2021ರ ಜನವರಿ 25 ರಂದು ಭಾರತದಲ್ಲಿ IIನೇ ಆವೃತ್ತಿಯ ರಾಷ್ಟ್ರೀಯ ಮತದಾರರ ದಿನವನ್ನು (NVD National Voters Day) Making our Voters Empowered, Vigilant, Safe Informed & ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ನವದೆಹಲಿಯಲ್ಲಿ ಚುನಾವಣಾ ಆಯೋಗದಿಂದ ಆಚರಿಸಿದ ಮತದಾರರ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಗಳಾಗಿದ್ದರು. ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಶುಭಾಶಯ ಕೋರಿದರು. ದೇಶಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ
ಘಟ್ಟವಾದ ಚುನಾವಣಾ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತ ನಾಗರಿಕರ ಮತದಾನದ ಬಗ್ಗೆ ಅರಿವನ್ನು ಮೂಡಿಸುವುದು, ಜತೆಗೆ ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿಯಾಗುವ ಯುವ ಮತದಾರರಿಗೆ ಗುರುತಿನ ಚೀಟಿ (EPIC-Elector Photo Identity Card) ವಿತರಿಸುವುದು ಉದ್ದೇಶವಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಗಳನ್ನು ಸುರಕ್ಷಿತವಾಗಿ ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಕೈಗೊಂಡ ಚುನಾವಣೆಗಳ ಕೆಲವು ತುಣುಕುಗಳನ್ನು ತಿಳಿಸುವ ಫೋಟೋ, 2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೈಗೊಂಡ SVEEP Systematic Voters Education & Electoral Participation ಕಾರ್ಯಕ್ರಮದ ಅರಿವು ಪುಸ್ತಕ ಹಾಗೂ ಚುನಾವಣಾ ಆಯೋಗದ ವತಿಯಿಂದ ಸಿದ್ಧವಾಗಿರುವ ಮತದಾರರ ಶಿಕ್ಷಣದ ಕಾಮಿಕ್ ಪುಸ್ತಕವಾದ Chalo Karen Matdaan ಅನ್ನು ಬಿಡುಗಡೆ ಮಾಡಿದರು.
2021ರ ರಾಷ್ಟ್ರೀಯ ಚುನಾವಣಾ ಪ್ರಶಸ್ತಿ ಪ್ರದಾನ
2021ರ ಜನವರಿ 25ರಂದು ಚುನಾವಣಾ ಆಯೋಗದ ವತಿಯಿಂದ ಆಯ್ಕೆಮಾಡಿದ 2020-21ರ ಅವಧಿಯ ರಾಷ್ಟ್ರೀಯ ಚುನಾವಣಾ 17 ಪ್ರಶಸ್ತಿಗಳನ್ನು (National Awards for the year 2020-21) ರಾಷ್ಟ್ರಪತಿಗಳು ಪ್ರದಾನ ಮಾಡಿದರು. ಐಟಿ ವಿಧಾನಗಳ ಅಳವಡಿಕೆ ಭದ್ರತಾ ನಿರ್ವಹಣೆ, ಕೋವಿಡ್-19ರ ಸಂದರ್ಭದಲ್ಲಿ ಸುರಕ್ಷಿತ ಚುನಾವಣಾ ನಿರ್ವಹಣೆ, ಮತದಾರರಲ್ಲಿ ಜಾಗೃತಿ ಮೂಡಿಸಿದ ಚುನಾವಣಾ ಅಧಿಕಾರಿಗಳನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿತ್ತು. ಕೋವಿಡ್-19ರ ಸಾಂಕ್ರಾಮಿಕತೆ ಅವಧಿಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಸಿದ ರಾಜ್ಯ ಎಂಬ ಹೆಗ್ಗಳಿಕೆಯನ್ನು ಬಿಹಾರ ರಾಜ್ಯವು ಹೊಂದಿದ್ದು, ಈ ರಾಜ್ಯದ ಚುನಾವಣಾ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಆಯೋಗದ ಸಿಇಒ ಎಚ್.ಆರ್ ಶ್ರೀನಿವಾಸ್ ಸೇರಿದಂತೆ 7 ಜನ ಬಿಹಾರದ ಚುನಾವಣಾ ಅಧಿಕಾರಿಗಳಿಗೆ ರಾಷ್ಟ್ರೀಯ ಚುನಾವಣಾ ಪ್ರಶಸ್ತಿ (Best Electoral Practices Award)ಲಭಿಸಿದೆ. ಬಿಹಾರ ಮೂಲದ ಸರ್ಕಾರೇತರ ಸಂಘಟನೆಯಾದ JEEVIKA ಬಿಹಾರದ ಚುನಾವಣೆ ಸಂದರ್ಭದಲ್ಲಿ ಅರಿವು ಮೂಡಿಸಿದ್ದ ಕಾರಣದಿಂದಲೂ ಪ್ರಶಸ್ತಿ ಪಡೆದಿತ್ತು. ಮೇಘಾಲಯ ರಾಜ್ಯ ಚುನಾವಣಾ ಆಯೋಗವು ಚುನಾವಣೆಯಲ್ಲಿ ಉತ್ತಮ ಮಾಹಿತಿ ತಂತ್ರಜ್ಞಾನ ಅನ್ವಯಿಕೆಗಾಗಿ ವಿಶೇಷ ಪ್ರಶಸ್ತಿ ಪಡೆದಿದೆ.
ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನದ ಆಚರಣೆ ಹಿನ್ನೆಲೆ
1950ರ ಜನವರಿ 25 ರಂದು ಕೇಂದ್ರ ಚುನಾವಣಾ ಆಯೋಗವು ಸಂವಿಧಾನದ 15ನೇ ಭಾಗದ 324ನೇ ವಿಧಿ ಅನ್ವಯ ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 25 ಅನ್ನು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ. 2011ರ ಜನವರಿ 25 ರಂದು ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದ ಅಂಗವಾಗಿ ಆಚರಿಸಲು ನಿರ್ಧರಿಸಿದರು. 2020ರ ಮತದಾರರ ದಿನದ Electoral Literacy for Stronger Democracy. ಹಲೋ ವೋಟರ್ (Hello Voters) ವೆಬ್ ರೇಡಿಯೋ : ಚುನಾವಣಾ ಆಯೋಗವು ಹಲೋ ವೋಟರ್ ಹೆಸರಿನ ಆನ್‌ಲೈನ್ ಡಿಜಿಟಲ್ ರೇಡಿಯೋ ಸೇವೆ ಆರಂಭಿಸಿದ್ದು, ಈ ಸೇವೆಗೆ ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಚಾಲನೆ ನೀಡಿದರು. ಈ ರೇಡಿಯೋ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುವುದು. ಗೀತೆ, ನಾಟಕ, ಚರ್ಚೆ, ಕಥೆಗಳ ಮೂಲಕ ಚುನಾವಣೆಯ ಬಗ್ಗೆ ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಈ ರೇಡಿಯೋ ಸೇವೆ ನೀಡುತ್ತದೆ.
ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು 2021ರ ಜನವರಿ 15ರಂದು ಕೋಮಲ್ ಜೈನ್ ಅವರು ಬರೆದ “Electoral Reforms in India' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್‌ರವರು ರಾಜ್ಯಮಟ್ಟದ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪಡೆದಿದ್ದಾರೆ.
ಕೇಂದ್ರ ಚುನಾವಣಾ ಆಯೋಗ (ECI- Election Commission Of India) ದ ಬಗ್ಗೆ ಮಾಹಿತಿ
ಸ್ಥಾಪನೆ: 1950ರ ಜನವರಿ 25,
ಕೇಂದ್ರ ಕಚೇರಿ: ನವದೆಹಲಿ,
ವಿಶೇಷತೆ: ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆ
ಕಾರ್ಯಗಳು: 1950-1951ರ ಜನತಾ ಪ್ರಾತಿನಿಧ್ಯ ಕಾಯಿದೆ ಅನ್ವಯ ಚುನಾವಣೆಯನ್ನು ನಡೆಸುವುದು, ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವುದು, ಚುನಾವಣಾ ನೀತಿ ಸಂಹಿತೆ (MCC-Model Code of Conduct) ರೂಪಿಸುವುದು. ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದನಗಳ ಸದಸ್ಯರುಗಳನ್ನು ಆಯ್ಕೆ ಮಾಡುವ ಚುನಾವಣೆಯನ್ನು ನಡೆಸುತ್ತದೆ. 1951ರ ಅಕ್ಟೋಬರ್ 25 ರಿಂದ 1952ರ ಫೆಬ್ರವರಿ 21 ರವರೆಗೆ ಭಾರತದಲ್ಲಿ ಮೊದಲ ಬಾರಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆ ಜರುಗಿತ್ತು. ಕೇಂದ್ರ ಚುನಾವಣಾ ಆಯುಕ್ತರು: ರಾಷ್ಟ್ರಪತಿ ಅವರಿಂದ ಆಯುಕ್ತರು ನೇಮಕಗೊಂಡು 6 ವರ್ಷ ಅಥವಾ 65ನೇ ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಸುಕುಮಾರ್ ಸೇನ್ ಅವರು ಆಯೋಗದ ಸಂಸ್ಥಾಪಕ ಮತ್ತು ಮೊದಲ ಮುಖ್ಯ ಆಯುಕ್ತರಾಗಿದ್ದರು. ಆಯೋಗದ ಆಯುಕ್ತರಾಗಿ
ಕಾರ್ಯನಿರ್ವಹಿಸಿದ ಮೊದಲ ಮತ್ತು ಏಕೈಕ ಮಹಿಳೆ ಎಂಬ ಕೀರ್ತಿಗೆ ವಿ.ಎಸ್. ರಮಾದೇವಿ ಪಾತ್ರರಾಗಿದ್ದಾರೆ. ಭಾರತದ 10ನೇ ಚುನಾವಣಾ
ಆಯುಕ್ತರಾಗಿ ಮತ್ತು ದೇಶದ ಚುನಾವಣೆಗಳ ಸುಧಾರಕ ಎಂದು ಗುರುತಿಸಲ್ಪಟ್ಟಿದ್ದ ಟಿ.ಎನ್. ಶೇಷನ್ ಅವರು 2019ರ ನವೆಂಬರ್ 10 ನಿಧನರಾದರು.ಸುನೀಲ್ ಅರೋರಾ ಅವರು 23ನೇ ಚುನಾವಣಾ ಮುಖ್ಯ ಆಯುಕ್ತರಾಗಿ 2018ರ ಡಿಸೆಂಬರ್ 2 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರಾಜೀವ್
ಕುಮಾರ್ ಮತ್ತು ಸುಶೀಲ್ ಚಂದ್ರ ಅವರು ಆಯೋಗದ ಇತರ ಆಯುಕ್ತರುಗಳಾಗಿದ್ದಾರೆ. (ಅಶೋಕ್ ಲವಾಸ ಅವರು 2020ರ ಆಗಸ್ಟ್ 18 ರಂದು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿ ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ).
No comments:
Post a Comment