ಭಾರತೀಯ ಸೇನಾ ದಿನ indian army day

 2021ರ ಜನವರಿ 15 ರಂದು ದೇಶಾದ್ಯಂತ 73ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಯಿತು. ಭಾರತೀಯ ARTY DAY ಸೇನೆಯು ಸ್ವರ್ಣಿಮಾ ವಿಜಯ ವರ್ಷದ ಹಿನ್ನೆಲೆಯಲ್ಲಿ Vijay Run ಹೆಸರಿನ ಮ್ಯಾರಥಾನ್ ಆಯೋಜಿಸಿತ್ತು. ಈ 2020 ದಿನದಂದು ದೆಹಲಿಯ ದಂಡು ಪ್ರದೇಶದಲ್ಲಿರುವ ಪರೇಡ್ ಮೈದಾನದಲ್ಲಿ ಸೇನಾ ಪಡೆಗಳ ಆಕರ್ಷಕ ಪಥಸಂಚಲನ ಮತ್ತು ಕವಾಯತು ಜರುಗಿತು. ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲು ನಡೆಸಿದ ಈ ಕಾರ್ಯಕ್ರಮದಲ್ಲಿ ಸೇನೆಯ ಮೂರೂ ಪಡೆಯ ಮುಖ್ಯಸ್ಥರುಗಳು ಭಾಗವಹಿಸಿದ್ದರು.

   ಭಾಗವಹಿಸಿದ್ದ ಪ್ರಮುಖರು: ಭೂಸೇನಾ ಮುಖ್ಯಸ್ಥರಾದ ಮೇಜರ್‌ ಎಂ.ಎಂ.

ನರವಣೆ ಅವರು ಪಥಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಸಶಸ್ತ್ರ ಪಡೆಗಳ ಮುಖ್ಯಸ್ಥ (CDS-Chief Of Defence Staff) ಜನರಲ್ ಬಿಪಿನ್ ರಾವತ್ ಅವರು ಸೇನಾ ದಿನದ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಕೇತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ (Captain Tania Shergill) ಪಥಸಂಚಲನದ ನೇತೃತ್ವ ವಹಿಸಿದ್ದರು.


ಸೇನಾ ದಿನದಂದು ಡೋನ್ ಸಮೂಹಗಳ ಪ್ರದರ್ಶನ


ಸೇನಾ ದಿನದ ಸಂದರ್ಭದಲ್ಲಿ ದೆಹಲಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪನವರ ಮೈದಾನದಲ್ಲಿ ನಡೆದ ಪರೇಡ್‌ನಲ್ಲಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 15 ಯುದ್ಧ ಡೋನ್‌ಗಳ ಸಮೂಹಗಳ ಪ್ರದರ್ಶನ ಜರುಗಿತು. ಹಕ್ಕಿಗಳ ಗುಂಪಿನಂತೆ ಆಗಸದಲ್ಲಿ ಒಂದಾಗಿ ಹಾರುತ್ತಾ ಶತ್ರು ಪಡೆಗಳ ಮೇಲೆ ನಾನಾ ರೀತಿಯ ದಾಳಿ ನಡೆಸಬಲ್ಲ ಶಕ್ತಿ ಹೊಂದಿರುವ 15 ಯುದ್ಧ ಡೋನ್‌ಗಳ ಪಡೆಯನ್ನು ಪ್ರದರ್ಶಿಸಲಾಯಿತು. ಶತ್ರುಪಾಳೆಯದ ಗಡಿಯೊಳಗೆ 50 ಕಿ.ಮೀ. ನಷ್ಟು ಪ್ರವೇಶಿಸಬಲ್ಲ ಸಾಮರ್ಥ್ಯವನ್ನು ಈ ಡೋನ್‌ಗಳು ಹೊಂದಿವೆ. ಹಕ್ಕಿಗಳಂತೆ ಧ್ವನಿ ಮಾಡುವ ಕಾರಣ ಇವುಗಳ ನಿರ್ವಹಣೆ ಮಾಡುವವರು ಶತ್ರುಗಳ ಕಣ್ಣಿಗೆ ಸಿಕ್ಕಿಬೀಳುವ ಸಾಧ್ಯತೆಯೂ ಕೂಡ ಕಡಿಮೆ, ವಿಶ್ವದ ಹಲವು ದೇಶಗಳ ಇಂತಹ ಹೊಸ ಮಾದರಿಯ ಭವಿಷ್ಯದ ಶಸ್ತ್ರಾಸ್ತ್ರ ಮತ್ತು ಯುದ್ಧ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಭಾರತೀಯ ಸೇನೆಯೂ ಕೂಡ ಈ ಸಾಲಿಗೆ ಸೇರ್ಪಡೆಗೊಂಡಿದೆ.

     ಭಾರತೀಯ ಭೂಸೇನೆಯಲ್ಲಿರುವ ಅತ್ಯುನ್ನತ ಹುದ್ದೆ : ಫೀಲ್ಡ್ ಮಾರ್ಷಲ್


ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿ ಜನರಲ್ ಅವರು ಕಾರ್ಯನಿರ್ವಹಿಸುತ್ತಾರೆ. ಕೆಲವು ವಿಶಿಷ್ಟ ಮತ್ತು ಅಪರೂಪದ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ. ಈ ಹುದ್ದೆಯು 5 ಸ್ಟಾರ್‌ಗಳ ಬ್ಯಾಂಕ್‌ನ ಹುದ್ದೆಯಾಗಿದೆ. ಸ್ವತಂತ್ರ ಭಾರತದಲ್ಲಿ ಇದುವರೆಗೂ ಮಾಣಿಕ್ ಷಾ (ಮೊದಲ ಸೇನಾ ಮುಖ್ಯಸ್ಥ) ಮತ್ತು ಕೆ.ಎಂ.ಕಾರಿಯಪ್ಪ ಮಾತ್ರ ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದಿದ್ದಾರೆ. ಇವರು ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ.


ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾದ ಹುದ್ದೆಗಳು


ನೌಕಾ ಪಡೆಯಲ್ಲಿ ಅಡ್ಡಿರಲ್ ಆಫ್ ಫೀಟ್ ಹುದ್ದೆಯು ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾಗಿದೆ. ಆದರೆ ಭಾರತದಲ್ಲಿ ಇದುವರೆಗೆ


ಯಾರಿಗೂ ಪ್ರದಾನ ಮಾಡಲಾಗಿಲ್ಲ. ಭಾರತೀಯ ವಾಯುಪಡೆಯಲ್ಲಿ ಮಾರ್ಷಲ್ ಆಫ್ ದ ಇಂಡಿಯನ್


ಏರ್‌ಫೋರ್ಸ್‌ ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾಗಿರುತ್ತದೆ. ಈ ಹುದ್ದೆ ಪಡೆದ ಏಕೈಕ ಅಧಿಕಾರಿ - ಅರ್ಜನ್ ಸಿಂಗ್,


ನೆನಪಿರ: CDS

ಚೀಫ್ ಆಫ್ ಡಿಫೆನ್ಸ್ ಸ್ಟ್ಯಾಫ್, ಮಿಲಿಟರಿ

ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಾಗಿದ್ದು, 2020ರ ಜನವರಿ 1 ರಿಂದ ಬಿಪಿನ್ ರಾವತ್ ಮೊದಲ ಸಿಡಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  ಜನರಲ್ ಕೆ.ಎಂ. ಕಾರಿಯಪ್ಪ ಅವರು 1949 ರ ಜನವರಿ 15 ರಂದು ಭಾರತೀಯ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ ಸರ್, ಫ್ರಾನ್ಸಿಸ್ ರಾಬರ್ಟ್ ರಾಯ್ಬುಚ್ಚರ್ ಅವರು ಭಾರತದ ದೇಶದ ಸೇನೆಯ ಕಮಾಂಡರ್ ಆಗಿದ್ದರು. ಬುಚ್ಚರ್ ಅವರು ಕಾರಿಯಪ್ಪ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದ ಐತಿಹಾಸಿಕ ದಿನದ ನೆನಪಿಗಾಗಿ ಜನವರಿ 15 ಅನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. (2020ರ ಸೇನಾ ದಿನದ ಧೈಯವಾಕ್ಯ: ರಕ್ಷಣೆಯ ಡಿಜಿಟಲ್ ಪರಿವರ್ತನೆ)

2020ರ ರಾಷ್ಟ್ರೀಯ ಸೇನಾ ದಿನದ ವಿಶೇಷತೆ 2020ರಲ್ಲಿ ಕ್ಯಾಪ್ಟನ್ ತಾನಿಯಾ ಶೆರ್ಗಿಲ್‌ರವರು ಸೇನಾ ದಿನದಂದು ಮತ್ತು ಗಣರಾಜ್ಯೋತ್ಸವ ದಿನದಂದು ಪರೇಡ್‌ ಅನ್ನು ಮುನ್ನಡೆಸಿದ್ದು, ಈ ಮೂಲಕ ಪರೇಡ್‌ನಲ್ಲಿ ಕಮಾಂಡ್‌ ಅನ್ನು ಮುನ್ನಡೆಸಿದ ಮೊದಲ

ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ರಾಷ್ಟ್ರಪತಿಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ : ಮಡಿಕೇರಿ ಕೊಡಗಿನ ವೀರಯೋಧ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ(General K.S. Thimayya) ಅವರು ಹುಟ್ಟಿ ಬೆಳೆದ ಮನೆ 'ಸನ್ನಿಸೈಡ್' (Sunny Side) ನಿವಾಸವನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. 2021ರ ಫೆಬ್ರವರಿ 6 ರಂದು ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಮಡಿಕೇರಿಯಲ್ಲಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5.5 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂನ ಕಾಮಗಾರಿ ನಡೆದಿದೆ. 1957-61 ರ ಅವಧಿಯಲ್ಲಿ ತಿಮ್ಮಯ್ಯ ಅವರು ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.


Next Post Previous Post
No Comment
Add Comment
comment url