2021ರ ಮಾರ್ಚ್ 18 ರಂದು ನಾರ್ವೆ ಸರ್ಕಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗಣಿತಶಾಸ್ತ್ರಜ್ಞರಿಗೆ ಪ್ರತಿ ವರ್ಷದಂತೆ ಅಬೆಲ್ ಪ್ರಶಸ್ತಿಯನ್ನು ಪ್ರಕಟಿಸಿದೆ. ಅಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ನಿರ್ಧಾರದಂತೆ ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಷಯಗಳಲ್ಲಿ ಅತ್ಯುತ್ತಮ ಸಹ ಸಂಬಂಧವನ್ನು ಬೆಸೆಯುವಲ್ಲಿ ಕಾರಣರಾದ ಇಬ್ಬರು ಸಂಶೋಧಕರಾದ ಹಂಗೇರಿಯ ಲಾಸ್ ಲೊವಾಸ್ (Laszlo lovasz) ಮತ್ತು ಅಮೆರಿಕದ
ಅವಿ ವಿಗ್ ಡರ್ಸನ್ (Avi wigDerson) ಆಯ್ಕೆಯಾಗಿದ್ದಾರೆ. 7.5 ಮಿಲಿಯನ್ ನಾರ್ವೆಯನ್ ಕ್ರೋನಾರ್ ಮೊತ್ತದ ಅಬೆಲ್ ಪ್ರಶಸ್ತಿಯನ್ನು ಡಾ|| ಲೋವಾಸ್ ಮತ್ತು ಡಾ|| ವಿಗ್ ಡರ್ಸನ್ ಹಂಚಿಕೊಳ್ಳಲಿದ್ದಾರೆ.
ಅಬೆಲ್ ಪುರಸ್ಕೃತ ಲಾಸ್‌ಲೋ ಲೋವಾಸ್ ಬಗ್ಗೆ ಮಾಹಿತಿ
ಹಂಗೇರಿಯ ಬುಡಾ ಪೆಸ್ಟ್‌ನಲ್ಲಿನ ಆಲೈಡ್ ರೆಂಟ್ ಇ ಸಂಸ್ಥೆಯ ಲಾಸ್‌ಲೋ ಲೊವಾಸ್ ರವರು 2021ರ ಅಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಕಂಪ್ಯೂಟರ್ ಆಲ್ಗರಿದಮ್ ದಕ್ಷತೆ ಮತ್ತು ವೇಗದ ಅಧ್ಯಯನ, ಲೆಕ್ಕಾಚಾರದ ಸಂಕೀರ್ಣತೆ ವಿಭಾಗದಲ್ಲಿ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಗಣಿತ ಶಾಸ್ತ್ರದ ವಿವಿಧ ವಿಭಾಗಗಳಲ್ಲಿ ದುಡಿದಿರುವ ಲೊವಾಸ್ ರವರು ಗಣಿತದ ಶಾಖೆ ಯಾದ ಅನ್ವಯಿಕ ಗ್ರಾಫ್ ಸಿದ್ಧಾಂತದ ಮೂಲಕ ಲೆಕ್ಕಾಚಾರದ ಸಂಕೀರ್ಣತೆ ಪರಿಕಲ್ಪನೆಯನ್ನು ನೀಡಿದ್ದಾರೆ. ಮೊಬೈಲ್ ಕಂಪ್ಯೂಟಿಂಗ್, ಕ್ರಿಸ್ಟೋಗ್ರಫಿ, ಸಂಖ್ಯಾ ಸಿದ್ಧಾಂತದಲ್ಲೂ ಲೊವಾಸ್ ಆಲ್ಗರಿದಮ್ ಅನ್ವಯಿಕೆ ಮಾಡಲು ಪ್ರಯತ್ನಿಸಿದ್ದಾರೆ.
ಅಬೆಲ್ ಪುರಸ್ಕೃತ ಅವಿ ಬಿಗ್ ಡರ್ಸನ್ ಬಗ್ಗೆ ಮಾಹಿತಿ
ಅಮೆರಿಕದ ಪ್ರಿನ್ಸ್‌ಟನ್ ನಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡಿ ವಿಭಾಗದಲ್ಲಿ ಗಣಿತ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ವಿಗ್ ಡರ್ಸನ್ ರವರು ಕಂಪ್ಯುಟೇಷನಲ್ ವಿಭಾಗದ ಅಗ್ರಗಣ್ಯ ಎನಿಸಿದ್ದಾರೆ. ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ವಿವಿಧ ವಿಭಾಗಗಳಲ್ಲಿ ವಿಗ್ ಡರ್ಸನ್ ಕೊಡುಗೆ ನೀಡಿದ್ದಾರೆ ರೆ, ಹಣಕಾಸು ಮಾರುಕಟ್ಟೆಯ ಬಿಕ್ಕಟ್ಟು, ಸೌರವ್ಯೂಹದಲ್ಲಿನ ಗ್ರಹಗಳ ಚಲನೆ, ಮೆದುಳಿನ ನ್ಯೂರಾನ್‌ಗಳ ಕಾರ್ಯ ಚಟುವಟಿಕೆಗಳನ್ನು ಸಹ ಆಲ್ಗರಿದಮ್ ಪ್ರಕ್ರಿಯೆಯ ಮೂಲಕ ಅಧ್ಯಯನ ಮಾಡಬಹುದೆಂದು ತಿಳಿಸಿದ್ದಾರೆ.
ಗಣಿತಶಾಸ್ತ್ರದ ನೊಬೆಲ್ ಬೆಲ್ ಪ್ರಶಸ್ತಿ (Abel Prize)
* ನಾರ್ವೆಯ ಗಣಿತಶಾಸ್ತ್ರಜ್ಞರಾದ ನೀಲ್ಸ್ ಹೆನ್ರಿಕ್ ಅಬೆಲ್ (Neils Hen rik Abel) (1802-1829) ರವರ ಹೆಸರಿನಲ್ಲಿ ಅಬೆಲ್ ಪ್ರಶಸ್ತಿಯನ್ನು 2001 ರಲ್ಲಿ ನಾರ್ವೆ ಸರ್ಕಾರ ನೀಡಲು ಪ್ರಾರಂಭಿಸಿದೆ.
* ನಾರ್ವೆ ದೇಶದ ಗಣಿತಶಾಸ್ತ್ರಜ್ಞ ನೀಲ್ಸ್ ಹೆನ್ರಿಕ್ ಅಬೆಲ್‌ರವರು ಗಣಿತಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರ್ತಿಸಿ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೇವಲ 26ವರ್ಷ ಬದುಕಿದ್ದ ಅಬೆಲ್‌ರವರು ಗಣಿತಶಾಸ್ತ್ರಕ್ಕೆ ನೀಡಿರುವ ಕೊಡುಗೆಗಳನ್ನು 500ವರ್ಷದವರೆಗೆ ಸ್ಮರಿಸುವಂತಾಗಿದೆ.
ಅಬೆಲ್ ಪ್ರಶಸ್ತಿ ವಿಶೇಷತೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಿತಶಾಸ್ತ್ರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ನೀಡುವ ಪ್ರಶಸ್ತಿಯಾಗಿದೆ. ಇದನ್ನು ಗಣಿತಶಾಸ್ತ್ರಜ್ಞರ ನೊಬೆಲ್ ಪ್ರಶಸ್ತಿ ಎಂದೇ ಬಿಂಬಿಸಲಾಗಿದೆ.
* ಪ್ರಶಸ್ತಿ ನೀಡುವ ದೇಶ: ನಾರ್ವೆ
# ಸ್ಥಾಪನೆ ವರ್ಷ: 2001 * ಮೊದಲು ಪ್ರದಾನ:- 2003
# ಪ್ರಶಸ್ತಿ ಪ್ರದಾನ ಮಾಡುವ ಸ್ಥಳ:- ಓಗ್ಲೋ ವಿಶ್ವವಿದ್ಯಾಲಯದ ಅಟ್ರಿಯಂ (1947 ರಿಂದ 1989 ರವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದ ಸ್ಥಳ).
# ಮೊದಲ ಪ್ರಶಸ್ತಿ: ಫ್ರೆಂಚ್‌ನ Jean Pierre Serre (2003)
# ಪ್ರಶಸ್ತಿ ಪಡೆದ ಭಾರತೀಯ ಮೂಲದವರು:- ಎಸ್.ಆರ್. ಶ್ರೀನಿವಾಸ್ ವರದನ್ (2007)-ಸಂಭವನೀಯತೆ ಸಿದ್ಧಾಂತ.
# 2019ನೇ ಸಾಲಿನ ಪ್ರಶಸ್ತಿ: ಅಮೆರಿಕಾದ ಕರೇನ್ ಉಪ್ಲೇನ್‌ಬೆಕ್ (ಅಬೆಲ್ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಮಹಿಳೆ)
ಗಣಿತಶಾಸ್ತ್ರದಲ್ಲಿ ನೀಡಲಾಗುವ ಪ್ರಮುಖ ಪ್ರಶಸ್ತಿಗಳು
ಸಸ್ತ ರಾಮಾನುಜನ್ ಪ್ರಶಸ್ತಿ
(SASTRA RAMANUJAN AWARD)
* ವಿಶೇಷತೆ: ಭಾರತೀಯ ಗಣಿತ ಶಾಸ್ತ್ರದ ಅಬೆಲ್ ಪ್ರಶಸ್ತಿ
* ಸ್ಥಾಪನೆ: 2005
ಪ್ರಶಸ್ತಿ ಹಿನ್ನಲೆ: ರಾಮಾನುಜನ್ ಅವರು ತಮ್ಮ 32ನೇ ವಯಸ್ಸಿನಲ್ಲಿ ನಿಧನರಾದ ಹಿನ್ನಲೆಯಲ್ಲಿ 32 ವರ್ಷದೊಳಗಿನ ಯುವ ಗಣಿತಶಾಸ್ತ್ರಜ್ಞರ ಅಪ್ರತಿಮ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರಶಸ್ತಿ.
* ನೀಡುವವರು: ತಮಿಳುನಾಡಿನ ತಂಜಾವೂರ್‌ನಲ್ಲಿರುವ (SASTRA - Shanmugha Arts, Science, Technology & Research
Academy)
* 2020ರ ಪುರಸ್ಕೃತರು: ಶಾಮ್ ಇವ್ರಾ (Shai Evra)
(FIELDS MEDAL)
* ವಿಶೇಷತೆ: ಗಣಿತ ಕ್ಷೇತ್ರದ ನೊಬೆಲ್ ಪ್ರಶಸ್ತಿ
* ಪ್ರಶಸ್ತಿ ಪ್ರದಾನ: ಅಂತರಾಷ್ಟ್ರೀಯ ಗಣಿತ ಒಕ್ಕೂಟದ ಅಂತಾರಾಷ್ಟ್ರೀಯ
* ಪ್ರಶಸ್ತಿ ಮೊತ್ತ: ಪ್ರತಿ ವಿಜೇತರಿಗೆ 15 ಸಾವಿರ ಕೆನಡಿಯನ್ ಡಾಲರ್.
* ಪ್ರಶಸ್ತಿ ನೀಡುವುದು: 40 ವರ್ಷದ ವಯೋಮಾನದೊಳಗಿನ ಗಣಿತ ಶಾಸ್ತ್ರಜ್ಞರಿಗೆ (ಇಬ್ಬರು, ಮೂರು ಅಥವಾ ನಾಲ್ಕು ಗಣಿತಶಾಸ್ತ್ರಜ್ಞರಿಗೆ) * * ಪ್ರಶಸ್ತಿ ಪ್ರದಾನ ಸಮಾರಂಭ: 4 ವರ್ಷಕ್ಕೊಮ್ಮೆ ನಡೆಯುವ ಅಂತರಾಷ್ಟ್ರೀಯ ಗಣಿತ ಕಾಂಗ್ರೆಸ್ (ಐಎಂಯು) ಸಭೆಯಲ್ಲಿ ಪ್ರದಾನ ಮಾಡಲಾಗುತ್ತದೆ.
* 2018ರ ಪ್ರಶಸ್ತಿ: ಅಕ್ಷಯ್ ವೆಂಕಟೇಶ್ (ಭಾರತ)
No comments:
Post a Comment