ಎ) ಸ್ವಾಮಿ ವಿವೇಕಾನಂದ
ಬಿ) ಈಶ್ವರಚಂದ್ರ ವಿದ್ಯಾಸಾಗರ್
ಸಿ) ರವೀಂದ್ರನಾಥ ಟ್ಯಾಗೋರ್
ಡಿ) ರಾಮ್‌ಮೋಹನ್ ರಾಯ್
ಉತ್ತರ: ಸ್ವಾಮಿ ವಿವೇಕಾನಂದ
ವಿವರಣೆ : 1893ರ ಸೆಪ್ಟೆಂಬರ್ 11ರಂದು ಚಿಕಾಗೋದಲ್ಲಿನ ವಿಶ್ವ ಸರ್ವಧರ್ಮ ಧಾರ್ಮಿಕ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದರ ಮೊದಲ ಹೆಸರು ನರೇಂದ್ರನಾಥ ದತ್ತ ಆಗಿತ್ತು. ಇವರು ಪಶ್ಚಿಮ ಬಂಗಾಳದ ಕೋಲ್ಕತ್ತಾದವರಾಗಿದ್ದು ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ ಆಗಿದ್ದಾರೆ. ವಿವೇಕಾನಂದರ ಜನ್ಮ ದಿನವಾದ ಜನವರಿ 12ನ್ನು ಭಾರತದಲ್ಲಿ ರಾಷ್ಟ್ರೀಯ ಯುವಕರ ದಿನ ಎಂದು ಆಚರಿಸಲಾಗುತ್ತದೆ. ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಗುರುಗಳು. ವಿವೇಕಾನಂದರು 1897ರಲ್ಲಿ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಶ್ರೀರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. (ಪ್ರಧಾನ ಕಛೇರಿ ಕೋಲ್ಕತ್ತಾದ ಬೇಲೂರು ಮಠ)
No comments:
Post a Comment