2020ರಲ್ಲಿ ಸುದ್ದಿಯಲ್ಲಿದ್ದ ಕರ್ನಾಟಕದ ಪ್ರಮುಖ ಸ್ಥಳಗಳು
ಗದಗ 2020ರ ನವೆಂಬರ್ 11ಕ್ಕೆ ಗಾಂಧೀಜಿಯವರು ಗದಗ ಜಿಲ್ಲೆಗೆ ಭೇಟಿ ನೀಡಿದ್ದ 100ನೇ ವರ್ಷದ ನೆನಪಿಗಾಗಿ ಗದಗದಲ್ಲಿ ಸಬರಮತಿ ಆಶ್ರಮ ಸ್ಥಾಪನೆ ಯೋಜನೆಗೆ ಚಿಂತನೆ, ಗದಗ ಜಿಲ್ಲೆಯ ಹುಲಕೋಟಿ ಗ್ರಾಮ ಪಂಚಾಯಿತಿಯು ಮಿಷನ್ ಅಂತ್ಯೋದಯ ಯೋಜನೆಯಲ್ಲಿ ಮೊದಲ ಬ್ಯಾಂಕ್ ಪಡೆದಿದೆ.
* ದಾವಣಗೆರೆ - ಗ್ರಾಮೀಣ ಭಾಗದ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗಲು ಪ್ರಾಯೋಗಿಕವಾಗಿ ಗ್ರಾಮಯೋಜನೆ ಜಾರಿ.
* ಉಡುಪಿ - ಆರ್‌ಬಿಐ ವತಿಯಿಂದ ಅಂತರ್ಜಾಲ ರಹಿತ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಲು ಪ್ರಾಯೋಗಿಕ ಆಯ್ಕೆ.
* ಬೆಂಗಳೂರು - ನಾಗರಿಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ನೇರವಾಗಿ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ಯೋಜನೆಗೆ ಜಾರಿ, 2020ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ವರ್ಚುವಲ್ ಆಧಾರದಲ್ಲಿ ಬಿಟಿಎಸ್ (ಬೆಂಗಳೂರು ಟೆಕ್ ಸಮ್ಮಿಟ್) ಅನ್ನು Next Is Now ಧೈಯವಾಕ್ಯದಲ್ಲಿ ಆಯೋಜನೆ, ಭಾರತದ ನವೋದ್ಯಮಗಳ ರಾಜಧಾನಿ. ನೀವು ನೀವಾಗಿರಿ ಎಂಬ ಲೋಗೋವನ್ನು ಹೊಂದಿರುವ ನಗರ.
* ಹಾವೇರಿ 2021ರ ಫೆಬ್ರುವರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನ ಸ್ಥಳ, ಹಾವೇರಿ ರೈಲ್ವೆ ನಿಲ್ದಾಣವನ್ನು ಮೈಲಾರ ಮಹದೇವಪ್ಪ ರೈಲ್ವೇ ನಿಲ್ದಾಣವೆಂದು ಮರುನಾಮಕರಣ. * ವಿಜಯನಗರ - ಕರ್ನಾಟಕದ 31ನೇ ಜಿಲ್ಲೆಯಾಗಿ ರಚನೆಯಾಗಲು ಸಚಿವ ಸಂಪುಟ ಸಮ್ಮತಿ.
* ಐಐಎಸ್‌ಸಿ ಬೆಂಗಳೂರು - 2021ರ ಏಷ್ಯಾ ವಿವಿ ಬ್ಯಾಂಕಿಂಗ್‌ನಲ್ಲಿ 58ನೇ ಸ್ಥಾನ. ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಎನ್‌ಐಆರ್‌ಎಫ್ ಬ್ಯಾಂಕಿಂಗ್‌ನಲ್ಲಿ 2ನೇ ಸ್ಥಾನ. ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಟಲ್ ನಾವೀನ್ಯತಾ ಬ್ಯಾಂಕಿಂಗ್‌ನಲ್ಲಿ 4ನೇ ಅತ್ಯುತ್ತಮ ಸೃಜನಶೀಲ ಸಂಸ್ಥೆ, 2021ನೇ ಸಾಲಿನ ಟೈಂ ಹೈಯರ್ ಎಜುಕೇಷನ್ ವಿವಿ ಬ್ಯಾಂಕಿಂಗ್‌ನಲ್ಲಿ
ದೇಶದ ನಂ.1 ವಿವಿ -ಮೈಸೂರು - ಅರಮನೆ ನಗರ ಮೈಸೂರಿನಲ್ಲಿ ದೇಶದ ಮೊದಲ ಶ್ರೀಗಂಧ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಚಿಂತನೆ. ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷಣ್ ಅವರ ಕಾಮನ್ ಮ್ಯಾನ್ ಆಳೆತ್ತರದ ಪ್ರತಿಮೆಯನ್ನು ರೈಲ್ವೆ ಇಲಾಖೆ ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಸ್ಥಾಪನೆ.
* ಚಿತ್ರದುರ್ಗ – ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ ಮುರುಘಾಶ್ರೀ ಪ್ರಾಚ್ಯ ವಸ್ತು ಸಂಗ್ರಹಾಲಯ ನಿರ್ಮಾಣ. ಮಲ್ಪೆ ಬೀಚ್ ಕರ್ನಾಟಕದ ಮೊದಲ ವಿಂಚ್ ಪ್ಯಾರಾಸೈಲಿಂಗ್
ಚಳ್ಳಕೆರೆ- ಸ್ವದೇಶಿ ಡೋನ್ 'ರುಸ್ತುಂ-2' ಅನ್ನು ಚಳ್ಳಕೆರೆಯಲ್ಲಿರುವ ಡಿಆರ್‌ಡಿಒ ಘಟಕದಲ್ಲಿ ಪರೀಕ್ಷೆ, ಎಚ್‌ಎಎಲ್-ಐಐಎಸ್‌ಸಿ ಕೌಶಲ್ಯಾಭಿವೃದ್ಧಿ ಕೇಂದ್ರ ಆರಂಭ.
ನೆನಪಿರಲಿ: ಕರ್ನಾಟಕ ರಾಜ್ಯವು 5.05% ಜನಸಂಖ್ಯೆ ಹೊಂದಿದ್ದು, ದೇಶದಲ್ಲಿ 8ನೇ ಸ್ಥಾನ ಹೊಂದಿದೆ. ಶೇ. 5.83 ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ದೇಶದಲ್ಲಿ 6ನೇ ಸ್ಥಾನದಲ್ಲಿದೆ. ನೀತಿ ಆಯೋಗ ಪ್ರಕಟಿಸಿದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯವು 6ನೇ ಸ್ಥಾನದಲ್ಲಿದೆ. ಡಿಪಿಐಐಟಿ ಮಾಹಿತಿಯನ್ವಯ ರಾಜ್ಯವು ಬಂಡವಾಳ ಹೂಡಿಕೆ ಆಕರ್ಷಣೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಎನ್‌ಎಸ್‌ಒ ಮಾಹಿಯನ್ವಯ ಕರ್ನಾಟಕವು 77.2 % ಸಾಕ್ಷರತೆಯೊಂದಿಗೆ ದೇಶದಲ್ಲಿ 15ನೇ ಸ್ಥಾನದಲ್ಲಿದೆ. (ಭಾರತವು 2020ರ ಮಾಹಿತಿಯನ್ವಯ ಶೇ. 77.7 ರಷ್ಟು ಸಾಕ್ಷರತೆ ದರವನ್ನು ಹೊಂದಿದೆ). ಕರ್ನಾಟಕದಲ್ಲಿ ಪುರುಷರ ಸಾಕ್ಷರತೆ 83.4 ಮತ್ತು ಮಹಿಳಾ ಸಾಕ್ಷರತೆ ಶೇ. 70.5 ಆಗಿದೆ.