ಚೆನಾಬ್' ಯಾವ ನದಿಯ ಉಪನದಿಯಾಗಿದೆ ?

ಎ) ಇಂಡಸ್ 

ಬಿ) ಗಂಗಾ 

ಸಿ) ಬ್ರಹ್ಮಪುತ್ರಾ

ಡಿ) ಕಾವೇರಿ

ಉತ್ತರ: ಇಂಡಸ್

ವಿವರಣೆ : ಚೆನಾಬ್, ರಾವಿ, ಸಟೇಜ್, ಝೇಲಂ & ಬಿಯಾಸ್ ನದಿಗಳು ಸಿಂಧೂ (ಇಂಡಸ್) ನದಿಯ ಪ್ರಮುಖ ಉಪನದಿಗಳಾಗಿವೆ. ಸತ್ತೇಜ್ ನದಿಯು ಸಿಂಧೂ ನದಿಯ ಅತಿ ದೊಡ್ಡ ಉಪನದಿ. ಈ ನದಿಗೆ ಹಿಮಾಚಲ ಪ್ರದೇಶದಲ್ಲಿ ಭಾಕ್ರಾ ಅಣೆಕಟ್ಟ (ಗೋಬಿಂದಸಾಗರ ಜಲಾಶಯ)ನ್ನು ನಿರ್ಮಿಸಲಾಗಿದೆ. ಚೆನಾಬ್ ನದಿಯು ಪಂಜಾಬ್ ಪ್ರಾಂತ್ಯದಲ್ಲಿ ಹರಿಯುವ 5 ಪ್ರಮುಖ ನದಿಗಳಲ್ಲಿ ಒಂದಾಗಿದ್ದು, ಭಾರತ & ಪಾಕಿಸ್ತಾನ ಎರಡೂ ದೇಶಗಳಲ್ಲಿ ಹರಿಯುತ್ತದೆ. 1960 ಸೆಪ್ಟೆಂಬರ್ 19ರ ಇಂಡಸ್ ಜಲ ಒಪ್ಪಂದ ಅನ್ವಯ ಚೆನಾಬ್ ನದಿಯ ನೀರನ್ನು ಪಾಕಿಸ್ತಾನ ದೇಶಕ್ಕೆ ಹಂಚಿಕೆ ಮಾಡಲಾಗಿದೆ.
Post a Comment (0)
Previous Post Next Post