mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Thursday, 27 May 2021

ಕರ್ನಾಟಕದ ಏಕೀಕರಣ

       ಭಾರತದ ಸ್ವಾತಂತ್ರ್ಯ ಕಾಯ್ದೆ 1947 (Indian Independence Act 1947) ಭಾರತ ಮತ್ತು ಪಾಕಿಸ್ತಾನದ ರಚನೆಯನ್ನು ಮಾಡಿತು. 562 ದೇಶೀಯ ರಾಜ್ಯಗಳಿಗೆ ಭಾರತ ಅಥವಾ ಪಾಕಿಸ್ತಾನವನ್ನುಸೇರುವ ಇಲ್ಲವೇ ಸ್ವತಂತ್ರವಾಗಿರುವ ಆಯ್ಕೆ ನೀಡಿತು. ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಬಭಾಯಿ ಪಟೇಲ್ ಸ್ವತಂತ್ರವಾಗಿರಬಯಸಿದ್ದ ದೇಶೀಯ ರಾಜ್ಯಗಳನ್ನು ಭಾರತದ ಒಕ್ಕೂಟವನ್ನು ಸೇರುವಂತೆ ಮನವೊಲಿಸಿದರು. ವಿಲೀನ ಒಪ್ಪಂದಕ್ಕೆ (Irnstrument of Accesion) ಸಹಿ ಹಾಕಿದ ರಾಜರಿಗೆ ಸರ್ಕಾರವು ನಿಗದಿತ ಮೊತ್ತದ 'ರಾಜಧನವನ್ನು ನೀಡಿತು ಹಾಗು ಕೆಲವು ಸವಲತ್ತುಗಳನ್ನು ಮತ್ತು ಬಿರುದುಗಳನ್ನು ಹೊಂದಿರಲು ಅನುಮತಿಸಿತು. ಹೈದರಾಬಾದ್, ಕಾಶ್ಮೀರ ಹಾಗು ಜೂನಾಗಡದ ರಾಜರು ಭಾರತದ ಒಕ್ಕೂಟವನ್ನು ಸೇರಲು ನಿರಾಕರಿಸಿದರು. ಜೂನಾಗಡದ ನವಾಬ ಪಾಕಿಸ್ತಾನಕ್ಕೆ ಸೇರಲು ಪ್ರಯತ್ನಗಳನ್ನು ನಡೆಸಿದ್ದ ಹಾಗು ಜನರು ಅವನ ವಿರುದ್ಧ ದಂಗೆಯೆದ್ದದ್ದರಿಂದ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಸರ್ದಾರ್ ಪಟೇಲರು ಜೂನಾಗಡವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತದ ಒಕ್ಕೂಟವನ್ನು ಸೇರುವ ನಿರ್ಧಾರವನ್ನು ನಿಧಾನ ಮಾಡುತ್ತಿದ್ದುದರಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ದಾಳಿ ಕೋರರನ್ನು ಕಳುಹಿಸುವ ಅವಕಾಶ ಪಾಕಿಸ್ತಾನಕ್ಕೆ ದೊರೆಯಿತು. ಭಾರತದ ಸೇನೆಯು ಈ ದಾಳಿಕೋರರನ್ನು ಹಿಮ್ಮೆಟ್ಟಿಸಿತು. ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್‌ಫರೆನ್ಸ್‌ನ ನಾಯಕರಾದ ಷೇಕ್ ಅಬ್ದುಲ್ಲಾ ಭಾರತದ ಒಕ್ಕೂಟವನ್ನು ಸೇರಲು ಒಪ್ಪಿದರು. ಆಗಿನಿಂದಲೂ ಪಾಕಿಸ್ತಾನ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಅನೇಕ ಸಲ ಪ್ರಯತ್ನಿಸಿದೆ ಹಾಗು ಕಾಶ್ಮೀರದ ಹಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಭಾರತದಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆದು ಈಗ ಭಯೋತ್ಪಾದಕರನ್ನು ಕಳುಹಿಸುತ್ತಿದೆ. ಪೊಲೀಸ್ ಕಾರ್ಯಾಚರಣೆಯ ನಂತರ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು. ಹೈದರಾಬಾದಿನ ಜನರ ಮೇಲೆ ನಿಜಾಮನ ದಬ್ಬಾಳಿಕೆಯಿಂದಾಗಿ ಈ ಕ್ರಮ ಅನಿವಾರ್ಯ ವಾಯಿತು.


ರಾಜ್ಯಗಳ ಪುನರ್ ಸಂಘಟನೆ:


ಹೈದರಾಬಾದಿನ ವಿಲೀನದ ನಂತರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತೆಲುಗು ಭಾಷೆಯನ್ನು ಮಾತನಾಡುವ ಜನರನ್ನೆಲ್ಲಾ ಒಗ್ಗೂಡಿಸಿ, ಆಂಧ್ರಪ್ರದೇಶವನ್ನು ಸೃಷ್ಟಿಸಲು ಒಪ್ಪಿತು, ಹೊಟ್ಟಿ ಶ್ರೀರಾಮುಲು ಆಂಧ್ರಪ್ರದೇಶದ ರಚನೆಯನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿ 58ನೇ ದಿನದಂದು 1952ರಲ್ಲಿ ಸಾವನ್ನಪ್ಪಿದರು. ಇದು ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿರ್ಮಿಸಿತು. ಈ ಪುಬ್ಧತೆಯು ಭಾಷೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಏಕೀಕರಣವನ್ನು ಬಯಸುತ್ತಿದ್ದ ಇತರೆ ಸಾಂತ್ಯಗಳಿಗೂ ಪರಡಿತು.


ಕನ್ನಡ ಮಾತನಾಡುತ್ತಿದ್ದ ಪ್ರದೇಶಗಳೂ ಏಕೀಕರಣ ಬಯಸುತ್ತಿದ್ದವು. ಆದರೆ ಆ ಪ್ರದೇಶಗಳು ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಾಡಳಿತ ಹಾಗು ಉಳಿದ ಭಾಗಗಳು ಮೈಸೂರು ರಾಜ್ಯ, ಹೈದರಾಬಾದ್, ಸಾಂಗ್ಲಿ, ಮೀರಜ್, ಜಮಖಂಡಿ, ಸಂಡೂರು, ಸವಣೂರು, ಮುಧೋಳ, ಅಕ್ಕಲ್‌ಕೋಟೆ, ಜತ್ತ, ರಾಮದುರ್ಗ, ಮುಂತಾದ ದೇಶೀಯ ಆಡಳಿತಗಳಲ್ಲಿದ್ದವು.


ಐಕ್ಯತೆಗೆ ಕಾರಣವಾದ ಪ್ರಮುಖ ಅಂಶಗಳು


1. ಸಂಯುಕ್ತ ಕರ್ನಾಟಕ, ವಿಶಾಲ ಕರ್ನಾಟಕ, ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು,


2. ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ 'ಕರ್ನಾಟಕ ಗತ ವೈಭವ' ಮತ್ತು ಅಂತಹ ಇತರ ಕೃತಿಗಳು. 3. ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡ ಸಾಹಿತ್ಯ ಪರಿಷತ್, ಮುಂತಾದ ಸಂಘ-ಸಂಸ್ಥೆಗಳು,


4. ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ


ನಮ್ಮ ಚೆಲುವ ಕನ್ನಡ ನಾಡು, ಶಾಂತ


ಕವಿಯ 'ರಕ್ಷಿಸು ಕರ್ನಾಟಕ ದೇವಿ', ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ' ಬಿ.ಎಂ.ಶ್ರೀಯವರ 'ಏರಿಸು ಹಾರಿಸು ಕನ್ನಡದ ಬಾವುಟ', ಮಂಗೇಶ ಪೈಯವರ 'ತಾಯೆ ಬಾರ ಮೊಗವ ತೋರ


ಕನ್ನಡಿಗರ ಮಾತೆಯೇ' ಮುಂತಾದ ಕವನಗಳು 5. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಸಭಾ, ಮುಂತಾದವು ಏಕಿಕರಣದ ಕಾರ್ಯವನ್ನು


ಕೈಗೆತ್ತಿಕೊಂಡವು. ಕರ್ನಾಟಕ ಸಭಾ ಮುಂದೆ ಕರ್ನಾಟಕ ಏಕೀಕರಣ ಸಮಿತಿಯಾಯಿತು. ಸಿದ್ದಪ ಕಂಬ್ಳೆ ಇದರ ಪ್ರಥಮ ಅಧ್ಯಕ್ಷರಾಗಿದ್ದರು.


6. ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡರು. 7. 1928ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು.


8. ಆಲೂರು ವೆಂಕಟರಾಯರು, ಸಿದ್ದಪ್ಪ ಕಂಬಿ, ಗುದ್ದೆಪ್ಪ ಹಳ್ಳಿಕೇರಿ, ಆರ್.ಎಚ್. ದೇಶಪಾಂಡೆ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀನಿವಾಸರಾವ್ ಮಂಗಳವೇಡೆ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ ಮುಂತಾದ ನಾಯಕರ ಪ್ರಯತ್ನಗಳು.


ರಾಜ್ಯಗಳ ಪುನರ್‌ರಚನೆಯ ಪ್ರಶ್ನೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು 'ಧಾರ್‌ ಸಮಿತಿಯನ್ನು ನೇಮಿಸಿತು. ಈ ಸಮಿತಿಯು


ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ತಿರಸ್ಕರಿಸಿತು ಹಾಗು ಇದು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ಅಭಿಪ್ರಾಯಪಟ್ಟಿತು. ಇದರಿಂದ ಜನರು ಅತೃಪ್ತಗೊಂಡರು ಮತ್ತು ಹೋರಾಟಗಳು ಮುಂದುವರೆದವು. 1949ರಲ್ಲಿ ಜೆ.ವಿ.ಪಿ ಸಮಿತಿ'ಯನ್ನು (ಜವಹಾರ್‌ಲಾಲ್ ನೆಹರು, ವಲ್ಲಬಭಾಯಿ ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯ) ರಚಿಸಲಾಯಿತು. ಈ ಸಮಿತಿಯು ಆಂಧ್ರಪ್ರದೇಶದ ರಚನೆಗೆ ಒಪ್ಪಿಗೆ ಸೂಚಿಸಿತಾದರೂ ಕರ್ನಾಟಕದ ರಚನೆಯನ್ನು ತಿರಸ್ಕರಿಸಿತು. ಆಗ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅಂದಾನಪ್ಪ ದೊಡ್ಡಮೇಟಿ ಬಾಂಬೆ ಶಾಸನ ಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಉಪವಾಸವನ್ನು ಆರಂಭಿಸಿದರು. ಅಂತಿಮವಾಗಿ ರಾಜ್ಯಗಳ ಪುನರ್ವಿಂಗಡನಾ ಸಮಿತಿಯನ್ನು 1953ರಲ್ಲಿ ರಚಿಸಲಾಯಿತು. ಈ ಸಮಿತಿಯಲ್ಲಿ ಫಜಲ್ ಆಲಿ ಚೇರಮನ್ನರಾಗಿದ್ದರು ಮತ್ತು ಎಚ್.ಎನ್, ಬಂಜು ಹಾಗು ಕೆ.ಎಂ. ಪಣಿಕ್ಕರ್ ಸದಸ್ಯರಾಗಿದ್ದರು. ಆದ್ದರಿಂದ ಇದನ್ನು 'ಫಜಲ್ ಅಲಿ ಸಮಿತಿ' ಎಂದೂ ಕರೆಯಲಾಗಿದೆ. 1955ರಲ್ಲಿಅದು ವರದಿ ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸುಗಳು 1 ನವೆಂಬರ್ 1956ರಂದು ಅನುಷ್ಠಾನಗೊಂಡು ಮನರ್‌ ಸಂಘಟಿತ ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದಿತು. ಇದನ್ನು ಹೊಸ ಮೈಸೂರು ರಾಜ್ಯ ಎಂದು ಕರೆಯಲಾಯಿತು.


ಹಳೆಯ ಮೈಸೂರು ರಾಜ್ಯ, ಹೈದರಾಬಾದ್ ಪ್ರಾಂತ್ಯದಿಂದ ರಾಯಚೂರು, ಬೀದರ್‌ ಮತ್ತು ಗುಲ್ಬರ್ಗಾ ಜಿಲ್ಲೆಗಳು, ಬಾಂಬೆ ಪ್ರಾಂತ್ಯದಿಂದ ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗು ಮದ್ರಾಸ್ ಪ್ರಾಂತ್ಯದಿಂದ ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಕೊಳ್ಳೇಗಾಲ ಹಾಗು ಕೊಡಗುಗಳನ್ನು ಒಗ್ಗೂಡಿಸಿ 1 ನವೆಂಬರ್ 1956ರಂದು ಏಕೀಕೃತ ನವ ಮೈಸೂರು ರಾಜ್ಯ ರಚಿಸಲ್ಪಟ್ಟಿತು. ಇದರಲ್ಲಿ 19ಜಿಲ್ಲೆಗಳಿದ್ದವು, ಎಸ್. ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. 1 ನವೆಂಬರ್ 1973ರಂದು ಇದು ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಆಗ ದೇವರಾಜ ಅರಸ್ ಮುಖ್ಯಮಂತ್ರಿಯಾಗಿದ್ದರು.

ಕಲ್ಲಿದ್ದಲಿನ ಬಗ್ಗೆ ಪ್ರಮುಖ ಪ್ರಶ್ನೆಗಳು https://www.mahitiloka.co.in/2021/05/blog-post_26.html ಮೈಸೂರು ಒಂದು ಮಾದರಿ ರಾಜ್ಯ https://www.mahitiloka.co.in/2021/05/blog-post_38.html 

 ಭೂಮಿ ನಮ್ಮ ಜೀವಂತ ಗ್ರಹ https://www.mahitiloka.co.in/2021/05/blog-post_37.html

ರಾಷ್ಟ್ರಕೂಟರು https://www.mahitiloka.co.in/2021/05/blog-post_48.html 

 ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು https://www.mahitiloka.co.in/2021/05/blog-post_91.html

📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು 📌https://www.mahitiloka.co.in/2021/05/blog-post_20.html 

 ➡ ಕೃಷಿ ವಿಧಗಳು 👉https://tinyurl.com/yf9437kz 

 ➡ ವಾಯುಮಂಡಲದ ರಚನೆ 👉https://tinyurl.com/yj8wkk36 

 ➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು 👉https://tinyurl.com/yj4rzwog 



 ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ 🙏🙏🙏🙏🙏🙏🙏🙏🙏🙏🙏🙏🙏 




No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದಲ್ಲಿನ ಒಟ್ಟು ರಾಷ್ಟ್ರೀಯ ಉದ್ಯಾನಗಳು ನಕ್ಷೆ, ರಾಜ್ಯವಾರು ಪಟ್ಟಿ Total National Parks in India

    ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು: ಭಾರತದಲ್ಲಿ 106 ರಾಷ್ಟ್ರೀಯ ಉದ್ಯಾನವನಗಳು 44,378 ಚ.ಕಿ.ಮೀ. ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ  , ನಕ್ಷೆ , UPSC ಪರೀಕ್ಷೆಗಾಗಿ ಭಾರತದ ರಾಷ್ಟ್ರೀಯ ಉದ್ಯಾನವನಗಳ ರಾಜ್ಯವಾರು ಪಟ್ಟಿ.   ಪರಿವಿಡಿ   ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಭಾರತದಲ್ಲಿ ರಾಷ್ಟ್ರೀಯ ಉದ್ಯಾನಗಳು 2023 : ಭಾರತವು ವೈವಿಧ್ಯಮಯ ಜಾತಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮಲ್ಲಿ ವೈವಿಧ್ಯಮಯ ಸಸ್ಯಗಳು ಮತ್ತು ಪ್ರಾಣಿಗಳಿವೆ. ಇಂಡೋ-ಹಿಮಾಲಯನ್ ಪರಿಸರ ವಲಯವು ಸರಿಸುಮಾರು 6.2 ಪ್ರತಿಶತ ಸರೀಸೃಪಗಳು , 7.6 ಪ್ರತಿಶತ ಸಸ್ತನಿಗಳು , 6.0 ಪ್ರತಿಶತ ಹೂಬಿಡುವ ಸಸ್ಯಗಳು ಮತ್ತು 12.6 ಪ್ರತಿಶತ ಪಕ್ಷಿ ಪ್ರಭೇದಗಳನ್ನು ಒಳಗೊಂಡಿದೆ. ಅರಣ್ಯದ ವ್ಯಾಪ್ತಿಯು ಹಿಮಾಲಯ ಪ್ರದೇಶದಲ್ಲಿನ ಕೋನಿಫೆರಸ್ ಕಾಡುಗಳು ಮತ್ತು ಈಶಾನ್ಯ ಭಾರತ , ಪಶ್ಚಿಮ ಘಟ್ಟಗಳು ಮತ್ತು ಉಷ್ಣವಲಯದ ಉಷ್ಣವಲಯದ ಮಳೆಕಾಡುಗಳನ್ನು ಒಳಗೊಂಡಿದೆ.   ಭಾರತದ ನದಿಗಳು ,   ನಕ್ಷೆ ,   ಪಟ್ಟಿ ,   ಹೆಸರು ,   ಭಾರತದ ಉದ್ದವಾದ ನದಿಗಳು ಭಾರತದ ರಾಷ್ಟ್ರೀಯ ಉದ್ಯಾನಗಳ ಪಟ್ಟಿ ಭಾರತದಲ್ಲಿನ ರಾಷ್ಟ್ರೀಯ ಉದ್ಯಾನವನಗಳ ಸಂಪೂರ್ಣ ರಾಜ್ಯವಾರು ಪಟ್ಟಿ ಇಲ್ಲಿದೆ :   ಸ.ನಂ.    ರಾಜ್ಯ ( NP ಗಳ ಸಂಖ್ಯೆ)   ಭಾರತದಲ್ಲಿ ರಾಷ್ಟ್ರೀಯ ಉದ್ಯಾ...

World Milk Day: History, Significance & More 🥛🌍

                                         Introduction World Milk Day, celebrated every year on June 1st, is a global event that highlights the importance of milk as a global food. Initiated by the Food and Agriculture Organization (FAO) of the United Nations, this day serves to recognize the contributions of the dairy sector to sustainability, economic development, livelihoods, and nutrition. In this blog post, we delve into the history, significance, and various facets of World Milk Day. 🐄🥛 History of World Milk Day World Milk Day was established by the FAO in 2001. The primary aim was to acknowledge the importance of milk in the diet of humans across the globe and to celebrate the dairy sector. June 1st was chosen because several countries were already celebrating milk-related events around this time. This alignment helped to maximize the global impact of the celebrations. The fi...

ಭಾರತದ ಹವಾಮಾನ, ವಿಧಗಳು, ವಲಯಗಳು, ನಕ್ಷೆ, ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳು.

    ಭಾರತದ ಹವಾಮಾನ - ವಿಧಗಳು , ವಲಯಗಳು , ನಕ್ಷೆ , ಋತುಗಳು , ಹವಾಮಾನ. ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಇನ್ನಷ್ಟು ಓದಿ.     ಪರಿವಿಡಿ   ಭಾರತದ ಹವಾಮಾನ ಭಾರತವು "ಮಾನ್ಸೂನ್" ಹವಾಮಾನವನ್ನು ಹೊಂದಿದೆ , ಇದು ಪ್ರಾಥಮಿಕವಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಅರೇಬಿಕ್ ಪದ "ಮೌಸಿಮ್" ಎಂದರೆ ಋತುಗಳು , ಇಲ್ಲಿ "ಮಾನ್ಸೂನ್" ಎಂಬ ಪದವು ಹುಟ್ಟಿಕೊಂಡಿದೆ. ಹಲವಾರು ಶತಮಾನಗಳ ಹಿಂದೆ , ಅರಬ್ ನ್ಯಾವಿಗೇಟರ್‌ಗಳು ಮೊದಲು "ಮಾನ್ಸೂನ್" ಎಂಬ ಪದವನ್ನು ಹಿಂದೂ ಮಹಾಸಾಗರದ ಕರಾವಳಿಯ ಉದ್ದಕ್ಕೂ , ವಿಶೇಷವಾಗಿ ಅರೇಬಿಯನ್ ಸಮುದ್ರದ ಮೇಲೆ ಕಾಲೋಚಿತ ಗಾಳಿಯ ಹಿಮ್ಮುಖ ವ್ಯವಸ್ಥೆಯನ್ನು ಉಲ್ಲೇಖಿಸಲು ಬಳಸಿದರು , ಇದರಲ್ಲಿ ಬೇಸಿಗೆಯಲ್ಲಿ ನೈಋತ್ಯದಿಂದ ಈಶಾನ್ಯಕ್ಕೆ ಗಾಳಿ ಬೀಸುತ್ತದೆ. ಮತ್ತು ಚಳಿಗಾಲದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ. ಬೇರೆ ರೀತಿಯಲ್ಲಿ ಹೇಳುವುದಾದರೆ , ಮಾನ್ಸೂನ್ ಕಾಲೋಚಿತ ಮಾರುತಗಳು ನಿಯತಕಾಲಿಕವಾಗಿ ಸಂಭವಿಸುತ್ತವೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಂಪೂರ್ಣವಾಗಿ ಹಿಮ್ಮುಖ ದಿಕ್ಕನ್ನು ಹೊಂದಿರುತ್ತವೆ.   ಭಾರತವು ಮಾನ್ಸೂನ್ ಶೈಲಿಯ ಹವಾಮಾನವನ್ನು ಹೊಂದಿದ್ದರೂ ಸಹ , ದೇಶದ ಹವಾಮಾನದಲ್ಲಿ ಭೌಗೋಳಿಕ ವ್ಯತ್ಯಾಸಗಳಿವೆ. ಈ ಪ್ರಾದೇಶಿಕ ವ್ಯತ್ಯಾಸಗಳನ್ನು ಮಾನ್ಸೂನ್ ಹವಾಮಾನ ಉಪವಿಭಾಗಗಳಾಗಿ ವರ್ಗೀಕರಿಸಬಹುದು.   ತ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.