ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ Narendra Modi Stadium)

         2021ರ ಫೆಬ್ರವರಿ 24 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನು 'ನರೇಂದ್ರ ಮೋದಿ ಕ್ರೀಡಾಂಗಣ' (Narendra Modi Stadium) ಎಂದು ಮರುನಾಮಕರಣ ಮಾಡಲಾಯಿತು. ಈ ಮೊದಲು 'ಮೊಟೆರಾ ಸ್ಟೇಡಿಯಂ' ಎಂದು ಕರೆಯಲಾಗುತ್ತಿತ್ತು. ನವೀಕರಣಗೊಂಡ ಈ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು 2021ರ ಫೆಬ್ರವರಿ 24 ರಂದು ಉದ್ಘಾಟಿಸಿದರು. ಮೊಟೆರಾ ಕ್ರೀಡಾಂಗಣವನ್ನು ಮಾತ್ರ ಮೋದಿ ಹೆಸರಿನಲ್ಲಿ ಮರುನಾಮಕರಣ ಮಾಡಿದ್ದು, ಇಡೀ ಕ್ರೀಡಾ ಸಂಕೀರ್ಣವು ಸರ್ದಾರ್ ಪಟೇಲ್ ಹೆಸರಿನಲ್ಲಿ ಇರಲಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಸ್ಪಷ್ಟತೆ ನೀಡಿದೆ.

          ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾ ಸಮುಚ್ಛಯ ನಿರ್ಮಾಣಕ್ಕೆ ಶಿಲಾನ್ಯಾಸ ನರೇಂದ್ರ ಮೋದಿ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ ಸಂದರ್ಭದಲ್ಲೇ 232 ಏಕ ರ ಜಾಗದಲ್ಲಿ ಸರ್ದಾರ್‌ ವಲ್ಲಭಭಾಯ್ ಪಟೇಲ್ ಕ್ರೀಡಾ ಸಮುಚ್ಛಯ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಶಿಲಾನ್ಯಾಸ ಮಾಡಿದರು. ಬೇರೆ ಬೇರೆ ಕ್ರೀಡೆಗಳ ಆಯೋಜನೆ, ತರಬೇತಿ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿ ಆರಂಭ: 2021ರ ಫೆಬ್ರವರಿ 24 ರಂದು ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟನೆಯಾದ ನಂತರ ಅದೇ ದಿನ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಿಂಕ್ ಬಾಲ್ (ಹಗಲು-ರಾತ್ರಿ) ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಜರುಗಿದ್ದು, ಭಾರತ ಕ್ರಿಕೆಟ್ ತಂಡವು ಜಯಗಳಿಸಿತ್ತು. 2021ರ ಮಾರ್ಚ್ ನಾಲ್ಕರಿಂದ ಆರಂಭಗೊಂಡ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ನರೇಂದ್ರ ಮೋದಿ


 ಕ್ರೀಡಾಂಗಣದ ಬಗ್ಗೆ ಮಾಹಿತಿ:

   ಗುಜರಾತ್  ರಾಜ್ಯದ ಅಹಮದಾಬಾದ್ ಸಮೀಪದ ಮೊಟೆರಾದಲ್ಲಿ 1982 ರಲ್ಲಿ ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣ ನಿರ್ಮಾಣವಾಗಿದ್ದು, ಅದಕ್ಕೆ ಆರಂಭದಲ್ಲಿ ಗುಜರಾತ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಆದರೆ ಆ ಬಳಿಕ ಗುಜರಾತ್ ಮೂಲದ ಹೆಸರಾಂತ ರಾಜಕೀಯ ಧುರೀಣ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಗೌರವಾರ್ಥ ಆ ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಷೇವ್ ಎಂದು ಹೆಸರಿಡಲಾಯಿತು. ಅದರಲ್ಲಿದ್ದ ಕ್ರಿಕೆಟ್ ಸ್ಟೇಡಿಯಂನಲ್ಲಿ 49 ಸಾವಿರ ಮಂದಿ ಪ್ರೇಕ್ಷಕರು ಕುಳಿತುಕೊಳ್ಳಬಹುದಾಗಿತ್ತು. 2006 ರಲ್ಲಿ ಕ್ರೀಡಾಂಗಣವನ್ನು ಸಣ್ಣ ಪ್ರಮಾಣದಲ್ಲಿ ನವೀಕರಿಸಲಾಯಿತು. ನವೀಕೃತ ಕ್ರೀಡಾಂಗಣದಲ್ಲಿ 54 ಸಾವಿರ ಪ್ರೇಕ್ಷಕರು ಏಕ ಕಾಲಕ್ಕೆ ಪಂದ್ಯ ವೀಕ್ಷಿಸಬಹುದಾಗಿತ್ತು ಜೊತೆಗೆ ಅಲ್ಲಿ ಪ್ಲಡ್ ಲೈಟ್ ರಸ್ತೆ ಕೂಡಾ ಕಲ್ಪಿಸಲಾಯಿತು. ಹೀಗಾಗಿ ವಿಶ್ವಕಪ್‌ನಂತಹ ಪ್ರಮುಖ ಪಂದ್ಯಾವಳಿಗಳು ಜರುಗಿದ್ದವು. 2014ರಲ್ಲಿ ಕ್ರೀಡಾಂಗಣವನ್ನು ಮತ್ತೊಮ್ಮೆ ನವೀಕರಿಸಲು ತೀರ್ಮಾನಿಸಲಾಯಿತು. ಆಗ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು ಮತ್ತು ಗುಜರಾತ್‌ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು.


    ಹಳೆಯ ಕ್ರೀಡಾಂಗಣವನ್ನು ಕೆಡವಿ 63 ಎಕರೆ ವ್ಯಾಪ್ತಿಗೆ ವಿಸ್ತರಿಸಿ 800 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತವಾಗಿ ವಿಶ್ವದ ಬೃಹತ್ ಕ್ರೀಡಾಂಗಣವಾಗಿ ಹೊರಹೊಮ್ಮಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿದ್ದ ಮೆಲ್ಲೋರ್ನ್‌ನ ಎಂಸಿಜಿ ದಾಖಲೆಯನ್ನು ನರೇಂದ್ರ ಮೋದಿ ಕ್ರೀಡಾಂಗಣ ಹಿಂದಿಕ್ಕಿದ್ದು, ಎಂಸಿಜಿ ಕ್ರೀಡಾಂಗಣದ ವಿನ್ಯಾಸ ಮಾಡಿದ್ದ ವಾಸ್ತುಶಿಲ್ಪ ಕಂಪನಿಯೇ ಈ ಸ್ಟೇಡಿಯಂನ ವಿನ್ಯಾಸದಲ್ಲೂ ಪ್ರಮುಖ ಪಾತ್ರ ವಹಿಸಿದೆ.


     ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಖ್ಯಾತಿಗೆ ಪಾತ್ರವಾದ ನರೇಂದ್ರ ಮೋದಿ ಕ್ರೀಡಾಂಗಣ

ಪ್ರಸ್ತುತವಾಗಿ ನರೇಂದ್ರ ಮೋದಿ ಕ್ರೀಡಾಂಗಣವು 1,10,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದುವರೆಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣವು 1 ಲಕ್ಷ ಆಸನ ವ್ಯವಸ್ಥೆಯನ್ನು ಹೊಂದಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿತ್ತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 11 ಪಿಚ್‌ಗಳು, 4 ಡ್ರೆಸ್ಸಿಂಗ್ ರೂಂಗಳು, ಈಜುಕೊಳ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು 63 ಎಕರೆ ಪ್ರದೇಶಕ್ಕೆ ವ್ಯಾಪಿಸಿರುವ ಈ ಕ್ರೀಡಾ ಸಂಕೀರ್ಣದಲ್ಲಿ ಕ್ರಿಕೆಟ್‌ ಜತೆ ಇನ್ನಿತರ ಕ್ರೀಡೆಗಳ ಸ್ಟೇಡಿಯಂಗಳು ಇವೆ. ಒಟ್ಟಾರೆ ಇದೊಂದು ಅಭೂತಪೂರ್ವ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


    ವಿವಾದಕ್ಕೊಳಗಾದ ಸ್ಟೇಡಿಯಂ: ಅಹಮದಾಬಾದ್‌ನ ಮೊಟೆರಾದಲ್ಲಿರುವ ಈ ಕ್ರೀಡಾಂಗಣವನ್ನು ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ವಲ್ಲಭಬಾಯಿ ಪಟೇಲ್ ರವರ ಹೆಸರಿನಿಂದ ಕರೆಯಲಾಗುತ್ತಿತ್ತು. ಪ್ರಸ್ತುತ ಈ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರು ನಾಮಕರಣ ಮಾಡುವುದರೊಂದಿಗೆ ಸ್ಟೇಡಿಯಂನಲ್ಲಿರುವ ಎರಡೂ ಬದಿಗಳಿಗೆ (ಬೌಲಿಂಗ್ ಮಾಡುವ ಎರಡು ತುದಿಗಳು) ಅದಾನಿ ಎಂಡ್ ಮತ್ತು ರಿಲಯೆನ್ಸ್ ಎಂಡ್ ಎಂದು ಹೆಸರಿಡಲಾಗಿದ್ದು, ಈ ಸಂಬಂಧ ವಿವಾದಕ್ಕೆ ಒಳಗಾಗಿದ್ದು, ಪರ ಮತ್ತು ವಿರೋಧಗಳು ವ್ಯಕ್ತವಾಗಿವೆ. ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ: 2020ರ ಫೆಬ್ರವರಿ 24 ರಂದು ಅಂದಿನ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿರವರು ನಮಸ್ತೆ ಟ್ರಂಪ್‌ ಕಾರ್ಯಕ್ರಮವನ್ನು ಈ ಕ್ರೀಡಾಂಗಣದಲ್ಲಿ ಆಯೋಜಿಸಿದ್ದರು. ಅಮೆರಿಕಾದ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ 2019ರ ಸೆಪ್ಟೆಂಬರ್ 28 ರಂದು ಜರುಗಿದ್ದ ಹೌಡಿ ಮೋದಿ ಕಾರ್ಯಕ್ರಮದ ಪ್ರತಿರೂಪವಾಗಿ ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರೀಡಾಂಗಣದಲ್ಲಿ ಹಾಲ್ ಆಫ್ ಫೇಮ್ ಸೃಷ್ಟಿ: ಈ ಕ್ರೀಡಾಂಗಣದಲ್ಲಿ ಹಾಲ್ ಆಫ್ ಫೇಮ್ ಸೃಷ್ಟಿಸಲಾಗಿದ್ದು ಭಾರತೀಯ ಕ್ರಿಕೆಟ್ ದಂತಕತೆಗಳ ಸಾಧನೆಯ ಚಿತ್ರಣವನ್ನು ಪ್ರದರ್ಶಿಸಲಾಗಿದೆ. (ವೃತ್ತಿ ಜೀವನದಲ್ಲಿ 100ನೇ ಟೆಸ್ಟ್ ಆಡಿದ ಇಶಾಂತ್ ಶರ್ಮಾ ಅವರಿಗೆ ರಾಷ್ಟ್ರಪತಿ ಸನ್ಮಾನ ಮಾಡಿದರು)

Next Post Previous Post
No Comment
Add Comment
comment url