ತುಮಕೂರು ಜಿಲ್ಲೆಯ ಕೈದಾಳದಲ್ಲಿ ಜಕಣಾಚಾರಿಯವರು ಜನಿಸಿದ್ದರು. ತನ್ನ ಹುಟ್ಟೂರಾದ ಕ್ರೀಡಾಪುರದಲ್ಲಿ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಈ ಕಾರ್ಯ ಮುಗಿದ ನಂತರ ಅವರ ಬಲಗೈ ಅನ್ನು ದೇವರು ಕರುಣಿಸಿದನೆಂಬ ದಂತ ಕಥೆಯಿದ್ದು, ಈ ಘಟನೆಯನ್ನು ಆಚರಿಸಿದ ನಂತರ ಈ ಕ್ರೀಡಾಪುರ ಗ್ರಾಮಕ್ಕೆ ಕೈದಾಳ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.


ಜಕಣಾಚಾರಿ ಪ್ರಶಸ್ತಿ ಬಗ್ಗೆ ಮಾಹಿತಿ: ಕರ್ನಾಟಕ ರಾಜ್ಯ ಸರ್ಕಾರವು ಶ್ರೇಷ್ಠಮ ಅಮರಶಿಲ್ಪಿ ಜಕಣಾಚಾರಿಯವರ ಕೊಡುಗೆಯನ್ನು ಸ್ಮರಿಸಲು ಪ್ರತೀ ವರ್ಷ ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ 1995 ರಿಂದ ಜಕಣಾಚಾರಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 2019ರಲ್ಲಿ ಬಿ.ಎಸ್.ಯೋಗಿರಾಜ ಅವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.

Post a Comment (0)
Previous Post Next Post