mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Friday, 7 May 2021

2019 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ

 ಭಾರತೀಯ ಸಿನಿಮಾ ರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದವರಿಗೆ ಪ್ರತೀ ವರ್ಷ ಭಾರತೀಯ ಸಿನಿಮಾದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅದೇ ರೀತಿ 2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಮಿಳು ಸಿನಿಮಾ ತಾರೆ, ತಮಿಳಿನ ತಲೈವಾ ಎಂದೇ ಖ್ಯಾತರಾದ ರಜಿನಿಕಾಂತ್ ರವರಿಗೆ ಕೇಂದ್ರ ಸರ್ಕಾರ ಘೋಷಿಸಿದೆ. 2019ನೇ ಸಾಲಿನ ಈ ಪ್ರಶಸ್ತಿಯನ್ನು 2021ರ ಮೇ 3 ರಂದು ಪ್ರದಾನ ಮಾಡಲಾಗುತ್ತದೆ. ರಜಿನಿಕಾಂತ್‌ರವರು ಈ ಪ್ರಶಸ್ತಿ ಪಡೆಯುತ್ತಿರುವ 51ನೇ ಸಾಧಕರಾಗಿದ್ದಾರೆ.


ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಮಾಹಿತಿ

1950ರ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಕಾನ್ಸ್‌ಟೇಬಲ್‌ ರಾಮೋಜಿರಾವ್ ಗಾಯಕ್‌ವಾಡ್ ದಂಪತಿಯ ಕೊನೆಯ ಮಗನಾಗಿ ಹುಟ್ಟಿ ಬೆಳೆದ ರಜಿನಿಯ ಮೊದಲ ಶಿವಾಜಿರಾವ್ ಗಾಯಕ್‌ವಾಡ್, ಇವರು ಬಿಎಂಟಿಸಿಯ ಕಂಡಕ್ಟರ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದರು. ರಂಗ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದ ಶಿವಾಜಿರಾವ್ ಗಾಯಕ್‌ವಾಡ್‌ಗೆ 1975ರಲ್ಲಿ ತಮಿಳು ನಿರ್ದೇಶಕ ಬಾಲಚಂದರ್ ರವರು 'ಅಪೂರ್ವ ರಾಗಂಗಳ್' ಎಂಬ ತಮಿಳು ಚಿತ್ರದಲ್ಲಿ ಪಾತ್ರ ದೊರೆಯಿತು. ನಂತರ ಕೆ.ಬಾಲಚಂದರ್ ರವರ ನಿರ್ದೇಶನದ 'ಮಂಡು ಮುಗಂ ಸಿನಿಮಾ ಯಶಸ್ಸನ್ನು ತಂದುಕೊಟ್ಟಿತು. ತಮಿಳು ಚಿತ್ರರಂಗದಲ್ಲಿ ಮೇರು ನಟನಾಗಿ ಬೆಳೆದಿದ್ದಾರೆ.


      ಏಷ್ಯಾದಲ್ಲಿ ಜಾಕಿಚಾನ್ ನಂತರ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ತಮಿಳು ಚಿತ್ರ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಬೆಳೆದಿರುವ ರಜಿನಿಕಾಂತ್ ರವರು ನಿರ್ದೇಶಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸುಮಾರು 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಪ್ರಮುಖ ಚಿತ್ರಗಳೆಂದರೆ, ದಳಪತಿ (1991), ಬಾದ್‌ಷಾ (1995), ಪಡೆಯಪ್ಪ (1999), ಶಿವಾಜಿ (2007), ಎಂದಿರನ್ (2010).




ದಾದಾ ಸಾಹೇಬ್ ಫಾಲ್ಲೆ ಅವರ ಬಗ್ಗೆ ಮಾಹಿತಿ : ಭಾರತೀಯ ಸಿನಿಮಾದ ಪಿತಾಮಹ ಎನಿಸಿದ ದಾದಾ ಸಾಹೇಬ್ ಫಾಲ್ಕೆ ಸಿನಿಮಾ ನಿರ್ಮಾಪಕರು,

ನಿದೇರ್ಶಕರು, ನಟರಾಗಿ, ಚಿತ್ರಕಥೆಗಾರರಾಗಿಯೂ 19 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾರ್ಯನಿರ್ವಹಿಸಿದ್ದರು. 95 ಸಿನಿಮಾಗಳನ್ನು ಮತ್ತು 29 ಕಿರುಚಿತ್ರಗಳನ್ನು ತಯಾರಿಸಿದ್ದಾರೆ. 1913ರಲ್ಲಿ ತೆರೆ ಕಂಡ ರಾಜ ಹರಿಶ್ಚಂದ್ರ ಇದೊಂದು ಮೂಕಿ ಸಿನಿಮಾ ಆಗಿದ್ದು, ಇದಲ್ಲದೇ ಸತ್ಯವಾನ್ ಸಾವಿತ್ರಿ, ಲಂಕಾದಹನ, ಕೃಷ್ಣ ಜನ್ಮ, ಕಾಳಿಯ ಮರ್ದನ ಇಂತಹ ಸಿನಿಮಾಗಳನ್ನು ನಿರ್ಮಿಸಿದ್ದಾರೆ.


ರಜನಿಕಾಂತ್ (Rajinikanth) ರವರಿಗೆ ಸಂದ ಗೌರವಗಳು

ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್‌ರವರಿಗೆ 20ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಐಕಾನ್ ಆಫ್ ದಿ ಗೋಲ್ಡನ್ ಜುಬ್ಲಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2014 ರಲ್ಲಿ ಗೋವಾದಲ್ಲಿ ಜರುಗಿದ 45ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “Cen tenary Award for Indian Film Personality of the year” ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಭಾರತ ಸರ್ಕಾರವು 2000ದಲ್ಲಿ 'ಪದ್ಮಭೂಷಣ', 2013ರಲ್ಲಿ 'ಪದ್ಮವಿಭೂಷಣ' ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅನೇಕ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಕೂಡ ತಮ್ಮದಾಗಿಸಿಕೊಂಡಿದ್ದಾರೆ.


    ಕನ್ನಡ ಚಿತ್ರದಲ್ಲೂ ನಟಿಸಿದ ರಜನಿಕಾಂತ್: ರಜಿನಿಕಾಂತ್ ರವರು ಕನ್ನಡದ ಸಿನಿಮಾದಲ್ಲೂ ನಟಿಸಿದ್ದು, ವಿಷ್ಣುವರ್ಧನ್ ಅವರೊಂದಿಗೆ 'ಸಹೋದರರ ಸವಾಲ್' ಚಿತ್ರದಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ 'ಕಥಾ ಸಂಗಮ' ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡರು. ಗಲಾಟೆ ಸಂಸಾರ, ಕಿಲಾಡಿ ಕಿಟ್ಟಿ, ಒಂದು ಪ್ರೇಮದ ಕಥೆ, ತಪ್ಪಿದ ತಾಳ, ಮಾತು ತಪ್ಪದ ಮಗ, ಸವಾಲಾಕುವ ಪಾತ್ರಗಳಲ್ಲಿ ನಟಿಸಿದರು.

ಹಿಂದಿ ಚಿತ್ರದಲ್ಲೂ ನಟಿಸಿದ ರಜನಿಕಾಂತ್: ರಜಿನಿಕಾಂತ್ ರವರು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ, ಹಮ್, ಆನ್ ದ ಕಾನೂನ್‌ಗಳು ರಜಿನಿಕಾಂತ್ ನಟಿಸಿದ ಪ್ರಮುಖ ಚಿತ್ರಗಳಾಗಿವೆ.


ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಎನ್ ವಿ ರಮಣ್

 



ಸುಪ್ರೀಂ ಕೋರ್ಟಿನ ಮುಂದಿನ ಮತ್ತು 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಪೈಕಿ ಸೇವಾ ಹಿರಿತನದಲ್ಲಿ ಮೊದಲಿಗರಾಗಿರುವ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರ ಹೆಸರನ್ನು ಶಿಫಾರಸ್ಸು ಮಾಡಿ ಸುಪ್ರೀಂ ಕೋರ್ಟಿನ ಹಾಲಿ ಮತ್ತು 47ನೇ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಬೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿಜೆಐ ಹುದ್ದೆಯಿಂದ ನಿವೃತ್ತರಾಗುವವರು ತಮ್ಮ ನಂತರ ದೇಶದ ಅತ್ಯುನ್ನತ ನ್ಯಾಯಿಕ ಹುದ್ದೆಗೆ ಯಾರು

ಸೂಕ್ತ ಎಂಬುದನ್ನು ಶಿಫಾರಸ್ಸು ಮಾಡುವುದು ವಾಡಿಕೆಯಾಗಿದೆ. ಇದೇ ರೀತಿ ಹಾಲಿ ಸಿಜೆ ತಮ್ಮ ನಿವೃತ್ತಿಗೆ ಒಂದು ತಿಂಗಳು ಮೊದಲು ಉತ್ತರಾಧಿಕಾರಿಗಳ ಹೆಸರನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಕೂಡ ವಾಡಿಕೆಯಾಗಿ ನಡೆದು ಬಂದಿದೆ. ರಾಷ್ಟ್ರಪತಿಗಳಿಂದ 2021ರ ಏಪ್ರಿಲ್ 6 ರಂದು ನೂತನ ಸಿಜೆ ಎನ್.ವಿ.ರಮಣ ಅವರ ನೇಮಕಾತಿಯು ಅಂಗೀಕಾರವಾಗಿದ್ದು, ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಇದರನ್ವಯ ನ್ಯಾಯಮೂರ್ತಿ ಎನ್.ವಿ. ರಮಣ್ ರವರು ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ 2021ರ ಏಪ್ರಿಲ್ 24 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ 2021ರ ಏಪ್ರಿಲ್ 23 ರಂದು ನ್ಯಾಯಮೂರ್ತಿ ಎಸ್‌.ಎ. ಬೊಬ್ಬೆ ನಿವೃತ್ತರಾಗಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ್ ರವರು ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿ ಎನ್.ವಿ.ರಮಣ್ ರವರು 2022ರ ಆಗಸ್ಟ್ 26 ರವರೆಗೂ ಸುಪ್ರೀಂ ಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.


ನೂತನ ಮತ್ತು 48ನೇ ಸಿಜೆ : ನ್ಯಾ. ಎನ್.ವಿ. ರಮಣ್  ನ್ಯಾಯಾಮೂರ್ತಿ ಎನ್.ವಿ. ರಮಣ್ ರವರು ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪನ್ನಾವರಂನವರು. 1957ರ ಆಗಸ್ಟ್ 27 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು 1983ರ ಫೆಬ್ರವರಿ 10 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಆಂಧ್ರಪ್ರದೇಶ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಸರ್ಕಾರ ವಿವಿಧ ಕಾನೂನಾತ್ಮಕ ಸಮಿತಿಗಳಲ್ಲಿ ನ್ಯಾ. ಎನ್.ವಿ. ರಮಣ್ ರವರು ಕಾರ್ಯ ನಿರ್ವಹಿಸಿದ್ದಾರೆ. ಇವರು ಆಂಧ್ರಪ್ರದೇಶದ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 2000ನೇ ಜೂನ್ 27 ರಂದು ಆಂಧ್ರ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾದರು. 2013ರ ಮಾರ್ಚ್ 10 ರಿಂದ ಮೇ 20 ರವರೆಗೆ ಆಂಧ್ರ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. 2013ರ ಸೆಪ್ಟೆಂಬರ್ 2 ರಂದು ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದ ಅವರು, 2014ರ ಫೆಬ್ರವರಿ 17 ರಿಂದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ.


ನ್ಯಾಯಮೂರ್ತಿಗಳಾಗಿ ನೀಡಿದ ಮಹತ್ವದ ತೀರ್ಪುಗಳು ಕಛೇರಿಗಳಲ್ಲಿ ನೌಕರಿ ಮಾಡುವ ಪತಿಗಿಂತ ಗೃಹ ಕಾರ್ಯ ಮಾಡುವ ಪತ್ನಿಯ ದುಡಿಮೆ ಏನು ಕಡಿಮೆ ಇಲ್ಲ ಎಂಬ ತೀರ್ಪು ನೀಡಿದ್ದರು. ಜಮ್ಮು-ಕಾಶ್ಮೀರದಲ್ಲಿ ಇಂಟರ್‌ನೆಟ್ ಮರುಸ್ಥಾಪನೆ. ಸಿಜೆಐ ಕೂಡ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ನ್ಯಾಯಮೂರ್ತಿ ಎನ್.ವಿ.ರಮಣ್ ಕೂಡಾ ಒಬ್ಬರು.


ನ್ಯಾಯಮೂರ್ತಿ ರಮಣ್ ರವರಿಗೆ ಕ್ಲೀನ್‌ಚಿಟ್ : ನ್ಯಾ. ಎನ್.ವಿ. ರಮಣ್ ರವರ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ 2020ರ ಅಕ್ಟೋಬರ್ 6 ರಂದು ನೀಡಿದ್ದ ದೂರಿನ ಬಗ್ಗೆ ಆಂತರಿಕ ತನಿಖೆ ನಡೆದಿದ್ದು, ಆರೋಪದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕೆ ದೂರನ್ನು ವಜಾ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆಂತರಿಕ ತನಿಖೆ ಅತ್ಯಂತ ಗೌಪ್ಯ ವಿಷಯವಾದ ಕಾರಣ ಈ ಪ್ರಕ್ರಿಯೆಯ ಮಾಹಿತಿಗಳನ್ನು ಸಾರ್ವಜನಿಕಗೊಳಿಸಲಾಗದು ಎಂಬುದಾಗಿ ಮಾಹಿತಿ ನೀಡಿದೆ.


47ನೇ ಸಿಜೆ ಶರದ್ ಅರವಿಂದ್ ಬೊಬ್ಬೆ

2019ರ ನವೆಂಬರ್ 18 ರಿಂದ ಸುಪ್ರೀಂಕೋರ್ಟ್‌ನ 47ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಎಸ್.ಎ. ಬೊಬ್ಬೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅಧಿಕಾರವಧಿಯು 2021ರ ಏಪ್ರಿಲ್ 23 ರಂದು ಅಂತ್ಯವಾಗಲಿದೆ. ಅಯೋಧ್ಯೆಯ ರಾಮಜನ್ಮಭೂಮಿ, ಬಾಬ್ರಿ ಕಟ್ಟಡ ವಿವಾದ, ಬಿಸಿಸಿಐ ಪ್ರಕರಣ, ಆಧಾರ್‌ ಮತ್ತಿತರ ಮಹತ್ವದ ಪ್ರಕರಣಗಳ ವಿಚಾರಣೆ ಪೀಠದಲ್ಲೂ ಬೊಬ್ಬೆ ಅವರು ಸೇವೆ ಸಲ್ಲಿಸಿದ್ದಾರೆ.


46ನೇ ಸಿಜೆ: ಅಸ್ಸಾಂ ರಾಜ್ಯದ ಮತ್ತು ಈಶಾನ್ಯ ಭಾಗದ ಮೊದಲ ನ್ಯಾಯಾಧೀಶರು ಖ್ಯಾತಿಯ ರಂಜನ್ ಗೊಗೋಯಿ ಅವರು 2018ರ ಅಕ್ಟೋಬರ್ 3 ರಿಂದ 2019ರ ನವೆಂಬರ್ 17ರವರೆಗೆ ಸೇವೆ ಸಲ್ಲಿಸಿದ್ದರು. ಇವರು 2020ರ ಮಾರ್ಚ್ 19 ರಿಂದ ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಹೊಂದಿದ್ದಾರೆ.


ಭಾರತದ ಸರ್ವೋಚ್ಛ ನ್ಯಾಯಾಲಯ (SUPREME COURT OF INDIA)


ಭಾರತದ ಸಂವಿಧಾನದಲ್ಲಿ ಅವಕಾಶ: ಭಾರತ ಸಂವಿಧಾನದ 5ನೇ ಭಾಗದ 4ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಗಳು.


ವಿಶೇಷತೆ: ಭಾರತ ಸಂವಿಧಾನದ ಪೋಷಕ ಮತ್ತು ಭಾರತದ ಅತ್ಯುನ್ನತ ನ್ಯಾಯಾಲಯವಾಗಿ ಕಾರ್ಯ ನಿರ್ವಹಣೆ. > ಸ್ಥಾಪನೆ: 1950 ಜನವರಿ 28, 

* ಒಟ್ಟು ನ್ಯಾಯಾಧೀಶರ ಸಂಖ್ಯೆ: 34 (l-ಮುಖ್ಯ ನ್ಯಾಯಾಧೀಶ, 33 ಮಂದಿ ನ್ಯಾಯಾಧೀಶರು) 


ಸ್ಥಾಪನೆ ಹಿನ್ನಲೆ: 1935ರ ಭಾರತ ಸರ್ಕಾರ ಕಾಯಿದೆಯಂತೆ ಫೆಡರಲ್ ಕೋರ್ಟ್ ಆಗಿ 1937 ಅಕ್ಟೋಬರ್ 1 ರಂದು ಅಸ್ಥಿತ್ವಕ್ಕೆ ಬಂದ ನ್ಯಾಯಾಲಯವು ಸಂವಿಧಾನ ಜಾರಿಗೆ ಬಂದ ನಂತರ ಸುಪ್ರಿಂಕೋರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ.


ಸುಪ್ರಿಂಕೋರ್ಟ್‌ನ ಮುಖ್ಯ & ಇತರೆ ನ್ಯಾಯಾಧೀಶರ ನೇಮಕ, ರಾಜೀನಾಮೆ & ಪ್ರಮಾಣ ವಚನ: ಭಾರತದ ರಾಷ್ಟ್ರಪತಿಗಳು. ವೇತನ ನೀಡಿವೆ: ಕೇಂದ್ರ ಸರ್ಕಾರದ ಸಂಚಿತ ನಿಧಿ.


ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮಾಸಿಕ ವೇತನ : 2,80,000, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವೇತನ & ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವೇತನ 2,50,000 ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನ 2.25,000)


ಸುಪ್ರೀಂಕೋರ್ಟ್ ಕಟ್ಟಡದ ವಿಶೇಷತೆ


ಧೈಯವಾಕ್ಯ: “ಯಥೋ ಧರ್ಮಸ್ತತೋ ಜಯಹಾ", ಶಿಲಾನ್ಯಾಸ: ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ (1954 ಅಕ್ಟೋಬರ್ 29), ವಾಸ್ತುಶಿಲ್ಪ ಶೈಲಿ: ಇಂಡೋ-ಬ್ರಿಟಿಷ್ ಶೈಲಿ


ವಾಸ್ತುಶಿಲ್ಪ: ಗಣೇಶ್ ಬಿಕಾಜಿ ದಿಯೋಲಾಲಿಕಾರ್


ಉದ್ಘಾಟನೆ: 1958


 * ಮೊದಲು ಸಂಸತ್ತಿನ ಚೇಂಬರ್ ಆಫ್ ಪ್ರಿನ್ಸಸ್‌ನಲ್ಲಿ ಸುಪ್ರಿಂಕೋರ್ಟ್‌ನ ಕಾರ್ಯಾಚರಣೆ ನಡೆಯುತ್ತಿತ್ತು.



Thursday, 6 May 2021

ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ



* ಮಣಿಪುರ ಪೊಲೀಸ್ ಠಾಣೆ - 2020ರ ನವೆಂಬರ್‌ನಲ್ಲಿ ಮಣಿಪುರ ರಾಜ್ಯದ ತೌಬಲ್ ಜಿಲ್ಲೆಯ ನೊಂನೈಮೊಕ್ ಸೆಕ್‌ಮೈ ಪೊಲೀಸ್ ಠಾಣೆಯು ದೇಶದ ಅತ್ಯಂತ ಉತ್ತಮ ಪೊಲೀಸ್ ಠಾಣೆ ಎಂದು ಆಯ್ಕೆ.

 * ವಾಯವ್ಯ ದೆಹಲಿಯ ಸಮಯ್‌ಪುರ್‌ ಬದ್‌ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸೀಮಾ ಢಾಕಾ ಅವರು ಅವರಿಗಿಂತ ಮೊದಲೇ ವಿಶೇಷ ಬಡ್ತಿ ಪಡೆದ ಮೊದಲ ಪೊಲೀಸ್ ಅಧಿಕಾರಣಿ. 

* ನ್ಯೂಜಿಲೆಂಡ್ ದೇಶದ ಪೊಲೀಸ್ ಇಲಾಖೆಯಲ್ಲಿ ಇಜಾಬ್ ಧರಿಸಿದ ಮೊದಲ ಮಹಿಳೆ - ಕಾನ್‌ಸ್ಟೇಬಲ್ ಜಿನ್ಹಾ ಅಲಿ


* ಗಬ್ಬುರ್ ಪೊಲೀಸ್ ಠಾಣೆ - ಕೇಂದ್ರ ಗೃಹ ಸಚಿವಾಲಯ ದೇಶದ ಪೊಲೀಸ್‌ ಠಾಣೆಗಳ ಕಾರ್ಯಕ್ಷಮತೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಟ್ಟೂರು ಠಾಣೆಯು ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.


* ಕರ್ನಾಟಕದ 41ನೇ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ಅವರು 2020ರ ಫೆಬ್ರವರಿ 3 ರಂದು ನೇಮಕವಾದರು. ಇವರು ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎನಿಸಿದ್ದ ನೀಲಮಣಿ ಎನ್.ರಾಜು ಅವರ ನಂತರ ನೇಮಕವಾಗಿದ್ದಾರೆ. 

* ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಭಾಸ್ಕರ್ ರಾವ್ನಂತರ ಕಮಲ್ ಪಂಥ್ ನೇಮಕವಾಗಿದ್ದಾರೆ.

 * ಕರ್ನಾಟಕ ರಾಜ್ಯದ ಮೊದಲ ಮಹಿಳಾ ಗೃಹ ಕಾರ್ಯದರ್ಶಿಯಾಗಿ ಹಿರಿಯ ಐಪಿಎಸ್ ಅಧಿಕಾರಿಣಿಯಾಗಿ ಡಿ. ರೂಪ ನೇಮಕವಾಗಿದ್ದಾರೆ.

2020ರಲ್ಲಿ ಕಂಡುಬಂದ ಪ್ರಮುಖ ಸೈಕ್ಲೋನ್‌ಗಳು

 




ಸೈಕ್ಲೋನ್ ನಿವಾರ್ – ಬಂಗಾಳಕೊಲ್ಲಿಯಲ್ಲಿ ಕಂಡುಬಂದ ವಾಯುಭಾರ ಬುರೆವಿ ಚಂಡಮಾರುತ - ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮನ್ನಾರ್‌ಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿ, ದೇಶವು ನೀಡಿದ ಹೆಸರು,

ಟೈಫೋನ್ ಫೋನಿ ಫಿಲಿಫೈನ್ಸ್‌ನಲ್ಲಿ ಆರಂಭವಾಗಿದ್ದು ವಿಯೆಟ್ನಾಂ,


ಕಾಂಬೋಡಿಯ, ಲಾವೋಸ್‌ಗಳಲ್ಲಿ ಹಾನಿಯುಂಟುಮಾಡಿತ್ತು. 2020ರಲ್ಲಿ ಸಂಭವಿಸಿದ ಚಂಡಮಾರುಗಳಲ್ಲಿ ಹೆಚ್ಚು ಶಕ್ತಿಶಾಲಿಯಾದ


ಏಷ್ಯಾದ ಚಂಡಮಾರುತ. ಸೈಕ್ಲೋನ್ ಆಂಫಾನ್ - ಬಂಗಾಳಕೊಲ್ಲಿಯಲ್ಲಿ 2020 ಮೇ ತಿಂಗಳಿನಲ್ಲಿ


ಉಂಟಾಗಿದ್ದ ಸೂಪರ್ ಸೈಕ್ಲೋನಿಕ್ ಚಂಡಮಾರುತ (240-260/ಗಂಟೆ ವೇಗ, ಈ ಹೆಸರನ್ನು ಥಾಯ್ಲೆಂಡ್ ದೇಶ ನೀಡಿತ್ತು).


ಅರ್ನಾಬಾ ಸೈಕ್ಲೋನ್ - ಬಾಂಗ್ಲಾದೇಶವು ನೀಡಿದ ಚಂಡಮಾರುತದ ಹೆಸರು.

ಸೈಕ್ಲೋನ್ ನಿಸರ್ಗ – ಪಶ್ಚಿಮ ಕರಾವಳಿ ತೀರದ ಮುಂಬೈಗೆ ಅಪ್ಪಳಿಸಿದ ಚಂಡಮಾರುತ (ಸರಾಸರಿ 110 ಕಿ.ಮೀ/ಗಂಟೆ ವೇಗ)


ಜಗತ್ತಿನಲ್ಲಿ ಚೀಸಿದ ಪ್ರಮುಖ ಚಂಡಮಾರುಗಳು & ಪ್ರದೇಶ ಗಾಮಾ (ಸೆಂಟ್ರಲ್ ಅಮೆರಿಕಾ), ಬೇಟಾ (ಮೆಕ್ಸಿಕೋ ಮತ್ತು ಟೆಕ್ಸಾಸ್), ರೇನೆ (ಸೆನೆಗಲ್), ನಾನಾ (ಜಮೈಕಾ), ಓಮರ್ (ಆಗ್ನೆಯ ಅಮೆರಿಕಾ), ಅರ್ನಾನ್ (ಮೆಕ್ಸಿಕೋ), ಕೈಲೇ (ಯುಕೆ & ಐರ್ಲ್ಯಾಂಡ್).ಎಲಿದಾ (ಮೆಕ್ಸಿಕೋ), ಸಿನ್‌ಲಾಕ್ (ದಕ್ಷಿಣ ಚೀನಾ ಮತ್ತು ವಿಯೆಟ್ನಾಂ), ಡೌಗ್ಲಾಸ್ (ಹವಾಯ್), ಕರೀನಾ (ಫಿಲಿಫೈನ್ಸ್ & ತೈವಾನ್), ಕ್ರಿಸ್ಟೀನಾ (ಸೆಕೊರೋ ಐಲ್ಯಾಂಡ್), ಡೋಲಿ (ಬರ್ಮುಡಾ), ನೂರಿ (ಫಿಲಿಫೈನ್ಸ್ ಮತ್ತು ಚೀನಾ), ಆರ್ಥರ್ (ಕ್ಯೂಬಾ & ಫ್ಲೋರಿಡಾ), ಅಂಫಾನ್ (ಶ್ರೀಲಂಕಾ, ಭಾರತ, ಭೂತಾನ್ & ಬಾಂಗ್ಲಾದೇಶ), ಎರೋಲ್ಡ್ (ಮಡಗಾಸ್ಕರ್), ವಾಸಿ (ವಾಲೀಸ್ & ಸಮೋನ್ ಐಸ್‌ಲ್ಯಾಂಡ್),

ಆರ್ಥಿಕತೆಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು

 


2020ರ ಅಕ್ಟೋಬರ್ 16 ರಂದು ವಾಷಿಂಗ್ಟನ್ ಡಿಸಿಯಲ್ಲಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯ 190ನೇ ದೇಶವಾಗಿ ಯೂರೋಪ್‌ನ ಆಂಡೋರ ದೇಶಆಯ್ಕೆ. 

+ ಐಆರ್‌ಡಿಎಐ ವತಿಯಿಂದ ಸೈಬರ್‌ ಹೊಣೆಗಾರಿಕೆ, ವಿಮೆ ಅಗತ್ಯತೆ ಪರಿಶೀಲಿಸಲು ನೇಮಕವಾದ ಸಮಿತಿ ಪಿ. ಉಮೇಶ್


 ದೂರರ್ಶನ ರೇಟಿಂಗ್ ಏಜೆನ್ಸಿ ಮಾರ್ಗದರ್ಶಿ * ಪರಿಶೀಲನಾ ಸಮಿತಿ - ಶಶಿ ಎಂ. ವೆಂಪತಿ, + - ಏಷ್ಯಾದ ಅತ್ಯಂತ ಸುರಕ್ಷಿತ ಬ್ಯಾಂಕ್ - ಡಿಬಿಎಸ್ ಬ್ಯಾಂಕ್ (ಸಿಂಗಾಪುರ್) | ಸೂತ್ರಗಳ


* ನಗರ ಯೋಜನೆ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆ ಸಮಿತಿ ರಾಜೀವ್ ಕುಮಾರ್. 

* ಚುನಾವಣಾ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಪರಿಶೀಲನೆಹರೀಶ್ ಕುಮಾರ್ ಮತ್ತು ಉಮೇಶ್ ಸಿನ್ಹಾ 

ಕೆಎಸ್‌ಆರ್‌ಟಿಸಿ ಗುಜರಿ ಬಸ್‌ಗಳನ್ನು ಬಳಸಿಕೊಂಡು ನಿರ್ಮಿಸಿದಿ ಟಾಯ್ಲೆಟ್ ಮತ್ತು ಮೊಬೈಲ್ ಫೀವರ್ ಕ್ಲಿನಿಕ್‌ಗೆ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆಗಳ ಅತ್ಯುತ್ತಮ ಪ್ರಶಸ್ತಿ.ಸಮಿತಿ.ವಿಶ್ವಬ್ಯಾಂಕ್‌ನಿಂದ ವಲಸೆ ಮತ್ತು ಅಭಿವೃದ್ಧಿ ವರದಿ ಪ್ರಕಟ. 

 ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮ ಪರಿಶೀಲನೆಗೆ ಮದನ್ ಲೋಕೋರ್ ಆಯೋಗ ನೇಮಕ,


* ಕೆ.ವಿ ಕಾಮತ್ ನೇತೃತ್ವದ ಸಮಿತಿ ಕೋವಿಡ್-19ರ ಸಂಬಂಧಿತ ಉಂಟಾದ ಸಾಲ ಬಿಕ್ಕಟ್ಟಿನ ಪುನರ್‌ರಚನೆ. * ಲೇಬರ್ ಬ್ಯೂರೋ ಪ್ರಕಟಪಡಿಸುವ ಕೈಗಾರಿಕಾ ಕಾರ್ಮಿಕ ಗ್ರಾಹಕಬೆಲೆ ಸೂಚ್ಯಂಕದ ಪರಿಷ್ಕೃತ ಆಧಾರ ವರ್ಷ 2016.


 2020ರ ಡಿಸೆಂಬರ್ 12 ರಂದು ಅಂತರಾಷ್ಟ್ರೀಯ ಸಾರ್ವತ್ರಿಕ ಆರೋಗ್ಯ ಸಂಪರ್ಕ ದಿನವು ಎಲ್ಲರಿಗೂ ಆರೋಗ್ಯ ಪ್ರತಿಯೊಬ್ಬರ ರಕ್ಷಣೆ ಧೈಯವಾಕ್ಯದಲ್ಲಿ ಜರುಗಿದೆ. ಡಿಸೆಂಬರ್ 12 ರಂದು ಅಂತರಾಷ್ಟ್ರೀಯ ತಟಸ್ಥತೆ ದಿನ ಆಚರಣೆಯಾಗಿದೆ.


ಭಾರತದಲ್ಲಿ ಶೇಕಡಾ 100 ರಷ್ಟು ಸಾವಯವ ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪ (ಸಾವಯವ ಬೇಸಾಯ ರಾಜ್ಯ - ಸಿಕ್ಕಿಂ) + ಮೂಲಸೌಕರ್ಯ ಸುಧಾರಣೆಗೆ Viability Funding Scheme ಸಂಬಂಧಿಸಿದೆ.

 2020ರ ಭಾರತ ಅಮೆರಿಕಾ ಉದ್ಯಮದಾರರ ಜಾಗತಿಕ ಸಭೆಯು ಹೈದರಾಬಾದ್‌ನಲ್ಲಿ ಉದ್ಯಮದಾರತ್ವ 360 ಧೈಯವಾಕ್ಯದಲ್ಲಿ ಜರುಗಿದೆ.


* ಕೈಮೆಟ್ ಸ್ಕೋಪ್, ಸಮೀಕ್ಷೆಯನ್ನು ಬ್ಲೂಮ್‌ಬರ್ಗ್ ನ್ಯೂ ಎನರ್ಜಿ ಫೈನಾನ್ಸ್ ನಿಗಮ ಪ್ರಕಟಿಸಿದ್ದು, ಇದು ಉದಯೋನ್ಮುಖ | ಮಾರುಕಟ್ಟೆ ಔಟ್‌ಲುಕ್ ಎನಿಸಿದೆ. ಈ ಸಮೀಕ್ಷೆ ಪ್ರಕಾರ ಚಿಲಿ | ಮೊದಲ ಸ್ಥಾನದಲ್ಲಿದ್ದು, ಭಾರತವು 2ನೇ ಸ್ಥಾನ ಪಡೆದಿದೆ. ಚೀನಾ ಮತ್ತು ಭಾರತವು ಸ್ವಚ್ಛ ಇಂಧನ ಹೂಡಿಕೆಯ ಅತ್ಯಂತ ದೊಡ್ಡ ಮಾರುಕಟ್ಟೆಗಳೆನಿಸಿವೆ. + ನಗರ ಜೀವನ ಗುಣಮಟ್ಟ ಸೂಚ್ಯಂಕವನ್ನು ಪ್ರಕಟಿಸಿದ್ದು, ಮುಂಬೈ ಮೊದಲ ಸ್ಥಾನ ಮತ್ತು ಪಾಟ್ನಾ ಕೊನೆಯ | ಐಐಟಿ ಬಾಂಬೆಸ್ಥಾನದಲ್ಲಿದೆ.

ತಮಿಳುನಾಡು ಮೂಲದ ಲಕ್ಷ್ಮಿವಿಲಾಸ ಬ್ಯಾಂಕ್ (ಎಲ್‌ವಿಬಿ) ಮತ್ತು ಸಿಂಗಾಪೂರ್‌ ಮೂಲದ ಡಿಬಿಎಸ್ ಬ್ಯಾಂಕುಗಳು ವಿಲೀನ.


ಈ ಆರ್‌ಬಿಐ ವತಿಯಿಂದ ಪಿ.ಕೆ ಮೊಹಾಂತಿ ನೇತೃತ್ವದಲ್ಲಿ ನೇಮಕವಾದ ಆಂತರಿಕ ಕಾರ್ಯನಿರ್ವಹಣ ಸಮಿತಿ ಕಾಪೋರೇಟ್ ಬ್ಯಾಂಕಿಂಗ್ ಸಂರಚನೆ ಮತ್ತು ಖಾಸಗಿ ಬ್ಯಾಂಕಿಂಗ್ ವಲಯದಲ್ಲಿ ಮಾಲಿಕತ್ವ ಮಾರ್ಗದರ್ಶಿ.


+ 2020ರ ಡಿಸೆಂಬರ್ 5 ರಂದು ಜಾಗತಿಕ ಮಣ್ಣು ದಿನವನ್ನು ಮಣ್ಣನ್ನು ಆರೋಗ್ಯವಾಗಿಡಿ, ಮಣ್ಣಿನ ಜೀವವೈವಿಧ್ಯತೆ ರಕ್ಷಿಸಿ ಎಂಬ ಧೈಯವಾಕ್ಯದಲ್ಲಿ ಆಚರಿಸಲಾಯಿತು.


+ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವಾಣಿಜ್ಯ ಇಲಾಖೆ ಮಾಹಿತಿಯನ್ವಯ 2020ರಲ್ಲಿ ಭಾರತಕ್ಕೆ ಸಿಂಗಾಪುರ ದೇಶದಿಂದ ಹೆಚ್ಚು ಎಫ್‌ಡಿಐ (ವಿದೇಶಿ ನೇರ ಬಂಡವಾಳ ಹೂಡಿಕೆ) ಒಳಹರಿವು ಆಗಿದೆ. + ಆರ್‌ಬಿಐ. - 10 ಲಕ್ಷ ಹಿಂಬಾಲಕರನ್ನು ಟಿಟ್ಟರ್‌ನಲ್ಲಿ ಹೊಂದಿದ ವಿಶ್ವದ


ಮೊದಲ ಕೇಂದ್ರ ಬ್ಯಾಂಕ್. * ಟಿವಿ ಮಾಧ್ಯಮ ನಿಯಂತ್ರಣಕ್ಕೆ ಹೊಸ ನೀತಿ ಸಂಹಿತೆ ರೂಪಿಸಲು ನ್ಯಾಯಮೂರ್ತಿ ಎ.ಕೆ. ಸಿಕ್ಕಿ ನೇತೃತ್ವದ ಸಮಿತಿ ನೇಮಕ.


* ಕರ್ನಾಟಕ ರಾಜ್ಯ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಪಶ್ಚಿಮಘಟ್ಟಗಳ ಪರಿಸರ ಮತ್ತೆ ಜೀವವೈವಿಧ್ಯತೆ ರಕ್ಷಣೆ ಸಂಬಂಧ ಕಸ್ತೂರಿ ರಂಗನ್ ವರದಿ


ಜಾರಿ ಮಾಡುವ ಕುರಿತು ಸಮಿತಿ ನೇಮಕ, + 2020ರ ವೇಳೆಗೆ ಭಾರತವು 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸುವ ಗುರಿ ಹೊಂದಿದೆ.


* ಯುಕೆ ಇಂಡಿಯಾ ಉದ್ಯಮ ಮಂಡಳಿಯ ವರದಿಯ ಪ್ರಕಾರ 2020ರ ಉದ್ಯಮ ಸ್ನೇಹಿ ಭಾರತ ವರದಿಯ ಪ್ರಕಾರ ಭಾರತ ಮೊದಲ ಸ್ಥಾನ.


* ವಿಶ್ವಪಾರಂಪರಿಕ ಔಟ್‌ಲುಕ್ ವರದಿಯನ್ನು ಐಯುಸಿಎನ್ ಪ್ರಕಟಿಸಿದೆ. * ಫೇಸ್‌ಬುಕ್ ಬೆಂಬಲಿತ ಡಿಜಿಟಲ್ ಕರೆನ್ಸಿ ಲಿಬ್ರಾ ಅನ್ನು ಡಿಯಾಮ್ ಎಂದು ನಾಮಕರಣ.


* ವಿಶ್ವ ಹವಾಮಾನ ಸಂಘಟನೆಯು ಪ್ರಕಟಿಸಿದ ಜಾಗತಿಕ ತಾಪಾಮಾನ ಸ್ಥಿತಿಗತಿ ವರದಿಯನ್ವಯ 2020 ವಾರ್ಮೆಸ್ಟ್ ಇಯರ್


* ರಮೇಶ್ವರ್ ಪ್ರಸಾದ್ ಗುಪ್ತಾ ನೇತೃತ್ವದ ಸಮಿತಿಯು 2015ರ ಪ್ಯಾರೀಸ್ ಹವಾಮಾನ ಒಪ್ಪಂದ ಅನುಷ್ಠಾನಕ್ಕೆ ಸಂಬಂಧಿಸಿದೆ. * ಆರ್‌ಬಿಐನ ಅಕೌಂಟ್ ಅಗ್ರಿಯೇಟರ್‌ ಫೇಮ್‌ವರ್ಕ್ (ಎಎಎಫ್) ಸ್ಥಾನ ಪಡೆದ ದೇಶದ ಮೊದಲ ಬ್ಯಾಂಕ್ ಇಂಡಸ್ ಇಂಡ್ ಬ್ಯಾಂಕ್. ಎಎಎಫ್ ಎಂದರೆ: ನಿಗದಿತ ಸಮಯದಲ್ಲಿ ಡಿಜಿಟಲ್ ಮಾದರಿಯಲ್ಲಿ ಆರ್ಥಿಕ ಮಾಹಿತಿ ಬಳಕೆ,


* ಮೇರಿ ಸಹೇಲಿ - ರೈಲ್ವೆ ಸುರಕ್ಷತಾ ಪಡೆಯು ರೈಲುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಆರಂಭ. 

* ಕೋವಿಡ್ ಹಿನ್ನೆಲೆಯಲ್ಲಿ ಕಾಂಟ್ಯಾಕ್ಟ್ ಲೆಸ್ ಥರ್ಮೋಮೀಟರ್ ಮೊಬೈಲ್ ಉತ್ಪನ್ನ - ಲಾವಾ. 


* 2020ರ ಅಕ್ಟೋಬರ್ 20ರಂದು ವಿಶ್ವ ಸಂಖ್ಯಾಶಾಸ್ತ್ರ ದಿನವನ್ನುConneting the world with data we ಧೈಯವಾಕ್ಯದಲ್ಲಿ ಆಚರಣೆ.


* ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣೆ ರೂಪಿಸಿದ ದೇಶದ ಮೊದಲ ರಾಜ್ಯ - ಕರ್ನಾಟಕ.


* 2020ರ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರ ಎಸ್.ಎ ರಂಗನಾಥ್ ನೇತೃತ್ವದ ಕಾರ್ಯಪಡೆಯನ್ನು ನೇಮಿಸಿತ್ತು.


ಕಸ್ತೂರಿ ರಂಗನ್ - ಶಿಕ್ಷಣ ನೀತಿಯ ಕರಡು ಸಮಿತಿ ಅಧ್ಯಕ್ಷರು


ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳು

 ಚೀನಾ ದೇಶವು ಮೊದಲ ಮಾನವ ರಹಿತ ಚಾಂಗ್ ಇ-5 ನೌಕೆಯನ್ನು ಚಂದ್ರನ ಮೇಲೆ ಮಾದರಿ ಸಂಗ್ರಹಿಸಲು ಲಾಂಗ್ ಮಾರ್ಚ್-5 ರಾಕೆಟ್ ಮೂಲಕ ಉಡಾವಣೆ.


* ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಬಾರಿಗೆ ಮೂಲಂಗಿ ಸಸಿಯನ್ನು ನಾಸಾ ಗಗನಯಾತ್ರಿ ಕೇಟ್ ರುಬಿನ್ಸ್ ಬೆಳೆಸಿದ್ದಾರೆ. * 2022ರ ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಗೆ `ಎಲ್‌&ಟಿ ಕಂಪನಿಯು ಉಪಕರಣ ತಯಾರಿಸುತ್ತಿದೆ.


ಇಸ್ರೋದ ಶುಕ್ರಯಾನ ಯೋಜನೆಗೆ ಸ್ವೀಡನ್ ದೇಶ ಸಹಭಾಗಿತ್ವ ನೀಡಲಿದೆ.


* ನಾಸಾ ಸಂಸ್ಥೆಯು ಕೆಂಪುಗ್ರಹ ಮಂಗಳದಿಂದ ಕಲ್ಲುಮಣ್ಣು ಮಾದರಿ ಸಂಗ್ರಹಿಸಲು ಮಾರ್ಸ್ ಸ್ಯಾಂಪಲ್ ರಿಟರ್ನ್ಸ್ (ಎಂಎಸ್‌ಆರ್) ಯೋಜನೆ ರೂಪಿಸುತ್ತಿದೆ.


* 2020ರ ನವೆಂಬರ್ 7ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಪಿಎಸ್‌ಎಲ್‌ವಿ-49 ಉಡಾವಣಾ ವಾಹಕದಿಂದ ಸ್ವದೇಶಿ ಭೂವೀಕ್ಷಣಾ ಉಪಗ್ರಹ (ಇಒಎಸ್) ಒಂದು ಮತ್ತು ವಿದೇಶದ ಒಂಬತ್ತು ಉಪಗ್ರಹಗಳ ಉಡಾವಣೆ. ಇದು ಕೋವಿಡ್ ವ್ಯಾಪಿಸಿದ ಬಳಿಕ ಕೈಗೊಂಡ ಮೊದಲ ಉಡಾವಣೆಯಾಗಿದೆ. * 2020ರ ಅಕ್ಟೋಬರ್ 31ರಂದು ಬಂಗಾಳಕೊಲ್ಲಿಯಲ್ಲಿ ಸುಖೋಯ್ ಯುದ್ಧ ವಿಮಾನದಿಂದ ಬ್ರಹ್ಮಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ವಾಯು ಉಡಾವಣಾ ಆವೃತ್ತಿ ಪರೀಕ್ಷೆ.


* 2020ರ ಅಕ್ಟೋಬರ್ 18ರಂದು ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ಚೆನ್ನೈ ವಿಧ್ವಂಸಕ ಯುದ್ಧ ನೌಕೆಯಿಂದ ಬ್ರಹ್ಮಸ್ ಕ್ಷಿಪಣಿಯ (ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿದ) ನೌಕಾ ಉಡಾವಣಾ ಆವೃತ್ತಿ ಪರೀಕ್ಷೆ. 2020ರ ಸೆಪ್ಟೆಂಬರ್ 30ರಂದು ಬ್ರಹ್ಮಸ್ ಕ್ಷಿಪಣಿಯನ್ನು ಭೂ ಮೇಲೈನಿಂದ ಡಿಆರ್‌ಡಿಒ ಉಡಾವಣಾ ಆವೃತ್ತಿ ಪರೀಕ್ಷೆ.


* 2020 ರ ಜುಲೈ 24 ರಲ್ಲಿ ಒಡಿಶಾದ ಐಟಿ ಹಾರ್ನ್‌ನಲ್ಲಿ ಟ್ಯಾಂಕರ್‌ ಧ್ವಂಸಕ ಧೃವಾಸ್ತ್ರ (ಮೊದಲ ಹೆಸರು ಉಡಾವಣೆಯಾಗಿದೆ. ನಾಗಾ ಕ್ಷಿಪಣಿ) ಕ್ಷಿಪಣಿ


* 2020ರ ಆಗಸ್ಟ್ 2 ರಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ನಿರ್ಮಿಸಿದ್ದ ಪಾಲ್ಕಾನ್-9 ರಾಕೆಟ್ ಮೂಲಕ ಗಗನಯಾತ್ರಿಗಳಾದ ಡೌಹರ್ಲಿ ಮತ್ತು ಜಾಬ್ ಬೆಹ್ನೆಕನ್ ಅವರು ಅಂತರಾಷ್ಟ್ರೀ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಮರಳಿದ್ದರು.


* 2020ರ ಜುಲೈ 19 ರಂದು ಯುಎಇ ದೇಶವು ದಿ ಹೋಪ್ ಪ್ರೋಬ್


ಹೆಸರಿನ ಬಾಹ್ಯಾಕಾಶ ನೌಕೆಯನ್ನು ಮಂಗಳಗ್ರಹದತ್ತ ಉಡಾಯಿಸಿತ್ತು. * 2020ರ ಜುಲೈ 27 ರಂದು ಅಬ್ದುಲ್ ಕಲಾಂ ಅವರ ಮರಣ ದಿನದ ನೆನಪಿಗಾಗಿ ಡಿಆರ್‌ಡಿಒ ಡೇರ್ ಟು ಡೀಮ್ ಹೆಸರಿನ ನಾವೀನ್ಯತಾ ಸ್ಪರ್ಧೆಯನ್ನು ಆಯೋಜಿಸಿತ್ತು. (ಭಾರತದ ಕ್ಷಿಪಣಿ ಮನುಷ್ಯ ಖ್ಯಾತಿಯ ಕಲಾಂ ಅವರ ಆತ್ಮಚರಿತ್ರೆ ಅಗ್ನಿಯ ರೆಕ್ಕೆಗಳು. ಇವರ ಜನ್ಮ ದಿನವಾದ ಅಕ್ಟೋಬರ್ 15 - ವಿಶ್ವ ವಿದ್ಯಾರ್ಥಿಗಳ ದಿನ).ಸ್ವದೇಶಿ ನಿರ್ಮಿತ ಹೆಚ್‌ಎಸ್‌ಐಡಿವಿ ಪ್ರಯೋಗ (HSTDV-Hyper Sonic Technology

Demonstrator Vehicle) ಭಾರತದಲ್ಲಿ 2020ರ ಸೆಪ್ಟೆಂಬರ್ 1 ರಂದು ಡಿಆರ್‌ಡಿಒ ವತಿಯಿಂದ ಒಡಿಶಾದ ಬಾಲಸೋರ್‌ನಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಸ್ಮಾಮ್‌ಜೆಟ್ ಬಳಸಿ ಹೆಚ್‌ಎಸ್‌ಟಿಡಿಎ (ಸ್ವದೇಶಿ ನಿರ್ಮಿತ ಹೈಪರ್ ಸಾನಿಕ್ ಕ್ಷಿಪಣಿ) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

2020ರಲ್ಲಿ ಸುದ್ದಿಯಲ್ಲಿದ್ದ ಕರ್ನಾಟಕದ ಪ್ರಮುಖ ಸ್ಥಳಗಳು

 ಗದಗ 2020ರ ನವೆಂಬರ್ 11ಕ್ಕೆ ಗಾಂಧೀಜಿಯವರು ಗದಗ ಜಿಲ್ಲೆಗೆ ಭೇಟಿ ನೀಡಿದ್ದ 100ನೇ ವರ್ಷದ ನೆನಪಿಗಾಗಿ ಗದಗದಲ್ಲಿ ಸಬರಮತಿ ಆಶ್ರಮ ಸ್ಥಾಪನೆ ಯೋಜನೆಗೆ ಚಿಂತನೆ, ಗದಗ ಜಿಲ್ಲೆಯ ಹುಲಕೋಟಿ ಗ್ರಾಮ ಪಂಚಾಯಿತಿಯು ಮಿಷನ್ ಅಂತ್ಯೋದಯ ಯೋಜನೆಯಲ್ಲಿ ಮೊದಲ ಬ್ಯಾಂಕ್ ಪಡೆದಿದೆ.


* ದಾವಣಗೆರೆ - ಗ್ರಾಮೀಣ ಭಾಗದ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗಲು ಪ್ರಾಯೋಗಿಕವಾಗಿ ಗ್ರಾಮಯೋಜನೆ ಜಾರಿ.


* ಉಡುಪಿ - ಆರ್‌ಬಿಐ ವತಿಯಿಂದ ಅಂತರ್ಜಾಲ ರಹಿತ ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಲು ಪ್ರಾಯೋಗಿಕ ಆಯ್ಕೆ.


* ಬೆಂಗಳೂರು - ನಾಗರಿಕರಿಗೆ ಡಿಜಿಟಲ್ ಮಾಧ್ಯಮದ ಮೂಲಕ ನೇರವಾಗಿ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ಯೋಜನೆಗೆ ಜಾರಿ, 2020ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ವರ್ಚುವಲ್ ಆಧಾರದಲ್ಲಿ ಬಿಟಿಎಸ್ (ಬೆಂಗಳೂರು ಟೆಕ್ ಸಮ್ಮಿಟ್) ಅನ್ನು Next Is Now ಧೈಯವಾಕ್ಯದಲ್ಲಿ ಆಯೋಜನೆ, ಭಾರತದ ನವೋದ್ಯಮಗಳ ರಾಜಧಾನಿ. ನೀವು ನೀವಾಗಿರಿ ಎಂಬ ಲೋಗೋವನ್ನು ಹೊಂದಿರುವ ನಗರ.


* ಹಾವೇರಿ 2021ರ ಫೆಬ್ರುವರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನ ಸ್ಥಳ, ಹಾವೇರಿ ರೈಲ್ವೆ ನಿಲ್ದಾಣವನ್ನು ಮೈಲಾರ ಮಹದೇವಪ್ಪ ರೈಲ್ವೇ ನಿಲ್ದಾಣವೆಂದು ಮರುನಾಮಕರಣ. * ವಿಜಯನಗರ - ಕರ್ನಾಟಕದ 31ನೇ ಜಿಲ್ಲೆಯಾಗಿ ರಚನೆಯಾಗಲು ಸಚಿವ ಸಂಪುಟ ಸಮ್ಮತಿ.


* ಐಐಎಸ್‌ಸಿ ಬೆಂಗಳೂರು - 2021ರ ಏಷ್ಯಾ ವಿವಿ ಬ್ಯಾಂಕಿಂಗ್‌ನಲ್ಲಿ 58ನೇ ಸ್ಥಾನ. ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ಎನ್‌ಐಆರ್‌ಎಫ್‌ ಬ್ಯಾಂಕಿಂಗ್‌ನಲ್ಲಿ 2ನೇ ಸ್ಥಾನ. ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಟಲ್ ನಾವೀನ್ಯತಾ ಬ್ಯಾಂಕಿಂಗ್‌ನಲ್ಲಿ 4ನೇ ಅತ್ಯುತ್ತಮ ಸೃಜನಶೀಲ ಸಂಸ್ಥೆ, 2021ನೇ ಸಾಲಿನ ಟೈಂ ಹೈಯರ್ ಎಜುಕೇಷನ್ ವಿವಿ ಬ್ಯಾಂಕಿಂಗ್‌ನಲ್ಲಿ

ದೇಶದ ನಂ.1 ವಿವಿ -ಮೈಸೂರು - ಅರಮನೆ ನಗರ ಮೈಸೂರಿನಲ್ಲಿ ದೇಶದ ಮೊದಲ ಶ್ರೀಗಂಧ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಚಿಂತನೆ. ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷಣ್ ಅವರ ಕಾಮನ್ ಮ್ಯಾನ್ ಆಳೆತ್ತರದ ಪ್ರತಿಮೆಯನ್ನು ರೈಲ್ವೆ ಇಲಾಖೆ ಮೈಸೂರು ರೈಲ್ವೆ ಮ್ಯೂಸಿಯಂನಲ್ಲಿ ಸ್ಥಾಪನೆ.


* ಚಿತ್ರದುರ್ಗ – ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ ಮುರುಘಾಶ್ರೀ ಪ್ರಾಚ್ಯ ವಸ್ತು ಸಂಗ್ರಹಾಲಯ ನಿರ್ಮಾಣ. ಮಲ್ಪೆ ಬೀಚ್ ಕರ್ನಾಟಕದ ಮೊದಲ ವಿಂಚ್ ಪ್ಯಾರಾಸೈಲಿಂಗ್

ಚಳ್ಳಕೆರೆ- ಸ್ವದೇಶಿ ಡೋನ್ 'ರುಸ್ತುಂ-2' ಅನ್ನು ಚಳ್ಳಕೆರೆಯಲ್ಲಿರುವ ಡಿಆರ್‌ಡಿಒ ಘಟಕದಲ್ಲಿ ಪರೀಕ್ಷೆ, ಎಚ್‌ಎಎಲ್-ಐಐಎಸ್‌ಸಿ ಕೌಶಲ್ಯಾಭಿವೃದ್ಧಿ ಕೇಂದ್ರ ಆರಂಭ.


ನೆನಪಿರಲಿ: ಕರ್ನಾಟಕ ರಾಜ್ಯವು 5.05% ಜನಸಂಖ್ಯೆ ಹೊಂದಿದ್ದು, ದೇಶದಲ್ಲಿ 8ನೇ ಸ್ಥಾನ ಹೊಂದಿದೆ. ಶೇ. 5.83 ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ದೇಶದಲ್ಲಿ 6ನೇ ಸ್ಥಾನದಲ್ಲಿದೆ. ನೀತಿ ಆಯೋಗ ಪ್ರಕಟಿಸಿದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯವು 6ನೇ ಸ್ಥಾನದಲ್ಲಿದೆ. ಡಿಪಿಐಐಟಿ ಮಾಹಿತಿಯನ್ವಯ ರಾಜ್ಯವು ಬಂಡವಾಳ ಹೂಡಿಕೆ ಆಕರ್ಷಣೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಎನ್‌ಎಸ್‌ಒ ಮಾಹಿಯನ್ವಯ ಕರ್ನಾಟಕವು 77.2 % ಸಾಕ್ಷರತೆಯೊಂದಿಗೆ ದೇಶದಲ್ಲಿ 15ನೇ ಸ್ಥಾನದಲ್ಲಿದೆ. (ಭಾರತವು 2020ರ ಮಾಹಿತಿಯನ್ವಯ ಶೇ. 77.7 ರಷ್ಟು ಸಾಕ್ಷರತೆ ದರವನ್ನು ಹೊಂದಿದೆ). ಕರ್ನಾಟಕದಲ್ಲಿ ಪುರುಷರ ಸಾಕ್ಷರತೆ 83.4 ಮತ್ತು ಮಹಿಳಾ ಸಾಕ್ಷರತೆ ಶೇ. 70.5 ಆಗಿದೆ.

ತುರ್ತು ಪರಿಸ್ಥಿತಿಯ ಅಧಿಕಾರಗಳು Powers of Emergency

 




ಸಂವಿಧಾನದ ಭಾಗ 18ರಲ್ಲಿ 352 ರಿಂದ 360ರ ವರೆಗೆ ತುರ್ತು ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ. ಈ ಅಂಶಗಳನ್ನು 1935ರ ಭಾರತ ಸರ್ಕಾರ ಕಾಯ್ದೆಯಿಂದ ಎರವಲು ಪಡೆಯಲಾಗಿದೆ. ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಮೇಲಿನ ಪರಿಣಾಮವನ್ನು ಜರ್ಮನಿಯ ವೈಮರ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. (ರಾಷ್ಟ್ರಪತಿಗಳ ಅಧಿಕಾರ) ತುರ್ತು ಪರಿಸ್ಥಿತಿಯಲ್ಲಿ 3 ವಿಧಗಳಿವೆ:- 

1) ರಾಷ್ಟ್ರೀಯ ತುರ್ತು ಪರಿಸ್ಥಿತಿ

(ವಿಧಿ 352 ) - 3 ಬಾರಿ ಹೇರಲಾಗಿದೆ. 1962ರ ಭಾರತ-ಚೀನಾ ಯುದ್ಧ, 1971ರ ಭಾರತ-ಪಾಕ್ ಯುದ್ಧ, 1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿ, ದೇಶದ ಭದ್ರತೆಗೆ ಧಕ್ಕೆಯಾದಾಗ ಅಥವಾ ಹೊರಗಿನ ಆಕ್ರಮಣದಿಂದ ಧಕ್ಕೆಯಾದಾಗ ಅಥವಾ ದೇಶದೊಳಗೆ ಶಸ್ತ್ರಾಸ್ತ್ರ ಹೋರಾಟದಿಂದ ಕಾನೂನು ಸುವ್ಯವಸ್ಥೆ ವಿಫಲವಾದಾಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಒಂದು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ತುರ್ತು ಪರಿಸ್ಥಿಯು 6 ತಿಂಗಳವರೆಗೆ ಮುಂದುವರೆಯುತ್ತದೆ. ಪ್ರತಿ 6 ತಿಂಗಳವರೆಗೆ ಸಂಸತ್ತಿನ ಎರಡು ಸದನಗಳ ಅನುಮತಿ ಪಡೆಯುತ್ತಾ ಅನಿರ್ದಿಷ್ಟ ಕಾಲದವರೆಗೆ ಮುಂದುವರೆಸಬಹುದು.


2) ರಾಜ್ಯ ತುರ್ತು ಪರಿಸ್ಥಿತಿ (ವಿಧಿ 356) ಬಹುಮತವಿಲ್ಲದಿದ್ದಾಗ ಮತ್ತು ಸಂವಿಧಾನ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ. ಈ ಪರಿಸ್ಥಿತಿಯು ಘೋಷಿಸಿದ ಎರಡು ತಿಂಗಳೊಳಗೆ ಸಂಸತ್ತಿನ ಎರಡು ಸದನಗಳ ಅನುಮತಿಯನ್ನು ಪಡೆದುಕೊಂಡರೆ ಗರಿಷ್ಠ 3 ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಬಹುದು. 


3) ಹಣಕಾಸು ತುರ್ತು ಪರಿಸ್ಥಿತಿ (ವಿಧಿ 360)- ಒಂದು ಬಾರಿಯೂ ಹೇರಿಲ್ಲ. ದೇಶದ ಹಣಕಾಸು ಪರಿಸ್ಥಿತಿ ತೀವ್ರ ಹದಗೆಟ್ಟರೆ ಘೋಷಿಸಲಾಗುತ್ತದೆ.

ಬೆಮೆಲ್ ಸಂಸ್ಥೆಯ ಖಾಸಗೀಕರಣಕ್ಕೆ ಸಿದ್ಧತೆ



ಕರ್ನಾಟಕದ ಕೆಜಿಎಫ್‌ನಲ್ಲಿ (1964ರಲ್ಲಿ ಸ್ಥಾಪನೆಯಾದ ಹಾಗೂ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇಂದ್ರ ಸರ್ಕಾರ ಸ್ಮಾಮ್ಯದ ಬೆಮೆಲ್ (BEML-Bharath Earth Movers Limited) ಕಂಪನಿಯ ಸಂಪೂರ್ಣ ಖಾಸಗೀಕರಣಕ್ಕೆ ಕೇಂದ ಸರ್ಕಾರವು ಸಿದ್ಧತೆ ನಡೆಸಿದೆ. ಈ ಕಂಪನಿಯ ಶೇ. 26ರಷ್ಟು ಷೇರುಗಳನ್ನು ಮಾರಾಟ ಮಾಡಲು ಮತ್ತು ಕಂಪನಿಯ ಆಡಳಿತಾತ್ಮಕ ನಿಯಂತ್ರಣವನ್ನು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರವು ಪ್ರಾಥಮಿಕ ಬಿಡ್‌ಗಳನ್ನು ಆಹ್ವಾನಿಸಿದೆ.beml NEW HONTERS NEW DREAMS ಬೆಮೆಲ್‌ನಲ್ಲಿ ಸರ್ಕಾರದ ಶೇ.54.03ರಷ್ಟು ಷೇರುಗಳಿದ್ದು, ಸರ್ಕಾರವೇ ಮಾಲೀಕತ್ವ ಹೊಂದಿದೆ. ಇದೀಗ ಶೇ. 26ರಷ್ಟು ಷೇರು ಮಾರಾಟವಾದರೆ ಸರ್ಕಾರದ ಪಾಲು ಶೇ.50ಕ್ಕಿಂತ ಕೆಳಕ್ಕಿಳಿಯಲಿದೆ. ಈ ಷೇರು ವಿಕ್ರಯದಿಂದ ಸರ್ಕಾರದ ಬೊಕ್ಕಸಕ್ಕೆ 1000 ಕೋಟಿ ರೂ. ಆದಾಯ ಹರಿದು ಬರುವ ನಿರೀಕ್ಷೆಯಿದೆ. ಷೇರು ವಿಕ್ರಯವು 2 ಹಂತಗಳಲ್ಲಿ ಜರುಗಲಿದೆ. 2021ರ ಮಾರ್ಚ್ 1ರೊಳಗೆ ಕಂಪನಿಯ ಷೇರು ಖರೀದಿಸಲು ಬಯಸುವವರು ಆಸಕ್ತಿ ವ್ಯಕ್ತಪಡಿಸುವಿಕೆಯ ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ಎಸ್‌ಬಿಐ ಅನ್ನು ಈ ಕಂಪನಿಯ ಲ್ಲಿನ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ವ್ಯವಹಾರದ ಬಂಡವಾಳ ಮಾರುಕಟ್ಟೆಯ ಸಲಹೆಗಾರರನ್ನಾಗಿ ನೇಮಿಸಿದೆ.


ಬೆಮೆಲ್ ಬಗ್ಗೆ ಮಾಹಿತಿ

ಸ್ಥಾಪನೆ: 1964 ಮೇ (ಕೆಜಿಎಫ್) ಪ್ರಸ್ತುತ ಮುಖ್ಯಸ್ಥರು: ಡಿ.ಕೆ ಹೋತಾ

ಕೇಂದ್ರ ಕಚೇರಿ: ಬೆಂಗಳೂರು

ವಿಶೇಷತೆ: ಇದೊಂದು ಸಾರ್ವಜನಿಕ ಒಡೆತನದ ಕಂಪನಿಯಾಗಿದೆ. ಮತ್ತು ಮಿನಿರತ್ನ ವರ್ಗ-1 ಸ್ಥಾನಮಾನ ಹೊಂದಿದೆ. ಕೆಜಿಎಫ್, ಬೆಂಗಳೂರು, ಮೈಸೂರು ಮತ್ತು ಪಾಲಕ್ಕಾಡ್‌ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಭಾರತೀಯ ಸೇನೆ ಹಾಗೂ ರೈಲ್ವೆಗೆ ಅಗತ್ಯವಾದ ಭಾರವಾದ ಸಾಧನಗಳನ್ನು ತಯಾರಿಸುತ್ತದೆ. ಬೆಮೆಲ್ ಕಂಪನಿಯು ಮೆಟ್ರೋ ಕೋಚ್‌ಗಳನ್ನು ತಯಾರಿಸಿದೆ. ದೆಹಲಿ ಮೆಟೋ, ನಮ್ಮ ಮೆಟ್ರೋ, ಜೈಪುರ ಮೆಟ್ರೋಗಳಿಗೆ ಕೋಚ್‌ಗಳನ್ನು ಒದಗಿಸಿದೆ. 2020ರ ಆಗಸ್ಟ್ 10 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿನ ಬೆಮೆಲ್‌ನಲ್ಲಿ ಕೈಗಾರಿಕಾ ವಿನ್ಯಾಸ ಕೇಂದ್ರವನ್ನು ಉದ್ಘಾಟಿಸಿದ್ದರು.

ನೆನಪಿರಲಿ: ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣೆ ಇಲಾಖೆಯ (DIPAM- Department of Investment and Public Assets Management)ವತಿಯಿಂದ ದೇಶದ ಅತ್ಯಂತ ದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿ ಯ ಖಾಸಗೀಕರಣ ಪ್ರಕ್ರಿಯೆಗೂ ಇತ್ತೀಚೆಗೆ ಸಿದ್ಧತೆ ನಡೆಸಿದೆ. 2020ರ ನವೆಂಬರ್‌ನಲ್ಲಿ ಡಿಐಪಿಎಎಂ ಮತ್ತು ವಿಶ್ವಬ್ಯಾಂಕ್ ನಡುವೆ ಸ್ವತ್ತು ನಗದೀಕರಣ ಮೇಲಿನ ಸಲಹೆ ಸೇವೆ | ಸಂಬಂಧ ಒಪ್ಪಂದ ಏರ್ಪಟ್ಟಿದೆ.

ಬಿಹಾರ ರಾಜ್ಯದಲ್ಲಿ ತೃತೀಯ ಲಿಂಗಿ ಪೊಲೀಸ್ ಇಲಾಖೆಯಲ್ಲಿThird gender in bihar police

 


ಬಿಹಾರ ರಾಜ್ಯದಲ್ಲಿ ತೃತೀಯ ಲಿಂಗಿಗಳಿಗೆ ಗೌರವ ಸೂಚಕ ಉದ್ಯೋಗ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ತೃತೀಯ ಲಿಂಗಿಗಳಿಗೆ ಮಾತ್ರ ಸೀಮಿತವಾದ ನೂತನ ಪಡೆ ರಚಿಸಲು ಬಿಹಾರ ಸರ್ಕಾರ ಸಿದ್ಧತೆ ನಡೆಸಿದೆ. ಈ ಯೋಜನೆ ಯಶಸ್ವಿಯಾದಲ್ಲಿ ದೇಶದಲ್ಲೇ ತೃತೀಯ ಲಿಂಗಿಗಳಿಗೆ ಸೀಮಿತ ಪೊಲೀಸ್ ಬೆಟಾಲಿಯನ್ ಹೊಂದಿರುವ ಏಕೈಕ ರಾಜ್ಯ (Government in Bihar is Working on a Plan to Raise a Separate Police Battalion Of Transgender People) ಎಂಬ ಹೆಗ್ಗಳಿಕೆಗೆ ಬಿಹಾರ ರಾಜ್ಯ ಪಾತ್ರವಾಗಲಿದೆ. ಬಿಹಾರದಲ್ಲಿ18 ವರ್ಷ ದಾಟಿರುವ 40 ಸಾವಿರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದಾರೆ. ಅವರಲ್ಲಿ ಕೆಲವರಿಗೆ ಸೂಕ್ತ ತರಬೇತಿ ನೀಡಿ ಪೊಲೀಸ್ ಬೆಟಾಲಿಯನ್ ರಚಿಸಿ ಅಗತ್ಯ ಭದ್ರತಾ ವ್ಯವಸ್ಥೆಗೆ ನಿಯೋಜಿಸಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಹಾಗೂ ಪೊಲೀಸ್ ಪಡೆ ಆಯ್ಕೆಗೆ ಅರ್ಹತೆ ಮತ್ತು ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಮತ್ತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.

ಭಾರತದಲ್ಲ ತೃತೀಯ ಅಂನಿಗಳಲ್ಲ ಪ್ರಥಮರು


ಮೊದಲ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ : ಪ್ರೀತಿಕಾ ಯಾಶಿನಿ (ತ.ನಾಡು), * ಮೊದಲ ಕ್ರೀಡಾಕೂಟ : ತಿರುವನಂತಪುರಂ (ಕೇರಳ)


* ಮೊದಲ ಕಾಲೇಜು ಪ್ರಾಂಶುಪಾಲರು : ಮನಾಚಿ ಭಂಡೋಪಾಧ್ಯಾಯ (ಪ.ಬಂಗಾಳ), ಮೊದಲ ಸೈನಿಕ : ಶಾಚಿ


* ಮೊದಲ ಎಂಎಲ್‌ಎ : ಶಬನಮ್ ಮೌಸಿ (ಆಂಧ್ರಪ್ರದೇಶ),


* ಮೊದಲ ವಕೀಲರು : ಸತ್ಯಶ್ರೀ ಶರ್ಮಿಳಾ (ತಮಿಳುನಾಡು)


* ಮೊದಲ ನ್ಯಾಯಾಧೀಶರು : ಚೋಂತಾ ಮೊಂಡಾಲ್ (ಪ. ಬಂಗಾಳ) * ಮೊದಲ ಶಾಲೆ : ಷಹಜಾ ಇಂಟರ್ ನ್ಯಾಷನಲ್ ಸ್ಕೂಲ್ (ಕೇರಳದ ಎರ್ನಾಕುಲಂ ಜಿಲ್ಲೆ), * ಆರಂಭಿಸಿದವರು: ಕಲ್ಕಿ ಸುಬ್ರಹ್ಮಣ್ಯಂ


* ಮೊದಲ ವಿಶ್ವವಿದ್ಯಾಲಯ : ಖುಷಿನಗರ ಜಿಲ್ಲೆ (ಉತ್ತರ ಪ್ರದೇಶ) ಭಾರತದ ಮೊದಲ ಮಿಸ್ ತೃತೀಯ ಅಂಗಿ ಸೌಂದರ್ಯ ಸ್ಪರ್ಧೆ ಜರುಗಿದ ಸ್ಥಳ : ಗುರುಗಾಂವ್ (ಹರಿಯಾಣ)


* ಮೊದಲ ತೃತೀಯ ಅಂಗಿ ಅಪರೇಟರ್ : ಜೋಯಾ ಖಾನ್ (ಗುಜರಾತ್‌ನ ಸಾಮಾನ್ಯ ಸೇವಾ ಕೇಂದ್ರ)


ತೃತೀಯ ಅಂಗಿಗಳ ಮೊದಲ ಸಾಹಿತ್ಯೋತ್ಸವ : ಕೋಲ್ಕತ್ತಾ


ಅಸ್ಲಾಂ ರಾಜ್ಯದ ಮೊದಲ ತೃತೀಯ ಅಂಗಿ ನ್ಯಾಯಾಧೀಶೆ : ಸ್ವಾಮಿ ಬಿಧಾನ್‌ ಬರುವಾ * ಇಸ್ಲಾಂ ರಾಷ್ಟ್ರಗಳಲ್ಲಿ ತೃತೀಯ ಅಂಗಿಗಳಗಾಗಿ ಶಾಲೆಯನ್ನು ಸ್ಥಾಪಿಸಿದ ಮೊದಲ ದೇಶ : ಪಾಕಿಸ್ತಾನ


* ಭಾರತದ ಮೊದಲ ತೃತೀಯ ಅಂಗಿ ನ್ಯೂಸ್ ನಿರೂಪಕಿ : ಪದ್ಮನಿ ಪ್ರಕಾಶ್ (ಲೋಟಸ್ ನ್ಯೂಸ್)


* 2014ರ ಏಪ್ರಿಲ್ 15 ರಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ (ಎನ್ಎಎಲ್ಎಸ್ಎ) vs ಕೇಂದ್ರ ಸರ್ಕಾರ ಪ್ರಕರಣದಲ್ಲಿ ಭಾರತದ


ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ತೃತೀಯ ಲಿಂಗಿ ಪರಿಕಲ್ಪನೆ (Transgender People to be the “Third Gender) ನೀಡಿತ್ತು.


* ತೃತೀಯ ಅಂಗಿಗಳ (ಹಕ್ಕು ರಕ್ಷಣಿ) ಕಾಯ್ದೆ-2019: ತೃತೀಯ ಲಿಂಗಿಗಳ (ಹಕ್ಕು ರಕ್ಷಣೆ) ನಿಯಮಗಳು 2020ರ ಜನವರಿ 10 ರಂದು ತೃತೀಯ ಲಿಂಗಿಗಳ ಕ್ಷೇಮಾಭಿವೃದ್ಧಿಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ತೃತೀಯ ಲಿಂಗಿಗಳಿಗಾಗಿ ಕೇಂದ್ರದ ಸಾಮಾಜಿಕ ಮತ್ತು ಸಬಲೀಕರಣ ಸಚಿವಾಲಯವು ತೃತೀಯ ಲಿಂಗಿಗಳ ನ್ಯಾಷನಲ್ ಪೋರ್ಟಲ್ & ತೃತೀಯ ಲಿಂಗಿಗಳಿಗೆ ವಸತಿಗಾಗಿ ಗರೀಮ್ ಗ್ರೇಹ್ (Garima Greh) ಅನ್ನು ಉದ್ಘಾಟಿಸಿದ್ದಾರೆ.

Indian turister day

 ಪ್ರವಾಸಿ ಭಾರತೀಯ ದಿವಸ್


2021ರ ಜನವರಿ 9 ರಂದು ಭಾರತದಲ್ಲಿ16ನೇ ಪ್ರವಾಸಿ ಭಾರತೀಯ ದಿವಸ ಅಥವಾ ಅನಿವಾಸಿ ಭಾರತೀಯರ ದಿನವನ್ನು ಜನವರಿ 9 2021

:AATMA-NIRBHAR'ಆತ್ಮನಿರ್ಭರ ಭಾರತ್‌ಗೆ ಕೊಡುಗೆ BHARAT Be (Contributing to Atmanirbhar Bharath) ಧೈಯವಾಕ್ಯದಲ್ಲಿ ಆಚರಿಸಲಾಗಿದೆ. ನವದೆಹಲಿಯಲ್ಲಿ ವರ್ಚ್ಯುವಲ್ ಆಧಾರದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಸುರಿನೇಮ್ ದೇಶದ ಅಧ್ಯಕ್ಷ ಚಂದ್ರಿಕಾ ಪರ್ಸಾದ್ ಸನ್‌ಕಿ ಅವರು ಮುಖ್ಯ ಅತಿಥಿಯಾಗಿದ್ದರು. 2020-2021ರ ಅವಧಿಯ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು ಹಾಗೂ ಭಾರತ್ ಕೋ ಜಾನಿಯೇ ರಸಪ್ರಶ್ನೆ ವಿಜೇತರನ್ನು ಘೋಷಿಸಲಾಗಿದೆ. ಆತ್ಮ ನಿರ್ಭರ ಭಾರತದಲ್ಲಿ ವಲಸೆಗಾರರ ಪಾತ್ರ ಹಾಗೂ ಕೋವಿಡ್ ನಂತರದ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಅಧಿವೇಶನ ಜರುಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಸಮಾವೇಶದ ಉದ್ಘಾಟನೆ ಮಾಡಿ, ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದ ಸಹದ್ಯೋಗಿಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸಿದ್ದರು? ಎನ್ನುವುದು ನಮ್ಮ ಹೆಮ್ಮೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. 2021ರ ಜನವರಿ 8 ರಂದು ಯುವ ಪ್ರವಾಸಿ ಭಾರತೀಯ ದಿವಸವನ್ನು


ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವತಿಯಿಂದ

Bringing together Young Achievers From India and Indian Diaspora ಧೈಯವಾಕ್ಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನ್ಯೂಜಿಲ್ಯಾಂಡ್‌ನ ಸಮುದಾಯ ಮತ್ತು ಸ್ವಪ್ರೇರಿತ ವಲಯದ ಸಚಿವರಾದ ಪ್ರಿಯಾಂಕ ರಾಧಾಕೃಷ್ಣನ್ ಅವರು ವಿಶೇಷ ಅತಿಥಿಯಾಗಿದ್ದರು. ಪ್ರಿಯಾಂಕ ಅವರು ನ್ಯೂಜಿಲ್ಯಾಂಡ್ ದೇಶದಲ್ಲಿ ಸಚಿವರಾದ ಮೊಟ್ಟಮೊದಲ ಭಾರತೀಯ ಮೂಲದ ಮಹಿಳೆ ಎನಿಸಿದ್ದಾರೆ.


ಹಿನ್ನೆಲೆ: 1915ರ ಜನವರಿ 9 ರಂದು ಮಹಾತ್ಮ ಗಾಂಧೀಜಿಯವರು ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ (ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಕ) ಅವರ ಮಾರ್ಗದರ್ಶನದ ಮೇಲೆ ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಹಿಂತಿರುಗಿದರು. ಇಂತಹ ಐತಿಹಾಸಿಕ ಹಿನ್ನೆಲೆಯಲ್ಲಿ ಜನವರಿ 9 ಅನ್ನು ಪ್ರವಾಸಿ ಭಾರತೀಯ ದಿವಸವನ್ನಾಗಿ ಆಚರಿಸಲಾಗುವುದು. 2003ರ ಜನವರಿ 9 ರಿಂದ 11ರವರೆಗೆ ಮೊದಲ ಬಾರಿ ಈ ದಿನವು ಆಚರಣೆಯಾಗಿತ್ತು. (ಮಾರಿಷಸ್‌ನ ಅನಿರುದ್ ಜುಗುನ್ನಾಥ್ ಅತಿಥಿ) 2019ರಲ್ಲಿ ಪ್ರವಾಸಿ ಭಾರತೀಯ ದಿವಸವು ವಾರಣಾಸಿಯಲ್ಲಿ ಜರುಗಿತ್ತು (ಪ್ರವೀಂದ್‌ ಜುಗುನ್ನಾಥ್ ಅತಿಥಿ)

Amarshilpi jakanachari

 

2021ರ ಜನವರಿ 1 ರಾಜ್ಯಾದ್ಯಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿತ್ತು. 2020-21ನೇ ಸಾಲಿನ ಆಯವ್ಯಯದಲ್ಲಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆ ಬಗ್ಗೆ ಘೋಷಣೆ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2021ರ ಜನವರಿ 1 ಅನ್ನು ಜಕಣಾಚಾರಿಯವರ ಜನ್ಮ ದಿನವನ್ನಾಗಿ ರಾಜ್ಯ ಸರ್ಕಾರ ಆಚರಿಸಿದೆ. ಅಮರಶಿಲ್ಪಿ ಜಕಣಾಚಾರಿಯವರು ತಮ್ಮ ಜೀವನವನ್ನು ಕಲೆಗಾಗಿ ಮುಡುಪಾಗಿಟ್ಟಿದ್ದು, ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತ ಕಥೆಯಾಗಿದ್ದಾರೆ. ಹಾಗೂ ಶಿಲ್ಪಿಯಾಗಿ ವಿಶ್ವ ಖ್ಯಾತ ಹೊಂದಿದ್ದಾರೆ. 

ಅಮರಶಿಲ್ಪಿ ಜಕಣಾಚಾರಿ ಬಗ್ಗೆ ಮಾಹಿತಿ ಅಮರಶಿಲ್ಪಿ ಜಕಣಾಚಾರಿಯವರು ಅತ್ಯಂತನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ - ದಂತಕಥೆಯಾದ ಶಿಲ್ಪಿ. ಇವರು ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಮತ್ತು ಹಳೇಬೀಡುಗಳಲ್ಲಿ ನಿರ್ಮಿಸಿದ್ದಾರೆ. ತುಮಕೂರು ಜಿಲ್ಲೆಯ ಕೈದಾಳದಲ್ಲಿ ಜಕಣಾಚಾರಿಯವರು ಜನಿಸಿದ್ದರು. ತನ್ನ ಹುಟ್ಟೂರಾದ ಕ್ರೀಡಾಪುರದಲ್ಲಿ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಈ ಕಾರ್ಯ ಮುಗಿದ ನಂತರ ಅವರ ಬಲಗೈ ಅನ್ನು ದೇವರು ಕರುಣಿಸಿದನೆಂಬ ದಂತ ಕಥೆಯಿದ್ದು, ಈ ಘಟನೆಯನ್ನು ಆಚರಿಸಿದ ನಂತರ ಈ ಕ್ರೀಡಾಪುರ ಗ್ರಾಮಕ್ಕೆ ಕೈದಾಳ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.


ಜಕಣಾಚಾರಿ ಪ್ರಶಸ್ತಿ ಬಗ್ಗೆ ಮಾಹಿತಿ: ಕರ್ನಾಟಕ ರಾಜ್ಯ ಸರ್ಕಾರವು ಶ್ರೇಷ್ಠಮ ಅಮರಶಿಲ್ಪಿ ಜಕಣಾಚಾರಿಯವರ ಕೊಡುಗೆಯನ್ನು ಸ್ಮರಿಸಲು ಪ್ರತೀ ವರ್ಷ ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ 1995 ರಿಂದ ಜಕಣಾಚಾರಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. 2019ರಲ್ಲಿ ಬಿ.ಎಸ್.ಯೋಗಿರಾಜ ಅವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದರು.

Sunday, 2 May 2021

Gk nots fundamental duties

 ಮೂಲಭೂತ ಕರ್ತವ್ಯ ಎಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆ. ಮೂಲಭೂತ ಕರ್ತವ್ಯಗಳ ಪರಿಕಲ್ಪನೆಯನ್ನು ರಷ್ಯಾದಿಂದ ಎರವಲು ಪಡೆಯಲಾಗಿದೆ. 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಮೂಲಕ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಭಾಗ 4ಎ ನಲ್ಲಿ 51ಎ ವಿಧಿ ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು. 2002ರ 86ನೇ ತಿದ್ದುಪಡಿ, ಅನ್ವಯ 11ನೇ ಕರ್ತವ್ಯವಾಗಿ ಶಿಕ್ಷಣದ ಕರ್ತವನ್ನು ಸೇರ್ಪಡೆ ಮಾಡಲಾಯಿತು. ಪ್ರಸ್ತುತ 11 ಮೂಲಭೂತ ಕರ್ತವ್ಯಗಳಿವೆ.


1) ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. 

2) ಸ್ವಾತಂತ್ರ್ಯ ಚಳವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.


3) ಭಾರತದ ಏಕತೆಯನ್ನು ರಕ್ಷಿಸುವುದು.


4) ಮಾತೃ ಭೂಮಿಯನ್ನು ರಕ್ಷಿಸುವುದು.


5) ಭಾರತೀಯರಾದ ನಾವೆಲ್ಲಾ ಒಂದು ಭಾವನೆಯನ್ನು ಬೆಳೆಸುವುದು. 

6) ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು. 

7) ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವುದು.


8) ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು. 


9) ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.


10) ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.


11) ಎಲ್ಲಾ ತಂದೆ ತಾಯಿಯಂದಿರು ಹಾಗೂ ಪೋಷಕರು 6 ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶಗಳನ್ನು ಒದಗಿಸುವುದು.

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

ಭಾರತದ ಪ್ರಮುಖ ಗವರ್ನರ್‌ಗಳು-ಜನರಲ್ ಮತ್ತು ವೈಸ್‌ರಾಯ್

  ಪರಿಚಯ 1600 ರ ಡಿಸೆಂಬರ್ 31 ರಂದು ಈಸ್ಟ್ ಇಂಡಿಯಾ ಕಂಪನಿಯು ರಾಣಿ ಎಲಿಜಬೆತ್ I ರಿಂದ ರಾಯಲ್ ಚಾರ್ಟರ್ ಪಡೆದಾಗ ಭಾರತದ ಮೇಲೆ ಬ್ರಿಟಿಷ್ ಆಡಳಿತವು ಒಂದು ವ್ಯಾಪಾರ ಘಟಕವಾಗಿ ಪ್ರಾರಂಭವಾಯಿತು . ಸುಮಾರು ಮೂರು ಶತಮಾನಗಳ ಅವಧಿಯಲ್ಲಿ , ಬ್ರಿಟಿಷರು ವ್ಯಾಪಾರ ಶಕ್ತಿಯಿಂದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾದರು ಜಗತ್ತಿನಲ್ಲಿ . ಸಣ್ಣ ದ್ವೀಪ ದೇಶವಾದ ನಂತರವೂ ಬ್ರಿಟನ್ ವಿಶ್ವದ ಅತಿದೊಡ್ಡ ಸಾಮ್ರಾಜ್ಯಗಳಲ್ಲಿ ಒಂದನ್ನು ಸ್ಥಾಪಿಸಲು ಸಾಧ್ಯವಾಯಿತು .  " ಸೂರ್ಯನು ಎಂದಿಗೂ ಅಸ್ತಮಿಸದ ಸಾಮ್ರಾಜ್ಯ " ಎಂಬ   ಪದಗುಚ್ by ದಿಂದ ಸಾಮ್ರಾಜ್ಯದ ವ್ಯಾಪ್ತಿಯನ್ನು ಚಿತ್ರಿಸಬಹುದು   . ತನ್ನ ವಸಾಹತುಗಳಲ್ಲಿ ಸ್ಥಾಪಿಸಿದ ಬಲವಾದ ಮತ್ತು ಪರಿಣಾಮಕಾರಿ ಅಧಿಕಾರಶಾಹಿಯ ಹಿನ್ನೆಲೆಯಲ್ಲಿ ಬ್ರಿಟನ್ ಈ ಅದ್ಭುತ ಸಾಧನೆ ಮಾಡಲು ಸಾಧ್ಯವಾಯಿತು .  ಭಾರತದಲ್ಲಿ , ಗವರ್ನರ್ - ಜನರಲ್ ಮತ್ತು ವೈಸ್ ‌ ರಾಯ್ ‌ ಗಳ ಮೂಲಕ ಬ್ರಿಟಿಷರು ಈ ನಿಯಂತ್ರಣವನ್ನು ಸ್ಥಾಪಿಸಲು ಸಾಧ್ಯವಾಯಿತು . §   ಬಂಗಾಳದ ಗವರ್ನರ್ - ಜನರಲ್ (1773-1833):   ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಬಂದಾಗ , ಅದು " ಬಂಗಾಳದ ಗವರ್ನರ್ "  (   ಬಂಗಾಳದ   ಮೊದಲ ಗವರ್ನರ್ : ರಾಬರ್ಟ್ ಕ್ಲೈವ್ )   ಎಂಬ ಹುದ್ದೆ...

Criminal Procedure Bill in kannada

  ಕ್ರಿ ಮಿನಲ್ ಪ್ರೊಸೀಜರ್ ಬಿಲ್ ಈ ಸಂಪಾದಕೀಯವು ದಿ ಹಿಂದೂ 01/04/2022 ರಲ್ಲಿ ಪ್ರಕಟವಾದ “ಇದು   ಗೌಪ್ಯತೆಯ ಮೇಲಿನ ಕ್ರಿಮಿನಲ್ ಅಟ್ಯಾಕ್  ” ಅನ್ನು ಆಧರಿಸಿದೆ .   ಇದು ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022 ಗೆ ಸಂಬಂಧಿಸಿದ ಮಹತ್ವ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಪ್ರಿಲಿಮ್ಸ್‌ಗಾಗಿ:   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022, ಗೌಪ್ಯತೆಯ ಹಕ್ಕು , ಕೆ.ಎಸ್.ಪುಟ್ಟಸ್ವಾಮಿ ತೀರ್ಪು , ಪ್ರಿವೆಂಟಿವ್ ಡಿಟೆನ್ಶನ್ , NCRB, ರಾಜ್ಯ ವಿರುದ್ಧ ರಾಮ್ ಬಾಬು ಮಿಶ್ರಾ ( 1980), ಡೇಟಾ ಸಂರಕ್ಷಣಾ ಕಾನೂನು , ಭಾರತದ ಕಾನೂನು ಆಯೋಗ , ಮೂಲಭೂತ ಹಕ್ಕುಗಳು ಮುಖ್ಯ ವಿಷಯಗಳಿಗೆ:   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022 ಮತ್ತು ಸಮಸ್ಯೆಗಳು , ತೀರ್ಪುಗಳು ಮತ್ತು ಪ್ರಕರಣಗಳು , ಮೂಲಭೂತ ಹಕ್ಕುಗಳು ಇತ್ತೀಚೆಗೆ , ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರು   ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ , 2022   ಅನ್ನು   ಲೋಕಸಭೆಯಲ್ಲಿ   ಪರಿಚಯಿಸಿದರು , ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧದ ಹೆಚ್ಚು ಪರಿಣಾಮಕಾರಿ ಮತ್ತು ತ್ವರಿತ ತನಿಖೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ. ಆದಾಗ್ಯೂ , ಬಯೋಮೆಟ್ರಿಕ್ ಮತ್ತು ಜೈವಿಕ ದತ್ತಾಂಶಗಳ ಸಂಗ್ರಹವನ್ನು ಸಕ್ರಿಯಗೊಳಿಸುವ ಪ್ರಸ್ತಾಪವು ...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.