ಮೂಲಭೂತ ಕರ್ತವ್ಯ ಎಂದರೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ದೇಶಕ್ಕಾಗಿ ಮಾಡಬೇಕಾದ ಹೊಣೆ. ಮೂಲಭೂತ ಕರ್ತವ್ಯಗಳ ಪರಿಕಲ್ಪನೆಯನ್ನು ರಷ್ಯಾದಿಂದ ಎರವಲು ಪಡೆಯಲಾಗಿದೆ. 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಮೂಲಕ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಭಾಗ 4ಎ ನಲ್ಲಿ 51ಎ ವಿಧಿ ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು. 2002ರ 86ನೇ ತಿದ್ದುಪಡಿ, ಅನ್ವಯ 11ನೇ ಕರ್ತವ್ಯವಾಗಿ ಶಿಕ್ಷಣದ ಕರ್ತವನ್ನು ಸೇರ್ಪಡೆ ಮಾಡಲಾಯಿತು. ಪ್ರಸ್ತುತ 11 ಮೂಲಭೂತ ಕರ್ತವ್ಯಗಳಿವೆ.
1) ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
2) ಸ್ವಾತಂತ್ರ್ಯ ಚಳವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.
3) ಭಾರತದ ಏಕತೆಯನ್ನು ರಕ್ಷಿಸುವುದು.
4) ಮಾತೃ ಭೂಮಿಯನ್ನು ರಕ್ಷಿಸುವುದು.
5) ಭಾರತೀಯರಾದ ನಾವೆಲ್ಲಾ ಒಂದು ಭಾವನೆಯನ್ನು ಬೆಳೆಸುವುದು.
6) ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.
7) ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ಧಿ ಪಡಿಸುವುದು.
8) ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು.
9) ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.
10) ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.
11) ಎಲ್ಲಾ ತಂದೆ ತಾಯಿಯಂದಿರು ಹಾಗೂ ಪೋಷಕರು 6 ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶಗಳನ್ನು ಒದಗಿಸುವುದು.