ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಯಾವನಗರದಲ್ಲಿದೆ ?
ಎ) ಮೈಸೂರು
ಬಿ) ಬೆಂಗಳೂರು
ಸಿ) ಧಾರವಾಡ
ಡಿ) ಉಡುಪಿ
(ಉತ್ತರ: ಮೈಸೂರು
ವಿವರಣೆ : ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯು ಮೈಸೂರಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ (ಮೊದಲ ಹೆಸರು ಎಂಹೆಚ್‌ಆರ್‌ಡಿ) ದ ಭಾಷಾ ಬ್ಯೂರೋ ಭಾಗವಾಗಿ 1969 ಜುಲೈ 17 ರಂದು ಸ್ಥಾಪನೆಗೊಂಡಿತು. ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಕರ್ನಾಟಕದ ಏಕೈಕ ರೈಲ್ವೆ ಮ್ಯೂಸಿಯಂ, ಗಂಗೂಬಾಯಿ ಹಾನಗಲ್ ನಾಟ್ಯಕಲಾ ಅಕಾಡೆಮಿ, ಮಾನಸ ಗಂಗೋತ್ರಿ ಹೆಸರಿನ ವಿವಿ ಮೈಸೂರಿನಲ್ಲಿದೆ. ಕರ್ನಾಟಕದಲ್ಲಿ ಮೊದಲು ಆಕಾಶವಾಣಿ ಕೇಂದ್ರ ಕಚೇರಿ ಕೂಡ ಮೈಸೂರಿನಲ್ಲಿ
ಆರಂಭವಾಗಿದೆ. (ಕರ್ನಾಟಕದ ಸ್ವಚ್ಛ ನಗರ - ಮೈಸೂರು)