ವಾರ್ಡ್ ಸಭೆ

ಅಧ್ಯಾಯ II
ವಾರ್ಡ್ ಸಭೆ ಮತ್ತು ಗ್ರಾಮಸಭೆ

3. ವಾರ್ಡ್ ಸಭೆ.- (1) ಸರ್ಕಾರದ ಸಾಮಾನ್ಯ ಆದೇಶಗಳಿಗೊಳಪಟ್ಟು, ವಾರ್ಡ್ ಆರು ತಿಂಗಳುಗಳಿಗೆ ಒಂದು ಸಲ ಸಭೆ ಸೇರತಕ್ಕದ್ದು.

(2) ವಾರ್ಡ್ ಸಭೆಯು ಸಭೆ ಸೇರುವಾಗ, ವಾರ್ಡ್ ಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಹತ್ತನೆಯ ಒಂದರಷ್ಟು ಅಥವಾ ಇಪ್ಪತ್ತು ಸದಸ್ಯರು, ಇವುಗಳಲ್ಲಿ ಯಾವುದು ಕಡಿಮೆಯೋ, ಅದು ಸಭೆಯ ಕೋರಂ
ಆಗಿರತಕ್ಕದ್ದು. ಸಾಧ್ಯವಾದಷ್ಟು ಮಟ್ಟಿಗೆ, ವಾರ್ಡ್ ಸಭೆಗೆ ಹಾಜರಾಗುವ ಮತದಾರರಲ್ಲಿ ಶೇಕಡಾ ಮೂವತ್ತಕ್ಕೆ ಕಡಿಮೆಯಲ್ಲದಷ್ಟು ಸಂಖ್ಯೆಯಲ್ಲಿ ಮಹಿಳೆಯರಿರತಕ್ಕದ್ದು. ಸಾಧ್ಯವಾದಷ್ಟು ಮಟ್ಟಿಗೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳು ಸಭೆಯಲ್ಲಿನ ಅವರ ಜನಸಂಖ್ಯೆಯ ಅನುಪಾತ ಪರವಾಗಿ ಪ್ರತಿನಿಧಿಸು ತಕ್ಕದ್ದು.


(3) ನಿಯಮಿಸಬಹುದಾದಂತೆ ಅಂತಹ ನಿಯಮಗಳಿಗೊಳಪಟ್ಟು, ವಾರ್ಡ್ ಸಭೆಯು ಈ ಮುಂದಿನ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಎಂದರೆ:

(ಎ) ವಾರ್ಡ್ ಸಭೆಯ ಪ್ರದೇಶದೊಳಗೆ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಸ್ತಾವಗಳನ್ನು ಮಾಡುವುದು ಮತ್ತು ಅವುಗಳ ಆದ್ಯತೆಯನ್ನು ನಿರ್ಧರಿಸುವುದು ಮತ್ತು ಗ್ರಾಮಪಂಚಾಯಿತಿಯ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ಅದನ್ನು ಗ್ರಾಮಸಭೆಯ ಮುಂದಿಡಲು ಕಳುಹಿಸಿಕೊಡುವುದು;

(ಬಿ) ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಫಲಾನುಭವಿ ಆಧಾರಿತ ಯೋಜನೆಗಳಿಗಾಗಿ, ವಾರ್ಡ್ ಸಭೆಯ ಪ್ರದೇಶದಿಂದ ಅತ್ಯಂತ ಅರ್ಹ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಆದ್ಯತೆಯ ಕ್ರಮಕ್ಕನುಸಾರ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ಅದನ್ನು ಗ್ರಾಮಸಭೆಯ ಮುಂದಿಡಲು ಕಳುಹಿಸಿಕೊಡುವುದು;

(ಸಿ) ಸರ್ಕಾರದಿಂದ ನಿವೃತ್ತಿ ವೇತನಗಳು ಮತ್ತು ಸಬ್ಸಿಡಿಗಳಂಥ ವಿವಿಧ ಬಗೆಯ ಕಲ್ಯಾಣ ನೆರವನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಗಳ ಅರ್ಹತೆಯ ಬಗ್ಗೆ ಸತ್ಯಾಪನೆ ಮಾಡುವುದು;

(ಡಿ) ಗ್ರಾಮ ಪಂಚಾಯತಿಯ ಅಧಿಕಾರಿಗಳು ಸಲ್ಲಿಸಬೇಕಾದ ಸೇವೆಗೆ ಮತ್ತು ವಾರ್ಡ್ ಸಭೆಯ ತರುವಾಯದ ಮುಂದಿನ ಆರು ತಿಂಗಳ ಅವಧಿಯಲ್ಲಿ ಅವರು ಮಾಡಲು ಉದ್ದೇಶಿಸಲಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಪಡೆಯುವುದು;

(ಇ) ವಾರ್ಡ್ ಸಭೆಯ ಪ್ರದೇಶದ ಸಂಬಂಧದಲ್ಲಿ ಗ್ರಾಮ ಪಂಚಾಯಿತಿಯ ಪ್ರತಿಯೊಂದು ತೀರ್ಮಾನವು ಎಷ್ಟು ವಿವೇಚನಾಯುತವಾಗಿದೆಯೆಂಬ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯುವುದು;


(ಎಫ್) ವಾರ್ಡ್ ಸಭೆಯ ತೀರ್ಮಾನದ ಮೇಲೆ ಕೈಕೊಂಡ ಅನುಸರಣಾ ಕ್ರಮದ ಮೇಲೆ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆಯುವುದು

(ಜಿ) ಅಭಿವೃದ್ಧಿ ಕಾಮಗಾರಿಗಾಗಿ ಸ್ವಯಂ ಸೇವಾ ಕಾರ್ಮಿಕರನ್ನು ಹಾಗೂ ಹಣದ ರೂಪದಲ್ಲಿ ಮತ್ತು ವಸ್ತು ರೂಪದಲ್ಲಿ ವಂತಿಗೆಗಳನ್ನು ಒದಗಿಸುವುದು ಮತ್ತು ಸಂಗ್ರಹಿಸುವುದು ಮತ್ತು ಸ್ವಯಂ

ಸೇವಾ ತಂಡಗಳ ಮೂಲಕ ಅಂಥ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದು; (ಹೆಚ್) ವಾರ್ಡ್ ಸಭೆಯ ಸದಸ್ಯರು, ಗ್ರಾಮ ಪಂಚಾಯಿತಿಗೆ ತೆರಿಗೆಗಳನ್ನು ಸಂದಾಯ ಮಾಡುವಂತೆ

ಮತ್ತು ಸಾಲಗಳನ್ನು ಮರು ಸಂದಾಯ ಮಾಡುವಂತೆ ಪ್ರಯತ್ನಿಸುವುದು. (ಐ) ವಾರ್ಡ್ ಸಭೆಯ ಪ್ರದೇಶದೊಳಗೆ ಬೀದಿ ದೀಪಗಳು, ಬೀದಿ ಅಥವಾ ಸಮುದಾಯ ನಲ್ಲಿಗಳು, ಸಾರ್ವಜನಿಕ ಬಾವಿಗಳು, ಸಾರ್ವಜನಿಕ ನಿರ್ಮಲೀಕರಣ ಘಟಕಗಳು, ನೀರಾವರಿ ಸೌಲಭ್ಯಗಳು ಮತ್ತು ಅಂತಹ ಇತರ ಸಾರ್ವಜನಿಕ ಸೌಲಭ್ಯ ಯೋಜನೆಗಳಿಗಾಗಿ ಸ್ಥಳಗಳನ್ನು ಮಾಡುವುದು; ಸಲಹ

(ಜೆ) ವಾರ್ಡ್ ಸಭೆಯ ಪ್ರದೇಶದಲ್ಲಿ ನೀರು ಸರಬರಾಜು ಮತ್ತು ಬೀದಿ ದೀಪ ವ್ಯವಸ್ಥೆಗಳಲ್ಲಿ ಕೊರತೆಗಳನ್ನು ಗುರುತಿಸುವುದು ಮತ್ತು ಪರಿಹಾರ ಕ್ರಮಗಳನ್ನು ಸಲಹೆ ಮಾಡುವುದು; (ಕೆ) ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿವಾರಣೆಯಂಥ ಸಾರ್ವಜನಿಕ ಹಿತಾಸಕ್ತಿಯ

ವಿಷಯಗಳ ಬಗ್ಗೆ ಅರಿವು ಮೂಡಿಸುವುದು;

(ಎಲ್) ವಾರ್ಡ್ ಸಭೆಯ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಗಳ ಸಂಬಂಧದಲ್ಲಿ ಗ್ರಾಮ ಪಂಚಾಯಿತಿಯ ನೌಕರರಿಗೆ ನೆರವು ನೀಡುವುದು ಮತ್ತು ಕಸವನ್ನು ತೆಗೆದು ಹಾಕುವಲ್ಲಿ ಸ್ವಯಂ ಸೇವೆ ಸಲ್ಲಿಸುವುದು;

(ಎಮ್) ವಾರ್ಡ್ ಸಭೆಯ ಪ್ರದೇಶದೊಳಗೆ ವಯಸ್ಕರ ಶಿಕ್ಷಣ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವುದು;

(ಎನ್), ವಿಶೇಷವಾಗಿ, ರೋಗ ಪತಿಬಂಧ ಮತ್ತು ಕುಟುಂಬ ಕಲ್ಯಾಣದ ವಿಷಯದಲ್ಲಿ ವಾರ್ಡ್ ಸಭೆಯ ಪ್ರದೇಶದಲ್ಲಿಯ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಚಟುವಟಿಕೆಗಳಿಗೆ ನೆರವು ನೀಡುವುದು ಮತ್ತು ಸಾಂಕ್ರಾಮಿಕ ರೋಗಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಿದ ಬಗ್ಗೆ ಕೂಡಲೇ ವರದಿ ಮಾಡುವ ವ್ಯವಸ್ಥೆ ಮಾಡುವುದು.

(ಓ) ವಾರ್ಡ್ ಸಭೆಯ ಪ್ರದೇಶದಲ್ಲಿ ಜನರ ವಿವಿಧ ಸಮೂಹಗಳ ನಡುವೆ ಸಾಮರಸ್ಯ ಮತ್ತು ಐಕ್ಯತೆಯನ್ನು ಬೆಳೆಸುವುದು ಮತ್ತು ಆ ಸ್ಥಳದ ಜನರ ಪ್ರತಿಭೆಯನ್ನು ಅಭಿವ್ಯಕ್ತ ಗೊಳಿಸುವುದಕ್ಕಾಗಿ ಸಾಂಸ್ಕೃತಿಕ ಉತ್ಸವಗಳು ಮತ್ತು ಕ್ರೀಡಾಕೂಟಗಳನ್ನು ವ್ಯವಸ್ಥೆ ಮಾಡುವುದು, ಮತ್ತು

(ಪಿ) ನಿಯಮಿಸಬಹುದಾದಂತೆ ಅಂತಹ ಇತರ ಅಧಿಕಾರಗಳನ್ನು ಚಲಾಯಿಸುವುದು ಮತ್ತು ಅಂತಹ ಇತರ ಪ್ರಕಾರ್ಯಗಳನ್ನು ನೆರವೇರಿಸುವುದು.

(4) ವಾರ್ಡ್ ಸಭೆಯ ಸಭೆಗಳನ್ನು ಕರೆಯುವುದಕ್ಕಾಗಿ ಮತ್ತು ನಡೆಸುವುದಕ್ಕಾಗಿ ಕಾರ್ಯವಿಧಾನವು, ನಮಿಸಬಹುದಾಂಥದ್ದಾಗಿರತಕ್ಕದ್ದು. 


(5) ವಾರ್ಡ್ ಸಭೆಯ ಪ್ರತಿಯೊಂದು ಸಭೆಗೆ ಸಂಬಂಧಪಟ್ಟ ವಾರ್ಡ್ ಸಭೆಯ ಪ್ರದೇಶದಿಂದ ನಾಯಿತನಾದ ಗಾಮ ಪಂಚಾಯಿತಿಯ ಸದಸ್ಯರು ಮತ್ತು ಆವನ ಗೈರು ಹಾಜರಿಯಲ್ಲಿ ಗ್ರಾಮ ಪಂಚಾಯಿತಿಯು‌ ನಾಮನಿರ್ದೇಶನ ಮಾಡಿದ ಅದರ ಯಾವೊಬ್ಬ ಇತರ ಸದಸ್ಯನು ಅಧ್ಯಕ್ಷತೆ ವಹಿಸತಕ್ಕದ್ದು.

(6) ವಾರ್ಡ್ ಸಭೆಯ ಸಭೆಯಲ್ಲಿಯ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ನಿರ್ಣಯಗಳನ್ನು ನಜರಿರುವ ಮತ್ತು ಮತಚಲಾಯಿಸುವ ಸದಸ್ಯರ ಬಹುಮತದಿಂದ ಅಂಗೀಕರಿಸತಕ್ಕದ್ದು.
Next Post Previous Post
No Comment
Add Comment
comment url