ಉತ್ತರ ಪ್ರದೇಶದ ಗೋರಕ್ ಪುರ ದಲ್ಲಿ ನಡೆದ ಚೌರಿ ಚೌರ ಘಟನೆ ನಡೆದು 2021 ಫೆಬ್ರವರಿ ನಾಲ್ಕರಂದು ರಂದು ತನ್ನ ಶತಮಾನವನ್ನು ಪೂರ್ಣಗೊಳಿಸಿದ್ದು
ಕಾರ್ಯಕ್ರಮವನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಚೌರಿ ಚೌರ ಶತಮಾನೋತ್ಸವ ವರ್ಷದ ಆರಂಭದ ಹಿನ್ನೆಲೆಯಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಒಂದು ಘಟನೆಗಾಗಿ 19 ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆ. ಹೆಚ್ಚು ಪರಿಚಿತರಲ್ಲದೆ ಹುತಾತ್ಮರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಕತೆಗಳನ್ನು ರಾಷ್ಟ್ರಕ್ಕೆ ತಿಳಿಸಲು ನಾವು ಮಾಡುವ ಪ್ರಯತ್ನ ಅವರಿಗೆ ನೀಡುವ ನಿಜವಾದ ಗೌರವವಾಗಿದೆ. ಹುತಾತ್ಮರಾದ ಹೋರಾಟಗಾರರ ರಕ್ತವು ದೇಶದ ಮಣ್ಣಿನಲ್ಲಿ ಬೆರೆತಿದೆ ಮತ್ತು ನಮಗೆ ಸ್ಫೂರ್ತಿ ನೀಡುತ್ತದೆ ಎಂದರು. 2022 ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಶತಮಾನೋತ್ಸವ ಕಾರ್ಯಕ್ರಮವು ವಿಶೇಷವಾಗಿದೆ. ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ : ಚೌರಿ ಚೌರ ಘಟನೆಯ ಹುತಾತ್ಮರ ಬಗ್ಗೆ ಹೆಚ್ಚು ಚರ್ಚೆಗಳೇ ನಡೆದಿಲ್ಲ. ಇದು ಸ್ವಾತಂತ್ರ್ಯ ನಂತರದ ದುರಾದೃಷ್ಟಕರ ಸಂಗತಿ, ಚೌರಿ ಚೌರ ಘಟನೆಯು ಜನಸಾಮಾನ್ಯನ ಸ್ವಯಂ ಪ್ರೇರಿತ ಹೋರಾಟವಾಗಿತ್ತು. ಈ ಶತಮಾನೋತ್ಸವವನ್ನು ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಹಾಗೂ ಆತ್ಮನಿರ್ಭರ ಭಾರತದೊಂದಿಗೆ ಜೋಡಿಸಲಾಗುತ್ತಿರುವುದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಉತ್ತರಪ್ರದೇಶ ರಾಜ್ಯ ಸರ್ಕಾರವು ಈ ಕಾರ್ಯಕ್ರಮವನ್ನು 2021ರ ಫೆಬ್ರವರಿ 4 ರಿಂದ 2022ರ ಫೆಬ್ರವರಿ 4ರ ವರೆಗೆ ರಾಜ್ಯದ 75 ಜಿಲ್ಲೆಗಳಲ್ಲೂ ಆಚರಿಸಲು ಸಿದ್ಧತೆ ನಡೆಸಿದೆ. ಉತ್ತರ ಪ್ರದೇಶ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಹುತಾತ್ಮರ ಗೌರವಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
1922ರ ಫೆಬ್ರವರಿ 4 ರಂದು ಉತ್ತರಪ್ರದೇಶ ರಾಜ್ಯದ ಗೋರಖ್ ಪುರ ಜಿಲ್ಲೆಯ ಚೌರಿ ಚೌರದಲ್ಲಿ ಅಸಹಕಾರ ಚಳವಳಿಯ ಹೋರಾಟಗಾರರು 22 ಮಂದಿ ಪೊಲೀಸರನ್ನು ಸಜೀವವಾಗಿ ಸುಟ್ಟರು. ಈ ಘಟನೆ ಹಿನ್ನೆಲೆಯಲ್ಲಿ 1920 ಅಂದ ಆರಂಭವಾಗಿದ್ದ ಅಸಹಕಾರ ಚಳವಳಿಯನ್ನು ಗಾಂಧೀಜಿಯವರು 1922ರ ಫೆಬ್ರವರಿ 12 ರಂದು ಹಿಂತೆಗೆದುಕೊಂಡರು. ಅವರು ಚೌರಿಚೌರ ಘಟನೆಯ ಆರೋಪದ ಮೇಲೆ 228 ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗ 6 ಜನ ಮರಣ ಹೊಂದಿದ್ದು, ಅಪರಾಧ ಸಾಬೀತಾದ ನಂತರ 172 ಜನರನ್ನು ಗಲ್ಲಿಗೇರಿಸಿದ ಈ ಘಟನೆಯನ್ನು ಕಮ್ಯುನಿಸ್ಟ್ ನಾಯಕ ಎಂ.ಎನ್. ರಾಯ್ ಕಾನೂನು ಬದ್ಧ ಕೊಲೆ ಎಂದು ನಿರೂಪಿಸಿದರು. ಚೌರಿಚೌರ ಹುತಾತ್ಮರ ಸ್ಮಾರಕವನ್ನು ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಿರ್ಮಿಸಲಾಗಿದೆ.
ಚೌರಿಚೌರ ಎಕ್ಸ್‌ಪ್ರೆಸ್ (Chauri Chaura Express):
ಅನ್ವರ್‌ಗಂಜ್‌ನಿಂದ ಗೋರಖ್‌ಪುರ ಜೆಂಕ್ಷನ್‌ವರೆಗೆ ಭಾರತೀಯ ರೈಲ್ವೆಯ ಈಶಾನ್ಯ ರೈಲ್ವೆ ವಲಯದ ವತಿಯಿಂದ ಚೌರಿ ಚೌರ ಘಟನೆಯ ನಂತರ ಮರಣದಂಡನೆಗೊಳಗಾದವರನ್ನು ಗೌರವಿಸಲು ಹೆಸರಿನಲ್ಲಿ ರೈಲ್ವೆ ಸೇವೆಯನ್ನು ಆರಂಭಿಸಿತು. ಚೌರಿಚೌರ ಎಕ್ಸ್‌ಪ್ರೆಸ್
ಕರ್ನಾಟಕದ ಜಲಿಯನ್ ವಾಲಾಬಾಗ್-ವಿದುರಾಶ್ವತ್ಥ : 1938ರ ಏಪ್ರಿಲ್ 25 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲಿಬಾರ್ ನಡೆಸಿದ್ದು, ಸುಮಾರು 35 ಮಂದಿ ಸತ್ಯಾಗ್ರಹಿಗಳು ಸಾವನ್ನಪ್ಪಿದ್ದರು. ಈ ದುರಂತವನ್ನು ದಕ್ಷಿಣ ಭಾರತದ ಅಥವಾ ಕರ್ನಾಟಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎನ್ನಲಾಗಿದೆ. ಕರ್ನಾಟಕದ ಬಾರ್ಡೋಅ - ಅಂಕೋಲಾ : 1930ರ ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ಗುಜರಾತ್‌ನ ಸಬರಮತಿ ಆಶ್ರಮದಿಂದ ದಂಡಿಯವರೆಗೆ ಗಾಂಧೀಜಿಯವರು 78 ಮಂದಿ ಅನುಯಾಯಿಗಳೊಂದಿಗೆ ಕ್ರಮಿಸಿ, ಬ್ರಿಟಿಷರ ಉಪ್ಪಿನ ಕಾನೂನನ್ನು ಮುರಿದು ಉಪ್ಪನ್ನು ತಯಾರಿಸಿದ ಘಟನೆಯನ್ನು ದಂಡಿ ಉಪ್ಪಿನ ಸತ್ಯಾಗ್ರಹ ಎನ್ನುವರು. ಇದು ಕಾನೂನುಭಂಗ ಚಳವಳಿಯ ಭಾಗವಾಗಿದೆ. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದ ಮೈಲಾರ ಮಹದೇವಪ್ಪ ಭಾಗವಹಿಸಿದ್ದರು. 1930ರಲ್ಲಿ ಕರ್ನಾಟಕದ ಅಂಕೋಲಾದಲ್ಲಿ ಎಂ.ಪಿ. ನಾಡಕರ್ಣಿ ಅಧ್ಯಕ್ಷತೆಯಲ್ಲಿ ಉಪ್ಪಿನ ಸತ್ಯಾಗ್ರಹ ಜರುಗಿದೆ.
unded sebale (Non Cooperation Movement)
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ 1920 ರಿಂದ 1922ರವರೆಗೆ ಅಸಹಕಾರ ಚಳುವಳಿಯು ಮಹತ್ವದ ಘಟ್ಟವಾಗಿತ್ತು. ಈ ಚಳುವಳಿ ಸಂದರ್ಭದಲ್ಲಿ ಗಾಂಧೀಜಿಯವರು ಕೈಸರ್ ಇ-ಹಿಂದ್ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರು ಬ್ರಿಟಿಷ್ ಸರ್ಕಾರ ನೀಡಿದ್ದ ನೈಟ್ ಹುಡ್ ಪದವಿಗಳನ್ನು ಹಿಂತಿರುಗಿಸಿದರು. ಶಾಲಾ ಕಾಲೇಜು ಬಹಿಷ್ಕಾರ, ರಾಷ್ಟ್ರೀಯ ಶಾಲೆಗಳ ಪ್ರಾರಂಭ, ವಕೀಲರಿಂದ ನ್ಯಾಯಾಲಯ ಬಹಿಷ್ಕಾರ, 1919ರ ಸುಧಾರಣೆಯಂತೆ ನಡೆಸಲಾದ ಚುನಾವಣೆ ಬಹಿಷ್ಕಾರ ಕ್ರಮಗಳು ಜರುಗಿದ್ದವು.
ರೌಲತ್ ಕಾಯ್ದೆ (Rowlatt Act):
1919ರಲ್ಲಿ ಆಜ್ಞಾಪತ್ರವಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವ, ವಿಚಾರಣೆ ಇಲ್ಲದೆ ಅನಿರ್ದಿಷ್ಟಾವಧಿ ಅವಧಿಯವರೆಗೆ ಸೆರೆಮನೆಯಲ್ಲಿ ಇರಿಸುವ ರೌಲತ್ ಕಾಯ್ದೆಯನ್ನು ಬ್ರಿಟಿಷ್ ಸರ್ಕಾರ ರೂಪಿಸಿತ್ತು. ಈ ಕಾಯ್ದೆಯ ವಿರುದ್ಧ 1919ರ ಏಪ್ರಿಲ್ 13 ರಂದು ಅಮೃತಸರದ ಸ್ವರ್ಣಮಂದಿರದ ಸಮೀಪ ಜಲಿಯನ್ ವಾಲಾಬಾಗ್ ಉದ್ಯಾನವನದಲ್ಲಿ ಸಭೆ ಸೇರಿತ್ತು. ಅಮೃತಸರದ ರಕ್ಷಣಾ ಪಾಲಕನಾಗಿದ್ದ ಜನರಲ್ ಓ ಡಯರ್ ಎಂಬ ವ್ಯಕ್ತಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದು, 379 ಜನ ಪ್ರಾಣ ಕಳೆದುಕೊಂಡರು. ಇಂತಹ ದುರಂತದ ಘಟನೆಗೆ ಕಾರಣನಾದ ಜನರಲ್ ಡಯರ್‌ನನ್ನು ಕ್ರಾಂತಿಕಾರಿ ಉದಾಮ್‌ಸಿಂಗ್ ಹತ್ಯೆ ಮಾಡಿದನು. ಈ ಘಟನೆಯನ್ನು
ಗಾಂಧೀಜಿಯವರು ಹಿಮಾಲಯನ್ ಬ್ಲಂಡರ್ ಎಂದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ : 2019ರ ಏಪ್ರಿಲ್ 13 ರಂದು ಭಾರತದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ ಪೂ ಹಿನ್ನೆಲೆಯಲ್ಲಿ ದೇಶದಾದ್ಯಂತ ದುರಂತದಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿದರು.
ಹಂಟರ್ ಆಯೋಗ: ಜಲಿಯನ್ ವಾಲಾಬಾಗ್ಹತ್ಯಾಕಾಂಡದ ವಿಚಾರಣೆಗಾಗಿ 1919ರ ಅಕ್ಟೋಬರ್ 14 ರಂದು ಲಾರ್ಡ್ ಹಂಟರ್ ಅವರ ಅಧ್ಯಕ್ಷತೆಯಲ್ಲಿ ಹಂಟರ್ ಆಯೋಗವನ್ನು ನೇಮಿಸಲಾಗಿತ್ತು.
ಕರ್ನಾಟಕದ ಮೊದಲ ಸ್ವಾತಂತ್ರ್ಯ ಘೋಷಿತ ಗ್ರಾಮ - ಈಸೂರು : 1942ರ ಚಲೇಜಾವ್ ಚಳವಳಿಯ ಸಂಘಟನೆಯನ್ನು ಕರ್ನಾಟಕದ ಈಸೂರು ಗ್ರಾಮ ಆಯೋಜಿಸಿದ್ದು, ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮವು ರಾಜ್ಯದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮವಾಗಿದೆ.
No comments:
Post a Comment