ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವರ್ಷಗಳು
ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act - 1972
ಭಾರತದಲ್ಲಿ ವನ್ಯ ಜೀವಿಗಳು ಮತ್ತು ಪಕ್ಷಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ 1972 ರಲ್ಲಿ ಸಂಸತ್ತಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ರೂಪಿಸಲಾಯಿತು. ಇದು 1972ರ ಸೆಪ್ಟೆಂಬರ್ 9 ರಂದು ಜಾರಿಗೆ ಬಂದಿದೆ. 1982, 1986, 1991, 1993, 2002, 2006 ಮತ್ತು 2013 ರಲ್ಲಿ ಈ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ತಿದ್ದುಪಡಿಗೊಂಡಿದೆ.
ಹುಲಿ ಯೋಜನೆ/ಪ್ರಾಜೆಕ್ಟ್ ಟೈಗರ್ (Project Tiger) - 1973
ಭಾರತದಲ್ಲಿ 1973 ರ ಏಪ್ರಿಲ್‌ನಲ್ಲಿ ಹುಲಿ ಸಂರಕ್ಷಣೆಗಾಗಿ ಪ್ರಾಜೆಕ್ಟ್ ಟೈಗರ್ ಘೋಷಣೆಯಾಗಿತ್ತು. ಭಾರತದ ರಾಷ್ಟ್ರೀಯ ಪ್ರಾಣಿ ಬಂಗಾಳದ ಹುಲಿ ರಕ್ಷಣೆಗೆ ಸಂಬಂಧಿಸಿದೆ. ಈ ಯೋಜನೆಯ ಮೊದಲ ನಿರ್ದೇಶಕರಾಗಿ ಟೈಗರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಕೈಲಾಶ್ ಸಂಕಾಲ ಕಾರ್ಯನಿರ್ವಹಿಸಿದ್ದಾರೆ. ಈ ಯೋಜನೆಯನ್ನು ಭಾರತದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನಿರ್ವಹಣೆ ಮಾಡುತ್ತದೆ.
ಅನೆ ಯೋಜನೆ/ಪ್ರಾಜೆಕ್ಟ್ ಎಅಫೆಂಟ್ (Project Elephant) - 1992
ಕೇಂದ್ರ ಪರಿಸರ ಮತ್ತು ಅರಣ್ಯ ಬದಲಾವಣೆ ಸಚಿವಾಲಯವು 1992ರ ಫೆಬ್ರವರಿಯಲ್ಲಿ ಆನೆ ಯೋಜನೆಯನ್ನು ರೂಪಿಸಿತ್ತು (1991-92ರ ಆರ್ಥಿಕ ವರ್ಷ). ಇದು ಏಷ್ಯನ್ ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ, ವನ್ಯಜೀವಿ ನಿರ್ವಹಣೆಗಾಗಿ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ. ಆನೆಯನ್ನು ಭಾರತ ಸರ್ಕಾರವು 2010ರಲ್ಲಿ ರಾಷ್ಟ್ರೀಯ ಪಾರಂಪರಿಕಾ ಪ್ರಾಣಿಯಾಗಿ ಘೋಷಣೆ ಮಾಡಿತ್ತು. ಭಾರತದಲ್ಲಿ ಪ್ರತೀ 5 ವರ್ಷಗಳಿಗೊಮ್ಮೆ ಆನೆ ಗಣತಿ ಕಾರ್ಯ ಜರುಗುವುದು.
ಪ್ರಾಜೆಕ್ಟ್ ಡಾನ್ (- (Project Dolphin)- 2020 2020ರ ಆಗಸ್ಟ್ 15 ರಂದು 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಾಜೆಕ್ಟ್ ಡಾನ್ ಮತ್ತು ಪ್ರಾಜೆಕ್ಟ್ ಲಯನ್ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದರು. ಐಯುಸಿಎನ್ ಸಂಸ್ಥೆಯ ರೆಡ್ ಲಿಸ್ಟ್‌ನಲ್ಲಿ ಗಂಗಾ ಡಾಲ್ಟಿನ್‌ಗಳು ಕಂಡುಬರುತ್ತವೆ. (ಡಾನ್ ಗಣತಿ : WWF - India) ಸಿಂಹ ಯೋಜನೆ/ ಪ್ರಾಜೆಕ್ಟ್ ಲಯನ್ (Project Lion) - 2020 ಭಾರತದಲ್ಲಿ 2020ರ ಆಗಸ್ಟ್ 15 ರಂದು ಮೋದಿಯವರು ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಗಾಗಿ ಪ್ರಾಜೆಕ್ಟ್ ಲಯನ್ ಘೋಷಿಸುವ ಬಗ್ಗೆ ಮೊದಲು ಪ್ರಸ್ತಾಪಿಸಿದರು. ಕೇಂದ್ರ ಅರಣ್ಯ ಪರಿಸರ ಹವಾಮಾನ ಬದಲಾವಣೆ ಸಚಿವಾಲಯದ ವತಿಯಿಂದ ಸಿಂಹಗಳ ಸಂರಕ್ಷಣೆ ಹಾಗೂ ಮಾನವ ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶಿತ ಯೋಜನೆಯಾಗಿದೆ. ರೈನೋ ಯೋಜನೆ/
ಪ್ರಾಜೆಕ್ಟ್ ರೈನೋ (Project Rhino) - 2005
ಅಸ್ಸಾಂ ರಾಜ್ಯದ ಅರಣ್ಯ ಇಲಾಖೆ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಪ್ರಾಜೆಕ್ಟ್ ರೈನೋ ಉದ್ಘಾಟನೆಯಾಗಿತ್ತು. ಏಕ ಕೊಂಬಿನ ಘಂಡಾಮೃಗವು ಭಾರತ ಮತ್ತು ನೇಪಾಳ ಮೂಲವನ್ನು ಹೊಂದಿದ್ದು, ಅಸ್ಸಾಂ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿರುವ ರೈನೋಗಳನ್ನು ಮಾನಸ ವನ್ಯಜೀವಿ ಸಂರಕ್ಷಣಾ ತಾಣಕ್ಕೆ ಸ್ಥಳಾಂತರಿಸುವ ಉದ್ದೇಶ ಹೊಂದಿತ್ತು.
ಪ್ರಾಜೆಕ್ಟ್ ಮೊಸಳೆ (Project Crocodile) - 1975
ಭಾರತದ ವಿವಿಧ ರಾಜ್ಯಗಳಲ್ಲಿ 1975 ರಲ್ಲಿ ಮೊಸಳೆ ಯೋಜನೆಯನ್ನು ರೂಪಿಸಲಾಗಿದೆ. ಪ್ರತೀ ವರ್ಷ ಜೂನ್ 17 ರಂದು ವಿನಾಶದ ಅಂಚಿನಲ್ಲಿರುವ ಮೊಸಳೆ ಜೀವಿಯ ಬಗ್ಗೆ ಅರಿವು ಮೂಡಿಸಲು ವಿಶ್ವ ಮೊಸಳೆ ದಿನ ಆಚರಿಸಲಾಗುವುದು. ಗಾರಿಯರ್, ಗವಾಲಿಸ್, ಮುಗೇರ್, ಗಂಗಾಟಿಕಸ್ ಎಂಬುದು ಮೊಸಳೆಯ ವಿವಿಧ ಪ್ರಬೇಧಗಳಾಗಿವೆ.