* ಮಣಿಪುರ ಪೊಲೀಸ್ ಠಾಣೆ - 2020ರ ನವೆಂಬರ್‌ನಲ್ಲಿ ಮಣಿಪುರ ರಾಜ್ಯದ ತೌಬಲ್ ಜಿಲ್ಲೆಯ ನೊಂನೈಮೊಕ್ ಸೆಕ್‌ಮೈ ಪೊಲೀಸ್ ಠಾಣೆಯು ದೇಶದ ಅತ್ಯಂತ ಉತ್ತಮ ಪೊಲೀಸ್ ಠಾಣೆ ಎಂದು ಆಯ್ಕೆ.
* ವಾಯವ್ಯ ದೆಹಲಿಯ ಸಮಯ್‌ಪುರ್ ಬದ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸೀಮಾ ಢಾಕಾ ಅವರು ಅವರಿಗಿಂತ ಮೊದಲೇ ವಿಶೇಷ ಬಡ್ತಿ ಪಡೆದ ಮೊದಲ ಪೊಲೀಸ್ ಅಧಿಕಾರಣಿ.
* ನ್ಯೂಜಿಲೆಂಡ್ ದೇಶದ ಪೊಲೀಸ್ ಇಲಾಖೆಯಲ್ಲಿ ಇಜಾಬ್ ಧರಿಸಿದ ಮೊದಲ ಮಹಿಳೆ - ಕಾನ್‌ಸ್ಟೇಬಲ್ ಜಿನ್ಹಾ ಅಲಿ
* ಗಬ್ಬುರ್ ಪೊಲೀಸ್ ಠಾಣೆ - ಕೇಂದ್ರ ಗೃಹ ಸಚಿವಾಲಯ ದೇಶದ ಪೊಲೀಸ್ ಠಾಣೆಗಳ ಕಾರ್ಯಕ್ಷಮತೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಟ್ಟೂರು ಠಾಣೆಯು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.
* ಕರ್ನಾಟಕದ 41ನೇ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅವರು 2020ರ ಫೆಬ್ರವರಿ 3 ರಂದು ನೇಮಕವಾದರು. ಇವರು ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎನಿಸಿದ್ದ ನೀಲಮಣಿ ಎನ್.ರಾಜು ಅವರ ನಂತರ ನೇಮಕವಾಗಿದ್ದಾರೆ.
* ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಭಾಸ್ಕರ್ ರಾವ್ನಂತರ ಕಮಲ್ ಪಂಥ್ ನೇಮಕವಾಗಿದ್ದಾರೆ.
* ಕರ್ನಾಟಕ ರಾಜ್ಯದ ಮೊದಲ ಮಹಿಳಾ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಪಿಎಸ್ ಅಧಿಕಾರಿಣಿಯಾಗಿ ಡಿ. ರೂಪ ನೇಮಕವಾಗಿದ್ದಾರೆ.
No comments:
Post a Comment