1983ರಲ್ಲಿ ಕೇಂದ್ರ – ರಾಜ್ಯ ಸಂಬಂಧ'ಕ್ಕೆ ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ಆಯೋಗವನ್ನು ರಚಿಸಿತು ?

ಎ) ಸರ್ಕಾರಿಯಾ ಆಯೋಗ 

ಬಿ) ದತ್ತ ಆಯೋಗ 

ಸಿ)  ಸತ್ವಲದ್ ಆಯೋಗ 

ಡಿ) ರಾಜಮನ್ನಾರ್ ಆಯೋಗ

ಉತ್ತರ: ಸರ್ಕಾರಿಯಾ ಅಯೋಗ

ವಿವರಣೆ : ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಆಯೋಗಗಳಲ್ಲಿ ಸರ್ಕಾರಿಯಾ ಆಯೋಗ ಒಂದಾಗಿದೆ. ಇದನ್ನು 1983ರಲ್ಲಿ ನೇಮಕ ಮಾಡಿದ್ದು, ನ್ಯಾಯಮೂರ್ತಿ ರಂಜಿತ್ ಸಿಂಗ್ ಸರ್ಕಾರಿಯಾ ಅವರು ಅಧ್ಯಕ್ಷರಾಗಿದ್ದು, ಬಿ.ಶಿವರಾಮನ್, ಎಸ್.ಆರ್.ಸೇನ್ ಮತ್ತು ರಾಮ ಸುಬ್ರಹ್ಮಣ್ಯಂ ಅವರು ಈ ಆಯೋಗದ ಸದಸ್ಯರಾಗಿದ್ದರು. ಈ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆಡಳಿತಾತ್ಮಕ ಸಂಬಂಧದ ಸುಧಾರಣೆಗೆ ಸಂಬಂಧಿಸಿದೆ.

ಪಿ.ವಿ.ರಾಜಮನ್ನಾರ್ ಅವರು 1957-58ರಲ್ಲಿ ಮದ್ರಾಸ್ ರಾಜ್ಯದ ಗವರ್ನರ್ ಆಗಿದ್ದು, 1948-68ರಲ್ಲಿ ಮದ್ರಾಸ್ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿದ್ದರು. ನವದೆಹಲಿಯಲ್ಲಿರುವ ಸಂಗೀತ ನಾಟಕ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದರು. ಇವರು 1964ರಲ್ಲಿ ನೇಮಕವಾದ 4ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದರು. ಎಂ.ಸಿ.ಸೆಟಲ್‌ವಾಡ್ ಅವರು ಭಾರತದ ಮೊದಲ ಮತ್ತು ದೀಘಾವಧಿ ಅವಧಿ ಸೇವೆ ಸಲ್ಲಿಸಿದ ಅಟಾರ್ನಿ ಜನರಲ್ ಹಾಗೂ ಭಾರತದ ಮೊದಲ ಕಾನೂನು ಆಯೋಗದ (1955-58) ಅಧ್ಯಕ್ಷರಾಗಿದ್ದರು.

1969ರಲ್ಲಿ ಸುಭೀಮಲ್ ದತ್ತ ಅಧ್ಯಕ್ಷತೆಯ ಕೈಗಾರಿಕಾ ಪರವಾನಗಿ ನೀತಿ ಶೋಧನಾ ಸಮಿತಿಯು ವರದಿಯನ್ನು ಸಲ್ಲಿಸಿತ್ತು.
Next Post Previous Post
No Comment
Add Comment
comment url