mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Saturday, 8 May 2021

2021 ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ 2021 Index of Economic Freedom

 2021 ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಭಾರತ 121ನೇ ಸ್ಥಾನ & ಅಗ್ರಸ್ಥಾನದಲ್ಲಿ ಸಿಂಗಾಪುರ

ಅಮೆರಿಕಾದ ವಾಷಿಂಗ್‌ಟನ್ ಮೂಲದ ಥಿಂಕ್ ಟ್ಯಾಂಕ್ ಸಂಸ್ಥೆಯಾದ “ದಿ ಹಂಟೇಜ್ ಫೌಂಡೇಶನ್" ಹಾಗೂ "ವಾಲ್ ಸ್ಟ್ರೀಟ್ ಜರ್ನಲ್ ಅವರು 2021ನೇ ಸಾಲಿನ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ (Economic Freedom Index) ವನ್ನು 2021ರ ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ್ದು, 2019ರ ಜುಲೈನಿಂದ 2020ರ ಜೂನ್‌ವರೆಗಿನ ಮಾಹಿತಿ ಅನ್ವಯ ಭಾರತವು 121ನೇ ಸ್ಥಾನ (56.5)ದನ್ನು ಪಡೆದಿದೆ. ಹಾಗೂ

ಎಷ್ಯಾ ಫೆಸಿಫಿಕ್ ವಿಭಾಗದ 40 ದೇಶಗಳ ಪೈಕಿ ಭಾರತವು 56,5 ಅಂಕಗಳೊಂದಿಗೆ 26ನೇ ಸ್ಥಾನ ಪಡೆದಿದೆ. 2020ರ ವರದಿಯಲ್ಲಿ ಭಾರತವ

56.5 ಅಂಕಗಳೊಂದಿಗೆ 120ನೇ ಸ್ಥಾನ ಪಡೆದಿತ್ತು. ಮೊದಲ ಬಾರಿ ಹಾಂಕಾಂಗ್ ದೇಶವನ್ನು ಸಮೀಕ್ಷೆಗೆ ಒಳಪಡಿಸಿಲ್ಲ.

[ಸೂಚ್ಯಂಕದಲ್ಲಿ ಭಾರತ:- 2021ರ ಮಾರ್ಚ್‌ನಲ್ಲಿ ಪ್ರಕಟಗೊಂಡಿರುವ ಮುಕ್ತ ಆರ್ಥಿಕ ನೀತಿ ವರದಿಯಲ್ಲಿ ಭಾರತವು 121ನೇ ಸ್ಥಾನ ಪಡೆದಿದೆ. 56.5 ಅಂಕಗಳೊಂದಿಗೆ ಭಾರತವು ಸುಮಾರು ಮುಕ್ತವಲ್ಲದ್ದು (Mostly Unfree Category) ಎಂಬ ವರ್ಗೀಕರಣದಲ್ಲಿ ಕಂಡುಬಂದಿದೆ. ಕೋವಿಡ್-19ರ ಸಾಂಕಾಮಿಕ ಹರಡುವಿಕೆ ನಂತರ ಮೊದಲ ಬಾರಿ ಈ ಸೂಚ್ಯಂಕವು ಪ್ರಕಟವಾಗಿದೆ. ಉದ್ಯಮ ಸ್ವಾತಂತ್ರದಲ್ಲಿ ಭಾರತವು ಸುಧಾರಣೆ ಕಂಡರೂ ನ್ಯಾಯಾಂಗ ಪರಿಣಾಮಕಾರತ್ವ ಮತ್ತು ಇತರ ಮಾನದಂಡಗಳಲ್ಲಿನ ಕುಂಠಿತ ಬೆಳವಣಿಗೆಯು ದೇಶದ ಒಟ್ಟು ಬ್ಯಾಂಕಿಂಗ್‌ ಅಂಕದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ದೇಶದಲ್ಲಿ


ವಿತ್ತೀಯ ಆರೋಗ್ಯ, ಸರ್ಕಾರದ ನಿಯಮಾವಳಿಗಳ ಸದೃಢತೆ, ತೆರಿಗೆ ಸಂಹಿತೆಗಳ ಬದಲಾವಣೆ, ಹಣಕಾಸು ಸ್ವಾತಂತ್ರ್ಯ ಬದಲಾವಣೆಯ ಅಗತ್ಯತೆಗೆ ಸಲಹೆ ನೀಡಿದೆ.


ವಿಶ್ವದ ಅತಿ ಹೆಚ್ಚು ಮುಕ್ತ ಆರ್ಥಿಕ ವ್ಯವಸ್ಥೆ - ಸಿಂಗಾಪುರ ಹೆರಿಟೇಜ್ ಫೌಂಡೇಷನ್ ಮತ್ತು ವಾಲ್‌ ಸ್ಟ್ರೀಟ್ ಜರ್ನಲ್  ಪ್ರಕಟಿಸಿದ ವಿಶ್ವದ ಅತಿ ಹೆಚ್ಚು ಮುಕ್ತ ಆರ್ಥಿಕ ನೀತಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸಿಂಗಾಪುರ ದೇಶವು 89.7 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಸಿಂಗಾಪುರ ದೇಶದಲ್ಲಿ ಸರ್ಕಾರದ ವೆಚ್ಚ ವಿಭಾಗದಲ್ಲಿ ಕಂಡುಬಂದ ಸುಧಾರಣೆಯು ಸೂಚ್ಯಂಕದಲ್ಲಿ 0.3 ಅಂಕಗಳನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಂಡುಬಂದಿದೆ.


ಜಾಗತಿಕ ಲಿಂಗ ಅಂತರ ವರದಿ (Global Gender Gap Report)


 2021 ರ ಮಾರ್ಚ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ (WEF-World Economic Forum) ಯಿಂದ ಪ್ರಕಟಗೊಂಡ


WORLD CONOMIC


Global Gender FORUM Gap Report 2021 INSIGHT REPORT


MARCH 2021


ಜಾಗತಿಕ ಅಂಗ ಅಂತರ ವರದಿ- 2021ರಲ್ಲಿ 156 ರಾಷ್ಟ್ರಗಳಿಗೆ ಸಂಬಂಧಿಸಿದ್ದು, ಭಾರತವು 0.63 ಅಂಕಗಳೊಂದಿಗೆ 140ನೇ ಸ್ಥಾನ ಪಡೆದಿದೆ. 2020ರ ವರದಿಯಲ್ಲಿ ಭಾರತವು ಈ ಸೂಚ್ಯಂಕದಲ್ಲಿ 112 ನೇ ಸ್ಥಾನ ಪಡೆದಿತ್ತು. ಆದರೆ 2021 ರಲ್ಲಿ ಭಾರತವು 28 ಸ್ಥಾನಗಳನ್ನು ಕಳೆದುಕೊಂಡಿದೆ. ರಾಜಕೀಯ, ಆರ್ಥಿಕ, ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ

ವಿವಿಧ ಆಯಾಮಗಳ ಪ್ರಗತಿಗೆ ಈ ಸೂಚ್ಯಂಕವು ಸಂಬಂಧಿಸಿದೆ. ದಕ್ಷಿಣ ಏಷ್ಯಾ ವಿಭಾಗವು ವರದಿಯನ್ವಯ ಅತ್ಯಂತ ಕಳಪೆ ಪ್ರಗತಿ ಹೊಂದಿದೆ.


   ಭಾರತವು 2021ರ ಜಾಗತಿಕ ಲಿಂಗ ಅಂತರ ಸೂಚ್ಯಂಕ | ವರದಿಯಲ್ಲಿ 0.63 ಅಂಕಗಳೊಂದಿಗೆ 140ನೇ ಪಡೆದಿದೆ. ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ಪೈಕಿ ಭಾರತವು 5ನೇ ಸ್ಥಾನ ಹಾಗೂ ಸಾರ್ಕ್ ಒಕ್ಕೂಟದ ರಾಷ್ಟ್ರಗಳ ಪೈಕಿ 6ನೇ ಮಹಿಳೆ ಮತ್ತು ಸ್ಥಾನ ಪಡೆದಿದೆ. ಭಾರತವು 62.5% ಪ್ರಮಾಣದಲ್ಲಿ ಮಾತ್ರ

ಲಿಂಗ ತಾರತಮ್ಯವನ್ನು ನಿವಾರಿಸಲು ಸಫಲವಾಗಿದೆ. ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವಕಾಶಗಳ ಉಪ ಸೂಚ್ಯಂಕದಲ್ಲಿ ಲಿಂಗ ಅಂತರ ಹೆಚ್ಚಾಗಿದೆ. ರಾಜಕೀಯ


ಸಬಲೀಕರಣ ಕುರಿತ ಸೂಚ್ಯಂಕದಲ್ಲಿ ಭಾರತವು ಶೇ. 13.5 ಅಂಕಗಳಷ್ಟು ಹಿನ್ನಡೆ ಸಾಧಿಸಿದೆ. 2019 ರಲ್ಲಿ ಮಹಿಳಾ ಸಚಿವರ ಸಂಖ್ಯೆ ಶೇ. 23.1 ರಷ್ಟಿದ್ದು, 2021ರಲ್ಲಿ ಶೇ. 9.1 ಕ್ಕೆ ಕುಸಿದಿದೆ. ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆಯಾಗಿದ್ದು, ಭಾರತದ ರಾಂಕಿಂಗ್ ಕುಸಿಯಲು ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಮಹಿಳಾ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆ ದರವು ಶೇ. 24.8 ರಷ್ಟಿದ್ದು, ಪ್ರಸ್ತುತ 22.3 ಕ್ಕೆ ಇಳಿಕೆಯಾಗಿದೆ. ಶೇ. ದೇಶದಲ್ಲಿ ಮಹಿಳೆಯರ ಆದಾಯವು ಪುರುಷರ ಆದಾಯದ 1/5 ರಷ್ಟಿದೆ. ದೇಶದಲ್ಲಿ ಭ್ರೂಣಲಿಂಗ ಪತ್ತೆ ಅಧಿಕ ಪ್ರಮಾಣದಲ್ಲಿ

ಇರುವುದರಿಂದ ಶಿಶುಗಳ ಲಿಂಗಾನುಪಾತದಲ್ಲಿಯೂ ಭಾರೀ ಅಂತಹ ಕಂಡುಬಂದಿದೆ. ಪ್ರತೀ ನಾಲ್ಕು ಮಹಿಳೆಯರ ಪೈಕಿ ಒಬ್ಬರಿಗಿಂತ ಹೆಚ್ಚು ಮಂದಿ ತನ್ನ ಜೀವಿತಾವಧಿಯಲ್ಲಿ ಹತ್ತಿರದ ಸಂಬಂಧಿಗಳಿಂದ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಶೇ. 71.9 ರಷ್ಟು ಲಿಂಗ ಅಂತರ ನಿವಾರಣೆಯಾಗಿದ್ದು, ಇದು ಅಫ್ಘಾನಿಸ್ತಾನದಲ್ಲಿ ಶೇ. 44.4 ರಷ್ಟು ಮಾತ್ರ ಇದೆ.


    ವಿಶ್ವ ಆರ್ಥಿಕ ವೇದಿಕೆ (WEF): ಸ್ಥಾಪನೆ:- 1971, * ಮೊದಲ ಹೆಸರು: ಐರೋಪ್ಯ ನಿರ್ವಹಣಾ ವೇದಿಕೆ. 


* ಮರುನಾಮಕರಣ: 1987,


ಕೇಂದ್ರ ಕಛೇರಿ: ಸ್ವಿಡ್ವರ್ಲೆಂಡ್‌ನ ಕಲೋಗನಿ, *ಪ್ರಸ್ತುತ ಅಧ್ಯಕ್ಷರು: Klaus Schwab (The fourth Industrial revolution ಗ್ರಂಥದ ಕರ್ತೃ) * ವಾರ್ಷಿಕ ಸಭೆ ನಡೆಸುವ ಸ್ಥಳ: ಸ್ವಿಡ್ವರ್ಲೆಂಡ್‌ನ ದಾವೋಸ್ (2021ರ ಜನವರಿಯಲ್ಲಿ The Great Reset ಧೈಯವಾಕ್ಯದಲ್ಲಿ ಜರುಗಿತ್ತು).


* ಪ್ರಕಟ ಪಡಿಸುವ ವರದಿಗಳು: ಜಾಗತಿಕ ಸ್ಪರ್ಧಾತ್ಮಕ ವರದಿ, ಜಾಗತಿಕ ಮಾಹಿತಿ ತಂತ್ರಜ್ಞಾನ ವರದಿ, ಜಾಗತಿಕ ಲಿಂಗ ಅಂತರ ವರದಿ, ಪ್ರವಾಸೋದ್ಯಮ ಸ್ಪರ್ಧಾತ್ಮಕ ವರದಿ, ಅಂತರ್ಗತ ಅಭಿವೃದ್ಧಿ ಸೂಚ್ಯಂಕ, ಜಾಗತಿಕ ಗಂಡಾಂತರ ವರದಿ.

Friday, 7 May 2021

ವಿಶ್ವ ಸಂತೋಷ ಸೂಚಂಕ

 


2021ರ ವಿಶ್ವ ಸಂತೋಷ ಸೂಚ್ಯಂಕ (world Happiness Report) 9ನೇ ಆವೃತ್ತಿಯ ವರದಿಯು How Happy Their Citizen Perceive Themselves to Be ಶೀರ್ಷಿಕೆ ಅಡಿಯಲ್ಲಿ 2021ರ ಮಾರ್ಚ್ 20ರಂದು ಜಾಗತಿಕ ಸಂತೋಷ ಮಂಡಳಿಯು ಬಿಡುಗಡೆ ಮಾಡಿತು. ಜಗತ್ತಿನ 149 ರಾಷ್ಟ್ರಗಳ 2018-2020ರ ದತ್ತಾಂಶ ಆಧಾರದ ಮೇಲೆ ಸೂಚ್ಯಂಕವನ್ನು ಮತ್ತು 2020ರ ವರ್ಷದ ಮಾಹಿತಿಯನ್ನಾಧರಿಸಿ ವರದಿ ಸಿದ್ಧಪಡಿಸಲಾಗಿದ್ದು, ಈ ವರದಿಯಲ್ಲಿ ಭಾರತವು 3.819 ಅಂಕಗಳೊಂದಿಗೆ 139ನೇ ಸ್ಥಾನ ಪಡೆದಿದೆ. ಫಿನ್‌ಲ್ಯಾಂಡ್ ದೇಶವು 7.84 ಅಂಕಗಳೊಂದಿಗೆ ಸತತವಾಗಿ ನಾಲ್ಕನೇ ಬಾರಿ ವರದಿಯಲ್ಲಿ ಅಗ್ರಸ್ಥಾನ ಪಡೆದಿದೆ. 2020ರ ವರದಿಯಲ್ಲಿ ಭಾರತವು 144ನೇ ಸ್ಥಾಪ ಪಡೆದಿತ್ತು.


ವಿಶ್ವ ಸಂತೋಷ ಸೂಚ್ಯಂಕ?

    ಜಗತ್ತಿನ ವಿವಿಧ ರಾಷ್ಟ್ರಗಳ ಜನರ ವ್ಯಕ್ತಿಗತ ಯೋಗಕ್ಷೇಮ/ಕಲ್ಯಾಣ ಸ್ಥಿತಿಯನ್ನು ಮಾಪನ ಮಾಡುತ್ತದೆ. ಜನರು ಏಕೆ & ಹೇಗೆ ಕಲ್ಯಾಣ ಸ್ಥಿತಿಯನ್ನು ಹೊಂದಿದ್ದಾರೆ ಎಂಬುದರ ಮೇಲೆ ಸಿದ್ಧಪಡಿಸಲ್ಪಟ್ಟ ವರದಿಯಾಗಿದೆ. 2020ರ ಅವಧಿಯಲ್ಲಿ ಕೋವಿಡ್-19ರ ಪರಿಣಾಮವು ಜನರ ಜೀವನದ ಗುಣಮಟ್ಟ ಮತ್ತು ರಚನೆಯ ಮೇಲೆ ಉಂಟಾದ ಪರಿಣಾಮಗಳು, ಕೋವಿಡ್ ಸಾಂಕ್ರಾಮಿಕತೆ ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರ ರೂಪಿಸಿದ ಕಾರ್ಯಪ್ರಗತಿ, ಮಾನವ ಜೀವನ ನಿರೀಕ್ಷೆ, ಸಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡಿದೆ.

    ಅಂತಾರಾಷ್ಟ್ರೀಯ ಸಂತೋಷ ದಿನ

ಮಾರ್ಚ್ 2021ರ ಮಾರ್ಚ್ 20 ರಂದು ಅಂತಾರಾಷ್ಟ್ರೀಯ ಸಂತೋಷ ದಿನವನ್ನು Happiness For All For ver, Keep Calm, Staywise, Be Kind ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ಜನರ ಜೀವನದಲ್ಲಿ ಸಂತೋಷದ ಮಹತ್ವತೆ ತಿಳಿಸುವುದು ಈ ದಿನದ ಉದ್ದೇಶವಾಗಿದೆ. 2006 ರಲ್ಲಿ ಜೆ. ಇಲಿಯಾನ್ ಅವರ ಪ್ರಸ್ತಾಪದಂತೆ 2012ರ ಜೂನ್ 28 ರಂದು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಂತೋಷ ದಿನವನ್ನು 2013ರ ಮಾರ್ಚ್ 20 ರಂದು ಮೊದಲ ಬಾರಿ ಆಚರಿಸಲಾಯಿತು. 2021ರ ಮಾರ್ಚ್ 3 ರಿಂದ 23ರವರೆಗೆ ವಿಶ್ವ ಸಂತೋಷ ಸಪ್ತಾಹವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ ಸಲ್ಯೂಷನ್ ನೆಟ್ವರ್ಕ್ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರ ಕೊಲಂಬಿಯಾ ವಿವಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಸಂತೋಷ ವರದಿಯು ಪ್ರಕಟವಾಗಿದೆ.

    ಫೌಂಡೇಶನ್, ಬ್ರಿಟೀಷ್ ಕೊಲಂಬಿಯಾ ವಿಶ್ವವಿದ್ಯಾಲಯ, ಕೆನಡಿಯನ್ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ರಿಸರ್ಚ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಕಟಿಸುತ್ತದೆ. > ಸೂಚ್ಯಂಕದ 6 ಮಾನದಂಡಗಳು: ತಲಾದಾಯ, ಸಾಮಾಜಿಕ ಬೆಂಬಲ, ಸಾರ್ವಜನಿಕ ನಂಬಿಕೆ, ಆರೋಗ್ಯಯುತ ಜೀವನ ನಿರೀಕ್ಷೆ, ಸಾಮಾಜಿಕ ಸ್ವಾತಂತ್ರ್ಯ, ಔದಾರ್ಯತೆ ಸೂಚ್ಯಂಕದ ಬಗ್ಗೆ ಮಾಹಿತಿ: ಮೊದಲ ಬಾರಿ ಪ್ರಕಟ: 2012ರ ಏಪ್ರಿಲ್ 1. ವಿಶ್ವ ಸಂತೋಷ ಸೂಚ್ಯಂಕವು ಗ್ಯಾಲಪ್ ಇಂಟರ್ ನ್ಯಾಷನಲ್‌ನ 2018-20ರ ವ್ಯಾಪ್ತಿಯ 149 ರಾಷ್ಟ್ರಗಳ ಮಾಹಿತಿಗೆ ಸಂಬಂಧಿಸಿದೆ. ದೇಶಗಳಿಗೆ 0 ರಿಂದ 10 ಅಂಕವನ್ನು ನೀಡುವ ಮೂಲಕ ಬ್ಯಾಂಕ್‌ನ್ನು ಕೊಡಲಾಗುತ್ತದೆ. ಜಾನ್ ಎಫ್ ಹೆಲ್ಲಿವೆಲ್, ರಿಚರ್ಡ್ ಲೇಯಾರ್ಡ್ ಮತ್ತು ಜೆಫ್ರಿ ಸ್ಯಾಚಸ್‌ರವರು ವರದಿಯನ್ನು ಪರಿಷ್ಕರಿಸುವ ವ್ಯಕ್ತಿಗಳಾಗಿದ್ದಾರೆ.

2020ರ ಸಾಲಿನ ಅಬೆಲ್ ಪ್ರಶಸ್ತಿ(ಗಣಿತಶಾಸ್ತ್ರದ ನೊಬೆಲ್)

         2021ರ ಮಾರ್ಚ್ 18 ರಂದು ನಾರ್ವೆ ಸರ್ಕಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಿತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗಣಿತಶಾಸ್ತ್ರಜ್ಞರಿಗೆ ಪ್ರತಿ ವರ್ಷದಂತೆ ಅಬೆಲ್ ಪ್ರಶಸ್ತಿಯನ್ನು ಪ್ರಕಟಿಸಿದೆ. ಅಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ನಿರ್ಧಾರದಂತೆ ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನ ವಿಷಯಗಳಲ್ಲಿ ಅತ್ಯುತ್ತಮ ಸಹ ಸಂಬಂಧವನ್ನು ಬೆಸೆಯುವಲ್ಲಿ ಕಾರಣರಾದ ಇಬ್ಬರು ಸಂಶೋಧಕರಾದ ಹಂಗೇರಿಯ ಲಾಸ್‌ ಲೊವಾಸ್ (Laszlo lovasz) ಮತ್ತು ಅಮೆರಿಕದ

ಅವಿ ವಿಗ್‌ ಡರ್ಸನ್‌ (Avi wigDerson) ಆಯ್ಕೆಯಾಗಿದ್ದಾರೆ. 7.5 ಮಿಲಿಯನ್ ನಾರ್ವೆಯನ್ ಕ್ರೋನಾರ್ ಮೊತ್ತದ ಅಬೆಲ್ ಪ್ರಶಸ್ತಿಯನ್ನು ಡಾ|| ಲೋವಾಸ್ ಮತ್ತು ಡಾ|| ವಿಗ್ ಡರ್ಸನ್ ಹಂಚಿಕೊಳ್ಳಲಿದ್ದಾರೆ.


ಅಬೆಲ್ ಪುರಸ್ಕೃತ ಲಾಸ್‌ಲೋ ಲೋವಾಸ್ ಬಗ್ಗೆ ಮಾಹಿತಿ

    ಹಂಗೇರಿಯ ಬುಡಾ ಪೆಸ್ಟ್‌ನಲ್ಲಿನ ಆಲೈಡ್ ರೆಂಟ್ ಇ ಸಂಸ್ಥೆಯ ಲಾಸ್‌ಲೋ  ಲೊವಾಸ್ ರವರು 2021ರ ಅಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಕಂಪ್ಯೂಟರ್‌ ಆಲ್ಗರಿದಮ್ ದಕ್ಷತೆ ಮತ್ತು ವೇಗದ ಅಧ್ಯಯನ, ಲೆಕ್ಕಾಚಾರದ ಸಂಕೀರ್ಣತೆ ವಿಭಾಗದಲ್ಲಿ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಗಣಿತ ಶಾಸ್ತ್ರದ ವಿವಿಧ ವಿಭಾಗಗಳಲ್ಲಿ ದುಡಿದಿರುವ ಲೊವಾಸ್ ರವರು ಗಣಿತದ ಶಾಖೆ ಯಾದ ಅನ್ವಯಿಕ ಗ್ರಾಫ್ ಸಿದ್ಧಾಂತದ ಮೂಲಕ ಲೆಕ್ಕಾಚಾರದ ಸಂಕೀರ್ಣತೆ ಪರಿಕಲ್ಪನೆಯನ್ನು ನೀಡಿದ್ದಾರೆ. ಮೊಬೈಲ್ ಕಂಪ್ಯೂಟಿಂಗ್, ಕ್ರಿಸ್ಟೋಗ್ರಫಿ, ಸಂಖ್ಯಾ ಸಿದ್ಧಾಂತದಲ್ಲೂ ಲೊವಾಸ್ ಆಲ್ಗರಿದಮ್ ಅನ್ವಯಿಕೆ ಮಾಡಲು ಪ್ರಯತ್ನಿಸಿದ್ದಾರೆ.

       ಅಬೆಲ್ ಪುರಸ್ಕೃತ ಅವಿ ಬಿಗ್ ಡರ್ಸನ್ ಬಗ್ಗೆ ಮಾಹಿತಿ

ಅಮೆರಿಕದ ಪ್ರಿನ್ಸ್‌ಟನ್ ನಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡಿ ವಿಭಾಗದಲ್ಲಿ ಗಣಿತ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ವಿಗ್ ಡರ್ಸನ್ ರವರು ಕಂಪ್ಯುಟೇಷನಲ್ ವಿಭಾಗದ ಅಗ್ರಗಣ್ಯ ಎನಿಸಿದ್ದಾರೆ. ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ವಿವಿಧ ವಿಭಾಗಗಳಲ್ಲಿ ವಿಗ್ ಡರ್ಸನ್ ಕೊಡುಗೆ ನೀಡಿದ್ದಾರೆ ರೆ, ಹಣಕಾಸು ಮಾರುಕಟ್ಟೆಯ ಬಿಕ್ಕಟ್ಟು, ಸೌರವ್ಯೂಹದಲ್ಲಿನ ಗ್ರಹಗಳ ಚಲನೆ, ಮೆದುಳಿನ ನ್ಯೂರಾನ್‌ಗಳ ಕಾರ್ಯ ಚಟುವಟಿಕೆಗಳನ್ನು ಸಹ ಆಲ್ಗರಿದಮ್ ಪ್ರಕ್ರಿಯೆಯ ಮೂಲಕ ಅಧ್ಯಯನ ಮಾಡಬಹುದೆಂದು ತಿಳಿಸಿದ್ದಾರೆ.

    ಗಣಿತಶಾಸ್ತ್ರದ ನೊಬೆಲ್‌ ಬೆಲ್‌ ಪ್ರಶಸ್ತಿ (Abel Prize)


* ನಾರ್ವೆಯ ಗಣಿತಶಾಸ್ತ್ರಜ್ಞರಾದ ನೀಲ್ಸ್ ಹೆನ್ರಿಕ್ ಅಬೆಲ್ (Neils Hen rik Abel) (1802-1829) ರವರ ಹೆಸರಿನಲ್ಲಿ ಅಬೆಲ್ ಪ್ರಶಸ್ತಿಯನ್ನು 2001 ರಲ್ಲಿ ನಾರ್ವೆ ಸರ್ಕಾರ ನೀಡಲು ಪ್ರಾರಂಭಿಸಿದೆ.


* ನಾರ್ವೆ ದೇಶದ ಗಣಿತಶಾಸ್ತ್ರಜ್ಞ ನೀಲ್ಸ್ ಹೆನ್ರಿಕ್ ಅಬೆಲ್‌ರವರು ಗಣಿತಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರ್ತಿಸಿ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೇವಲ 26ವರ್ಷ ಬದುಕಿದ್ದ ಅಬೆಲ್‌ರವರು ಗಣಿತಶಾಸ್ತ್ರಕ್ಕೆ ನೀಡಿರುವ ಕೊಡುಗೆಗಳನ್ನು 500ವರ್ಷದವರೆಗೆ ಸ್ಮರಿಸುವಂತಾಗಿದೆ.


ಅಬೆಲ್ ಪ್ರಶಸ್ತಿ ವಿಶೇಷತೆ: ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಿತಶಾಸ್ತ್ರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ನೀಡುವ ಪ್ರಶಸ್ತಿಯಾಗಿದೆ. ಇದನ್ನು ಗಣಿತಶಾಸ್ತ್ರಜ್ಞರ ನೊಬೆಲ್ ಪ್ರಶಸ್ತಿ ಎಂದೇ ಬಿಂಬಿಸಲಾಗಿದೆ. 


* ಪ್ರಶಸ್ತಿ ನೀಡುವ ದೇಶ: ನಾರ್ವೆ


# ಸ್ಥಾಪನೆ ವರ್ಷ: 2001 * ಮೊದಲು ಪ್ರದಾನ:- 2003


# ಪ್ರಶಸ್ತಿ ಪ್ರದಾನ ಮಾಡುವ ಸ್ಥಳ:- ಓಗ್ಲೋ ವಿಶ್ವವಿದ್ಯಾಲಯದ ಅಟ್ರಿಯಂ (1947 ರಿಂದ 1989 ರವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದ ಸ್ಥಳ).


# ಮೊದಲ ಪ್ರಶಸ್ತಿ: ಫ್ರೆಂಚ್‌ನ Jean Pierre Serre (2003)


# ಪ್ರಶಸ್ತಿ ಪಡೆದ ಭಾರತೀಯ ಮೂಲದವರು:- ಎಸ್.ಆರ್. ಶ್ರೀನಿವಾಸ್ ವರದನ್ (2007)-ಸಂಭವನೀಯತೆ ಸಿದ್ಧಾಂತ.


# 2019ನೇ ಸಾಲಿನ ಪ್ರಶಸ್ತಿ: ಅಮೆರಿಕಾದ ಕರೇನ್ ಉಪ್ಲೇನ್‌ಬೆಕ್ (ಅಬೆಲ್ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಮಹಿಳೆ)



ಗಣಿತಶಾಸ್ತ್ರದಲ್ಲಿ ನೀಡಲಾಗುವ ಪ್ರಮುಖ ಪ್ರಶಸ್ತಿಗಳು 

ಸಸ್ತ ರಾಮಾನುಜನ್ ಪ್ರಶಸ್ತಿ

(SASTRA RAMANUJAN AWARD)


* ವಿಶೇಷತೆ: ಭಾರತೀಯ ಗಣಿತ ಶಾಸ್ತ್ರದ ಅಬೆಲ್ ಪ್ರಶಸ್ತಿ


* ಸ್ಥಾಪನೆ: 2005


ಪ್ರಶಸ್ತಿ ಹಿನ್ನಲೆ: ರಾಮಾನುಜನ್ ಅವರು ತಮ್ಮ 32ನೇ ವಯಸ್ಸಿನಲ್ಲಿ ನಿಧನರಾದ ಹಿನ್ನಲೆಯಲ್ಲಿ 32 ವರ್ಷದೊಳಗಿನ ಯುವ ಗಣಿತಶಾಸ್ತ್ರಜ್ಞರ ಅಪ್ರತಿಮ ಸಾಧನೆ ಮಾಡಿದವರಿಗೆ ನೀಡಲಾಗುವ ಪ್ರಶಸ್ತಿ.


* ನೀಡುವವರು: ತಮಿಳುನಾಡಿನ ತಂಜಾವೂರ್‌ನಲ್ಲಿರುವ (SASTRA - Shanmugha Arts, Science, Technology & Research


Academy)


* 2020ರ ಪುರಸ್ಕೃತರು: ಶಾಮ್ ಇವ್ರಾ (Shai Evra)


 (FIELDS MEDAL)


* ವಿಶೇಷತೆ: ಗಣಿತ ಕ್ಷೇತ್ರದ ನೊಬೆಲ್ ಪ್ರಶಸ್ತಿ


* ಪ್ರಶಸ್ತಿ ಪ್ರದಾನ: ಅಂತರಾಷ್ಟ್ರೀಯ ಗಣಿತ ಒಕ್ಕೂಟದ ಅಂತಾರಾಷ್ಟ್ರೀಯ


* ಪ್ರಶಸ್ತಿ ಮೊತ್ತ: ಪ್ರತಿ ವಿಜೇತರಿಗೆ 15 ಸಾವಿರ ಕೆನಡಿಯನ್ ಡಾಲರ್.


* ಪ್ರಶಸ್ತಿ ನೀಡುವುದು: 40 ವರ್ಷದ ವಯೋಮಾನದೊಳಗಿನ ಗಣಿತ ಶಾಸ್ತ್ರಜ್ಞರಿಗೆ (ಇಬ್ಬರು, ಮೂರು ಅಥವಾ ನಾಲ್ಕು ಗಣಿತಶಾಸ್ತ್ರಜ್ಞರಿಗೆ) * * ಪ್ರಶಸ್ತಿ ಪ್ರದಾನ ಸಮಾರಂಭ: 4 ವರ್ಷಕ್ಕೊಮ್ಮೆ ನಡೆಯುವ ಅಂತರಾಷ್ಟ್ರೀಯ ಗಣಿತ ಕಾಂಗ್ರೆಸ್ (ಐಎಂಯು) ಸಭೆಯಲ್ಲಿ ಪ್ರದಾನ ಮಾಡಲಾಗುತ್ತದೆ.


*  2018ರ ಪ್ರಶಸ್ತಿ: ಅಕ್ಷಯ್ ವೆಂಕಟೇಶ್ (ಭಾರತ)

2020ರ ಸಾಲಿನ 30ನೇ ಸರಸ್ವತಿ ಸಮ್ಮಾನ್ ಸಾಹಿತ್ಯ ಪ್ರಶಸ್ತಿ


     2020ರ ಸಾಲಿನ 30ನೇ ಸರಸ್ವತಿ ಸಮ್ಮಾನ್ ಸಾಹಿತ್ಯ ಪ್ರಶಸ್ತಿಗೆ ಮರಾಠಿ ಲೇಖಕ ಶರಣ್‌ಕುಮಾರ್ ಅಂಬಾಲೆ ಅವರ ಸನಾತನ ಕೃತಿಯು ಆಯ್ಕೆಯಾಗಿದೆ. ಈ ಮೂಲಕ ಅಂಬಾಲೆ ಅವರು 15 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಪಡೆಯಲಿದ್ದಾರೆ. 2018 ರಲ್ಲಿ ಅಡುಗಡೆಯಾಗಿರುವ ಸನಾತನ ಕೃತಿಯು ದಂತ ಹೋರಾಟದ ಸಾಮಾಜಿಕ ಮತ್ತು ಐತಿಹಾಸಿಕ ದಾಖಲೆಯಾಗಿ ಮಹತ್ವತೆಯನ್ನು ಪಡೆದಿದೆ. ಕೆ.ಕೆ. ಜರ್ಲಾ ಪೌಂಡೇಷನ್ ಸಂಸ್ಥೆಯು ಪ್ರತೀ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೃತಿಗಳಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳನ್ನು ನೀಡುತ್ತಿದೆ. 2019ನೇ ಸಾಲಿನ 29ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಹಿಂದಿ ಸಾಹಿತಿ ವಾಸುದೇವರವರ ಕೃತಿಗೆ ಚೆಕ್ ಬುಕ್ ನೀಡಲಾಗಿತ್ತು


ಸರಸ್ವತಿ ಸಮ್ಮಾನ್ ಪ್ರಶಸ್ತಿ - ಸಾಹಿತ್ಯ ಕ್ಷೇತ್ರದ ಪ್ರಶಸ್ತಿ 

*ಆರಂಭ: 1991 (ಕೃಷ್ಣ ಕುಮಾರ್ ಬಿರ್ಲಾ ಅವರಿಂದ ನವದೆಹಲಿಯಲ್ಲಿ ಆರಂಭ)


* ಸ್ಥಾಪಕರು: ಕೆ.ಕೆ. ಬಿರ್ಲಾ ಫೌಂಡೇಷನ್ * ಪ್ರಶಸ್ತಿಯ ಅರ್ಹತೆ: ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳ ಉತ್ತಮ ಸಾಹಿತ್ಯ ರಚನೆಯ ಕೃತಿಗಳಿಗೆ ನೀಡಲಾಗುತ್ತದೆ.


* ಪ್ರಶಸ್ತಿಯ ಮೊತ್ತ : 15 ಲಕ್ಷ ರೂ. ನಗದು, ಪ್ರಶಸ್ತಿ ಪತ್ರ, ಫಲಕ.


ಶರಣಕುಮಾರ ಲಿಂಬಾಲೆ ಬಗ್ಗೆ ಮಾಹಿತಿ

      2020ರ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯದ ಶರಣ್ ಕುಮಾರ್ (Sharankumar Limbale) ಅವರು ಮರಾಠಿ ಭಾಷೆಯ ಲೇಖಕ, ಕವಿ ಮತ್ತು ಸಾಹಿತ್ಯ ವಿಮರ್ಶಕ, ಮರಾಠಿ ದಲಿತ ಸಾಹಿತ್ಯ ಮತ್ತು ಅಮೆರಿಕಾದ ಕಪ್ಪು ಸಾಹಿತ್ಯದ ನಡುವಿನ ಹೋಲಿಕೆಗಾಗಿ ಇವರು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿಯನ್ನು ಪಡೆದಿದ್ದರು. 40ಕ್ಕೂಹೆಚ್ಚು ಪುಸ್ತಕಗಳನ್ನು ಇವರು ಬರೆದಿದ್ದಾರೆ.


ಇವರ ಆತ್ಮಚರಿತ್ರೆಯಾದ Akkarmashi ಎಂಬುದು ಇಂಗ್ಲಿಷ್ ಭಾಷೆ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿದೆ.


ಸನಾತನ ಕೃತಿಯ ಬಗ್ಗೆ ಮಾಹಿತಿ:-

       ಮರಾಠಿ ಲೇಖಕ ಶರಣ್‌ಕುಮಾರ್‌ ಅವರಿಂದ ಮರಾಠಿ ಭಾಷೆಯಲ್ಲಿ ರಚಿತವಾದ ಸನಾತನ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿತ್ತು. ಇದು ದಲಿತ ಹೋರಾಟದ ಸಾಮಾಜಿಕ ಮತ್ತು ಐತಿಹಾಸಿಕ ಘಟನೆಗಳನ್ನು ತಿಳಿಸುವುದು. 2020ರ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಈ ಕಾದಂಬರಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಸನಾತನ ಕಾದಂಬರಿಯು ಅಸ್ಪೃಶ್ಯರ ಸಾಮಾಜಿಕ, ಸಾಂಸ್ಕೃತಿಕ ಹೋರಾಟದ ಕಥೆಯನ್ನು ವಿಶೇಷ ಶೈಲಿಯಲ್ಲಿ ಬಿಂಬಿಸಿದೆ. ಲೋಕಸಭಾ ಮಾಜಿ ಸೆಕ್ರೆಟರಿ ಜನರಲ್ ಸುಭಾಷ್ ಕಶ್ಯಪ್ ಅವರ ನೇತೃತ್ವದ ವಿದ್ವಾಂಸರ ಆಯ್ಕೆ ಸಮಿತಿಯು ಲಿಂಬಾಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.


ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಸಾಹಿತಿಗಳು

         ಎಸ್.ಎಲ್. ಭೈರಪ್ಪ: ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪರವರ 'ಮಂದ್ರಾ' ಕೃತಿಗೆ 2010ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಮೂಲಕ ಎಸ್.ಎಲ್. ಭೈರಪ್ಪನವರು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡ ಸಾಹಿತಿ, 2016 ರಲ್ಲಿ ಕೇಂದ್ರ ಸರ್ಕಾರವು ಪದ್ಮಶ್ರೀ ಗೌರವವನ್ನು ನೀಡಿ ಗೌರವಿಸಿದೆ. 2017 ಕ.ಸಾ.ಪ ಮತ್ತು ಬಿಎಂಟಿಸಿ ಸಹಭಾಗಿತ್ವದಲ್ಲಿ ನೀಡುವ ನೃಪತುಂಗ ಪ್ರಶಸ್ತಿ ಲಭಿಸಿತ್ತು. 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿವಿಯು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಿತ್ತಿ ಎಂಬುದು ಭೈರಪ್ಪ ಅವರ ಆತ್ಮಚರಿತ್ರೆಯಾಗಿದೆ. 2020ರ ಅಕ್ಟೋಬರ್‌ನಲ್ಲಿ ಇವರ ಅಂಚು ಕಾದಂಬರಿಯು ಇಂಗ್ಲಿಷ್‌ಗೆ ಆರ್‌.ರಂಗನಾಥ್ ಪ್ರಸಾದ್ ಅವರಿಂದ ಭಾಷಾಂತರಗೊಂಡಿದೆ.


ಎಂ. ವೀರಪ್ಪ ಮೊಯ್ಲಿ: ಕನ್ನಡದ ಸಾಹಿತಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿರವರ “ಶ್ರೀ ರಾಮಾಯಣ ಮಹಾನ್ವೇಷಣಂ” ಕೃತಿಗೆ 2014ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಎಂ.ವೀರಪ್ಪ ಮೊಯ್ಲಿ ಅವರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಕನ್ನಡದ 2ನೇ ಸಾಹಿತಿ ಎನಿಸಿದ್ದಾರೆ. ವೀರಪ್ಪ ಮೊಯ್ಲಿ ಅವರ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯಕ್ಕೆ 2020ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2007 ರಲ್ಲಿ ರಾಮಾಯಣ ಮಹಾನ್ವೇಷಣಂ ಕೃತಿಗೆ ಮೂರ್ತಿದೇವಿ ಪ್ರಶಸ್ತಿ ಲಭಿಸಿದೆ.


ಕೆ.ಕೆ.ಜರ್ಲಾ ಫೌಂಡೇಷನ್

        ಕೃಷ್ಣಕುಮಾರ್ ಬಿರ್ಲಾ ಅವರಿಂದ 1991ರಲ್ಲಿ ದೆಹಲಿಯಲ್ಲಿ ಕೆ.ಕೆ.ಬಿರ್ಲಾ ಪೌಂಡೇಷನ್ ಸ್ಥಾಪನೆಗೊಂಡಿತು. ಈ ಫೌಂಡೇಷನ್ ಮೂಲಕ ಸಾಹಿತ್ಯದ ಉತ್ತೇಜನ, ಕಲೆ, ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ KRISHNMAR BIRLA ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.

      ಈ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಮುಖ ಪ್ರಶಸ್ತಿಗಳು: ಸರಸ್ವತಿ ಸಮ್ಮಾನ್, ವ್ಯಾಸ ಸಮ್ಮಾನ್, ಬಿಹಾರಿ ಪುರಸ್ಕಾರ್, ಶಂಕರ್ ಪುರಸ್ಕಾರ್‌, ವಾಚಸ್ಪತಿ ಪುರಸ್ಕಾರ, ವೈಜ್ಞಾನಿಕ ಸಂಶೋಧನೆಗೆ ಜಿ.ಡಿ.ಬಿರ್ಲಾ ಪ್ರಶಸ್ತಿ ನೀಡಲಾಗುತ್ತದೆ.


2019 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

 ಭಾರತೀಯ ಸಿನಿಮಾ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದವರಿಗೆ ಪ್ರತೀ ವರ್ಷ ಭಾರತೀಯ ಸಿನಿಮಾದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮಿಳು ಸಿನಿಮಾ ತಾರೆ, ತಮಿಳಿನ ತಲೈವಾ ಎಂದೇ ಖ್ಯಾತರಾದ ರಜಿನಿಕಾಂತ್ ರವರಿಗೆ ಕೇಂದ್ರ ಸರ್ಕಾರ ಘೋಷಿಸಿದೆ. 2019ನೇ ಸಾಲಿನ ಈ ಪ್ರಶಸ್ತಿಯನ್ನು 2021ರ ಮೇ 3 ರಂದು ಪ್ರದಾನ ಮಾಡಲಾಗುತ್ತದೆ. ರಜಿನಿಕಾಂತ್‌ರವರು ಈ ಪ್ರಶಸ್ತಿ ಪಡೆಯುತ್ತಿರುವ 51ನೇ ಸಾಧಕರಾಗಿದ್ದಾರೆ.


ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಮಾಹಿತಿ

1950ರ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಕಾನ್ಸ್‌ಟೇಬಲ್‌ ರಾಮೋಜಿರಾವ್ ಗಾಯಕ್‌ವಾಡ್ ದಂಪತಿಯ ಕೊನೆಯ ಮಗನಾಗಿ ಹುಟ್ಟಿ ಬೆಳೆದ ರಜಿನಿಯ ಮೊದಲ ಶಿವಾಜಿರಾವ್ ಗಾಯಕ್‌ವಾಡ್, ಇವರು ಬಿಎಂಟಿಸಿಯ ಕಂಡಕ್ಟರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದರು. ರಂಗ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದ ಶಿವಾಜಿರಾವ್ ಗಾಯಕ್‌ವಾಡ್‌ಗೆ 1975ರಲ್ಲಿ ತಮಿಳು ನಿರ್ದೇಶಕ ಬಾಲಚಂದರ್ ರವರು 'ಅಪೂರ್ವ ರಾಗಂಗಳ್' ಎಂಬ ತಮಿಳು ಚಿತ್ರದಲ್ಲಿ ಪಾತ್ರ ದೊರೆಯಿತು. ನಂತರ ಕೆ.ಬಾಲಚಂದರ್ ರವರ ನಿರ್ದೇಶನದ 'ಮಂಡು ಮುಗಂ ಸಿನಿಮಾ ಯಶಸ್ಸನ್ನು ತಂದುಕೊಟ್ಟಿತು. ತಮಿಳು ಚಿತ್ರರಂಗದಲ್ಲಿ ಮೇರು ನಟನಾಗಿ ಬೆಳೆದಿದ್ದಾರೆ.


      ಏಷ್ಯಾದಲ್ಲಿ ಜಾಕಿಚಾನ್ ನಂತರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತಮಿಳು ಚಿತ್ರ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿರುವ ರಜಿನಿಕಾಂತ್ ರವರು ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ, ದಳಪತಿ (1991), ಬಾದ್‌ಷಾ (1995), ಪಡೆಯಪ್ಪ (1999), ಶಿವಾಜಿ (2007), ಎಂದಿರನ್ (2010).




ದಾದಾ ಸಾಹೇಬ್ ಫಾಲ್ಲೆ ಅವರ ಬಗ್ಗೆ ಮಾಹಿತಿ : ಭಾರತೀಯ ಸಿನಿಮಾದ ಪಿತಾಮಹ ಎನಿಸಿದ ದಾದಾ ಸಾಹೇಬ್ ಫಾಲ್ಕೆ ಸಿನಿಮಾ ನಿರ್ಮಾಪಕರು,

ನಿದೇರ್ಶಕರು, ನಟರಾಗಿ, ಚಿತ್ರಕಥೆಗಾರರಾಗಿಯೂ 19 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸಿದ್ದರು. 95 ಸಿನಿಮಾಗಳನ್ನು ಮತ್ತು 29 ಕಿರುಚಿತ್ರಗಳನ್ನು ತಯಾರಿಸಿದ್ದಾರೆ. 1913ರಲ್ಲಿ ತೆರೆ ಕಂಡ ರಾಜ ಹರಿಶ್ಚಂದ್ರ ಇದೊಂದು ಮೂಕಿ ಸಿನಿಮಾ ಆಗಿದ್ದು, ಇದಲ್ಲದೇ ಸತ್ಯವಾನ್ ಸಾವಿತ್ರಿ, ಲಂಕಾದಹನ, ಕೃಷ್ಣ ಜನ್ಮ, ಕಾಳಿಯ ಮರ್ದನ ಇಂತಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ.


ರಜನಿಕಾಂತ್ (Rajinikanth) ರವರಿಗೆ ಸಂದ ಗೌರವಗಳು

ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್‌ರವರಿಗೆ 20ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಐಕಾನ್ ಆಫ್ ದಿ ಗೋಲ್ಡನ್ ಜುಬ್ಲಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2014 ರಲ್ಲಿ ಗೋವಾದಲ್ಲಿ ಜರುಗಿದ 45ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “Cen tenary Award for Indian Film Personality of the year” ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಭಾರತ ಸರ್ಕಾರವು 2000ದಲ್ಲಿ 'ಪದ್ಮಭೂಷಣ', 2013ರಲ್ಲಿ 'ಪದ್ಮವಿಭೂಷಣ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅನೇಕ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.


    ಕನ್ನಡ ಚಿತ್ರದಲ್ಲೂ ನಟಿಸಿದ ರಜನಿಕಾಂತ್: ರಜಿನಿಕಾಂತ್ ರವರು ಕನ್ನಡದ ಸಿನಿಮಾದಲ್ಲೂ ನಟಿಸಿದ್ದು, ವಿಷ್ಣುವರ್ಧನ್ ಅವರೊಂದಿಗೆ 'ಸಹೋದರರ ಸವಾಲ್' ಚಿತ್ರದಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ 'ಕಥಾ ಸಂಗಮ' ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡರು. ಗಲಾಟೆ ಸಂಸಾರ, ಕಿಲಾಡಿ ಕಿಟ್ಟಿ, ಒಂದು ಪ್ರೇಮದ ಕಥೆ, ತಪ್ಪಿದ ತಾಳ, ಮಾತು ತಪ್ಪದ ಮಗ, ಸವಾಲಾಕುವ ಪಾತ್ರಗಳಲ್ಲಿ ನಟಿಸಿದರು.

ಹಿಂದಿ ಚಿತ್ರದಲ್ಲೂ ನಟಿಸಿದ ರಜನಿಕಾಂತ್: ರಜಿನಿಕಾಂತ್ ರವರು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ, ಹಮ್, ಆನ್ ದ ಕಾನೂನ್‌ಗಳು ರಜಿನಿಕಾಂತ್ ನಟಿಸಿದ ಪ್ರಮುಖ ಚಿತ್ರಗಳಾಗಿವೆ.


ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಎನ್ ವಿ ರಮಣ್

 



ಸುಪ್ರೀಂ ಕೋರ್ಟಿನ ಮುಂದಿನ ಮತ್ತು 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಪೈಕಿ ಸೇವಾ ಹಿರಿತನದಲ್ಲಿ ಮೊದಲಿಗರಾಗಿರುವ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರ ಹೆಸರನ್ನು ಶಿಫಾರಸ್ಸು ಮಾಡಿ ಸುಪ್ರೀಂ ಕೋರ್ಟಿನ ಹಾಲಿ ಮತ್ತು 47ನೇ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಬೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿಜೆಐ ಹುದ್ದೆಯಿಂದ ನಿವೃತ್ತರಾಗುವವರು ತಮ್ಮ ನಂತರ ದೇಶದ ಅತ್ಯುನ್ನತ ನ್ಯಾಯಿಕ ಹುದ್ದೆಗೆ ಯಾರು

ಸೂಕ್ತ ಎಂಬುದನ್ನು ಶಿಫಾರಸ್ಸು ಮಾಡುವುದು ವಾಡಿಕೆಯಾಗಿದೆ. ಇದೇ ರೀತಿ ಹಾಲಿ ಸಿಜೆ ತಮ್ಮ ನಿವೃತ್ತಿಗೆ ಒಂದು ತಿಂಗಳು ಮೊದಲು ಉತ್ತರಾಧಿಕಾರಿಗಳ ಹೆಸರನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಕೂಡ ವಾಡಿಕೆಯಾಗಿ ನಡೆದು ಬಂದಿದೆ. ರಾಷ್ಟ್ರಪತಿಗಳಿಂದ 2021ರ ಏಪ್ರಿಲ್ 6 ರಂದು ನೂತನ ಸಿಜೆ ಎನ್.ವಿ.ರಮಣ ಅವರ ನೇಮಕಾತಿಯು ಅಂಗೀಕಾರವಾಗಿದ್ದು, ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಇದರನ್ವಯ ನ್ಯಾಯಮೂರ್ತಿ ಎನ್.ವಿ. ರಮಣ್ ರವರು ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ 2021ರ ಏಪ್ರಿಲ್ 24 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ 2021ರ ಏಪ್ರಿಲ್ 23 ರಂದು ನ್ಯಾಯಮೂರ್ತಿ ಎಸ್‌.ಎ. ಬೊಬ್ಬೆ ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರು ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿ ಎನ್.ವಿ.ರಮಣ್ ರವರು 2022ರ ಆಗಸ್ಟ್ 26 ರವರೆಗೂ ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.


ನೂತನ ಮತ್ತು 48ನೇ ಸಿಜೆ : ನ್ಯಾ. ಎನ್.ವಿ. ರಮಣ್  ನ್ಯಾಯಾಮೂರ್ತಿ ಎನ್.ವಿ. ರಮಣ್ ರವರು ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪನ್ನಾವರಂನವರು. 1957ರ ಆಗಸ್ಟ್ 27 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು 1983ರ ಫೆಬ್ರವರಿ 10 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಸರ್ಕಾರ ವಿವಿಧ ಕಾನೂನಾತ್ಮಕ ಸಮಿತಿಗಳಲ್ಲಿ ನ್ಯಾ. ಎನ್.ವಿ. ರಮಣ್ ರವರು ಕಾರ್ಯ ನಿರ್ವಹಿಸಿದ್ದಾರೆ. ಇವರು ಆಂಧ್ರಪ್ರದೇಶದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 2000ನೇ ಜೂನ್ 27 ರಂದು ಆಂಧ್ರ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾದರು. 2013ರ ಮಾರ್ಚ್ 10 ರಿಂದ ಮೇ 20 ರವರೆಗೆ ಆಂಧ್ರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. 2013ರ ಸೆಪ್ಟೆಂಬರ್ 2 ರಂದು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದ ಅವರು, 2014ರ ಫೆಬ್ರವರಿ 17 ರಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.


ನ್ಯಾಯಮೂರ್ತಿಗಳಾಗಿ ನೀಡಿದ ಮಹತ್ವದ ತೀರ್ಪುಗಳು ಕಛೇರಿಗಳಲ್ಲಿ ನೌಕರಿ ಮಾಡುವ ಪತಿಗಿಂತ ಗೃಹ ಕಾರ್ಯ ಮಾಡುವ ಪತ್ನಿಯ ದುಡಿಮೆ ಏನು ಕಡಿಮೆ ಇಲ್ಲ ಎಂಬ ತೀರ್ಪು ನೀಡಿದ್ದರು. ಜಮ್ಮು-ಕಾಶ್ಮೀರದಲ್ಲಿ ಇಂಟರ್‌ನೆಟ್ ಮರುಸ್ಥಾಪನೆ. ಸಿಜೆಐ ಕೂಡ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ನ್ಯಾಯಮೂರ್ತಿ ಎನ್.ವಿ.ರಮಣ್ ಕೂಡಾ ಒಬ್ಬರು.


ನ್ಯಾಯಮೂರ್ತಿ ರಮಣ್ ರವರಿಗೆ ಕ್ಲೀನ್‌ಚಿಟ್ : ನ್ಯಾ. ಎನ್.ವಿ. ರಮಣ್ ರವರ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ 2020ರ ಅಕ್ಟೋಬರ್ 6 ರಂದು ನೀಡಿದ್ದ ದೂರಿನ ಬಗ್ಗೆ ಆಂತರಿಕ ತನಿಖೆ ನಡೆದಿದ್ದು, ಆರೋಪದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕೆ ದೂರನ್ನು ವಜಾ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆಂತರಿಕ ತನಿಖೆ ಅತ್ಯಂತ ಗೌಪ್ಯ ವಿಷಯವಾದ ಕಾರಣ ಈ ಪ್ರಕ್ರಿಯೆಯ ಮಾಹಿತಿಗಳನ್ನು ಸಾರ್ವಜನಿಕಗೊಳಿಸಲಾಗದು ಎಂಬುದಾಗಿ ಮಾಹಿತಿ ನೀಡಿದೆ.


47ನೇ ಸಿಜೆ ಶರದ್ ಅರವಿಂದ್ ಬೊಬ್ಬೆ

2019ರ ನವೆಂಬರ್ 18 ರಿಂದ ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಎಸ್.ಎ. ಬೊಬ್ಬೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅಧಿಕಾರವಧಿಯು 2021ರ ಏಪ್ರಿಲ್ 23 ರಂದು ಅಂತ್ಯವಾಗಲಿದೆ. ಅಯೋಧ್ಯೆಯ ರಾಮಜನ್ಮಭೂಮಿ, ಬಾಬ್ರಿ ಕಟ್ಟಡ ವಿವಾದ, ಬಿಸಿಸಿಐ ಪ್ರಕರಣ, ಆಧಾರ್‌ ಮತ್ತಿತರ ಮಹತ್ವದ ಪ್ರಕರಣಗಳ ವಿಚಾರಣೆ ಪೀಠದಲ್ಲೂ ಬೊಬ್ಬೆ ಅವರು ಸೇವೆ ಸಲ್ಲಿಸಿದ್ದಾರೆ.


46ನೇ ಸಿಜೆ: ಅಸ್ಸಾಂ ರಾಜ್ಯದ ಮತ್ತು ಈಶಾನ್ಯ ಭಾಗದ ಮೊದಲ ನ್ಯಾಯಾಧೀಶರು ಖ್ಯಾತಿಯ ರಂಜನ್ ಗೊಗೋಯಿ ಅವರು 2018ರ ಅಕ್ಟೋಬರ್ 3 ರಿಂದ 2019ರ ನವೆಂಬರ್ 17ರವರೆಗೆ ಸೇವೆ ಸಲ್ಲಿಸಿದ್ದರು. ಇವರು 2020ರ ಮಾರ್ಚ್ 19 ರಿಂದ ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಹೊಂದಿದ್ದಾರೆ.


ಭಾರತದ ಸರ್ವೋಚ್ಛ ನ್ಯಾಯಾಲಯ (SUPREME COURT OF INDIA)


ಭಾರತದ ಸಂವಿಧಾನದಲ್ಲಿ ಅವಕಾಶ: ಭಾರತ ಸಂವಿಧಾನದ 5ನೇ ಭಾಗದ 4ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಗಳು.


ವಿಶೇಷತೆ: ಭಾರತ ಸಂವಿಧಾನದ ಪೋಷಕ ಮತ್ತು ಭಾರತದ ಅತ್ಯುನ್ನತ ನ್ಯಾಯಾಲಯವಾಗಿ ಕಾರ್ಯ ನಿರ್ವಹಣೆ. > ಸ್ಥಾಪನೆ: 1950 ಜನವರಿ 28, 

* ಒಟ್ಟು ನ್ಯಾಯಾಧೀಶರ ಸಂಖ್ಯೆ: 34 (l-ಮುಖ್ಯ ನ್ಯಾಯಾಧೀಶ, 33 ಮಂದಿ ನ್ಯಾಯಾಧೀಶರು) 


ಸ್ಥಾಪನೆ ಹಿನ್ನಲೆ: 1935ರ ಭಾರತ ಸರ್ಕಾರ ಕಾಯಿದೆಯಂತೆ ಫೆಡರಲ್ ಕೋರ್ಟ್ ಆಗಿ 1937 ಅಕ್ಟೋಬರ್ 1 ರಂದು ಅಸ್ಥಿತ್ವಕ್ಕೆ ಬಂದ ನ್ಯಾಯಾಲಯವು ಸಂವಿಧಾನ ಜಾರಿಗೆ ಬಂದ ನಂತರ ಸುಪ್ರಿಂಕೋರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.


ಸುಪ್ರಿಂಕೋರ್ಟ್‌ನ ಮುಖ್ಯ & ಇತರೆ ನ್ಯಾಯಾಧೀಶರ ನೇಮಕ, ರಾಜೀನಾಮೆ & ಪ್ರಮಾಣ ವಚನ: ಭಾರತದ ರಾಷ್ಟ್ರಪತಿಗಳು. ವೇತನ ನೀಡಿವೆ: ಕೇಂದ್ರ ಸರ್ಕಾರದ ಸಂಚಿತ ನಿಧಿ.


ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮಾಸಿಕ ವೇತನ : 2,80,000, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನ & ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವೇತನ 2,50,000 ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನ 2.25,000)


ಸುಪ್ರೀಂಕೋರ್ಟ್ ಕಟ್ಟಡದ ವಿಶೇಷತೆ


ಧೈಯವಾಕ್ಯ: “ಯಥೋ ಧರ್ಮಸ್ತತೋ ಜಯಹಾ", ಶಿಲಾನ್ಯಾಸ: ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ (1954 ಅಕ್ಟೋಬರ್ 29), ವಾಸ್ತುಶಿಲ್ಪ ಶೈಲಿ: ಇಂಡೋ-ಬ್ರಿಟಿಷ್ ಶೈಲಿ


ವಾಸ್ತುಶಿಲ್ಪ: ಗಣೇಶ್ ಬಿಕಾಜಿ ದಿಯೋಲಾಲಿಕಾರ್


ಉದ್ಘಾಟನೆ: 1958


 * ಮೊದಲು ಸಂಸತ್ತಿನ ಚೇಂಬರ್ ಆಫ್ ಪ್ರಿನ್ಸಸ್‌ನಲ್ಲಿ ಸುಪ್ರಿಂಕೋರ್ಟ್‌ನ ಕಾರ್ಯಾಚರಣೆ ನಡೆಯುತ್ತಿತ್ತು.



Thursday, 6 May 2021

ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ



* ಮಣಿಪುರ ಪೊಲೀಸ್ ಠಾಣೆ - 2020ರ ನವೆಂಬರ್‌ನಲ್ಲಿ ಮಣಿಪುರ ರಾಜ್ಯದ ತೌಬಲ್ ಜಿಲ್ಲೆಯ ನೊಂನೈಮೊಕ್ ಸೆಕ್‌ಮೈ ಪೊಲೀಸ್ ಠಾಣೆಯು ದೇಶದ ಅತ್ಯಂತ ಉತ್ತಮ ಪೊಲೀಸ್ ಠಾಣೆ ಎಂದು ಆಯ್ಕೆ.

 * ವಾಯವ್ಯ ದೆಹಲಿಯ ಸಮಯ್‌ಪುರ್‌ ಬದ್‌ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸೀಮಾ ಢಾಕಾ ಅವರು ಅವರಿಗಿಂತ ಮೊದಲೇ ವಿಶೇಷ ಬಡ್ತಿ ಪಡೆದ ಮೊದಲ ಪೊಲೀಸ್ ಅಧಿಕಾರಣಿ. 

* ನ್ಯೂಜಿಲೆಂಡ್ ದೇಶದ ಪೊಲೀಸ್ ಇಲಾಖೆಯಲ್ಲಿ ಇಜಾಬ್ ಧರಿಸಿದ ಮೊದಲ ಮಹಿಳೆ - ಕಾನ್‌ಸ್ಟೇಬಲ್ ಜಿನ್ಹಾ ಅಲಿ


* ಗಬ್ಬುರ್ ಪೊಲೀಸ್ ಠಾಣೆ - ಕೇಂದ್ರ ಗೃಹ ಸಚಿವಾಲಯ ದೇಶದ ಪೊಲೀಸ್‌ ಠಾಣೆಗಳ ಕಾರ್ಯಕ್ಷಮತೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಟ್ಟೂರು ಠಾಣೆಯು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.


* ಕರ್ನಾಟಕದ 41ನೇ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅವರು 2020ರ ಫೆಬ್ರವರಿ 3 ರಂದು ನೇಮಕವಾದರು. ಇವರು ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎನಿಸಿದ್ದ ನೀಲಮಣಿ ಎನ್.ರಾಜು ಅವರ ನಂತರ ನೇಮಕವಾಗಿದ್ದಾರೆ. 

* ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಭಾಸ್ಕರ್ ರಾವ್ನಂತರ ಕಮಲ್ ಪಂಥ್ ನೇಮಕವಾಗಿದ್ದಾರೆ.

 * ಕರ್ನಾಟಕ ರಾಜ್ಯದ ಮೊದಲ ಮಹಿಳಾ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಪಿಎಸ್ ಅಧಿಕಾರಿಣಿಯಾಗಿ ಡಿ. ರೂಪ ನೇಮಕವಾಗಿದ್ದಾರೆ.

2020ರಲ್ಲಿ ಕಂಡುಬಂದ ಪ್ರಮುಖ ಸೈಕ್ಲೋನ್‌ಗಳು

 




ಸೈಕ್ಲೋನ್ ನಿವಾರ್ – ಬಂಗಾಳಕೊಲ್ಲಿಯಲ್ಲಿ ಕಂಡುಬಂದ ವಾಯುಭಾರ ಬುರೆವಿ ಚಂಡಮಾರುತ - ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮನ್ನಾರ್‌ಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿ, ದೇಶವು ನೀಡಿದ ಹೆಸರು,

ಟೈಫೋನ್ ಫೋನಿ ಫಿಲಿಫೈನ್ಸ್‌ನಲ್ಲಿ ಆರಂಭವಾಗಿದ್ದು ವಿಯೆಟ್ನಾಂ,


ಕಾಂಬೋಡಿಯ, ಲಾವೋಸ್‌ಗಳಲ್ಲಿ ಹಾನಿಯುಂಟುಮಾಡಿತ್ತು. 2020ರಲ್ಲಿ ಸಂಭವಿಸಿದ ಚಂಡಮಾರುಗಳಲ್ಲಿ ಹೆಚ್ಚು ಶಕ್ತಿಶಾಲಿಯಾದ


ಏಷ್ಯಾದ ಚಂಡಮಾರುತ. ಸೈಕ್ಲೋನ್ ಆಂಫಾನ್ - ಬಂಗಾಳಕೊಲ್ಲಿಯಲ್ಲಿ 2020 ಮೇ ತಿಂಗಳಿನಲ್ಲಿ


ಉಂಟಾಗಿದ್ದ ಸೂಪರ್ ಸೈಕ್ಲೋನಿಕ್ ಚಂಡಮಾರುತ (240-260/ಗಂಟೆ ವೇಗ, ಈ ಹೆಸರನ್ನು ಥಾಯ್ಲೆಂಡ್ ದೇಶ ನೀಡಿತ್ತು).


ಅರ್ನಾಬಾ ಸೈಕ್ಲೋನ್ - ಬಾಂಗ್ಲಾದೇಶವು ನೀಡಿದ ಚಂಡಮಾರುತದ ಹೆಸರು.

ಸೈಕ್ಲೋನ್ ನಿಸರ್ಗ – ಪಶ್ಚಿಮ ಕರಾವಳಿ ತೀರದ ಮುಂಬೈಗೆ ಅಪ್ಪಳಿಸಿದ ಚಂಡಮಾರುತ (ಸರಾಸರಿ 110 ಕಿ.ಮೀ/ಗಂಟೆ ವೇಗ)


ಜಗತ್ತಿನಲ್ಲಿ ಚೀಸಿದ ಪ್ರಮುಖ ಚಂಡಮಾರುಗಳು & ಪ್ರದೇಶ ಗಾಮಾ (ಸೆಂಟ್ರಲ್ ಅಮೆರಿಕಾ), ಬೇಟಾ (ಮೆಕ್ಸಿಕೋ ಮತ್ತು ಟೆಕ್ಸಾಸ್), ರೇನೆ (ಸೆನೆಗಲ್), ನಾನಾ (ಜಮೈಕಾ), ಓಮರ್ (ಆಗ್ನೆಯ ಅಮೆರಿಕಾ), ಅರ್ನಾನ್ (ಮೆಕ್ಸಿಕೋ), ಕೈಲೇ (ಯುಕೆ & ಐರ್ಲ್ಯಾಂಡ್).ಎಲಿದಾ (ಮೆಕ್ಸಿಕೋ), ಸಿನ್‌ಲಾಕ್ (ದಕ್ಷಿಣ ಚೀನಾ ಮತ್ತು ವಿಯೆಟ್ನಾಂ), ಡೌಗ್ಲಾಸ್ (ಹವಾಯ್), ಕರೀನಾ (ಫಿಲಿಫೈನ್ಸ್ & ತೈವಾನ್), ಕ್ರಿಸ್ಟೀನಾ (ಸೆಕೊರೋ ಐಲ್ಯಾಂಡ್), ಡೋಲಿ (ಬರ್ಮುಡಾ), ನೂರಿ (ಫಿಲಿಫೈನ್ಸ್ ಮತ್ತು ಚೀನಾ), ಆರ್ಥರ್ (ಕ್ಯೂಬಾ & ಫ್ಲೋರಿಡಾ), ಅಂಫಾನ್ (ಶ್ರೀಲಂಕಾ, ಭಾರತ, ಭೂತಾನ್ & ಬಾಂಗ್ಲಾದೇಶ), ಎರೋಲ್ಡ್ (ಮಡಗಾಸ್ಕರ್), ವಾಸಿ (ವಾಲೀಸ್ & ಸಮೋನ್ ಐಸ್‌ಲ್ಯಾಂಡ್),

ಆರ್ಥಿಕತೆಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು

 


2020ರ ಅಕ್ಟೋಬರ್ 16 ರಂದು ವಾಷಿಂಗ್ಟನ್ ಡಿಸಿಯಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯ 190ನೇ ದೇಶವಾಗಿ ಯೂರೋಪ್‌ನ ಆಂಡೋರ ದೇಶಆಯ್ಕೆ. 

+ ಐಆರ್‌ಡಿಎಐ ವತಿಯಿಂದ ಸೈಬರ್‌ ಹೊಣೆಗಾರಿಕೆ, ವಿಮೆ ಅಗತ್ಯತೆ ಪರಿಶೀಲಿಸಲು ನೇಮಕವಾದ ಸಮಿತಿ ಪಿ. ಉಮೇಶ್


 ದೂರರ್ಶನ ರೇಟಿಂಗ್ ಏಜೆನ್ಸಿ ಮಾರ್ಗದರ್ಶಿ * ಪರಿಶೀಲನಾ ಸಮಿತಿ - ಶಶಿ ಎಂ. ವೆಂಪತಿ, + - ಏಷ್ಯಾದ ಅತ್ಯಂತ ಸುರಕ್ಷಿತ ಬ್ಯಾಂಕ್ - ಡಿಬಿಎಸ್ ಬ್ಯಾಂಕ್ (ಸಿಂಗಾಪುರ್) | ಸೂತ್ರಗಳ


* ನಗರ ಯೋಜನೆ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಸಮಿತಿ ರಾಜೀವ್ ಕುಮಾರ್. 

* ಚುನಾವಣಾ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಪರಿಶೀಲನೆಹರೀಶ್ ಕುಮಾರ್ ಮತ್ತು ಉಮೇಶ್ ಸಿನ್ಹಾ 

ಕೆಎಸ್‌ಆರ್‌ಟಿಸಿ ಗುಜರಿ ಬಸ್‌ಗಳನ್ನು ಬಳಸಿಕೊಂಡು ನಿರ್ಮಿಸಿದಿ ಟಾಯ್ಲೆಟ್ ಮತ್ತು ಮೊಬೈಲ್ ಫೀವರ್ ಕ್ಲಿನಿಕ್‌ಗೆ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ.ಸಮಿತಿ.ವಿಶ್ವಬ್ಯಾಂಕ್‌ನಿಂದ ವಲಸೆ ಮತ್ತು ಅಭಿವೃದ್ಧಿ ವರದಿ ಪ್ರಕಟ. 

 ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮ ಪರಿಶೀಲನೆಗೆ ಮದನ್ ಲೋಕೋರ್ ಆಯೋಗ ನೇಮಕ,


* ಕೆ.ವಿ ಕಾಮತ್ ನೇತೃತ್ವದ ಸಮಿತಿ ಕೋವಿಡ್-19ರ ಸಂಬಂಧಿತ ಉಂಟಾದ ಸಾಲ ಬಿಕ್ಕಟ್ಟಿನ ಪುನರ್‌ರಚನೆ. * ಲೇಬರ್ ಬ್ಯೂರೋ ಪ್ರಕಟಪಡಿಸುವ ಕೈಗಾರಿಕಾ ಕಾರ್ಮಿಕ ಗ್ರಾಹಕಬೆಲೆ ಸೂಚ್ಯಂಕದ ಪರಿಷ್ಕೃತ ಆಧಾರ ವರ್ಷ 2016.


 2020ರ ಡಿಸೆಂಬರ್ 12 ರಂದು ಅಂತರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ಸಂಪರ್ಕ ದಿನವು ಎಲ್ಲರಿಗೂ ಆರೋಗ್ಯ ಪ್ರತಿಯೊಬ್ಬರ ರಕ್ಷಣೆ ಧೈಯವಾಕ್ಯದಲ್ಲಿ ಜರುಗಿದೆ. ಡಿಸೆಂಬರ್ 12 ರಂದು ಅಂತರಾಷ್ಟ್ರೀಯ ತಟಸ್ಥತೆ ದಿನ ಆಚರಣೆಯಾಗಿದೆ.


ಭಾರತದಲ್ಲಿ ಶೇಕಡಾ 100 ರಷ್ಟು ಸಾವಯವ ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪ (ಸಾವಯವ ಬೇಸಾಯ ರಾಜ್ಯ - ಸಿಕ್ಕಿಂ) + ಮೂಲಸೌಕರ್ಯ ಸುಧಾರಣೆಗೆ Viability Funding Scheme ಸಂಬಂಧಿಸಿದೆ.

 2020ರ ಭಾರತ ಅಮೆರಿಕಾ ಉದ್ಯಮದಾರರ ಜಾಗತಿಕ ಸಭೆಯು ಹೈದರಾಬಾದ್‌ನಲ್ಲಿ ಉದ್ಯಮದಾರತ್ವ 360 ಧೈಯವಾಕ್ಯದಲ್ಲಿ ಜರುಗಿದೆ.


* ಕೈಮೆಟ್ ಸ್ಕೋಪ್, ಸಮೀಕ್ಷೆಯನ್ನು ಬ್ಲೂಮ್‌ಬರ್ಗ್ ನ್ಯೂ ಎನರ್ಜಿ ಫೈನಾನ್ಸ್ ನಿಗಮ ಪ್ರಕಟಿಸಿದ್ದು, ಇದು ಉದಯೋನ್ಮುಖ | ಮಾರುಕಟ್ಟೆ ಔಟ್‌ಲುಕ್ ಎನಿಸಿದೆ. ಈ ಸಮೀಕ್ಷೆ ಪ್ರಕಾರ ಚಿಲಿ | ಮೊದಲ ಸ್ಥಾನದಲ್ಲಿದ್ದು, ಭಾರತವು 2ನೇ ಸ್ಥಾನ ಪಡೆದಿದೆ. ಚೀನಾ ಮತ್ತು ಭಾರತವು ಸ್ವಚ್ಛ ಇಂಧನ ಹೂಡಿಕೆಯ ಅತ್ಯಂತ ದೊಡ್ಡ ಮಾರುಕಟ್ಟೆಗಳೆನಿಸಿವೆ. + ನಗರ ಜೀವನ ಗುಣಮಟ್ಟ ಸೂಚ್ಯಂಕವನ್ನು ಪ್ರಕಟಿಸಿದ್ದು, ಮುಂಬೈ ಮೊದಲ ಸ್ಥಾನ ಮತ್ತು ಪಾಟ್ನಾ ಕೊನೆಯ | ಐಐಟಿ ಬಾಂಬೆಸ್ಥಾನದಲ್ಲಿದೆ.

ತಮಿಳುನಾಡು ಮೂಲದ ಲಕ್ಷ್ಮಿವಿಲಾಸ ಬ್ಯಾಂಕ್ (ಎಲ್‌ವಿಬಿ) ಮತ್ತು ಸಿಂಗಾಪೂರ್‌ ಮೂಲದ ಡಿಬಿಎಸ್ ಬ್ಯಾಂಕುಗಳು ವಿಲೀನ.


ಈ ಆರ್‌ಬಿಐ ವತಿಯಿಂದ ಪಿ.ಕೆ ಮೊಹಾಂತಿ ನೇತೃತ್ವದಲ್ಲಿ ನೇಮಕವಾದ ಆಂತರಿಕ ಕಾರ್ಯನಿರ್ವಹಣ ಸಮಿತಿ ಕಾಪೋರೇಟ್ ಬ್ಯಾಂಕಿಂಗ್ ಸಂರಚನೆ ಮತ್ತು ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಮಾಲಿಕತ್ವ ಮಾರ್ಗದರ್ಶಿ.


+ 2020ರ ಡಿಸೆಂಬರ್ 5 ರಂದು ಜಾಗತಿಕ ಮಣ್ಣು ದಿನವನ್ನು ಮಣ್ಣನ್ನು ಆರೋಗ್ಯವಾಗಿಡಿ, ಮಣ್ಣಿನ ಜೀವವೈವಿಧ್ಯತೆ ರಕ್ಷಿಸಿ ಎಂಬ ಧೈಯವಾಕ್ಯದಲ್ಲಿ ಆಚರಿಸಲಾಯಿತು.


+ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವಾಣಿಜ್ಯ ಇಲಾಖೆ ಮಾಹಿತಿಯನ್ವಯ 2020ರಲ್ಲಿ ಭಾರತಕ್ಕೆ ಸಿಂಗಾಪುರ ದೇಶದಿಂದ ಹೆಚ್ಚು ಎಫ್‌ಡಿಐ (ವಿದೇಶಿ ನೇರ ಬಂಡವಾಳ ಹೂಡಿಕೆ) ಒಳಹರಿವು ಆಗಿದೆ. + ಆರ್‌ಬಿಐ. - 10 ಲಕ್ಷ ಹಿಂಬಾಲಕರನ್ನು ಟಿಟ್ಟರ್‌ನಲ್ಲಿ ಹೊಂದಿದ ವಿಶ್ವದ


ಮೊದಲ ಕೇಂದ್ರ ಬ್ಯಾಂಕ್. * ಟಿವಿ ಮಾಧ್ಯಮ ನಿಯಂತ್ರಣಕ್ಕೆ ಹೊಸ ನೀತಿ ಸಂಹಿತೆ ರೂಪಿಸಲು ನ್ಯಾಯಮೂರ್ತಿ ಎ.ಕೆ. ಸಿಕ್ಕಿ ನೇತೃತ್ವದ ಸಮಿತಿ ನೇಮಕ.


* ಕರ್ನಾಟಕ ರಾಜ್ಯ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಪಶ್ಚಿಮಘಟ್ಟಗಳ ಪರಿಸರ ಮತ್ತೆ ಜೀವವೈವಿಧ್ಯತೆ ರಕ್ಷಣೆ ಸಂಬಂಧ ಕಸ್ತೂರಿ ರಂಗನ್ ವರದಿ


ಜಾರಿ ಮಾಡುವ ಕುರಿತು ಸಮಿತಿ ನೇಮಕ, + 2020ರ ವೇಳೆಗೆ ಭಾರತವು 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವ ಗುರಿ ಹೊಂದಿದೆ.


* ಯುಕೆ ಇಂಡಿಯಾ ಉದ್ಯಮ ಮಂಡಳಿಯ ವರದಿಯ ಪ್ರಕಾರ 2020ರ ಉದ್ಯಮ ಸ್ನೇಹಿ ಭಾರತ ವರದಿಯ ಪ್ರಕಾರ ಭಾರತ ಮೊದಲ ಸ್ಥಾನ.


* ವಿಶ್ವಪಾರಂಪರಿಕ ಔಟ್‌ಲುಕ್ ವರದಿಯನ್ನು ಐಯುಸಿಎನ್ ಪ್ರಕಟಿಸಿದೆ. * ಫೇಸ್‌ಬುಕ್ ಬೆಂಬಲಿತ ಡಿಜಿಟಲ್ ಕರೆನ್ಸಿ ಲಿಬ್ರಾ ಅನ್ನು ಡಿಯಾಮ್ ಎಂದು ನಾಮಕರಣ.


* ವಿಶ್ವ ಹವಾಮಾನ ಸಂಘಟನೆಯು ಪ್ರಕಟಿಸಿದ ಜಾಗತಿಕ ತಾಪಾಮಾನ ಸ್ಥಿತಿಗತಿ ವರದಿಯನ್ವಯ 2020 ವಾರ್ಮೆಸ್ಟ್ ಇಯರ್


* ರಮೇಶ್ವರ್ ಪ್ರಸಾದ್ ಗುಪ್ತಾ ನೇತೃತ್ವದ ಸಮಿತಿಯು 2015ರ ಪ್ಯಾರೀಸ್ ಹವಾಮಾನ ಒಪ್ಪಂದ ಅನುಷ್ಠಾನಕ್ಕೆ ಸಂಬಂಧಿಸಿದೆ. * ಆರ್‌ಬಿಐನ ಅಕೌಂಟ್ ಅಗ್ರಿಯೇಟರ್‌ ಫೇಮ್‌ವರ್ಕ್ (ಎಎಎಫ್) ಸ್ಥಾನ ಪಡೆದ ದೇಶದ ಮೊದಲ ಬ್ಯಾಂಕ್ ಇಂಡಸ್ ಇಂಡ್ ಬ್ಯಾಂಕ್. ಎಎಎಫ್ ಎಂದರೆ: ನಿಗದಿತ ಸಮಯದಲ್ಲಿ ಡಿಜಿಟಲ್ ಮಾದರಿಯಲ್ಲಿ ಆರ್ಥಿಕ ಮಾಹಿತಿ ಬಳಕೆ,


* ಮೇರಿ ಸಹೇಲಿ - ರೈಲ್ವೆ ಸುರಕ್ಷತಾ ಪಡೆಯು ರೈಲುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಆರಂಭ. 

* ಕೋವಿಡ್ ಹಿನ್ನೆಲೆಯಲ್ಲಿ ಕಾಂಟ್ಯಾಕ್ಟ್ ಲೆಸ್ ಥರ್ಮೋಮೀಟರ್ ಮೊಬೈಲ್ ಉತ್ಪನ್ನ - ಲಾವಾ. 


* 2020ರ ಅಕ್ಟೋಬರ್ 20ರಂದು ವಿಶ್ವ ಸಂಖ್ಯಾಶಾಸ್ತ್ರ ದಿನವನ್ನುConneting the world with data we ಧೈಯವಾಕ್ಯದಲ್ಲಿ ಆಚರಣೆ.


* ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣೆ ರೂಪಿಸಿದ ದೇಶದ ಮೊದಲ ರಾಜ್ಯ - ಕರ್ನಾಟಕ.


* 2020ರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರ ಎಸ್.ಎ ರಂಗನಾಥ್ ನೇತೃತ್ವದ ಕಾರ್ಯಪಡೆಯನ್ನು ನೇಮಿಸಿತ್ತು.


ಕಸ್ತೂರಿ ರಂಗನ್ - ಶಿಕ್ಷಣ ನೀತಿಯ ಕರಡು ಸಮಿತಿ ಅಧ್ಯಕ್ಷರು


ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳು

 ಚೀನಾ ದೇಶವು ಮೊದಲ ಮಾನವ ರಹಿತ ಚಾಂಗ್ ಇ-5 ನೌಕೆಯನ್ನು ಚಂದ್ರನ ಮೇಲೆ ಮಾದರಿ ಸಂಗ್ರಹಿಸಲು ಲಾಂಗ್ ಮಾರ್ಚ್-5 ರಾಕೆಟ್ ಮೂಲಕ ಉಡಾವಣೆ.


* ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಬಾರಿಗೆ ಮೂಲಂಗಿ ಸಸಿಯನ್ನು ನಾಸಾ ಗಗನಯಾತ್ರಿ ಕೇಟ್ ರುಬಿನ್ಸ್ ಬೆಳೆಸಿದ್ದಾರೆ. * 2022ರ ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಗೆ `ಎಲ್‌&ಟಿ ಕಂಪನಿಯು ಉಪಕರಣ ತಯಾರಿಸುತ್ತಿದೆ.


ಇಸ್ರೋದ ಶುಕ್ರಯಾನ ಯೋಜನೆಗೆ ಸ್ವೀಡನ್ ದೇಶ ಸಹಭಾಗಿತ್ವ ನೀಡಲಿದೆ.


* ನಾಸಾ ಸಂಸ್ಥೆಯು ಕೆಂಪುಗ್ರಹ ಮಂಗಳದಿಂದ ಕಲ್ಲುಮಣ್ಣು ಮಾದರಿ ಸಂಗ್ರಹಿಸಲು ಮಾರ್ಸ್ ಸ್ಯಾಂಪಲ್ ರಿಟರ್ನ್ಸ್ (ಎಂಎಸ್‌ಆರ್) ಯೋಜನೆ ರೂಪಿಸುತ್ತಿದೆ.


* 2020ರ ನವೆಂಬರ್ 7ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಪಿಎಸ್‌ಎಲ್‌ವಿ-49 ಉಡಾವಣಾ ವಾಹಕದಿಂದ ಸ್ವದೇಶಿ ಭೂವೀಕ್ಷಣಾ ಉಪಗ್ರಹ (ಇಒಎಸ್) ಒಂದು ಮತ್ತು ವಿದೇಶದ ಒಂಬತ್ತು ಉಪಗ್ರಹಗಳ ಉಡಾವಣೆ. ಇದು ಕೋವಿಡ್ ವ್ಯಾಪಿಸಿದ ಬಳಿಕ ಕೈಗೊಂಡ ಮೊದಲ ಉಡಾವಣೆಯಾಗಿದೆ. * 2020ರ ಅಕ್ಟೋಬರ್ 31ರಂದು ಬಂಗಾಳಕೊಲ್ಲಿಯಲ್ಲಿ ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ವಾಯು ಉಡಾವಣಾ ಆವೃತ್ತಿ ಪರೀಕ್ಷೆ.


* 2020ರ ಅಕ್ಟೋಬರ್ 18ರಂದು ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ಚೆನ್ನೈ ವಿಧ್ವಂಸಕ ಯುದ್ಧ ನೌಕೆಯಿಂದ ಬ್ರಹ್ಮಸ್ ಕ್ಷಿಪಣಿಯ (ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿದ) ನೌಕಾ ಉಡಾವಣಾ ಆವೃತ್ತಿ ಪರೀಕ್ಷೆ. 2020ರ ಸೆಪ್ಟೆಂಬರ್ 30ರಂದು ಬ್ರಹ್ಮಸ್ ಕ್ಷಿಪಣಿಯನ್ನು ಭೂ ಮೇಲೈನಿಂದ ಡಿಆರ್‌ಡಿಒ ಉಡಾವಣಾ ಆವೃತ್ತಿ ಪರೀಕ್ಷೆ.


* 2020 ರ ಜುಲೈ 24 ರಲ್ಲಿ ಒಡಿಶಾದ ಐಟಿ ಹಾರ್ನ್‌ನಲ್ಲಿ ಟ್ಯಾಂಕರ್‌ ಧ್ವಂಸಕ ಧೃವಾಸ್ತ್ರ (ಮೊದಲ ಹೆಸರು ಉಡಾವಣೆಯಾಗಿದೆ. ನಾಗಾ ಕ್ಷಿಪಣಿ) ಕ್ಷಿಪಣಿ


* 2020ರ ಆಗಸ್ಟ್ 2 ರಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ನಿರ್ಮಿಸಿದ್ದ ಪಾಲ್ಕಾನ್-9 ರಾಕೆಟ್ ಮೂಲಕ ಗಗನಯಾತ್ರಿಗಳಾದ ಡೌಹರ್ಲಿ ಮತ್ತು ಜಾಬ್ ಬೆಹ್ನೆಕನ್ ಅವರು ಅಂತರಾಷ್ಟ್ರೀ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಮರಳಿದ್ದರು.


* 2020ರ ಜುಲೈ 19 ರಂದು ಯುಎಇ ದೇಶವು ದಿ ಹೋಪ್ ಪ್ರೋಬ್


ಹೆಸರಿನ ಬಾಹ್ಯಾಕಾಶ ನೌಕೆಯನ್ನು ಮಂಗಳಗ್ರಹದತ್ತ ಉಡಾಯಿಸಿತ್ತು. * 2020ರ ಜುಲೈ 27 ರಂದು ಅಬ್ದುಲ್ ಕಲಾಂ ಅವರ ಮರಣ ದಿನದ ನೆನಪಿಗಾಗಿ ಡಿಆರ್‌ಡಿಒ ಡೇರ್ ಟು ಡೀಮ್ ಹೆಸರಿನ ನಾವೀನ್ಯತಾ ಸ್ಪರ್ಧೆಯನ್ನು ಆಯೋಜಿಸಿತ್ತು. (ಭಾರತದ ಕ್ಷಿಪಣಿ ಮನುಷ್ಯ ಖ್ಯಾತಿಯ ಕಲಾಂ ಅವರ ಆತ್ಮಚರಿತ್ರೆ ಅಗ್ನಿಯ ರೆಕ್ಕೆಗಳು. ಇವರ ಜನ್ಮ ದಿನವಾದ ಅಕ್ಟೋಬರ್ 15 - ವಿಶ್ವ ವಿದ್ಯಾರ್ಥಿಗಳ ದಿನ).ಸ್ವದೇಶಿ ನಿರ್ಮಿತ ಹೆಚ್‌ಎಸ್‌ಐಡಿವಿ ಪ್ರಯೋಗ (HSTDV-Hyper Sonic Technology

Demonstrator Vehicle) ಭಾರತದಲ್ಲಿ 2020ರ ಸೆಪ್ಟೆಂಬರ್ 1 ರಂದು ಡಿಆರ್‌ಡಿಒ ವತಿಯಿಂದ ಒಡಿಶಾದ ಬಾಲಸೋರ್‌ನಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಸ್ಮಾಮ್‌ಜೆಟ್ ಬಳಸಿ ಹೆಚ್‌ಎಸ್‌ಟಿಡಿಎ (ಸ್ವದೇಶಿ ನಿರ್ಮಿತ ಹೈಪರ್ ಸಾನಿಕ್ ಕ್ಷಿಪಣಿ) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

2020ರಲ್ಲಿ ಸುದ್ದಿಯಲ್ಲಿದ್ದ ಕರ್ನಾಟಕದ ಪ್ರಮುಖ ಸ್ಥಳಗಳು

 ಗದಗ 2020ರ ನವೆಂಬರ್ 11ಕ್ಕೆ ಗಾಂಧೀಜಿಯವರು ಗದಗ ಜಿಲ್ಲೆಗೆ ಭೇಟಿ ನೀಡಿದ್ದ 100ನೇ ವರ್ಷದ ನೆನಪಿಗಾಗಿ ಗದಗದಲ್ಲಿ ಸಬರಮತಿ ಆಶ್ರಮ ಸ್ಥಾಪನೆ ಯೋಜನೆಗೆ ಚಿಂತನೆ, ಗದಗ ಜಿಲ್ಲೆಯ ಹುಲಕೋಟಿ ಗ್ರಾಮ ಪಂಚಾಯಿತಿಯು ಮಿಷನ್ ಅಂತ್ಯೋದಯ ಯೋಜನೆಯಲ್ಲಿ ಮೊದಲ ಬ್ಯಾಂಕ್ ಪಡೆದಿದೆ.


* ದಾವಣಗೆರೆ - ಗ್ರಾಮೀಣ ಭಾಗದ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗಲು ಪ್ರಾಯೋಗಿಕವಾಗಿ ಗ್ರಾಮಯೋಜನೆ ಜಾರಿ.


* ಉಡುಪಿ - ಆರ್‌ಬಿಐ ವತಿಯಿಂದ ಅಂತರ್ಜಾಲ ರಹಿತ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಲು ಪ್ರಾಯೋಗಿಕ ಆಯ್ಕೆ.


* ಬೆಂಗಳೂರು - ನಾಗರಿಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ನೇರವಾಗಿ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ಯೋಜನೆಗೆ ಜಾರಿ, 2020ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ವರ್ಚುವಲ್ ಆಧಾರದಲ್ಲಿ ಬಿಟಿಎಸ್ (ಬೆಂಗಳೂರು ಟೆಕ್ ಸಮ್ಮಿಟ್) ಅನ್ನು Next Is Now ಧೈಯವಾಕ್ಯದಲ್ಲಿ ಆಯೋಜನೆ, ಭಾರತದ ನವೋದ್ಯಮಗಳ ರಾಜಧಾನಿ. ನೀವು ನೀವಾಗಿರಿ ಎಂಬ ಲೋಗೋವನ್ನು ಹೊಂದಿರುವ ನಗರ.


* ಹಾವೇರಿ 2021ರ ಫೆಬ್ರುವರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನ ಸ್ಥಳ, ಹಾವೇರಿ ರೈಲ್ವೆ ನಿಲ್ದಾಣವನ್ನು ಮೈಲಾರ ಮಹದೇವಪ್ಪ ರೈಲ್ವೇ ನಿಲ್ದಾಣವೆಂದು ಮರುನಾಮಕರಣ. * ವಿಜಯನಗರ - ಕರ್ನಾಟಕದ 31ನೇ ಜಿಲ್ಲೆಯಾಗಿ ರಚನೆಯಾಗಲು ಸಚಿವ ಸಂಪುಟ ಸಮ್ಮತಿ.


* ಐಐಎಸ್‌ಸಿ ಬೆಂಗಳೂರು - 2021ರ ಏಷ್ಯಾ ವಿವಿ ಬ್ಯಾಂಕಿಂಗ್‌ನಲ್ಲಿ 58ನೇ ಸ್ಥಾನ. ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಎನ್‌ಐಆರ್‌ಎಫ್‌ ಬ್ಯಾಂಕಿಂಗ್‌ನಲ್ಲಿ 2ನೇ ಸ್ಥಾನ. ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಟಲ್ ನಾವೀನ್ಯತಾ ಬ್ಯಾಂಕಿಂಗ್‌ನಲ್ಲಿ 4ನೇ ಅತ್ಯುತ್ತಮ ಸೃಜನಶೀಲ ಸಂಸ್ಥೆ, 2021ನೇ ಸಾಲಿನ ಟೈಂ ಹೈಯರ್ ಎಜುಕೇಷನ್ ವಿವಿ ಬ್ಯಾಂಕಿಂಗ್‌ನಲ್ಲಿ

ದೇಶದ ನಂ.1 ವಿವಿ -ಮೈಸೂರು - ಅರಮನೆ ನಗರ ಮೈಸೂರಿನಲ್ಲಿ ದೇಶದ ಮೊದಲ ಶ್ರೀಗಂಧ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಚಿಂತನೆ. ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷಣ್ ಅವರ ಕಾಮನ್ ಮ್ಯಾನ್ ಆಳೆತ್ತರದ ಪ್ರತಿಮೆಯನ್ನು ರೈಲ್ವೆ ಇಲಾಖೆ ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಸ್ಥಾಪನೆ.


* ಚಿತ್ರದುರ್ಗ – ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ ಮುರುಘಾಶ್ರೀ ಪ್ರಾಚ್ಯ ವಸ್ತು ಸಂಗ್ರಹಾಲಯ ನಿರ್ಮಾಣ. ಮಲ್ಪೆ ಬೀಚ್ ಕರ್ನಾಟಕದ ಮೊದಲ ವಿಂಚ್ ಪ್ಯಾರಾಸೈಲಿಂಗ್

ಚಳ್ಳಕೆರೆ- ಸ್ವದೇಶಿ ಡೋನ್ 'ರುಸ್ತುಂ-2' ಅನ್ನು ಚಳ್ಳಕೆರೆಯಲ್ಲಿರುವ ಡಿಆರ್‌ಡಿಒ ಘಟಕದಲ್ಲಿ ಪರೀಕ್ಷೆ, ಎಚ್‌ಎಎಲ್-ಐಐಎಸ್‌ಸಿ ಕೌಶಲ್ಯಾಭಿವೃದ್ಧಿ ಕೇಂದ್ರ ಆರಂಭ.


ನೆನಪಿರಲಿ: ಕರ್ನಾಟಕ ರಾಜ್ಯವು 5.05% ಜನಸಂಖ್ಯೆ ಹೊಂದಿದ್ದು, ದೇಶದಲ್ಲಿ 8ನೇ ಸ್ಥಾನ ಹೊಂದಿದೆ. ಶೇ. 5.83 ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ದೇಶದಲ್ಲಿ 6ನೇ ಸ್ಥಾನದಲ್ಲಿದೆ. ನೀತಿ ಆಯೋಗ ಪ್ರಕಟಿಸಿದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯವು 6ನೇ ಸ್ಥಾನದಲ್ಲಿದೆ. ಡಿಪಿಐಐಟಿ ಮಾಹಿತಿಯನ್ವಯ ರಾಜ್ಯವು ಬಂಡವಾಳ ಹೂಡಿಕೆ ಆಕರ್ಷಣೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಎನ್‌ಎಸ್‌ಒ ಮಾಹಿಯನ್ವಯ ಕರ್ನಾಟಕವು 77.2 % ಸಾಕ್ಷರತೆಯೊಂದಿಗೆ ದೇಶದಲ್ಲಿ 15ನೇ ಸ್ಥಾನದಲ್ಲಿದೆ. (ಭಾರತವು 2020ರ ಮಾಹಿತಿಯನ್ವಯ ಶೇ. 77.7 ರಷ್ಟು ಸಾಕ್ಷರತೆ ದರವನ್ನು ಹೊಂದಿದೆ). ಕರ್ನಾಟಕದಲ್ಲಿ ಪುರುಷರ ಸಾಕ್ಷರತೆ 83.4 ಮತ್ತು ಮಹಿಳಾ ಸಾಕ್ಷರತೆ ಶೇ. 70.5 ಆಗಿದೆ.

ತುರ್ತು ಪರಿಸ್ಥಿತಿಯ ಅಧಿಕಾರಗಳು Powers of Emergency

 




ಸಂವಿಧಾನದ ಭಾಗ 18ರಲ್ಲಿ 352 ರಿಂದ 360ರ ವರೆಗೆ ತುರ್ತು ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ. ಈ ಅಂಶಗಳನ್ನು 1935ರ ಭಾರತ ಸರ್ಕಾರ ಕಾಯ್ದೆಯಿಂದ ಎರವಲು ಪಡೆಯಲಾಗಿದೆ. ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಮೇಲಿನ ಪರಿಣಾಮವನ್ನು ಜರ್ಮನಿಯ ವೈಮರ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. (ರಾಷ್ಟ್ರಪತಿಗಳ ಅಧಿಕಾರ) ತುರ್ತು ಪರಿಸ್ಥಿತಿಯಲ್ಲಿ 3 ವಿಧಗಳಿವೆ:- 

1) ರಾಷ್ಟ್ರೀಯ ತುರ್ತು ಪರಿಸ್ಥಿತಿ

(ವಿಧಿ 352 ) - 3 ಬಾರಿ ಹೇರಲಾಗಿದೆ. 1962ರ ಭಾರತ-ಚೀನಾ ಯುದ್ಧ, 1971ರ ಭಾರತ-ಪಾಕ್ ಯುದ್ಧ, 1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ, ದೇಶದ ಭದ್ರತೆಗೆ ಧಕ್ಕೆಯಾದಾಗ ಅಥವಾ ಹೊರಗಿನ ಆಕ್ರಮಣದಿಂದ ಧಕ್ಕೆಯಾದಾಗ ಅಥವಾ ದೇಶದೊಳಗೆ ಶಸ್ತ್ರಾಸ್ತ್ರ ಹೋರಾಟದಿಂದ ಕಾನೂನು ಸುವ್ಯವಸ್ಥೆ ವಿಫಲವಾದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಒಂದು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ತುರ್ತು ಪರಿಸ್ಥಿಯು 6 ತಿಂಗಳವರೆಗೆ ಮುಂದುವರೆಯುತ್ತದೆ. ಪ್ರತಿ 6 ತಿಂಗಳವರೆಗೆ ಸಂಸತ್ತಿನ ಎರಡು ಸದನಗಳ ಅನುಮತಿ ಪಡೆಯುತ್ತಾ ಅನಿರ್ದಿಷ್ಟ ಕಾಲದವರೆಗೆ ಮುಂದುವರೆಸಬಹುದು.


2) ರಾಜ್ಯ ತುರ್ತು ಪರಿಸ್ಥಿತಿ (ವಿಧಿ 356) ಬಹುಮತವಿಲ್ಲದಿದ್ದಾಗ ಮತ್ತು ಸಂವಿಧಾನ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ. ಈ ಪರಿಸ್ಥಿತಿಯು ಘೋಷಿಸಿದ ಎರಡು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ಗರಿಷ್ಠ 3 ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಬಹುದು. 


3) ಹಣಕಾಸು ತುರ್ತು ಪರಿಸ್ಥಿತಿ (ವಿಧಿ 360)- ಒಂದು ಬಾರಿಯೂ ಹೇರಿಲ್ಲ. ದೇಶದ ಹಣಕಾಸು ಪರಿಸ್ಥಿತಿ ತೀವ್ರ ಹದಗೆಟ್ಟರೆ ಘೋಷಿಸಲಾಗುತ್ತದೆ.

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದಲ್ಲಿನ ಜಲಪಾತಗಳ ಪಟ್ಟಿ, ಅತಿ ಎತ್ತರದ, ದೊಡ್ಡದಾದ, ದೊಡ್ಡದಾದ, ಪ್ರಸಿದ್ಧವಾದ ಜಲಪಾತಗಳು

  ಭಾರತದ ಜಲಪಾತಗಳು: ಭಾರತದ ಅತಿ ದೊಡ್ಡ ಜಲಪಾತವೆಂದರೆ ಕುಂಚಿಕಲ್ ಜಲಪಾತ , ಇದು ಆಗುಂಬೆ ಕಣಿವೆಯಲ್ಲಿದೆ.   UPSC ಪರೀಕ್ಷೆಗಾಗಿ ಭಾರತದ ಎಲ್ಲಾ ಜಲಪಾತಗಳ ಸಂಪೂರ್ಣ ಪಟ್ಟಿ.     ಪರಿವಿಡಿ ಭಾರತದಲ್ಲಿ ಜಲಪಾತಗಳು ಭಾರತವು ವೈವಿಧ್ಯಮಯ ಜಲಪಾತಗಳನ್ನು ಹೊಂದಿದೆ.   ಜೋಗ್ ಫಾಲ್ಸ್ , ಧುಂಧರ್ ಫಾಲ್ಸ್ , ಚಿತ್ರಕೂಟ ಫಾಲ್ಸ್ , ಕುಟ್ರಾಲಂ ಫಾಲ್ಸ್ , ರಾಜ್ರಪ್ಪ ಫಾಲ್ಸ್ ಮತ್ತು ಹುಂಡ್ರು ಫಾಲ್ಸ್ ಭಾರತದ ಕೆಲವು ಮಹತ್ವದ ಜಲಪಾತಗಳಾಗಿವೆ.   ಲಂಬವಾದ ಹನಿ ಅಥವಾ ಕಡಿದಾದ ಹನಿಗಳ ಮೇಲೆ ಜಲಪಾತಗಳು ಬೀಳುವ ಸ್ಟ್ರೀಮ್ ಅಥವಾ ನದಿಯ ಪ್ರದೇಶವನ್ನು ಜಲಪಾತ ಎಂದು ಕರೆಯಲಾಗುತ್ತದೆ.   ಟೇಬಲ್ ಐಸ್ಬರ್ಗ್ ಅಥವಾ ಐಸ್ ಶೆಲ್ಫ್ನ ಅಂಚಿನಲ್ಲಿ ಕರಗಿದ ನೀರು ಚೆಲ್ಲಿದಾಗ ಜಲಪಾತಗಳನ್ನು ರಚಿಸಲಾಗುತ್ತದೆ.   ನದಿಯ ಮೇಲ್ಭಾಗದಲ್ಲಿ ಎತ್ತರದ ಪರ್ವತಗಳಲ್ಲಿ ಸರೋವರಗಳು ಕಣಿವೆಗಳಲ್ಲಿ ಸುರಿಯುತ್ತವೆ , ಜಲಪಾತಗಳು ಆಗಾಗ್ಗೆ ಹೊರಹೊಮ್ಮುತ್ತವೆ. ಭಾರತದ ಜಲಪಾತಗಳ ಪಟ್ಟಿ ಭಾರತದ ಜಲಪಾತಗಳ   ಸಂಪೂರ್ಣ ಪಟ್ಟಿ ಇಲ್ಲಿದೆ   : ಭಾರತದಲ್ಲಿ ಜಲಪಾತಗಳು ಸ್ಥಳ ಕುಂಚಿಕಲ್ ಜಲಪಾತ ಶಿವಮೊಗ್ಗ ಜಿಲ್ಲೆ , ಕರ್ನಾಟಕ ಬರೇಹಿಪಾನಿ ಜಲಪಾತ ಮಯೂರ್‌ಭಂಜ್ ಜಿಲ್ಲೆ , ಒಡಿಶಾ ನೋಹ್ಕಲಿಕೈ ಜಲಪಾತ ಪೂರ್ವ...

8 June – World Brain Tumour Day: History, Significance & More🧠🌍

                                          Introduction Every year, on the 8th of June, the world comes together to observe World Brain Tumour Day . This day is dedicated to raising awareness about brain tumors, supporting those affected, and fostering research and innovation to combat this formidable disease. Let's delve into the history, significance, and ways to participate in this important day. History of World Brain Tumour Day World Brain Tumour Day was established in 2000 by the German Brain Tumour Association (Deutsche Hirntumorhilfe e.V.), a non-profit organization focused on providing support to brain tumor patients and promoting research. The association recognized the urgent need to increase public awareness about brain tumors and their impact on patients and families. Since then, this day has been observed annually, spreading across the globe to garner international suppo...

Denmark 🇩🇰: History, Speciality, & Facts

  Introduction Denmark, a Scandinavian gem known for its rich history, cultural heritage, and modern innovations, is a country that seamlessly blends the old with the new. From the Viking Age to being a global leader in sustainability, Denmark offers a plethora of experiences for travelers and history enthusiasts alike. In this blog post, we will explore Denmark's history, specialties, and some intriguing facts about this captivating country. 🏰🇩🇰 A Brief History of Denmark Ancient and Viking Period : Denmark's history dates back to prehistoric times, with evidence of human habitation as early as 12,000 BC. However, it is the Viking Age (8th to 11th centuries) that truly put Denmark on the historical map. The Vikings, known for their seafaring skills, raids, and exploration, originated from this region. Danish Vikings not only raided but also established settlements across Europe, including parts of England, Ireland, and Normandy. The famous Jelling stones, erected by King Ha...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.