ಯಾವ ರಾಜವಂಶವು, ಪಟ್ಟದಕಲ್ಲು ಮತ್ತು ಐಹೊಳೆಯಲ್ಲಿ ದೇವಾಲಯಗಳನ್ನು ನಿರ್ಮಿಸಿದೆ ?
ಎ) ಚಾಲುಕ್ಯ
ಬಿ) ಹೊಯ್ಸಳ
ಸಿ) ಶಾತವಾಹನ
ಡಿ) ರಾಷ್ಟ್ರಕೂಟ
(ಉತ್ತರ: ಚಾಲುಕ್ಯ
ವಿವರಣೆ : ಬಾಗಲಕೋಟೆ ಜಿಲ್ಲೆಯಲ್ಲಿನ ಬಾದಾಮಿ (ವಾತಾಪಿ), ಐಹೊಳೆ & ಪಟ್ಟದಕಲ್ಲು ನಗರಗಳು ಮಲಪ್ರಭಾ ನದಿಯ ದಡದ ಮೇಲೆ ಕಂಡುಬರುತ್ತವೆ. ಈ ಮೂರು ಸ್ಥಳಗಳಲ್ಲಿನ ಪ್ರಮುಖ ದೇವಾಲಯಗಳನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ರಾಜರು ನಿರ್ಮಿಸಿದರು. 1986ರಲ್ಲಿ ಪಟ್ಟದಕಲ್ಲನ್ನು ಯುನೆಸ್ಕೋದ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಬಾದಾಮಿಯು ಹೃದಯ ಯೋಜನೆಯಲ್ಲಿ ಆಯ್ಕೆಯಾದ ಒಂದು ಸ್ಥಳವಾಗಿದೆ. ಐಹೊಳೆ ಎಂಬುದು ವಾಸ್ತುಶಿಲ್ಪದ ತೊಟ್ಟಿಲು ಎನಿಸಿದೆ. & ಹೊಯ್ಸಳರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು: ಬೇಲೂರು ಹಳೇಬೀಡು, ದೊಡ್ಡ ಗದ್ದವನ ಹಳ್ಳಿ, ಸೋಮನಾಥಪುರ. • ರಾಷ್ಟ್ರಕೂಟರ ಕಾಲದ 1ನೇ ಕೃಷ್ಣನು ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು.
೬ ಶಾತವಾಹನರ ಕಾಲದಲ್ಲಿ ಆಂಧ್ರಪ್ರದೇಶದ ಅಮರಾವತಿಯಲ್ಲಿ ಬೌದ್ಧರ ಕಲೆ & ವಾಸ್ತುಶಿಲ್ಪ ಶೈಲಿಯ ಸ್ಫೂಪವು ನಿರ್ಮಾಣಗೊಂಡಿತು. ಶಾತವಾಹನರ ಮೂಲ ಪುರುಷ-ಸಿಮುಖ, ಪ್ರಸಿದ್ಧ ಅರಸ - ಗೌತಮೀಪತ್ರ ಶಾತಕರ್ಣಿ
- ರಾಷ್ಟ್ರಕೂಟರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು : ಎಲ್ಲೋರ, ಎಲಿಫೆಂಟಾ(ಗೊರವಪುರಿ ಮೊದಲ ಹೆಸರು), ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ (ರಾಷ್ಟ್ರಕೂಟರ ಕಾಲದ ಪ್ರಮುಖ ವಿದ್ಯಾಕೇಂದ್ರ).