mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Tuesday, 11 May 2021

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ

        2020ರ ಫೆಬ್ರವರಿ 5 ರಿಂದ 7 ರವರೆಗೆ ಕಲಬುರಗಿಯ ಗುಲ್ಬರ್ಗಾ ವಿವಿ ಆವರಣದಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರು ವಹಿಸಿದ್ದರು. ಕಲ್ಯಾಣ ಕರ್ನಾಟಕದ ಕೇಂದ್ರ ಕಚೇರಿ' ಶರಣರ ನಾಡು ಕಲಬುರಗಿಯಲ್ಲಿ ಈ ಸಮ್ಮೇಳನವು ವೈಭವದಿಂದ ಜರುಗಿತ್ತು. ಈ ಸಮ್ಮೇಳನದಲ್ಲಿ ಕಲಬುರಗಿಯ ಐತಿಹಾಸಿಕ ತಾಣ ಮತ್ತು ಕವಿರಾಜ ಮಾರ್ಗ ಕೃತಿಯ ಚಿತ್ರಣದ ಲಾಂಛನವಿತ್ತು. ಕನ್ನಡಾಂಬೆಯ ಭಾವಚಿತ್ರದೊಂದಿಗೆ ಸ್ಥಳೀಯ ಪ್ರಸಿದ್ಧ ಹಜರತ್ ಖಾಜಾ ಬಂದೆ ನವಾಜ್ ದರ್ಗಾ, ಶರಣ ಬಸವೇಶ್ವರ ದೇವಾಲಯ, ಕಲಬುರಗಿ ಕೋಟೆ, ಚರ್ಚ್, ಬೌದ್ಧವಿಹಾರ & ಕಲಬುರಗಿಯ ತೊಗರಿ ಬೆಳೆ ಚಿತ್ರಗಳನ್ನು ಈ ಲಾಂಛನದಲ್ಲಿ ಬಳಸಲಾಗಿತ್ತು.


ಸಾಹಿತ್ಯ ಸಮ್ಮೇಳನ ಮುಂದೂಡಿ……………


   2021ರ ಫೆಬ್ರವರಿ ಅಂತ್ಯದಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಗಬೇಕಿರುವ ಪೂರ್ವಸಿದ್ಧತೆಗಳು ಅಪೂರ್ಣವಾಗಿದ್ದು ಕೋವಿಡ್ ನಿಯಮಗಳ ಪಾಲನೆಯು ಕಷ್ಟಕರವಾಗುತ್ತಿದೆ ಎಂಬ ಕಾರಣಕ್ಕೆ ಈ ಸಮ್ಮೇಳನವನ್ನು ಮುಂದೂಡಲಾಗಿದೆ. 2021ರ ಫೆಬ್ರವರಿ 5ರಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು  ಕೈಗೊಳ್ಳಲಾಗಿದೆ. 2021 ಮಾರ್ಚ್ ೨ರಂದು ನಡೆಯುವ ಸಭೆಯಲ್ಲಿ 86ನೇ ಸಮ್ಮೇಳನದ ದಿನಾಂಕವನ್ನು ನಿರ್ಧರಿಸಲಾಗುವುದು ಎನ್ನಲಾಗಿದೆ.


       ಕನ್ನಡ ಸಾಹಿತ್ಯ ಪರಿಷತ್ (ಕಸಾಪ)


*ಸ್ಥಾಪನೆ: 1915 ಮೇ 5, 

* ಕೇಂದ್ರ ಕಛೇರಿ:- ಬೆಂಗಳೂರು 

*ಸ್ಥಾಪಕರು: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ & ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ


ಪ್ರಸ್ತುತ ಅಧ್ಯಕ್ಷರು: ಮನು ಬಳಿಗಾರ್ 

ಧೈಯವಾಕ್ಯ: ಮನುಷ್ಯ ಜಾತಿ ತಾನೊಂದೆ ವಲಂ, 

ಕಸಾಪ ಸಂಸ್ಥೆಯು ಬಿಎಂಟಿಸಿ ಸಹಯೋಗದಲ್ಲಿ ನೃಪತುಂಗ ಪ್ರಶಸ್ತಿಯನ್ನು ನೀಡುತ್ತದೆ. ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಖ್ಯಾತಿಯ ನೃಪತುಂಗ ಪ್ರಶಸ್ತಿಗೆ 

2020ರಲ್ಲಿ ಡಾ.ಜಿ.ಎಸ್. ಆಮೂರ ಅವರು ಭಾಜನರಾಗಿದ್ದರು. 


2019ರಲ್ಲಿ ಚನ್ನವೀರ ಕಣವಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.



ಉತ್ತರಾಖಂಡದಲ್ಲಿ ನೀರ್ಗಲ್ಲು ಸ್ಫೋಟ (Uttarakhand Glacier Burst)

      


 2021ರ ಫೆಬ್ರವರಿ 7 ರಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ಚಮೋಲಿ (Chamoli) ಜಿಲ್ಲೆಯಲ್ಲಿ ದೈತ್ಯ ನೀರ್ಗಲ್ಲು ಸ್ಫೋಟಗೊಂಡ ಪರಿಣಾಮ ಭಾರೀ ಹಿಮಪ್ರವಾಹ ಹಾಗೂ ನೆರೆ ಉಂಟಾಗಿ 170 ಕಾರ್ಮಿಕರು ಮೃತಪಟ್ಟಿದ್ದು, ಸುಮಾರು 175 ಮಂದಿ ನಾಪತ್ತೆಯಾಗಿದ್ದಾರೆ. ನಂದಾದೇವಿ ನೀರ್ಗಲ್ಲಿನ ಒಂದು ಭಾಗ ತುಂಡಾಗಿ ಅದರ ಅಡಿಯಲ್ಲಿ ಶೇಖರಣೆಗೊಂಡಿದ್ದ ನೀರು, ಭಾರೀ ಹಿಮ ಸಮೇತ ಕಣಿವೆಗಳ ಮೂಲಕ ರಭಸವಾಗಿ ನುಗ್ಗಿತ್ತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ರಿಷಿ ಗಂಗಾ

ಮತ್ತು ಮೌಲಿ ಗಂಗಾ ನದಿಗಳಿಗೆ ಸೇರ್ಪಡೆಗೊಂಡು ದೈತ್ಯ ಪ್ರವಾಹ ಸೃಷ್ಠಿಯಾಗಿತ್ತು. ನದಿ ಪಾತ್ರದ ಕಣಿವೆಯುದ್ದಕ್ಕೂ ಇದ್ದ ಸೇತುವೆಗಳು, ದಡದಲ್ಲಿದ್ದ ಕಟ್ಟಡಗಳು, ಬೃಹತ್ ಕಲ್ಲು ಬಂಡೆಗಳು, ಮಣ್ಣಿನ ರಾಶಿಯನ್ನು ಕೊಚ್ಚಿಕೊಂಡು ಪ್ರವಾಹ ಮುನ್ನುಗ್ಗಿತು. ಈ ಘಟನೆಯು 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಜಲ ಪ್ರಳಯವನ್ನು ಜ್ಞಾಪಿಸುವಂತಿತ್ತು.

    ಉತ್ತರಾಖಂಡದಲ್ಲಿ ಸಂಭವಿಸಿರುವುದು

 Glacier

ಉತ್ತರಾಖಂಡದಲ್ಲಿ ಸಂಭವಿಸಿರುವುದು ಹಿಮಪಾತವೋ ಅಥವಾ ಸ್ಟೇಷಿಯರೋ ಎಂದು ಸ್ಪಷ್ಟವಾದ ಮಾಹಿತಿಯಿಲ್ಲ. ಇದು ಹಿಮ ಹರಿಯುವ ಋತುಮಾನವಲ್ಲ. ಹೀಗಾಗಿ ಹಿಮಪಾತ Glacier ಆಗಿರುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಈ ಪ್ರದೇಶದಲ್ಲಿ ಯಾವುದೇ ಭೂಕಂಪವಾಗದೇ ಇರುವುದರಿಂದ ಗ್ಲೀಷಿಯರ್ ಬ್ರೇಕ್ ಕೂಡ ಆಗಿಲ್ಲ ಎಂದು ತಜ್ಞರು ಹೇಳಿದ್ದಾರೆ.


       ಹಿಮಪಾತ ಅಥವಾ ಅವಲಾಂಜ್ (Avalanche) ಬಗ್ಗೆ ಮಾಹಿತಿ: ಕಡಿದಾದ ಪರ್ವತಗಳ ಮೇಲೆ ಶೇಖರಣೆಯಾಗಿರುವ ಹಿಮರಾಶಿಯು ತಗ್ಗಿನತ್ತ ನುಗ್ಗಿ ಬರುವುದನ್ನು ಹಿಮಪಾತ ಎನ್ನಲಾಗುತ್ತದೆ. ಹಿಮ ಪರ್ವತಗಳ ಮೇಲೆ ಪದರ ಪದರವಾಗಿ ಹಿಮ ಶೇಖರಣೆಯಾಗುತ್ತಾ ಹೋಗಿ ಯಾವುದೋ ಒಂದು ಹಂತದಲ್ಲಿ ಆ ಹಿಮದ ಭಾರವನ್ನು ಕೆಳಗಿನ ಪದರ ಸಹಿಸಲಾಗದೆ ಕುಸಿಯುತ್ತದೆ. ಆಗ ಇಡೀ ಹಿಮಬೆಟ್ಟವೇ ಕುಸಿದಂತೆ ಪ್ರಪಾತಕ್ಕೆ ಹಿಮದ ಹೊಳೆ ಹರಿದು ಬರುತ್ತದೆ. ಇದನ್ನೇ ಹಿಮಪಾತ ಅಥವಾ ಅವಲಾಂಚ್ ಎನ್ನುವರು. ಹಿಮಪಾತಕ್ಕೆ ಸಿಲುಕುವ ಶೇ. 95 ಮಂದಿ ಮೃತಪಡುತ್ತಾರೆ. ಹಿಮರಾಶಿಯ ಮಧ್ಯದಲ್ಲಿ ಸಿಲುಕಿ ಉಸಿರುಗಟ್ಟುವುದರಿಂದ ಸಾವು ಸಂಭವಿಸುತ್ತದೆ.


Centre for Snow and Avalanche Study Estab lishment (SASE): ಚಂಡಿಗಡ


       ಹಿಮ ಮತ್ತು ಅವಲಾಂಚ್ ಈ ಅಧ್ಯಯನ ಕೇಂದ್ರವು ಚಂಡೀಗಢದಲ್ಲಿದೆ. 1991 ರಿಂದ ಈಚೆಗೆ ಕೆಳ ಹಿಮಾಲಯ ಭಾಗದಲ್ಲಿ ಸರಾಸರಿ ಉಷ್ಣ ತಾಪಮಾನ 0.65 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಎಂದು ದಾಖಲಿಸಿದೆ. 1940 ರಿಂದ 1960 ರವರೆಗೆ ಯಾವುದೇ ಅವಲಾಂಚ್ ದಾಖಲಾಗಿಲ್ಲ, ಆದರೆ 1970 ರಿಂದ ಈಚೆಗೆ ಸರಾಸರಿ ವರ್ಷಕ್ಕೊಂದು ಅವಲಾಂಚ್ ದಾಖಲಾಗುತ್ತಿದೆ. 

                   ಗ್ಲೀಷಿಯರ್‌ ಬ್ರೇಕ್: 

  ಕೆಲವೊಮ್ಮೆ ಸ್ಟೇಷಿಯರ್‌ಗಳ ನಡುವೆ ಹಿಮದ ಕೊಳಗಳು ನಿರ್ಮಾಣವಾಗುತ್ತವೆ. ಈ ಕೊಳಗಳಲ್ಲಿ ಭೂಕಂಪ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಭಾರೀ ಒತ್ತಡದ ಚಲನೆ ಉಂಟಾದಾಗ ಅವುಗಳ ಅಂಚು ಕುಸಿದು, ಆ ಕೊಳ ಪ್ರಪಾತಕ್ಕೆ ಹರಿದು ಬರಬಹುದು. ಇದನ್ನು ಕ್ಲೀಷಿಯರ್ ಬ್ರೇಕ್ (Glacier Break) ಎನ್ನುತ್ತಾರೆ.


ಹಿಮ ಪ್ರವಾಹಕ್ಕೆ ಕೊಚ್ಚಿಹೋದ ಪ್ರಮುಖ ವಿದ್ಯುತ್ ಘಟಕಗಳು


ದೌಲಿ ಗಂಗಾನದಿಗೆ (Dhauliganga River) ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ತಪೋವನ್ ವಿದ್ಯುತ್ ಘಟಕ ( (Tapovan Power Project) ಹಾಗೂ ರಿಷಿ ಗಂಗಾ ನದಿಗೆ ಅಡ್ಡಲಾಗಿ ನಿಲ್ಲಿಸಲಾಗಿರುವ ರಿಷಿ ಗಂಗಾ ವಿದ್ಯುತ್ ಘಟಕಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.200 ಕಾರ್ಮಿಕರು ಪ್ರವಾಹದ ವೇಳೆ ಈ ಎರಡೂ ಘಟಕಗಳ ಸುಮಾರು  ಕಾಮಗಾರಿಯಲ್ಲಿ ತೊಡಗಿದ್ದರು. ಈ ಕಾರ್ಮಿಕರು ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. 


ರಿಷಿ ಗಂಗಾ ಜಲವಿದ್ಯುತ್ ಯೋಜನೆ (Rishi Ganga Power Project)

      ಹಿಮಪಾತದಿಂದ ಹಾನಿಗೀಡಾಗಿರುವ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ವಲಯ ಆರಂಭದಿಂದಲೂ ವಿವಾದಕ್ಕೆ ಒಳಗಾಗಿದೆ. ಈ ಯೋಜನೆಯು ಪರಿಸರ ಸೂಕ್ಷ್ಮವ ಹಾಗೂ ಜೀವ ವೈವಿಧ್ಯತೆಗೆ ಧಕ್ಕೆ ತರಲಿದೆ ಎಂದು ವಾದಿಸಿ ಉತ್ತರಾಖಂಡದ ಹಲವು ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಐತಿಹಾಸಿಕ ಚಿಸ್ಕೋ ಚಳುವಳಿ ನಾಯಕಿ ಗೌರಾದೇವಿ ಮುಂತಾದವರು ಓಡಾಡಿದ ಪ್ರದೇಶವನ್ನೂ ಕೂಡಾ ಈ ಖಾಸಗಿ ಕಂಪನಿಯು ಸಾರ್ವಜನಿಕರಿಂದ ನಿರ್ಬಂಧಿಸಿದೆ ಎಂದು ಪ್ರಕರಣ ದಾಖಲಾಗಿತ್ತು.


ರಕ್ಷಣಾ ಕಾರ್ಯ (Rescue Operation): 

    5 ಎನ್‌ಡಿಆರ್‌ಎಫ್ ತಂಡಗಳು, ಉತ್ತರಾಖಂಡ ರಾಜ್ಯದ ವಿಪತ್ತು ನಿರ್ವಹಣಾ ತಂಡ, ಐಟಿಬಿಪಿ, ಭೂಸೇನೆ, ವಾಯುಪಡೆ ಜಂಟಿಯಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿವೆ. ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿಯಲ್ಲಿ ಸಿಲುಕಿದ್ದ 20 ಮಂದಿಯನ್ನು ರಕ್ಷಿಸಲಾಗಿದೆ. ಸೇನಾ ಹೆಲಿಕಾಪ್ಟರ್‌ ಮೂಲಕ ಹಲವರನ್ನು ರಕ್ಷಿಸಲಾಗಿದೆ.


ನೀರ್ಗಲ್ಲು ಸ್ಪೋಟದ ಪ್ರವಾಹದ ಸಂತ್ರಸ್ತರಿಗೆ ಪರಿಹಾರ: ಮೃತಪಟ್ಟವರಿಗೆ ಕೇಂದ್ರದಿಂದ 2 ಲಕ್ಷ ರೂ., ರಾಜ್ಯ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.


            ನೀರ್ಗಲ್ಲು ಸ್ಫೋಟಕ್ಕೆ ಕಾರಣ: 

     ತಾಪಮಾನ ಏರಿಕೆಯು ನೀರ್ಗಲ್ಲು ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಬಿಸಿ ಹೆಚ್ಚಿದಂತೆ ಹಿಮ ಬಂಡೆಯ ಒಳಭಾಗದಲ್ಲಿ ಹೆಪ್ಪುಗಟ್ಟಿದ್ದ ನೀರು ಕರಗಿ ಸುತ್ತಲೂ ಮಂಜುಗಡ್ಡೆ ಆವರಿಸಿದ ಬೃಹತ್ ಹಿಮಸಾಗರದಂತೆ ಮಾರ್ಪಟ್ಟಿರುತ್ತದೆ. ತಾಪಮಾನ ಮತ್ತಷ್ಟು ಹೆಚ್ಚಾದಂತೆ ಸುತ್ತಲಿನ ಮಂಜುಗಡ್ಡೆ ದುರ್ಬಲಗೊಂಡು ಒಳಗಿರುವ ನೀರು ಒಮ್ಮೆಲೇ ಅಣೆಕಟ್ಟು ಹೊಡೆದ ರೀತಿಯಲ್ಲಿ ಸ್ಫೋಟಿಸಿ ಹೊರ ನುಗ್ಗುತ್ತದೆ. ಇದೇ ರೀತಿಯಲ್ಲಿ ಉತ್ತರಾಖಂಡ ರಾಜ್ಯದಲ್ಲೂ ಹಿಮಸಾಗರ ಸ್ಫೋಟವಾಗಿದೆ ಎಂದು

ಊಹಿಸಲಾಗಿದೆ. 


ನೀರ್ಗಲ್ಲು ಸ್ಫೋಟದಿಂದ ಜಲ ವಿದ್ಯುತ್‌ಗಳಿಗೆ ಅಪಾಯ: 



       ಹಿಮಾಲಯದ ಮೂಲೆಮೂಲೆಯಲ್ಲೂ ಜಲವಿದ್ಯುತ್ ಯೋಜನೆಗಳಿದ್ದು, ಇವು ಮುಂದಿನ ದಿನಗಳಲ್ಲಿ ನೀರ್ಗಲ್ಲು ಸ್ಫೋಟದಿಂದ ಅಪಾಯಕ್ಕೆ ಸಿಲುಕುವ ಸಂಭವವಿದೆ. ಸುಮಾರು 70 ಜಲವಿದ್ಯುತ್ ಯೋಜನೆಗಳು ಸೂಕ್ಷ್ಮಭಾಗದಲ್ಲಿದ್ದು, ಭೂಕಂಪ ಅಥವಾ ಭೂಕುಸಿತದಿಂದ ಅಪಾರ ಹಾನಿ ಸೃಷ್ಟಿಸಬಹುದೆಂದು ತಜ್ಞರು ಮೊದಲೇ ಅಂದಾಜಿಸಿದ್ದರು. ಪ್ರಸ್ತುತ ಈ ಅನಾಹುತದಲ್ಲಿ ರಿಷಿ ಗಂಗಾ ಹೈಡೋ ಎಲೆಕ್ಟಿಕ್ ಘಟಕವು ಅಪಾಯಕ್ಕೆ ಒಳಗಾಗಿದೆ.


Sunday, 9 May 2021

ಉತ್ತಮ ಪ್ರಬಂಧ ಬರೆಯುವುದು ಹೇಗೆ?

 ಉತ್ತಮ ಪ್ರಬಂಧ ಬರೆಯುವುದು ಹೇಗೆ?




   ಪ್ರಬಂಧ ಬರೆಯುವುದು ಒಂದು ಕಲೆ ಮಾತ್ರವೇ ಅಲ್ಲ, ಇದೊಂದು ವ್ಯವಸ್ಥಿತವಾಗಿ ವಿಷಯವನ್ನು ಮಂಡಿಸುವ ಶೈಲಿಯಾಗಿದೆ. ಪ್ರಬಂಧ ಬರೆಯುವಾಗ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು.


1) ಪ್ರಬಂಧದಲ್ಲಿ ಬರೆಯುವ ಅಂಶಗಳು ನೇರವಾಗಿ ಪ್ರಬಂಧದ ವಿಷಯಕ್ಕೆ ಸಂಬಂಧಿಸಿರಬೇಕು.


2) ಪ್ರಬಂಧದಲ್ಲಿ ಬರೆಯುವ ಅಂಶಗಳು ಯಾವುದೇ ಧರ್ಮ, ಜಾತಿ,

ಜನಾಂಗ, ಲಿಂಗ, ಪ್ರದೇಶವನ್ನು ಅವಹೇಳನ ಮಾಡುವಂತಿರಬಾರದು. 


3) ವಸ್ತುನಿಷ್ಠವಾಗಿ ವಿಮರ್ಶೆ ಮಾಡುವುದಕ್ಕೆ ಅವಕಾಶವಿರುತ್ತದೆ.


4) ವಿಷಯವನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಬೇಕು. 

5) 600 ಪದಗಳಿಗಿಂತ ಮೀರಬಾರದು. 

6) ಪ್ರಬಂಧದ ಹಂತಗಳನ್ನು ಕ್ರಮವಾಗಿ ಅನುಸರಿಸುವುದು ಉತ್ತಮ.


7) ಭಾಷೆಯು ಸ್ಪಷ್ಟವಾಗಿರಬೇಕು.


8) ಅಂಕಿ ಅಂಶಗಳನ್ನು, ಪೂರಕವಾದ ಮಾಹಿತಿಗಳನ್ನು ಒದಗಿಸುವುದು ಸೂಕ್ತವಾಗಿದೆ.


9) ಉಪಸಂಹಾರದಲ್ಲಿ ತಮ್ಮದೇ ಆದ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶವಿರುತ್ತದೆ. 

10) ಪ್ರಬಂಧ ಬರೆಯುವಾಗ ಅಕ್ಷರಗಳು ಸ್ಪಷ್ಟವಾಗಿದ್ದು, ಅತಿ ದೊಡ್ಡದಾಗಿಯೂ ಅಥವಾ ಅತೀ ಚಿಕ್ಕದಾಗಿಯೂ ಇರಬಾರದು.


ಉತ್ತಮ ಪ್ರಬಂಧವು ಈ ಕೆಳಕಂಡ ಅಂಶಗಳನ್ನು ಹೊಂದಿರುತ್ತದೆ. 

1) ಪೀಠಿಕೆ ಹಂತ 

2) ಬೆಳವಣಿಗೆ ಹಂತ 

3) ಉಪಸಂಹಾರ


*ಪೀಠಿಕೆ ಹಂತ:- ಈ ಹಂತದಲ್ಲಿ ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ಪೂರಕವಾದ ಪೀಠಿಕೆಯನ್ನು ಹಾಕಬೇಕು. ಉಕ್ತಿಗಳು, ಶ್ರೇಷ್ಟ ವ್ಯಕ್ತಿಗಳ ಹೇಳಿಕೆಗಳಿಂದ ಪೀಠಿಕೆ ಹಂತಗಳನ್ನು ಆರಂಭಿಸುವುದು ಹೆಚ್ಚು ಸೂಕ್ತ, ಆದರೆ ಅದು ಕಡ್ಡಾಯವೇನಲ್ಲ.


* ಪೀಠಿಕೆ ಹಂತವು ಸಾಮಾನ್ಯದಿಂದ ನಿರ್ದಿಷ್ಟವಾದ ವಿಷಯದ ಕಡೆಗೆ ಕೊಂಡೊಯ್ಯಬೇಕು. ಅಂದರೆ ಪ್ರಬಂಧದ ವಿಷಯದ ಕಡೆಗೆ ಕೊಂಡೊಯ್ಯಬೇಕು.


* ಪೀಠಿಕೆ ಹಂತವು. ಗರಿಷ್ಟ 50ರಿಂದ 60 ಪದಗಳನ್ನು ಹೊಂದಿರತಕ್ಕದ್ದು. ಕೆಲವೊಮ್ಮೆ ಪೀಠಿಕೆಯೇ ಪ್ರಬಂಧದ ವಿಷಯವಾಗಬಾರದು.


* ಬೆಳವಣಿಗೆಯ ಹಂತ:- ಹಂತವು ಹೆಚ್ಚು ಮುಖ್ಯವಾದ ಹಂತವಾಗಿದ್ದು, ಯಾವುದೇ ವಿಷಯದ ಬಗ್ಗೆ ಪ್ರಬಂಧ ಬರೆಯಲು ಬೆಳವಣಿಗೆ ಹಂತದಲ್ಲಿ ಈ ಕೆಳಕಂಡಂತೆ ವಿಭಾಗಿಸಿಕೊಳ್ಳುವುದು ಉಪಯುಕ್ತವಾಗಿದೆ. ಮತ್ತು ಪ್ರಬಂಧ ಬರೆಯಲು ಸುಲಭವಾಗುತ್ತದೆ. 


* ಉಪ ಸಂಹಾರ ಹಂತ:- 

           ಪ್ರಬಂಧದ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ಶೈಲಿಯಲ್ಲಿ ಉಪ ಸಂಹಾರ ನೀಡಬೇಕು. ಈ ಹಂತದಲ್ಲಿ ಇಡೀ ಪ್ರಬಂಧದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಮಂಡಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ವಸ್ತುನಿಷ್ಠವಾಗಿ ಮತ್ತು ವಾಸ್ತವಿಕ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ನೀಡಬೇಕು.


ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ Narendra Modi Stadium)

         2021ರ ಫೆಬ್ರವರಿ 24 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅನ್ನು 'ನರೇಂದ್ರ ಮೋದಿ ಕ್ರೀಡಾಂಗಣ' (Narendra Modi Stadium) ಎಂದು ಮರುನಾಮಕರಣ ಮಾಡಲಾಯಿತು. ಈ ಮೊದಲು 'ಮೊಟೆರಾ ಸ್ಟೇಡಿಯಂ' ಎಂದು ಕರೆಯಲಾಗುತ್ತಿತ್ತು. ನವೀಕರಣಗೊಂಡ ಈ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು 2021ರ ಫೆಬ್ರವರಿ 24 ರಂದು ಉದ್ಘಾಟಿಸಿದರು. ಮೊಟೆರಾ ಕ್ರೀಡಾಂಗಣವನ್ನು ಮಾತ್ರ ಮೋದಿ ಹೆಸರಿನಲ್ಲಿ ಮರುನಾಮಕರಣ ಮಾಡಿದ್ದು, ಇಡೀ ಕ್ರೀಡಾ ಸಂಕೀರ್ಣವು ಸರ್ದಾರ್ ಪಟೇಲ್ ಹೆಸರಿನಲ್ಲಿ ಇರಲಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಸ್ಪಷ್ಟತೆ ನೀಡಿದೆ.

          ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾ ಸಮುಚ್ಛಯ ನಿರ್ಮಾಣಕ್ಕೆ ಶಿಲಾನ್ಯಾಸ ನರೇಂದ್ರ ಮೋದಿ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದ ಸಂದರ್ಭದಲ್ಲೇ 232 ಏಕ ರ ಜಾಗದಲ್ಲಿ ಸರ್ದಾರ್‌ ವಲ್ಲಭಭಾಯ್ ಪಟೇಲ್ ಕ್ರೀಡಾ ಸಮುಚ್ಛಯ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಶಿಲಾನ್ಯಾಸ ಮಾಡಿದರು. ಬೇರೆ ಬೇರೆ ಕ್ರೀಡೆಗಳ ಆಯೋಜನೆ, ತರಬೇತಿ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿ ಆರಂಭ: 2021ರ ಫೆಬ್ರವರಿ 24 ರಂದು ನರೇಂದ್ರ ಮೋದಿ ಕ್ರೀಡಾಂಗಣ ಉದ್ಘಾಟನೆಯಾದ ನಂತರ ಅದೇ ದಿನ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಿಂಕ್ ಬಾಲ್ (ಹಗಲು-ರಾತ್ರಿ) ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಜರುಗಿದ್ದು, ಭಾರತ ಕ್ರಿಕೆಟ್ ತಂಡವು ಜಯಗಳಿಸಿತ್ತು. 2021ರ ಮಾರ್ಚ್ ನಾಲ್ಕರಿಂದ ಆರಂಭಗೊಂಡ ನಾಲ್ಕನೇ ಪಂದ್ಯಕ್ಕೂ ಈ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ನರೇಂದ್ರ ಮೋದಿ


 ಕ್ರೀಡಾಂಗಣದ ಬಗ್ಗೆ ಮಾಹಿತಿ:

   ಗುಜರಾತ್  ರಾಜ್ಯದ ಅಹಮದಾಬಾದ್ ಸಮೀಪದ ಮೊಟೆರಾದಲ್ಲಿ 1982 ರಲ್ಲಿ ಸರ್ದಾರ್ ಪಟೇಲ್ ಕ್ರೀಡಾ ಸಂಕೀರ್ಣ ನಿರ್ಮಾಣವಾಗಿದ್ದು, ಅದಕ್ಕೆ ಆರಂಭದಲ್ಲಿ ಗುಜರಾತ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಆದರೆ ಆ ಬಳಿಕ ಗುಜರಾತ್ ಮೂಲದ ಹೆಸರಾಂತ ರಾಜಕೀಯ ಧುರೀಣ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಗೌರವಾರ್ಥ ಆ ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಷೇವ್ ಎಂದು ಹೆಸರಿಡಲಾಯಿತು. ಅದರಲ್ಲಿದ್ದ ಕ್ರಿಕೆಟ್ ಸ್ಟೇಡಿಯಂನಲ್ಲಿ 49 ಸಾವಿರ ಮಂದಿ ಪ್ರೇಕ್ಷಕರು ಕುಳಿತುಕೊಳ್ಳಬಹುದಾಗಿತ್ತು. 2006 ರಲ್ಲಿ ಕ್ರೀಡಾಂಗಣವನ್ನು ಸಣ್ಣ ಪ್ರಮಾಣದಲ್ಲಿ ನವೀಕರಿಸಲಾಯಿತು. ನವೀಕೃತ ಕ್ರೀಡಾಂಗಣದಲ್ಲಿ 54 ಸಾವಿರ ಪ್ರೇಕ್ಷಕರು ಏಕ ಕಾಲಕ್ಕೆ ಪಂದ್ಯ ವೀಕ್ಷಿಸಬಹುದಾಗಿತ್ತು ಜೊತೆಗೆ ಅಲ್ಲಿ ಪ್ಲಡ್ ಲೈಟ್ ರಸ್ತೆ ಕೂಡಾ ಕಲ್ಪಿಸಲಾಯಿತು. ಹೀಗಾಗಿ ವಿಶ್ವಕಪ್‌ನಂತಹ ಪ್ರಮುಖ ಪಂದ್ಯಾವಳಿಗಳು ಜರುಗಿದ್ದವು. 2014ರಲ್ಲಿ ಕ್ರೀಡಾಂಗಣವನ್ನು ಮತ್ತೊಮ್ಮೆ ನವೀಕರಿಸಲು ತೀರ್ಮಾನಿಸಲಾಯಿತು. ಆಗ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು ಮತ್ತು ಗುಜರಾತ್‌ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು.


    ಹಳೆಯ ಕ್ರೀಡಾಂಗಣವನ್ನು ಕೆಡವಿ 63 ಎಕರೆ ವ್ಯಾಪ್ತಿಗೆ ವಿಸ್ತರಿಸಿ 800 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತವಾಗಿ ವಿಶ್ವದ ಬೃಹತ್ ಕ್ರೀಡಾಂಗಣವಾಗಿ ಹೊರಹೊಮ್ಮಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿದ್ದ ಮೆಲ್ಲೋರ್ನ್‌ನ ಎಂಸಿಜಿ ದಾಖಲೆಯನ್ನು ನರೇಂದ್ರ ಮೋದಿ ಕ್ರೀಡಾಂಗಣ ಹಿಂದಿಕ್ಕಿದ್ದು, ಎಂಸಿಜಿ ಕ್ರೀಡಾಂಗಣದ ವಿನ್ಯಾಸ ಮಾಡಿದ್ದ ವಾಸ್ತುಶಿಲ್ಪ ಕಂಪನಿಯೇ ಈ ಸ್ಟೇಡಿಯಂನ ವಿನ್ಯಾಸದಲ್ಲೂ ಪ್ರಮುಖ ಪಾತ್ರ ವಹಿಸಿದೆ.


     ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಖ್ಯಾತಿಗೆ ಪಾತ್ರವಾದ ನರೇಂದ್ರ ಮೋದಿ ಕ್ರೀಡಾಂಗಣ

ಪ್ರಸ್ತುತವಾಗಿ ನರೇಂದ್ರ ಮೋದಿ ಕ್ರೀಡಾಂಗಣವು 1,10,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದುವರೆಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣವು 1 ಲಕ್ಷ ಆಸನ ವ್ಯವಸ್ಥೆಯನ್ನು ಹೊಂದಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿತ್ತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 11 ಪಿಚ್‌ಗಳು, 4 ಡ್ರೆಸ್ಸಿಂಗ್ ರೂಂಗಳು, ಈಜುಕೊಳ ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು 63 ಎಕರೆ ಪ್ರದೇಶಕ್ಕೆ ವ್ಯಾಪಿಸಿರುವ ಈ ಕ್ರೀಡಾ ಸಂಕೀರ್ಣದಲ್ಲಿ ಕ್ರಿಕೆಟ್‌ ಜತೆ ಇನ್ನಿತರ ಕ್ರೀಡೆಗಳ ಸ್ಟೇಡಿಯಂಗಳು ಇವೆ. ಒಟ್ಟಾರೆ ಇದೊಂದು ಅಭೂತಪೂರ್ವ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


    ವಿವಾದಕ್ಕೊಳಗಾದ ಸ್ಟೇಡಿಯಂ: ಅಹಮದಾಬಾದ್‌ನ ಮೊಟೆರಾದಲ್ಲಿರುವ ಈ ಕ್ರೀಡಾಂಗಣವನ್ನು ದೇಶದ ಮೊದಲ ಉಪ ಪ್ರಧಾನಿ ಹಾಗೂ ಗೃಹ ವಲ್ಲಭಬಾಯಿ ಪಟೇಲ್ ರವರ ಹೆಸರಿನಿಂದ ಕರೆಯಲಾಗುತ್ತಿತ್ತು. ಪ್ರಸ್ತುತ ಈ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರು ನಾಮಕರಣ ಮಾಡುವುದರೊಂದಿಗೆ ಸ್ಟೇಡಿಯಂನಲ್ಲಿರುವ ಎರಡೂ ಬದಿಗಳಿಗೆ (ಬೌಲಿಂಗ್ ಮಾಡುವ ಎರಡು ತುದಿಗಳು) ಅದಾನಿ ಎಂಡ್ ಮತ್ತು ರಿಲಯೆನ್ಸ್ ಎಂಡ್ ಎಂದು ಹೆಸರಿಡಲಾಗಿದ್ದು, ಈ ಸಂಬಂಧ ವಿವಾದಕ್ಕೆ ಒಳಗಾಗಿದ್ದು, ಪರ ಮತ್ತು ವಿರೋಧಗಳು ವ್ಯಕ್ತವಾಗಿವೆ. ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ: 2020ರ ಫೆಬ್ರವರಿ 24 ರಂದು ಅಂದಿನ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿರವರು ನಮಸ್ತೆ ಟ್ರಂಪ್‌ ಕಾರ್ಯಕ್ರಮವನ್ನು ಈ ಕ್ರೀಡಾಂಗಣದಲ್ಲಿ ಆಯೋಜಿಸಿದ್ದರು. ಅಮೆರಿಕಾದ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ 2019ರ ಸೆಪ್ಟೆಂಬರ್ 28 ರಂದು ಜರುಗಿದ್ದ ಹೌಡಿ ಮೋದಿ ಕಾರ್ಯಕ್ರಮದ ಪ್ರತಿರೂಪವಾಗಿ ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರೀಡಾಂಗಣದಲ್ಲಿ ಹಾಲ್ ಆಫ್ ಫೇಮ್ ಸೃಷ್ಟಿ: ಈ ಕ್ರೀಡಾಂಗಣದಲ್ಲಿ ಹಾಲ್ ಆಫ್ ಫೇಮ್ ಸೃಷ್ಟಿಸಲಾಗಿದ್ದು ಭಾರತೀಯ ಕ್ರಿಕೆಟ್ ದಂತಕತೆಗಳ ಸಾಧನೆಯ ಚಿತ್ರಣವನ್ನು ಪ್ರದರ್ಶಿಸಲಾಗಿದೆ. (ವೃತ್ತಿ ಜೀವನದಲ್ಲಿ 100ನೇ ಟೆಸ್ಟ್ ಆಡಿದ ಇಶಾಂತ್ ಶರ್ಮಾ ಅವರಿಗೆ ರಾಷ್ಟ್ರಪತಿ ಸನ್ಮಾನ ಮಾಡಿದರು)

Saturday, 8 May 2021

ನೈಸರ್ಗಿಕ ಸಂಪನ್ಮೂಲಗಳು (Natural Resources)

 ಅರ್ಥ: ಪ್ರಕೃತಿಯಲ್ಲಿ ಲಭ್ಯವಿರುವ ಬೆಳಕು, ಗಾಳಿ, ನೀರು, ಅರಣ್ಯ, ಮಣ್ಣು, ಖನಿಜ ಸಂಪನ್ಮೂಲಗಳನ್ನು ನೈಸರ್ಗಿಕ ಸಂಪನ್ಮೂಲಗಳು ಎನ್ನುವರು. ಮಹಾತ್ಮ ಗಾಂಧೀಜಿ ಅವರ ಪ್ರಕಾರ 'ಪ್ರಕೃತಿಯು ಮಾನವನ ಆಸೆಗಳನ್ನು ಈಡೇರಿಸಬಲ್ಲ ಸಂಪನ್ಮೂಲಗಳನ್ನು ನೀಡಿದೆಯೇ ಹೊರತು, ಅವರ ದುರಾಸೆಗಳನ್ನಲ್ಲ ಈ ಹೇಳಿಕೆಯು ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ನೈಸರ್ಗಿಕ ಕೊರತೆಯಲ್ಲಿರುವುದನ್ನು ತಿಳಿಸುತ್ತದೆ. ಸಂಪನ್ಮೂಲಗಳಿಲ್ಲದೆ,


ನೈಸರ್ಗಿಕ ಸಂಪನ್ಮೂಲಗಳ ವಿಧಗಳು ಮುಗಿಯದ, ಪುನರ್ ಉತ್ಪತ್ತಿ ಹೊಂದುವ ಅಥವಾ ನವೀಕರಿಸಬಹುದಾದ


ಸಂಪನ್ಮೂಲಗಳು o(Reriewable Resources): ಕೆಲವು ಸಂಪನ್ಮೂಲಗಳನ್ನು ನಿರಂತರವಾಗಿ ಬಳಸುತ್ತಾ ಹೋದಂತೆ, ಮತ್ತೆ


ಮತ್ತೆ ಚೈತನ್ಯವನ್ನು ಪಡೆದುಕೊಳ್ಳುತ್ತವೆ. ಉದಾ: ನೀರು, ಭೂಮಿ, ಅರಣ್ಯ, ಗಾಳಿ, ಬೆಳಕು.


2) ಮುಗಿದು ಹೋಗುವ, ಪುನರ್‌ ಉತ್ಪತ್ತಿ ಹೊಂದಲಾಗದ ಅಥವಾ `ನವೀಕರಿಸಲಾಗದ ಸಂಪನ್ಮೂಲಗಳು (Nonrenewable Re sources): ಪುನಃ ಬಳಸಿದಂತೆ ಕ್ರಮೇಣ ಬರಿದಾಗುತ್ತವೆ. ಉದಾ: ಖನಿಜ ಸಂಪನ್ಮೂಲಗಳು, ಪೆಟ್ರೋಲಿಯಂ, ಕಬ್ಬಿಣದ ಅದಿರು.


3) ಸಂಪನ್ಮೂಲಗಳ ವರ್ಗೀಕರಣ 


(ಎ) ಜೈವಿಕ ಸಂಪನ್ಮೂಲಗಳು: ಜೀವಿಗಳಿಂದ ಪಡೆಯಲಾದ ಸಂಪನ್ಮೂಲಗಳು. ಉದಾ: ಸಸ್ಯ ಮತ್ತು ಪ್ರಾಣಿಗಳು. 


ಬಿ) ಅಜೈವಿಕ ಸಂಪನ್ಮೂಲಗಳು: ನಿರ್ಜೀವ ವಸ್ತುಗಳಿಂದ ಪಡೆಯಲಾದ

ಸಂಪನ್ಮೂಲಗಳು. ಉದಾ: ನೀರು, ಮಣ್ಣು, ಅದಿರು. 

* ಮರುಭೂಮೀಕರಣ. (Desertification):- ಭೂಮಿಯ


ಮೇಲೆ ಅರಣ್ಯ & ಜೀವರಾಶಿಯ ನಾಶದಿಂದ ಪರಿಸರ -ಮರುಭೂಮಿಯಂತಹ ಸನ್ನಿವೇಶಕ್ಕೆ ತೊಡಗುವುದು.

ಉದಾ: ಕರ್ನಾಟಕ ಕೆಲವೇ ವರ್ಷಗಳಲ್ಲಿ ದೇಶದ ಅತಿ ದೊಡ್ಡ ಮರುಭೂಮಿಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.


 * ಭೂಮಿಯ ಧಾರಣ ಶಕ್ತಿ: ಭೂಮಿಯು ಮಾನವನ ಒತ್ತಡವನ್ನು


ಒಂದು ಮಿತಿಯವರೆಗೆ ಸಹಿಸಿಕೊಳ್ಳುವ ಶಕ್ತಿ ಹೊಂದಿರುವುದು. 

* ಹವಾಮಾನ ಬದಲಾವಣೆ:- ಭೂಮಿಯ ವಾಯು ಮಂಡಲದ ಉಷ್ಣಾಂಶವು ಹಸಿರು ಮನೆ ಪರಿಣಾಮದಿಂದ ಬದಲಾವಣೆ ಹೊಂದುವ ಘಟನೆ. ಕಾರಣಗಳು: ಇಂಧನಗಳ ದಹನ & ಬೆಂಕಿ,

ಅರಣ್ಯನಾಶ, ಹಸಿರು ಮನೆ ಪರಿಣಾಮ, ನಗರೀಕರಣ, ಜನಸಂಖ್ಯಾ ಸ್ಫೋಟ, ಅಂತರ್ಜಲ ಮಿತಿಮೀರಿ ಬಳಕೆ.


     ಸಂಪನ್ಮೂಲಗಳ ಕೊರತೆ ತಡೆಗಟ್ಟಲು ಸೂಕ್ತ ಕ್ರಮಗಳು: ಸಂಪನ್ಮೂಲಗಳ ದುರ್ಬಳಕೆಯನ್ನು ಕಡಿಮೆ ಮಾಡಿ ಪರಿಸರ & ಸಂಪನ್ಮೂಲ ಬಳಕೆ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ಸಂಪನ್ಮೂಲ ಸಂರಕ್ಷಣೆ, ಸಂಪನ್ಮೂಲಗಳ ಹೊಸ ಮೂಲಗಳ ಶೋಧನೆ ,


ಪರ್ಯಾಯ ವಸ್ತುಗಳ ಆವಿಷ್ಕಾರ, ಸಂಪನ್ಮೂಲ ಬಳಕೆ ದಕ್ಷತೆ ಹೆಚ್ಚಳ. ಸಂಪನ್ಮೂಲ ಸಂರಕ್ಷಣೆಗೆ 4R ತಂತ್ರಗಳು (ಪರಿಸರ ಸ್ನೇಹಿ ಜೀವನ) 

1) Reduce: ಸಂಪನ್ಮೂಲಗಳ ಕಡಿಮೆ ಬಳಕೆ ಮೂಲಕ ಅನಗತ್ಯ ಪೋಲು ನಿಯಂತ್ರಣ ಮಾಡುವುದು.


2) Reuse: ಸಂಪನ್ಮೂಲಗಳ ಮರು ಬಳಕೆಗೆ ಆದ್ಯತೆ. 

(3) Recharge & Regenerate: ಸಂಪನ್ಮೂಲಗಳ ಮನಃ ಭರ್ತಿ

ಮತ್ತು ಪುನರುಜೀವನಗೊಳಿಸುವುದು. 

4) Research: ಬರಿದಾಗುವ ಸಂಪನ್ಮೂಲಗಳಿಗೆ ಪರ್ಯಾಯ ಸಂಪನ್ಮೂಲಗಳ ಸಂಶೋಧನೆ.

ಆರ್‌ಬಿಐನ ಸಂಸ್ಥಾಪನಾ ದಿನ ಏಪ್ರಿಲ್ 1

https://www.google.com/url?sa=i&url=https%3A%2F%2Fwww.flickr.com%2Fphotos%2Fravikaran%2F9670674620&psig=AOvVaw1ohWr5C1ufAnxTDWUCNirC&ust=1620581229081000&source=images&cd=vfe&ved=0CAMQjB1qFwoTCKDSntfNuvACFQAAAAAdAAAAABAD


2021ರ ಏಪ್ರಿಲ್ 1 ರಂದು ಭಾರತದ ಕೇಂದ್ರ ಬ್ಯಾಂಕ್ ಆದ ಆರ್‌ಬಿಐ 86ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ.


        ಆರ್.ಬಿ.ಐನ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಡಾ|| ಬಿ.ಆರ್. ಅಂಬೇಡ್ಕರ್ ಅವರು ತಮ್ಮ 'The Prob lem of the Rupee -Its Origin and Its Solu tion ಕೃತಿಯಲ್ಲಿ ಮೊದಲ ಬಾರಿಗೆ ತಿಳಿಸಿದ್ದರು. ಆದರೆ 1926 ರಲ್ಲಿ ನೇಮಕವಾದ ಹಿಲ್ಟನ್ ಯಂಗ್ ಸಮಿತಿಯ ಶಿಫಾರಸ್ಸಿನ ಮೇರೆಗೆ 1934ರ ಆರ್‌ಬಿಐ ಕಾಯ್ದೆಯನ್ವಯ 1935ರ ಏಪ್ರಿಲ್ 1 ರಂದು ಆರ್‌ಬಿಐ ಅನ್ನು ಸ್ಥಾಪಿಸಲಾಯಿತು. 1949ರ ಜನವರಿ 1 ರಂದು ಇದು ರಾಷ್ಟ್ರೀಕರಣಗೊಂಡಿತು. 1947ರ ವರೆಗೆ ಮಯನ್ಮಾರ್ ಮತ್ತು ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿ ಆರ್‌ಬಿಐ ಕಾರ್ಯನಿರ್ವಹಿಸಿತ್ತು. ಆರ್‌ಬಿಐ ನ ಲಾಂಛನ ಬಂಗಾಳದ ಹುಲಿ & ಪಾಮ್ ಮರ ಆಗಿದೆ.


      ಆರ್‌ಬಿಐನ ಮೊದಲ ಗೌವರ್ನರ್ ಆಗಿ ಸರ್. ಓಸ್ಮಿತ್‌ ಹಾಗೂ ಮೊದಲ ಭಾರತೀಯ ಗೌವರ್ನರ್ ಆಗಿ ಸಿ.ಡಿ.ದೇಶ್ ಮುಖ್ ಸೇವೆ ಸಲ್ಲಿಸಿದ್ದಾರೆ. ಆರ್‌ಬಿಐನ 23ನೇ ಗೌವರ್ನರ್ ಆಗಿ ರಘುರಾಮ್ ರಾಜನ್, 24ನೇ ಗೌವರ್ನರ್ ಆಗಿ ಊರ್ಜಿತ್ ಪಟೇಲ್ ಹಾಗೂ 25ನೇ ಮತ್ತು ಪ್ರಸ್ತುತ ಗೌವರ್ನರ್ ಅಗಿ ಶಕ್ತಿಕಾಂತ್ ದಾಸ್ ಕಾರ್ಯನಿರ್ವಹಿಸುತ್ತಿದ್ದಾರೆ.


          ಪ್ರಮುಖ ವರದಿಗಳು: ಭಾರತದ ಹಣಕಾಸು ಸ್ಥಿರತೆ ವರದಿ (ವರ್ಷಕ್ಕೆ ಎರಡು ಬಾರಿ) ಹಣಕಾಸು ನೀತಿ (ದೈಮಾಸಿಕ), ಗ್ರಾಹಕರ ಆತ್ಮವಿಶ್ವಾಸ ಸಮೀಕ್ಷೆ (e 3ones), Trends and Progress Of Banking In India (ಪ್ರತೀ ವರ್ಷ) ಪ್ರಕಟಿಸುವುದು. ಸರ್ಕಾರದ ಬ್ಯಾಂಕ್ ಆಗಿ ಬ್ಯಾಂಕುಗಳ ಬ್ಯಾಂಕ್ ಆಗಿ, ವಿದೇಶಿ ವಿನಿಮಯ ಪಾಲಕ, ಅಂತಿಮ ಋಣದಾತನಾಗಿ ಕಾರ್ಯನಿರ್ವಹಿಸುವುದು.


 ಆರ್‌ಬಿಐನ ಹಣಕಾಸು ನೀತಿ ಮೇಣನ ಸಮಿತಿ (MPC) ಯನ್ನು

      ಕೇಂದ್ರ ಸರ್ಕಾರವು 2016 ಸೆಪ್ಟೆಂಬರ್ 29 ರಲ್ಲಿ ನೇಮಕ ಮಾಡಿದ್ದು, ಮೊದಲ ಸಭೆಯು 2016 ಅಕ್ಟೋಬರ್ 4 ರಂದು ಪದನಿಮಿತ್ತ ಅಧ್ಯಕ್ಷರಾಗಿದ್ದ ಆರ್.ಬಿ.ಐ ಗೌರರ್ (ಅಂದು ಊರ್ಜಿತ್ ಪಟೇಲ್) ನೇತೃತ್ವದಲ್ಲಿ ಜರುಗಿತು. 2016 ಆಗಸ್ಟ್ 5 ರಿಂದ 2021 ಮಾರ್ಚ್ 31 ವರೆಗಿನ ಅವಧಿಯಲ್ಲಿ ಸರ್ಕಾರ ಹಣದುಬ್ಬರದ ದರವನ್ನು ಶೇ 4 ರಷ್ಟು ನಿರ್ಧರಿಸಿದ್ದು (+2 ಅಥವಾ -2) ಅಂದರೆ ಇದು ಶೇ 2 ರಷ್ಟು ದರವನ್ನು ಕನಿಷ್ಠ ಮತ್ತು ಶೇ 6 ರಷ್ಟು ಗರಿಷ್ಠ ದರದ ಮಿತಿಯಲ್ಲಿ ಹಣದುಬ್ಬರವು ವ್ಯತ್ಯಾಸಗೊಳ್ಳಬಹುದು ಎಂದಿತ್ತು. ಆದರೆ 2021 ಮಾರ್ಚ್ ಅಂತ್ಯದಲ್ಲಿ ಈ ಹಣದುಬ್ಬರದ ಮಿತಿಯನ್ನು 2021ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.


. ಆರ್‌ಐ ನ ದೈ ಮಾಸಿಕ ಹಣಕಾಸು ನೀತಿ

    2021ರ ಏಪ್ರಿಲ್ 2021 ರ ಏಪ್ರಿಲ್ 5 ರಿಂದ 7 ರವರೆಗೆ ಮುಂಬೈನಲ್ಲಿ ಆರ್‌ಬಿಐನ ಗೌವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ 6 ಜನ ಸದಸ್ಯರ ಹಣಕಾಸು ನೀತಿ ಪರಿಷ್ಕರಣಾ ಸಮಿತಿಯ ಸಭೆ ನಡೆಯಿತು. ಇದರಲ್ಲಿ 2021-22ರ ಹಣಕಾಸು ವರ್ಷದ ದೈಮಾಸಿಕ ಹಣಕಾಸು ನೀತಿ ಪ್ರಕಟಗೊಂಡಿತು. ಇದರನ್ವಯ ನಿರ್ಧಾರವಾದ ದರಗಳು

ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ಒಪ್ಪಂದಗಳು

ರಾಮಾರ್ ಒಪ್ಪಂದ (RamSar Agreement) - ಇರಾನ್‌ನ ರಾಮಾರ್‌ನಲ್ಲಿ 1971ರ ಫೆಬ್ರವರಿ 2 ರಂದು ಚೌಗು ಪ್ರದೇಶ (ವೆಟ್ ಲ್ಯಾಂಡ್ಸ್ / ತೇವಾಂಶ ಭೂಮಿ) ದ ಸಂರಕ್ಷಣೆಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 2ನ್ನು ಚೌಗು ದಿನವನ್ನಾಗಿ ಆಚರಿಸಲಾಗುವುದು. 2021ರ ವಿಶ್ವ ಚೌಗು ದಿನದ ಧೈಯವಾಕ್ಯ - ವೆಟ್‌ಲ್ಯಾಂಡ್ಸ್ ಮತ್ತು ನೀರು, ಚೌಗು ಮಣ್ಣನ್ನು ಲವಣಸಾರ ಮಣ್ಣು ಎನ್ನುವರು. ಈ ಮಣ್ಣಿನಲ್ಲಿ ಪಿ.ಹೆಚ್. ಮೌಲ್ಯವು 7 ಕ್ಕಿಂತ ಹೆಚ್ಚಾಗಿರುತ್ತದೆ. ಜೈವಿಕ ಸಂಚಯನದಿಂದ ನಿರ್ಮಾಣಗೊಂಡಿದ್ದು ಈ ಮಣ್ಣು ಕೃಷಿಗೆ ಸೂಕ್ತವಾಗಿರುವುದಿಲ್ಲ. ಭಾರತದಲ್ಲಿ 2021ರ ಏಪ್ರಿಲ್ ಆರಂಭದ ಮಾಹಿತಿ ಅನ್ವಯ 42 ರಾಮ್ಹಾರ್ ತಾಣಗಳಿವೆ. ಒಡಿಶಾದ ಚಿಲ್ಕಾ ಸರೋವರವು 1981 ರ ಅಕ್ಟೋಬರ್ 1 ರಂದು ರಾನ್ಸಾರ್ ತಾಣವಾಗಿ ಸೇರ್ಪಡೆಯಾದ ಭಾರತದ ಮೊದಲ ಚೌಗುತಾಣ ಎನಿಸಿತ್ತು. ಆದರೆ 2002ರ ನವೆಂಬರ್‌ನಲ್ಲಿ ರಾಮ್ಹಾರ್ ಒಪ್ಪಂದದ ಅಂತಾರಾಷ್ಟ್ರೀಯ ಮಹತ್ವ ಪಡೆದಿದೆ. 2020ರ ರ್ 17 ರಂದು ಲಡಾಖ್‌ನ ಲೇಹ್ ಜಿಲ್ಲೆಯ TO KAR 42ನೇ ವೆಟ್‌ಲ್ಯಾಂಡ್ ನವೆಂಬರ್ ತಾಣವಾಗಿದೆ. 2020ರ ನವೆಂಬರ್ 13 ರಂದು ಮಹಾರಾಷ್ಟ್ರದ ಲೋನಾರ್ ಲೇಕ್ ಮತ್ತು ಉತ್ತರ ಪ್ರದೇಶದ ಸೂರ್ ಸರೋವರಗಳು ಕ್ರಮವಾಗಿ 41 & 40ನೇ ತಾಣವಾಗಿ ಸೇರ್ಪಡೆಯಾಗಿದ್ದವು.


ಸ್ಟಾಕ್‌ಹೋಂ ಒಪ್ಪಂದ (Stockholm Agreement): ಸ್ವೀಡನ್‌ ಸ್ಟಾಕ್ ಹೋಂನಲ್ಲಿ 1972 ಜೂನ್ 5ರಿಂದ 16ರವರೆಗೆ ವಿಶ್ವ ಮಾನವ ಪರಿಸರದ ಸಮ್ಮೇಳನ ಜರುಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜೂನ್ 5 ಅನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುವುದು. 2020ರ ವಿಶ್ವಪರಿಸರ ದಿನದ ಧೈಯವಾಕ್ಯ - Time For Nature, Celebrate Biodiversity

ago ao (RamSar Agreement) ಫೆಬ್ರವರಿ 2 ರಂದು ಚೌಗು ಪ್ರದೇಶ (ವೆಟ್ ಲ್ಯಾಂಡ್ಸ್ | ತೇವಾಂಶ ಭೂಮಿ ದ ಸಂರಕ್ಷಣೆಗೆ

(ಕೊಲಂಬಿಯಾ ದೇಶ ಆತಿಥ್ಯ ವಹಿಸಿತ್ತು).

  

   ಮಾಂಟ್ರಿಯಲ್ ಒಪ್ಪಂದ (Montreal Protocol) ಓಜೋನ್ ಪದರದ ರಂಧ್ರಕ್ಕೆ ಕಾರಣವಾದ ಅಂಶಗಳ ಬಳಕೆಯನ್ನು ತಗ್ಗಿಸಲು 1987ರ ಸೆಪ್ಟೆಂಬರ್ 16 ರಂದು ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ ಐತಿಹಾಸಿಕ ಮಾಂಟ್ರಿಯಲ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಹಿನ್ನಲೆಯಲ್ಲಿ ಪ್ರತಿವರ್ಷ ಸೆಪ್ಟೆಂಬರ್ 16 ಅನ್ನು ಅಂತರಾಷ್ಟ್ರೀಯ ಓಜೋನ್ (0) ಸಂರಕ್ಷಣಾ ದಿನವಾಗಿ ಆಚರಿಸುತ್ತಾ ಬಂದಿದೆ. ಈ ಒಪ್ಪಂದವು 1989ರ ಆಗಸ್ಟ್ 26 ರಿಂದ ಜಾರಿಗೆ ಬಂದಿದೆ. 2020ರ ಓರೋನ್ ದಿನದ ಧೈಯವಾಕ್ಯ: Ozone for Life 35 years of Ozone Layer Protection


    ಭೂ ಶೃಂಗ ಸಭೆ (Earth Summit) : ಪೃಥ್ವಿಯ ನೈಸರ್ಗಿಕ ಸಂರಕ್ಷಣೆಗೆ ಸಂಬಂಧಿಸಿದಂತೆ 1992 ರಿಂದ ಭೂ ಶೃಂಗ ಸಭೆಗಳು ಜರುಗುತ್ತಿವೆ.


* 1992ರ ಜೂನ್ 3 ರಿಂದ 14 ರವರೆಗೆ ಬ್ರೆಜಿಲ್‌ನ ರಿಯೋಡಿಜಾನಿರೋ ಮೊದಲ ಭೂಶೃಂಗ ಸಭೆಯು ಜರುಗಿತು. ಇದನ್ನು ವಿಶ್ವ ರಾಷ್ಟ್ರಗಳ ಪರಿಸರ ಮತ್ತು ಅಭಿವೃದ್ಧಿ ಮೇಲಿನ ಸಮ್ಮೇಳನ (United Nations Framework Convention on Climate Change (UNFCCC) ಎನ್ನಲಾಗಿದೆ. * 2002ರ ಆಗಸ್ಟ್‌ನಲ್ಲಿ ವಿಶ್ವ ಸುಸ್ಥಿರ ಅಭಿವೃದ್ಧಿ ಮೇಜಿನ ಸಮ್ಮೇಳನ (United Nations

Conference on Sustainable Development) ವು ರಿಯೋ+10 ಹೆಸರಿನಲ್ಲಿ ದಕ್ಷಿಣ * 2012ರ ಜೂನ್‌ನಲ್ಲಿ ಅಂತರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಮೇಲಿನ ಸಮ್ಮೇಳನ (Unitedಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ಜರುಗಿತು.Nations Conference on Sustainable Development) ಸಮ್ಮೇಳನವು ಬ್ರೆಜಿಲ್‌ನ ರಿಯೋಡಿ ಜಾನಿರೋ ನಗರದಲ್ಲಿ ಜರುಗಿದೆ.


ಕ್ಯೋಟೋ ಒಪ್ಪಂದ (Kyoto protocol): ಜಪಾನ್‌ನ ಕ್ಯೋಟೋನಲ್ಲಿ 1997ರ ಡಿಸೆಂಬರ್ 11 ರಂದು ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಯು ಜರುಗಿತ್ತು. ಮೊದಲ ಬಾರಿ ಕಾರ್ಬನ್ ಕ್ರೆಡಿಟ್ ಪರಿಕಲ್ಪನೆ ಪ್ರಸ್ತಾಪವಾಗಿತ್ತು. (2005 ಫೆಬ್ರವರಿ 16 ರಿಂದ ಜಾರಿಗೆ ಬಂದಿದೆ)


ಪ್ಯಾರೀಸ್ ಒಪ್ಪಂದ (Parris Agreement) - 2015ರಲ್ಲಿ ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ ಜಾಗತಿಕ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕೋಪ್ 21ನೇ ಸಭೆಯು ಜರುಗಿತ್ತು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2017ರ ಜೂನ್ 1 ರಂದು ಪ್ಯಾರೀಸ್ ಒಪ್ಪಂದಿಂದ ಅಮೆರಿಕ ಹೊರಬಂದಿದೆ ಎಂದು ಘೋಷಣೆ ಮಾಡಿದ್ದರು. 2021ರ ಫೆಬ್ರವರಿ 19 ರಂದು ಅಮೆರಿಕಾವು ಅಧಿಕೃತವಾಗಿ ಪ್ಯಾರೀಸ್ ಒಪ್ಪಂದಕ್ಕೆ ಸೇರ್ಪಡೆಯಾಗಿದೆ ಎಂದು ಅಧ್ಯಕ್ಷ ಜೋ ಬ್ರೆಡನ್ ಘೋಷಿಸಿದ್ದಾರೆ.

ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವರ್ಷಗಳು

 ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act - 1972

     ಭಾರತದಲ್ಲಿ ವನ್ಯ ಜೀವಿಗಳು ಮತ್ತು ಪಕ್ಷಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ 1972 ರಲ್ಲಿ ಸಂಸತ್ತಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ರೂಪಿಸಲಾಯಿತು. ಇದು 1972ರ ಸೆಪ್ಟೆಂಬರ್ 9 ರಂದು ಜಾರಿಗೆ ಬಂದಿದೆ. 1982, 1986, 1991, 1993, 2002, 2006 ಮತ್ತು 2013 ರಲ್ಲಿ ಈ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ತಿದ್ದುಪಡಿಗೊಂಡಿದೆ.


ಹುಲಿ ಯೋಜನೆ/ಪ್ರಾಜೆಕ್ಟ್ ಟೈಗರ್ (Project Tiger) - 1973

   ಭಾರತದಲ್ಲಿ 1973 ರ ಏಪ್ರಿಲ್‌ನಲ್ಲಿ ಹುಲಿ ಸಂರಕ್ಷಣೆಗಾಗಿ ಪ್ರಾಜೆಕ್ಟ್ ಟೈಗರ್ ಘೋಷಣೆಯಾಗಿತ್ತು. ಭಾರತದ ರಾಷ್ಟ್ರೀಯ ಪ್ರಾಣಿ ಬಂಗಾಳದ ಹುಲಿ ರಕ್ಷಣೆಗೆ ಸಂಬಂಧಿಸಿದೆ. ಈ ಯೋಜನೆಯ ಮೊದಲ ನಿರ್ದೇಶಕರಾಗಿ ಟೈಗರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಕೈಲಾಶ್ ಸಂಕಾಲ ಕಾರ್ಯನಿರ್ವಹಿಸಿದ್ದಾರೆ. ಈ ಯೋಜನೆಯನ್ನು ಭಾರತದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ನಿರ್ವಹಣೆ ಮಾಡುತ್ತದೆ.


ಅನೆ ಯೋಜನೆ/ಪ್ರಾಜೆಕ್ಟ್ ಎಅಫೆಂಟ್ (Project Elephant) - 1992 

        ಕೇಂದ್ರ ಪರಿಸರ ಮತ್ತು ಅರಣ್ಯ ಬದಲಾವಣೆ ಸಚಿವಾಲಯವು 1992ರ ಫೆಬ್ರವರಿಯಲ್ಲಿ ಆನೆ ಯೋಜನೆಯನ್ನು ರೂಪಿಸಿತ್ತು (1991-92ರ ಆರ್ಥಿಕ ವರ್ಷ). ಇದು ಏಷ್ಯನ್ ಆನೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ, ವನ್ಯಜೀವಿ ನಿರ್ವಹಣೆಗಾಗಿ ಹಣಕಾಸು ಮತ್ತು ತಾಂತ್ರಿಕ ಬೆಂಬಲ ಒದಗಿಸುವ ಉದ್ದೇಶ ಹೊಂದಿದೆ. ಆನೆಯನ್ನು ಭಾರತ ಸರ್ಕಾರವು 2010ರಲ್ಲಿ ರಾಷ್ಟ್ರೀಯ ಪಾರಂಪರಿಕಾ ಪ್ರಾಣಿಯಾಗಿ ಘೋಷಣೆ ಮಾಡಿತ್ತು. ಭಾರತದಲ್ಲಿ ಪ್ರತೀ 5 ವರ್ಷಗಳಿಗೊಮ್ಮೆ ಆನೆ ಗಣತಿ ಕಾರ್ಯ ಜರುಗುವುದು.


ಪ್ರಾಜೆಕ್ಟ್ ಡಾನ್ (- (Project Dolphin)- 2020 2020ರ ಆಗಸ್ಟ್ 15 ರಂದು 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಾಜೆಕ್ಟ್ ಡಾನ್ ಮತ್ತು ಪ್ರಾಜೆಕ್ಟ್ ಲಯನ್ ರೂಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದರು. ಐಯುಸಿಎನ್ ಸಂಸ್ಥೆಯ ರೆಡ್ ಲಿಸ್ಟ್‌ನಲ್ಲಿ ಗಂಗಾ ಡಾಲ್ಟಿನ್‌ಗಳು ಕಂಡುಬರುತ್ತವೆ. (ಡಾನ್ ಗಣತಿ : WWF - India) ಸಿಂಹ ಯೋಜನೆ/ ಪ್ರಾಜೆಕ್ಟ್ ಲಯನ್ (Project Lion) - 2020 ಭಾರತದಲ್ಲಿ 2020ರ ಆಗಸ್ಟ್ 15 ರಂದು ಮೋದಿಯವರು ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಗಾಗಿ ಪ್ರಾಜೆಕ್ಟ್ ಲಯನ್ ಘೋಷಿಸುವ ಬಗ್ಗೆ ಮೊದಲು ಪ್ರಸ್ತಾಪಿಸಿದರು. ಕೇಂದ್ರ ಅರಣ್ಯ ಪರಿಸರ ಹವಾಮಾನ ಬದಲಾವಣೆ ಸಚಿವಾಲಯದ ವತಿಯಿಂದ ಸಿಂಹಗಳ ಸಂರಕ್ಷಣೆ ಹಾಗೂ ಮಾನವ ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸುವ ಉದ್ದೇಶಿತ ಯೋಜನೆಯಾಗಿದೆ. ರೈನೋ ಯೋಜನೆ/

ಪ್ರಾಜೆಕ್ಟ್ ರೈನೋ (Project Rhino) - 2005

    ಅಸ್ಸಾಂ ರಾಜ್ಯದ ಅರಣ್ಯ ಇಲಾಖೆ ಮತ್ತು ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಪ್ರಾಜೆಕ್ಟ್ ರೈನೋ ಉದ್ಘಾಟನೆಯಾಗಿತ್ತು. ಏಕ ಕೊಂಬಿನ ಘಂಡಾಮೃಗವು ಭಾರತ ಮತ್ತು ನೇಪಾಳ ಮೂಲವನ್ನು ಹೊಂದಿದ್ದು, ಅಸ್ಸಾಂ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿರುವ ರೈನೋಗಳನ್ನು ಮಾನಸ ವನ್ಯಜೀವಿ ಸಂರಕ್ಷಣಾ ತಾಣಕ್ಕೆ ಸ್ಥಳಾಂತರಿಸುವ ಉದ್ದೇಶ ಹೊಂದಿತ್ತು.


ಪ್ರಾಜೆಕ್ಟ್ ಮೊಸಳೆ (Project Crocodile) - 1975 

       ಭಾರತದ ವಿವಿಧ ರಾಜ್ಯಗಳಲ್ಲಿ 1975 ರಲ್ಲಿ ಮೊಸಳೆ ಯೋಜನೆಯನ್ನು ರೂಪಿಸಲಾಗಿದೆ. ಪ್ರತೀ ವರ್ಷ ಜೂನ್ 17 ರಂದು ವಿನಾಶದ ಅಂಚಿನಲ್ಲಿರುವ ಮೊಸಳೆ ಜೀವಿಯ ಬಗ್ಗೆ ಅರಿವು ಮೂಡಿಸಲು ವಿಶ್ವ ಮೊಸಳೆ ದಿನ ಆಚರಿಸಲಾಗುವುದು. ಗಾರಿಯರ್, ಗವಾಲಿಸ್, ಮುಗೇರ್, ಗಂಗಾಟಿಕಸ್ ಎಂಬುದು ಮೊಸಳೆಯ ವಿವಿಧ ಪ್ರಬೇಧಗಳಾಗಿವೆ.

ಹನ್-ಎನ್‌ಜಿ ತರಬೇತಿ ವಿಮಾನ ಲೋಕಾರ್ಪಣೆ

     2021ರ ಮಾರ್ಚ್ 31 ರಂದು ಬೆಂಗಳೂರಿನ ಸಿಎಸ್‌ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್‌ (Na tional Aerospace Laboratory) ಅಭಿವೃದ್ಧಿಪಡಿಸಿರುವ ಹನ್ಸ್ ಎನ್‌ಜಿ 3033 R (HANSA-NG Trainer Aircraft) ಬೆಂಗಳೂರಿನ ಸಮೀಪದಲ್ಲಿರುವ ಬೇಲೂರಿನಲ್ಲಿರುವ ಎನ್‌ಎಎಲ್ ನಲ್ಲಿರುವ ಸುವರ್ಣ ಮಹೋತ್ಸವ ಏರ್‌ಕ್ರಾಫ್ಟ್ ಹ್ಯಾಂಗರ್‌ನಲ್ಲಿ ಎನ್‌ಎಎಲ್‌ ನಿರ್ದೇಶಕ ಜಿತೇಂದ್ರ ಜೆ ಜಾಧವ್ ಲೋಕಾರ್ಪಣೆ ಮಾಡಿದರು. (sar National Aerospace Laboratories


   ಈ ಮೂಲಕ ವಿಮಾನಯಾನ ರಂಗದಲ್ಲಿ ಪ್ರಮುಖ ಭಾಗವಾಗಿರುವ ತರಬೇತಿ ರಂಗದಲ್ಲಿ ಆತ್ಮನಿರ್ಭರತೆ ಸಾಧಿಸುವತ್ತ ಭಾರತ ಮತ್ತೊಂದು ಬಲವಾದ ಹೆಜ್ಜೆ ಇಟ್ಟಿದೆ. ಮುಂದಿನ ತಲೆಮಾರಿನ ತರಬೇತಿ ವಿಮಾನವಾಗಿರುವ ಹನ್ಸ್ ಎನ್‌ಜಿ ವಿಮಾನವು 2021ರ ಜುಲೈನಲ್ಲಿ ತನ್ನ ಪ್ರಾಯೋಗಿಕ ಹಾರಾಟವನ್ನು ಮುಕ್ತಾಯಗೊಳಿಸಲಿದ್ದು, ಡಿಸೆಂಬರ್ ವೇಳೆಗೆ ಇದರ ವಾಣಿಜ್ಯ ಉತ್ಪಾದನೆ ಪ್ರಾರಂಭವಾಗಿ ಬಳಕೆಗೆ ಲಭ್ಯವಾಗಲಿದೆ. ಈಗಾಗಲೇ 30 ಕ್ಕಿಂತ ಹೆಚ್ಚು ವಿಮಾನಗಳಿಗೆ ಬೇಡಿಕೆ ಬಂದಿದೆ.

ತರಬೇತಿ ವಿಮಾನಕ್ಕೆ ಬೇಡಿಕೆ: 2016 ರಲ್ಲೇ ಭಾರತವು ವಿಶ್ವದ ಅತಿ ದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿ ಹೊರ

ಹೊಮ್ಮಿತ್ತು. ಈ ಹಿನ್ನಲೆಯಲ್ಲಿ ಭಾರತಕ್ಕೆ ತರಬೇತಿ ಪಡೆದ ಪೈಲೆಟ್‌ಗಳ ಬೇಡಿಕೆ ಸೃಷ್ಟಿಯಾಗಿತ್ತು. ಆದುದ್ದರಿಂದ ಅನೇಕ ಪೈಲೆಟ್ ತರಬೇತಿ ಸಂಸ್ಥೆಗಳು ಕಡಿಮೆ ವೆಚ್ಚದ ಸ್ವದೇಶಿ ವಿಮಾನಕ್ಕಾಗಿ ಹುಡುಕಾಟ ನಡೆಸುತ್ತಿದ್ದವು. ಇದನ್ನು ಗಮನಿಸಿ ಎನ್‌ಎಎಲ್‌ನವರು 2018 ರಲ್ಲಿ ಹನ್ಸ್ ಎನ್‌ಜಿ ಯೋಜನೆಗೆ ಸರ್ಕಾರದಿಂದ ಅನುಮತಿ ಪಡೆದರು. ಅನುಮತಿ ಪಡೆದ ಎರಡು ವರ್ಷಗಳಲ್ಲಿ ಮುಂದಿನ ಪೀಳಿಗೆಯ ತರಬೇತಿ ವಿಮಾನಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನ್ಸ್ ವಿಮಾನದ ಮೊದಲ ಗ್ರಾಹಕ ಇಂದಿರಾ ಗಾಂಧಿ ರಾಷ್ಟ್ರೀಯ v (IGRUA-Indira Gandhi Rashtriya Uran Academy) ಒಪ್ಪಂದಕ್ಕೆ ಸಹಿ ಹಾಕಿತು.

ಹನ್ಸ್ ಎನ್‌ಜಿ ಬಗ್ಗೆ ಮಾಹಿತಿ

     1990ರ ದಶಕದಲ್ಲಿ ಅಭಿವೃದ್ಧಿಪಡಿಸಲಾದ ಹನ್ಸ್ ವಿಮಾನವನ್ನು ಮೇಲ್ದರ್ಜೆಗೇರಿಸಿ ಹನ್ಸ್ ಎನ್‌ಜಿಯನ್ನು ರೂಪಿಸಲಾಗಿದೆ. ಇದು 2 ಆಸನಗಳ ತರಬೇತಿ ವಿಮಾನವಾಗಿದ್ದು, ಸಿಂಗಲ್ ಇಂಜಿನ್ ಹೊಂದಿದೆ. ಡಿಜಿಟಲ್ ಇಂಜಿನ್ ವ್ಯವಸ್ಥೆ ಇದರ ವಿಶೇಷವಾಗಿದೆ. ಒಮ್ಮೆ ಇಂಧನ ತುಂಬಿದರೆ, ಗಂಟೆಗಳ ಕಾಲ 6 ಹಾರಾಟ ನಡೆಸಬಹುದಾಗಿದೆ. ಗಾಜಿನ ಕಾಕ್‌ಪೀಟ್ ಹೊಂದಿದ್ದ ಕ್ಯಾಬಿನ್ ಬಹಳ ಆರಾಮವಾಗಿದೆ. 2020ರ ವಿಂಗ್ಸ್ ಇಂಡಿಯಾ ಮತ್ತು 2021ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಹನ್-ಎನ್‌ಜಿ ಏರ್‌ಕ್ರಾಫ್ಟ್ ಪ್ರದರ್ಶನಗೊಂಡಿದ್ದವು. 2022-20238 ಅವಧಿಯಲ್ಲಿ ಉತ್ಪಾದನೆಯು ಪ್ರಾರಂಭಗೊಳ್ಳಲಿದೆ. ಹನ್ಸಾ-ಎನ್‌ಜಿ ಏರ್ ಕ್ರಾಫ್ಟ್

ಎನ್ಎಲ್: ಭಾರತದ ಮೊದಲ ಮತ್ತು ಅತ್ಯಂತ ದೊಡ್ಡ ಏರೋಸ್ಪೇಸ್ ಉದ್ಯಮವಾಗಿದ್ದು, 1959 ರಲ್ಲಿ ದೆಹಲಿಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನಾ ಪರಿಷತ್ ವತಿಯಿಂದ ಆರಂಭವಾಗಿತ್ತು. 1960 ರಲ್ಲಿ ಇದರ ಕೇಂದ್ರ ಕಚೇರಿಯು ಬೆಂಗಳೂರಿನ ಸ್ಥಳಾಂತರಗೊಂಡಿತು. ನಾಗರಿಕ ಏರ್‌ಕ್ರಾಫ್ಟ್ ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿದೆ.

ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನ(WORLD CONSUMER DAY)

 2021ರ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು Tack ling Plastic Pollution' ಧೈಯವಾಕ್ಯದಲ್ಲಿ ಆಚರಿಸಲಾಯಿತು.


         ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಇ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯ ಚಟುವಟಿಕೆಯನ್ನು ನಿಯಂತ್ರಿಸುವ ಅಗತ್ಯತೆ ಹಾಗೂ ಸುಸ್ಥಿರ ಅನುಭೋಗಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ವರ್ಷದ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಪ್ಲಾಸ್ಟಿಕ್ ಮಾಲಿನ್ಯ ಪರಿಹಾರ ಧೈಯವಾಕ್ಯದಲ್ಲಿ ಆಚರಿಸಲಾಗಿದೆ. 2020ರ ಮಾರ್ಚ್ 15 ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು “The Sustainable Consumer '

World CONSUMER Rights DAY

THEME TACKING PLASTIC Pollution"

ಧೈಯವಾಕ್ಯದಲ್ಲಿ ಆಚರಿಸಲಾಯಿತು.


     ವಿಶ್ವ ಗ್ರಾಹಕ ಹಕ್ಕುಗಳ ಬಗ್ಗೆ ಮೊದಲ ಪ್ರಸ್ತಾಪ: ವಿಶ್ವದಲ್ಲಿ ಮೊದಲ ಬಾರಿಗೆ ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು 1962 ಮಾರ್ಚ್ 15ರಂದು ಮೊದಲ ಬಾರಿಗೆ ಗ್ರಾಹಕ ಹಕ್ಕುಗಳ ಬಗ್ಗೆ ಅಮೆರಿಕಾದ ಕಾಂಗ್ರೆಸ್‌ನಲ್ಲಿ ಪ್ರಸ್ತಾಪಿಸಿದ್ದರು. 1983 ರಿಂದ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಪ್ರತೀ ವರ್ಷ ಮಾರ್ಚ್ 15 ರಂದು ಆಚರಿಸಲಾಗುತ್ತಿದೆ. 1985 ಏಪ್ರಿಲ್ 9 ರಂದು ವಿಶ್ವ ಸಂಸ್ಥೆಯು ಗ್ರಾಹಕರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ಸಾಮಾನ್ಯ ಮಾರ್ಗದರ್ಶಿ ತತ್ವಗಳಿಗೆ ಅನುಮೋದನೆ ನೀಡಿತ್ತು.


       ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ - ಡಿಸೆಂಬರ್ 24 2020ರ ಡಿಸೆಂಬರ್ 24 ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು"New Features Of Consumer Protection Act-2019" ಧೈಯವಾಕ್ಯದಲ್ಲಿ ಆಚರಿಸಲಾಯಿತು. ಭಾರತದಲ್ಲಿ ಗ್ರಾಹಕ ರಕ್ಷಣಾ ಕಾನೂನನ್ನು ಪ್ರಧಾನಿ ರಾಜೀವ್ ಗಾಂಧಿಯವರು 7ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಅಂದರೆ 1986ರಲ್ಲಿ ಜಾರಿಗೆ ತಂದಿದ್ದರು. 1986ರ ಡಿಸೆಂಬರ್ 24ರಿಂದ ಗ್ರಾಹಕ ರಕ್ಷಣಾ ಕಾಯ್ದೆಯು (COPRA) ಭಾರತ ದೇಶದಲ್ಲಿ ಜಾರಿಗೆ ಬಂದ ಕಾರಣ ಪ್ರತೀ ವರ್ಷ ಡಿಸೆಂಬರ್ 24ನ್ನು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ. 1986ರ ಈ ಕಾಯ್ದೆಯನ್ನು ಗ್ರಾಹಕ ರಕ್ಷಣಾ ಮ್ಯಾಗ್ನಾಕಾರ್ಟಾ' ಎಂದೇ ಕರೆಯಲಾಗಿದೆ. 2019ರ ಜುಲೈ 8 ರಂದು ಕೇಂದ್ರ ಗ್ರಾಹಕ ವ್ಯವಹಾರ ಇಲಾಖೆಯ ಅಂದಿನ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು 1986ರ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಪರಿಷ್ಕರಿಸಿದ ಮಸೂದೆಯನ್ನು ಮಂಡಿಸಿದ್ದರು. ಇದು 2020ರ ಜುಲೈ 20 ರಂದು ಜಾರಿಗೆ ಬಂದಿದೆ.


     ಭಾರತದಲ್ಲಿ ಗ್ರಾಹಕರ ಹಕ್ಕುಗಳು: ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ವಸ್ತುವಿನ ಆಯ್ಕೆಯ ಹಕ್ಕು, ಕುಂದು ಕೊರತೆಗಳನ್ನು ನಿವಾರಿಸುವ ಹಕ್ಕು, ಆಲಿಸುವ ಹಕ್ಕು ಮತ್ತು ಗ್ರಾಹಕ ಶಿಕ್ಷಣ ಹಕ್ಕು.

Consumers International ಸಂಸ್ಥೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ಸಂಘಗಳ ಸಂಘಟನೆಯಾಗಿದ್ದು, ಅಂತರಾಷ್ಟ್ರೀ ಮಟ್ಟದ ಗ್ರಾಹಕ ಹಕ್ಕುಗಳ ರಕ್ಷಣಾ ಕಾವಲುನಾಯಿ ಸಂಸ್ಥೆಯಾಗಿದೆ. ಇದು 1960ರ ಏಪ್ರಿಲ್ 1 ರಂದು ಸ್ಥಾಪನೆಯಾಗಿದ್ದು, Coming Together For Change ಎಂಬ ಉದ್ದೇಶ ಹೊಂದಿದೆ. ಇದರ ಕೇಂದ್ರ ಕಚೇರಿ ಇಂಗ್ಲೆಂಡ್‌ನ ಲಂಡನ್‌ನಲ್ಲಿದೆ.

ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್‌ಗಿವನ್ ಹಡಗು

   ಮಲೇಷ್ಯಾದ ತಾಂಜುಂಗ್ ಪಿಲೆಪಸ್ (Port of Tanjung Pelepas) ಬಂದಲಿನಿಂದ ನೆದರಲ್ಯಾಂಡ್‌ನ ರೊಟೆರ್‌ಡ್ಯಾಮ್ (Port of Rotterdam) ಕಡೆಗೆ ಕಂಟೈನರ್‌ಗಳನ್ನು ಹೊತ್ತು ಸಾಗುತ್ತಿದ್ದ ಜಪಾನ್ ಮೂಲದ ಎವರ್‌ಗ್ರೀನ್ ಕಂಪನಿಯ ಸರಕು ಸಾಗಾಣೆಯ ಎವರ್‌ಗಿವೆನ್ ಎಂಬ ಹೆಸರಿನ ದೈತ್ಯ ಹಡಗು 2021ರ ಮಾರ್ಚ್ 23 ರಂದು ಸೂಯೆಜ್ ಕಾಲುವೆಯ ಕೆಸರು ಮತ್ತು ಮರಆನಲ್ಲಿ ಸಿಲುಕಿಕೊಂಡಿತ್ತು. ಈ ದೈತ್ಯ ಹಡಗು ಸೂಯೆಜ್ ಕಾಲುವೆ (Suez Canal) ಯಲ್ಲಿ ಸಿಲುಕಿದ್ದರಿಂದ ಇತರ ಹಡಗುಗಳ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಏಷ್ಯಾದ ದೇಶಗಳಿಗೆ

ಕಚ್ಚಾ ತೈಲ ಸರಬರಾಜಿಗೂ ಸಮಸ್ಯೆ ಎದುರಾಗಿತ್ತು

ಸೂಯೆಜ್ ಕಾಲುವೆಯಲ್ಲಿ ಸಿಲುಕಿರುವ ಕಂಟೈನರ್‌ಗಳನ್ನು ಒಳಗೊಂಡಿರುವ ದೈತ್ಯ ಎವರ್‌ವನ್ ಹಡಗಿನ 400 ಮೀ. ಉದ್ದದ (1,300 ಅಡಿ) ಎರಡು ಅಲಗುಗಳು ಕಾಲುವೆಯ ಎರಡೂ ಬದಿಗಳಿಗೆ ಅಡ್ಡವಾಗಿ ಸಿಕ್ಕಿಕೊಂಡಿದೆ. ಇದರ ಪರಿಣಾಮ ತೈಲ ಮತ್ತು ಇತರ ಸರಕುಗಳನ್ನು ಒಳಗೊಂಡಿರುವ ಅನೇಕ ಹಡಗುಗಳು ಸೂಯೆಜ್ ಕಾಲುವೆಯಲ್ಲಿ ಸಂಚಾರ ದಟ್ಟಣೆಯ ನಡುವೆ ಸಿಲುಕಿಕೊಂಡಿದ್ದವು. ನೂರಾರು ಹಡಗುಗಳು ಮತ್ತೊಂದು ಬದಿಯಲ್ಲಿ ಸಿಲುಕಿಕೊಂಡಿದ್ದವು.

   ‌‌‌ ಹಡಗು ಕಾಲುವೆಗೆ ಸಿಲುಕಿದ್ದು ಹೇಗೆ? ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್ ಗಿವನ್ ಹಡಗು ಸೂಯೆಜ್ ಕಾಲುವೆಯ ದಕ್ಷಿಣ ತುದಿಯಲ್ಲಿ ಕೆಟ್ಟು ನಿಂತಿತ್ತು. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ ಹಡಗಿನ ಮುಂಭಾಗವು ದಕ್ಷಿಣದ ಕಡೆಗೆ, ಹಿಂಭಾಗವು ಉತ್ತರ ಕಡೆಗೆ ತೇಲಿದೆ.  ಆದರೆ ಹಡಗಿನ ಮುಂಭಾಗ ಹಾಗೂ ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿವೆ. ಮರಳಿನಿಂದ ಅದನ್ನು ಬಿಡಿಸಲು ಕಷ್ಟವಾಯಿತು, ಕಾಲುವೆಯು ಸಂಪೂರ್ಣವಾಗಿ ಬಂದ್ ಆಗಿತ್ತು.

ಪರಿಣಾಮಗಳು: ಸೂಯೆಜ್ ಕಾಲುವೆಯು ಸಂಪೂರ್ಣವಾಗಿ ಬಂದ್


     ಆಗಿದ್ದರಿಂದ ಸಂಚಾರ ಸ್ಥಗಿತವಾಗಿತ್ತು. ಎವರ್‌ಗಿವನ್ ಹಡಗು ಸಿಲುಕಿದ್ದರೂ, ಉತ್ತರ ಕಡೆಯಿಂದ ಹಲವು ಹಡಗುಗಳು ಕಾಲುವೆ ಪ್ರವೇಶಿಸಿದ್ದವು. ಆ ಹಡಗುಗಳು ಮುಂದಕ್ಕೂ ಹೋಗಲಾರದೆ, ಹಿಂದಕ್ಕೂ ಹೋಗಲಾರದೆ ಸಿಲುಕಿಕೊಂಡಿದ್ದವು. ಕಾಲುವೆ ಬದಿಯಲ್ಲಿ 213 ಹಡಗುಗಳು ಎರಡೂ ಬದಿಯಲ್ಲೂ ನಿಂತಿದ್ದವು. ಸೂಯೆಜ್ ಕಾಲುವೆ ಬಂದ್ ಆದ ಕಾರಣ ಬೇರೆ ಹಡಗುಗಳು ಆಫ್ರಿಕಾವನ್ನು ಬಳಸಿ ಪ್ರಯಾಣ ಆರಂಭಿಸಿದವು. ಆಫ್ರಿಕಾವನ್ನು ಬಳಸಿ ಹೋಗಲು ಈ ಹಡಗುಗಳಿಗೆ 12-14 ದಿನ ಹೆಚ್ಚುವರಿ ಕಾಲಾವಕಾಶ ಬೇಕಾಯಿತು.

   ಎವರ್‌ಗಿವನ್ ಹಡಗಿನ ತೆರವಿಗೆ ಪ್ರಯತ್ನ: ಒಟ್ಟು 8 ಬೋಟ್‌ಗಳ ನೆರವಿನಿಂದ ಹಡಗನ್ನು ಸರಿದಾರಿಗೆ ನಿಲ್ಲಿಸಲು ಯತ್ನಿಸಲಾಗಿತ್ತು. ಈ ಪ್ರಕ್ರಿಯೆಗೆ ಹಲವು ದಿನಗಳು ಅಥವಾ ವಾರದ ಕಾಲಾವಕಾಶ ಬೇಕಾಯಿತು. ಹಡಗು ಸಿಲುಕಿರುವ ಸ್ಥಳದಲ್ಲಿ ಕಾಲುವೆಯ ಅಡಿಯಲ್ಲಿ ಇರುವ ಮರಳನ್ನು ಹೊರ ತೆಗೆಯಲಾಗಿದೆ. ಮರಳಿನಲ್ಲಿ ಸಿಲುಕಿರುವ ಹಡಗನ್ನು ಬಿಡಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಹಡಗನ್ನು ಕಾಲುವೆ ಮಧ್ಯಕ್ಕೆ ಎಳೆದು ತರಲು ಭಾರೀ ಸಾಮರ್ಥ್ಯದ 8 ಟಗ್ ಬೋಟ್‌ಗಳನ್ನು ಬಳಸಲಾಯಿತು. ಸುಮಾರು 20,000 ಘನ ಮೀಟರ್‌ನಷ್ಟು ಮರಳನ್ನು ಅಲ್ಲಿಂದ ಹೊರ ತೆಗೆಯಲಾಗಿದೆ. ಒಂದು ವಾರದ ಕಾರ್ಯಾಚರಣೆಯ ನಂತರ ಹಡಗನ್ನು ಸ್ಥಳದಿಂದ ತೆರವುಗೊಳಿಸಲಾಯಿತು.

ಎವರ್‌ಗಿವನ್ ಹಡಗಿನಲ್ಲಿದ್ದ ಭಾರತೀಯರು ಸುರಕ್ಷಿತ : 2021ರ ಮಾರ್ಚ್ 23 ರಂದು ಸೂಯೆಜ್ ಕಾಲುವೆಯಲ್ಲಿ ಸಿಲುಕಿಹಾಕಿಕೊಂಡಿದ್ದ ಹಡಗಿನಲ್ಲಿದ್ದ

ಕ್ಯಾಪ್ಟನ್ ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಭಾರತೀಯರೇ ಆಗಿದ್ದಾರೆ. ಈ ಅವಘಡದಲ್ಲಿ ಯಾರಿಗೂ ಅಪಾಯವಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ.

ಎವರ್ ಗಿವನ್ ಹಡಗಿನ ಸಾಮರ್ಥ್ಯ: ಈ ಹಡಗು 400 ಮೀಟರ್ ಉದ್ದವಿದ್ದು, 2 ಲಕ್ಷ ಟನ್ ತೂಕವಿದೆ ಮತ್ತು 22 ಸಾವಿರ ಕಂಟೈನರ್‌ ಒಳಗೊಂಡಿತ್ತು.

   ಸೂಯೆಜ್ ಕಾಲುವೆ (Suez Canal)


ಆಫ್ರಿಕಾವನ್ನು ಮಧ್ಯಪ್ರಾಚ್ಯ ಮತ್ತು ಏಷ್ಯಾದಿಂದ ಪ್ರತ್ಯೇಕಿಸುವ ಸೂಯೆಜ್ ಕಾಲುವೆಯು ವಿಶ್ವದಲ್ಲೇ ಅತ್ಯಂತ ಬ್ಯುಸಿಯಾಗಿರುವ ಕಾಲುವೆಗಳಲ್ಲೊಂದು. ಜಾಗತಿಕ ವಹಿವಾಟಿನ ಶೇ.12 ರಷ್ಟು ಈ ಕಾಲುವೆ ಮೂಲಕ ನಡೆಯುತ್ತದೆ. ಈ ಕಾಲುವೆಯು ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರದ ನಡುವೆ ಸಂಪರ್ಕ ಕಲ್ಪಿಸುತ್ತದೆ. ಭಾರತ ಮತ್ತು ಚೀನಾ ಮುಂತಾದ ಏಷ್ಯಾ ದೇಶಗಳಿಗೆ ಕೊಲ್ಲಿ ರಾಷ್ಟ್ರಗಳಿಂದ ತೈಲ ಸರಬರಾಜು ಈ ಕಾಲುವೆ ಮೂಲಕ ಸಾಗುತ್ತದೆ. ಈ ಕಾಲುವೆಯು 193.3 ಕಿ.ಮೀ (120.1 ಮೈಲಿ) ಉದ್ದವಿದ್ದು, 300 ಮೀಟರ್ ಅಗಲವಿದೆ. ಈ ಕಾಲುವೆಯನ್ನುಅಂತಾರಾಷ್ಟ್ರೀಯ ಜಲಸಾರಿಗೆಯ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ಕಾಲುವೆಯು ಈಜಿಪ್ಟ್ ದೇಶದ ಒಡೆತನದಲ್ಲಿದ್ದು ಶೇಕಡ 25 ರಷ್ಟು ಆದಾಯ ತಂದುಕೊಡುವ ಕಾಲುವೆ ಆಗಿದೆ

  

ಪನಾಮ ಕಾಲುವೆ

   ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾಗಳ ಮಧ್ಯೆ ಫೆಸಿಫಿಕ್ ಸಾಗರ ಮತ್ತು ಅಟ್ಲಾಂಟಿಕ್ ಸಾಗರಗಳನ್ನು ಜೋಡಿಸಲು 1914 ರಲ್ಲಿ ಈ ಕಾಲುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 82 ಕಿ.ಮೀ. ಉದ್ದವಿರುವ ಈ ಕಾಲುವೆಯ ಒಡೆತನವು ಪನಾಮಾ ದೇಶದ ನಿಯಂತ್ರಣದಲ್ಲಿದೆ. ಈ ಕಾಲುವೆ ನಿರ್ಮಿಸುವ ಮೂಲಕ ಫೆಸಿಫಿಕ್ ಸಾಗರದಿಂದ ಹಡಗುಗಳು ಕೇಪ್ ಹಾರ್ನ್ ಮತ್ತು ಮೆಗಲನ್ ಜಲಸಂಧಿ ಮೂಲಕ ಅಟ್ಲಾಂಟಿಕ್ ಸಾಗರವನ್ನು ಸೇರುವ ದೀರ್ಘಮಾರ್ಗಕ್ಕೆ ಕಡಿವಾಣ ಹಾಕುವ ಮೂಲಕ ಅಧಿಕ ವೆಚ್ಚ ಮತ್ತು ಸಮಯವನ್ನು ಉಳಿಸಿದಂತಾಯಿತು.

      1789ರ ಫ್ರಾನ್ಸ್ ಮಹಾಕ್ರಾಂತಿಯ ನಂತರ ಫ್ರಾನ್ಸ್‌ನಲ್ಲಿ ಆಡಳಿತಕ್ಕೆ ಬಂದ ಫ್ರಾನ್ಸ್ ಕ್ರಾಂತಿಯ ಶಿಶು ಖ್ಯಾತಿಯ ನೆಪೋಲಿಯನ್ ಬೋನಾಪಾರ್ಟೆಯು ಸೂಯೆಜ್ ಕಾಲುವೆಯ ನಿರ್ಮಾಣದ ಕನಸನ್ನು ಮೊದಲು ಹೊಂದಿದ ವ್ಯಕ್ತಿ. 1799 ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದನು. ಆದರೆ ಅತಿಯಾದ ವೆಚ್ಚದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಗಿತ್ತು. 1859ರ ಸೆಪ್ಟೆಂಬರ್ 25 ರಿಂದ

ಸೂಯೆಜ್ ಕಾಲುವೆ ನಿರ್ಮಾಣ ಆರಂಭವಾಗಿದ್ದು, 1869ರ ನವೆಂಬರ್ 17 ರಂದು ಕಾಲುವೆ ನಿರ್ಮಾಣ ಪೂರ್ಣಗೊಂಡಿತು.

ಎನ್‌ಎಸ್‌ ಜಿ ಮುಖ್ಯಸ್ಥರಾಗಿ ಕನ್ನಡಿಗ ಎ.ಗಣಪತಿ ನೇಮಕ

     ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ)

ಮುಖ್ಯಸ್ಥರಾಗಿ ಕೊಡಗು ಹಿರಿಯ ಮೂಲದ ಅಧಿಕಾರಿ ಮನೆಯಪಂಡ ಎ. ಗಣಪತಿ ಐಪಿಎಸ್ (Maneyapanda A. Ganapa thy) ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕ ಸಮಿತಿಯು ಗಣಪತಿಯವರ ನೇಮಕಾತಿಗೆ ಅನುಮೋದನೆ ನೀಡಿದೆ. ಈ ಮೂಲಕ ಇವರು ದೇಶದ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸುತ್ತಿರುವ ಕನ್ನಡಿಗರಾಗಿದ್ದಾರೆ. ಭಯೋತ್ಪಾದಕ ನಿಗ್ರಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಎನ್‌ಎಸ್‌ ಮಹಾ ನಿರ್ದೇಶಕ ಹುದ್ದೆಯು ಸೇನೆಯ ಲೆಫ್ಟಿನೆಂಟ್ ಜನರಲ್, ವಾಯುಪಡೆಯ ಏರ್ ಮಾರ್ಷಲ್ ಹಾಗೂ ನೌಕಾ ಪಡೆಯ ವೈಸ್ ಅಡ್ಡಿರಲ್ ಹುದ್ದೆಗಳಿಗೆ ಸಮವಾಗಿದೆ. ಎನ್‌ಎಸ್‌ಜಿಯ

ಗಣಪತಿಯವರ ಬಗ್ಗೆ ಮಾಹಿತಿ: ಪ್ರಸ್ತುತವಾಗಿ

ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಎ. ಗಣಪತಿಯವರು ಕೊಡಗಿನ ಮೂಲದವರು. ಗಣಪತಿಯವರು 1986ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಉತ್ತರಾಖಂಡ ಕೇಡರ್‌ಗೆ ಸೇರಿದ್ದಾರೆ. ಉತ್ತರಾಖಂಡ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿ ಹೊಂದಿದ್ದರು. ಪ್ರಸ್ತುತವಾಗಿ ನಾಗರಿಕ ವಿಮಾನಯಾನ ಭದ್ರತಾ ವಿಭಾಗದ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣಪತಿಯವರು ಗೃಹ ಸಚಿವಾಲಯದಲ್ಲಿ ಆಂತರಿಕ ಭದ್ರತೆ ಮತ್ತು ಎಡಪಂಥೀಯ ಉಗ್ರವಾದದಂತಹ ಚಟುವಟಿಕೆಗಳನ್ನು ಹತ್ತಿಕ್ಕುವ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಎನ್‌ಎಸ್‌ಜಿಯ ಮುಖ್ಯಸ್ಥರಾಗಿ ನೇಮಕಗೊಂಡಿರುವ ಎಂ.ಎ. ಗಣಪತಿಯವರು 2024ರ ಫೆಬ್ರವರಿ 21 ರವೆಗೂ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ರಾಷ್ಟ್ರೀಯ ಭದ್ರತಾ ಪಡೆ (NSG-National Security Guard) ಕೇಂದ್ರ ಗೃಹ ವ್ಯವಹಾರ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಭಯೋತ್ಪಾದಕ ನಿಗ್ರಹ ಪಡೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಹಾಗೂ ಆಪರೇಷನ್ ಬ್ಲೂ ಸ್ಟಾರ್.


(1984) ಬಳಿಕ ರಾಷ್ಟ್ರೀಯ ಭದ್ರತಾ ಪಡೆ ಕಾಯ್ದೆ -1986 ಅನ್ವಯ 1986ರ ಸೆಪ್ಟೆಂಬರ್ 22ರಂದು ಸ್ಥಾಪಿಸಲಾಯಿತು. ಮುಂಬೈನಲ್ಲಿ 26/01 ಭಯೋತ್ಪಾದಕ ದಾಳಿ ಸಂಭವಿಸಿದಾಗ ಪಾಕಿಸ್ತಾನದ ಉಗ್ರರ ಹುಟ್ಟಡಗಿಸಿದ್ದು ಇದೇ ಪಡೆ. `Omnipresent,Omnipotent secu rity' ರಾಷ್ಟ್ರೀಯ ಭದ್ರತಾ ಪಡೆಯ ಧೈಯವಾಕ್ಯವಾಗಿದೆ.

ಎನ್‌ಎಸ್‌ಜಿ ಕೈಗೊಂಡ ಪ್ರಮುಖ ಕಾರ್ಯಾಚರಣೆಗಳು


* ಆಪರೇಶನ್ ಬ್ಲ್ಯಾಕ್ ಥಂಡರ್ 


* ಆಪರೇಶನ್ ಅಶ್ವಮೇಧ ಅಕ್ಷರಧಾಮ ದೇವಾಲಯದ ದಾಳಿಯ ಮೇಲಿನ ಕಾರ್ಯಾಚರಣೆ


* ಬ್ಲ್ಯಾಕ್ ಟಾರ್ನೆಡೊ (2008ರ ನವೆಂಬರ್ 26 ರ ಮುಂಬೈ ದಾಳಿ).

ಭಾರತದ ಮೊದಲ ಅಂತರ್‌ರಾಜ್ಯ ನದಿ ಜೋಡಣೆ: ಕೆನ್-ಬೆಟ್ವಾ ನದಿ ಜೋಡಣೆ

 


ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪರಿಕಲ್ಪನೆಯಾದ ಅಂತರ್‌ರಾಜ್ಯ ನದಿ ಜೋಡಣೆಯು

ಪ್ರಸ್ತುತವಾಗಿ ಸಾಕಾರಗೊಂಡಿದೆ. 2021ರ ಮಾರ್ಚ್ 22 ರಂದು ವಿಶ್ವ ಜಲದಿನದ ಅಂಗವಾಗಿ ಆರಂಭಗೊಂಡ ಜಲಶಕ್ತಿ ಅಭಿಯಾನ ಮಳೆಯನ್ನು ಹಿಡಿಯಿರಿ (Jal Shakti Abhiyan - Catch the Rain) ಆಂದೋಲನದ ಭಾಗವಾಗಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ನಡುವಿನ ಕೆನ್-ಬೆಟ್ಟಾ ನದಿ ಜೋಡಣೆಯ ಯೋಜನೆಯ Ken Betwa Link Project (KBLP) ಒಪ್ಪಂದಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಸಹಿ ಹಾಕಿವೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ನದಿ ಜೋಡಣೆಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ರಾಷ್ಟ್ರೀಯ ಸ್ವರೂಪ ಹೊಂದಿರುವ ನದಿ ಜೋಡಣೆಯ ಮೊದಲ ಯೋಜನೆಯು National Perspective Plan for interlinking of river ಇದಾಗಿದೆ. ಇದರೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಸ್ತಾಪಿಸಿದ ಯೋಜನೆಯು ಜಾರಿಗೆ ಬಂದಂತಾಗಿದೆ.


   ಅಂತರ್ ನದಿ ಜೋಡಣೆಯ ರಾಷ್ಟ್ರೀಯ ಮಹಾ ಯೋಜನೆ


KEN BETWA RIVER LINKING PROJECT


ಭಾರತದ ಮೊದಲ ಅಂತರ್‌ನದಿ 

ಜೋಡಣಾ ಯೋಜನೆಯ ಎನಿಸಿರುವ ಕೆನ -ಬೆಟ್ವಾ ನದಿ ಜೋಡಣಾ ಯೋಜನೆಯ ಅನುಷ್ಠಾನದ ಐತಿಹಾಸಿಕ ಒಪ್ಪಂದವು 2021ರ ಮಾರ್ಚ್‌ನಲ್ಲಿ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂತರ್ ನದಿ ಜೋಡಣೆಯ ಮೂಲಕ ಹೆಚ್ಚಿನ ನೀರಿರುವ ಪ್ರದೇಶಗಳಿಂದ ಬರಪೀಡಿತ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ನೀರನ್ನು ಒದಗಿಸುವ ಕನಸು ಕಂಡಿದ್ದರು. ಭಾರತದ ಜಲ ಸಂಬಂಧಿತ ಉಜ್ವಲ ಭವಿಷ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಒಪ್ಪಂದ ಇದಾಗಿದೆ. ನಮ್ಮ ಕೃಷಿ ಭೂಮಿಯನ್ನು


ಹಸಿರು ಮಾಡುವ ಗರಿಷ್ಟ ಪ್ರಯತ್ನ ಇದಾಗಲಿದೆ.


ಅಂತರ್‌ನದಿ ಜೋಡಣೆ ಯೋಜನೆಯ ಸ್ವರೂಪ


ದೌಧಾನ್‌ ಅಣೆಕಟ್ಟು (Dhaudhan Dam) ಹಾಗೂ ಕಾಲುವೆ ನಿರ್ಮಾಣ ಮಾಡಿ ಕೆನ್ ನದಿಯ ನೀರನ್ನು ಬೆಟ್ಟಾ ನದಿಗೆ ಹರಿಸಲಾಗುತ್ತಿದೆ. ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ, ಲೋವರ್ ಓಆರ್‌ಆರ್ ಯೋಜನೆ, ಕೋಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ ನಿರ್ಮಾಣ ಸೇರಿದಂತೆ ವಿವಿಧೋದ್ದೇಶ ಯೋಜನೆಗಳನ್ನು ಇದು ಒಳಗೊಂಡಿದೆ.


ಪ್ರಯೋಜನಗಳು

      10.62 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಮತ್ತು 62 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಲಭಿಸಿದೆ. 103 ಮೆಗಾ ವ್ಯಾಟ್ ಜಲವಿದ್ಯುತ್ ಉತ್ಪಾದನೆಯೂ ಕೂಡ ಆಗಲಿದೆ. ಮಧ್ಯಪ್ರದೇಶದ 9 ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಈ ಯೋಜನೆಯು ನೀರಿನ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಉಪಯುಕ್ತವಾಗಲಿದೆ.


ಯೋಜನೆಯ ಪರಿಣಾಮಗಳು

       ಕೆನ್ ಮತ್ತು ಬೆಟ್ಟಾ ನದಿಗಳ ಜೋಡಣೆಯಿಂದ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶವು ನಾಶವಾಗಲಿದೆ ಎಂಬುದು ಅನೇಕ ಪರಿಸರವಾದಿಗಳ ವಾದವಾಗಿದೆ. ಯೋಜನೆ ಅನುಷ್ಠಾನ ಮತ್ತು ನಿರ್ವಹಣೆ ಅಧಿಕ ವೆಚ್ಚ ಆಗಲಿದೆ.


ರಾಷ್ಟ್ರೀಯ ಅಂತರ್ ನದಿ ಜೋಡಣೆಯ ದೂರದೃಷ್ಟಿ ಯೋಜನೆ (NATIONAL PERSPECTIVE PLAN FOR INTERLINKING OF RIVERS)

ರಾಷ್ಟ್ರೀಯ ದೂರದೃಷ್ಟಿ ಯೋಜನೆ ಅಥವಾ ರಾಷ್ಟ್ರೀಯ ನದಿ ಸಂಪರ್ಕಿತ ಯೋಜನೆ (National River Linking Project) ಎಂಬುದು ನೀರಿನ

ಕೊರತೆಯಿರುವ ಪ್ರದೇಶಗಳಿಗೆ ಹೆಚ್ಚು ನೀರು ಇರುವ ಪ್ರದೇಶಗಳಿಂದ ಸಂಪರ್ಕಿಸುವುದು. ಪ್ರವಾಹದಿಂದ ಉಂಟಾದ ಹೆಚ್ಚುವರಿ ನೀರನ್ನು ಕೊರತೆಯಿರುವ ಪ್ರದೇಶಗಳಿಗೆ ಪೂರೈಸುವುದು. ಇದನ್ನು ಅಂತರ್‌ ಜಲ ವರ್ಗಾವಣಾ ಯೋಜನೆ ಎನ್ನಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಯ ರಾಷ್ಟ್ರೀಯ ದೂರದೃಷ್ಟಿ ಯೋಜನೆಯ ಅನ್ವಯ 1980ರ ನಂತರ ಭಾರತದಲ್ಲಿ ಒಟ್ಟು 30 ನದಿ ಸಂಪರ್ಕಿತ ಯೋಜನೆಗಳ ಸಾಧ್ಯತಾ ವರದಿಯು ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಇವುಗಳಲ್ಲಿ 16 ಪರ್ಯಾಯ ಪ್ರಸ್ಥಭೂಮಿ, 14 ಹಿಮಾಲಯನ್ ಪ್ರಾಂತ್ಯಗಳಿಗೆ ಸಂಬಂಧಿಸಿವೆ.


Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

ಭಾರತದ ಪ್ರಮುಖ ಗವರ್ನರ್‌ಗಳು-ಜನರಲ್ ಮತ್ತು ವೈಸ್‌ರಾಯ್

  ಪರಿಚಯ 1600 ರ ಡಿಸೆಂಬರ್ 31 ರಂದು ಈಸ್ಟ್ ಇಂಡಿಯಾ ಕಂಪನಿಯು ರಾಣಿ ಎಲಿಜಬೆತ್ I ರಿಂದ ರಾಯಲ್ ಚಾರ್ಟರ್ ಪಡೆದಾಗ ಭಾರತದ ಮೇಲೆ ಬ್ರಿಟಿಷ್ ಆಡಳಿತವು ಒಂದು ವ್ಯಾಪಾರ ಘಟಕವಾಗಿ ಪ್ರಾರಂಭವಾಯಿತು . ಸುಮಾರು ಮೂರು ಶತಮಾನಗಳ ಅವಧಿಯಲ್ಲಿ , ಬ್ರಿಟಿಷರು ವ್ಯಾಪಾರ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದರು ಜಗತ್ತಿನಲ್ಲಿ . ಸಣ್ಣ ದ್ವೀಪ ದೇಶವಾದ ನಂತರವೂ ಬ್ರಿಟನ್ ವಿಶ್ವದ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಸ್ಥಾಪಿಸಲು ಸಾಧ್ಯವಾಯಿತು .  " ಸೂರ್ಯನು ಎಂದಿಗೂ ಅಸ್ತಮಿಸದ ಸಾಮ್ರಾಜ್ಯ " ಎಂಬ   ಪದಗುಚ್ by ದಿಂದ ಸಾಮ್ರಾಜ್ಯದ ವ್ಯಾಪ್ತಿಯನ್ನು ಚಿತ್ರಿಸಬಹುದು   . ತನ್ನ ವಸಾಹತುಗಳಲ್ಲಿ ಸ್ಥಾಪಿಸಿದ ಬಲವಾದ ಮತ್ತು ಪರಿಣಾಮಕಾರಿ ಅಧಿಕಾರಶಾಹಿಯ ಹಿನ್ನೆಲೆಯಲ್ಲಿ ಬ್ರಿಟನ್ ಈ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು .  ಭಾರತದಲ್ಲಿ , ಗವರ್ನರ್ - ಜನರಲ್ ಮತ್ತು ವೈಸ್ ‌ ರಾಯ್ ‌ ಗಳ ಮೂಲಕ ಬ್ರಿಟಿಷರು ಈ ನಿಯಂತ್ರಣವನ್ನು ಸ್ಥಾಪಿಸಲು ಸಾಧ್ಯವಾಯಿತು . §   ಬಂಗಾಳದ ಗವರ್ನರ್ - ಜನರಲ್ (1773-1833):   ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ , ಅದು " ಬಂಗಾಳದ ಗವರ್ನರ್ "  (   ಬಂಗಾಳದ   ಮೊದಲ ಗವರ್ನರ್ : ರಾಬರ್ಟ್ ಕ್ಲೈವ್ )   ಎಂಬ ಹುದ್ದೆ...

Criminal Procedure Bill in kannada

  ಕ್ರಿ ಮಿನಲ್ ಪ್ರೊಸೀಜರ್ ಬಿಲ್ ಈ ಸಂಪಾದಕೀಯವು ದಿ ಹಿಂದೂ 01/04/2022 ರಲ್ಲಿ ಪ್ರಕಟವಾದ “ಇದು   ಗೌಪ್ಯತೆಯ ಮೇಲಿನ ಕ್ರಿಮಿನಲ್ ಅಟ್ಯಾಕ್  ” ಅನ್ನು ಆಧರಿಸಿದೆ .   ಇದು ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022 ಗೆ ಸಂಬಂಧಿಸಿದ ಮಹತ್ವ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಪ್ರಿಲಿಮ್ಸ್‌ಗಾಗಿ:   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022, ಗೌಪ್ಯತೆಯ ಹಕ್ಕು , ಕೆ.ಎಸ್.ಪುಟ್ಟಸ್ವಾಮಿ ತೀರ್ಪು , ಪ್ರಿವೆಂಟಿವ್ ಡಿಟೆನ್ಶನ್ , NCRB, ರಾಜ್ಯ ವಿರುದ್ಧ ರಾಮ್ ಬಾಬು ಮಿಶ್ರಾ ( 1980), ಡೇಟಾ ಸಂರಕ್ಷಣಾ ಕಾನೂನು , ಭಾರತದ ಕಾನೂನು ಆಯೋಗ , ಮೂಲಭೂತ ಹಕ್ಕುಗಳು ಮುಖ್ಯ ವಿಷಯಗಳಿಗೆ:   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022 ಮತ್ತು ಸಮಸ್ಯೆಗಳು , ತೀರ್ಪುಗಳು ಮತ್ತು ಪ್ರಕರಣಗಳು , ಮೂಲಭೂತ ಹಕ್ಕುಗಳು ಇತ್ತೀಚೆಗೆ , ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರು   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022   ಅನ್ನು   ಲೋಕಸಭೆಯಲ್ಲಿ   ಪರಿಚಯಿಸಿದರು , ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧದ ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ. ಆದಾಗ್ಯೂ , ಬಯೋಮೆಟ್ರಿಕ್ ಮತ್ತು ಜೈವಿಕ ದತ್ತಾಂಶಗಳ ಸಂಗ್ರಹವನ್ನು ಸಕ್ರಿಯಗೊಳಿಸುವ ಪ್ರಸ್ತಾಪವು ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.