MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!
Youngest member of the police family to succumb to Covid. PSI Shamili of Kolar, attached to DK district lost her battle with COVID.
May her soul rest in peace. But it could be any of us. Please cooperate with police, stay home and stay safe.Youngest member of the police family to succumb to Covid. 24 year old, PSI Shamili of Kolar, attached to DK district lost her battle with COVID.
— DGP KARNATAKA (@DgpKarnataka) May 18, 2021
May her soul rest in peace.
But it could be any of us. Please cooperate with police, stay home and stay safe. pic.twitter.com/s7ecNSdZ67
ಪರಿವರ್ತನಮಂಡಲ
ಪರಿವರ್ತನ ಮಂಡಲವೆಂದರೆ 'ಮಿಶ್ರಣ ವಲಯ', `ಟ್ರೊಪೋಸ್' ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದ್ದು ಇದರ ಅರ್ಥ ಮಿಶ್ರಣ' ಅಥವಾ 'ಟರ್ಬುಲೆನ್ಸ್'. ಇದು ವಾಯುಮಂಡಲದ ಅತ್ಯಂತ ಕೆಳಗಿನ ಸ್ತರವಾಗಿದೆ. ಇಲ್ಲಿ ಜೀವಿಗಳ ಅಸ್ತಿತ್ವವಿದೆ. ಹವಾಮಾನದ ಎಲ್ಲಾ ಬದಲಾವಣೆಗಳು ಈ ವಲಯದಲ್ಲಿ ಕಂಡುಬರುತ್ತವೆ. ಆದುದರಿಂದ ಇದನ್ನು 'ಪರಿವರ್ತನ' ಅಥವಾ 'ಬದಲಾವಣೆ ಮಂಡಲ' ಎನ್ನುತ್ತಾರೆ ಹಾಗೂ 'ಹವಾಮಾನದ ಉತ್ಪಾದಕ' ವಲಯವೆಂತಲು ಕರೆಯಲಾಗುತ್ತದೆ. ಈ ವಲಯದಲ್ಲಿ ಉಷ್ಣಾಂಶ, ಒತ್ತಡ, ಮಾರುತಗಳು, ಮೋಡಗಳು ಮತ್ತು ಇವುಗಳಲ್ಲದೆ ವಿಶಿಷ್ಟ ಲಕ್ಷಣಗಳಾದ ಮಿಂಚು, ಗುಡುಗು, ಕಾಮನಬಿಲ್ಲು ಮತ್ತು ಮಳೆ ಇವು ಸಾಮಾನ್ಯವಾಗಿ ಕಂಡು ಬರುತ್ತವೆ. ಈ ವಲಯವು ಉತ್ತಮ ವಾಯುಸಾರಿಗೆಗೆ ಸೂಕ್ತವಾಗಿದೆ. ಈ ವಲಯದ ಎತ್ತರವು ದೃವ ಪ್ರದೇಶಗಳಲ್ಲಿ 8 ಕಿ.ಮೀ ಇದ್ದು, ಸಮಭಾಜಕ ವೃತ್ತ ಪ್ರದೇಶದಲ್ಲಿ 18 ಕಿ.ಮೀ. ಎತ್ತರದವರೆಗೆ ಇದೆ. ಇದರ ಸರಾಸರಿ ಎತ್ತರ ಸುಮಾರು 12 ಕಿ.ಮಿ. ಈ ವಲಯದಲ್ಲಿ ಎತ್ತರವು ಹೆಚ್ಚಾದಂತೆ ಉಷ್ಣಾಂಶವು ಕಡಿಮೆಯಾಗುತ್ತದೆ. ಇಲ್ಲಿನ ಉಷ್ಣಾಂಶವು ಪ್ರತಿ 165ಮಿ. ಎತ್ತರಕ್ಕೆ 1ಸೆ. ಅಥವಾ 1000 ಮೀ. ಎತ್ತರಕ್ಕೆ 6.4°ಸೆ. ಕಡಿಮೆಯಾಗುತ್ತದೆ.
ಇದು ವಾಯುಮಂಡಲದ ಎರಡನೇ ಸ್ತರ, ಈ ವಲಯವು ಭೂಮಿಯ ಮೇಲ್ಮೀಯಿಂದ 50 ಕಿ.ಮೀ ಎತ್ತರದಲ್ಲಿದೆ. ಇದು ನೀರಾವಿ ಮತ್ತು ಧೂಳಿನ ಕಣಗಳಿಂದ ಮುಕ್ತವಾಗಿದೆ. ಇಲ್ಲಿ ಯಾವುದೇ ಮೋಡಗಳಿರುವುದಿಲ್ಲ. ಈಜಿ ವಿಮಾನಗಳ ಹಾರಾಟಕ್ಕೆ ಅತ್ಯಂತ ಸೂಕ್ತವಾಗಿದೆ. ಓರೋನ್ ಸ್ತರವು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ. ಈ ವಲಯದಲ್ಲಿ ಓರೋನ್ ಸ್ತರ ದಟ್ಟವಾಗಿದೆ. ಇದು ಭೂಮಿಯ ಮೇಲಿನ ಜೀವಿಗಳ ಉಳುವಿಗೆ ಕಾರಣವಾಗಿದೆ. ಈ ಸ್ತರವು 5 ರಿಂದ 20 ಕಿಮೀ ಮಧ್ಯದಲ್ಲಿದೆ. ಇಲ್ಲಿ ವಾಯು ವಿರಳವಾಗಿದ್ದು, ಉಷ್ಣತೆಯು ಸ್ಥಿರವಾಗಿರುತ್ತದೆ. ಸಮೋಷ್ಣ ವಿರಾಮವು ಸಮೋಷ್ಣಮಂಡಲ ಮತ್ತು ಮಧ್ಯಂತರಮಂಡಲದ ನಡುವೆಯಿದೆ.
ಮಧ್ಯಂತರಮಂಡಲ
ಈ ಪದರವು ಭೂಮಿಯ ಮೇಲ್ಮೀಯಿಂದ 80 ಕಿ.ಮೀ ಎತ್ತರದಲ್ಲಿದೆ. ಇದು ವಾಯುಮಂಡಲದಲ್ಲಿಯೇ ಅತ್ಯಂತ ಶೀತವಲಯವಾಗಿದೆ. ಇಲ್ಲಿ ಸೂರ್ಯನ ಕಿರಣಗಳನ್ನು ಹೀರಲಾರದಷ್ಟು ವಾಯು ವಿರಳವಾಗಿದೆ. ಉಷ್ಣಾಂಶದ ಇಳಿಕೆಯ ಪ್ರಮಾಣ ಈ ಮಂಡಲದಿಂದ ಪ್ರಾರಂಭವಾಗುತ್ತದೆ. ಈ ಪದರದಲ್ಲಿ ಎತ್ತರವು ಹೆಚ್ಚಾದಂತೆ ಉಷ್ಣಾಂಶವು ಕಡಿಮೆಯಾಗುತ್ತಾ. ಇದು 80 ಕಿ.ಮೀ ಎತ್ತರದಲ್ಲಿ 100 ಸೆ ಇರುವುದು ಕಂಡು ಬಂದಿದೆ. ಮಧ್ಯಂತರ ವಿರಾಮವು ಮಧ್ಯಂತರಮಂಡಲ ಮತ್ತು ಉಷ್ಣತಾಮಂಡಲದ ನಡುವೆ ಕಂಡುಬರುತ್ತದೆ.
ಉಷ್ಣತಾಮಂಡಲ
ಇದು ಸುಮಾರು 80 ರಿಂದ 600 ಕಿ.ಮೀ ಎತ್ತರದ ಒಳಗೆ ಭೂಮಿಯ ಮೇಲೆ ವ್ಯಾಪಿಸಿದೆ. ಇಲ್ಲಿ ಉಷ್ಣಾಂಶ ಅತ್ಯಧಿಕವಾಗಿರುತ್ತದೆ. ಅನಿಲ ಕಣಗಳು ಎಕ್ಸ್‌ರೇ ಕಿರಣಗಳನ್ನು ಹೀರಿಕೊಳ್ಳುವುದರಿಂದ ಮತ್ತು ಸೂಕ್ಷ್ಮ ತರಂಗಗಳ ಪ್ರಭಾವದಿಂದಾಗಿ ಉಷ್ಣಾಂಶ ಹೆಚ್ಚಾಗಿರುತ್ತದೆ. ಇಲ್ಲಿ ಆಯಾನುಗಳು ಒಡೆದು ಧನ ಮತ್ತು ಋಣ ಕಣಗಳಾಗಿ ಪ್ರಭಾವಿತಗೊಳ್ಳುತ್ತವೆ. ಅನಿಲ ಕಣಗಳು ವಿದ್ಯುದ್ವಾಹಕ ಗುಣಗಳನ್ನು ಪಡೆದುಕೊಳ್ಳುತ್ತವೆ. ಇವುಗಳನ್ನೇ “ಅಯಾನು"ಗಳೆಂದು ಕರೆಯುತ್ತಾರೆ. ಈ ಸ್ತರವು ವಿವಿಧ ರೀತಿಯ ಧ್ವನಿ ತರಂಗಗಳನ್ನು ಪ್ರತಿ ಕಲಿಸುವುದರಿಂದ ರೇಡಿಯೋ ಹಾಗೂ ಮೊಬೈಲ್ ಇತ್ಯಾದಿಗಳ ಸಂಪರ್ಕ ಸಾಧ್ಯವಾಗುತ್ತದೆ. ಇದು ರಡಾರ್ ಮತ್ತು ನಾವಿಕರ ಸಂಪರ್ಕಗಳಿಗೆ ಸಹಕಾರಿಯಾಗುತ್ತದೆ. ಇವು ಉಲ್ಕಾಶಿಲೆಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ. ಹಾಗೂ ಈ ಪದರವು ದ್ರುವಜ್ಯೋತಿಗಳನ್ನು ಸೃಷ್ಟಿಸುತ್ತದೆ. ಅವುಗಳೆಂದರೆ ಆರೋರ ಬೋರಾಲಿಸ್ ಮತ್ತು ಆರೋರಾ ಅಸ್ಸಾಲೀಸ್.
ಬಾಹ್ಯಮಂಡಲ
ಉಷ್ಣತಾಮಂಡಲದ ಆಚೆಯಿರುವ ವಲಯವನ್ನು ಬಾಹ್ಯಮಂಡಲ ಎನ್ನುವರು. ಇದು 1,000 ಕಿ.ಮೀ. ವರೆಗೆ ವಿಸ್ತರಿಸಿದೆ. ಭೂಮಿಯ ಗುರುತ್ವ ಬಲವು ಈ ವಲಯದಲ್ಲಿ ಅತ್ಯಂತ ಕಡಿಮೆ ಇರುತ್ತದೆ. ಈ ವಲಯದ ಮೇಲ್ಬಾಗದಲ್ಲಿ ಕಾಂತತ್ವವಲಯವು ಕಂಡುಬರುತ್ತದೆ.
ವಿವಿಧ ಉದ್ದೇಶಗಳನ್ನು ಪೂರೈಸುವ ನದಿ ಕಣಿವೆ ಯೋಜನೆಗಳನ್ನು “ವಿವಿಧೋದ್ದೇಶ ನದಿ ಕಣಿವೆ ಯೋಜನೆ” ಗಳೆಂದು ಕರೆಯುತ್ತಾರೆ, ಈ ಯೋಜನೆಗಳ ಪ್ರಮುಖ ಉದ್ದೇಶಗಳೆಂದರೆ: ನೀರಾವರಿ ಪೂರೈಕೆ, ಜಲವಿದ್ಯುತ್ ಶಕ್ತಿ ಉತ್ಪಾದನೆ, ಪ್ರವಾಹ ನಿಯಂತ್ರಣ, ಮಣ್ಣಿನ ಸಂರಕ್ಷಣೆ, ಆರಣ್ಯಕರಣ, ಕುಡಿಯುವ ನೀರಿನ ಪೂರೈಕೆ, ಜಲಸಂಚಾರ, ಮೀನುಗಾರಿಕೆ, ಮನರಂಜನೆ, ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿಗಳಿಗೆ ಆಹಾರ ಮತ್ತು ಜನರಿಗೆ ಉದ್ಯೋಗ ಕಲ್ಪಿಸುವುದು, ಅಮೆರಿಕ ಸಂಯುಕ್ತ ಸಂಸ್ಥಾನದ (ಯು.ಎಸ್.ಎ), ಟೆನಿಸ್ಸಿ ನದಿ ಕಣಿವೆ ಯೋಜನೆಯ (ಟಿ.ವಿ.ಎ) ಮಾದರಿಯನ್ನು ಆಧರಿಸಿಕೊಂಡು ಭಾರತದಲ್ಲಿ 1948ರಲ್ಲಿ 'ದಾಮೋದರ ನದಿ ಕಣಿವ ಸಂಸ್ಥೆ'ಯನ್ನು (ಡಿ.ವಿ.ಸಿ) ಪ್ರಾರಂಭಿಸಲಾಯಿತು. ಆನಂತರ ದೇಶದಲ್ಲಿ ಈ ರೀತಿಯ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು.
1. ದಾಮೋದರ ನದಿ ಕಣಿವೆ ಯೋಜನ
ದಾಮೋದರ ನದಿಯು ಹೂಗ್ಲಿ ನದಿಯ ಉಪನದಿ, ಇದನ್ನು ಬಂಗಾಳದ ದು:ಖಕಾರಿ" ನದಿ ಎಂದು ಕರೆಯಲಾಗಿತ್ತು. ಏಕೆಂದರೆ ಈ ಹಿಂದೆ ಇದು ಪ್ರವಾಹಗಳಿಗೆ ಕಾರಣವಾಗಿತ್ತು. ದಾಮೋದರ ನದಿಯಿಂದ ಹೊತ್ತುತಂದ ಕೆಸರಿನಿಂದ ಹೂ ನದಿ ಕಣಿವೆಯಲ್ಲಿ ಹೂಳು ಶೇಖರಣೆಯ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ಕೊಲ್ಯಾತ ಬಂದರಿಗೂ ಧಕ್ಕೆಯಾಗುತ್ತಿತ್ತು. ಪ್ರವಾಹ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರಕಾರವು, ಅಂದಿನ ಬಿಹಾರ ಮತ್ತು ಪಶ್ಚಿಮ ಬಂಗಾಳ ಸರಕಾರಗಳೊಂದಿಗೆ ಸಮಾಲೋಚನೆ ನಡೆಸಿ ದಾಮೋದರ ಕಣಿವೆಗೆ ಏಕೀಕೃತ ಅಭಿವೃದ್ಧಿಯೋಜನೆಯನ್ನು ನಿರ್ಮಿಸಿತು. ಹೀಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಟೆನಸಿ ಕಣಿವೆ ಯೋಜನೆಯ ಮಾದರಿಯಲ್ಲಿ ವಿವಿಧೋದ್ದೇಶ ನದಿ ಕಣಿವೆ ಯೋಜನೆಯೊಂದನ್ನು ರೂಪಿಸಲಾಯಿತು. ಇದು ಭಾರತದ ಪ್ರಥಮ ಮತ್ತು ಅತ್ಯಂತ ಪ್ರಮುಖವಾದ ವಿವಿಧೋದ್ದೇಶ ನದಿಕಣಿವೆ ಯೋಜನೆಯೂ ಆಗಿದೆ. ದಾಮೋದರ ನದಿ ಕಣಿವೆ ಯೋಜನೆಯನ್ನು ಕಾರ್ಯಗತಗೊಳಿಸಲು 18ನೇ ಫೆಬ್ರವರಿ 1948 ರಂದು ದಾಮೋದರ ನದಿ ಕಣಿವೆ ಸಂಸ್ಥೆ (ಡಿ.ವಿ.ಸಿ) ಯನ್ನು ಸ್ಥಾಪಿಸಲಾಯಿತು.
ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ, ಪ್ರವಾಹ ನಿಯಂತ್ರಣ, ನೀರಾವರಿ ಅಭಿವೃದ್ಧಿ, ಜಲ ವಿದ್ಯುತ್ ತಯಾರಿಕೆ, ಜಲಸಾರಿಗೆ, ಆರಣ್ಯಕರಣ, ಮಣ್ಣಿನ ಸವಕಳಿ ತಡೆ, ಒಳನಾಡು ಮೀನುಗಾರಿಕೆ ಮತ್ತು ಮನರಂಜನಾ ಸೌಲಭ್ಯಗಳನ್ನು ಕಲ್ಪಿಸುವುದು, ಪಶ್ಚಿಮ ಬಂಗಾಳ ಮತ್ತು ಅಂದಿನ ಬಿಹಾರ ರಾಜ್ಯಗಳು ಜಂಟಿಯಾಗಿ ದಾಮೋದರ ಮತ್ತು ಅದರ ಉಪ ನದಿಗಳಿಗೆ ಈ ಯೋಜನೆ ನಿರ್ಮಾಣವನ್ನು ಕೈಗೊಳ್ಳಲಾಯಿತು. ಈ ಯೋಜನೆಯು 4 ಆಣೆಕಟ್ಟುಗಳು, 1 ಜಲ ವಿದ್ಯುತ್ ತಯಾರಿಕ ಘಟಕ 3 ಥರ್ಮಲ್ ವಿದ್ಯುತ್ ಕೇಂದ್ರಗಳು ಮತ್ತು 1 ನೀರಾವರಿ ಒಡ್ಡು ನಿರ್ಮಾಣವನ್ನೊಳಗೊಂಡಿದೆ. ಅವುಗಳ ಸಂಕ್ಷಿಪ್ತ ವಿವರಣೆ ಈ ಕೆಳಕಂಡಂತಿದೆ.
1), ತಿಳಿಯ ಆಣೆಕಟ್ಟು : ಈ ಆಣೆಕಟ್ಟನ್ನು ದಾಮೋದರ ಉಪ ನದಿಯಾದ ಬರಾಕರ್ ನದಿಗೆ ನಿರ್ಮಿಸಲಾಗಿದೆ. ಇದರ ಉದ್ದ 366 ಮೀ ಮತ್ತು ಗರಿಷ್ಠ ಎತ್ತರ 30 ಮೀ. ಇದರ ನೀರು ಶೇಖರಣಾ ಸಾಮರ್ಥ್ಯ 395 ದಶಲಕ್ಷ ಘನ ಮೀಟರ್, ಇದು ಈ ಪ್ರದೇಶದ ಏಕೈಕ ಕಾಂಕ್ರೀಟ್ ಆಣೆಕಟ್ಟು ಇಲ್ಲಿ ಎರಡು ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವು ತಲಾ 200 ಕಿ.ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವುಳ್ಳವು. ಈ ಆಣೆಕಟ್ಟು 40,000 ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
ii) ಕೊನಾರ್ ಅಣೆಕಟ್ಟು: ಇದನ್ನು ದಾಮೋದರ ನದಿಯ ಮತ್ತೊಂದು ಉಪನದಿಯಾದ ಕೊನಾರ್ ನದಿಗೆ ನಿರ್ಮಿಸಲಾಗಿದೆ. ಅದು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಗೆ ಸೇರಿದ. ಈ ಅಣೆಕಟ್ಟೆಯ ಉದ್ದ 3549 ಮೀ. ಮತ್ತು ಆದರ ಗರಿಷ್ಠ ಎತ್ತರ 49 ಮೀ, ಇದು ಕಾಂಕ್ರೀಟ್‌ನ ಸೋರಿಕೆ ನಾಲೆಯೊಂದಿಗೆ ನಿರ್ಮಿಸಿದ ಮಣ್ಣಿನ ಅಣೆಕಟ್ಟೆ, ಇದರ ನೀರು ಶೇಖರಣಾ ಸಾಮರ್ಥ್ಯ 337 ದಶಲಕ್ಷ ಘನ ಮೀಟರ್, ಇದು 1.4 ಲಕ್ಷ ಹೆಕ್ಟೇರು ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ.
iii) ಮೈಥಾನ್ ಅಣೆಕಟ್ಟು: ಇದನ್ನು ದಾಮೋದರ ಮತ್ತು ಬರಾಕರ್ ನದಿಗಳ ಸಂಗಮದಿಂದ ಸ್ವಲ್ಪ ಮೇಲ್ದಾಗದಲ್ಲಿ ಹರಿಯುವ ಬರಾಕರ್ ನದಿಗೆ ಕಟ್ಟಲಾಗಿದೆ. ಇದು 144 ಮೀ. ಉದ್ದ ಮತ್ತು ನದಿಯ ತಳಪಾಯದಿಂದ ಗರಿಷ್ಠ 94 ಮೀ. ಎತ್ತರವಾಗಿದೆ. ಇದರ ಗರಿಷ್ಟ ನೀರು ಸಂಗ್ರಹ ಸಾಮರ್ಥ್ಯ 1357 ಮಿಲಿಯನ್ ಘನ ಮೀಟ, ತಲಾ 60 ಮೆಗಾವ್ಯಾಟ್ ಸಾಮರ್ಥ್ಯವುಳ್ಳ ಮೂರು ಜಲ ವಿದ್ಯುತ್ ಘಟಕಗಳನ್ನು ಇಲ್ಲಿ ನಿರ್ಮಿಸಲಾಗಿದೆ.
iv) ಪಂಚತ್ ಹಿಲ್ ಆಣೆಕಟ್ಟು: ಇದೂ ಸಹ ದಾಮೋದರ ನದಿಗೆ ಕಾಂಕ್ರೀಟ್ ಸೋರಿಕೆ ನಾಲೆಯೊಡನೆ ನಿರ್ಮಿಸಿದ ಮಣ್ಣಿನ ಅಣೆಕಟ್ಟು, ಈ ಅಣೆಕಟ್ಟಿನ ಉದ್ದ 2545 ಮೀ. ಮತ್ತು ನದಿಯ ತಳ ಮಟ್ಟದಿಂದ ಅದರ ಗರಿಷ್ಠ ಎತ್ತರ 45 ಮೀ, ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯವು 1497 ಮಿಲಿಯನ್ ಘನ ಮೀಟರ್. ಇದು 40 ಮೆಗಾವ್ಯಾಟ್ ಸಾಮರ್ಥ್ಯವುಳ್ಳ ಒಂದು ಜಲ ವಿದ್ಯುತ್ ಘಟಕವನ್ನು ಹೊಂದಿದೆ ಹಾಗೂ 2.8 ಲಕ್ಷ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು
ಒದಗಿಸುತ್ತದೆ.
೪), ದುರ್ಗಾಪರದ ಒಡ್ಡು: ರಾಣಿಗಂಜ್‌ನಿಂದ (ಪಶ್ಚಿಮ ಬಂಗಾಳ) ಸುಮಾರು 23 ಕಿ.ಮೀ. ದೂರದ ಸ್ಥಳದಲ್ಲಿ ಈ ಜಲಾಶಯವಿದೆ. ಇದನ್ನು ನೀರಾವರಿಗಾಗಿ ನೀರು ಸಂಗ್ರಹಿಸಲು ದಾಮೋದರ ನದಿಗೆ ನಿರ್ಮಿಸಲಾಗಿದೆ. ಇದರ ಉದ್ದ 692 ಮೀ. ಮತ್ತು ಎತ್ತರ 12 ಮೀ. ಕೊನಾರ್, ತಿಲೈಯಾ, ಮೈಥಾನ್ ಮತ್ತು ಪಂಚತ್ ಹಿಲ್ ಅಣೆಕಟ್ಟುಗಳಿಂದ ಬಿಡುಗಡೆಯಾದ ಹೆಚ್ಚುವರಿ ನೀರನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ನೀರನ್ನು 2495 ಕಿ.ಮೀ. ಉದ್ದದ ಕಾಲುವೆಗಳ ಮೂಲಕ ನೀರಾವರಿಗಾಗಿ ವಿತರಿಸಲಾಗುತ್ತದೆ. ಆದು ಹೆಚ್ಚಾಗಿ ಪಶ್ಚಿಮ ಬಂಗಾಳದ 4.75 ಲಕ್ಷ ಹೆಕ್ಟೇರು ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ದಾಮೋದರ ಎಡ ದಂಡೆ ಕಾಲುವೆಯು ನೌಕಾಯಾನ ಮತ್ತು ನೀರಾವರಿಗಳಿಗೆ ಪೂರಕವಾಗಿದ್ದು, ಕೊಲ್ಯಾತವನ್ನು ದಾಮೋದರ ಕಲ್ಲಿದ್ದಲು ಪ್ರದೇಶಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು 137 ಕಿ.ಮೀ. ಉದ್ರವಾಗಿದೆ.
2. ಭಾಕ್ರಾನಂಗಲ್
ಭಾಕ್ರಾ-ನಂಗಲ್ ಯೋಜನೆಯು ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳ ಒಂದು ಸಂಯುಕ್ತ ಯೋಜನೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಸಟೇಜ್ ನದಿಗೆ ಎರಡು ಅಣೆಕಟ್ಟುಗಳನ್ನು ಪ್ರತ್ಯೇಕವಾಗಿ ಭಾಕ್ರಾ ಮತ್ತು ನಂಗಲ್ ಎಂಬ ಸ್ಥಳಗಳಲ್ಲಿ ನಿರ್ಮಿಸಿರುವುದರಿಂದ ಇದನ್ನು ಭಾಕ್ರಾನಂಗಲ್ ಯೋಜನೆ ಎಂದು ಹೆಸರಿಸಲಾಗಿದೆ. ಪ್ರವಾಹ ನಿಯಂತ್ರಣ, ನೀರಾವರಿ ಸೌಲಭ್ಯ, ಜಲವಿದ್ಯುತ್ ಉತ್ಪಾದನೆ, ಅರಣೀಕರಣ ಮತ್ತು ಮಣ್ಣಿನ ಸಂರಕ್ಷಣೆಗಳು ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ.
ಹಿಮಾಚಲಪ್ರದೇಶದಲ್ಲಿ ಸಟ್ಲಜ್ ನದಿಗೆ ಭಾಕ್ರಾ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು 518 ಮೀ. ಉದ್ದ ಮತ್ತು 226 ಮೀ. ಎತ್ತರವುಳ್ಳದ್ದು, ನೇರರೀತಿಯಲ್ಲಿನ ಗುರುತ್ವ ಅಣೆಕಟ್ಟು ಇದಾಗಿದೆ. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯವು 1738 ಚ.ಕಿ.ಮೀ. ವಿಸ್ತೀರ್ಣವನ್ನು ಆವರಿಸಿದ್ದು 9867 ಮಿಲಿಯನ್ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈ ಜಲಾಶಯವನ್ನು “ಗೋವಿಂದ ಸಾಗರ” ಎಂದು ಕರೆಯಲಾಗಿದೆ. ಭಾಕ್ರಾ ಅಚ್ಚುಕಟ್ಟು ವ್ಯವಸ್ಥೆಯ ಒಟ್ಟು ವಿಸ್ತೀರ್ಣ 27.4 ಲಕ್ಷ ಹೆಕ್ಟೇರುಗಳು, ಒಟ್ಟು ಕಾಲುವೆಗಳ ಉದ್ದ 1104 ಕಿ.ಮೀ. ಮತ್ತು ಉಪನಾಲೆಗಳ ಉದ್ದ 3360 ಕಿ.ಮೀ. ಆಗಿರುತ್ತದೆ. ಈ ಕಾಲುವೆಗಳು ಹರಿಯಾಣ, ರಾಜಸ್ತಾನ ಮತ್ತು ಪಂಜಾಬ್‌ನ ಕೆಲವು 27.4 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಪೂರೈಸುತ್ತವೆ.
ಭಾಕ್ರಾ ಅಣೆಕಟ್ಟೆಯಿಂದ ಸುಮಾರು 13 ಕಿ.ಮೀ. ದೂರದ ತಗ್ಗಿನಲ್ಲಿ ಸಟ್ಲಜ್ ನದಿಗೆ ನಂಗಲ್ ಎಂಬಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು 305 ಮೀ. ಉದ್ದ ಮತ್ತು 29 ಮೀ. ಎತ್ತರವಾಗಿದೆ. ಇದು ಸಮತೋಲನ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನದಿ ನೀರನ್ನು 64 ಕಿ.ಮೀ. ದೂರ ನಿರ್ವಹಿಸುತ್ತದೆ. ನಂಗಲ್ ಕಾಲುವೆಯು ಭಾಕ್ರಾ ಮುಖ್ಯ ಕಾಲುವೆಗೆ ನೀರು ಪೂರೈಸುವುದು. ನಂಗಲ್ ಕಾಲುವೆಯು ಹರಿಯಾಣದಲ್ಲಿ 26.4 ಲಕ್ಷ ಹೆಕ್ಟೇರು ಮತ್ತು ಪಂಜಾಬಿನಲ್ಲಿ 50.2 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಪೂರೈಸುತ್ತದೆ. ಈ ಯೋಜನೆಯು ಅತ್ಯಲ್ಪ ಮಳೆ ಬೀಳುವ ಭಾರತದ ವಾಯವ್ಯ ಭಾಗಕ್ಕೆ ನೀರಾವರಿ ಪೂರೈಸುವ ಮೂಲಕ ಆ ಭಾಗದ ಕೃಷಿಯಗತಿಯಲ್ಲಿ ಪ್ರಮುಖ ಪಾತ್ರವಹಿಸಿದೆ.
ಒಟ್ಟು 1204 ಮೆ.ವ್ಯಾ. ಸಾಮರ್ಥ್ಯವುಳ್ಳ ನಾಲ್ಕು ಜಲ ವಿದ್ಯುತ್ ಕೇಂದ್ರಗಳು ಈ ಯೋಜನೆಗೆ ಸೇರಿವೆ. ಅವುಗಳಲ್ಲಿ ಎರಡು ಭಾಕ್ರಾ ಅಣೆಕಟ್ಟೆಯ ಎರಡೂ ಬದಿಗಳಲ್ಲಿ ಮತ್ತು ಇನ್ನೆರಡು ನಂಗಲ್ ಕಾಲುವೆಗೆ ಸೇರಿದ ಗಂಗುವಾಲ ಮತ್ತು ಕೋಟ್ಲ ಎಂಬಲ್ಲಿವೆ. ಪಂಜಾಬ, ಹರಿಯಾಣ, ರಾಜಸ್ತಾನ ಕೈಗಾರಿಕಾ ಪ್ರದೇಶ ಮತ್ತು ನಗರ ಪ್ರದೇಶ ಮತ್ತು ನೆರೆಯ ರಾಜ್ಯಗಳಿಗೆ ಈ ಜಲ ವಿದ್ಯುತ್ ಕೇಂದ್ರಗಳಿಂದ ವಿದ್ಯುಚ್ಚಕ್ತಿ ಪೂರೈಕೆಯಾಗುವುದು.
3 ಹಿರಾಕುಡ್ ಯೋಜನೆ
ಇದು ಮಹಾನದಿಯ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಮಹಾತ್ವಾಕಾಂಕ್ಷೆಯಿಂದ ಒಡಿಶಾದಲ್ಲಿ ನಿರ್ಮಿಸಿದ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಮೂರು ವಿವಿಧ ಸ್ಥಳಗಳಲ್ಲಿ ಮಹಾನದಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಸಾಂಬಲ್‌ಪುರದಿಂದ 9.7 ಕಿ.ಮೀ. ದೂರದಲ್ಲಿರುವ ಹಿರಾಕುಡ್ ಎಂಬಲ್ಲಿ ಮಹಾನದಿ ಮೇಲ್ಕಣಿವೆಗೆ ನಿರ್ಮಿಸಲಾದ ಅಣೆಕಟ್ಟು 4801 ಮೀ. ಉದ್ದವಾಗಿದೆ. ನದಿಯ ತಳಪಾಯದಿಂದ ಅಣೆಕಟ್ಟೆಯ ಎತ್ತರ 61 ಮೀ. ಇದು ಭಾರತದ ಅತ್ಯಂತ ಉದ್ದವಾದ ಅಣೆಕಟ್ಟು. ಇದರಿಂದ 650 ಚ.ಕಿ.ಮೀ ವಿಸ್ತೀರ್ಣದ ಜಲಾಶಯವು ರೂಪಗೊಂಡಿದೆ. ಇದು 810 ಕೋಟಿ ಘನ ಮೀಟರ್ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಮೂರು ಹರಿವು ಕಾಲುವೆಗಳುಂಟು, ಎರಡು ಎಡದಂಡೆ ಕಾಲುವೆಗಳು, ಒಂದು ಬಲದಂಡೆ ಕಾಲುವೆ. ಪ್ರಮುಖ ಕಾಲುವೆಯ ಉದ್ದ 147 ಕಿ.ಮೀ. ಈ ಕಾಲುವೆಗಳಿಂದ 2.54 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಪೂರೈಕೆಯಾಗುತ್ತದೆ. ಈ ಯೋಜನೆ 270 ಮೆ.ವ್ಯಾ. ಸ್ಥಾಪಿತ ಸಾಮರ್ಥ್ಯವುಳ್ಳ ಎರಡು ಜಲವಿದ್ಯುತ್ ಕೇಂದ್ರಗಳನ್ನು ಹೊಂದಿದೆ.
ಈ ಯೋಜನೆಗೆ ಸೇರಿರುವ ಎರಡನೇ ಮತ್ತು ಮೂರನೇ ಅಣೆಕಟ್ಟುಗಳನ್ನು ಅನುಕ್ರಮವಾಗಿ ಟಿಕಾರಪಾರ ಮತ್ತು ನಾರಜ್ ಎಂಬಲ್ಲಿ ನಿರ್ಮಿಸಲಾಗಿದೆ. ಇನ್ನೂ ಕೆಲವು ಅಣೆಕಟ್ಟುಗಳನ್ನು ಮಹಾನದಿಯ ಉಪನದಿಗಳಿಗೆ ನಿರ್ಮಿಸಲು ಯೋಜಿಸಲಾಗಿದೆ. ಅವುಗಳೆಂದರೆ, ಇಬ್, ಮಂಡ್ ಮತ್ತು ತೆಲ್. ಮಹಾನದಿ ಮುಖಜ ಭೂಮಿ ನೀರಾವರಿ ಯೋಜನೆಯು 6.84 ಹೆಕ್ಟೇರು ಭೂಮಿಗೆ ನೀರನ್ನು ಒದಗಿಸಬಲ್ಲದು. ಎರಡನೆಯ ಅಣೆಕಟ್ಟು ಟಿಕಾರಪಾರವು 1271 ಮೀ. ಉದ್ದವಾಗಿದೆ. ಇದಕ್ಕೆ ಹೊಂದಿಕೊಂಡಂತೆ 16 ವಿದ್ಯುತ್ ಜನಕ ಘಟಕಗಳಿದ್ದು ತಲಾ 125 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ನಾರಜ್ ಎಂಬಲ್ಲಿ ನಿರ್ಮಿಸಿರುವ ಮೂರನೆ ಅಣೆಕಟ್ಟೆಯು 1353 ಮೀ. ಉದ್ದವಾಗಿದೆ ಮತ್ತು ಇಲ್ಲಿಂದ 386.2 ಕಿ.ಮೀ ಉದ್ದವಾದ ಕಾಲುವೆಗಳನ್ನು ತೊಡಿದ್ದು ಅವು 5.4 ಲಕ್ಷ ಹೆಕ್ಟೇರು ಭೂಮಿಗೆ ನೀರಾವರಿ ಒದಗಿಸುವ ಸಾಮರ್ಥ್ಯ ಹೊಂದಿವೆ. ಈ ಯೋಜನೆಯ ಪ್ರಮುಖ ಉದ್ದೇಶಗಳು ಕೆಳಕಂಡಂತಿವೆ.
1. ಪ್ರವಾಹ ನಿಯಂತ್ರಣ. 3. ಜಲವಿದ್ಯುತ್ ಉತ್ಪಾದನೆ.
2. ನೀರಾವರಿ ಅಭಿವೃದ್ಧಿ,
4. ಕೃಷ್ಣಾ ಮೇಲ್ದಂಡೆ ಯೋಜನೆ
4. ನೌಕಾಯಾನ, ಮನರಂಜನೆ ಸೌಲಭ್ಯ ಮತ್ತು ಅರಣೀಕರಣ.
ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿಗೆ ನಿರ್ಮಿಸಿರುವ ಅತಿ ದೊಡ್ಡ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದು ಎರಡು ಅಣೆಕಟ್ಟುಗಳನ್ನು ಒಳಗೊಂಡಿರುತ್ತದೆ: ಆಲಮಟ್ಟಿ ಮತ್ತು ನಾರಾಯಣಪುರ, ಆಲಮಟ್ಟಿ ಅಣೆಕಟ್ಟನ್ನು ಬಸವನಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಸಮೀಪ ನಿರ್ಮಿಸಲಾಗಿದ್ದು, ನಾರಾಯಣಪುರ ಅಣೆಕಟ್ಟು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಳಿ ನಿರ್ಮಿಸಲಾಗಿದೆ. ಆಲಮಟ್ಟಿ ಅಣೆಕಟ್ಟೆಯ
ನಾರಾಯಣಪುರ ಅಣೆಕಟ್ಟಿನಿಂದ ನಿರ್ಮಿತವಾದ ಜಲಾಶಯಕ್ಕೆ 'ಬಸವಸಾಗರ' ಎಂತಲೂ ಹಾಗೂ ತುಂಗ ಭದ್ರ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯಕ್ಕೆ 'ಪಂಪಸಾಗರ' ಎಂದು ಹೆಸರಿಸಲಾಗಿದೆ. ಈ ಯೋಜನೆಯನ್ನು ವಿವಿಧ ಹಂತಗಳಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಅವುಗಳನ್ನು ಇಷ್ಟರಲ್ಲಿಯೇ ಪೂರ್ಣಗೊಳಿಸಲಾಗುತ್ತದೆ. ಈ ಯೋಜನೆ ಪೂರ್ಣಗೊಂಡ ಮೇಲೆ ಇದು ಸುಮಾರು 6.22 ಲಕ್ಷ ಹೆಕ್ಟೇರು ಭೂಮಿಗೆ
ನೀರಾವರಿ ಪೂರೈಸುತ್ತದೆ. ಇದರ ಲಾಭ ಪಡೆಯುವ ಭಾಗಗಳೆಂದರೆ ಬಾಗಲಕೋಟೆ ಜಿಲ್ಲೆಯ ಹುನಗುಂದ, ಬಾಗಲಕೋಟೆ ಮತ್ತು ಜಮಖಂಡಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ಸಿಂದಗಿ ಮತ್ತು ಇಂಡಿ, ಬೆಳಗಾವಿ ಜಿಲ್ಲೆಯ ಅಥಣಿ, ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ ಹಾಗೂ ಗುಲ್ಬರ್ಗಾ ಜಿಲ್ಲೆಯ ಜೇವರ್ಗಿ, ರಾಯಚೂರು ಜಿಲ್ಲೆಯ ದೇವದುರ್ಗ, ರಾಯಚೂರು ಮತ್ತು ಮಾನ್ವಿ ತಾಲ್ಲೂಕುಗಳು. 2008ರ ವೇಳೆಗೆ 5.90 ಲಕ್ಷ ಹೆಕ್ಟೇರುಗಳಿಗೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಲಾಗಿತ್ತು. ಆಲಮಟ್ಟಿಯಲ್ಲಿ ನಿರ್ಮಿಸುವ 6 ಜಲ ವಿದ್ಯುತ್ ಜನಕಗಳು ಈ ಯೋಜನೆಗೆ ಸೇರಿವೆ. ಅವುಗಳ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ 268 ಮೆ.ವ್ಯಾ.ಗಳಾಗಿದೆ.
ಸ೦ವಿಧಾನದ 148ನೇ ವಿಧಿಯು ಭಾರತದ ಮಹಾನಿಯಂತ್ರಕ ಮಹಾ ಲೆಕ್ಕ ಪರಿಶೋಧಕರ ಹುದ್ದೆಗೆ ಅವಕಾಶ ಮಾಡಿಕೊಡುತ್ತದೆ.ಕಾರ್ಯವು ಸ್ವತಂತ್ರವೂ ಪ್ರತ್ಯೇಕವೂ ಆಗಿರುತ್ತದೆ. ಇವರು ಭಾರತದ ಲೆಕ್ಕಪತ್ರ ಇಲಾಖೆಯ ಮುಖ್ಯ ಸ್ಥರಾಗಿರುತ್ತಾರೆ. ಸಾರ್ವಜನಿಕ ಹಣಕಾಸಿನ ರಕ್ಷಕ ಎಂದು ಕರೆಯಲ್ಪಡುತ್ತಾರೆ. ಅಂದರೆ ಕೇಂದ್ರ ಹಾಗೂ ಎಲ್ಲ ರಾಜ್ಯಗಳ
ಹಣಕಾಸು ವ್ಯವಸ್ಥೆಯನ್ನು ಇವರು ನಿಯಂತ್ರಿಸುತ್ತಾರೆ ಎಂದು ಇದರ ಅರ್ಥ, ಭಾರತದ ಸಂವಿಧಾನವನ್ನು ಎತ್ತಿಹಿಡಿಯುವುದು ಮತ್ತು ಹಣಕಾಸು ಆಡಳಿತದಲ್ಲಿ ಸಂಸತ್ತಿನ ಕಾನೂನುಗಳನ್ನು ಎತ್ತಿ ಹಿಡಿಯುವುದು ಇವರ ಕರ್ತವ್ಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್‌ರವರು ಒಮ್ಮೆ ಸಂವಿಧಾನ ರಿಚಾ ಸಭೆಯ ಚರ್ಚೆಯಲ್ಲಿ 'ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರು ಭಾರತ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಅತ್ಯಂತ ಪ್ರಮುಖ ಅಧಿಕಾರಿ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ 148ನೇ ವಿಧಿಯನ್ವಯ ಭಾರತದ ರಾಷ್ಟ್ರಾಧ್ಯಕ್ಷರು ಮಂತ್ರಿಮಂಡಲದ ಸಲಹೆಯ ಮೇರೆಗೆ ಭಾರತದ ಮಹಾನಿಯಂತ್ರಕ ಹಾಗೂ ಲೆಕ್ಕ ಪರಿಶೋಧಕರನ್ನು ನೇಮಕ ಮಾಡುತ್ತಾರೆ.
ಪ್ರಮಾಣ ವಚನ
ಭಾರತದ ಮಹಾ ನಿಯಂತ್ರಕ ಮತ್ತು ಲೆಕ್ಕಪರಿಶೋಧಕನಾಗಿ ನಿಯೋಜಿತಗೊಂಡ ವ್ಯಕ್ತಿಯು ಅಧಿಕಾರ ಸ್ವೀಕರಿಸುವ ಮುನ್ನ ರಾಷ್ಟ್ರಾಧ್ಯಕ್ಷರ ಎದುರಿನಲ್ಲಿ ಅಥವಾ ಅವರಿಂದ ನಿಯುಕ್ತಿಗೊಂಡವರ ಎದುರಿನಲ್ಲಿ ಸಂವಿಧಾನದ ಮೂರನೆಯ ಅನುಸೂಚಿಯಲ್ಲಿ ನಮೂದಿಸಿದ ಪ್ರಕಾರ ಪ್ರತಿಜ್ಞಾವಿಧಿ ಸ್ವೀಕರಿಸಬೇಕು.
ಅವರು 6 ವರ್ಷಗಳ ಕಾಲ ಅಥವಾ 65 ವರ್ಷ ವಯಸ್ಸಾಗುವವರೆಗೆ, ಯಾವುದು ಮೊದಲಾಗುತ್ತದೆಯೋ ಅಲ್ಲಿಯವರೆಗೆ ಅಧಿಕಾರದಲ್ಲಿಮುಂದುವರೆಯುತ್ತಾರೆ.
ಪದಚ್ಯುತಿ
ರಾಷ್ಟ್ರಾಧ್ಯಕ್ಷರು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಯಾವ ಆಧಾರದ ಮೇಲೆ ಮತ್ತು ಯಾವ ವಿಧಾನದ ಮೂಲಕ ಅಧಿಕಾರದಿಂದ ಪದಚ್ಯುತಿಗೊಳಿಸುತ್ತಾರೆಯೇ ಅದೇ ಆಧಾರದ ಮೇಲೆ ಮತ್ತು ಅದೇ ವಿಧಾನದ ಮೂಲಕ ಇವರನ್ನು ಪದಚ್ಯುತಿಗೊಳಿಸುತ್ತಾರೆ.
ವೇತನ ಮತ್ತು ಸೇವಾ ನಿಯಮಗಳು
ಮಹಾನಿಯಂತ್ರಕ ಮತ್ತು ಲೆಕ್ಕ ಪರಿಶೋಧಕನ ವೇತನ ಮತ್ತು ಇನ್ನಿತರ ಸೇವಾ ನಿಯಮಗಳು ಸಂಸತ್ತು ಕಾನೂನಿಗೆ ಅನುಗುಣವಾ ನಿರ್ಧರಿಸಿದಂತೆ ಇರುತ್ತವೆ. ಈ ನಿರ್ಧಾರವು ಸಂವಿಧಾನದ ಎರಡನೇ ಅನುಸೂಚಿಯಲ್ಲಿ ಇರುವ ನಿರ್ದೇಶನಕ್ಕೆ ಅನುಗುಣವಾಗಿರುತ್ತದೆ. ಇವರ ವೇತನ, ರಜೆ, ನಿವೃತ್ತಿಯ ವಯಸ್ಸು ಇತರೆ ಸೇವಾ ನಿಯಮಗಳನ್ನು ಇವರ ನೇಮಕಾತಿಯ ನಂತರ, ಇವರಿಗೆ ಅನಾನುಕೂಲವಾಗುವು ಬದಲಾಯಿಸುವಂತಿಲ್ಲ, ಇವರ ವೇತನ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ. ಮಹಾನಿಯಂತ್ರಕ ಮತ್ತು ಲೆಕ್ಕ ಮಶೋಧಕರು ಹಾಗೂ ಅವರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ವೇತನ, ಭತ್ಯೆ ನಿವೃತ್ತಿ ವೇತನವನ್ನೊಳಗೊಂಡಂತೆ ಎಲ್ಲ ಆಡಳಿತಾತ್ಮಕ ಮೇಳಗಳನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವದು.
ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರ ಹುದ್ದೆಯ ಸ್ವಾತಂತ್ರ
ಭಾರತ ಸಂವಿಧಾನದ ನಿರ್ಮಾತೃಗಳು, ಮಹಾ ನಿಯಂತ್ರಕ ಮತ್ತ ಲೆಕ್ಕ ಪರಿಶೋಧಕರ ಹುದ್ದೆ ಸ್ವತಂತ್ರವಾಗಿದ್ದಾಗ ಮಾತ್ರ ಆ ಹುದ್ದೆ ನೇಮಕವಾದ ವ್ಯಕ್ತಿನಿಪಕ್ಷವಾತವಾಗಿ ಮತ್ತು ನಿರ್ಬೀತವಾಗಿ ಕಾರ್ಯನಿರ್ವಹಿಸಬಲ್ಲನು ಎಂಬ ಸತ್ಯವನ್ನು ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಅವರು ಈ ಹುದ್ದೆಯ ಸ್ವತಂತ್ರವನ್ನು ರಕ್ಷಿಸಲು ಈ ಕೆಳಗಿನ ನಿಯಮಗಳನ್ನು ಸಂವಿಧಾನಕ್ಕೆ ಅಳವಡಿಸಿದರು.
1. ಸಂವಿಧಾನವು ಮಹಾನಿಯಂತ್ರಿಕ ಮತ್ತು ಲೆಕ್ಕವರಿಶೋಧಕರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತದೆ. ಇವರನ್ನು ಸಂವಿಧಾನದಲ್ಲಿ ನಿರ್ದಿಷ್ಟಪಡಿಸಲಾಗಿರುವ ವಿಧಾನದ ಮೂಲಕ ಮಾತ್ರ ರಾಷ್ಟ್ರಾಧ್ಯಕ್ಷರು ಪದಚ್ಯುತಿಗೊಳಿಸಬಹುದು. ಅಂದರೆ ಇವರ ಅಧಿಕಾರಾವಧಿ ತಮ್ಮನ್ನು ನೇಮಕಗೊಳಿಸಿದ ರಾಜ್ಯಾಧ್ಯಕ್ಷರ ಇಚ್ಛೆಯನ್ನು ಅವಲಂಬಿಸಿಲ್ಲ ಎಂದರ್ಥ, ರಾಷ್ಟ್ರಾಧ್ಯಕ್ಷರು ತಮಗೆ ಬೇಕೆನಿಸಿದಾಗ ಇವರನ್ನು ಪದಚ್ಯುತಿಗೊಳಿಸುವಂತಿಲ್ಲ.
2. ಇವರು ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಕೇಂದ್ರ ಅಥವಾ ರಾಜ್ಯ ಸರ್ಕಾರದ ಜತರೆ ಯಾವುದೇ ಹುದ್ದೆಯನ್ನು ಸ್ವೀಕರಿಸಲು ಅರ್ಹರಲ್ಲ,
3.ಇವರ ವೇತನ ಮತ್ತು ಇತರೆ ಸೇವಾ ನಿಯಮಗಳು ಸಂಸತ್ತಿನಿಂದ ನಿರ್ಧರಿಸಲ್ಪಡುತ್ತವೆ. ಇವರ ವೇತನ ಸುಪ್ರೀಂಕೋರ್ಟ್ ನ್ಯಾದಲ್ಲಿ
ಶರ ವೇತನಕ್ಕೆ ಸಮನಾಗಿರುತ್ತದೆ.
ನೇಮಕಾತಿಯ ನಂತರ ಇವರ ವೇತನ, ರಜ, ನಿವೃತ್ತಿಯ ವಯಸ್ಸು, ನಿವೃತ್ತಿ ವೇತನ ಮುಂತಾದ ಸೇವಾ ನಿಯಮಗಳನ್ನು ಮ ಅವನು ಕೂಲವಾಗುವಂತೆ ಬದಲಾಯಿಸುವಂತಿಲ್ಲ.
5. ಭಾರತದ ಲೆಕ್ಕಪತ್ರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ಸೇವಾ ನಿಯಮಗಳು ಮತ್ತು ೩.೧.ಜಿಯ ಆಡಳಿತಾತ್ಮಕ ರಾಜ್ಯಾಧ್ಯಕ್ಷರು ಸಿ.ಎ.ಜಿ.ಯೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ನಿರ್ಧರಿಸುತ್ತಾರೆ.
ಅಧಿಕಾರಿಗಳು
ಸಿ.ಎ.ಜಿ, ಮತ್ತು ಅವರ ಕಚೇರಿ ಸಿಬ್ಬಂದಿಯ ವೇತನ, ಭತ್ಯೆ ನಿವೃತ್ತಿ ವೇತನವನ್ನೊಳಗೊಂಡಂತೆ ಎಲ್ಲ ಆಡಳಿತಾತ್ಮಕ ವೆಚ್ಚವನ್ನು ಭಾರತ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ. ಹೀಗೆ ಈ ವೆಚ್ಚ ಸಂಸತ್ತಿನಿಂದ ಮತದಾನಕ್ಕೆ ಒಳಪಟ್ಟಿಲ್ಲ.
ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರ ಅಧಿಕಾರ ಮತ್ತು ಕಾರ್ಯಗಳು ಸಂವಿಧಾನದ 149ನೇ ವಿಧಿಯ ಪ್ರಕಾರ ಕೇಂದ್ರ ರಾಜ್ಯ ಹಾಗೂ ಇತರೆ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯ ಲೆಕ್ಕಗಳಿಗೆ ಸಂಬ
ಸಿದಂತೆ ಸಿ.ಎ.ಜಿಯವರ ಕರ್ತವ್ಯ ಮತ್ತು ಅಧಿಕಾರಗಳನ್ನು ಗೊತ್ತುಪಡಿಸುವ ಅಧಿಕಾರ ಸಂಸತ್ತಿಗೆ ಇದೆ. ಅವರಂತೆ ಸಂಸತ್ತು ಸಿ.ಎ.ಜಿ ಕರ್ತವ್ಯಗಳು ಅಧಿಕಾರಗಳು ಮತ್ತು ಸೇವಾ ನಿಯಮಗಳು) ಕಾಯ್ದೆ 1971ನ್ನು ರೂಪಿಸಿತು. ಲೆಕ್ಕಪತ್ರ ಇಡುವ ಕಾರ್ಯವನ್ನು ಲೆಕ್ಕಪರಿಶೋಧನೆಯ ಕಾರದಿ ಬೇರ್ಪಡಿಸಲು 1976ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಸಂಸತ್ತು ಮತ್ತು ಸಂವಿಧಾನದಿಂದ ನಿರ್ಧರಿಸಲ್ಪಟ್ಟಿರುವ ಈ ಕೆಳ
1. ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ ಎಲ್ಲ ವೆಚ್ಚಗಳಿಗೆ ಸಂಬಂಧಿಸಿದ ಲೆಕ್ಕವ ಪರಿಶೀಲಿಸುತ್ತಾರೆ (149ನೇ ಐಪ
ಕೇಂದ್ರ ಅಥವಾ ರಾಜ್ಯದ ಆದಾಯದಿಂದ ಧನ ಸಹಾಯ ಪಡೆದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳ ಲೆಕ್ಕವನ್ನು ಪರಿಶೀಲಿಸುತ್ತಾರೆ, ಇದ
ನಿಗಮಗಳು, ಕಂಪನಿಗಳು ಇತ್ಯಾದಿ (149ನೇ ವಿಧಿ),
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವ ನಮೂನೆಯಲ್ಲಿ ತಮ್ಮ ಲೆಕ್ಕಪತ್ರಗಳನ್ನು ಇಡಬೇಕು ಎಂಬುದರ ಬಗ್ಗೆ ರಾಷ್ಟ್ರಾಧ್ಯಕ್ಷರಿಗೆ
ಸಲಹೆ ನೀಡಬೇಕು (150ನೇ ವಿಧಿ),
ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕಳು ತಾವು ನಿಗದಿ ಪಡಿಸಿದ ನಮೂನೆಯಲ್ಲಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ -: ಕೇಂದ್ರದ ಲೆಕ್ಕಪತ್ರಗಳಿಗೆ ಸಂಬಂಧಿಸಿದ ತನ್ನ ಪರಿಶೀಲನಾ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸುತ್ತಾರೆ. ರಾಷ್ಟ್ರಾಧ್ಯಕ್ಷರು ಈ ವರದಿಯನ್ನು
ಲೆಕ್ಕಪತ್ರ ಇಡುವಂತೆ ಕೇಳಬಹುದು (150ನೇ ವಿಧಿ).
ಸಂಸತ್ತಿನ ಉಭಯ ಸದನಗಳ ಮುಂದೆ ಇಡುತ್ತಾರೆ (151(1)ನೇ ವಿಧಿ), ಸಿ.ವಿ.ಜಿಯ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಪರಿಶೀಲಿಸುತ್ತದೆ. 1. ರಾಜ್ಯಗಳ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ತಮ್ಮ ಪರಿಶೀಲನಾ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸುತ್ತಾರೆ. ರಾಜ್ಯಪಾಲರು ಅದನ್ನು ರಾಜ್ಯ ಶಾಸಕಾಂಗದ ಮುಂದೆ ಇಡುತ್ತಾರೆ (151(2)ನೇ ವಿಧಿ)
ಇವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮಾರ್ಗದರ್ಶಕ, ಸ್ನೇಹಿತ ಮತ್ತು ತತ್ವಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಅಂದರೆ
ಇವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯದಲ್ಲಿ ನೆರವಾಗುತ್ತಾರೆ ಎಂದರ್ಥ. 1916ರವರೆಗೆ ಭಾರತದಲ್ಲಿ ಲೆಕ್ಕಪತ್ರ ಇಡುವ ಮತ್ತು ಲೆಕ್ಕಪರಿಶೋಧನೆಯ ಕಾರ್ಯಗಳೆರಡೂ ಸಿಎಜಿ ಕೈಯಲ್ಲಿ ಕೇಂದ್ರೀಕೃತವಾಗಿದ್ದವು.
ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕನೇ ಈ ಎರಡೂ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದನು. ಆದರೆ 1976ರಲ್ಲಿ ಕೇಂದ್ರ ಸರ್ಕಾರವು ಲೆಕ್ಕಪತ್ರವನ್ನು ಲೆಕ್ಕಪರಿಶೋಧನೆಯಿಂದ ಪ್ರತ್ಯೇಕಿಸಿತು. ಇದರಿಂದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕನು ಕೇಂದ್ರ ಸರ್ಕಾರದ ಲೆಕ್ಕಪತ್ರದ ಸಂಕಲನದ ಜವಾಬ್ದಾರಿಯಿಂದ ವಿಮುಕ್ತನಾದನು. ಈಗ ಲೆಕ್ಕಪರಿಶೋಧನೆಯ ಜವಾಬ್ದಾರಿಯಷ್ಟೇ ಅವನ ಪಾಲಿಗೆ ಬಂದಿದೆ. ಆದರೆ ರಾಜ್ಯಗಳಲ್ಲಿ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಕಾರ್ಯಗಳನ್ನು ಪರಸ್ಪರ ಪ್ರತ್ಯೇಕಿಸಿಲ್ಲವಾದ್ದರಿಂದ ಮಹಾನಿಯಂತ್ರಕನೇ ಲೆಕ್ಕಪತ್ರದ ಸಂಕಲನ ಮತ್ತು ಲೆಕ್ಕಪರಿಶೋಧನೆ ಈ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾನೆ.
ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರ ಪಾತ್ರ
ಭಾರತ ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಹಣಕಾಸು ಆಡಳಿತ ಕ್ಷೇತ್ರದಲ್ಲಿ ಸಂಸತ್ತಿನ ಕಾನೂನುಗಳನ್ನು ಎತ್ತಿ ಹಿಡಿಯುವ ನಿರ್ಣಾಯಕ ಪಾತ್ರವನ್ನು ಸಿ.ಎ.ಜಿ. ನಿರ್ವಹಿಸುತ್ತಾನೆ. ಹಣಕಾಸು ಕ್ಷೇತ್ರದಲ್ಲಿ ಕಾರ್ಯಾಂಗ (ಮಂತ್ರಿಮಂಡಲವು ಸಂಸತ್ತಿಗೆ ಹೊಣೆಯಾಗಿರುತ್ತದೆ. ಕಾರ್ಯಾಂಗದ ಈ ರೀತಿಯ ಹೊಣೆಗಾರಿಕೆಯನ್ನು ಸಿ.ಎ.ಜಿಯ ಲೆಕ್ಕಪತ್ರ ಪರಿಶೀಲನಾ ವರದಿಯ ಮೂಲಕ ಸಾಕಾರಗೊಳಿಸಲಾಗುತ್ತದೆ. ಸಿಎಜಿ, ಸಂಸತ್ತಿನ ನಿಯೋಗಿಯಾಗಿದ್ದು, ಕಾರ್ಯಾಂಗದಿಂದ ಮಾಡಲಾದ ವೆಚ್ಚಕ್ಕೆ ಸಂಬಂಧಿಸಿದ ಲೆಕ್ಕವನ್ನು ಸಂಸತ್ತಿನ ಪರವಾಗಿ ಪರಿಶೀಲಿಸುತ್ತಾನೆ. ಆದ್ದರಿಂದ ಸಿಎಜಿ ಸಂಸತ್ತಿಗೆ ಮಾತ್ರ ಹೊಣೆಯಾಗಿದ್ದಾರೆ. ಇವರು ಕೇಂದ್ರ ಅಥವಾ ರಾಜ್ಯಗಳ ಆದಾಯದಿಂದ ಭಾರತದ ಹೊರಗಡೆ ಅಥವಾ ಒಳಗಡೆ ಮಾಡಿದ ಎಲ್ಲ ವೆಚ್ಚಗಳ ಪರಿಶೀಲನೆ ಮಾಡುತ್ತಾರೆ, ಲೆಕ್ಕದಲ್ಲಿ ತೋರಿಸಲಾದ ವಿನಿಯೋಗದ ಹಣ ಕಾನೂನುಬದ್ಧವಾಗಿ ನೀಡಲ್ಪಟ್ಟದ್ದೋ ಅಥವಾ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲದೆ ಯಾವ ಉದ್ದೇಶಕ್ಕಾಗಿ ಹಣವನ್ನು ನೀಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಹಣ ವೆಚ್ಚವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇವರು ಹಣದ ಅಪವ್ಯಯ ಅಥವಾ ದುರುಪಯೋಗ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುತ್ತಾರೆ. ನಂತರ ಈ ವಿಷಯಗಳಿಗೆ ಸಂಬಂಧಿಸಿದ ವರದಿಯನ್ನು ಶಾಸಕಾಂಗದ ಮುಂದೆ ಮಂಡಿಸಲಾಗುತ್ತದೆ. ಲೆಕ್ಕಪರಿಶೋಧಕನು ಸಾರ್ವಜನಿಕ ವೆಚ್ಚದಲ್ಲಿ ನಿಷ್ಠೆ, ಬುದ್ಧಿವಂತಿಕೆ ಹಾಗೂ ಮಿತವ್ಯಯವನ್ನು ಕುರಿತು ವರದಿ ಮಾಡುತ್ತಾನೆ.
ಸ್ನೇಹಿತರೆ ಈ ಕೆಳಕಾಣಿಸಿದ ಲಿಂಕಗಳ
ಮೂಲಕ ವಿವಿಧ ವಿಷಯಗಳ ಮೇಲೆ ಪಠ್ಯವನ್ನು ನೀಡಲಾಗಿದೆ ಅದರ ಜೊತೆಗೆ ಅದಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಕ್ವಿಜ್ ಮೂಲಕ ನೀಡಲಾಗಿದೆ ಕೆಳಕಾಣಿಸಿದ
Link ಗಳನ್ನು ಓಪನ್ ಮಾಡಿ ಆನ್ಲೈನ್ ಕ್ವಿಜ್ ಸೆಂಡ್ ಮಾಡಿ
ರಾಷ್ಟ್ರಕೂಟರು
https://www.mahitiloka.co.in/2021/05/blog-post_48.html
ಬಹುಮನಿ ಸುಲ್ತಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
https://www.mahitiloka.co.in/2021/05/blog-post_91.html
📍ಕುಶಾನರ ಬಗ್ಗೆ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೆಗಳು
📌https://www.mahitiloka.co.in/2021/05/blog-post_20.html
➡ ಕೃಷಿ ವಿಧಗಳು
➡ ವಾಯುಮಂಡಲದ ರಚನೆ
➡ ಭಾರತದ ವಿವಿಧೋದ್ದೇಶ ನದಿ ನೀರಾವರಿ ಯೋಜನೆಗಳು
ಹಾಗೂ ಶಿಕ್ಷಣದ ಮೇಲೆ ಆಸಕ್ತಿ ಇರುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ
🙏🙏🙏🙏🙏🙏🙏🙏🙏🙏🙏🙏🙏
OUR SOCIAL LINKS ;-
YOU TUBE :-https://youtube.com/c/SGKKANNADA
TELEGRAM :-https://telegram.me/s/spardhakiran
INSTAGRAM :-https://instagram.com/shoyal2000?utm_medium=copy_link
FACE BOOK :-https://www.facebook.com/SGK-Kannada-112808230846685/
SHARECHAT :-https://b.sharechat.com/s2xoaNCEW7
https://b.sharechat.com/KaG9DabEGcb
ಜಗತ್ತಿನ ಶ್ರೀಮಂತ ಉದ್ಯಮಿ ಅಮೆರಿಕಾದ ಎಲಾನ್ ಮಸ್ತ್ ಅವರ ಒಡೆತನದ ಬಾಹ್ಯಾಕಾಶ ಸಂಸ್ಥೆಯಾದ ಸ್ಪೇಸ್‌ಎಕ್ಸ್ ಸಂಸ್ಥೆಯು ಎರಡು ಹಂತದ ಫಾಲ್ಡನ್-9 ಉಡಾವಣಾ ವಾಹಕದ ಮೂಲಕ ಕಡಿಮೆ ಖರ್ಚಿನ ಹೊಸ ರೈಡ್‌ಶೇರ್ ಮಿಷನ್ ಅಡಿಯಲ್ಲಿ 143 ಉಪಗ್ರಹಗಳನ್ನು ಏಕ ಕಾಲಕ್ಕೆ ಕಕ್ಷೆಗೆ ಸೇರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಈ ಯೋಜನೆಯು Transporter-1 ಎಂಬ
ಹೆಸರಿನ ಮಿಷನ್‌ನಡಿ ಕೈಗೊಳ್ಳಲಾಯಿತು.
2021ರ ಜನವರಿ 25 ರಂದು ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯು SpaceX's Smallsat Rideshare Program ನ ಭಾಗವಾಗಿ ಫಾಲ್ಕಾನ್-9 (Falcon-9) ಉಡಾವಣಾ ವಾಹಕದಿಂದ ಫ್ಲೋರಿಡಾದ ಕೆಪ್ ಕೆನವೆರಲ್ ಉಡಾವಣಾ ಕೇಂದ್ರ (Cape Canaveral Space Force Station ದಿಂದ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಈ ಮೂಲಕ ಒಂದೇ ನೌಕೆಯಲ್ಲಿ ಅತಿಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ ಕೀರ್ತಿ ಸ್ಪೇಸ್ ಎಕ್ಸ್ ಸಂಸ್ಥೆಗೆ ಸಲ್ಲುತ್ತದೆ. 2017ರ ಫೆಬ್ರವರಿ 15 ರಂದು ಭಾರತದ ಇಸ್ರೋ ಸಂಸ್ಥೆಯು ಪಿಎಸ್‌ಎಲ್‌ವಿ-ಸಿ37 ಉಡಾವಣಾ ವಾಹಕದ ಮೂಲಕ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವ ದಾಖಲೆ ನಿರ್ಮಿಸಿತ್ತು.
ಸ್ಪೇಸ್ಎಕ್ಸ್ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆಗೊಂಡ 143 ಉಪಗ್ರಹಗಳು 2020ರ ಜನವರಿಯಲ್ಲಿ ಫಾಲ್ಕಾನ್- ಉಡಾವಣಾ ವಾಹಕದಿಂದ ಉಡಾವಣೆಗೊಂಡ 143 ಉಪಗ್ರಹಗಳಲ್ಲಿ ಕೆಲವು ವಾಣಿಜ್ಯ ಮತ್ತು ಸರ್ಕಾರದ ಕ್ಯೂಬ್ ಸ್ಯಾಟ್ ಮತ್ತು ಮೈಕ್ರೋಸ್ಯಾಟ್‌ಗಳಿದ್ದವು. 200 ಕೆ.ಜಿ. ಉಪಗ್ರಹ ಹೊತ್ತೊಯ್ಯಲು 1 ಮಿಲಿಯನ್ ಡಾಲರ್ ವೆಚ್ಚ ತಗುಲಿದೆ.
ಸ್ಪೇಸ್ಎಕ್ಸ್ ಸಂಸ್ಥೆಯ ಮತ್ತೊಂದು ದಾಖಲೆ
ಅಮೆರಿಕಾ ಮೂಲದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ 'ಸ್ಪೇಸ್‌ಎಕ್ಸ್' ಜಾಗತಿಕ ಮಟ್ಟದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಚರಿತೆಯೊಂದನ್ನು ನಿರ್ಮಿಸಿತು. 2020ರ ಮೇ 30 ರಂದು ಭಾರತೀಯ ಕಾಲಮಾನ ರಾತ್ರಿ, 12.53ಕ್ಕೆ ಸ್ಪೇಸ್‌ಎಕ್ಸ್ ಸಂಸ್ಥೆಯು ನಿರ್ಮಿಸಿದ ಫಾಲ್ಕಾನ್-9 ಎಂಬ ಉಡಾವಣಾ ವಾಹಕದಲ್ಲಿ ಅಮೆರಿಕಾದ ನಾಸಾದ ಇಬ್ಬರು ಗಗನಯಾತ್ರಿಗಳಾದ ಡೌವ್ ಹರ್ಲಿ & ಜಾಬ್ ಬೆಹೈಕನ್ ಅವರನ್ನು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶದತ್ತ ಯಶಸ್ವಿಯಾಗಿ ಅಮೆರಿಕಾದ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‌ನಿಂದ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಗೆ ಮಾತ್ರವೇ ಸಾಧ್ಯವಾಗುತ್ತಿದ್ದ ಉಡಾವಣಾ ವಾಹಕ ನಿರ್ವಹಣಾ ಮತ್ತು ಯಶಸ್ವಿ ಉಡಾವಣೆಯನ್ನು ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ಸಾಧಿಸಿ ತೋರಿಸಿದೆ. ಈ ಮೂಲಕ ಖಾಸಗಿ ಸಂಸ್ಥೆ ನಿರ್ಮಿತ ರಾಕೆಟ್ ಮೊದಲ ಬಾರಿಗೆ ಇಬ್ಬರು ಗಗನಯಾತ್ರಿಗಳನ್ನು ಅಂತರಿಕ್ಷಯಾನ ಕೈಗೊಳ್ಳುವ ಮೂಲಕ ಅಂತರಿಕ್ಷಯಾನವನ್ನು ಯಶಸ್ವಿಯಾಗಿ ಕೈಗೊಂಡಿತು.
ಸ್ಪೇಸ್ಎಕ್ಸ್ ಡೆಮೋ-2: ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಅಧ್ಯಯನಕ್ಕಾಗಿ ಸ್ಪೇಸ್-ಎಕ್ಸ್ ಗಗನಯಾತ್ರಿಗಳನ್ನು ಕಳುಹಿಸಿದ ಯೋಜನೆಯನ್ನು ಸ್ಪೇಸ್-ಎಕ್ಸ್ ಡೆಮೋ - 2 ಎನ್ನುವರು. ಈ ಯೋಜನೆಗೆ ಸ್ಪೇಸ್-ಎಕ್ಸ್ ಜೊತೆಗೆ ನಾಸಾ ಕೂಡ ಸಹಕರಿಸಿದೆ.
ಭೂಮಿಗೆ ಮರಆದ ಜಗತ್ತಿನ ಮೊದಲ ಗಗನ ನೌಕೆ ಸ್ಟೇಸ್-ಎಕ್ಸ್
12020ರ ಆಗಸ್ಟ್ 2 ರಂದು ನಾಸಾಕ್ಕೆ ಸೇರಿದ ಇಬ್ಬರು ಗಗನಯಾನಿಗಳನ್ನು ಹೊತ್ತ ಖಾಸಗಿ ಎಂಡವರ್ ಮೆಕ್ಸಿಕನ್ ಕೊಲ್ಲಿ ಸಮುದ್ರಕ್ಕೆ ಬಂದಿಳಿದಿತ್ತು. ಬಾಹ್ಯಾಕಾಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಬರುವ ಪ್ರವಾಸೋದ್ಯಮ ಆರಂಭಿಸಲು ಪ್ರಯೋಗಾರ್ಥವಾಗಿ ಈ ಗಗನ ನೌಕೆಯನ್ನು ಇಬ್ಬರು ಗಗನಯಾನಿಗಳೊಂದಿಗೆ ಕಳುಹಿಸಲಾಗಿತ್ತು. ಈ ಖಾಸಗಿ ಗಗನ ನೌಕೆಯು ಯಶಸ್ವಿಯಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ತಲುಪಿ ಮರಳಿ ಯಶಸ್ವಿಯಾಗಿ ಬಂದಿರುವುದರಿಂದ ಬಾಹ್ಯಾಕಾಶಕ್ಕೆ ಜನರನ್ನು ಕರೆದುಕೊಂಡು ಹೋಗಿ ಬರುವ ಅಮೆರಿಕಾದ ಉದ್ಯಮಿ ಎಲಾನ್‌ಮಸ್ ರವರ ಸ್ಪೇಸ್-ಎಕ್ಸ್ಕಂಪನಿಯ ಕನಸು ನನಸಾಗಿದೆ.
ಇಸ್ರೋ ವತಿಯಿಂದ 104 ಉಪಗ್ರಹಗಳ ಉಡಾವಣೆ ಇಸ್ರೋ ಸಂಸ್ಥೆಯು 2017ರ ಫೆಬ್ರವರಿ 15 ರಂದು
ಪಿಎಸ್ಎಲ್ ವಿ-ಸಿ37 ಉಡಾವಣಾ ವಾಹಕದ ಮೂಲಕ 104 ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಈ 104 ಉಪಗ್ರಹಗಳಲ್ಲಿ 101 ಉಪಗ್ರಹಗಳು ವಿದೇಶಿ ಉಪಗ್ರಹಗಳಾಗಿದ್ದವು ಹಾಗೂ ಭಾರತದ ಸ್ವದೇಶಿ 3 ಉಪಗ್ರಹಗಳಾದ ಕಾರ್ಟೋಸ್ಯಾಟ್-2ಡಿ, ಐಎನ್‌ಎಸ್-1ಎ ಮತ್ತು ಐಎನ್‌ಎಸ್-1ಬಿ ಉಡಾವಣೆ ಮಾಡಲಾಗಿತ್ತು. ಈ ದಾಖಲೆಯನ್ನು ಸ್ಪೇಸ್‌ಎಕ್ಸ್ ಸಂಸ್ಥೆಯು 2021ರ ಜನವರಿಯಲ್ಲಿ ಮುರಿದಿದೆ. ಇಸ್ರೋ ಸಂಸ್ಥೆಗಿಂತ ಮೊದಲು ರಷ್ಯಾ ದೇಶವು 37 ಉಪಗ್ರಹಗಳನ್ನು ಒಂದೇ ಉಡಾವಣಾ ವಾಹಕದಲ್ಲಿ ಉಡಾವಣೆ ಮಾಡಿ ದಾಖಲೆ ನಿರ್ಮಿಸಿತ್ತು.
ಇಸ್ರೋ ಸಂಸ್ಥೆಯು 1969ರ ಆಗಸ್ಟ್ 15 ರಂದು ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಪಿತಾಮಹ ವಿಕ್ರಂ ಸಾರಾಭಾಯಿ ಅವರು ಇಸ್ರೋನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇಸ್ರೋದವರು ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ಇತ್ತೀಚೆಗೆ ಉಪಗ್ರಹ ಉಡಾವಣಾ ಕೇಂದ್ರವನ್ನು ಆರಂಭಿಸುತ್ತಿದ್ದಾರೆ. ಕೇರಳದ ತಿರುವನಂತಪುರಂನ ತುಂಬಾದಲ್ಲಿ ರಾಕೆಟ್ ಪರೀಕ್ಷಾ ಕೇಂದ್ರವಿದೆ ಹಾಗೂ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರವಿದೆ.
ಸ್ಪೇಸ್-ಎಕ್ಸ್ (SpaceX) ಬಾಹ್ಯಾಕಾಶ ಸಂಸ್ಥೆ
ವಿಸ್ತೃತ ರೂಪ: Space Exploration Technologies Corp.
* ಕೇಂದ್ರ ಕಚೇರಿ : ಕ್ಯಾಲಿಫೋರ್ನಿಯಾದ ಹವತೋರ್ನೆ
ಸಂಸ್ಥಾಪಕ: ಎಲಾನ್ ಮಸ್ಕ್
* ಸ್ಥಾಪನೆ ವರ್ಷ: 2002
ಸ್ಪೇಸ್-ಎಕ್ಸ್ ಅಭಿವೃದ್ಧಿಪಡಿಸಿದ ಮೊದಲ ರಾಕೆಟ್: 2008ರಲ್ಲಿ ಫಾಲ್ಯಾನ್-I ಎಂಬುದು ಉಡಾವಣೆಗೊಂಡ ಮೊದಲ ರಾಕೆಟ್, ಫ್ಲೋರಿಡಾದ ಕೆಪ್ ಕನವೆರಲ್ ಉಡಾವಣಾ ಕೇಂದ್ರ
ಅಮೆರಿಕಾದಬಾಹ್ಯಾಕಾಶ ಪಡೆಯ 45ನೇ ಬಾಹ್ಯಾಕಾಶ ಘಟಕವಾಗಿದೆ.
ನಾಸಾಸಂಸ್ಥೆಯು ಅಮೆರಿಕಾದ ವಾಷಿಂಗ್ಟನ್ ಡಿಸಿ ಯಲ್ಲಿದೆ.
ಜಗತ್ತಿನ ಶ್ರೀಮಂತ ಉದ್ಯಮಿ' ಎಲಾನ್ ಮಸ್ (ELON MUSK) ಅವರ ಒಡೆತನದ ಅಮೆರಿಕಾ ಮೂಲದ ಎಲೆಕ್ನಿಕ್ ಕಾರು ಉತ್ಪಾದನಾ ಕಂಪನಿ (American Electric Vehicle Maker) ಯಾದ ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. ಈ ಮೂಲಕ ಬೆಂಗಳೂರು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಂತಾಗಿದೆ. ಟೆಸ್ಲಾ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಾರ್ಪೊರೇಟ್ ಕಚೇರಿ ತೆರೆಯಲಿದ್ದು, 1 ಲಕ್ಷ ರೂ. ಆರಂಭಿಕ ಶುಲ್ಕದೊಂದಿಗೆ Tesla India Motors and Energy PVT LTD ಹೆಸರಿನಲ್ಲಿ ಕಂಪನಿಯನ್ನು ಬೆಂಗಳೂರಿನಲ್ಲಿ ನೊಂದಾಯಿಸಲಾಗಿದೆ. ಬೆಂಗಳೂರಿನ ಲ್ಯಾವೆಲೆ ರಸ್ತೆಯಲ್ಲಿ ಕಾರ್ಪೊರೇಟ್ ಕಚೇರಿ ಹೊಂದಿದೆ. ಈ ಸಂಬಂಧ ಮೂವರು ನಿರ್ದೇಶಕರನ್ನು ನಿಯುಕ್ತಿಗೊಳಿಸಲಾಗಿದೆ. ವೈಭವ್ ತನೇಜಾ (Vaibhav Taneja), ವೆಂಕಟರಂಗಂ ಶ್ರೀರಾಮ್ (Venkatrangam Sreeram) ಹಾಗೂ ಡೇವಿಡ್ ಜಾನ್ ಫಿನ್‌ಸ್ಟಿನ್ (David Jon Feinstein) ಅವರು ಕಂಪನಿಯ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಇವರು ಭಾರತದ ಟೆಸ್ಲಾ ಇವಿ ಮಾರುಕಟ್ಟೆಯನ್ನು ನೋಡಿಕೊಳ್ಳಲಿದ್ದಾರೆ.
ಎಲೆಕ್ಟ್ರಿಕ ಸ್ಟಾರ್ಟ್‌ಅಪ್ ತಾಣ - ಬೆಂಗಳೂರು
ಬೆಂಗಳೂರಿನಲ್ಲಿ ಸುಮಾರು 45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ನವೋದ್ಯಮ(StartUp)ಗಳಿವೆ. ಮಹೇಂದ್ರ ಎಲೆಕ್ನಿಕ್, ಆಥರ್ ಎನರ್ಜಿ, ಆಲ್ಫಾ ವೈಲೆಟ್ ಆಟೋಮೋಟಿವ್‌ನಂತಹ ಹಲವಾರು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಹೆಚ್ಚಿನ ಉದ್ಯಮಗಳು ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲು ಗಮನ ಹರಿಸಿವೆ.
ಬೆಂಗಳೂರು ನಗರವು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (R & D)ಗಳಿಗೆ ಜಾಗತಿಕ ಮಟ್ಟದಲ್ಲಿ ನೆಲೆಯಾಗಿದೆ. ಐಟಿ & ಇಂಜಿನಿಯರಿಂಗ್ ಪ್ರತಿಭೆಗಳು ಅಪಾರ ಪ್ರಮಾಣದಲ್ಲಿದ್ದಾರೆ. ಜರ್ಮನಿ ಮೂಲದ ಮರ್ಸಿಡೀಸ್ ಬೆಂನ್ಸ್, ಚೀನಾದ ಗ್ರೇಟ್ ವಾಲ್ ಮೋಟಾರ್, ಅಮೆರಿಕಾದ ಜನರಲ್ ಮೋಟಾರ್, ಕಾಂಟಿನೆಂಟಲ್ ಮಹೇಂದ್ರ ಅಂಡ್ ಮಹೇಂದ್ರ ಭಾಷ್, ಡೆಲ್ಲಿ, ಓಲ್ವಾ ಮುಂತಾದ ಕಂಪನಿಗಳು ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿವೆ.
ಟೆಸ್ಲಾ ಕಂಪನಿಯು ಬೆಂಗಳೂರನ್ನು ಆಯ್ಕೆ ಮಾಡಲು ಕಾರಣ. ಬೆಂಗಳೂರಿನಲ್ಲಿ ಬ್ಯಾಟರಿ ಚಾಲಿತವಾದ ವಾಹನ ತಯಾರಿಸುವ 10ಕ್ಕೂ ಹೆಚ್ಚು ಕಂಪನಿಗಳಿವೆ. ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಹುಬ್ಬಳ್ಳಿ-ಧಾರವಾಡದಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ತಯಾರಿಕೆ ಘಟಕಗಳನ್ನು ಒಳಗೊಂಡಂತೆ ಇವಿ ಹಬ್ ಸ್ಥಾಪನೆಗೆ ಕರ್ನಾಟಕವು ಹೆಚ್ಚು ಉತ್ತೇಜನ ನೀಡುತ್ತಿದೆ. ಸ್ಟಾಂಪ್‌ಡ್ಯೂಟಿಗೆ ಪ್ರತಿಶತ 100ರ ವಿನಾಯಿತಿ ನೀಡಿದ್ದು, ಭೂ ಪರಿವರ್ತನೆ ಶುಲ್ಕ ಮರುಪಾವತಿ, ಹೂಡಿಕೆ ಪ್ರಚಾರ ಸಬ್ಸಿಡಿ ಮುಂತಾದ ಸರ್ಕಾರದ ಪ್ರೋತ್ಸಾಹ ಕ್ರಮಗಳಿಂದ ಕಂಪನಿಗಳು ರಾಜ್ಯಕ್ಕೆ ಬರುತ್ತಿವೆ.
ಎಲೆಕ್ಟ್ರಿಕ್ ವಾಹನ ನೀತಿ ರಚಿಸಿದ ದೇಶದ ಮೊದಲ ರಾಜ್ಯ - ಕರ್ನಾಟಕ ಭಾರತದಲ್ಲಿ ಮೊದಲ ಬಾರಿಗೆ 2017 ರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಪ್ರತ್ಯೇಕ ನೀತಿಯನ್ನು ಕರ್ನಾಟಕ ರಾಜ್ಯ ರಚಿಸಿತು. ಭಾರತದ ಎಲೆಕ್ಟ್ರಿಕ್ ವಾಹನಗಳ ತಾಣವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿತ್ತು.
60 ಲಕ್ಷದ ಕಾರುಗಳು - ಭಾರತಕ್ಕೆ ಆಮದು
ಟೆಸ್ಲಾ ಕಂಪನಿಯ ಆರಂಭದಲ್ಲಿ ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ. ಮಾಡೆಲ್ 3 ಕಾರುಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಇವು ಸಂಪೂರ್ಣ ತಯಾರಾದ ಸ್ಥಿತಿಯಲ್ಲಿ ಭಾರತಕ್ಕೆ ಬರಲಿವೆ. ಬೇಡಿಕೆ ನೋಡಿ ಕೊಂಡು ಭಾರತದಲ್ಲೇ ಕಾರುಗಳನ್ನು ಉತ್ಪಾದನೆ ಮಾಡುವ ಸಾಧ್ಯತೆ ಇದೆ. ಮಾಡೆಲ್-3 ಎಸ್ಆರ್ ಹೆಸರಿನ ಟೆಸ್ಲಾ ಹೆಸರಿನ ಕಾರುಗಳು 55 ಲಕ್ಷ ರೂ.ನಿಂದ 60 ಲಕ್ಷ ರೂ. ಬೆಲೆಗೆ ಲಭ್ಯವಾಗಬಹುದು. ಆರಂಭದಲ್ಲಿ 2,500 ಕಾರುಗಳು ಭಾರತಕ್ಕೆ ಆಮದಾಗಲಿವೆ. ಹೀಗಾಗಿ ಬೆಲೆಯು ಗಮನಾರ್ಹವಾಗಿ ಕಡಿತವಾಗಬಹುದು. 2021ರ ಮಧ್ಯದಲ್ಲಿ ದೇಶದಲ್ಲಿ ಟೆಸ್ಲಾ ಕಾರುಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.
ಜಗತ್ತಿನಾದ್ಯಂತ ಎಲೆಕ್ನಿಕ್ ಕಾರುಗಳ ಉತ್ಪಾದನೆ, ಗುಣಮಟ್ಟ ಮತ್ತು ಸಂಶೋಧನೆಗೆ ಟೆಸ್ಲಾ ಕಂಪನಿಯು ಹೆಸರುವಾಸಿಯಾಗಿದೆ. ಉದ್ಯಮಿ ಎಲಾನ್ ಮಸ್ ನೇತೃತ್ವದಲ್ಲಿ ಟೆಸ್ಲಾ ಕಂಪನಿಯು - 2003 ರಲ್ಲಿ ಸ್ಥಾಪನೆಯಾಗಿದ್ದು, ಸುಮಾರು 48 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಕಾರುಗಳು Mercedes Benz ಗೆ ಪ್ರತಿಸ್ಪರ್ಧಿಯಾಗಿವೆ. ಟೆಸ್ಲಾ ಕಾರುಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ. ದೂರ ಸಾಗಬಲ್ಲವು. ಎಲಾನ್ ಮಸ್ಕ್ ಅವರು 1971ರ ಜೂನ್ 28 ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಅಲ್ಲಿನ ಕಡ್ಡಾಯ ಮಿಲಿಟರಿ ಸೇವೆ ನಿಯಮದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೆನಡಾಕ್ಕೆ ವಲಸೆ ಹೋದರು. ಕೆನಡಾಕ್ಕೆ ವಲಸೆ ಹೋದರೆ ಅಮೆರಿಕಾದ ವೀಸಾ ಪಡೆಯಲು
ಸುಲಭವಾಗುವುದು ಎಂಬುದು ಕಾರಣವಾಗಿತ್ತು.
ಕಂಪ್ಯೂಟರ್ ಗೇಮಿಂಗ್ ಸ್ಟಾಫ್ಟ್‌ವೇರ್ Blaster ಅಭಿವೃದ್ಧಿ
ಎಲಾನ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಕಂಪ್ಯೂಟರ್ ತಂತ್ರಾಂಶವನ್ನು ರೂಪಿಸುವುದನ್ನು ಕಲಿತು, ತಮ್ಮ 12ನೇ ವಯಸ್ಸಿನಲ್ಲೇ ಬ್ಲಾಸ್ಟಾರ್ ಎಂಬ ಕಂಪ್ಯೂಟರ್ ಗೇಮಿಂಗ್ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಿದರು.
1995 ರಲ್ಲಿ ಸೋದರ ಕಿಂಬಲ್ ಮಸ್ತ್ ಅವರೊಂದಿಗೆ ಸೇರಿ ಝಿಪ್-2 ಕಾರ್ಪೊರೇಷನ್ ಎಂಬ ಕಂಪನಿ ಆರಂಭಿಸಿದರು. 1999 ರಲ್ಲಿ ಕಾಂಪ್ಯಾಕ್ಟ್ ಕಂಪ್ಯೂಟರ್ ಕಾರ್ಪೊರೇಷನ್ ಸಂಸ್ಥೆಯ ಅಂಗಸಂಸ್ಥೆಯೊಂದು ಝಿಪ್-2 ಕಂಪನಿಯನ್ನು ಸುಮಾರು 2,200 ಕೋಟಿ ರೂ.ಗಳಿಗೆ ಖರೀದಿಸಿತು. ಅದೇ ವರ್ಷ ಇಬ್ಬರು ಸೋದರರು ಸೇರಿ X.COM ಎಂಬ ಹಣಕಾಸು ಸೇವಾ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದು Paypal ಎಂದು ಹೆಸರು ಬದಲಿಸಿಕೊಂಡಿತು. 2002 ರಲ್ಲಿ ಆ ಕಂಪನಿಯನ್ನು e-Bay ಕಂಪನಿಯು ಖರೀದಿಸಿತು.
SpaceX: 2002 ರಲ್ಲಿ ತಮ್ಮ 3ನೇ ಕಂಪನಿ ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವ Space Exploration Technologies Corp. (SpaceX) ಆರಂಭಿಸಿದರು. 2020ರ ಮೇ 30 ರಂದು ಗಗನಯಾತ್ರಿಗಳಾದ ಡ ಹರ್ಲಿ ಮತ್ತು ಬಾಬ್ ಬೆಕ್ನಿಕನ್ ಅವರನ್ನು ಕ್ರೂಡ್ರಾಗನ್ ಸ್ಪೇಸ್ ಕ್ರಾಫ್ಟ್ ಮೂಲಕ ಐಎಸ್‌ಎಸ್‌ಗೆ ಈ ಸಂಸ್ಥೆಯು ಕಳುಹಿಸಿತ್ತು. 2021ರ ಜನವರಿಯಲ್ಲಿ ಎಲಾನ್ ಅವರು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ಜಗತ್ತಿನ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇತರ ಸಂಸ್ಥೆಗಳು: ಸೋಲಾರ್ ಸಿಟಿ ಕಾರ್ಪೊರೇಷನ್ ಸಂಸ್ಥೆ (2016) ರಸ್ತೆ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2017 ರಲ್ಲಿ ಸುರಂಗ ಕೊರೆಯುವ 'ಟಿಬಿಸಿ' ಎಂಬ ಕಂಪನಿಯನ್ನು ಆರಂಭಿಸಿದರು. (2013 ರಲ್ಲಿ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಘೋಷಣೆ)
ಭಾರತದಲ್ಲಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ದಿನವಾದ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ (National Day of Girl Child) ಆಚರಿಸಲಾಗುತ್ತದೆ. ಇದರ ಅಂಗವಾಗಿ 2021ರ
ಜನವರಿ 24 ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಲಾಯಿತು. 2008 ರಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಬಗ್ಗೆ ಜಾಗೃತಿ, ಮಹಿಳಾ ಸ್ಥಿತಿ-ಗತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಆಚರಣೆ ಬಗ್ಗೆ ಮಾಹಿತಿ
ಇಂದಿರಾ ಗಾಂಧಿಯವರು 1966ರ ಜನವರಿ 24ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಿ ಅಧಿಕಾರ ವಹಿಸಿಕೊಂಡರು. ಈ ಹಿನ್ನೆಲೆಯಲ್ಲಿ 2008 ರಿಂದ ಪ್ರತೀ ವರ್ಷ ಜನವರಿ 24 ರಂದು ಒಂದು ಧೈಯವಾಕ್ಯದೊಂದಿಗೆ ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. 2021ರ ಜನವರಿ 24 ರಂದು 14ನೇ ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನು ಆಚರಿಸಲಾಯಿತು. 2020ರಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು 'ಉಜ್ವಲ ನಾಳೆಗಾಗಿ ಹೆಣ್ಣು ಮಗುವಿನ ಸಬಲೀಕರಣ' ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗಿತ್ತು. ಕೇಂದ್ರ ಸರ್ಕಾರವು 2015ರ ಜನವರಿ 22 ರಂದು ಜಾರಿಗೆ ತಂದ ಬೇಟಿ ಬಚಾವೋ ಬೇಟಿ ಪಡಾವೋ (BBBP- Beti Bachao Beti Padhao) ಯೋಜನೆಯ 6ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿದೆ. ಮಕ್ಕಳ ಲಿಂಗಾನುಪಾತ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ತಡೆಯುವುದು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 2015ರ ಜನವರಿ 22 ರಂದು ಜಾರಿಗೆ ತಂದ ಕಾರ್ಯಕ್ರಮವಾಗಿದ್ದು ಮತ್ತು ಹೆಣ್ಣು ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಮತ್ತು ಆರ್ಥಿಕ ಸಬಲೀಕರಣ ಯೋಜನೆಯಾಗಿದೆ.
ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ (International Day For The Girl Child) : ಅಕ್ಟೋಬರ್ 11 2012 ರಿಂದ ಪ್ರತೀ ವರ್ಷ ಅಕ್ಟೋಬರ್ 11 ಅನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. 2020ರ ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು “My Voice, Our Equal Future' ಧೈಯವಾಕ್ಯದಲ್ಲಿ ಆಚರಿಸಲಾಯಿತು.
ಉತ್ತರಾಖಂಡ ರಾಜ್ಯದಲ್ಲಿ ಒಂದು ದಿನದ ಮುಖ್ಯಮಂತ್ರಿಯಾಗಿ ಸೃಷ್ಟಿ ಗೋಸ್ವಾಮಿ
ONE DAY-CM 2021ರ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಅಂಗವಾಗಿ ಉತ್ತರಾಖಂಡ ರಾಜ್ಯದ ಸರ್ಕಾರವು ರಾಜ್ಯದ ಬೇಸಿಗೆ ಕಾಲದ ರಾಜಧಾನಿಯಾದ ಗೈರ್ ಸೈನ್ (ಚಳಿಗಾಲದ ರಾಜಧಾನಿ: ಡೆಹರಾಡೂನ್) ನಿಂದ ಒಂದು ದಿನದ ಮುಖ್ಯಮಂತ್ರಿಯಾಗಿ 19 ವರ್ಷದ ಸೃಷ್ಠಿ ಗೋಸ್ವಾಮಿ (Srishti Goswami) ಅವರು ಕಾರ್ಯನಿರ್ವಹಿಸಿದರು. ಮುಖ್ಯಮಂತ್ರಿಗಳ ಅಧಿಕೃತ ಸಭೆಯಲ್ಲಿ ಭಾಗಿಯಾಗಿ ಅಟಲ್ ಆಯುಷ್ಮಾನ್ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಪ್ರವಾಸೋದ್ಯಮ ಇಲಾಖೆಯ ಹೋಮ್-ಸ್ಟೇ ಯೋಜನೆಗಳ ಕಡತಗಳನ್ನು ಪರಿಶೀಲಿಸಿದರು. ಹರಿದ್ವಾರ ಮೂಲದ ಸೃಷ್ಠಿ ಗೋಸ್ವಾಮಿ ಅವರಿಗೆ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಹೆಣ್ಣು ಮಗು ದಿನದ ಶುಭಾಶಯ ಕೋರಿದರು. ಸೃಷ್ಟಿ ಗೋಸ್ವಾಮಿ ಅವರು 2018ರಲ್ಲಿ ರಾಜ್ಯದ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಸೃಷ್ಟಿ ಗೋಸ್ವಾಮಿ ಅವರು ಬಾಲ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಾಲಕಿಯರ ಸಬಲೀಕರಣದ ಸಂದೇಶವನ್ನು ರವಾನಿಸುವ ಸಲುವಾಗಿ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಸಮ್ಮತಿಸಿದ್ದರು. ರಾಜ್ಯದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲಾಗಿದೆ. ರೂರ್ಕಿಯಾ ಪಿಎಸ್‌ಎಂ ಪಿಜಿ ಕಾಲೇಜಿನಲ್ಲಿ ಬಿ.ಎಸ್ಸಿ. ಕೃಷಿಯ 7ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸೃಷ್ಠಿ ಹರಿದ್ವಾರ ಜಿಲ್ಲೆಯ ದೌಲತ್ ಪುರ ನಿವಾಸಿ, ಈಕೆಯ ತಂದೆ ಉದ್ಯಮಿಯಾಗಿದ್ದು, ತಾಯಿ ಗೃಹಿಣಿ.
ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಂಬಂಧಿಸಿದ ಅನೇಕ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ. 2018 ರಲ್ಲಿ ಉತ್ತರಾಖಂಡದ ಬಾಲ ವಿಧಾನ ಸಭೆಯ ಮುಖ್ಯಮಂತ್ರಿಯಾಗಿ ಸೃಷ್ಟಿ ಆಯ್ಕೆಯಾಗಿದ್ದರು.
ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಮಧ್ಯಪ್ರದೇಶ ಸರ್ಕಾರದ ಫಂಖ್ ಅಭಿಯಾನ: ರಾಷ್ಟ್ರೀಯ ಹೆಣ್ಣು
ಮಗುವಿನ ದಿನದ ಅಭಿಯಾನದಲ್ಲಿ ಮಧ್ಯಪ್ರದೇಶ ಸರ್ಕಾರವು ಫಂಖ್ (PANKH) ಅಭಿಯಾನಕ್ಕೆ ಚಾಲನೆ ನೀಡಿತು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಈ ಅಭಿಯಾನ ಆರಂಭಿಸಲಾಗಿದ್ದು, P-ರಕ್ಷಣೆ (Protection), A-ಜಾಗೃತಿ (Awareness), N-ಪೌಷ್ಠಿಕತೆ (Nutrition), K-ಜ್ಞಾನ (Knowledge), H-ಆರೋಗ್ಯ (Health) ಎಂಬುದನ್ನು ಪ್ರತಿನಿಧಿಸುತ್ತದೆ. ಈ ಅಭಿಯಾನವು ಒಂದು ವರ್ಷ ಜರುಗಲಿದೆ. ಇದರೊಂದಿಗೆ ಮಧ್ಯಪ್ರದೇಶ ರಾಜ್ಯ ಸರ್ಕಾರವು 2021ರ ಜನವರಿ 24 ರಿಂದ 30 ರವರೆಗೆ ರಾಜ್ಯ ಮಟ್ಟದಲ್ಲಿ Aware Girl Child, Able Madhya Pradesh ಧೈಯವಾಕ್ಯದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ಸಪ್ತಾಹವನ್ನು ಆಚರಿಸಿದೆ.
ಪಂಜಾಬ್‌ನಲ್ಲಿ ಆಚರಣೆ: ಹೆಣ್ಣುಮಗುವಿನ ದಿನದ ಅಂಗವಾಗಿ 2021ರ ಜನವರಿ ತಿಂಗಳನ್ನು ಪಂಜಾಬ್ ರಾಜ್ಯ ಸರ್ಕಾರವು ಹೆಣ್ಣುಮಗುವಿನ ಮಾಸ (Month Of Girl Child) ಎಂದು ಘೋಷಣೆ
& Dheeiyan Di Lohri ಕಾರ್ಯಕ್ರಮವನ್ನು ಜಾರಿಗೆ ತಂದಿದೆ. * ಒಡಿಶಾದಲ್ಲಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ: ಒಡಿಶಾ ರಾಜ್ಯ ಸರ್ಕಾರವು ಹೆಣ್ಣು ಮಗುವಿನ ದಿನದ ಅಂಗವಾಗಿ ಭಾರತದಲ್ಲಿ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಂಗ ಸಮನ್ವಯ ನಿಧಿ: 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಣ್ಣು ಮಗುವಿನ ಸಮಾನ ಮತ್ತು ಗುಣಮಟ್ಟ ಶಿಕ್ಷಣದ ಅಭಿವೃದ್ಧಿಗಾಗಿ ಲಿಂಗಸಮನ್ವಯ ನಿಧಿಯನ್ನು
(Gender Inclusion Fund) ರಚಿಸಲಾಗಿದೆ.
2021ರ ಜನವರಿ 25 ರಂದು ಭಾರತದಲ್ಲಿ IIನೇ ಆವೃತ್ತಿಯ ರಾಷ್ಟ್ರೀಯ ಮತದಾರರ ದಿನವನ್ನು (NVD National Voters Day) Making our Voters Empowered, Vigilant, Safe Informed & ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ನವದೆಹಲಿಯಲ್ಲಿ ಚುನಾವಣಾ ಆಯೋಗದಿಂದ ಆಚರಿಸಿದ ಮತದಾರರ ದಿನದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖ್ಯ ಅತಿಥಿಗಳಾಗಿದ್ದರು. ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಶುಭಾಶಯ ಕೋರಿದರು. ದೇಶಾದ್ಯಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ
ಘಟ್ಟವಾದ ಚುನಾವಣಾ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತ ನಾಗರಿಕರ ಮತದಾನದ ಬಗ್ಗೆ ಅರಿವನ್ನು ಮೂಡಿಸುವುದು, ಜತೆಗೆ ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿಯಾಗುವ ಯುವ ಮತದಾರರಿಗೆ ಗುರುತಿನ ಚೀಟಿ (EPIC-Elector Photo Identity Card) ವಿತರಿಸುವುದು ಉದ್ದೇಶವಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಗಳನ್ನು ಸುರಕ್ಷಿತವಾಗಿ ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಕೈಗೊಂಡ ಚುನಾವಣೆಗಳ ಕೆಲವು ತುಣುಕುಗಳನ್ನು ತಿಳಿಸುವ ಫೋಟೋ, 2019ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೈಗೊಂಡ SVEEP Systematic Voters Education & Electoral Participation ಕಾರ್ಯಕ್ರಮದ ಅರಿವು ಪುಸ್ತಕ ಹಾಗೂ ಚುನಾವಣಾ ಆಯೋಗದ ವತಿಯಿಂದ ಸಿದ್ಧವಾಗಿರುವ ಮತದಾರರ ಶಿಕ್ಷಣದ ಕಾಮಿಕ್ ಪುಸ್ತಕವಾದ Chalo Karen Matdaan ಅನ್ನು ಬಿಡುಗಡೆ ಮಾಡಿದರು.
2021ರ ರಾಷ್ಟ್ರೀಯ ಚುನಾವಣಾ ಪ್ರಶಸ್ತಿ ಪ್ರದಾನ
2021ರ ಜನವರಿ 25ರಂದು ಚುನಾವಣಾ ಆಯೋಗದ ವತಿಯಿಂದ ಆಯ್ಕೆಮಾಡಿದ 2020-21ರ ಅವಧಿಯ ರಾಷ್ಟ್ರೀಯ ಚುನಾವಣಾ 17 ಪ್ರಶಸ್ತಿಗಳನ್ನು (National Awards for the year 2020-21) ರಾಷ್ಟ್ರಪತಿಗಳು ಪ್ರದಾನ ಮಾಡಿದರು. ಐಟಿ ವಿಧಾನಗಳ ಅಳವಡಿಕೆ ಭದ್ರತಾ ನಿರ್ವಹಣೆ, ಕೋವಿಡ್-19ರ ಸಂದರ್ಭದಲ್ಲಿ ಸುರಕ್ಷಿತ ಚುನಾವಣಾ ನಿರ್ವಹಣೆ, ಮತದಾರರಲ್ಲಿ ಜಾಗೃತಿ ಮೂಡಿಸಿದ ಚುನಾವಣಾ ಅಧಿಕಾರಿಗಳನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿತ್ತು. ಕೋವಿಡ್-19ರ ಸಾಂಕ್ರಾಮಿಕತೆ ಅವಧಿಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಸಿದ ರಾಜ್ಯ ಎಂಬ ಹೆಗ್ಗಳಿಕೆಯನ್ನು ಬಿಹಾರ ರಾಜ್ಯವು ಹೊಂದಿದ್ದು, ಈ ರಾಜ್ಯದ ಚುನಾವಣಾ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಆಯೋಗದ ಸಿಇಒ ಎಚ್.ಆರ್ ಶ್ರೀನಿವಾಸ್ ಸೇರಿದಂತೆ 7 ಜನ ಬಿಹಾರದ ಚುನಾವಣಾ ಅಧಿಕಾರಿಗಳಿಗೆ ರಾಷ್ಟ್ರೀಯ ಚುನಾವಣಾ ಪ್ರಶಸ್ತಿ (Best Electoral Practices Award)ಲಭಿಸಿದೆ. ಬಿಹಾರ ಮೂಲದ ಸರ್ಕಾರೇತರ ಸಂಘಟನೆಯಾದ JEEVIKA ಬಿಹಾರದ ಚುನಾವಣೆ ಸಂದರ್ಭದಲ್ಲಿ ಅರಿವು ಮೂಡಿಸಿದ್ದ ಕಾರಣದಿಂದಲೂ ಪ್ರಶಸ್ತಿ ಪಡೆದಿತ್ತು. ಮೇಘಾಲಯ ರಾಜ್ಯ ಚುನಾವಣಾ ಆಯೋಗವು ಚುನಾವಣೆಯಲ್ಲಿ ಉತ್ತಮ ಮಾಹಿತಿ ತಂತ್ರಜ್ಞಾನ ಅನ್ವಯಿಕೆಗಾಗಿ ವಿಶೇಷ ಪ್ರಶಸ್ತಿ ಪಡೆದಿದೆ.
ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನದ ಆಚರಣೆ ಹಿನ್ನೆಲೆ
1950ರ ಜನವರಿ 25 ರಂದು ಕೇಂದ್ರ ಚುನಾವಣಾ ಆಯೋಗವು ಸಂವಿಧಾನದ 15ನೇ ಭಾಗದ 324ನೇ ವಿಧಿ ಅನ್ವಯ ಸ್ಥಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 25 ಅನ್ನು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ. 2011ರ ಜನವರಿ 25 ರಂದು ಮೊದಲ ಬಾರಿಗೆ ರಾಷ್ಟ್ರೀಯ ಮತದಾರರ ದಿನವನ್ನು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದ ಅಂಗವಾಗಿ ಆಚರಿಸಲು ನಿರ್ಧರಿಸಿದರು. 2020ರ ಮತದಾರರ ದಿನದ Electoral Literacy for Stronger Democracy. ಹಲೋ ವೋಟರ್ (Hello Voters) ವೆಬ್ ರೇಡಿಯೋ : ಚುನಾವಣಾ ಆಯೋಗವು ಹಲೋ ವೋಟರ್ ಹೆಸರಿನ ಆನ್‌ಲೈನ್ ಡಿಜಿಟಲ್ ರೇಡಿಯೋ ಸೇವೆ ಆರಂಭಿಸಿದ್ದು, ಈ ಸೇವೆಗೆ ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಚಾಲನೆ ನೀಡಿದರು. ಈ ರೇಡಿಯೋ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುವುದು. ಗೀತೆ, ನಾಟಕ, ಚರ್ಚೆ, ಕಥೆಗಳ ಮೂಲಕ ಚುನಾವಣೆಯ ಬಗ್ಗೆ ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಈ ರೇಡಿಯೋ ಸೇವೆ ನೀಡುತ್ತದೆ.
ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು 2021ರ ಜನವರಿ 15ರಂದು ಕೋಮಲ್ ಜೈನ್ ಅವರು ಬರೆದ “Electoral Reforms in India' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್‌ರವರು ರಾಜ್ಯಮಟ್ಟದ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಪಡೆದಿದ್ದಾರೆ.
ಕೇಂದ್ರ ಚುನಾವಣಾ ಆಯೋಗ (ECI- Election Commission Of India) ದ ಬಗ್ಗೆ ಮಾಹಿತಿ
ಸ್ಥಾಪನೆ: 1950ರ ಜನವರಿ 25,
ಕೇಂದ್ರ ಕಚೇರಿ: ನವದೆಹಲಿ,
ವಿಶೇಷತೆ: ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆ
ಕಾರ್ಯಗಳು: 1950-1951ರ ಜನತಾ ಪ್ರಾತಿನಿಧ್ಯ ಕಾಯಿದೆ ಅನ್ವಯ ಚುನಾವಣೆಯನ್ನು ನಡೆಸುವುದು, ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವುದು, ಚುನಾವಣಾ ನೀತಿ ಸಂಹಿತೆ (MCC-Model Code of Conduct) ರೂಪಿಸುವುದು. ಕೇಂದ್ರ ಚುನಾವಣಾ ಆಯೋಗವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಸದನಗಳ ಸದಸ್ಯರುಗಳನ್ನು ಆಯ್ಕೆ ಮಾಡುವ ಚುನಾವಣೆಯನ್ನು ನಡೆಸುತ್ತದೆ. 1951ರ ಅಕ್ಟೋಬರ್ 25 ರಿಂದ 1952ರ ಫೆಬ್ರವರಿ 21 ರವರೆಗೆ ಭಾರತದಲ್ಲಿ ಮೊದಲ ಬಾರಿಗೆ ಲೋಕಸಭಾ ಸಾರ್ವತ್ರಿಕ ಚುನಾವಣೆ ಜರುಗಿತ್ತು. ಕೇಂದ್ರ ಚುನಾವಣಾ ಆಯುಕ್ತರು: ರಾಷ್ಟ್ರಪತಿ ಅವರಿಂದ ಆಯುಕ್ತರು ನೇಮಕಗೊಂಡು 6 ವರ್ಷ ಅಥವಾ 65ನೇ ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಸುಕುಮಾರ್ ಸೇನ್ ಅವರು ಆಯೋಗದ ಸಂಸ್ಥಾಪಕ ಮತ್ತು ಮೊದಲ ಮುಖ್ಯ ಆಯುಕ್ತರಾಗಿದ್ದರು. ಆಯೋಗದ ಆಯುಕ್ತರಾಗಿ
ಕಾರ್ಯನಿರ್ವಹಿಸಿದ ಮೊದಲ ಮತ್ತು ಏಕೈಕ ಮಹಿಳೆ ಎಂಬ ಕೀರ್ತಿಗೆ ವಿ.ಎಸ್. ರಮಾದೇವಿ ಪಾತ್ರರಾಗಿದ್ದಾರೆ. ಭಾರತದ 10ನೇ ಚುನಾವಣಾ
ಆಯುಕ್ತರಾಗಿ ಮತ್ತು ದೇಶದ ಚುನಾವಣೆಗಳ ಸುಧಾರಕ ಎಂದು ಗುರುತಿಸಲ್ಪಟ್ಟಿದ್ದ ಟಿ.ಎನ್. ಶೇಷನ್ ಅವರು 2019ರ ನವೆಂಬರ್ 10 ನಿಧನರಾದರು.ಸುನೀಲ್ ಅರೋರಾ ಅವರು 23ನೇ ಚುನಾವಣಾ ಮುಖ್ಯ ಆಯುಕ್ತರಾಗಿ 2018ರ ಡಿಸೆಂಬರ್ 2 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರಾಜೀವ್
ಕುಮಾರ್ ಮತ್ತು ಸುಶೀಲ್ ಚಂದ್ರ ಅವರು ಆಯೋಗದ ಇತರ ಆಯುಕ್ತರುಗಳಾಗಿದ್ದಾರೆ. (ಅಶೋಕ್ ಲವಾಸ ಅವರು 2020ರ ಆಗಸ್ಟ್ 18 ರಂದು ಚುನಾವಣಾ ಆಯುಕ್ತ ಹುದ್ದೆಗೆ ರಾಜೀನಾಮೆ ನೀಡಿ ಮನಿಲಾದಲ್ಲಿರುವ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ).
ಬೆಂಗಳೂರು ಮೂಲದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (HAL-Hindustan Aeronautics Limited) ನಿಂದ 48,000 ಕೋಟಿ ರೂ. ವೆಚ್ಚದಲ್ಲಿ 83 ಅತ್ಯಾಧುನಿಕ ತೇಜಸ್ ಲಘು ಯುದ್ಧ ವಿಮಾನ (TEJAS Advanced Light Combat Aircraft) ಖರೀದಿಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಸೂಚಿಸಿದೆ. ಇದು ಹೆಚ್‌ಎಎಲ್ & ಭಾರತೀಯ ವಾಯು ರಕ್ಷಣಾ ಕ್ಷೇತ್ರದಲ್ಲಿನ ಅತಿದೊಡ್ಡ ಖರೀದಿ ಒಪ್ಪಂದವಾಗಿದೆ. ದೇಶೀಯ ಸೇನಾ ಯುದ್ಧ ವಿಮಾನ, ಸೇನಾ ಸಲಕರಣೆಗಳ ಉತ್ಪಾದನೆಗೆ ಆದ್ಯತೆ ನೀಡಲು ಸರ್ಕಾರವು ಬದ್ಧವಾಗಿದೆ ಎಂಬ ಇಚ್ಛಾಶಕ್ತಿಯು ಈ ಮೂಲಕ ಪ್ರದರ್ಶನಗೊಂಡಿದೆ. ಈ ಒಪ್ಪಂದವು ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ & ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ.
MARK-IA ಆವೃತ್ತಿಯ ತೇಜಸ್ ಯುದ್ಧ ವಿಮಾನಗಳು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ., (ಹೆಚ್ಎಎಲ್) ನಿರ್ಮಿತ, ಸುಧಾರಿತ ಮಾರ್ಕ್-[ಎ ಆವೃತ್ತಿಯ ತೇಜಸ್ ವಿಮಾನಗಳನ್ನು ವಾಯುಪಡೆಗೆ ಖರೀದಿಸುವ ಪ್ರಸ್ತಾವಕ್ಕೆ 2020ರ ಮಾರ್ಚ್ ತಿಂಗಳಲ್ಲಿ ರಕ್ಷಣಾ ಉಪಕರಣಗಳ ಸ್ವಾಧೀನ ಮಂಡಳಿ (Defence Acquisition Council) ಅನುಮೋದನೆ ನೀಡಿತ್ತು. ಈ ಒಪ್ಪಂದದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತ ಸಂಘಟ ಸಮಿತಿ' (CCS-Cabinet Com mittee on Security) ಒಪ್ಪಿಗೆ ನೀಡಿದೆ. ಈ 83 ಫೈಟರ್ ಜೆಟ್‌ಗಳ ಪೈಕಿ 73 ವಿಮಾನಗಳು ದೇಶದ ರಕ್ಷಣೆಗೆ ನಿಯೋಜನೆಗೊಂಡರೆ, 10 ವಿಮಾನಗಳು ತರಬೇತಿಗೆ ಬಳಕೆಯಾಗಲಿವೆ.
ವಾಯುಪಡೆಯಲ್ಲಿ ಹೆಚ್ಚಳವಾದ ತೇಜಸ್ ಬಲ
ಭಾರತೀಯ ವಾಯುಪಡೆಗೆ ಎರಡು ಹಂತದಲ್ಲಿ ತೇಜಸ್ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 20 ಫೈಟರ್ ಜೆಟ್‌ಗಳು ಪೂರೈಕೆಯಾಗಿದ್ದು, ಎರಡನೇ ಹಂತದಲ್ಲಿ 20 ವಿಮಾನಗಳು ಪೂರೈಕೆಯಾಗುತ್ತಿವೆ. ಪ್ರಸ್ತುತವಾಗಿ 83 ತೇಜಸ್ ಫೈಟರ್ ವಿಮಾನಗಳನ್ನು ಖರೀದಿ ಮಾಡುವ ಒಪ್ಪಂದವನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ತೇಜಸ್‌ನ ಬಲವು ವಾಯುಪಡೆಯಲ್ಲಿ 123 ಆಗಲಿದೆ. ಈ ಮೂಲಕ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್‌ನ ಬಲವು ಹೆಚ್ಚಳವಾದಂತಾಗಿದೆ.
ತೇಜಸ್ ಖರೀದಿಯಿಂದ ಕಡಿಮೆಯಾದ ವಿದೇಶಿ ಅವಲಂಬನೆ ಭಾರತದ ಸೇನೆಯು ಅಮೆರಿಕಾ, ರಷ್ಯಾ, ಫ್ರಾನ್ಸ್, ಇಸ್ರೇಲ್ ಮುಂತಾದ ರಾಷ್ಟ್ರಗಳಿಂದ ಯುದ್ಧ ವಿಮಾನಗಳು, ಮದ್ದು ಗುಂಡುಗಳು, ಸೇನಾ ಉಪಕರಣಗಳನ್ನು ಖರೀದಿಸುತ್ತಿತ್ತು. ಇತ್ತೀಚೆಗೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ವೇಳೆ ಹೆಚ್‌ಎಎಲ್‌ನ ಹೊರಗಿಟ್ಟಿದ್ದರಿಂದ ದೇಶಾದ್ಯಂತ ಅಪಾರ ಟೀಕೆಗೆ ಒಳಗಾಗಿತ್ತು. ಪ್ರಸ್ತುತವಾಗಿ ತೇಜಸ್ ಅನ್ನು ಭಾರತೀಯ ವಾಯುಪಡೆಗೆ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದ ಅವಲಂಬನೆ ಕಡಿಮೆಯಾದಂತಾಗಿದೆ.
ಎರಡನೇ ಸ್ಟ್ಯಾಡ್ರನ್ ಹೊಂದಿರುವ ತೇಜಸ್ : 2020ರ ಮೇ ತಿಂಗಳಲ್ಲಿ ವಾಯುಪಡೆಯ ತೇಜಸ್ MK-IA ಸರಣಿಯ ವಿಮಾನಗಳ 2ನೇ ಸ್ಮಾಟ್ರನ್' ರಚಿಸಿತ್ತು. ಇದಕ್ಕೆ 18 ಕ್ವಾಡ್ರನ್' ಎಂದು ಹೆಸರಿದ್ದು, ಇದನ್ನು ಪ್ರೈಯಿಂಗ್ ಬುಲೆಟ್ಸ್ ಎಂದು ಕರೆಯಲಾಗುತ್ತದೆ. ಇದರ ನೆಲೆ ಕೊಯಮತ್ತೂರು ಬಳಿಯ ಸುಲೂರಿನಲ್ಲಿದೆ. ಮೊದಲ ಸ್ಮಾಡ್ರನ್ ನಂ. (45 ಕೂಡ ಕೊಯಮತ್ತೂರಿನಲ್ಲಿದೆ. ಇದನ್ನು 2016 ರಲ್ಲಿ ರಚಿಸಲಾಗಿತ್ತು.
ಸಕಾಲದಲ್ಲಿ ಪೂರೈಕೆಗೆ ವ್ಯವಸ್ಥೆ
ತೇಜಸ್ ಮಾರ್ಕ್-ಎ ಲಘು ಯುದ್ಧ ವಿಮಾನಗಳನ್ನು ಸಕಾಲದಲ್ಲಿ ಪೂರೈಸುವುದಕ್ಕಾಗಿ ಹೆಚ್‌ಎಎಲ್ ಹಲವು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ಮತ್ತು ನಾಸಿಕ್ ನಲ್ಲಿ ನಿರ್ಮಾಣ ಘಟಕ ಗಳು ಆರಂಭಿಸಲಾಗಿದೆ. ಹೆಚ್‌ಎಎಲ್ ಮತ್ತು ರಕ್ಷಣಾ ಸಚಿವಾಲಯದ ನಡುವೆ ಒಪ್ಪಂದವಾದ 3 ವರ್ಷಗಳ ಬಳಿಕ ವಿಮಾನ ಪೂರೈಕೆ ಆರಂಭವಾಗಲಿದೆ.
ಅತ್ಯನಿರ್ಭ‌್ರ ಭಾರತ (Aatmanirbhar Bharat) ಕ್ಕೆ ಆದ್ಯತೆ
ಹೆಚ್‌ಎಎಲ್‌ನಿಂದ ಕೇಂದ್ರ ಸರ್ಕಾರ ಖರೀದಿಸುತ್ತಿರುವ 83 ಅತ್ಯಾಧುನಿಕ ತೇಜಸ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವು ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತ್ ಅಭಿಯಾನಗಳಿಗೆ ಪುಷ್ಠಿ ನೀಡಿದಂತಾಗಿದೆ. ಜತೆಗೆ ವಾಯುಪಡೆಯ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ. ಬೆಂಗಳೂರು ಹಾಗೂ ನಾಸಿಕ್‌ನಲ್ಲಿ ಹೆಚ್‌ಎಎಲ್ ಹೀಗಾಗಲೇ 2ನೇ ಉತ್ಪಾದಕ ಘಟಕಗಳನ್ನು ಆರಂಭಿಸಿರುವುದರಿಂದ ಕ್ಷಿಪ್ರವಾಗಿ ಈ ವಿಮಾನಗಳ ಪೂರೈಕೆ ಸಾಧ್ಯವಾಗಲಿದೆ. ಒಪ್ಪಂದದ ಭಾಗವಾಗಿ 73 ಏಕ ಇಂಜಿನ್ ತೇಜಸ್ ಲಘು ಯುದ್ಧ ವಿಮಾನಗಳು, ಹಾಗೂ 10 ಡಬ್ಬಲ್ ಇಂಜಿನ್‌ನನ್ನು ಹೊಂದಿರುವ ತೇಜಸ್ ತರಬೇತಿ ವಿಮಾನಗಳನ್ನು ಹೆಚ್‌ಎಎಲ್ ಪೂರೈಸಲಿದೆ. ಪ್ರಸ್ತುತವಾಗಿ ಭಾರತೀಯ ವಾಯುಪಡೆಯಲ್ಲಿ ಬಳಕೆಯಲ್ಲಿರುವ ವಿಮಾನಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾದ ಮಾರ್ಕ್-1ಎ ಮಾದರಿಯಾಗಿದೆ.
ವಿಮಾನ ತಯಾರಿಕಾ ಕ್ಷೇತ್ರಕ್ಕೆ ಅನುಕೂಲ: ಈ ಒಪ್ಪಂದದಿಂದಾಗಿ ಭಾರತ ವಿಮಾನ ತಯಾರಿಕಾ ಕ್ಷೇತ್ರಕ್ಕೆ ಭಾರೀ ಅನುಕೂಲವಾಗಲಿದ್ದು, ಯೋಜನೆಯಲ್ಲಿ 560 ಕಂಪನಿಗಳು ಭಾಗಿಯಾಗಲಿವೆ. ದೇಶಾದ್ಯಂತ 5,000 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
ವಿದೇಶದಲ್ಲೂ ಬೇಡಿಕೆ ಹೊಂದಿದ ತೇಜಸ್ ವಿಮಾನ
2016ರಲ್ಲಿ ಹೆಚ್‌ಎಎಲ್ ತೇಜಸ್‌ನ ಮೊದಲ ಜಾಗತಿಕ ಪ್ರದರ್ಶನವು ಬಹರೇನ್‌ನಲ್ಲಿ ಜರುಗಿದ ಬಳಿಕ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದನ್ನು ಖರೀದಿಸಲು ಆಸಕ್ತಿ ತೋರಿಸಿವೆ. ಮಲೇಷಿಯಾ, ವಿಯೆಟ್ನಾಂ, ಇಂಡೋನೇಷಿಯಾ ಹಾಗೂ ಶ್ರೀಲಂಕಾಗಳಲ್ಲಿ ಹೆಚ್‌ಎಎಲ್ ತನ್ನ ಸಂಚಾರಿ ವೇಳೆಯನ್ನು ಸ್ಥಾಪಿಸಲು ಮುಂದಾಗಿದೆ. ಇಲ್ಲಿನ ಸ್ಥಳೀಯ - ಹಾಗೂ ಜಾಗತಿಕ ವಿಮಾನಗಳಿಗೆ ಸೇವೆಯನ್ನು ನೀಡಲು ಮುಂದಾಗಿದೆ. ಇವು ಹೆಚ್ಎಎಲ್ ತೇಜಸ್, ದಾಳಿ: ಹೆಲಿಕಾಪ್ಟರ್ ರುದ್ರ ಹಾಗೂ ಆಧುನಿಕ ಪೆಲಿಕಾಪ್ಟರ್ ಧ್ರುವಗಳ ಮಾರಾಟಕ್ಕೆ ವೇದಿಕೆಯಾಗಲಿದೆ.
ಚೀನಾ ವಿಮಾನಕ್ಕಿಂತ ತೇಜಸ್ ಉತ್ತಮ: ಭಾರತದ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನವು ಚೀನಾ & ಪಾಕಿಸ್ತಾನದ ಜೆಎಫ್-17 ವಿಮಾನಕ್ಕಿಂತ ಬಹುಪಾಲು ಉತ್ತಮವಾದದ್ದು. ತೇಜಸ್ ವಿಮಾನವು ಬಾಲಾಕೋಟ್ ಮಾದರಿ ವೈಮಾನಿಕ ದಾಳಿ ನಡೆಸುವುದಕ್ಕೆ ಉತ್ತಮ ಆಯ್ಕೆ ಆಗಿದೆ.
ಹೆಚ್‌ಎಎಲ್ ಬಗ್ಗೆ ಮಾಹಿತಿ
ಕೇಂದ್ರ ಕಚೇರಿ: ಬೆಂಗಳೂರು
ವಿಸೃತರೂಪ : Hindustan Aeronautics Limited
ಸ್ಥಾಪನೆ: 1940 ರಲ್ಲಿ ಹಿಂದೂಸ್ತಾನ್ ಏರೋ ಕಾಫ್ಟ್ ಲಿ., ಆಗಿ ಆರಂಭವಾಗಿದ್ದು, ಭಾರತ ಸರ್ಕಾರವು 1941 ರಲ್ಲಿ ಷೇರನ್ನು ಹೊಂದಿತ್ತು. 1942 ರಲ್ಲಿ ಹೆಚ್ಚಿನ ಷೇರನ್ನು ಖರೀದಿಸಿ ಸ್ವಾಮ್ಯ ಪಡೆಯಿತು.
* 1964 ರಲ್ಲಿ ಇನ್ನೊಂದು ವೈಮಾನಿಕ ಸಂಸ್ಥೆ ಏರೋನಾಟಿಕ್ಸ್ ಇಂಡಿಂ ಯಾ ಲಿ., ಹಾಗೂ ಏರೋಕ್ರಾಫ್ಟ್ ಅನ್ನು ವಿಲೀನಗೊಳಿಸಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಎಂದು ಮರುನಾಮಕರಣ ಮಾಡಲಾಯಿತು.
ಸ್ಥಾಪಕರು: ವಾಲ್ ಚಂದ್ ಹೀರಾಚಾಂದ್ (Walehand Hira
chand Doshi) ಎಂಬುವರು ಅಮೆರಿಕಾದ ತಜ್ಞ ವಿಲಿಯಂ ಡಾಗ್ದಾಲ್ ಪಾಲೆ ಅವರ ಸಹಕಾರದಿಂದ ಹಿಂದೂಸ್ತಾನ್ ಏರೋಕ್ರಾಫ್ಟ್ ಲಿ., ಸ್ಥಾಪಿಸಿದರು. ಸಂಸ್ಥೆ ಸ್ಥಾಪನೆಗೆ ಸ್ಥಳದ ಹುಡುಕಾಟದಲ್ಲಿದ್ದಾಗ ಸೇತ್ ಜೀಗೆ ಮೈಸೂರು ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರು ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಸಲಹೆಯಂತೆ ಬೆಂಗಳೂರಿನಲ್ಲಿ 700 ಎಕರೆ ಜಾಗವನ್ನು ಹಣ ಪಡೆಯದೆ ಉಚಿತವಾಗಿ ನೀಡಿದರು. ಇದರೊಂದಿಗೆ ವಿದ್ಯುತ್ ಮತ್ತು ನೀರನ್ನು ಕೂಡ ಒದಗಿಸಿದರು.
ಪ್ರಸ್ತುತ ಮುಖ್ಯಸ್ಥರು : ಆರ್, ಮಾಧವನ್
* ನಿಯಂತ್ರಣ : ಭಾರತದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ನಿರ್ವಹಣೆ.
ಸಂಸ್ಥೆಯ ವಿಶೇಷತೆಗಳು : ಪ್ರಸ್ತುತವಾಗಿ ಸಂಸ್ಥೆಯಲ್ಲಿ 11 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, 20 ಉತ್ಪಾದನಾ ಘಟಕಗಳು, 30 ಸಾವಿರದಷ್ಟು ಉದ್ಯೋಗಗಳನ್ನು ಹೊಂದಿದೆ. ಜಾಗತಿಕವಾಗಿ 100 ವೈಮಾನಿಕ ಸಂಸ್ಥೆಗಳಲ್ಲಿ 34ನೇ ಸ್ಥಾನದಲ್ಲಿದೆ. ಇದುವರೆಗೂ 17 ವಿಧದ 1,476 ವಿಮಾನಗಳನ್ನು ಹೆಚ್‌ಎಎಲ್ ಸ್ಥಳೀಯವಾಗಿ ನಿರ್ಮಿಸಿದೆ.
2021ರ ಜನವರಿ 15 ರಂದು ದೇಶಾದ್ಯಂತ 73ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಯಿತು. ಭಾರತೀಯ ARTY DAY ಸೇನೆಯು ಸ್ವರ್ಣಿಮಾ ವಿಜಯ ವರ್ಷದ ಹಿನ್ನೆಲೆಯಲ್ಲಿ Vijay Run ಹೆಸರಿನ ಮ್ಯಾರಥಾನ್ ಆಯೋಜಿಸಿತ್ತು. ಈ 2020 ದಿನದಂದು ದೆಹಲಿಯ ದಂಡು ಪ್ರದೇಶದಲ್ಲಿರುವ ಪರೇಡ್ ಮೈದಾನದಲ್ಲಿ ಸೇನಾ ಪಡೆಗಳ ಆಕರ್ಷಕ ಪಥಸಂಚಲನ ಮತ್ತು ಕವಾಯತು ಜರುಗಿತು. ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲು ನಡೆಸಿದ ಈ ಕಾರ್ಯಕ್ರಮದಲ್ಲಿ ಸೇನೆಯ ಮೂರೂ ಪಡೆಯ ಮುಖ್ಯಸ್ಥರುಗಳು ಭಾಗವಹಿಸಿದ್ದರು.
ಭಾಗವಹಿಸಿದ್ದ ಪ್ರಮುಖರು: ಭೂಸೇನಾ ಮುಖ್ಯಸ್ಥರಾದ ಮೇಜರ್ ಎಂ.ಎಂ.
ನರವಣೆ ಅವರು ಪಥಸಂಚಲನ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿದರು. ಸಶಸ್ತ್ರ ಪಡೆಗಳ ಮುಖ್ಯಸ್ಥ (CDS-Chief Of Defence Staff) ಜನರಲ್ ಬಿಪಿನ್ ರಾವತ್ ಅವರು ಸೇನಾ ದಿನದ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಕೇತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ (Captain Tania Shergill) ಪಥಸಂಚಲನದ ನೇತೃತ್ವ ವಹಿಸಿದ್ದರು.
ಸೇನಾ ದಿನದಂದು ಡೋನ್ ಸಮೂಹಗಳ ಪ್ರದರ್ಶನ
ಸೇನಾ ದಿನದ ಸಂದರ್ಭದಲ್ಲಿ ದೆಹಲಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪನವರ ಮೈದಾನದಲ್ಲಿ ನಡೆದ ಪರೇಡ್‌ನಲ್ಲಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 15 ಯುದ್ಧ ಡೋನ್‌ಗಳ ಸಮೂಹಗಳ ಪ್ರದರ್ಶನ ಜರುಗಿತು. ಹಕ್ಕಿಗಳ ಗುಂಪಿನಂತೆ ಆಗಸದಲ್ಲಿ ಒಂದಾಗಿ ಹಾರುತ್ತಾ ಶತ್ರು ಪಡೆಗಳ ಮೇಲೆ ನಾನಾ ರೀತಿಯ ದಾಳಿ ನಡೆಸಬಲ್ಲ ಶಕ್ತಿ ಹೊಂದಿರುವ 15 ಯುದ್ಧ ಡೋನ್‌ಗಳ ಪಡೆಯನ್ನು ಪ್ರದರ್ಶಿಸಲಾಯಿತು. ಶತ್ರುಪಾಳೆಯದ ಗಡಿಯೊಳಗೆ 50 ಕಿ.ಮೀ. ನಷ್ಟು ಪ್ರವೇಶಿಸಬಲ್ಲ ಸಾಮರ್ಥ್ಯವನ್ನು ಈ ಡೋನ್‌ಗಳು ಹೊಂದಿವೆ. ಹಕ್ಕಿಗಳಂತೆ ಧ್ವನಿ ಮಾಡುವ ಕಾರಣ ಇವುಗಳ ನಿರ್ವಹಣೆ ಮಾಡುವವರು ಶತ್ರುಗಳ ಕಣ್ಣಿಗೆ ಸಿಕ್ಕಿಬೀಳುವ ಸಾಧ್ಯತೆಯೂ ಕೂಡ ಕಡಿಮೆ, ವಿಶ್ವದ ಹಲವು ದೇಶಗಳ ಇಂತಹ ಹೊಸ ಮಾದರಿಯ ಭವಿಷ್ಯದ ಶಸ್ತ್ರಾಸ್ತ್ರ ಮತ್ತು ಯುದ್ಧ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಭಾರತೀಯ ಸೇನೆಯೂ ಕೂಡ ಈ ಸಾಲಿಗೆ ಸೇರ್ಪಡೆಗೊಂಡಿದೆ.
ಭಾರತೀಯ ಭೂಸೇನೆಯಲ್ಲಿರುವ ಅತ್ಯುನ್ನತ ಹುದ್ದೆ : ಫೀಲ್ಡ್ ಮಾರ್ಷಲ್
ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿ ಜನರಲ್ ಅವರು ಕಾರ್ಯನಿರ್ವಹಿಸುತ್ತಾರೆ. ಕೆಲವು ವಿಶಿಷ್ಟ ಮತ್ತು ಅಪರೂಪದ ಸಂದರ್ಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ. ಈ ಹುದ್ದೆಯು 5 ಸ್ಟಾರ್‌ಗಳ ಬ್ಯಾಂಕ್‌ನ ಹುದ್ದೆಯಾಗಿದೆ. ಸ್ವತಂತ್ರ ಭಾರತದಲ್ಲಿ ಇದುವರೆಗೂ ಮಾಣಿಕ್ ಷಾ (ಮೊದಲ ಸೇನಾ ಮುಖ್ಯಸ್ಥ) ಮತ್ತು ಕೆ.ಎಂ.ಕಾರಿಯಪ್ಪ ಮಾತ್ರ ಫೀಲ್ಡ್ ಮಾರ್ಷಲ್ ಪದವಿಯನ್ನು ಪಡೆದಿದ್ದಾರೆ. ಇವರು ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ.
ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾದ ಹುದ್ದೆಗಳು
ನೌಕಾ ಪಡೆಯಲ್ಲಿ ಅಡ್ಡಿರಲ್ ಆಫ್ ಫೀಟ್ ಹುದ್ದೆಯು ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾಗಿದೆ. ಆದರೆ ಭಾರತದಲ್ಲಿ ಇದುವರೆಗೆ
ಯಾರಿಗೂ ಪ್ರದಾನ ಮಾಡಲಾಗಿಲ್ಲ. ಭಾರತೀಯ ವಾಯುಪಡೆಯಲ್ಲಿ ಮಾರ್ಷಲ್ ಆಫ್ ದ ಇಂಡಿಯನ್
ಏರ್‌ಫೋರ್ಸ್ ಫೀಲ್ಡ್ ಮಾರ್ಷಲ್ ಹುದ್ದೆಗೆ ಸಮನಾಗಿರುತ್ತದೆ. ಈ ಹುದ್ದೆ ಪಡೆದ ಏಕೈಕ ಅಧಿಕಾರಿ - ಅರ್ಜನ್ ಸಿಂಗ್,
ನೆನಪಿರ: CDS
ಚೀಫ್ ಆಫ್ ಡಿಫೆನ್ಸ್ ಸ್ಟ್ಯಾಫ್, ಮಿಲಿಟರಿ
ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಾಗಿದ್ದು, 2020ರ ಜನವರಿ 1 ರಿಂದ ಬಿಪಿನ್ ರಾವತ್ ಮೊದಲ ಸಿಡಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜನರಲ್ ಕೆ.ಎಂ. ಕಾರಿಯಪ್ಪ ಅವರು 1949 ರ ಜನವರಿ 15 ರಂದು ಭಾರತೀಯ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮುನ್ನ ಸರ್, ಫ್ರಾನ್ಸಿಸ್ ರಾಬರ್ಟ್ ರಾಯ್ಬುಚ್ಚರ್ ಅವರು ಭಾರತದ ದೇಶದ ಸೇನೆಯ ಕಮಾಂಡರ್ ಆಗಿದ್ದರು. ಬುಚ್ಚರ್ ಅವರು ಕಾರಿಯಪ್ಪ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದ ಐತಿಹಾಸಿಕ ದಿನದ ನೆನಪಿಗಾಗಿ ಜನವರಿ 15 ಅನ್ನು ಭಾರತೀಯ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. (2020ರ ಸೇನಾ ದಿನದ ಧೈಯವಾಕ್ಯ: ರಕ್ಷಣೆಯ ಡಿಜಿಟಲ್ ಪರಿವರ್ತನೆ)
2020ರ ರಾಷ್ಟ್ರೀಯ ಸೇನಾ ದಿನದ ವಿಶೇಷತೆ 2020ರಲ್ಲಿ ಕ್ಯಾಪ್ಟನ್ ತಾನಿಯಾ ಶೆರ್ಗಿಲ್‌ರವರು ಸೇನಾ ದಿನದಂದು ಮತ್ತು ಗಣರಾಜ್ಯೋತ್ಸವ ದಿನದಂದು ಪರೇಡ್ ಅನ್ನು ಮುನ್ನಡೆಸಿದ್ದು, ಈ ಮೂಲಕ ಪರೇಡ್‌ನಲ್ಲಿ ಕಮಾಂಡ್ ಅನ್ನು ಮುನ್ನಡೆಸಿದ ಮೊದಲ
ಮಹಿಳಾ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ರಾಷ್ಟ್ರಪತಿಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ : ಮಡಿಕೇರಿ ಕೊಡಗಿನ ವೀರಯೋಧ, ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ(General K.S. Thimayya) ಅವರು ಹುಟ್ಟಿ ಬೆಳೆದ ಮನೆ 'ಸನ್ನಿಸೈಡ್' (Sunny Side) ನಿವಾಸವನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. 2021ರ ಫೆಬ್ರವರಿ 6 ರಂದು ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಮಡಿಕೇರಿಯಲ್ಲಿ ಈ ಮ್ಯೂಸಿಯಂ ಅನ್ನು ಉದ್ಘಾಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5.5 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂನ ಕಾಮಗಾರಿ ನಡೆದಿದೆ. 1957-61 ರ ಅವಧಿಯಲ್ಲಿ ತಿಮ್ಮಯ್ಯ ಅವರು ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
2021ರ ಜನವರಿ 26 ರಂದು ಭಾರತದಲ್ಲಿ ವರ್ಷದ ಮೊದಲ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನವದೆಹಲಿಯ ರಾಜಪಥದಲ್ಲಿ ಸೇನಾ ಪಥಸಂಚಲನ, ಸ್ತಬ್ಧ ಚಿತ್ರಗಳ ಪ್ರದರ್ಶನ, ಯುದ್ಧ ವಿಮಾನಗಳ ಸಾಹಸವುಳ್ಳ ಕಾರ್ಯಕ್ರಮಗಳು 72ನೇ ಗಣರಾಜ್ಯೋತ್ಸವದ. ದಿನದಂದು ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದೊಂದಿಗೆ ಜರುಗಿದವು.
2021ರ ಜನವರಿ 26ರ ಗಣರಾಜ್ಯೋತ್ಸವ ದಿನ
ಭಾರತದ ರಾಷ್ಟ್ರಪತಿಗಳು ನವದೆಹಲಿಯ ರಾಜಪಥದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳನ್ನು ಕೇಂದ್ರ ರಕ್ಷಣಾ ಸಚಿವಾಲಯ ವತಿಯಿಂದ ಆಯೋಜಿಸಲಾಗಿತ್ತು. ಭಾರತದ ಪ್ರಮುಖ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೆ, 9 ಕೇಂದ್ರ ಸಚಿವಾಲಯಗಳ ಟ್ಯಾಬ್ ಮತ್ತು ರಕ್ಷಣಾ ಘಟಕದಿಂದ 6 ಸೇರಿ ಒಟ್ಟು 32 ಟ್ಯಾಬ್ಲೊಗಳು ಪ್ರದರ್ಶನ ಕಂಡವು. ದೇಶದ ಸೇನಾ ಸಾಮರ್ಥ್ಯ, ಸಾರ್ವಭೌಮತೆ, ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆಯು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಅನಾವರಣಗೊಂಡಿತು. ಪಥಸಂಚಲನದಲ್ಲಿ ಬಾಂಗ್ಲಾದೇಶದ ಸಶಸ್ತ್ರಪಡೆಯ ತುಕಡಿಯು ಇತ್ತು.
ವಿದೇಶಿ ಮುಖ್ಯ ಅತಿಥಿಯಿಲ್ಲದೆ ನಡೆದ ಗಣರಾಜ್ಯೋತ್ಸವ ಸಮಾರಂಭ 55 ವರ್ಷದಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಮುಖ್ಯ ಅತಿಥಿಯಿಲ್ಲದೆ ಕಾರ್ಯಕ್ರಮ ನೆರವೇರಿಸಲಾಯಿತು. ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ನಿಗದಿಯಾಗಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕೋವಿಡ್ ಹಿನ್ನಲೆಯಲ್ಲಿ ಭಾರತದ ಪ್ರವಾಸ ರದ್ದುಗೊಳಿಸಿದ್ದರು. ನಂತರ ಸುರಿನೇಂ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾ ಪ್ರಸಾದ್ ಸಂತೋಖಿ ರವರನ್ನು ಆಹ್ವಾನಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಯಾವುದೇ ವಿದೇಶಿ ಮುಖ್ಯ ಅತಿಥಿ ಇಲ್ಲದೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. 1966ರ ನಂತರ ಇದೇ ಮೊದಲ ಬಾರಿಗೆ ವಿದೇಶಿ ಮುಖ್ಯ ಅತಿಥಿಗಳಿಲ್ಲದೇ ಪರೇಡ್ ನಡೆಯಿತು. 1952, 1953 ಮತ್ತು 1966 [ರಲ್ಲೂ ಮುಖ್ಯ ಅತಿಥಿಗಳಿಲ್ಲದೇ ಪರೇಡ್ ನಡೆದಿತ್ತು.
ಭಾರತದ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಿಗೆ ಆಹ್ವಾನ
* ಭಾರತದಲ್ಲಿ 1950 ಜನವರಿ 26ರ ಮೊದಲ ಗಣರಾಜ್ಯೋತ್ಸವ ದಿನದ ಆಚರಣೆಯಿಂದಲೂ ವಿಶೇಷವಾಗಿ ವಿದೇಶಿ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಂಪ್ರದಾಯವಿದೆ. ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷಿಯಾ ಅಧ್ಯಕ್ಷ ಸುಕಾರ್ನೊ ಭಾಗವಹಿಸಿದ್ದರು.
* 1950 - 54ರವರೆಗೆ ಗಣರಾಜ್ಯೋತ್ಸವ ಆಚರಣೆಯು ಇರ್ವಿನ್ ಸ್ಟೇಡಿಯಂ, ಕೆಂಪುಕೋಟೆ, ರಾಮ್‌ಲೀಲಾ ಗೌಂಡ್ ಮುಂತಾದ ಕಡೆ ನಡೆಯುತ್ತಿತ್ತು. 1955ರ ನಂತರ ದೆಹಲಿಯ ರಾಜ ಪಥದಲ್ಲಿ ಆಚರಣೆಯು ಪ್ರಾರಂಭಗೊಂಡಿದೆ. ಈ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಮೊದಲ ಅತಿಥಿ ಪಾಕಿಸ್ತಾನದ ಮೊದಲ ನಾಯಕ ಗೌವರ್ನರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮದ್ ಆಗಿದ್ದರು.
* ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಪಾಕ್‌ನ ಕೊನೆಯ ಗಣ್ಯರು – 1965ರಲ್ಲಿ ಪಾಕಿಸ್ತಾನದ ಅಂದಿನ ಕೃಷಿ ಮತ್ತು ಆಹಾರ ಸಚಿವ ರಾಣಾ ಅಬ್ದುಲ್ ಹಮೀದ್.
ಗಣರಾಜ್ಯೋತ್ಸವ ಆಚರಣೆಯ ಹಿನ್ನಲೆ
1929ರಲ್ಲಿ ಜವಾಹರ್ ಲಾಲ್ ನೆಹರೂ ಅಧ್ಯಕ್ಷತೆಯಲ್ಲಿ ಲಾಹೋರ್‌ನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ 1930ರ ಜನವರಿ 26ನ್ನು ಪೂರ್ಣ ಸ್ವರಾಜ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. 1949ರ ನವೆಂಬರ್ 26 ರಂದು ಸಂವಿಧಾನ ರಚನಾ ಸಭೆಯು ಸಂವಿಧಾನಕ್ಕೆ ಅನುಮೋದನೆ ನೀಡಿತ್ತು. ಆದರೆ ಪೂರ್ಣ ಸ್ವರಾಜ್ಯ ಘೋಷಣೆಯಾದ ಜನವರಿ 26ರ ನೆನಪಿಗಾಗಿ 1950ರ ಜನವರಿ 26ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಇದೇ ದಿನ ಭಾರತದ ಮೊದಲ ರಾಷ್ಟ್ರಪತಿಯಾಗಿ ಡಾ|| ಬಾಬು ರಾಜೇಂದ್ರ ಪ್ರಸಾದ್ (ಸಂವಿಧಾನ ರಚನಾ ಸಭೆ ಅಧ್ಯಕ್ಷರು) ಅವರು ಅಧಿಕಾರ ವಹಿಸಿಕೊಂಡರು.
ಸಂವಿಧಾನ ದಿವಸ್ : ನವೆಂಬರ್ 26 (2015ರಿಂದ)
ಭಾರತದಲ್ಲಿ 2 ವರ್ಷ 11 ತಿಂಗಳು 18 ದಿವಸಗಳ ಪರಿಶ್ರಮದ ಫಲವಾಗಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿ ಅಧ್ಯಕ್ಷತೆಯಲ್ಲಿ ಸಿದ್ಧವಾದ ಸಂವಿಧಾನವನ್ನು ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದ ರಚನಾ ಸಭೆಯು 1949ರ ನವೆಂಬರ್ 26 ರಂದು ಅಂಗೀಕರಿಸಿದ ಹಿನ್ನೆಲೆಯಲ್ಲಿ ನವೆಂಬರ್ 26 ಅನ್ನು ಸಂವಿಧಾನ ದಿವಸವಾಗಿ 2015 ರಿಂದ ಆಚರಣೆ ಮಾಡಲಾಗುತ್ತಿದೆ.
ಅಯೋಧ್ಯೆ ರಾಮಮಂದಿರ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ
ಉತ್ತರ ಪ್ರದೇಶ ರಾಜ್ಯವು
ಗಣರಾಜ್ಯೋತ್ಸವ ದ ಪಥಸಂಚಲನದಲ್ಲಿ ಅಯೋಧ್ಯೆಯ ಪ್ರಾಚೀನ ಪರಂಪರೆಯನ್ನು ಬಿಂಬಿಸುವ “ಅಯೋಧ್ಯೆ: ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ” (Ayodhya: The Cultural
Heritage Of Uttar Pradesh) ಎಂಬ ಹೆಸರಿನಲ್ಲಿ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿತ್ತು( Replica Of Ram Temple-Ayodhya), ಈ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ದೊರೆತಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮಾದರಿಯ ಮುಂದೆ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ರವರು ಕುಳಿತಿರುವ ಟ್ಯಾಬ್ ದೇಶದ ಜನತೆಯ ಗಮನವನ್ನು ಸೆಳೆದಿತ್ತು. ಸತತವಾಗಿ 2ನೇ ವರ್ಷ ಉತ್ತರ ಪ್ರದೇಶ ರಾಜ್ಯವು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಪ್ರಶಸ್ತಿ ಪಡೆದ ಟ್ಯಾಬ್ಲೆ - ತ್ರಿಪುರ (Tripura)
ಸಾಮಾಜಿಕ ಆರ್ಥಿಕ ವಲಯದಲ್ಲಿ ಪರಿಸರ ಸ್ನೇಹಿಯಾಗಿ ಆತ್ಮ ನಿರ್ಭರತೆ ಸಾಧಿಸುವ ಕುರಿತ (Eco-Friendly and Aatma Nirbhar)ತ್ರಿಪುರದ ಸ್ತಬ್ಧಚಿತ್ರಕ್ಕೆ 2ನೇ ಸ್ಥಾನ ದೊರೆತಿದೆ.
ತೃತೀಯ ಪ್ರಶಸ್ತಿಗೆ ಭಾಜನವಾದ ಟ್ಯಾಬ್ಲೆ - ಉತ್ತರಾಖಂಡ “Dev Bhoomi - The Land Of The Gods' ಹೆಸರಿನ ಸ್ತಬ್ಧಚಿತ್ರ ಪ್ರದರ್ಶಿಸಿದ ಉತ್ತರಾಖಂಡ ರಾಜ್ಯಕ್ಕೆ 2021ರ ಗಣರಾಜ್ಯೋತ್ಸವದ ಟ್ಯಾಬ್ಲೆ ಪ್ರದರ್ಶನದಲ್ಲಿ ಮೂರನೇ ಪ್ರಶಸ್ತಿ ದೊರೆತಿದೆ.
ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರ ವಿಜಯನಗರ ಸಾಮ್ರಾಜ್ಯದ ಗತವೈಭವ
ರಾಜ್ಯದ ಸ್ತಬ್ಧಚಿತ್ರವಾಗಿ ವಿಜಯನಗರ (City of Victory)
ಕರ್ನಾಟಕ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧ ಚಿತ್ರವು ಪಾಲ್ಗೊಂಡಿತ್ತು. ರಾಜ್ಯದ ವಾರ್ತಾ ಇಲಾಖೆಯು ಈ ಸ್ತಬ್ಧ ಚಿತ್ರವನ್ನು ತಯಾರಿಸಿತ್ತು, ವಿಜಯನಗರ ಸಾಮ್ರಾಜ್ಯದ ಗತವೈಭವ ಸ್ತಬ್ಧಚಿತ್ರದಲ್ಲಿ ಹನುಮಂತನ ಮಾತಂಗ ಪರ್ವತ, ಶ್ರೀಕೃಷ್ಣ ದೇವರಾಯನ ಪಟ್ಟಾಭಿಷೇಕ ಕಾರ್ಯಕ್ರಮ, ಹಂಪಿಯ ಹಜಾರ ರಾಮ ದೇಗುಲ ಮತ್ತು ಉಗ್ರ ನರಸಿಂಹನ ಆಕೃತಿ ಈ ಸ್ತಬ್ಧಚಿತ್ರದ ಪ್ರಮುಖ ಆಕರ್ಷಣೆಗಳಾಗಿದ್ದವು.
ಹಂಪಿಯ ಕಲ್ಲಿನ ರಥ, ವಿಜಯ ವಿಠಲ ದೇವಸ್ಥಾನದ ಸಪ್ತ ಸ್ವರ ಮಂಟಪ, ಉಗ್ರ ನರಸಿಂಹ ಸ್ಮಾರಕ, ಅಂಜನಾದ್ರಿ ಬೆಟ್ಟದ ಮೇಲೆ ಹನುಮಂತ ನಿಂತಿರುವುದನ್ನು ಸ್ತಬ್ಧಚಿತ್ರ ಒಳಗೊಂಡಿರಲಿದೆ. ಇದರ ಜತೆಗೆ ವಿದೇಶಿ ಪ್ರವಾಸಿಗರ ವೇಷಧಾರಿಗಳು, 1509 ರಲ್ಲಿ ಶ್ರೀಕೃಷ್ಣ ದೇವರಾಯನಿಗೆ ನಡೆದ ಪಟ್ಟಾಭಿಷೇಕದ ಅನಾವರಣವನ್ನು ಪ್ರದರ್ಶಿಸಲಾಗಿತ್ತು, ಕತ್ತಿ ಗುರಾಣಿ ಹಿಡಿದ ಮಹಿಳಾ ಯೋಧರ ಜತೆಗೆ ಚಾಮರ ಹಿಡಿದ ಪುರುಷರು ಇದ್ದರು. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ಮಹಿಳಾ ಯೋಧರಿದ್ದರು ಎಂಬುದನ್ನು ಈ ಮೂಲಕ ವಿಶ್ವಕ್ಕೆ ಸಾರಲಾಯಿತು. ಪ್ರವೀಣ್ ಡಿ ರಾವ್ ಮತ್ತು ತಂಡ ಹಿನ್ನಲೆ ಸಂಗೀತ ನೀಡಿದೆ.
ಉತ್ತರ ಪ್ರದೇಶದ ಗೋರಕ್ ಪುರ ದಲ್ಲಿ ನಡೆದ ಚೌರಿ ಚೌರ ಘಟನೆ ನಡೆದು 2021 ಫೆಬ್ರವರಿ ನಾಲ್ಕರಂದು ರಂದು ತನ್ನ ಶತಮಾನವನ್ನು ಪೂರ್ಣಗೊಳಿಸಿದ್ದು
ಕಾರ್ಯಕ್ರಮವನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಚೌರಿ ಚೌರ ಶತಮಾನೋತ್ಸವ ವರ್ಷದ ಆರಂಭದ ಹಿನ್ನೆಲೆಯಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಒಂದು ಘಟನೆಗಾಗಿ 19 ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸಿದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆ. ಹೆಚ್ಚು ಪರಿಚಿತರಲ್ಲದೆ ಹುತಾತ್ಮರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಕತೆಗಳನ್ನು ರಾಷ್ಟ್ರಕ್ಕೆ ತಿಳಿಸಲು ನಾವು ಮಾಡುವ ಪ್ರಯತ್ನ ಅವರಿಗೆ ನೀಡುವ ನಿಜವಾದ ಗೌರವವಾಗಿದೆ. ಹುತಾತ್ಮರಾದ ಹೋರಾಟಗಾರರ ರಕ್ತವು ದೇಶದ ಮಣ್ಣಿನಲ್ಲಿ ಬೆರೆತಿದೆ ಮತ್ತು ನಮಗೆ ಸ್ಫೂರ್ತಿ ನೀಡುತ್ತದೆ ಎಂದರು. 2022 ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಶತಮಾನೋತ್ಸವ ಕಾರ್ಯಕ್ರಮವು ವಿಶೇಷವಾಗಿದೆ. ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೋದಿ : ಚೌರಿ ಚೌರ ಘಟನೆಯ ಹುತಾತ್ಮರ ಬಗ್ಗೆ ಹೆಚ್ಚು ಚರ್ಚೆಗಳೇ ನಡೆದಿಲ್ಲ. ಇದು ಸ್ವಾತಂತ್ರ್ಯ ನಂತರದ ದುರಾದೃಷ್ಟಕರ ಸಂಗತಿ, ಚೌರಿ ಚೌರ ಘಟನೆಯು ಜನಸಾಮಾನ್ಯನ ಸ್ವಯಂ ಪ್ರೇರಿತ ಹೋರಾಟವಾಗಿತ್ತು. ಈ ಶತಮಾನೋತ್ಸವವನ್ನು ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಹಾಗೂ ಆತ್ಮನಿರ್ಭರ ಭಾರತದೊಂದಿಗೆ ಜೋಡಿಸಲಾಗುತ್ತಿರುವುದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಉತ್ತರಪ್ರದೇಶ ರಾಜ್ಯ ಸರ್ಕಾರವು ಈ ಕಾರ್ಯಕ್ರಮವನ್ನು 2021ರ ಫೆಬ್ರವರಿ 4 ರಿಂದ 2022ರ ಫೆಬ್ರವರಿ 4ರ ವರೆಗೆ ರಾಜ್ಯದ 75 ಜಿಲ್ಲೆಗಳಲ್ಲೂ ಆಚರಿಸಲು ಸಿದ್ಧತೆ ನಡೆಸಿದೆ. ಉತ್ತರ ಪ್ರದೇಶ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಹುತಾತ್ಮರ ಗೌರವಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
1922ರ ಫೆಬ್ರವರಿ 4 ರಂದು ಉತ್ತರಪ್ರದೇಶ ರಾಜ್ಯದ ಗೋರಖ್ ಪುರ ಜಿಲ್ಲೆಯ ಚೌರಿ ಚೌರದಲ್ಲಿ ಅಸಹಕಾರ ಚಳವಳಿಯ ಹೋರಾಟಗಾರರು 22 ಮಂದಿ ಪೊಲೀಸರನ್ನು ಸಜೀವವಾಗಿ ಸುಟ್ಟರು. ಈ ಘಟನೆ ಹಿನ್ನೆಲೆಯಲ್ಲಿ 1920 ಅಂದ ಆರಂಭವಾಗಿದ್ದ ಅಸಹಕಾರ ಚಳವಳಿಯನ್ನು ಗಾಂಧೀಜಿಯವರು 1922ರ ಫೆಬ್ರವರಿ 12 ರಂದು ಹಿಂತೆಗೆದುಕೊಂಡರು. ಅವರು ಚೌರಿಚೌರ ಘಟನೆಯ ಆರೋಪದ ಮೇಲೆ 228 ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗ 6 ಜನ ಮರಣ ಹೊಂದಿದ್ದು, ಅಪರಾಧ ಸಾಬೀತಾದ ನಂತರ 172 ಜನರನ್ನು ಗಲ್ಲಿಗೇರಿಸಿದ ಈ ಘಟನೆಯನ್ನು ಕಮ್ಯುನಿಸ್ಟ್ ನಾಯಕ ಎಂ.ಎನ್. ರಾಯ್ ಕಾನೂನು ಬದ್ಧ ಕೊಲೆ ಎಂದು ನಿರೂಪಿಸಿದರು. ಚೌರಿಚೌರ ಹುತಾತ್ಮರ ಸ್ಮಾರಕವನ್ನು ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಿರ್ಮಿಸಲಾಗಿದೆ.
ಚೌರಿಚೌರ ಎಕ್ಸ್‌ಪ್ರೆಸ್ (Chauri Chaura Express):
ಅನ್ವರ್‌ಗಂಜ್‌ನಿಂದ ಗೋರಖ್‌ಪುರ ಜೆಂಕ್ಷನ್‌ವರೆಗೆ ಭಾರತೀಯ ರೈಲ್ವೆಯ ಈಶಾನ್ಯ ರೈಲ್ವೆ ವಲಯದ ವತಿಯಿಂದ ಚೌರಿ ಚೌರ ಘಟನೆಯ ನಂತರ ಮರಣದಂಡನೆಗೊಳಗಾದವರನ್ನು ಗೌರವಿಸಲು ಹೆಸರಿನಲ್ಲಿ ರೈಲ್ವೆ ಸೇವೆಯನ್ನು ಆರಂಭಿಸಿತು. ಚೌರಿಚೌರ ಎಕ್ಸ್‌ಪ್ರೆಸ್
ಕರ್ನಾಟಕದ ಜಲಿಯನ್ ವಾಲಾಬಾಗ್-ವಿದುರಾಶ್ವತ್ಥ : 1938ರ ಏಪ್ರಿಲ್ 25 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಸತ್ಯಾಗ್ರಹಿಗಳ ಮೇಲೆ ಗೋಲಿಬಾರ್ ನಡೆಸಿದ್ದು, ಸುಮಾರು 35 ಮಂದಿ ಸತ್ಯಾಗ್ರಹಿಗಳು ಸಾವನ್ನಪ್ಪಿದ್ದರು. ಈ ದುರಂತವನ್ನು ದಕ್ಷಿಣ ಭಾರತದ ಅಥವಾ ಕರ್ನಾಟಕ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎನ್ನಲಾಗಿದೆ. ಕರ್ನಾಟಕದ ಬಾರ್ಡೋಅ - ಅಂಕೋಲಾ : 1930ರ ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ಗುಜರಾತ್‌ನ ಸಬರಮತಿ ಆಶ್ರಮದಿಂದ ದಂಡಿಯವರೆಗೆ ಗಾಂಧೀಜಿಯವರು 78 ಮಂದಿ ಅನುಯಾಯಿಗಳೊಂದಿಗೆ ಕ್ರಮಿಸಿ, ಬ್ರಿಟಿಷರ ಉಪ್ಪಿನ ಕಾನೂನನ್ನು ಮುರಿದು ಉಪ್ಪನ್ನು ತಯಾರಿಸಿದ ಘಟನೆಯನ್ನು ದಂಡಿ ಉಪ್ಪಿನ ಸತ್ಯಾಗ್ರಹ ಎನ್ನುವರು. ಇದು ಕಾನೂನುಭಂಗ ಚಳವಳಿಯ ಭಾಗವಾಗಿದೆ. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದ ಮೈಲಾರ ಮಹದೇವಪ್ಪ ಭಾಗವಹಿಸಿದ್ದರು. 1930ರಲ್ಲಿ ಕರ್ನಾಟಕದ ಅಂಕೋಲಾದಲ್ಲಿ ಎಂ.ಪಿ. ನಾಡಕರ್ಣಿ ಅಧ್ಯಕ್ಷತೆಯಲ್ಲಿ ಉಪ್ಪಿನ ಸತ್ಯಾಗ್ರಹ ಜರುಗಿದೆ.
unded sebale (Non Cooperation Movement)
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ 1920 ರಿಂದ 1922ರವರೆಗೆ ಅಸಹಕಾರ ಚಳುವಳಿಯು ಮಹತ್ವದ ಘಟ್ಟವಾಗಿತ್ತು. ಈ ಚಳುವಳಿ ಸಂದರ್ಭದಲ್ಲಿ ಗಾಂಧೀಜಿಯವರು ಕೈಸರ್ ಇ-ಹಿಂದ್ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರು ಬ್ರಿಟಿಷ್ ಸರ್ಕಾರ ನೀಡಿದ್ದ ನೈಟ್ ಹುಡ್ ಪದವಿಗಳನ್ನು ಹಿಂತಿರುಗಿಸಿದರು. ಶಾಲಾ ಕಾಲೇಜು ಬಹಿಷ್ಕಾರ, ರಾಷ್ಟ್ರೀಯ ಶಾಲೆಗಳ ಪ್ರಾರಂಭ, ವಕೀಲರಿಂದ ನ್ಯಾಯಾಲಯ ಬಹಿಷ್ಕಾರ, 1919ರ ಸುಧಾರಣೆಯಂತೆ ನಡೆಸಲಾದ ಚುನಾವಣೆ ಬಹಿಷ್ಕಾರ ಕ್ರಮಗಳು ಜರುಗಿದ್ದವು.
ರೌಲತ್ ಕಾಯ್ದೆ (Rowlatt Act):
1919ರಲ್ಲಿ ಆಜ್ಞಾಪತ್ರವಿಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವ, ವಿಚಾರಣೆ ಇಲ್ಲದೆ ಅನಿರ್ದಿಷ್ಟಾವಧಿ ಅವಧಿಯವರೆಗೆ ಸೆರೆಮನೆಯಲ್ಲಿ ಇರಿಸುವ ರೌಲತ್ ಕಾಯ್ದೆಯನ್ನು ಬ್ರಿಟಿಷ್ ಸರ್ಕಾರ ರೂಪಿಸಿತ್ತು. ಈ ಕಾಯ್ದೆಯ ವಿರುದ್ಧ 1919ರ ಏಪ್ರಿಲ್ 13 ರಂದು ಅಮೃತಸರದ ಸ್ವರ್ಣಮಂದಿರದ ಸಮೀಪ ಜಲಿಯನ್ ವಾಲಾಬಾಗ್ ಉದ್ಯಾನವನದಲ್ಲಿ ಸಭೆ ಸೇರಿತ್ತು. ಅಮೃತಸರದ ರಕ್ಷಣಾ ಪಾಲಕನಾಗಿದ್ದ ಜನರಲ್ ಓ ಡಯರ್ ಎಂಬ ವ್ಯಕ್ತಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದು, 379 ಜನ ಪ್ರಾಣ ಕಳೆದುಕೊಂಡರು. ಇಂತಹ ದುರಂತದ ಘಟನೆಗೆ ಕಾರಣನಾದ ಜನರಲ್ ಡಯರ್‌ನನ್ನು ಕ್ರಾಂತಿಕಾರಿ ಉದಾಮ್‌ಸಿಂಗ್ ಹತ್ಯೆ ಮಾಡಿದನು. ಈ ಘಟನೆಯನ್ನು
ಗಾಂಧೀಜಿಯವರು ಹಿಮಾಲಯನ್ ಬ್ಲಂಡರ್ ಎಂದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ : 2019ರ ಏಪ್ರಿಲ್ 13 ರಂದು ಭಾರತದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ ಪೂ ಹಿನ್ನೆಲೆಯಲ್ಲಿ ದೇಶದಾದ್ಯಂತ ದುರಂತದಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸಿದರು.
ಹಂಟರ್ ಆಯೋಗ: ಜಲಿಯನ್ ವಾಲಾಬಾಗ್ಹತ್ಯಾಕಾಂಡದ ವಿಚಾರಣೆಗಾಗಿ 1919ರ ಅಕ್ಟೋಬರ್ 14 ರಂದು ಲಾರ್ಡ್ ಹಂಟರ್ ಅವರ ಅಧ್ಯಕ್ಷತೆಯಲ್ಲಿ ಹಂಟರ್ ಆಯೋಗವನ್ನು ನೇಮಿಸಲಾಗಿತ್ತು.
ಕರ್ನಾಟಕದ ಮೊದಲ ಸ್ವಾತಂತ್ರ್ಯ ಘೋಷಿತ ಗ್ರಾಮ - ಈಸೂರು : 1942ರ ಚಲೇಜಾವ್ ಚಳವಳಿಯ ಸಂಘಟನೆಯನ್ನು ಕರ್ನಾಟಕದ ಈಸೂರು ಗ್ರಾಮ ಆಯೋಜಿಸಿದ್ದು, ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮವು ರಾಜ್ಯದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಮೊದಲ ಗ್ರಾಮವಾಗಿದೆ.