ಎ) ಭಾಗ IX
ಬಿ) ಭಾಗ X
ಸಿ) ಭಾಗ XI
ಡಿ) ಭಾಗ XII
ಉತ್ತರ: ಭಾಗ - IX
ವಿವರಣೆ : ಸಂವಿಧಾನದ 9ನೇ ಭಾಗದ 243 ವಿಧಿಯಿಂದ 243ಒ ವಿಧಿವರೆಗೆ ಪಂಚಾಯಿತಿ ಬಗ್ಗೆ ವಿವರಣೆ ನೀಡುತ್ತದೆ. ಸಂವಿಧಾನದ 11ನೇ ಅನುಸೂಚಿಯು ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರ ಮತ್ತು ಜವಾಬ್ದಾರಿಗಳನ್ನು ತಿಳಿಸುವುದು.
ಮೂಲ ಸಂವಿಧಾನದಲ್ಲಿ 22 ಭಾಗಗಳಿದ್ದು, ಪ್ರಸ್ತುತ 25 ಭಾಗಗಳಿವೆ. 1992ರಲ್ಲಿ ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಪಂಚಾಯತ್ ರಾಜ್ ಕಾಯ್ದೆಯನ್ನು ರಚಿಸಿ 1993ರ ಏಪ್ರಿಲ್ 24ರಂದು ಜಾರಿಗೊಳಿಸಿತು. (1993ರ ಮೇ 10 ರಂದು ಕರ್ನಾಟಕದಲ್ಲಿ ಜಾರಿ). ಹೀಗಾಗಿ ಏಪ್ರಿಲ್ 24 ಅನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಎಂದು ಆಚರಿಸಲಾಗುತ್ತಿದೆ. ಸಂವಿಧಾನದ 10ನೇ ಭಾಗವು ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶ, 11ನೇ ಭಾಗವು ಕೇಂದ್ರ ರಾಜ್ಯಗಳ ನಡುವಿನ ಸಂಬಂಧ ಹಾಗೂ 12ನೇ ಭಾಗವು ಹಣಕಾಸು, ಆಸ್ತಿ, ಒಪ್ಪಂದ ವಿವಾದದ ಬಗ್ಗೆ ತಿಳಿಸುವುದು. ಸಂವಿಧಾನದ ಭಾಗ-1 (ಕೇಂದ್ರ ಮತ್ತು ಭೂ ಪ್ರದೇಶಗಳು), ಭಾಗ-2 (ಪೌರತ್ವ), ಭಾಗ-3 (ಮೂಲಭೂತ ಹಕ್ಕುಗಳು), ಭಾಗ -4 (ರಾಜ್ಯ ನಿರ್ದೇಶಕ ತತ್ವಗಳು)
No comments:
Post a Comment