2019 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

 ಭಾರತೀಯ ಸಿನಿಮಾ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದವರಿಗೆ ಪ್ರತೀ ವರ್ಷ ಭಾರತೀಯ ಸಿನಿಮಾದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮಿಳು ಸಿನಿಮಾ ತಾರೆ, ತಮಿಳಿನ ತಲೈವಾ ಎಂದೇ ಖ್ಯಾತರಾದ ರಜಿನಿಕಾಂತ್ ರವರಿಗೆ ಕೇಂದ್ರ ಸರ್ಕಾರ ಘೋಷಿಸಿದೆ. 2019ನೇ ಸಾಲಿನ ಈ ಪ್ರಶಸ್ತಿಯನ್ನು 2021ರ ಮೇ 3 ರಂದು ಪ್ರದಾನ ಮಾಡಲಾಗುತ್ತದೆ. ರಜಿನಿಕಾಂತ್‌ರವರು ಈ ಪ್ರಶಸ್ತಿ ಪಡೆಯುತ್ತಿರುವ 51ನೇ ಸಾಧಕರಾಗಿದ್ದಾರೆ.


ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಮಾಹಿತಿ

1950ರ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಕಾನ್ಸ್‌ಟೇಬಲ್‌ ರಾಮೋಜಿರಾವ್ ಗಾಯಕ್‌ವಾಡ್ ದಂಪತಿಯ ಕೊನೆಯ ಮಗನಾಗಿ ಹುಟ್ಟಿ ಬೆಳೆದ ರಜಿನಿಯ ಮೊದಲ ಶಿವಾಜಿರಾವ್ ಗಾಯಕ್‌ವಾಡ್, ಇವರು ಬಿಎಂಟಿಸಿಯ ಕಂಡಕ್ಟರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದರು. ರಂಗ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದ ಶಿವಾಜಿರಾವ್ ಗಾಯಕ್‌ವಾಡ್‌ಗೆ 1975ರಲ್ಲಿ ತಮಿಳು ನಿರ್ದೇಶಕ ಬಾಲಚಂದರ್ ರವರು 'ಅಪೂರ್ವ ರಾಗಂಗಳ್' ಎಂಬ ತಮಿಳು ಚಿತ್ರದಲ್ಲಿ ಪಾತ್ರ ದೊರೆಯಿತು. ನಂತರ ಕೆ.ಬಾಲಚಂದರ್ ರವರ ನಿರ್ದೇಶನದ 'ಮಂಡು ಮುಗಂ ಸಿನಿಮಾ ಯಶಸ್ಸನ್ನು ತಂದುಕೊಟ್ಟಿತು. ತಮಿಳು ಚಿತ್ರರಂಗದಲ್ಲಿ ಮೇರು ನಟನಾಗಿ ಬೆಳೆದಿದ್ದಾರೆ.


      ಏಷ್ಯಾದಲ್ಲಿ ಜಾಕಿಚಾನ್ ನಂತರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತಮಿಳು ಚಿತ್ರ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿರುವ ರಜಿನಿಕಾಂತ್ ರವರು ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ, ದಳಪತಿ (1991), ಬಾದ್‌ಷಾ (1995), ಪಡೆಯಪ್ಪ (1999), ಶಿವಾಜಿ (2007), ಎಂದಿರನ್ (2010).




ದಾದಾ ಸಾಹೇಬ್ ಫಾಲ್ಲೆ ಅವರ ಬಗ್ಗೆ ಮಾಹಿತಿ : ಭಾರತೀಯ ಸಿನಿಮಾದ ಪಿತಾಮಹ ಎನಿಸಿದ ದಾದಾ ಸಾಹೇಬ್ ಫಾಲ್ಕೆ ಸಿನಿಮಾ ನಿರ್ಮಾಪಕರು,

ನಿದೇರ್ಶಕರು, ನಟರಾಗಿ, ಚಿತ್ರಕಥೆಗಾರರಾಗಿಯೂ 19 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸಿದ್ದರು. 95 ಸಿನಿಮಾಗಳನ್ನು ಮತ್ತು 29 ಕಿರುಚಿತ್ರಗಳನ್ನು ತಯಾರಿಸಿದ್ದಾರೆ. 1913ರಲ್ಲಿ ತೆರೆ ಕಂಡ ರಾಜ ಹರಿಶ್ಚಂದ್ರ ಇದೊಂದು ಮೂಕಿ ಸಿನಿಮಾ ಆಗಿದ್ದು, ಇದಲ್ಲದೇ ಸತ್ಯವಾನ್ ಸಾವಿತ್ರಿ, ಲಂಕಾದಹನ, ಕೃಷ್ಣ ಜನ್ಮ, ಕಾಳಿಯ ಮರ್ದನ ಇಂತಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ.


ರಜನಿಕಾಂತ್ (Rajinikanth) ರವರಿಗೆ ಸಂದ ಗೌರವಗಳು

ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್‌ರವರಿಗೆ 20ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಐಕಾನ್ ಆಫ್ ದಿ ಗೋಲ್ಡನ್ ಜುಬ್ಲಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2014 ರಲ್ಲಿ ಗೋವಾದಲ್ಲಿ ಜರುಗಿದ 45ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “Cen tenary Award for Indian Film Personality of the year” ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಭಾರತ ಸರ್ಕಾರವು 2000ದಲ್ಲಿ 'ಪದ್ಮಭೂಷಣ', 2013ರಲ್ಲಿ 'ಪದ್ಮವಿಭೂಷಣ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅನೇಕ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.


    ಕನ್ನಡ ಚಿತ್ರದಲ್ಲೂ ನಟಿಸಿದ ರಜನಿಕಾಂತ್: ರಜಿನಿಕಾಂತ್ ರವರು ಕನ್ನಡದ ಸಿನಿಮಾದಲ್ಲೂ ನಟಿಸಿದ್ದು, ವಿಷ್ಣುವರ್ಧನ್ ಅವರೊಂದಿಗೆ 'ಸಹೋದರರ ಸವಾಲ್' ಚಿತ್ರದಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ 'ಕಥಾ ಸಂಗಮ' ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡರು. ಗಲಾಟೆ ಸಂಸಾರ, ಕಿಲಾಡಿ ಕಿಟ್ಟಿ, ಒಂದು ಪ್ರೇಮದ ಕಥೆ, ತಪ್ಪಿದ ತಾಳ, ಮಾತು ತಪ್ಪದ ಮಗ, ಸವಾಲಾಕುವ ಪಾತ್ರಗಳಲ್ಲಿ ನಟಿಸಿದರು.

ಹಿಂದಿ ಚಿತ್ರದಲ್ಲೂ ನಟಿಸಿದ ರಜನಿಕಾಂತ್: ರಜಿನಿಕಾಂತ್ ರವರು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ, ಹಮ್, ಆನ್ ದ ಕಾನೂನ್‌ಗಳು ರಜಿನಿಕಾಂತ್ ನಟಿಸಿದ ಪ್ರಮುಖ ಚಿತ್ರಗಳಾಗಿವೆ.


Post a Comment (0)
Previous Post Next Post