ದಕ್ಷಿಣ ಭಾರತದಲ್ಲಿ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿ ದೀರ್ಘಕಾಲ ಆಳ್ವಿಕೆ ನಡೆಸಿದರು. ಅವರು ಸಾ.ಶ. 753 ರಿಂದ 978ರ ವರೆಗೆ ಆಳಿದರು. ಇವರು ಮೊದಲು ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದರು. ರಾಷ್ಟ್ರಕೂಟ ಎಂಬ ಪದವು ಅಧಿಕಾರವನ್ನು ಸೂಚಿಸುತ್ತದೆ. ರಾಷ್ಟ್ರ ಎಂದರೆ 'ದೇಶ' ಮತ್ತು ಕೂಟ ಎಂದರೆ 'ಮುಖ್ಯಸ್ಥ' ಎಂದರ್ಥ, ಶಿಲಾಶಾಸನಗಳಲ್ಲಿ ಇವರು ತಮ್ಮನ್ನು ಲಟ್ಟಲೂರು ಪುರವರಾಧೀಶ್ವರರು ಎಂದು ಕರೆದುಕೊಂಡಿದ್ದರಿಂದ ಇವರು ಮಹಾರಾಷ್ಟ್ರದ ಲತ್ತಲೂರು(ಲಾತೂರು) ಪ್ರದೇಶಕ್ಕೆ ಸೇರಿದವರೆಂದು ತಿಳಿಯುವುದು.
ಗರುಡ ಇವರ ರಾಜ ಲಾಂಛನ: ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ( ಮಾಳಖೇಡ) ಇವರ ರಾಜಧಾನಿಯಾಗಿತ್ತು.
ದಂತಿದುರ್ಗನು ರಾಷ್ಟ್ರಕೂಟರ ಮೊದಲ ದೊರೆ. ಇವನು ಬಾದಾಮಿ ಚಾಲುಕ್ಯರನ್ನು ಸೋಲಿಸಿದನು.
1ನೇ ಕೃಷ್ಣನು ಇವನ ಉತ್ತರಾಧಿಕಾರಿಯಾದನು. ಇವನು ಚಾಲುಕ್ಯ ದೊರೆ ಕೀರ್ತಿವರ್ಮನನ್ನು ಸಂಪೂರ್ಣವಾಗಿ ಸೋಲಿಸಿದನು. ಈತನು ಎಲ್ಲೋರದಲ್ಲಿ ಏಕಶಿಲಾ ಕೈಲಾಸನಾಥ ದೇವಾಲಯವನ್ನು ಕಟ್ಟಿಸಿದನು. ನಂತರ ಅಧಿಕಾರಕ್ಕೆ ಬಂದ 2ನೇ ಗೋವಿಂದನು ದುರ್ಬಲವಾಗಿದ್ದರಿಂದ ಅವನನ್ನು ಪದಚ್ಯುತಿಗೊಳಿಸಿ ಧ್ರುವನು ಅಧಿಕಾರಕ್ಕೆ ಬಂದನು.
ಧ್ರುವ; (ಸಾ.ಶ. 780- 793)
ರಾಷ್ಟ್ರಕೂಟರ ಆರಂಭಿಕ ದೊರೆಗಳಲ್ಲಿ ಧ್ರುವನು ಪ್ರಮುಖನು. ತನ್ನ ಪ್ರಭಾವವನ್ನು ಉತ್ತರ ಭಾರತದಲ್ಲಿ ಹರಡಿದ ಕೀರ್ತಿ ಇವನದು. ಇವನು ಅಧಿಕಾರಕ್ಕೆ ಬಂದಾಗ ಉತ್ತರ ಭಾರತದ ರಾಜಕೀಯವು ಅನಿಶ್ಚಿತತೆಯಿಂದ ಕೂಡಿತ್ತು. ಕನೌಜಿನ ಸಿಂಹಾಸನದ ಮೇಲೆ ಪ್ರತಿಹಾರ ಮತ್ತು ಬಂಗಾಳದ ಅರಸರು ದೃಷ್ಟಿಬೀರಿದ್ದರು. ಪ್ರತಿಹಾರದ ವತ್ಸರಾಜನು ಕನೌಜಿನ ಮೇಲೆ ದಾಳಿ ಮಾಡಿ ಇಂದ್ರಾಯುಧನನ್ನು ಸೋಲಿಸಿದನು. ಇದೇ ವೇಳೆಯಲ್ಲಿ ಬಂಗಾಳದ ಧರ್ಮಪಾಲನು ವತ್ಸರಾಜನ ಮೇಲೆ ದಂಡೆತ್ತಿ ಹೋದನಾದರೂ ಅವನನ್ನು ಗೆಲ್ಲಲಾಗಲಿಲ್ಲ. ಇಂತಹ ಸಂದರ್ಭದಲ್ಲಿ ಧ್ರುವನು ತನ್ನ ಮಕ್ಕಳಾದ ಇಂದ್ರ ಮತ್ತು 3ನೇ ಗೋವಿಂದರೊಂದಿಗೆ ಉತ್ತರ ಭಾರತದ ಮೇಲೆ ದಂಡೆತ್ತಿ ಹೋಗಿ ವತ್ಸರಾಜ ಮತ್ತು ಧರ್ಮಪಾಲರನ್ನು ಸೋಲಿಸಿದನು. ಇದರಿಂದಾಗಿ ಗಂಗಾ ಯಮುನಾ ನದಿಗಳ ಪ್ರದೇಶಗಳು ಧ್ರುವನ ನಿಯಂತ್ರಣಕ್ಕೆ ಬಂದವು.
ಉತ್ತರ ಭಾರತದ ಮೇಲೆ ವಿಜಯದ ನಂತರ ಅವನು ವೆಂಗಿಯ ಮೇಲೆ ದಾಳಿ ಮಾಡಿದನು. ಆದರೆ, ವೆಂಗಿ ಆರಸ 4ನೇ ವಿಷ್ಣುವರ್ಧನನು ಯುದ್ಧ ಮಾಡಲು ಮುಂದಾಗದೇ ತನ್ನ ಮಗಳಾದ ಶೀಲಭಟ್ಟಾರಿಕೆಯನ್ನು ಧ್ರುವನಿಗೆ ಕೊಟ್ಟು ಮದುವೆ ಮಾಡಿದನು. ಧ್ರುವನು ಗಂಗರ ದೊರೆ 2ನೇ ಶಿವಮಾರನನ್ನು ಮುದುಗುಂದೂರನಲ್ಲಿ ಸೋಲಿಸಿದನು ಮತ್ತು ಅವನನ್ನು ಬಂಧನದಲ್ಲಿಟ್ಟನು. ಗಂಗವಾಡಿ ಪ್ರಾಂತ್ಯಕ್ಕೆ ತನ್ನ ಹಿರಿಯ ಮಗನಾದ ಸಂಭ(ಕಂಬರಸ)ನನ್ನು ಅಧಿಕಾರಿಯನ್ನಾಗಿ ನೇಮಿಸಿದನು. ಕಂಚಿಯ ಪಲ್ಲವ ದೊರೆ 2ನೇ ನಂದಿವರ್ಮನನ್ನು
ಸೋಲಿಸಿ ಅವನಿಂದ ಸಾಕಷ್ಟು ಆನೆಗಳನ್ನು ಕಪ್ಪವಾಗಿ ಪಡೆದನು. ಧ್ರುವನಿಗೆ 'ಧಾರಾವರ್ಷ', 'ಶ್ರೀ ವಲ್ಲಭ', 'ನರೇಂದ್ರ ದೇವ' ಮತ್ತು ಕಲಿವಲ್ಲಭ' ಎಂಬ ಬಿರುದುಗಳಿದ್ದವು.
ಮೂರನೇ ಗೋವಿಂದ: (ಸಾ.ಶ. 793 - 814)
ಧ್ರುವನ ನಂತರ ಅವನ ಮಗನಾದ 3ನೇ ಗೊವಿಂದನು ಸಾ.ಶ 793ರಲ್ಲಿ ಅಧಿಕಾರಕ್ಕೆ ಬಂದನು. ಆದರೆ ಇವನ ಸಹೋದರ ಸ್ತಂಭನು ಇದನ್ನು ವಿರೋಧಿಸಿದನು. ಗಂಗರು ಮತ್ತು ಪಲ್ಲವರು ಸ್ತಂಭನಿಗೆ ಸಹಾಯ ಮಾಡಿದರು. ಇದರಿಂದ ಕೋಪಗೊಂಡ 3ನೇ ಗೊವಿಂದನು ಸ್ತಂಭನನ್ನು ಸೋಲಿಸಿ ಸೆರೆಮನೆಯಲ್ಲಿಟ್ಟನು. ಆದರೆ, ಆನಂತರ ಅವನನ್ನು ಬಿಡುಗಡೆಗೊಳಿಸಿ ಮನ: ಗಂಗವಾಡಿಯ ಅಧಿಕಾರಿಯನ್ನಾಗಿ ನೇಮಕ ಮಾಡಿದನು. ಸೆರೆಮನೆಯಲ್ಲಿದ್ದ ಗಂಗರ ದೊರೆ ಶಿವಮಾರನನ್ನು ಈ ಹಿಂದೆ ಬಿಡುಗಡೆಗೊಳಿಸಿದ್ದನು. ಆದರೆ, ಅವನು ಸ್ತಂಭನಿಗೆ ಸಹಾಯ ಮಾಡಿದ್ದರಿಂದ ಮುನ: ಅವನು ಸೆರೆಮನೆ ಸೇರಬೇಕಾಯಿತು.
3ನೇ ಗೋವಿಂದನ ಕಾಲದಲ್ಲಿಯೂ ಉತ್ತರ ಭಾರತದಲ್ಲಿ ರಾಜಕೀಯ ಆಂತರಿಕ ಸಂಘರ್ಷಗಳು ನಡೆದಿದ್ದವು. ಪ್ರತಿಹಾರದ ನಾಗಭಟ, ಬಂಗಾಲದ ಧರ್ಮಪಾಲ ಮತ್ತು ಕನೌಜಿನ ಚಕ್ರಾಯುಧರು ತಮ್ಮ ಸಾರ್ವಭೌಮತ್ವವನ್ನು ವಿಸ್ತರಿಸುವ ಪ್ರಯತ್ನದಲ್ಲಿದ್ದರು.
3ನೇ ಗೊವಿಂದನು ಸಾ.ಶ. 800ರಲ್ಲಿ ಉತ್ತರ ಭಾರತದ ದಂಡಯಾತ್ರೆಯನ್ನು ಕೈಗೊಂಡನು. ಇವನ ದಾಳಿಗೆ ಹೆದರಿದ 2ನೇ ನಾಗಭಟನು ಯುದ್ಧ ಭೂಮಿಯಿಂದ ಓಡಿಹೋದನು. ಚಕ್ರಾಯುಧನು ಶರಣಾದನು. ಧರ್ಮಪಾಲನು ಯುದ್ಧದಿಂದ ಹಿಂದಕ್ಕೆ ಸರಿದು ಕಪ್ಪಕಾಣಿಕೆಯನ್ನು ಸಲ್ಲಿಸಿದನು.
3ನೇ ಗೋವಿಂದನ ಸೈನ್ಯವು ಹಿಮಾಲಯದವರೆಗೂ ಸಾಗಿತು. ಗೋವಿಂದನ ಅಶ್ವಗಳು ಹಿಮಾಲಯದ
ತಪ್ಪಲಿನಲ್ಲಿ ಹರಿಯುವ ನೀರನ್ನು ಕುಡಿದವು ಮತ್ತು ಅವನ ಗಜಗಳು ಗಂಗಾ ಜಲದಲ್ಲಿ ಮಿಂದವು ಎಂದು ಶಾಸನಗಳು ತಿಳಿಸುತ್ತವೆ.
ಗಂಗರು ಸಾ.ಶ. 803-04ರಲ್ಲಿ ಪಾಂಡ್ಯರು ಮತ್ತು ಕೇರಳದ ಅರಸರನ್ನು ಒಟ್ಟಗೂಡಿಸಿಕೊಂಡು ರಾಷ್ಟ್ರಕೂಟರ ಮೇಲೆ ದಾಳಿ ಮಾಡಿದರು. 3ನೇ ಗೋವಿಂದನು ಇವರನ್ನೆಲ್ಲಾ ಸೋಲಿಸಿ ಅವರ ರಾಜಲಾಂಛನಗಳನ್ನು ಕಿತ್ತುಕೊಂಡನು.
3ನೇ ಗೋವಿಂದನು ಪಲ್ಲವ ದೊರೆ ದಂತಿವರ್ಮನನ್ನು ಸೋಲಿಸಿ, ಅವನಿಂದ ಕಪ್ಪಕಾಣಿಕೆಯನ್ನು
ಸ್ವೀಕರಿಸಿದನು. ಇದೇ ಸಮಯದಲ್ಲಿ ಸಿಂಹಳದ ಆರಸ ತನ್ನ ಪ್ರತಿಮೆಯನ್ನು ಗೋವಿಂದನಿಗೆ ಕಳುಹಿಸುವ ಮೂಲಕ ಶರಣಾಗತನಾದನು.3ನೇ ಗೋವಿಂದನ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ ಮತ್ತು ಪಶ್ಚಿಮದಲ್ಲಿ ಸೌರಾಷ್ಟ್ರದಿಂದ ಪೂರ್ವದಲ್ಲಿ ಬಂಗಾಳ ವರೆಗೂ ವಿಸ್ತರಿಸಿತ್ತು. ಒಟ್ಟಾರೆ ಇಡೀ ಭಾರತ ರಾಷ್ಟ್ರಕೂಟರ ಪ್ರಭಾವಕ್ಕೆ ಒಳಗಾಗಿತ್ತು. ಇವನು 'ಜಗತ್ತುಂಗ', 'ಪ್ರಭೂತವರ್ಷ' 'ಶ್ರೀವಲ್ಲವ' ಮತ್ತು 'ತ್ರಿಭುವನದವಳ' ಎಂಬ ಬಿರುದುಗಳನ್ನು ಹೊಂದಿದ್ದನು.
ಒಂದನೇ ಅಮೋಘವರ್ಷ ( ಸಾ.ಶ. 814-878)
ಮೂರನೇ ಗೋವಿಂದನ ಮಗನಾದ ಅಮೋಘವರ್ಷನು ಸಾಶ.814ರಲ್ಲಿ ಅಧಿಕಾರಕ್ಕೆ ಬಂದನು. ಇವನಿಗೆ
ಶರ್ವ ಎಂಬ ಇನ್ನೊಂದು ಹೆಸರಿತ್ತು. ಇವನು ಅಧಿಕಾರವನ್ನು ವಹಿಸಿಕೊಂಡಾಗ ಅಪ್ರಾಪ್ತನಾಗಿದ್ದನು. ಆದ್ದರಿಂದ ಕೆಲವು ವರ್ಷಗಳ(814-821)ವರೆಗೆ ಇವನ ಚಿಕ್ಕಪ್ಪನಾದ ಕರ್ಕನು ಆಡಳಿತ ನಿರ್ವಹಿಸಿದನು. ಆಮೋಘವರ್ಷನನ್ನು ರಾಷ್ಟ್ರಕೂಟ ದೊರೆಗಳಲ್ಲಿ ಶೇಷ್ಠ ದೊರೆ ಎಂದು ಪರಿಗಣಿಸಲಾಗಿದೆ. ಇವನ ಸೈನಿಕ ಸಾಧನೆಗಳಿಗಿಂತ ಸಾಂಸ್ಕೃತಿಕ ಸಾಧನೆಗಳು ಹೆಚ್ಚು ಶ್ರೇಷ್ಠವಾಗಿವೆ.
ಸಾಧನೆಗಳು
ಅಮೋಘವರ್ಷನು ಸಾ.ಶ. 830ರಲ್ಲಿ ವೆಂಗಿ ಚಾಲುಕ್ಯರ ದೊರೆ 3ನೇ ಗುಣಗ ವಿಜಯಾದಿತ್ಯನನ್ನು ವಿಂಗವಳ್ಳಿ ಎಂಬಲ್ಲಿ ಸೋಲಿಸಿ ಹಿಮ್ಮೆಟ್ಟಿಸಿದನು.
ಗಂಗರ ರಾಜ್ಯದ ಉತ್ತರಭಾಗವು ಅಮೋಘವರ್ಷನ ದಂಡನಾಯಕ ಬಂಕೇಶನ ಹಿಡಿತದಲ್ಲಿತ್ತು. ಗಂಗ
ದೊರೆ ರಾಚಮಲ್ಲನು ಈ ಪ್ರದೇಶಗಳನ್ನು ಪಡೆಯಲು ಮುಂದಾದನಾದರೂ ಅವನಿಂದ ಸಾಧ್ಯವಾಗಲಿಲ್ಲ.
ಬಂಕೇಶನು ಕೈದಾಳ (ತುಮಕೂರು ಬಳಿ) ಪ್ರದೇಶದವರೆಗೂ ತನ್ನ ಪ್ರಭಾವವನ್ನು ಹೊಂದಿದ್ದನು.
ರಾಚಮಲ್ಲನ ನಂತರ ಅಧಿಕಾರಕ್ಕೆ ಬಂದ ನೀತಿಮಾರ್ಗ ಎರೆಗಂಗನು ಸಾ.ಶ 856ರಲ್ಲಿ ರಾಜರಾಮುಡು (ಕೋಲಾರ ಬಳಿ) ಕದನದಲ್ಲಿ ಅಮೋಘವರ್ಷನನ್ನು ಸೋಲಿಸಿದನು.
ಅಮೋಘವರ್ಷನು ಗಂಗ ಮತ್ತು ಇತರ ಅರಸು ಮನೆತನದವರೊಡನೆ ಸಂಘರ್ಷ ಕೈಬಿಟ್ಟು ವೈವಾಹಿಕ ಸಂಬಂಧ ಮಾಡಿಕೊಂಡನು. ತನ್ನ ಮಗಳಾದ ಚಂದ್ರಲಬ್ಬೆಯನ್ನು ಗಂಗ ದೊರೆ ಭೂತುಗನಿಗೆ (ಎರೆಯಂಗನ ಮಗ) ಕೊಟ್ಟು ಮದುವೆ ಮಾಡಿದನು. ಮತ್ತೊಬ್ಬ ಮಗಳಾದ ಶೀಲ ಮಹಾದೇವಿಯನ್ನು ವೆಂಗಿಯ ವಿಜಯಾದಿತ್ಯನ ಮಗ ವಿಷ್ಣುವರ್ಧನನಿಗೆ ಹಾಗೂ ಇನ್ನೊಬ್ಬ ಮಗಳಾದ ಸಂಖಾಳನ್ನು ಕಂಚಿ ಪಲ್ಲವ ದೊರೆ 3ನೇ ನಂದಿವರ್ಮನಿಗೆ ಕೊಟ್ಟು ವಿವಾಹ ಮಾಡಿದನು.
ನೀಲಗುಂದ ಮತ್ತು ಶಿರೂರಿನ ಶಾಸನಗಳು ಅಮೋಘವರ್ಷನು ಅಂಗ, ವಂಗ, ಮಗಧ ಮಾಳ್ವ, ವೆಂಗಿ ಮತ್ತು ಅಕ್ಕಪಕ್ಕದ ರಾಜ್ಯಗಳ ರಾಜರಿಂದ ಗೌರವಿಸಲ್ಪಡುತ್ತಿದ್ದನೆಂದು ತಿಳಿಸುತ್ತವೆ.
ಅಮೋಘವರ್ಷ ತನ್ನ ಕೊನೆಯ ದಿನಗಳಲ್ಲಿ ಯುವರಾಜನಾದ ಕೃಷ್ಣನ ದಂಗೆಯನ್ನು ಎದುರಿಸಬೇಕಾಯಿತು. ಇವನ ದಂಡನಾಯಕ ಬಂಕೇಶನು ಈ ದಂಗೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಿದನು ಮತ್ತು ಕೃಷ್ಣನು ಪಶ್ಚಾತ್ತಾಪದಿಂದ ಬದಲಾಗುವಂತೆ ಮಾಡಿದನು. ಈ ವಿಜಯದ ನೆನಪಿಗಾಗಿ ಆಮೋಘವರ್ಷನು ಬಂಕೇಶನ ಹೆಸರಿನಲ್ಲಿ 'ಬಂಕಾಪುರ'ವೆಂಬ ನಗರವನ್ನು ನಿರ್ಮಿಸಿದನು ಹಾಗೂ ಬಂಕೇಶನನ್ನು ಬನವಾಸಿಯ ರಾಜ್ಯಪಾಲನನ್ನಾಗಿ ನೇಮಿಸಿದನು.
ಅಮೋಘವರ್ಷನು ಧಾರ್ಮಿಕ ಸಹಿಷ್ಣವು, ಶಾಂತಿಪ್ರಿಯನ್ನು ಮತ್ತು ಸ್ವತಃ ವಿದ್ವಾಂಸನೂ ಆಗಿದ್ದನು. ರಾಜ್ಯದ ಜನರನ್ನು ಕಾಮದಿಂದ ಪಾರು ಮಾಡಲು ಕೊಲ್ಲಾಪುರದ ಮಹಾಲಕ್ಷ್ಮಿಗೆ ತನ್ನ ಕೈ ಬೆರಳನ್ನು ಕತ್ತರಿಸಿ ಅರ್ಪಿಸಿದನೆಂದು ಸಂಜಾನ್ ಶಾಸನ ತಿಳಿಸುತ್ತದೆ. ಸ್ವತ:ಪಂಡಿತನಾದ ಇವನು 'ಪ್ರಶೋತ್ತರ ರತ್ನಮಾಲಾ' ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದನು. ಇವನು ಜಿನಸೇನಾಚಾರ್ಯ, ಮಹಾವೀರಾಚಾರ್ಯ, ಶಕ್ತಾಯನ,
ಮುಂತಾದ ವಿದ್ವಾಂಸರಿಗೆ ಆಶ್ರಯ ನೀಡಿದ್ದನು. ಶ್ರೀವಿಜಯನಿಂದ ರಚಿಸಲ್ಪಟ್ಟ 'ಕವಿರಾಜಮಾರ್ಗ' ಕನ್ನಡದ ಮೊದಲ ಕೃತಿಯಾಗಿದೆ. ಮಾನ್ಯಖೇಟವು ಇವನ ಕಾಲದಲ್ಲಿ ರಾಜಧಾನಿಯಾಗಿ ತುಂಬಾ ಪ್ರಸಿದ್ಧಿಯಾಗಿತ್ತು. ಅರಬ್ ಪ್ರವಾಸಿ ಸುಲೇಮಾನ್ ಸಾ.ಶ. 851ರಲ್ಲಿ ಇವನ ರಾಜಧಾನಿಗೆ ಭೇಟಿ ನೀಡಿದನು. ಇವನು ರಾಷ್ಟ್ರಕೂಟರ ಸಾಮ್ರಾಜ್ಯವು ಜಗತ್ತಿನ ನಾಲ್ಕು ಶ್ರೇಷ್ಠ ಸಾಮ್ರಾಜ್ಯಗಳಲ್ಲಿ (ಬಾಗ್ದಾದ್, ಚೀನಾ ಮತ್ತು ಕಾನ್‌ಸ್ಟಂಟ್‌ನೋಪಲ್ ಇತರ ಮೂರು) ಒಂದಾಗಿದೆ ಎಂದಿದ್ದಾನೆ. ಇವನು 'ಅತಿಶಯದವಳ', 'ನೃಪತುಂಗ', 'ವೀರನಾರಾಯಣ', 'ಶ್ರೀವಲ್ಲಭ', 'ರಟ್ಟಮಾರ್ತಾಂಡ' ಮುಂತಾದ ಬಿರುದುಗಳನ್ನು ಹೊಂದಿದ್ದನು.
ಉತ್ತರಾಧಿಕಾರಿಗಳು:- ಎರಡನೇ ಕೃಷ್ಣ, 3ನೇ ಇಂದ್ರ, 2ನೇ ಅಮೋಘವರ್ಷ, 4ನೇ ಗೋವಿಂದ, 3ನೇ ಅಮೋಘವರ್ಷ, 3ನೇ ಕೃಷ್ಣ ಮತ್ತು 2ನೇ ಕರ್ಕ,
ಸಾಂಸ್ಕೃತಿಕ ಕೊಡುಗೆಗಳು:
ಧರ್ಮ.
ರಾಷ್ಟ್ರಕೂಟ ಅರಸರು ಧಾರ್ಮಿಕ ಸಹಿಷ್ಣುತಾ ಗುಣವುಳ್ಳವರಾಗಿದ್ದರು. ವೈದಿಕ ಮತಾವಲಂಬಿಗಳಾಗಿದ್ದ ಇವರು ಜೈನ ಮತ್ತು ಬೌದ್ಧ ಧರ್ಮಗಳಿಗೂ ರಾಜಾಶ್ರಯ ನೀಡಿದ್ದರು. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮಿಯ ಪರಮಭಕ್ತನಾಗಿದ್ದನು. ಬ್ರಾಹ್ಮಣರು ಯಜ್ಞ-ಯಾಗಾದಿಗಳಲ್ಲಿ ತೊಡಗುತ್ತಿದ್ದರು. ರಾಜರು ಅವರಿಗೆ ದಾನ ದತ್ತಿಗಳನ್ನು ನೀಡಿ ಗೌರವಿಸುತ್ತಿದ್ದರು. ಮುಂಬೈ ಸಮೀಪ ಕಣ್ಣೀರಿಯಲ್ಲಿ ಬೌದ್ಧ ಸಂಘವಿತ್ತು ಎಂದು ತಿಳಿಯುವುದು.
ರಾಷ್ಟ್ರಕೂಟ ದೊರೆಗಳು ಸಾಹಿತ್ಯ ಪೋಷಕರಾಗಿದ್ದರು. ಕೆಲವು ಅರಸರು ಸ್ವತಃ ಸಾಹಿತಿಗಳಾಗಿದ್ದರು. ಕನ್ನಡದ ಶಿಲಾಶಾಸನಗಳ ಸಂಖ್ಯೆ ಹೆಚ್ಚಾಯಿತು. ಕನ್ನಡದ ಮೊದಲ ಕೃತಿ ಕವಿರಾಜಮಾರ್ಗ ಶ್ರೀ ವಿಜಯನಿಂದ ರಚಿಸಲ್ಪಟ್ಟಿತು. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡನಾಡು ಹರಡಿತ್ತು ಎಂದು ಕವಿರಾಜ ಮಾರ್ಗ' ತಿಳಿಸುತ್ತದೆ.
ಇವರ ಕಾಲದಲ್ಲಿ ಸಾಹಿತ್ಯವು ವಿಫುಲವಾಗಿ ಬೆಳೆಯಿತು. 3ನೇ ಕೃಷ್ಣನ ಆಸ್ಥಾನದಲ್ಲಿದ್ದ ಪೊನ್ನನು 'ಶಾಂತಿಪುರಾಣ' ಮತ್ತು 'ಭುವನೈಕ್ಯ ರಾಮಾಭ್ಯುದಯ' ಗ್ರಂಥಗಳನ್ನು ಬರೆದನು. ಇವನಿಗೆ ಉಭಯ ಕವಿ ಚಕ್ರವರ್ತಿ ಎಂಬ ಬಿರುದು ಇತ್ತು. ರಾಷ್ಟ್ರಕೂಟರ ಸಾಮಂತ ವೇಮುಲವಾಡದ ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದ ಪಂಪನು 'ವಿಕ್ರಮಾರ್ಜುನ ವಿಜಯ' (ಪಂಪಭಾರತ) ಮತ್ತು 'ಆದಿಪುರಾಣ' ಗ್ರಂಥಗಳನ್ನು ರಚಿಸಿದನು. ಈತನನ್ನು ಕನ್ನಡದ ಆದಿಕವಿ'ಯೆಂದು ಕರೆಯಲಾಗಿದೆ. ಶಿವಕೋಟ್ಯಾಚಾರ್ಯನು 'ವಡ್ಡಾರಾಧನೆ' ಎಂಬ ಕೃತಿಯನ್ನು ರಚಿಸಿದನು. ಇದನ್ನು 'ಹಳೆಗನ್ನಡದ ಮೊದಲ ಗದ್ಯ ಕೃತಿ ಎಂದು ಕರೆಯಲಾಗಿದೆ.
ಸಂಸ್ಕೃತ ಸಾಹಿತ್ಯವೂ ಉತ್ಕೃಷ್ಟವಾಗಿ ಬೆಳೆಯಿತು.
ಶಕ್ತಾಯನ. ಶಬ್ದಾನುಶಾಸನ
ಮಹಾವೀರಾಚಾರ್ಯನ ಗಣಿತಸಾರ ಸಂಗದ
ಎಲ್ಲೋರಾ : ಮೈಲಾಸನಾಥ ದೇವಾಲಯ
ಹಾರಾಷ್ಟ್ರ ಔರಂಗಾಬಾದ್
ಜಿಲ್ಲೆಯ ಎಲ್ಲೋರಾದಲ್ಲಿ 34 ಗುಹಾಲಯಗಳಿದ್ದು, ಅವುಗಳಲ್ಲಿ 5 ಹಿಂದೂ ಧರ್ಮಕ್ಕೆ ಸೇರಿವೆ. ಇಲ್ಲಿನ ಕೈಲಾಸನಾಥ ಏಕಶಿಲಾ ದೇವಾಲಯವು ಜಗತ್ತ್ವಸಿದ್ಧಿಯಾಗಿದೆ. ದೇವಾಲಯವನ್ನು ಒಂದನೇ ಕೃಷ್ಣನು ಸಾ.ಶ. 770ರಲ್ಲಿ ನಿರ್ಮಿಸಿದನು. ಈ ದೇವಾಲಯವು 164 ಅಡಿ ಉದ್ದ, 109 ಅಡಿ ಅಗಲ ಮತ್ತು 92 ಅಡಿ ಎತ್ತರವನ್ನು ಹೊಂದಿದೆ. ಮಹಾದ್ವಾರ, ಪ್ರಾಕಾರ ಶಿಖರ ಮತ್ತು ಲಿಂಗ ಮೊದಲಾದ ಅಂಶಗಳನ್ನು ಹೊಂದಿರುವ ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯದಲ್ಲಿರುವ ಶಿವ ಲೀಲೆಗೆ ಸಂಬಂಧಿಸಿದ ಶಿಲ್ಪಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ದೇವಾಲಯದ ಬಳಿ ಎರಡು ಕಂಬಗಳು ಮತ್ತು ಎರಡು ಬೃಹತ್ ಆನೆಗಳನ್ನು ಕೆತ್ತಿ ನಿಲ್ಲಿಸಲಾಗಿದೆ. ಮುಂಭಾಗದಲ್ಲಿ ನಂದಿ ಮಂಟಪವಿದೆ.
ಗರ್ಭಗೃಹದ ಸುತ್ತಲೂ ಐದು ಪರಿವಾರ ದೇವತೆಗಳ ಗುಡಿಗಳಿವೆ. ಅಷ್ಟದಿಕ್ಷಾಲಕರು, ಗಂಗೆ-ಯಮುನೆ, ಸರಸ್ವತಿ ಮುಂತಾದ ಶಿಲ್ಪಗಳನ್ನು ಕೊರೆಯಲಾಗಿದೆ.
ರಾವಣನು ಕೈಲಾಸ ಪರ್ವತವನ್ನು ಎತ್ತುತ್ತಿರುವ ದೃಶ್ಯವು ಅದ್ಭುತವಾಗಿ ಕಾಣುವುದರಿಂದ ಈ ದೇವಾಲಯಕ್ಕೆ ಕೈಲಾಸನಾಥ ದೇವಾಲಯ ಎಂದು ಕರೆಯಲಾಗಿದೆ. ಡಾ| ವಿ.ಎ. ಸ್ಮಿತ್ ಅವರು ಈ ದೇವಾಲಯವನ್ನು ಜಗತ್ತಿನ ಅತ್ಯದ್ಭುತ ಕಲಾಕೃತಿಗಳಲ್ಲಿ ಒಂದು ಎಂದಿದ್ದಾರೆ.
ಎಲ್ಲೋರಾದ ಇತರೆ ಹಿಂದೂ ದೇವಾಲಯಗಳೆಂದರೆ ರಾವಣ ಗುಹೆ, ದಶಾವತಾರ ಗುಹೆ, ರಾಮೇಶ್ವರ ಗುಹೆ, ದುಮಾರ್ ಲೇನಾ ಗುಹೆ ಮುಂತಾದವು, ಇವುಗಳಲ್ಲದೆ ನೀಲಕಂಠ ಗುಹೆ, ಇಂದ್ರಸಭಾ, ಜಗನ್ನಾಥ ಸಭಾ ಗುಹಾಲಯಗಳು ಇಲ್ಲಿವೆ.
ಎಲಿಫೆಂಟಾ :
ಮುಂಬೈಯಿಂದ ಆರು ಮೈಲಿ ದೂರದಲ್ಲಿರುವ ಒಂದು ದ್ವೀಪ ಪ್ರದೇಶವಾಗಿರುವ ಎಲಿಫೆಂಟಾದಲ್ಲಿ ಏಳು ಗುಹೆಗಳಿವೆ. ಈ ಎಲಿಫೆಂಟಾದ ಹಿಂದಿನ ಹೆಸರು ಗೊರವಪುರಿ. ಇಲ್ಲಿರುವ ಬೃಹತ್ ಆನೆಯನ್ನು ಪೋರ್ಚುಗೀಸರು ಎಲಿಫೆಂಟಾ ಎಂದು ಕರೆದನಂತರ ಈ ದ್ವೀಪಕ್ಕೆ ಎಲಿಫೆಂಟಾ ಎಂಬ ಹೆಸರು ಬಂದಿತು. ಇಲ್ಲಿರುವ ಗುಹೆಗಳ ಮಧ್ಯದಲ್ಲಿರುವ ಗುಹೆಯಲ್ಲಿನ ತ್ರಿಮೂರ್ತಿ ವಿಗ್ರಹ ದೇವರ ಮೂರು ಅವತಾರಗಳಿಗೆ (ಸೃಷ್ಟಿ, ಸ್ಥಿತಿ, ಲಯ) ಸಂಬಂಧಿಸಿದೆ. 18 ಅಡಿ ಎತ್ತರವಿರುವ ಈ ಮೂರ್ತಿಯನ್ನು ಎರಡು ಅರ್ಧಕಂಬಗಳ ನಡುವೆ ಕೊರೆಯಲಾಗಿದೆ. ದ್ವಾರಪಾಲಕ, ಅರ್ಧನಾರೀಶ್ವರ, ಶಿವ, ಪಾರ್ವತಿ ಮುಂತಾದ ಉಬ್ಬು ಶಿಲ್ಪಗಳು ಸುಂದರವಾಗಿ ಕೆತ್ತಲ್ಪಟ್ಟಿವೆ.
ಇವರು ಚಿತ್ರಕಲೆಗೂ ಪ್ರೋತ್ಸಾಹ ನೀಡಿದ್ದರೆಂಬುದಕ್ಕೆ ಎಲ್ಲೋರಾದ ಗುಹಾಂತರ ದೇವಾಲಯದಲ್ಲಿರುವ ಚಿತ್ರಕಲೆ ಸಾಕ್ಷಿಯಾಗಿದೆ.
ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
https://www.mahitiloka.co.in/2021/05/blog-post_91.html
📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
📌https://www.mahitiloka.co.in/2021/05/blog-post_20.html
➡ ಕೃಷಿ ವಿಧಗಳು
➡ ವಾಯುಮಂಡಲದ ರಚನೆ
➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು
ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ
🙏🙏🙏🙏🙏🙏🙏🙏🙏🙏🙏🙏🙏
OUR SOCIAL LINKS ;-
YOU TUBE :-https://youtube.com/c/SGKKANNADA
TELEGRAM :-https://telegram.me/s/spardhakiran
INSTAGRAM :-https://instagram.com/shoyal2000?utm_medium=copy_link
FACE BOOK :-https://www.facebook.com/SGK-Kannada-112808230846685/
SHARECHAT :-https://b.sharechat.com/s2xoaNCEW7
https://b.sharechat.com/KaG9DabEGcb
No comments:
Post a Comment