ಯಾರ ಜನನ ವಾರ್ಷಿಕೋತ್ಸವವನ್ನು ಸದ್ಭಾವನಾ ದಿವಸ ಮತ್ತು ಮರಣ ವಾರ್ಷಿಕೋತ್ಸವವನ್ನು ಭಯೋತ್ಪಾದನಾ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ?
ಎ) ಇಂದಿರಾಗಾಂಧಿ
ಬಿ) ರಾಜೀವ್ ಗಾಂಧಿ
ಸಿ) ಮಹಾತ್ಮಗಾಂಧಿ
ಡಿ) ಸಂಜಯ್‌ಗಾಂಧಿ (
ಉತ್ತರ: ರಾಜೀವ್ ಗಾಂಧಿ
ವಿವರಣೆ : ಭಾರತದ ಅತಿ ತರುಣ ಪ್ರಧಾನಿ ಖ್ಯಾತಿಯ ರಾಜೀವ್ ಗಾಂಧಿಯವರು 1944ರ ಆಗಸ್ಟ್ 20ರಂದು ಮುಂಬೈನಲ್ಲಿ ಜನಿಸಿದರು. ಈ ಕಾರಣದಿಂದ ಆಗಸ್ಟ್ 20ನ್ನು ರಾಷ್ಟ್ರೀಯ ಸದ್ಭಾವನಾ ದಿನವೆಂದು ಅಚರಿಸಲಾಗುತ್ತದೆ. 1991ರ ಮೇ 21 ರಂದು ತಮಿಳುನಾಡಿನ ಪೆರಂಬದೂರು ಬಳಿ ಎಲ್‌ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಅವರು ಹತ್ಯೆಯಾದರು. ಹೀಗಾಗಿ ಮೇ 21ರ ದಿನವನ್ನು ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ದಿನವೆಂದು ಆಚರಿಸಲಾಗುತ್ತದೆ. ವೀರಭೂಮಿ ಎಂಬುದು ರಾಜೀವ್ ಗಾಂಧಿ ಅವರ ಸಮಾಧಿ ಸ್ಮಾರಕವಾಗಿದೆ. (ಅಕ್ಟೋಬರ್ 2 - ಅಂತರಾಷ್ಟ್ರೀಯ ಅಹಿಂಸಾ ದಿನ, ಗಾಂಧೀಜಿ ಜನ್ಮ ದಿನ)