ಬದರಿನಾಥ ಯಾವ ನದಿಯ ದಡದಲ್ಲಿದೆ ?
ಎ) ಮಂದಾಕಿನಿ
ಬಿ) ಸಟ್ಲಜ್
ಸಿ) ಅಲಕಾನಂದ
ಡಿ) ಬ್ರಹ್ಮಪುತ್ರ
ಉತ್ತರ: ಅಲಕಾನಂದ
ವಿವರಣೆ : ಅಲಕಾನಂದ ನದಿಯು ಗಂಗಾ ನದಿಯ ಮೂಲ ನದಿಯಾಗಿದೆ. ಈ ನದಿಯು ಉತ್ತರಾಖಂಡ ರಾಜ್ಯದಲ್ಲಿ ಹರಿಯುತ್ತಿದ್ದು, ಈ ನದಿಗೆ ಕೇದಾರ್‌ನಾಥ ಎಂಬಲ್ಲಿ ಮಂದಾಕಿನಿ ನದಿಯು ಸೇರುತ್ತದೆ. ನಂತರ ದೇವಪ್ರಯಾಗದಲ್ಲಿ ಭಗೀರಥಿಯೊಂದಿಗೆ ಸೇರಿ ಗಂಗಾ ನದಿಯಾಗಿ ಹರಿಯುತ್ತದೆ. ಮಂದಾಕಿನಿ ನದಿಯು ಅಲಕಾನಂದ ನದಿಯ ಉಪ ನದಿಯಾಗಿದ್ದು, ಉತ್ತರಾಖಂಡ ರಾಜ್ಯದ ಕೇದಾರನಾಥ ಸಮೀಪ ಉಗಮಿಸುತ್ತದೆ ಮತ್ತು ರುದ್ರಪ್ರಯಾಗ್‌ನಲ್ಲಿ ಅಲಕಾನಂದ ನದಿಗೆ ಸೇರುತ್ತದೆ.